ಚರ್ಮ ಹದಮಾಡುವ ಕಿರೀಲ್

ಒಂದಾನೊಂದು ಕಾಲದಲ್ಲಿ ಕೀಯಪ್‌ನಲ್ಲಿ ಒಬ್ಬ ರಾಜ ವಾಸಿಸುತ್ತಿದ್ದ. ಕೀಯೆವ್ನ ಬಳಿಯೇ 
ಒಂದು ಡೇಗನ್ ಕೂಡ ವಾಸಿಸುತ್ತಿತ್ತು . ಅದು ನಗರದ ಜನರಿಂದ ಬಲವಂತವಾಗಿ ಪೊಗದಿ 
ಕೀಳುತ್ತಿತ್ತು . ಅವರು ಪ್ರತಿ ವರ್ಷವೂ ಅದಕ್ಕೆ ಒಬ್ಬ ಯುವಕನನ್ನೋ ಒಬ್ಬ ಯುವತಿಯನ್ನೋ 
ಆಹಾರವಾಗಿ ನೀಡಬೇಕಾಗಿತ್ತು . 

ಅವರು ಸರದಿಯ ಮೇಲೆ ಈ ಕೇಳಿಕೆ ಪೂರೈಸುತ್ತಿದ್ದರು . ಒಮ್ಮೆ ರಾಜನ ಸರದಿ ಬಂದಿತು. 
ಅವನು ತನ್ನ ಮಗಳನ್ನು ಹೇಗನ್‌ಗೆ ಒಪ್ಪಿಸಬೇಕಾಗಿ ಬಂದಿತು . ವಿಧಿ ಇಲ್ಲದೆ ಅವನು ಅವಳನ್ನು 
ಕಳುಹಿಸಿಕೊಟ್ಟ. ನಗರದ ಇತರ ಜನರಂತೆಯೇ ಅವನೂ ಮಾಡಬೇಕಿದ್ದಿತು . 

ಆ ರಾಜಕುಮಾರಿ ಎಷ್ಟು ಸುಂದರಿಯಾಗಿದ್ದಳೆಂದರೆ ಅವಳ ಸೌಂದರ್ಯವನ್ನು ಮಾತು 
ಗಳಿಂದ ವರ್ಣಿಸಿ ತಿಳಿಸಲು, ಲೇಖನಿಯಿಂದ ಬರೆದು ತಿಳಿಸಲು ಸಾಧ್ಯವಿಲ್ಲ. ಡೇಗನ್ ಅವಳನ್ನು 
ಕಂಡ ಕೂಡಲೇ ಅವಳಲ್ಲಿ ಮೊಹಿತವಾಯಿತು . ಅವಳೂ ಅದನ್ನು ಅರ್ಥಮಾಡಿಕೊಂಡಳು . 
ಅವಳು ಅದರೊಂದಿಗೆ ಪ್ರೀತಿಯಿಂದ ಮಾತನಾಡಿದಳು . ತಾನೂ ಅದರಲ್ಲಿ ಅನುರಕ್ತಳಾದಂತೆ 
ವರ್ತಿಸಿದಳು. 

ಹೀಗೆ ಅವಳು ಸ್ವಲ್ಪ ದಿನ ಅದರ ಜೊತೆ ಕಳೆದಳು . ಆಮೇಲೆ ಒಂದು ದಿನ ಡೇಗನ್ ಸುಪ್ರೀತ 
ಮನೋಭಾವದಲ್ಲಿದ್ದಾಗ ಅವಳು ಅದನ್ನು ಕೇಳಿದಳು : “ನೀನು ಎಷ್ಟೊಂದು ಭಾರಿ ಶಕ್ತಿವಂತ 
ನಾಗಿದ್ದೀಯ ! ಈ ಜಗತ್ತಿನಲ್ಲಿ ನಿನ್ನನ್ನು ಮಾರಿಸುವಂಥ ಶಕ್ತಿವಂತ ಯಾರಾದರೂ ಇದ್ದಾರೆಯೆ ? ” 
“ ಇದಾನೆ. ಅವನು ಕೀಯೆವ್ನಲ್ಲೇ , ದ್ವೀಪರ್ ನದಿಯ ಎತ್ತರದ ದಡದ ಮೇಲೆ ವಾಸಿಸು 
- ತ್ತಿದ್ದಾನೆ” ಎಂದಿತು ಡೇಗನ್ . 

“ ಅವನೊಬ್ಬ ಚರ್ಮ ಹದಮಾಡುವವ, ಕಿರೀಲ್ ಅಂತ ಅವನ ಹೆಸರು . ಅವನು ಎಷ್ಟು 
ಬಲಶಾಲಿ ಎಂದರೆ ಯಾವತ್ತೂ ಒಂದೇ ಬಾರಿಗೆ ಹನ್ನೆರಡಕ್ಕೆ ಕಮ್ಮಿ ಇಲ್ಲದಂತೆ ಚರ್ಮಗಳನ್ನು 
ನೆನಸುತ್ತಾನೆ. ಅವನು ಅವುಗಳನ್ನು ದ್ವೀಪರ್‌ ನದಿಯ ನೀರಿನಲ್ಲಿ ನೆನಸುತ್ತಾನೆ. ಒಮ್ಮೆ ನೆನೆದ 
ವೆಂದರೆ ಅವು ತುಂಬ ಭಾರವಾಗುತ್ತವೆ. ಕೆಲವು ವೇಳೆ ನಾನು ಅವುಗಳನ್ನು ನೀರಿನಡಿ ಭದ್ರವಾಗಿ 
ಹಿಡಿದು ಇರಿಸಿಕೊಂಡಿದ್ದೆ - ಆಗಲೂ ಅವನ ಕೈಯಲ್ಲಿ ಅವುಗಳನ್ನು ಮೇಲಕ್ಕೆ ಎಳೆದು ಹಾಕಲು 
ಸಾಧ್ಯವಾಗುವುದಾ ಎಂದು ನೋಡಲೋಸುಗ. ಸದ್ಯಕ್ಕೆ ಬಿಟ್ಟುಬಿಟ್ಟೆ ! ಇಲ್ಲದಿದ್ದರೆ ಅವನು ಅವು 
ಗಳ ಜೊತೆಗೆ ನನ್ನನ್ನೂ ಹೊರಕ್ಕೆ ಎಳೆದು ಹಾಕುತ್ತಿದ್ದ. ಇವನೊಬ್ಬನಿಗಷ್ಟೆ ನಾನು ಈ ಪ್ರಪಂಚ 
ದಲ್ಲಿ ಹೆದರುವುದು . ” 

ರಾಜಕುಮಾರಿ ಈ ಮಾತುಗಳನ್ನೆಲ್ಲ ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡಳು . ಈ ಸಮಾಚಾರ 
ವನ್ನು ತನ್ನ ತಂದೆಗೆ ಕಳುಹಿಸಿಕೊಡುವ, ಅನಂತರ ತಾನೇ ತನ್ನ ತಂದೆಯ ಬಳಿಗೆ ಹೋಗುವ 
ರೀತಿಯ ಬಗೆಗೆ ಯೋಚಿಸ ತೊಡಗಿದಳು. ಅವಳು ಒಂಟಿಯಾಗಿದ್ದಳು. ಒಂದು ಪಾರಿವಾಳ ಬಿಟ್ಟು 
ಬೇರೇನೂ ಅವಳ ಬಳಿ ಇರಲಿಲ್ಲ. ಈ ಪಾರಿವಾಳವನ್ನು ಅವಳು ಕೀಯೆವ್‌ನಲ್ಲಿದ್ದಾಗಲೇ ಸಾಕಿ 
ಕೊಂಡಿದ್ದಳು ಮತ್ತು ತನ್ನೊಂದಿಗೆ ಕರೆತಂದಿದ್ದಳು . ತುಂಬ ಯೋಚಿಸಿದನಂತರ ಅವಳು ತನ್ನ 
ತಂದೆಗೆ ಪತ್ರ ಬರೆಯಲು ನಿರ್ಧರಿಸಿದಳು . 
- “ಕೀಯೆಟ್‌ನಲ್ಲಿ ಕಿರೀಲ್ ಅನ್ನುವ ಹೆಸರಿನ ಒಬ್ಬ ಚರ್ಮ ಹದಮಾಡುವವನಿದ್ದಾನೆ ” ಎಂದ 
ವಳು ಬರೆದಳು . “ ಅವನೊಬ್ಬನೇ ಈ ಡೇಗನ್‌ನ ಜೊತೆ ಹೋರಾಡಿ ಗೆಲ್ಲಬಲ್ಲ , ನನ್ನನ್ನು ಬಿಡಿಸ 
ಬಲ್ಲ . ಆದ್ದರಿಂದ ನೀವೇ ಅವನ ಬಳಿಗೆ ಹೋಗಿ, ಇಲ್ಲವೇ ಬೇರೆ ಯಾರನ್ನಾದರೂ ಅವನಲ್ಲಿಗೆ 
ಕಳಿಸಿಕೊಡಿ. ಡೇಗನ್‌ನ ಜೊತೆ ಹೋರಾಡಿ ನನ್ನನ್ನು - ಒಬ್ಬ ಅಸುಖಿ ಯುವತಿಯನ್ನು – 
ಬಂಧನದಿಂದ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಿ. ಬರಿ ಮಾತುಗಳಿಂದ ಅವನ ಮನ ಒಲಿಸಲು 
ಆಗದಿದ್ದಲ್ಲಿ ಅವನಿಗೆ ಬೇಕಾದಷ್ಟು ಬಳುವಳಿ ನೀಡಿ, ಯಾರೂ ಅವನ ಜೊತೆ ಒರಟಾಗಿ ಮಾತ 
ನಾಡದಂತೆ ನೋಡಿಕೊಳ್ಳಿ . ಇಲ್ಲದಿದ್ದರೆ ಅವನು ಕೋಪಗೊಳ್ಳಬಹುದು. ನನ್ನ ಜೀವಮಾನದ 
ಕೊನೆಯವರೆಗೂ ನಾನು ನಿಮ್ಮಿಬ್ಬರಿಗಾಗಿ ಪ್ರಾರ್ಥನೆ ಮಾಡುವೆ, ನಿಮ್ಮನ್ನು ರಕ್ಷಿಸುವಂತೆ ದೇವ 

ರನ್ನು ಕೇಳಿಕೊಳ್ಳುವೆ...” 
- ಹೀಗೆ ಬರೆದು ಅವಳು ಪತ್ರವನ್ನು ಪಾರಿವಾಳದ ರೆಕ್ಕೆಗೆ ಕಟ್ಟಿ ಕಿಟಕಿಯ ಮೂಲಕ ಅದನ್ನು 
ಹಾರಿಬಿಟ್ಟಳು. ಪಾರಿವಾಳ ಆಗಸದಲ್ಲಿ ಎತ್ತರಕ್ಕೆ ಹಾರಿಹೋಗಿ ಅನಂತರ ನೇರವಾಗಿ ರಾಜ 
ಕುಮಾರಿಯ ಅರಮನೆಯ ಕಡೆಗೆ ತಿರುಗಿತು . ಅರಮನೆಯ ಅಂಗಳದಲ್ಲಿ ಅಡ್ಡಾಡುತ್ತಿದ್ದ ರಾಜನ 
ಮಕ್ಕಳು ಪಾರಿವಾಳವನ್ನು ಕಂಡು ಕೂಗಿ ಹೇಳಿದರು : 

“ ಅಪ್ಪ ! ಅಪ್ಪ ! ಅಕ್ಕನ ಪಾರಿವಾಳ ಬಂದಿದೆ ! ” 
- ಈ ಸುದ್ದಿ ಕೇಳಿ ರಾಜನ ಹೃದಯ ಆನಂದದ ಹೊನಲಿನಿಂದ ತುಂಬಿತು . ಆದರೆ ಅವನು 
ಯೋಚನೆ ಮಾಡಿದ ಮೇಲೆ ಮತ್ತೆ ಅದು ದುಃಖದಿಂದ ಭಾರವಾಯಿತಷ್ಟೆ . 

