ಗರ್ ಗಸ

ಫಿರಾನ್ಹಾಫಿರಾನ್ಹಾ

ಫಿರಾನ್ಹಾ!!ಈ ಹೆಸರು ಕೇಳದೇ ಇರುವವರು ಇದರ ಬಗ್ಗೆ ತಿಳಿದುಕೊಳ್ಳ ಬೇಕಾದದ್ದು ಏನೆಂದರೆ ಅದು ಅಮೇಜಾನ್ ನದಿಯಲ್ಲಿ ವಾಸಿಸುವ ಒಂದು ಮೀನು. ಸಂಘಜೀವಿಯಾದ ಈ ಮೀನು ಗುಂಪಾಗಿ ವಾಸಿಸುತ್ತವೆ. ನದಿಯ

ನೀರಿಗೆ ಬೇರೆ ಯಾವುದಾದರು ಪ್ರಾಣಿ (ಚಿರತೆ, ಡಾಲ್ಫಿನ್, ಮನುಷ್ಯ ಇತ್ಯಾದಿ) ಏನಾದರು ಬಿದ್ದರೆ ಕ್ಷಣಾರ್ಧದಲ್ಲಿ ಸಿಗಿದು ತಿಂದು ಹಾಕಿ ಬಿಡುತ್ತವೆ. ನದಿಯ ನೀರಿಗೆ ಕೈ ಅದ್ದಿ ತೆಗೆಯುವಷ್ಟರಲ್ಲಿ ಕೈಬೆರಳುಗಳನ್ನೇ ತಿಂದು ಮಾಯಮಾಡಿ ಬಿಟ್ಟಿರುತ್ತವೆ!.

ಇವುಗಳ ಹಲ್ಲುಗಳೋ ರೇಜರ್ ನಷ್ಟು ಚೂಪಾಗಿದ್ದೂ ಯಾವುದೇ ಜೀವಿಯನ್ನಾದರೂ ಜೀವಂತ ಸಿಗಿಯಬಲ್ಲವು. ಪ್ರಕೃತಿಯ ವೈಶಿಷ್ಟ್ಯ ನೋಡಿ, ಈ ಭಯಾನಕ ಮೀನೂ ಕೂಡ ಏನು ಮಾಡಲಾಗದಂತಹ ಬಲಿಷ್ಠ  ರಕ್ಷಾಕವಚವನ್ನು  ಆರಪೈಮ,ಎಂಬ ಮೀನು. ಹೊಂದಿದೆ!.

ಅರಪೈಮಅರಪೈಮ

ಮಾರ್ಕ್ ಮೇಯರ್ಸ್ ಎಂಬಾತ ಒಂದು ದಿನ ಮೋಜಿಗಾಗಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವಾಗ  ಒಮ್ಮೆ  ಈ ಆರಪೈಮ  ಮೀನು ಸಿಕ್ಕಿತಂತೆ. 2.5 ಮೀಟರ್ ಉದ್ದವಿದ್ದು , 150 ಕೇಜಿ ತೂಗುವ ಈ ಮೀನುಗಳ ಮೈ ಮೇಲೆ ಹತ್ತು ಸೆಂಟೀ ಮೀಟರ್ ಉದ್ದವಿರುವ ಅನೇಕ ಉರುಪೆಗಳು ಇವೆಯಂತೆ!. ಈ ಆರಪೈಮ  ಮೀನಿನ ಉರುಪೆಗಳು ಫಿರಾನ್ಹಾ ಮೀನಿನ ಹಲ್ಲುಗಳ ಕಡಿತದ ಹಿಡಿತಕ್ಕೆ ಸಿಗದೇ ಇರಲು ಕಾರಣವಾದರೂ ಏನು? ಎಂಬುದನ್ನು ತಿಳಿಯಲು ಅದರ ಉರುಪೆಗಳನ್ನು ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನಲ್ಲಿ ನೋಡಿ ಕಂಡುಹಿಡಿದಿದ್ದಾನೆ. ಈ ಉರುಪೆಗಳು(ಸ್ಕೇಲ್ಸ್) ಎರಡು ಪದರಗಳಾಗಿ ರಚನೆಯಾಗಿದ್ದು ಒಳಗಿನ ಪದರ ಕೋಲಾಜನ್ ಎಂಬ ವಸ್ತುವಿನಿಂದ ಮಾಡಲ್ಪಟ್ಟಿದ್ದು ಸ್ವಲ್ಪ ಮೆತುವಾಗಿದೆ,. ಉರುಪೆಯ ಹೊರಪದರವೂ ಸಹ ಕೋಲಾಜನ್ ಎಳೆಗಳಿಂದ ರಚಿತವಾಗಿದ್ದು,  ಕ್ಯಾಲ್ಷಿಯಮ್ ನಿಂದ  ಲೇಪನವಾಗಿರುವುದರಿಂದ ಕಲ್ಲಿನಂತೆ ಗಟ್ಟಿಯಾಗಿದೆ. ಕೋಲಾಜನ್   ಎಂಬುದು ಮೂಳೆಗಳ ಸಂಧಿಗಳಲ್ಲಿ ಕಂಡು ಬರುವ ವಸ್ತು. ಈ ಗಟ್ಟಿ-ಮೆತು ಪದರಗಳ ರಚನೆಯಿಂದ ಫಿರಾನ್ಹದ ಹಲ್ಲುಗಳು ಮುರಿದು ಬೀಳುತ್ತವೆ.ಫಿರಾನ್ಹದ ದೊಡ್ಡ ಗುಂಪಿನ ಮಧ್ಯೆ ಈ ಅರಪೈಮಾ ಮೀನು ಸಲೀಸಾಗಿ ತಪ್ಪಿಸಿಕೊಳ್ಳುವದನ್ನು ಕಂಡು ಕೊಂಡಿರುವ  ಏಕೈಕ ಜೀವಿ. ಇದರ ಇನ್ನೊಂದು ವಿಶೇಷವೇನೆಂದರೆ ಲಂಗ್ ಫಿಶ್ ಇರುವ ಹಾಗೆ ಶ್ವಾಸಕೋಶವನ್ನೂ ಸಹ ಹೊಂದಿದೆ. ಅರಪೈಮಾ ಮೀನು  ಜೀವವಿಕಾಸದಲ್ಲಿ ಮೀನುಗಳಿಂದ ಉಭಯವಾಸಿಗಳ ನಡುವೆ ಇರುವ ‘ಮಿಸ್ಸಿಂಗ್ ಲಿಂಕ್’.

 

ಮೂಲ: ಕಾನನ, ವಿ ವಿ ಅಂಕಣ