ಸೈಕಲ್ ಪಂಚರ್ ರಿಪೇರ್ ಮಾಡೋದು

ಯಾವುದೇ ಕೆಲಸ ಮಾಡೋ ಮುಂಚೆ ಬೇಕಿರೋದು ಆತ್ಮ ವಿಶ್ವಾಸ.  ಆಮೇಲೆ ಕೆಲ್ಸಾ ಅಂದರೆ ಕೆಲ್ಸಾ. ಮೇಲು ಕೀಳು ಅಂತಾ ಇಲ್ಲಾ. ನಮ್ಮಲ್ಲಿ ಸೈಕಲ್ ಕೆಲ್ಸ ಅಂದರೆ ಕೀಳು ಅನ್ನುವ ಭ್ರಮೆ ಎಷ್ಟೋ ಜನರಿಗೆ ಇದೆ.  ನಿಮ್ಮ್ ಸೈಕಲ್ ಪಂಚರ್ ಆದಾಗ ಏನ್ ಮಾಡ್ತೀರಿ ?

1. ರಿಪೇರಿ ಅಂಗಡಿ ಹುಡುಕಿಕೊಂಡು ಹೋಗಿ ರಿಪೇರಿ ಮಾಡಿಸ್ತೀನಿ.
2. ಅಪ್ಪಾ / ಅಮ್ಮಾ ರಿಪೇರಿ ಅಂಗಡಿ ಹುಡುಕಿಕೊಂಡು ಹೋಗಿ  ರಿಪೇರಿ ಮಾಡಿಸ್ತಾರೆ.
3. ನಮ್ಮ್ ಮನೆ ಹತ್ತಿರಾ ಸೈಕಲ್ ರಿಪೇರಿ ಅಂಗಡಿ ಇಲ್ಲಾ ಅದಕ್ಕೆ ರಿಪೇರಿ ಮಾಡಿಸದೆ ಸೈಕಲ್ ಮೂಲೆಗೆ ತಳ್ತೀನಿ.

ಸೈಕಲ್ ಪಂಚರ್ ರಿಪೇರ್ ಮಾಡೋದು ಸಿಕ್ಕಾಪಟ್ಟೆ ಸುಲಭ. ಬನ್ನಿ ಅದಕ್ಕೂ ಮುಂಚೆ ರಿಪೇರ್ ಮಾಡೋದಕ್ಕೆ ಏನೇನು ಟೂಲ್ಸ್ ಬೇಕು ತಿಳಿಯೋಣ.

ಇವು ಎಲ್ಲಾ ಸೈಕಲ್ ಮಾರುವ ಅಂಗಡಿಯಲ್ಲಿ ಸಿಗುತ್ತವೆ. ಇವುಗಳ ಬೆಲೆ ನೂರು ರೂಪಾಯಿಯೊಳಗೆ. ಎಲ್ಲವನ್ನೂ ಖರೀದಿ ಮಾಡಿ ಎಂದು ಡಬ್ಬದಲ್ಲಿ ಜೋಪಾನವಾಗಿಡಿ. ಆಗ ಅದು ಯಾವಾಗ ಬೇಕೋ ಆಗ ಸಿಗತ್ತೆ.

ಸೈಕಲ್ ರಿಪೇರಿ ಮಾಡುವಾಗ ಅನುಸರಿಸ ಬೇಕಾದಸೂತ್ರಗಳು ಇಲ್ಲಿವೆ.
೧. ಸೈಕಲ್ ಟ್ಯೂಬ್ ಹೊರಗೆ ತೆಗೆ.
೨. ಪಂಚರ್ ಆಗಿರುವ ಜಾಗ ಹುಡುಕಿ ಒಂದು ಗುರುತು ಮಾಡು.
೩. ಪಂಚರ್ ಜಾಗಕ್ಕೆ ಒಂದು ಸಣ್ಣ ಬ್ಯಾಂಡೇಜ್ ಮೆತ್ತಿ.
೪.  ಪಂಚರ್  ಇಲ್ಲಾ ಎಂಬುದು ಖಚಿತ ಮಾಡಿಕೊ..
೫. ಸೈಕಲ್ ಟ್ಯೂಬ್ ಒಳಗೆ ತೂರಿಸು.


ಅಷ್ಟೇ ಇದೇನ್ ಬ್ರಹ್ಮ ವಿದ್ಯೆ ಅಂತೂ ಅಲ್ಲವೇ ಅಲ್ಲಾ ! ಮುಂದಿನ ಬಾರಿ ನಿಮ್ಮ ಸೈಕಲ್ ಜವಾಬ್ದಾರಿ ನೀವೆ ತಗೋತ್ತೀರಾ ?