“ ನನ್ನ ಮಗಳು ಸತ್ತುಹೋಗಿರಬೇಕು. ಡೇಗನ್ ಅವಳನ್ನು ಕೊಂದಿರಬೇಕು. ಅದಕ್ಕೇ 
ಪಾರಿವಾಳ ಹಿಂದಿರುಗಿದೆ ” ಎಂದವನು ತನ್ನಲ್ಲೇ ಹೇಳಿಕೊಂಡ . 

ಅವನು ಪಾರಿವಾಳವನ್ನು ತನ್ನ ಕೈ ಮೇಲೆ ಬಂದು ಕೂರುವಂತೆ ಪುಸಲಾಯಿಸಿದ. ನೋಡು 
ತಾನೆ - ಅದರ ರೆಕ್ಕೆಗೆ ಒಂದು ಪತ್ರವನ್ನು ಕಟ್ಟಲಾಗಿದೆ ! ಅವನು ಅದನ್ನು ಓದಿ ತಕ್ಷಣವೇ 
ತನ್ನ ಆಸ್ಥಾನದ ಹಿರಿಯರನ್ನೆಲ್ಲ ಕರೆಸಿದ. 

“ಕೀಯಪ್‌ನಲ್ಲಿ ಚರ್ಮ ಹದಮಾಡುವ ಕಿರೀಲ್ ಎಂಬುವನೊಬ್ಬ ಇದ್ದಾನೆಯೇ ? ” 
ಅವನು ಕೇಳಿದ. 

" ಹೌದು, ಮಹಾಪ್ರಭು , ಇದ್ದಾನೆ . ದ್ವೀಪರ್ ನದಿಯ ಎತ್ತರದ ದಡದ ಮೇಲೆ ವಾಸಿ 
ಸುತ್ತಿದ್ದಾನೆ” ಅವರು ಉತ್ತರಿಸಿದರು . 

“ ಅವನಿಗೆ ಈ ವಿಷಯ ತಿಳಿಸುವುದು ಹೇಗೆ? ಅವನಿಗೆ ಒಂದಿಷ್ಟೂ ಕೋಪ ಬರಬಾರದು. 
ಅವನು ನಾವು ಕೇಳಿದಂತೆ ಮಾಡಬೇಕು. ಹೇಗೆ ಮಾಡುವುದು ? ” 

ಇದಕ್ಕೆ ಅವರ ಬಳಿ ಉತ್ತರವಿರಲಿಲ್ಲ . ಅವರು ತಮ್ಮತಮ್ಮಲ್ಲೇ ಸಮಾಲೋಚಿಸಿ ಕೀಯನ್ 
ನಲ್ಲೇ ತುಂಬ ಹಿರಿಯರೆನಿಸಿಕೊಂಡಿದ್ದ ಕೆಲವರನ್ನು ಕಿರೀಲ್‌ನ ಬಳಿಗೆ ಕಳಿಸಿಕೊಡಲು ನಿರ್ಧರಿಸಿದರು . 

ಅವರು ಕೂಡಲೇ ಹೊರಟರು. ಕಿರೀನಗುಡಿಸಿಲಿಗೆ ಬಂದರು . ಬಾಗಿಲು ತೆರೆದರು. ಘನೀ 
ಭೂತರಾಗಿ ನಿಂತರು ! ಏಕೆಂದರೆ ಚರ್ಮ ಹದಮಾಡುವ ಕಿರೀಲ್ ಅವರ ಕಡೆಗೆ ಬೆನ್ನು ಮಾಡಿ 
ಕುಳಿತಿದ್ದ. ಹನ್ನೆರಡು ಕಚ್ಚಾ ತೊಗಲುಗಳನ್ನು ಎಲ್ಲವನ್ನೂ ಒಂದೇ ಬಾರಿಗೆ ತನ್ನ ಬರಿಗೈಗಳಿಂದಲೇ 
ತಿರುಚುತ್ತಿದ್ದ, ಹಿಂಡುತ್ತಿದ್ದ. ಅವನು ಕೆಲಸ ಮಾಡಿದಂತೆ ಅವನ ಮಂಜಿನಂತೆ ಬೆಳ್ಳಗಿದ್ದ ಗಡ್ಡ 
ವಷ್ಟೆ ಮೇಲಿನಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಹೋಗಿಬರುತ್ತಿದ್ದುದು ಅವರಿಗೆ ಕಂಡುಬಂದಿತು. 
- ಅವರಲ್ಲೊಬ್ಬ ಬೇಕಂತಲೇ ಕೆಮ್ಮಿದ. ಕಿರೀಲ್ ಬೆಚ್ಚಿಬಿದ್ದು ಕೈಯಲ್ಲಿದ್ದತೊಗಲುಗಳನ್ನು ಎಷ್ಟು 
ಗಟ್ಟಿಯಾಗಿ ಹಿಂಡಿದನೆಂದರೆ ಅವು ಹರಿದವು. ಅವನು ಹಿಂದಕ್ಕೆ ತಿರುಗಿ ಹಿರಿಯರನ್ನು ಕಂಡ. 
ಅವರು ಅವನಿಗೆ ಬಾಗಿ ನಮಸ್ಕರಿಸಿ ತಮ್ಮನ್ನು ಯಾರು ಕಳುಹಿಸಿದ್ದು , ಯಾತಕ್ಕೆ ಕಳುಹಿಸಿದ್ದು 
ಅನ್ನುವುದನ್ನು ಹೇಳ ತೊಡಗಿದರು . ಆದರೆ ಅವನಿಗೆ ಎಷ್ಟು ಕೋಪ ಬಂದಿತೆಂದರೆ ಅವರನ್ನು 
ನೋಡಲಾಗಲೀ ಅವರ ಮಾತುಗಳನ್ನು ಕೇಳಿಸಿಕೊಳ್ಳಲಾಗಲೀ ಬಯಸಲಿಲ್ಲ - ಹನ್ನೆರಡು ತೊಗಲು 
ಗಳು ಹರಿಯುವುದಕ್ಕೆ ಅವರೇ ಕಾರಣರಾಗಿದ್ದರು . ಅವರು ಕೇಳಿಕೊಂಡರು , ಬೇಡಿಕೊಂಡರು , 
ಮಂಡಿ ಊರಿ ಕುಳಿತು ಯಾಚಿಸಿದರು . ಆದರೆ ಏನೂ ಪ್ರಯೋಜನವಾಗಲಿಲ್ಲ. 

ಈಗೇನು ಮಾಡುವುದು ? 

ರಾಜನ ಬಳಿಗೆ ಜೋಲುಮುಖ ಹಾಕಿಕೊಂಡು ಹಿಂದಿರುಗಿದರು . ರಾಜ ತುಂಬ ಹೊತ್ತು 
ಯೋಚಿಸಿ ಕೊನೆಗೆ ನಗರದಲ್ಲಿದ್ದ ಯುವಕರನ್ನು ಕಿರೀಲ್ ಬಳಿಗೆ ಕಳುಹಿಸಲು ನಿರ್ಧರಿಸಿದ. 

ಆದರೆ ಈ ಯುವ ದೂತರೂ ಹಿರಿಯ ದೂತರಿಗಿಂತ ಹೆಚ್ಚಿಗೇನೂ ಯಶಸ್ವಿಯಾಗಲಿಲ್ಲ. 
ಚರ್ಮ ಹದಮಾಡುವವ ಅವರ ಯಾಚನೆಗಳನ್ನೆಲ್ಲ ಮೌನದಿಂದ ಕೇಳಿದ , ಮೋಡದಂತೆ ಕಪ್ಪಾಗಿ 
ಹುಬ್ಬು ಕಟ್ಟಿ ಕುಳಿತ. 

ರಾಜ ಮತ್ತೆ ಯೋಚನೆ ಮಾಡಿದ. ತುಂಬ ಹೊತ್ತು ಯೋಚನೆ ಮಾಡಿದ.ಕೊನೆಗೆ ಕೆಲವು 
ಮಕ್ಕಳನ್ನು ಕಿರೀಲ್‌ನ ಬಳಿಗೆ ಕಳುಹಿಸಿದ. ಅವರು ಕಿರೀಲ್‌ನ ಗುಡಿಸಿಲಿಗೆ ಹೋಗಿ ಅವನ ಮುಂದೆ 
ಮಂಡಿಯೂರಿಕುಳಿತು ಬೇಡಿಕೊಳ್ಳ ತೊಡಗಿದರು , ಕಣ್ಣೀರು ಕರೆದರು . ಅದನ್ನು ಕಂಡು ಕಿರೀಲ್‌ನ 
ಕಣ್ಣುಗಳಲ್ಲೂ ನೀರೂರಿತು. 

“ ಸರಿ , ಅಳುವುದನ್ನು ಸಾಕುಮಾಡಿ ! ನೀವು ಹೇಳಿದಂತೆ ನಾನು ಮಾಡುತ್ತೇನೆ” ಅವನೆಂದ. 

ಅವನು ರಾಜನ ಬಳಿಗೆ ಹೋಗಿ ಹನ್ನೆರಡು ಪೀಪಾಯಿಗಳ ತುಂಬ ಕೀಲೆಣ್ಣೆಯನ್ನೂ 
ಹನ್ನೆರಡು ಬಂಡಿಗಳ ತುಂಬ ಕಿತ್ಯಾನಾರನ್ನೂ ಕೊಡುವಂತೆ ಕೇಳಿದ. ಅವನ್ನು ತಂದು ಕೊಟ್ಟಾಗ 
ಅವನು ಕಿತ್ಯಾನಾರನ್ನು ತನ್ನ ಮೈ ಸುತ್ತ ಸುತ್ತಿಕೊಂಡು ಅದರ ಮೇಲೆ ಕೀಲೆಣ್ಣೆ ಹಚ್ಚಿಕೊಂಡ . 
ಆಮೇಲೆ ಹತ್ತು ಪೂದ್‌ಗಳಷ್ಟು ತೂಗುವ ಖಡ್ಗವೊಂದನ್ನು ಎತ್ತಿಕೊಂಡು ಹೇಗನ್‌ನ ಬಳಿಗೆ 
ಹೋರಾಡಲು ಹೋದ. 

“ ನನ್ನ ಬಳಿಗೆ ಯಾಕೆ ಬಂದೆ, ಕಿರೀಲ್ ? ಹೋರಾಡಲೋ ಅಥವಾ ಶಾಂತಿ ಮಾಡಿ 
ಕೊಳ್ಳಲೋ ? ” ಡೇಗನ್ ಕೇಳಿತು. 

“ಹೋರಾಡಲು ಬಂದಿದ್ದೇನೆ, ಪಾಪಿಷ್ಟ ಪಿಶಾಚಿಯೇ ! ನಿನ್ನಂಥವರ ಜೊತೆ ನಾನೆಂದೂ 
ಶಾಂತಿ ಮಾಡಿಕೊಳ್ಳಲಾರೆ ” ಎಂದ ಕಿರೀಲ್. 

