Posts Tagged "ಜಿ.ಪಿ ರಾಜರತ್ನಂ"
ನಾಯಿಮರಿ ನಾಯಿಮರಿ
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
—ಜಿ. ಪಿ. ರಾಜರತ್ನಂ
Read Moreಬಣ್ಣದ ತಗಡಿನ ತುತ್ತೂರಿ…

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು
ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು
– ಜಿ.ಪಿ. ರಾಜರತ್ನಂ
Read Moreಕನಡ ನಾಡಿನ ಕಂದನಿಗೆ
ಕನ್ನಡ ನಾಡಿನ ಕಂದ!
ನಿನ ಕೊರಲಿಗಿದು ಚಂದ!
ನಮ್ಮ ನಾಡಿನಲಿ ನಿಂದ
ಕವಿಗಳ ಬೊಕ್ಕಸದಿಂದ
ನಿನಗೆಂದಾರಿಸಿ ತಂದ
ಕಾವ್ಯಮಾಲೆಯಿದು ಕಂದ!
ಕನ್ನಡ ನಾಡಿನ ಕಂದ!
ನಿನ್ನ ಕೊರಲಿಗಿದು ಚಂದ!
ಬರೆದವರು: ಜಿ. ಪಿ. ರಾಜರತ್ನಂ
ಪುಸ್ತಕ: ಕಂದನ ಕಾವ್ಯಮಾಲೆ
ಪ್ರಕಟಿತ ವರ್ಷ: ೧೯೩೩
ಪ್ರಕಟಿಸಿದವರು: ರಾಮಮೋಹನ ಕಂಪೆನಿ