ಚಿತ್ರಕಲಾ ಸ್ಪರ್ಧೆ – ಕೊನೆಯ ದಿನಾಂಕ ೩೧-ಜುಲೈ-೨೦೧೧

ಕಿಂದರಿಜೋಗಿಯ ಚಿತ್ರಕಲಾ ಸ್ಪರ್ಧೆಗೆ ಸ್ಪಂದಿಸಿದ ಪುಟಾಣಿಗಳು ಮತ್ತು ದೊಡ್ಡವರು ಅನೇಕ. ಅದರ ಒಂದು ಕಿರುನೋಟ ಎಲ್ಲರಿಗೆ ಈ ಕೆಳಗಿನ ಚಿತ್ರಗಳು ಕೊಡುತ್ತವೆ.

ಇನ್ನೂ ಅನೇಕರು ಕರೆಮಾಡಿ ಚಿತ್ರಗಳನ್ನು ಕೊಡಲು ಬಯಸುತ್ತಿರುವುದರಿಂದ ಕೊನೆಯ ದಿನಾಂಕವನ್ನು ೩೧-ಜುಲೈ-೨೦೧೧ಕ್ಕೆ ವಿಸ್ತರಿಸಲಾಗಿದೆ. 

ನಿಮ್ಮ ಮಗು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ ಇನ್ನೂ ತಡವಾಗಿಲ್ಲ ಹಾಗೇ ನಿಮಗೆ ಗೊತ್ತಿರುವ ಇತರೆ ಪುಟಾಣಿಗಳಿಗೂ ಇದರ ಬಗ್ಗೆ ತಿಳಿಸಿ.

ಮುಂದಿನ ಹೆಜ್ಜೆ:-

ಈ ಚಿತ್ರಕಲಾ ಸ್ಪರ್ಧೆಗೆ ಬಂದಿರುವ ಎಲ್ಲ ಚಿತ್ರಗಳನ್ನು ನಿಮ್ಮ ಮುಂದೆ ತರುವ ಅಭಿಲಾಷೆಯಿದೆ. ಇದಕ್ಕೆ ನಿಮ್ಮ ಸಲಹೆ, ಸೂಚನೆ, ಸಹಾಯ ಇತ್ಯಾದಿಗಳನ್ನು ಕೊಡಲಿಚ್ಚಿಸುವವರು info at kindarijogi.com  ಈ ವಿಳಾಸಕ್ಕೆ ಒಂದು ಸಂದೇಶ ಕಳುಹಿಸಿ.