ಅವರು ಹೋರಾಡ ತೊಡಗಿದರು . ಓಹ್ , ಭೂಮಿ ಅವರ ಹೆಜ್ಜೆಗಳ ಕೆಳಗೆ ಹೇಗೆ ನಡು 
ಗುತ್ತಿತ್ತು ! ಡೇಗನ್ ಕಿರೀಲ್‌ನ ಬಳಿಗೆ ಕಚ್ಚಲು ಧಾವಿಸುತ್ತಿತ್ತು . ಆದರೆ ಅದರ ಹಲ್ಲುಗಳಿಗೆ 
ಕೀಲೆಣ್ಣೆಯ ತುಂಡುಗಳಷ್ಟೆ ಮೆತ್ತಿಕೊಳ್ಳುತ್ತಿದ್ದವು. ಅದು ಮತ್ತೆ ಅವನ ಬಳಿಗೆ ಧಾವಿಸುತ್ತಿತ್ತು . 
ಈ ಬಾರಿ ಅದರ ಬಾಯಿ ತುಂಬ ಕಿತ್ಯಾನಾರು ಮೆತ್ತಿಕೊಳ್ಳುತ್ತಿತ್ತು . ಕಿರೀಲ್ ಡೇಗನ್‌ನ ಮೇಲೆ 
ತನ್ನ ಖಡ್ಗದಿಂದ ಬಲವಾಗಿ ಹೊಡೆಯುತ್ತಿದ್ದ – ಅದು ನೆಲದೊಳಕ್ಕೆ ಹುಗಿಯುವಂತೆ ಮಾಡು 


ಮೇಲಿಂದ ಮೇಲೆ ಹೊಡೆತಗಳನ್ನು ತಿನ್ನುತ್ತಿದ್ದ ಡೇಗನ್‌ನ ಒಡಲು ಬೆಂಕಿಯ ಮೇಲಿ 
ದ್ವಿತೇನೋ ಅನ್ನುವಂತೆ ಬಿಸಿಯಾಗಿ ಕಾಯ ತೊಡಗಿತು. ಅದು ಆಗಾಗ್ಗೆ ಒಂದು ಮುಳುಗು 
ಹಾಕಿ , ತಣ್ಣಗಿನ ನೀರನ್ನು ಕುಡಿಯಲೆಂದು ದ್ವೀಪರ್ ನದಿಗೆಹೋಗುತ್ತಿತ್ತು . ಆಗ ಕಿರೀಲ್ ಮತ್ತೆ 
ತನ್ನ ಸುತ್ತ ಇನ್ನಷ್ಟು ಕಿತ್ತಾನಾರು ಸುತ್ತಿಕೊಂಡು ಕೀಲೆಣ್ಣೆ ಹಚ್ಚಿಕೊಳ್ಳುತ್ತಿದ್ದ. 
* ಪ್ರತಿ ಬಾರಿ ಡೇಗನ್ ನೀರಿನಿಂದ ಹೊರಬಂದು ಕಿರೀಲ್‌ನ ಕಡೆಗೆ ಧಾವಿಸಿಹೋದಾಗಲೂ 
ಕಿರೀಲ್ ತನ್ನ ಖಡ್ಗದಿಂದ ಅದಕ್ಕೆ ಪ್ರಹಾರ ನೀಡುತ್ತಿದ್ದ. ಡೇಗನ್ ಮತ್ತೆ ಅವನ ಕಡೆಗೆ ಧಾವಿ 
ಸುತ್ತಿತ್ತು . ಕಿರೀಲ್ ಮತ್ತೆ ಅದಕ್ಕೆ ಎಷ್ಟು ಜೋರಾಗಿ ಖಡ್ಗದ ಪ್ರಹಾರ ನೀಡುತ್ತಿದ್ದನೆಂದರೆ 
ಅದರ ಶಬ್ದ ಸುತ್ತಲೂ ಪ್ರತಿಧ್ವನಿಸುತ್ತಿತ್ತು . 

ಅವರು ಹೀಗೆಯೇ ತುಂಬ ಹೊತ್ತು ಹೋರಾಡಿದರು . ಮುಗಿಲು ಮುಟ್ಟುವಷ್ಟು ಹೊಗೆ 
ಎದ್ದಿತು . ಸುತ್ತಮುತ್ತ ಕಿಡಿಗಳು ಚಿಮ್ಮಿದವು. ಕಿರೀಲ್‌ನ ಹೊಡೆತಗಳು ಹೆಚ್ಚು ಬಲವಾಗಿ ಹೆಚ್ಚು 
ಬೇಗಬೇಗ ಬೀಳ ತೊಡಗಿದವು. ಡೇಗನ್ ಕುಲುಮೆಯಲ್ಲಿನ ನೇಗಿಲ ಗುಳದಂತೆ ಉರಿ ಕಾರು 
ತಿತ್ತು . ಅದು ಕೆಮ್ಮಿತು, ಉಗುಳು ಸುರಿಸಿತು , ಅದರ ಕೆಳಗಿದ್ದ ಭೂಮಿ ನಡುಗಿತು . 
- ನಗರದ ಜನರು ಗುಡ್ಡದ ಮೇಲೆ ನಿಂತು ಈ ಕದನವನ್ನು ವೀಕ್ಷಿಸಿದರು. ಅವರು ಅಲ್ಲೇ 
ಸ್ತಂಭೀಭೂತರಾಗಿ ನಿಂತರು . 

ಆಗ ಇದ್ದಕ್ಕಿದ್ದಂತೆ ಭಾರಿ ಸಿಡಿಲು ಬಡಿದಂಥ ಶಬ್ದವಾಯಿತು. ಡೇಗನ್ ನೆಲದ ಮೇಲೆ ಎಷ್ಟು 
ಬಲವಾಗಿ ಬಿದ್ದಿತೆಂದರೆ ನೆಲವೇ ಕಂಪಿಸಿತು , ಅದುರಿತು. ಗುಡ್ಡದ ಮೇಲೆ ನಿಂತಿದ್ದ ನಗರದ ಜನ 
ರೆಲ್ಲ ಚಪ್ಪಾಳೆ ತಟ್ಟುತ್ತ “ಉಘ ” ಎಂದು ಜಯಘೋಷ ಮೊಳಗಿಸುತ್ತ ಕಿರೀಲ್‌ನನ್ನು ಅಭಿನಂದಿ 
ಸಿದರು . 

ಡೇಗನ್ ಸತ್ತು ಬಿದ್ದಿದ್ದಿತು. ಅದನ್ನು ಕೊಂದ ಕಿರೀಲ್ ರಾಜಕುಮಾರಿಯನ್ನು ಬಂಧನ 
ದಿಂದ ಬಿಡಿಸಿ ಅವಳ ತಂದೆಯ ಬಳಿಗೆ ಕರೆದೊಯ್ದ . 

ಕಿರೀಲ್‌ಗೆ ಎಷ್ಟು ವಂದಿಸಬೇಕೋ ರಾಜನಿಗೆ ತಿಳಿಯದಾಯಿತು. ಅಂದಿನಿಂದ ಕಿರೀಲ್ 
ವಾಸಿಸುತ್ತಿದ್ದ ನಗರದ ವಿಭಾಗವನ್ನು ಚರ್ಮ ಹದಮಾಡುವವನ ಮೊಹಲ್ಲಾ ಎಂದೇ ಕರೆಯ 
ಲಾಯಿತು. 

ಕುರುಬ ಹುಡುಗ

ಒಂದಾನೊಂದು ಕಾಲದಲ್ಲಿ ಒಬ್ಬ ಕುರುಬ ಹುಡುಗನಿದ್ದ. ಅವನು ತನ್ನ ಎಳೆಯ ವಯಸ್ಸಿ 
ನಿಂದಲೂ ಕುರಿಗಳನ್ನು ಮೇಯಿಸುವುದನ್ನು ಬಿಟ್ಟು ಬೇರೇನೂ ಕೆಲಸ ಮಾಡುತ್ತಿರಲಿಲ್ಲ. 

ಒಂದು ದಿನ ಎಂಟು ಪೂದ್ * ಗಳಷ್ಟು ತೂಗುವ ದೊಡ್ಡ ಕಲ್ಲುಗುಂಡೊಂದು ಆಕಾಶ 
ದಿಂದ ಅವನ ಬಳಿ ಬಂದು ಬಿದ್ದಿತು. ಕುರುಬ ಹುಡುಗ ಅದನ್ನು ತೆಗೆದುಕೊಂಡು ತಮಾಷೆ ಮಾಡು 
ತಿದ್ದ. ಅದನ್ನು ಚಾಟಿಗೆ ಕಟ್ಟಿ ಆಡುತ್ತಿದ್ದ. ಆಕಾಶಕ್ಕೆ ಎಸೆದು ಹಿಡಿಯುತ್ತಿದ್ದ. 

ಕಲ್ಲು ಗುಂಡಿನೊಂದಿಗೆ ಆಟವಾಡುತ್ತಿದ್ದುದನ್ನು ಕಂಡು ಅವನ ತಾಯಿ ಅವನನ್ನು ಬಯು 
ತಿದ್ದಳು . ಅಷ್ಟು ಭಾರವಾದ ಕಲ್ಲುಗುಂಡು ಅವನಿಗೆ ಅಪಾಯ ತರಬಹುದೆಂದು ಅವಳು ಅಂಜಿ 
ದ್ದಳು. ಆದರೆ ಅವನು ಅವಳ ಮಾತಿಗೆ ಕಿವಿಗೊಡುತ್ತಿರಲಿಲ್ಲ . 
- ಕುರುಬ ಹುಡುಗ ವಾಸಿಸುತ್ತಿದ್ದ ಹಳ್ಳಿಗೆ ಅನತಿ ದೂರದಲ್ಲಿದ್ದ ಪಟ್ಟಣದಲ್ಲಿ ರಾಜ್ಯದ ದೊರೆ 
ವಾಸಿಸುತ್ತಿದ್ದ. ಅಲ್ಲಿ ಒಮ್ಮೆ ಏನಾಯಿತೊಂದರೆ , ಒಂದು ಡೇಗನ್ ಪ್ರಾಣಿ* * ಬಂದು ಕಾಟ 
ಕೊಡ ತೊಡಗಿತು . ಅದು ಒಂದೊಂದೂ ಮೂವತ್ತು ಪೂದ್ ತೂಗುವ ಕಲ್ಲುಗುಂಡುಗಳನ್ನು 
ಆ ಪಟ್ಟಣಕ್ಕೆ ತಂದು ಹಾಕಿ ಅವುಗಳಿಂದ ಅಲ್ಲಿ ಒಂದು ಅರಮನೆಯನ್ನು ಕಟ್ಟಿಕೊಂಡಿತು. ಅನಂತರ 
ತನಗೆ ರಾಜಕುಮಾರಿಯನ್ನು ಮದುವೆ ಮಾಡಿಕೊಡಬೇಕೆಂದು ದೊರೆಯನ್ನು ಪೀಡಿಸ ತೊಡ 
ಗಿತು . 


* ಒಂದು ರಷ್ಯನ್ ತೂಕದ ಅಳತೆ, 16 .38ಕಿ . ಗ್ರಾಂ .ಗೆ ಸಮ . - ಸಂ . 
** ಕಾಲ್ಪನಿಕ ರೆಕ್ಕೆಯ ಹಾವು, - ಸಂ . 
ದೊರೆಗೆ ಗಾಬರಿಯಾಯಿತು. ತನ್ನ ರಾಜ್ಯದ ಮೂಲೆಮೂಲೆಗೂ ದೂತರನ್ನು ಅಟ್ಟಿದ. 
ಈ ಡೇಗನ್ ಪ್ರಾಣಿಯ ವಿರುದ್ದ ಹೋರಾಡಿ ಅದನ್ನು ಕೊಲ್ಲುವಷ್ಟು ಧೈರ್ಯ ಸೈರ್ಯವುಳ್ಳ 
ಯಾರನ್ನಾದರೂ ಕಂಡುಹಿಡಿಯುವಂತೆ ಆಜ್ಞಾಪಿಸಿದ . 

ಈ ಸುದ್ದಿ ಕುರುಬ ಹುಡುಗನ ಕಿವಿಗೂ ಬಿದ್ದಿತು . ಅವನು ಜಂಭದಿಂದ ಹೇಳಿದ: 
“ ನಾನು ಈ ಚಾಟಿಯಿಂದಲೇ ಡೇಗನ್ ಪ್ರಾಣಿಯನ್ನು ಕೊಲ್ಲಬಲ್ಲೆ ! ” 

ಅವನು ತಮಾಷಿಗೆ ಹಾಗೆ ಹೇಳಿದ್ದಿರಬಹುದು. ಆದರೆ ಅವನ ಮಾತನ್ನು ಕೇಳಿದವರು 
ನಿಜಕ್ಕೂ ನಂಬಿದರು . ಅಂತೆಯೇ ದೊರೆಗೆ ವಿಷಯ ತಿಳಿಸಿದರು . ದೊರೆಕೂಡಲೇ ಅವನನ್ನು 
ಕರೆತರುವಂತೆ ದೂತರನ್ನು ಅಟ್ಟಿದ. 

ಕುರುಬ ಹುಡುಗ ಇನ್ನೂ ಚಿಕ್ಕವನಾಗಿದ್ದುದನ್ನು ಕಂಡು ದೊರೆ ಹೇಳಿದ : 

“ನೀನೇನೋ ಹೇಗನ್ ಪ್ರಾಣಿಯನ್ನು ಕೊಲ್ಲಬಲ್ಲೆ ಅಂತ ಹೇಳಿದೆಯಂತೆ. ನಿಜಕ್ಕೂ ಕೊಲ್ಲ 
ಬಲ್ಲೆಯಾ ? ನೀನಿನ್ನೂ ಎಷ್ಟು ಚಿಕ್ಕವನಾಗಿ ಕಾಣಿಸುತ್ತೀಯ ! ” 

“ ಚಿಕ್ಕವನಾಗಿದ್ದರೇನಂತೆ, ನಾನು ಕೊಲ್ಲಬಲ್ಲೆ ! ” ಅವನೆದ. 

ಸರಿ , ದೊರೆ ಅವನಿಗೆ ಎರಡು ದಳ ಸೈನಿಕರನ್ನು ಸಹಾಯಕ್ಕೆ ಕೊಟ್ಟ. ಕುರುಬ ಹುಡುಗ 
ಅವರಿಗೆ ಎಷ್ಟು ಆತ್ಮವಿಶ್ವಾಸದಿಂದ ಆಜ್ಞೆ ನೀಡುತ್ತಿದ್ದನೆಂದರೆ ಅವನು ಕೊನೆಯ ಪಕ್ಷ ಇಪ್ಪತ್ತು 
ವರ್ಷಗಳಿಂದ ಸೇನಾಧಿಪತಿಯ ಕಾರ್ಯ ನಿರ್ವಹಿಸುತ್ತಿದ್ದನೇನೋ ಎಂದು ಹೇಳಬಹುದಿತ್ತು . 

ಇದನ್ನು ಕಂಡು ದೊರೆ ಬೆರಗಾಗಿ ಬಾಯಿಯ ಮೇಲೆ ಬೆರಳಿಟ್ಟ . 
ಕುರುಬ ಹುಡುಗ ಸೈನಿಕರನ್ನು ಹೇಗನ್ ಅರಮನೆಯ ಬಳಿಗೆ , ಸುಮಾರು ಕಲ್ಲೆಸೆತದ ದೂರ 
ಇರುವವರೆಗೂ , ಕರೆದೊಯ್ದ . ಆಮೇಲೆ ಹೇಳಿದ: 

“ 

ನೋಡಿ, ನೀವು ಇಲ್ಲೇ ನಿಲ್ಲಿ . ಅಕೋ , ಆ ಹೊಗೆಕೊಳವಿ ಇದೆಯಲ್ಲ ಅದರಿಂದ ಹೊಗೆ 
ಬಂದರೆ ನಾನು ಡೈಗನ್ ಪ್ರಾಣಿಯನ್ನು ಕೊಂದೆ ಅಂತ ತಿಳಿಯಬೇಕು. ಅದರಿಂದ ಉರಿ ಬಂದರೆ 
ಡೇಗನ್ ಪ್ರಾಣಿಯೇ ಗೆದ್ದಿತು ಅಂತ ತಿಳಿಯಬೇಕು. ಗೊತ್ತಾಯಿತಾ ? ” 

ಹಾಗೆ ಹೇಳಿ ಕುರುಬ ಹುಡುಗ ಒಬ್ಬನೇ ದ್ರೇಗನ್‌ನ ಅರಮನೆ ಒಳಹೊಕ್ಕ. ಡೇಗನ್ 
ತಾನೊಬ್ಬ ಬಹಳ ಬಲಶಾಲಿ ಎಂದು ಭಾವಿಸಿಕೊಂಡಿತ್ತು . ಬಾಯಿಯಿಂದ ಉರಿ ಉಗುಳುತ್ತಲೇ 
ಅದು ತನ್ನ ಎದುರು ಬರುತ್ತಿದ್ದವರನ್ನೆಲ್ಲ ದೂರವೇ ಇರಿಸುತ್ತಿದ್ದಿತು . ಈ ಕುರುಬ ಹುಡುಗನನ್ನು 
ಕಂಡಾಗಲೂ ಅದು ಹಾಗೆಯೇ ಮಾಡಿತು . ಆದರೆ ಕುರುಬ ಹುಡುಗ ಕಣ್ಣು ಕೂಡ ಮಿಟುಕಿಸ 
ಲಿಲ್ಲ. 

“ಓಹೋ , ಪರವಾಗಿಲ್ಲ . ನೀನು ಧೈರ್ಯವಂತ , ಯಾತಕ್ಕಾಗಿ ಇಲ್ಲಿಗೆ ಬಂದೆ, ಹುಡುಗ ? ” 
ಡ್ರಗನ್ ಗರ್ಜಿಸುತ್ತ ಕೇಳಿತು . ನನ್ನ ಜೊತೆಹೋರಾಡಲು ಬಂದೆಯಾ, ಅಥವಾ ಶಾಂತಿ ಮಾಡಿ 
ಕೊಳ್ಳಲು ಬಂದೆಯಾ ? ” 

“ ನಾನು ಹೋರಾಡುವುದಕ್ಕೆ ಬಂದಿದೀನಿ ! ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳು 
ವಷ್ಟು ಕೆಳಮಟ್ಟಕ್ಕೆ ಇಳೀತೀನಿ ಅಂತ ಅಂದುಕೊಂಡೆಯಾ? ” 

“ ಹಾಗಾ ? ಹೋಗು. ಸ್ವಲ್ಪ ಮೈ ಬೆಳೆಸಿಕೊಂಡು, ಬಲ ಹೆಚ್ಚಿಸಿಕೊಂಡು ಮೂರು ವರ್ಷ 
ಗಳಾದ ಮೇಲೆ ಬಾ . ಆಮೇಲೆ ಹೋರಾಡೋಣ! ” ಡೇಗನ್ ಹೇಳಿತು . 

“ ಏನೂ ಬೇಕಿಲ್ಲ . ನನಗೆ ಈಗಾಗಲೇ ಸಾಕಷ್ಟು ಶಕ್ತಿ ಇದೆ ! ” 
“ ಯಾವ ಆಯುಧ ತಂದಿದೀಯ ? ” 
“ ನನ್ನ ಈ ಚಾಟಿ ! ” 

ಹಾಗೆಂದು ಅವನು ಯೋಗನ್‌ಗೆ ತನ್ನ ಚಾಟಿ ತೋರಿಸಿದ . ಅದರ ಬಾರು ಒಂದು ಇಡೀ 
ಎತ್ತಿನ ಚರ್ಮದಿಂದ ಮಾಡಲಾಗಿತ್ತು . ಅದರ ತುದಿಗೆ ಎಂಟು ಪೂದ್ ತೂಗುವ ಆ ಕಲ್ಲು 
ಗುಂಡನ್ನು ಕಟ್ಟಲಾಗಿತ್ತು , 
“ ಬಾ , ಹಾಗಾದರೆ, ನೀನೇ ಶುರು ಮಾಡು ! ” ಡೇಗನ್ ಹೇಳಿತು . 
“ ಇಲ್ಲ. ನೀನೇ ಶುರು ಮಾಡು ! ” 
ಡೇಗನ್ ಕುರುಬ ಹುಡುಗನ ಬಳಿ ಬಂದು ತನ್ನ ಖಡ್ಗದಿಂದ ಬಲವಾಗಿ ಹೊಡೆಯಿತು . 
ಆ ಖಡ್ಗ ಮೂರು ಮಿಾಟರ್ ಉದ್ದವಾಗಿತ್ತು , ಗಡುಸಾದ ಉಕ್ಕಿನಿಂದ ಮಾಡಿದುದಾಗಿತ್ತು . 
ಆದರೂ ಅದು ಮುರಿದು ಬಿದ್ದಿತು . ಕುರುಬ ಹುಡುಗ ಎಷ್ಟು ಮಾತ್ರವೂ ಹಾನಿಗೊಳಗಾಗದೆ, 
ಮಿಸುಕದೆ, ನಿಂತಿದ್ದ. 

“ ನಿನ್ನದು ಆಯಿತಲ್ಲ . ಈಗ ಹಿಡಿ ನನ್ನ ಹೊಡೆತವನ್ನು ! ” ಎಂದು ಕುರುಬ ಹುಡುಗ ಕೂಗಿ 
ಹೇಳಿದ. 


ಅವನು ದ್ವೇಗನ್‌ಗೆ ತನ್ನ ಚಾಟಿಯಿಂದ ಎಂತಹ ಹೊಡೆತ ನೀಡಿದನೆಂದರೆ ಡೇಗನ್ ನಿಂತ 
ಸ್ಥಳದಲ್ಲೇ ಸತ್ತು ಬಿದ್ದಿತು . ಅರಮನೆಯ ಹೊಗೆಕೊಳವಿಯ ಮೂಲಕ ಹೊಗೆ ಹೊರ ಬಂದಿತು. 
ಅದನ್ನು ಕಂಡು ಕುರುಬ ಹುಡುಗನೊಟ್ಟಿಗೆ ಬಂದಿದ್ದ ಸೈನಿಕರು ಅಮಿತಾನಂದಗೊಂಡರು . ವಾದ್ಯ 
ಗಾರರು ವಾದನಗಳನ್ನು ನುಡಿಸಿದರು . ಗಾಯಕರು ಹಾಡಿದರು . ಕುರುಬ ಹುಡುಗನನ್ನು ಸಂಧಿ 
ಸಲು ದೊರೆಯೇ ಹೊರಬಂದ. ಅವನ ಕೈ ಹಿಡಿದು ತನ್ನ ಅರಮನೆಯೊಳಕ್ಕೆ ಕರೆದೊಯ್ದ . 
ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ. ಯುವ ದಂಪತಿಗಳಿಗೆ ಪ್ರತ್ಯೇಕವಾಗಿ ಅರ 
ಮನೆ ಕಟ್ಟಿಸಿಕೊಟ್ಟ. ಅವರು ಅಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದರು . 


121 


ಆದರೆ ಇದು ನೆರೆಹೊರೆಯ ಕೆಲವು ರಾಜರುಗಳಿಗೆ ಅತೃಪ್ತಿ ತಂದಿತು. ಸಾಮಾನ್ಯ ಕುರುಬ 
ನೊಬ್ಬ ರಾಜಕುಮಾರಿಯನ್ನು ವಿವಾಹವಾಗಲು ಎಂದೂ ಬಿಡಬಾರದಿತ್ತು ಎಂದವರು ಹೇಳಿ 
ದರು . ಅವರ ಮಾತುಗಳಿಗೆ ಮರುಳಾಗಿ ದೊರೆಯ ಖೇದಗೊಂಡ . ಅವನು ತಕ್ಷಣವೇ ತನ್ನ 
ರಾಜ್ಯದ ಮೂಲೆಮೂಲೆಗಳಿಗೆ ದೂತರನ್ನಟ್ಟಿ , ಈ ಕುರುಬ ಹುಡುಗನನ್ನು ಕೊಲ್ಲಬಲ್ಲವರು 
ಮುಂದೆ ಬರಬೇಕೆಂದು ಕರೆಕೊಟ್ಟ. ಅಂಥ ಇಬ್ಬರು ಮುಂದೆ ಬಂದರು. ಅವರನ್ನು ಶಸ್ತ್ರಸಜ್ಜು 
ಗೊಳಿಸಿ ಹೋರಾಡಲು ಕಳಿಸಿಕೊಡಲಾಯಿತು. 

ಅವರು ಕುರುಬ ಹುಡುಗನ ಅರಮನೆಗೆ ಬಂದರು . ಕುರುಬ ಹುಡುಗ ಕೇಳಿದ: “ ದಿಟ್ಟ 
ಬಾಲಕರೇ ಇಲ್ಲಿಗೇಕೆ ಬಂದಿರಿ ? ನನ್ನ ಜೊತೆಹೋರಾಡಲು ಬಂದಿರಾ ಅಥವಾ ಶಾಂತಿ ಮಾಡಿ 
ಕೊಳ್ಳಲು ಬಂದಿರಾ ? ” 

“ಹೋರಾಡಲು ಬಂದಿದ್ದೇವೆ. ” 
ಅವರು ತಕ್ಷಣವೇ ಕಾಳಗಕ್ಕಿಳಿದರು . 

ಮೊದಲನೆಯ ಯುವಕ ಕುರುಬ ಹುಡುಗನ ಬಳಿ ಬಂದು ತನ್ನ ಖಡ್ಗದಿಂದ ಅವನ 
ಎಡ ಭುಜದ ಮೇಲೆ ಪ್ರಹಾರ ನೀಡಿದ. ಖಡ್ಗ ಮುರಿದು ಬಿದ್ದಿತು. ಆಮೇಲೆ ಎರಡನೆಯವ 
ಅವನ ಬಳಿ ಬಂದು ಅವನ ಬಲ ಭುಜದ ಮೇಲೆ ತನ್ನ ಖಡ್ಗದಿಂದ ಪ್ರಹಾರ ನೀಡಿದ . ಅದು 
ಕುರುಬ ಹುಡುಗನ ಅಂಗಿಯನ್ನಷ್ಟೆ ಹರಿಯಿತು. 

ಈಗ ಕುರುಬ ಹುಡುಗನ ಸರದಿ. ಅವನು ಪೂರ್ಣ ಎತ್ತರ ಎದ್ದು ನಿಂತ. ಇಬ್ಬರು ಯುವಕ 
ರನ್ನೂ ಹಿಡಿದು ಒಬ್ಬನನ್ನು ಇನ್ನೊಬ್ಬನಿಗೆ ಎಷ್ಟು ಬಲವಾಗಿ ಒತ್ತಿದನೆಂದರೆ ಇಬ್ಬರೂ ನಜ್ಜು 
ಗುಜ್ಜಾಗಿ ಸತ್ತರು. ಅವರ ಮೂಳೆಗಳು ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕುರುಬ ಹುಡುಗ 
ಆ ಕೆಲವು ಮಳೆ ಚೂರುಗಳನ್ನು ಎತ್ತಿಕೊಂಡು ದೊರೆಯ ಬಳಿಗೆ ಹೋದ. ಎಂದಿನಂತೆ 
ಬಾಗಿ ವಂದಿಸದೆ ನೇರವಾಗಿ ನುಡಿದ : 

“ ಈ ಮಳೆ ತುಂಡುಗಳು ಕಾಣುತ್ತವಾ ನಿನಗೆ ? ಎಚ್ಚರ ! ನಿನಗೂ ಹೀಗೆಯೇ ಆಗ 
ಬಹುದು ! ” 

ಇದರಿಂದ ದೊರೆ ಹೆದರಿ ಓಡಿಹೋದ. ಅಂದಿನಿಂದ ಆ ಕುರುಬ ಹುಡುಗನೇ ಆ ರಾಜ್ಯ 
ವನ್ನು ಆಳುತ್ತಿದ್ದಾನೆ. 

ಮಾಂತ್ರಿಕ ಮೊಟ್ಟೆ

ಬಹಳ ಕಾಲದ ಹಿಂದೆ , ನೆನಪಿಗೂ ಸಿಗದಂತಹ ಕಾಲದಲ್ಲಿ, ಬಾನಾಡಿ ರಾಜನಾಗಿತ್ತು , ಇಲಿ 
ರಾಣಿಯಾಗಿತ್ತು . ಅವುಗಳಿಗೆ ತಮ್ಮದೇ ಹೊಲವಿತ್ತು . ಈ ಹೊಲದಲ್ಲಿ ಅವುಗೋಧಿ ಬೆಳೆದವು. 
ಕಟಾವು ಮಾಡಿ ತೆನೆಯಿಂದ ಕಾಳುಗಳನ್ನು ಬೇರ್ಪಡಿಸಿದ ಮೇಲೆ ಅವು ಕಾಳುಗಳನ್ನು ತಮ್ಮ 
ಮಧ್ಯೆ ಸಮನಾಗಿ ಹಂಚಿಕೊಂಡವು. ಆದರೆ ಕೊನೆಯಲ್ಲಿ ಒಂದು ಗೋಧಿಕಾಳು ಉಳಿದು ಬಿಟ್ಟಿತು. 
ಇಲಿ ಹೇಳಿತು : 

“ ಈ ಕೊನೆಯ ಕಾಳು ನನ್ನದು. ” 
ಬಾನಾಡಿ ಹೇಳಿತು : 
“ ಇಲ್ಲ, ನನ್ನದು !” 
“ ಹಾಗಾದರೆ ನಾನು ಇದನ್ನೂ ಅರ್ಧ ಭಾಗ ಮಾಡ್ತೀನಿ.” 

ಬಾನಾಡಿ ಅದಕ್ಕೆ ಒಪ್ಪಿಕೊಂಡಿತು . ಇಲಿ ಗೋಧಿ ಕಾಳನ್ನು ತನ್ನ ಹಲ್ಲುಗಳ ಮಧ್ಯೆ ಕಚ್ಚಿ 
ಹಿಡಿದು ತಕ್ಷಣವೇ ಓಡಿ ಹೋಗಿ ತನ್ನ ಬಿಲದೊಳಗೆ ಸೇರಿಕೊಂಡಿತು . ರಾಜ ಬಾನಾಡಿ ಹುಯಿಲೆ 
ಬ್ಬಿಸಿತು , ಅದು ರಾಣಿ ಇಲಿಯ ಮೇಲೆ ದಾಳಿ ಮಾಡಲೆಂದು ಕಾಡಿನ ಹಕ್ಕಿಗಳನ್ನೆಲ್ಲ ಅಣಿನೆರೆಯಿಸಿತು . 
ರಾಣಿ ಇಲಿಯ ಕಾಡಿನಲ್ಲಿದ್ದ ಮೃಗಗಳನ್ನೆಲ್ಲ ಒಂದುಗೂಡಿಸಿತು . ಪ್ರಾರಂಭವಾಯಿತು ಯುದ್ದ . 

ಇಡೀ ದಿನ ಹೋರಾಡಿದವು. ಸಂಜೆ ಎಲ್ಲವೂ ವಿಶ್ರಾಂತಿಗಾಗಿ ಹೋದವು. ರಾಣಿ ಇಲಿ ತನ್ನ
ಸೈನ್ಯ ಬಲವನ್ನೆಲ್ಲ ಪರಿಶೀಲಿಸಿತು . ಅಲ್ಲಿ ಇರುವೆಗಳು ಇಲ್ಲದಿರುವುದನ್ನು ಕಂಡಿತು . ಎಲ್ಲ ಇರುವೆ 
ಗಳೂ ಕೂಡಲೇ ಯುದ್ಧದಲ್ಲಿ ಭಾಗಿಗಳಾಗಬೇಕೆಂದು ಆಜ್ಞಾಪಿಸಿತು. ಇರುವೆಗಳು ಓಡೋಡಿ 
ಬಂದವು. ರಾತ್ರಿ ಕತ್ತಲಿನಲ್ಲಿ ಮರ ಹತ್ತಿ ಹೋಗಿ ಅಲ್ಲಿ ವಿರಮಿಸಿದ್ದ ಎಲ್ಲ ಹಕ್ಕಿಗಳ ರೆಕ್ಕೆಗಳ ಬಳಿ 
ಪುಕ್ಕಗಳನ್ನು ಕಚ್ಚಿ ಹಾಕಬೇಕೆಂದು ಅದು ಇರುವೆಗಳಿಗೆ ಆಜ್ಞೆ ನೀಡಿತು. 

ಮಾರನೆಯ ದಿನ ಬೆಳಗಾಗುತ್ತಲೇ , ರಾಣಿ ಇಲಿ ಕೂಗಿ ಹೇಳಿತು : 
“ ಏಳಿ, ಎದ್ದೇಳಿ ಎಲ್ಲ. ಯುದ್ಧಕ್ಕೆ ಹೊರಡಿ !” 

ಹಕ್ಕಿಗಳು ಎದ್ದು ಹಾರಲು ನೋಡುತ್ತವೆ – ಆಗುತ್ತಲೇ ಇಲ್ಲ. ಏನೋ ಆಗಿ ಬಿಟ್ಟಿದೆ! 
ಅವು ಹಾರ ಹೊರಟಂತೆ ಎಲ್ಲ ನೆಲದ ಮೇಲೆ ಬೀಳುತ್ತಿದ್ದವು. ಮೃಗಗಳು ಅವುಗಳ ಮೇಲೆ ಬಿದ್ದು 
ಕೊಂದುಹಾಕಿದವು. ಹೀಗೆ ರಾಣಿ ಇಲಿ ರಾಜನ ಮೇಲೆ ವಿಜಯ ಸಾಧಿಸಿತು. 

ಆದರೆ ಒಂದು ಹದ್ದು ಮಾತ್ರ ಹಾರುವುದು ಅಪಾಯಕರ ಎಂದು ಕಂಡುಕೊಂಡಿತು. 
ಮರದ ಮೇಲೆಯೇ ಉಳಿಯಿತು. ಅಷ್ಟು ಹೊತ್ತಿಗೆ ಆ ಕಡೆಗೆ ಒಬ್ಬ ಬೇಟೆಗಾರ ಬಂದ. ಮರದ 
ಮೇಲೆ ಹದ್ದು ಕುಳಿತಿರುವುದನ್ನು ಕಂಡ. ಅದನ್ನು ಹೊಡೆಯಲು ಗುರಿ ಇಟ್ಟ , ಆಗ ಹದ್ದು ಮೊರೆ 
ಇಟ್ಟಿತು : 

“ ಯುವ ಬೇಟೆಗಾರ, ನನ್ನನ್ನು ಕೊಲ್ಲಬೇಡ, ನಾನು ನಿನಗೆ ಕಷ್ಟದಲ್ಲಿ ನೆರವಾಗುತ್ತೇನೆ!” 
ಬೇಟೆಗಾರ ಎರಡನೆಯ ಬಾರಿ ಗುರಿ ಇಟ್ಟ . ಹದ್ದು ಮತ್ತೆ ಅವನನ್ನು ಕೇಳಿಕೊಂಡಿತು : 

“ ನನ್ನನ್ನು ಕೊಲ್ಲುವ ಬದಲು ನಿನ್ನ ಜೊತೆ ಕರೆದೊಯ್ಯ , ನಾನು ನಿನಗೆ ಕಷ್ಟದಲ್ಲಿ ಹೇಗೆ 
ನೆರವಾಗುತ್ತೇನೆ ಅನ್ನುವುದನ್ನು ನೀನೇ ಕಾಣುವೆ! ” 

ಬೇಟೆಗಾರ ಮೂರನೆಯ ಬಾರಿ ಗುರಿ ಇಟ್ಟ . ಹದ್ದು ಮತ್ತೆ ಅವನನ್ನು ಕೇಳಿಕೊಳ್ಳ ತೊಡಗಿತು : 

“ ಅಯ್ಯೋ , ನನ್ನನ್ನು ಕೊಲ್ಲಬೇಡ. ನಿನ್ನ ಜೊತೆ ಕರೆದೊಯ್ಯ , ನಾನು ನಿನಗೆ ಕಷ್ಟದಲ್ಲಿ 
ನೆರವಾಗುತ್ತೇನೆ! ” 
- ಬೇಟೆಗಾರ ಅದರ ಮಾತನ್ನು ನಂಬಿದ, ಮರ ಹತ್ತಿ ಅದನ್ನು ತೆಗೆದುಕೊಂಡು ಮನೆಗೆ 
ಹೋದ. ಹದ್ದು ಅವನಿಗೆ ಹೇಳಿತು : 

- “ ನನ್ನ ರೆಕ್ಕೆಗಳು ಮತ್ತೆ ಚೆನ್ನಾಗಿ ಬೆಳೆದು ನನ್ನನ್ನು ಎಲ್ಲಿಗಂದರೆ ಅಲ್ಲಿಗೆ ಒಯ್ಯುವಂತಾಗುವ 
ವರೆಗೂ ನನಗೆ ಚೆನ್ನಾಗಿ ಮಾಂಸ ಕೊಟ್ಟು ಪೋಷಣೆ ಮಾಡು.” 

ಆ ಬೇಟೆಗಾರನ ಬಳಿ ಎರಡು ಮೇಕೆಗಳು ಒಂದು ಕುರಿ ಇದ್ದವು. ಅವನು ಒಂದು ಮೇಕೆ 
ಯನ್ನು ಕೊಂದ. ಹದ್ದು ಆ ಮೇಕೆಯ ಮಾಂಸವನ್ನು ಒಂದು ವರ್ಷ ತಿಂದಿತು . ಮತ್ತೆ ಬೇಟೆ | 
ಗಾರನಿಗೆ ಹೇಳಿತು : 
“ನನ್ನನ್ನು ಸ್ವಲ್ಪ ಹಾರಿ ಬಿಡು, ನನ್ನ ರೆಕ್ಕೆಗಳು ಸಾಕಷ್ಟು ಬೆಳೆದಿವೆಯೋ ಇಲ್ಲವೋ ನೋಡು 
ತೇನೆ. ” 

ಬೇಟೆಗಾರ ಅದನ್ನು ತನ್ನ ಗುಡಿಸಿಲಿನಿಂದ ಹೊರಕ್ಕೆ ಹಾರಿ ಬಿಟ್ಟ , ಹದ್ದು ಹಾರಿತು, ಹಾರಿತು . 
ಮಧ್ಯಾಹ್ನ ಹಿಂದಿರುಗಿ ಹೇಳಿತು : 

“ನನಗೆ ಶಕ್ತಿ ಇನ್ನೂ ಸಾಲದು! ಎರಡನೆಯ ಮೇಕೆಯನ್ನೂ ಕೊಂದು ಮಾಂಸ ಹಾಕು !” 

ಬೇಟೆಗಾರ ಅದರ ಮಾತನ್ನು ಕೇಳಿಕೊಂಡು ಎರಡನೆಯ ಮೇಕೆಯನ್ನೂ ಕೊಂದ. ಹದ್ದು 
ಅದನ್ನು ಇನ್ನೊಂದು ವರ್ಷದವರೆಗೆ ತಿಂದಿತು. ಈ ಮೇಕೆಯನ್ನೂ ತಿಂದು ಮುಗಿಸಿದ ಮೇಲೆ 
ಅದು ಮತ್ತೆ ಹಾರಿತು ... ಇಡೀ ದಿನಕ್ಕೆ ಸ್ವಲ್ಪ ಕಮ್ಮಿ ಕಾಲ ಹಾರಿತು . ಸಂಜೆ ಹಿಂದಿರುಗಿ ಹೇಳಿತು : 

“ಈಗ ಕುರಿಯನ್ನೂ ಕೊಂದು ನನಗೆ ಆಹಾರವಾಗಿ ನೀಡು ! ” 

ಬೇಟೆಗಾರ ಯೋಚಿಸಿದ: “ಏನು ಮಾಡುವುದು ? ಕೊಲ್ಲುವುದೋ , ಬೇಡವೋ ? ” 
ಆಮೇಲೆ ಹೇಳಿದ: 

“ ನಿನಗೆ ಎಷ್ಟೊಂದು ಕೊಟ್ಟಿದ್ದಾಯಿತು. ಸರಿ , ಇದನ್ನೂ ತೆಗೆದುಕೋ ! ” 

ಕುರಿಯನ್ನೂ ಕೊಂದ. ಹದ್ದು ಅದರ ಮಾಂಸವನ್ನು ಇನ್ನೊಂದು ವರ್ಷದವರೆಗೆ ತಿಂದಿತು. 
ಆಮೇಲೆ ಹಾರಿತು - ಎಷ್ಟು ಎತ್ತರ, ಎಷ್ಟು ಎತ್ತರ, ಮೋಡಗಳವರೆಗೂ ಹಾರಿತು ! ಹಿಂದಕ್ಕೆ 
ಹಾರಿ ಬಂದು ಅದು ಬೇಟೆಗಾರನಿಗೆ ಹೇಳಿತು : 

“ ನಿನಗೆ ತುಂಬ ವಂದನೆಗಳು . ನೀನೊಬ್ಬ ಒಳ್ಳೆಯ ಮನುಷ್ಯ . ನನ್ನನ್ನು ಚೆನ್ನಾಗಿ ಪೋಷಿಸಿ 
ಬೆಳೆಸಿದೆ. ಈಗ ನನ್ನ ಮೇಲೆಕೂತುಕೋ ! ” 

ಬೇಟೆಗಾರ ಕೇಳಿದ: 
“ ಯಾಕೆ ? ” 
ಹದ್ದು ಹೇಳಿತು : 
“ಕೂತುಕೊ ಅಂತ ಹೇಳುತ್ತಿಲ್ಲವೇ ! ” 
ಸರಿ, ಅವನು ಅದರ ಮೇಲೆ ಕುಳಿತ . 

ಹದ್ದು ಅವನನ್ನು ನೀಲಿ ಮೋಡಗಳವರೆಗೂ ಎತ್ತಿಕೊಂಡು ಹೋಗಿ ಅಲ್ಲಿಂದ ಅವನನ್ನು 
ಕೆಳಕ್ಕೆ ಬಿಟ್ಟಿತು. ಬೇಟೆಗಾರ ಕೆಳಕ್ಕೆ ಬೀಳತೊಡಗಿದ. ಅಷ್ಟರಲ್ಲೇ ಹದ್ದು ಮತ್ತೆ ಅವನನ್ನು ಗಾಳಿ 
ಯಲ್ಲಿದ್ದಂತೆಯೇ ಹಿಡಿದು ಹೇಳಿತು : 

“ ಹುಂ . ಏನಂತಿ ? ಹೇಗೆ ಅನ್ನಿಸಿತು ನಿನಗೆ ? ” 
ಅವನು ಹೇಳಿದ : 
“ ನಾನು ಸತ್ತೇ ಹೋದೆನೇನೋ ಅನ್ನಿಸಿತು !” 
ಹದ್ದು ಹೇಳಿತು : 

“ ನನಗೂ ಹಾಗೇ ಅನ್ನಿಸಿತು - ನೀನು ನನ್ನ ಗುರಿ ಇಟ್ಟಾಗ.” ಆಮೇಲೆ ಹೇಳಿತು : 
“ಕೂತುಕೋ ಮತ್ತೆ .” 

ಬೇಟೆಗಾರ ಸಹಜವಾಗಿಯೇ ಕೂರಲು ಇಷ್ಟಪಡಲಿಲ್ಲ. ಆದರೆ ಹಾಗೆ ಮಾಡದೆ ಇರಲೂ 
ಸಾಧ್ಯವಿರಲಿಲ್ಲ. ಮತ್ತೆ ಹತ್ತಿ ಕೂತ. 

ಹದ್ದು ಮತ್ತೆ ಅವನನ್ನು ನೀಲಿ ಮೋಡಗಳವರೆಗೂ ಕರೆದೊಯ್ದಿತು, ಮತ್ತೆ ಅವನನ್ನು 
ಕೆಳಕ್ಕೆ ಬಿಟ್ಟಿತು. ಅವನು ಇನ್ನೇನು ಭೂಮಿಗೆ ತೀರ ಸಮಿಾಪ ಬಂದಿದ್ದ ಅನ್ನುವಾಗ ಅವನನ್ನು 
ಹಿಡಿದು ಕೇಳಿತು : 

“ ಹುಂ , ಏನಂತಿ ? ಹೇಗೆ ಅನ್ನಿಸಿತು ನಿನಗೆ ? ” 
ಅವನು ಅದಕ್ಕೆ ಹೇಳಿದ : 
“ ನನ್ನ ಮೂಳೆಗಳೆಲ್ಲ ಪುಡಿಪುಡಿಯಾದವೇನೋ ಅನ್ನಿಸಿತು.” 
ಆಗ ಹದ್ದು ಅವನಿಗೆ ಹೇಳಿತು : 

“ ಹಾಗೇ ಅನ್ನಿಸಿತು ನನಗೂ - ನೀನು ಎರಡನೆಯ ಬಾರಿ ನನ್ನ ಮೇಲೆ ಗುರಿ ಇಟ್ಟಾಗ. 
ಸರಿ , ಕೂತುಕೊ ಮತ್ತೆ . ” 

ಅವನು ಕೂತ. 

ಹದ್ದು ಅವನನ್ನು ನೀಲಿ ಮೋಡಗಳವರೆಗೂ ಕರೆದೊಯ್ದಿತು. ಅಲ್ಲಿಂದ ಅವನನ್ನು 
ಕೆಳಕ್ಕೆ ಬಿಟ್ಟಿತು. ಅವನು ಇನ್ನೇನು ಭೂಮಿಯ ಮೇಲೆ ಬೀಳಲಿದ್ದ ಅನ್ನುವಾಗ ಅದು ಅವನನ್ನು 
ಹಿಡಿದು ಕೇಳಿತು : 

“ ಹುಂ , ಏನಂತಿ ? ಹೇಗೆ ಅನ್ನಿಸಿತು ನಿನಗೆ ? ” 
“ ನಾನು ಈ ಪ್ರಪಂಚದಲ್ಲಿ ಇನ್ನೇನು ಇಲ್ಲವೇ ಇಲ್ಲವೇನೋ ಅನ್ನಿಸಿತು ನನಗೆ. ” 
ಆಗ ಹದ್ದು ಅವನಿಗೆ ಹೇಳಿತು : 

“ನೀನು ಮೂರನೆಯ ಬಾರಿ ನನ್ನ ಮೇಲೆ ಗುರಿ ಇಟ್ಟಾಗ ನನಗೂ ಹಾಗೇ ಅನ್ನಿಸಿತು.” 
ಆಮೇಲೆ ಮತ್ತೆ ಹೇಳಿತು : “ ಈಗ ನಾನೂ ನೀನೂ ಸರಿಸಮ . ನಮ್ಮ ಜಗಳ ಪರಿಹಾರವಾಯಿತು. 
ನನ್ನ ಮೇಲೆ ಕುಳಿತುಕೋ . ನನ್ನ ರಾಜ್ಯಕ್ಕೆ , ನನ್ನ ಮನೆಗೆ ಹಾರಿ ಹೋಗೋಣ.” 

ಅವರು ತುಂಬ ದೂರ ಹಾರಿ ಹೋದರು . ಕೊನೆಗೆ ಹದ್ದಿನ ಚಿಕ್ಕಪ್ಪನ ಮನೆಯ ಸಮೀಪ 
ಬಂದರು . ಹದ್ದು ಹೇಳಿತು : 
“ ಗುಡಿಸಿಲಿನ ಒಳಕ್ಕೆ ಹೋಗು. ನೀನು ನನ್ನನ್ನು ಕಂಡೆಯಾ ಎಂದು ಅವರು ಕೇಳಿದಾಗ 
ಹೇಳು: ನನಗೆ ಮಾಂತ್ರಿಕ ಮೊಟ್ಟೆ ಕೊಡಿ, ತಕ್ಷಣವೇ ಅವನನ್ನು ಕರೆದುಕೊಂಡು ಬರುತ್ತೇನೆ. 

ಬೇಟೆಗಾರ ಗುಡಿಸಿಲಿನ ಒಳಗೆ ಹೋದ. ಅಲ್ಲಿ ಅವರು ಅವನನ್ನು ಕೇಳಿದರು : 
“ನೀನು ನಿನ್ನ ಸ್ವಂತ ಇಚ್ಛೆಯಿಂದ ಇಲ್ಲಿಗೆ ಬಂದೆಯೋ ಅಥವಾ ಸ್ವಂತ ಇಚ್ಛೆ ಇಲ್ಲದೆಯೋ ? ” 
ಅವನು ಅವರಿಗೆ ಉತ್ತರಿಸಿದ: 
“ನಿಜವಾದ ಕೊಸ್ಟಾಕ್ ಯಾವತ್ತೂ ಎಲ್ಲಿಗೂ ಸ್ವಂತ ಇಚ್ಛೆಯಿಂದಲೇ ಹೋಗುವುದು. ” 
ಅವರು ಅವನನ್ನು ಮತ್ತೆ ಕೇಳಿದರು : 
“ ನಮ್ಮ ಸೋದರಳಿಯನನ್ನು ಎಲ್ಲಾದರೂ ಕಂಡೆಯಾ ? ಯುದ್ಧಕ್ಕೆ ಹೋಗಿ ಮೂರು 
ವರ್ಷ ಆಯಿತು. ಪತ್ತೆಯೇ ಇಲ್ಲ. ” 

ಅವನು ಅವರಿಗೆ ಹೇಳಿದ: 
“ ಮಾಂತ್ರಿಕ ಮೊಟ್ಟೆ ಕೊಡಿ – ತಕ್ಷಣವೇ ಅವನನ್ನು ಕರೆದುಕೊಂಡು ಬರುತ್ತೇನೆ.” 
ಅವರು ಹೇಳಿದರು : 

ನಿನಗೆ ಮಾಂತ್ರಿಕ ಮೊಟ್ಟೆ ಕೊಡುವುದಕ್ಕಿಂತ ಅವನನ್ನು ಎಂದೂ ನೋಡದೇ ಇರುವುದೇ 
ಮೇಲು. ” 

ಆಗ ಅವನು ಗುಡಿಸಿಲಿನಿಂದ ಹೊರ ಬಂದು ಹದ್ದಿಗೆ ಹೇಳಿದ: 

* ` ಮಾಂತ್ರಿಕ ಮೊಟ್ಟೆಕೊಡುವುದಕ್ಕಿಂತ ಅವನನ್ನು ಎಂದೂ ನೋಡದೇ ಇರುವುದೇ ಮೇಲು 
ಅಂತ ಅವರು ಹೇಳಿದರು .” 

ಹದ್ದು ಅವನಿಗೆ ಹೇಳಿತು : 
“ ಮುಂದಕ್ಕೆ ಹಾರಿ ಹೋಗೋಣ.” 

ಅವರು ಹಾರಿಕೊಂಡು ಹಾರಿಕೊಂಡು ಹೋದರು . ಕೊನೆಗೆ ಹದ್ದಿನ ಸೋದರನ ಮನೆಗೆ 
ಹೋದರು. ಅಲ್ಲೂ ಚಿಕ್ಕಪ್ಪನ ಮನೆಯಲ್ಲಿ ಆದ ಹಾಗೆಯೇ ಆಯಿತು – ಬೇಟೆಗಾರನಿಗೆ ಮಾಂತ್ರಿಕ 
ಮೊಟ್ಟೆ ಸಿಗಲಿಲ್ಲ. ಅವರು ಹದ್ದಿನ ತಂದೆಯ ಮನೆಗೆ ಹಾರಿ ಹೋದರು . ಹದ್ದು ಬೇಟೆಗಾರನಿಗೆ 
ಹೇಳಿತು : 

“ ಗುಡಿಸಿಲಿನೊಳಕ್ಕೆ ಹೋಗು. ನನ್ನ ವಿಷಯ ಕೇಳಿದ ಕೂಡಲೇ ಹೇಳು : ಮಾಂತ್ರಿಕ ಮೊಟ್ಟೆ 
ಕೊಡಿ – ತಕ್ಷಣವೇ ಕರೆದುಕೊಂಡು ಬರುತ್ತೇನೆ. 

ಬೇಟೆಗಾರ ಗುಡಿಸಿಲಿನೊಳಕ್ಕೆ ಹೋದ. ಅವರು ಕೇಳಿದರು : 
“ನೀನು ಸ್ವಂತ ಇಚ್ಛೆಯಿಂದ ಬಂದೆಯೋ ಅಥವಾ ಸ್ವಂತ ಇಚ್ಛೆ ಇಲ್ಲದೆಯೋ ? ” 
ಅವನು ಅವರಿಗೆ ಉತ್ತರಿಸಿದ: 
“ನಿಜವಾದ ಕೊಸ್ಟಾಕ್ ಯಾವತ್ತೂ ಎಲ್ಲಿಗೂ ಸ್ವಂತ ಇಚ್ಛೆಯಿಂದಲೇ ಹೋಗುವುದು .” 
ಅವರು ಅವನನ್ನು ಮತ್ತೆ ಕೇಳಿದರು : 

“ನಮ್ಮ ಮಗನನ್ನು ಎಲ್ಲಾದರೂ ಕಂಡೆಯಾ ? ಯುದ್ಧಕ್ಕೆ ಹೋಗಿ ನಾಲ್ಕನೆಯ ವರ್ಷ 
ಮುಗಿಯುತ್ತಿದೆ. ಅವನು ಅಲ್ಲೇ ಏನಾದರೂ ಸತ್ತುಹೋದನೋ ಏನೋ ? ” 

ಅವನು ಅವರಿಗೆ ಹೇಳಿದ : 
“ ಮಾಂತ್ರಿಕ ಮೊಟ್ಟೆ ಕೊಡಿ – ತಕ್ಷಣವೇ ನಾನು ಅವನನ್ನು ಕರೆದುಕೊಂಡು ಬರುತ್ತೇನೆ.” 
ಹದ್ದಿನ ಅಪ್ಪ ಹೇಳಿತು : 
“ಮೊಟ್ಟೆ ಯಾಕೆ ನಿನಗೆ ? ಬೇಕಾದರೆ ನಿನಗೆ ಬೇಕಾದಷ್ಟು ಹಣ ಕೊಡುತ್ತೇನೆ. ” 
ಅವನು ಹೇಳಿದ : 
“ ನನಗೆ ಹಣ ಬೇಕಿಲ್ಲ. ಮಾಂತ್ರಿಕ ಮೊಟ್ಟೆ ಕೊಡಿ! ” 

“ಸರಿ , ನಿನಗೆ ಮಾಂತ್ರಿಕ ಮೊಟ್ಟೆ ಕೊಡುತ್ತೇನೆ. ಆದರೆ ಬೇಗ ಮಗನನ್ನು ಕರೆದುಕೊಂಡು 
ಬಾ ! ” 

ಬೇಟೆಗಾರ ಹದ್ದನ್ನು ಗುಡಿಸಿಲಿನೊಳಕ್ಕೆ ಕರೆದೊಯ್ದು, ಎಲ್ಲರಿಗೂ ಎಷ್ಟೊಂದು ಆನಂದ 
ವಾಯಿತು ! ಅವರು ಬೇಟೆಗಾರನಿಗೆ ಮಾಂತ್ರಿಕ ಮೊಟ್ಟೆ ಕೊಟ್ಟು ಹೇಳಿದರು : 

“ ದಾರಿಯಲ್ಲಿ ಎಲ್ಲಾದರೂ ಒಡೆದು ಹಾಕಿ ಬಿಡಬೇಡ, ಮನೆಗೆ ಹೋಗು, ಒಂದು ದೊಡ್ಡ 
ಬೇಲಿ ನಿರ್ಮಿಸು. ಅನಂತರವಷ್ಟೆ ಮೊಟ್ಟೆಯನ್ನು ಒಡೆಯಬಹುದು.” 

ಬೇಟೆಗಾರ ಮನೆಯ ಕಡೆಗೆ ಹೊರಟ . ಹೋದ, ಹೋದ. ಅವನಿಗೆ ಬಾಯಾರಿಕೆ ಆಯಿತು. 
ಒಂದು ಬಾವಿಯನ್ನು ಕಂಡ. ನೀರು ಕುಡಿಯ ತೊಡಗಿದನೋ ಇಲ್ಲವೋ ಮಾಂತ್ರಿಕ ಮೊಟ್ಟೆ 
ಬಕೆಟ್ಟಿನ ಅಂಚಿಗೆ ತಗುಲಿ ಒಡೆದು ಹೋಯಿತು. ಆ ಮೊಟ್ಟೆಯೊಳಗಿನಿಂದ ದನಕರುಗಳ ಒಂದು 
ದೊಡ್ಡ ಹಿಂಡೇ ಹೊರ ಬರ ತೊಡಗಿತು ! ಅವು ಒಂದೇ ಸಮನಾಗಿ ಹೊರಕ್ಕೆ ಬರುತ್ತಲೇ ಇವೆ. 
ಅವನ್ನು ಹೇಗೆ ತಡೆಯುವುದು ಅನ್ನುವುದು ಬೇಟೆಗಾರನಿಗೆ ತಿಳಿಯಲಿಲ್ಲ. ಒಂದು ಕಡೆಯಿಂದ 
ಅಟ್ಟಿಸಿಕೊಂಡು ಬಂದರೆ ಅವು ಇನ್ನೊಂದು ಕಡೆಯಿಂದ ಹೊರ ಓಡುತ್ತಿದ್ದವು. ಅವನು 
ನಿಸ್ಸಹಾಯಕನಾಗಿ ಕೂಗಾಡಿದ. ಅವನ ಕೈಲಿ ಏನು ಮಾಡಲೂ ಆಗಲಿಲ್ಲ. ನೋಡಿದ – ಹತ್ತಿರ 
ದಲ್ಲೇ ಒಂದು ಹಾವು ಹರಿದು ಹೋಗುತ್ತಿತ್ತು . 

“ ನಾನು ಈ ದನಕರುಗಳನ್ನೆಲ್ಲ ಮತ್ತೆ ಮೊಟ್ಟೆಯೊಳಕ್ಕೆ ಹೋಗುವಂತೆ ಮಾಡಿದರೆ ನೀನು 
ನನಗೇನು ಕೊಡುತ್ತೀಯ ? ” 
ಅವನು ಕೇಳಿದ : 
“ ನಿನಗೇನು ಬೇಕು ? ” 
ಅದು ಹೇಳಿತು : 

“ನೀನು ನಿನ್ನ ಮನೆಯಲ್ಲಿ ಇಲ್ಲದಿದ್ದಾಗ ಅಲ್ಲಿ ಏನು ಕಾಣಿಸಿಕೊಂಡಿತೋ ಅದನ್ನು 
ಕೊಡುತ್ತೀಯ ? ” 

ಅವನು ಹೇಳಿದ: 
“ಕೊಡುತ್ತೇನೆ.” 

ಹಾವು ದನಕರುಗಳನ್ನೆಲ್ಲ ಮೊಟ್ಟೆಯೊಳಕ್ಕೆ ಸೇರಿಸಿ ಒಡೆದ ಚಿಪ್ಪನ್ನು ಗಟ್ಟಿಯಾಗಿ ಮುಚ್ಚಿ 
ಅಂಟು ಹಾಕಿ , ಅದನ್ನು ಬೇಟೆಗಾರನ ಕೈಗೆ ಕೊಟ್ಟಿತು. 

ಅವನು ಮನೆಗೆ ಹೋದ. ಅವನಿಲ್ಲದಿದ್ದಾಗ ಮನೆಯಲ್ಲಿ ಒಂದು ಮಗು ಹುಟ್ಟಿದೆ. ಬೇಟೆ 
ಗಾರ ತಲೆಯ ಮೇಲೆ ಕೈ ಹೊತ್ತು ಕೂತ. 

“ ಅಯ್ಯೋ , ನಿನ್ನನ್ನು ನಾನು ಹಾವಿಗೆ ಕೊಡುತ್ತೇನೆ ಅಂತ ಮಾತು ಕೊಟ್ಟುಬಿಟ್ಟೆನಲ್ಲ ! ” 
ಎಂದವನು ಗೋಳಾಡಿದ. 

ಅವನೂ ಅವನ ಹೆಂಡತಿಯ ಸ್ವಲ್ಪ ಹೊತ್ತು ಅತ್ತರು. ಆಮೇಲೆ ಹೇಳಿದರು : 

“ ಏನು ಮಾಡೋದು! ಕಣ್ಣೀರು ಸುರಿಸುವುದರಿಂದ ಪ್ರಯೋಜನವಿಲ್ಲ . ಹೇಗಾದರೂ 
ಜೀವಿಸಿಕೊಂಡು ಹೋಗಬೇಕಲ್ಲ. ” 

ಅವನು ಒಂದು ದೊಡ್ಡ ಬೇಲಿ ನಿರ್ಮಿಸಿದ . ಅದರ ಮಧ್ಯದಲ್ಲಿ ಮಾಂತ್ರಿಕ ಮೊಟ್ಟೆಯ 
ನ್ನಿಟ್ಟು ಒಡೆದ. ಅದರೊಳಗಿನಿಂದ ದನಕರುಗಳನ್ನು ಹೊರ ಬಿಟ್ಟ . ಭಾರಿ ಶ್ರೀಮಂತನಾದ. 

ಹೀಗೆಯೇ ಜೀವಿಸುತ್ತ ಜೀವಿಸುತ್ತ ಹೋದರು ... ಅವರ ಮಗ ಬೆಳೆದು ದೊಡ್ಡವನಾದ. 
ಅವನು ಹೇಳಿದ: 

“ ಅಪ್ಪ , ನೀನು ನನ್ನನ್ನು ಹಾವಿಗೆ ಕೊಡುತ್ತೇನೆ ಅಂತ ಮಾತು ಕೊಟ್ಟಿರುವೆಯಂತೆ. ನಾನು 
ಅದರ ಬಳಿಗೆ ಹೋಗುತ್ತೇನೆ. ಆದದ್ದಾಗಲಿ ! ” 

ಅವನು ಹಾವಿನ ಬಳಿಗೆ ಹೋದ. ಅದು ಅವನಿಗೆ ಹೇಳಿತು : 
“ ನಾನು ನಿನಗೆ ಮೂರು ಕೆಲಸ ಕೊಡುತ್ತೇನೆ. ಮಾಡಿದರೆ ಮನೆಗೆ ಹೋಗಬಹುದು. ಮಾಡ 
ದಿದ್ದರೆ, ನಾನು ನಿನ್ನನ್ನು ತಿಂದು ಹಾಕುತ್ತೇನೆ! ” 

ಹಾವಿನ ಮನೆಯ ಸುತ್ತ ಒಂದು ಭಾರಿ ಕಾಡು ಹರಡಿತ್ತು . ಅದು ನೋಟ ನಿಲುಕುವ 
ವರೆಗೂ ಹರಡಿತ್ತು . 
ಹಾವು ಅವನಿಗೆ ಹೇಳಿತು : 

“ ಈ ಕಾಡು ಕಾಣುತ್ತಿಲ್ಲ. ನೀನು ಇದರಲ್ಲಿನ ಮರಗಳನ್ನೆಲ್ಲ ಕಡಿದು ಹಾಕಿ, ಉತ್ತು ,ಗೋಧಿ 
ಬಿತ್ತಿ , ಕಟಾವು ಮಾಡಿ , ರಾಶಿ ಹಾಕಬೇಕು . ಎಲ್ಲವನ್ನೂ ಒಂದೇ ರಾತ್ರಿಯೊಳಗೆ ಮಾಡಿ ಮುಗಿಸ 
ಬೇಕು. ಆಮೇಲೆ ಇದೇ ಗೋಧಿಯಿಂದ ಬೆಡ್ ಮಾಡಿ ನಾಳೆ ಬೆಳಿಗ್ಗೆ ನಾನು ಏಳುವ ಹೊತ್ತಿಗೆ 
ನನ್ನ ಉಪಾಹಾರದ ಮೇಜಿನ ಮೇಲಿರಿಸಬೇಕು ! ” 

ಬೇಟೆಗಾರನ ಮಗ ದುಃಖದಿಂದ ತಲೆ ತಗ್ಗಿಸಿಕೊಂಡು ನಡೆದು ಹೋದ. ಅಲ್ಲೇ ಹತ್ತಿರದಲ್ಲಿ 
ಒಂದು ಕಲ್ಲಿನ ಸ್ತಂಭ ನಿಂತಿತ್ತು . ಆ ಸ್ತಂಭದಲ್ಲಿ ಹಾವಿನ ಹೆಣ್ಣು ಮರಿ ಕಲ್ಲಾಗಿ ನಿಂತಿತ್ತು . ಅವನು 
ಈ ಸ್ತಂಭದ ಬಳಿ ಹೋಗಿ ಅದಕ್ಕೆ ಒರಗಿ ಕುಳಿತು ಅಳ ತೊಡಗಿದ. ಹಾವಿನ ಹೆಣ್ಣುಮರಿ ಅವನನ್ನು 
ಕೇಳಿತು : 

“ ಯಾತಕ್ಕೆ ಅಳುತ್ತಿದ್ದೀಯ ? ” 
ಅವನು ಹೇಳಿದ: 

“ ಅಳದೆ ಏನು ಮಾಡಲಿ ! ಹಾವು ನನಗೆ ಎಂಥ ಕೆಲಸ ಕೊಟ್ಟಿದೆ ಎಂದರೆ ನಾನು ಅದನ್ನು 
ನನ್ನ ಜೀವಮಾನದಲ್ಲೇ ಮಾಡಲಾರೆ . ಮತ್ತೆ ಒಂದು ರಾತ್ರಿಯಲ್ಲೇ ಮಾಡಬೇಕು ಅಂದರೆ ಹೇಗಾ 
ಗುತ್ತೆ ? ” 

ಅದು ಮತ್ತೆ ಅವನನ್ನು ಕೇಳಿತು : 
“ ಯಾವ ಕೆಲಸವನ್ನು ಅದು ನಿನಗೆಕೊಟ್ಟಿರೋದು? ” 
ಅವನು ಅದಕ್ಕೆ ಎಲ್ಲವನ್ನೂ ಹೇಳಿದ . ಆಗ ಅದು ಹೇಳಿತು : 
“ನನ್ನನ್ನು ಮದುವೆ ಆಗ್ತಿಯ ? ನಾನು ಎಲ್ಲವನ್ನೂ ಸಕಾಲದಲ್ಲಿ ಮಾಡಿ ಮುಗಿಸುತ್ತೇನೆ!” 
ಅವನು ಹೇಳಿದ : 
“ ಆಗಲಿ ” 

ಅದು ಹೇಳಿತು : “ಸರಿ, ಈಗ ಹೋಗಿ ಮಲಗು. ಬೆಳಿಗ್ಗೆ ಬೇಗ ಎದ್ದು ಬಾ . ಹಾವಿಗೆ ಬ್ರೆಡ್ 
ತೆಗೆದುಕೊಂಡು ಹೋಗಿಕೊಡುವಿಯಂತೆ . ” 

ಬೇಟೆಗಾರನ ಮಗ ಮಲಗಲು ಮನೆಗೆ ಹೋದ. ಹಾವಿನ ಹೆಣ್ಣುಮರಿ ಕಾಡಿಗೆ ಹೋಗಿ 
ಶಿಳ್ಳೆ ಹಾಕಿತು -ಕೂಡಲೇ ಕಾಡಿನ ಮರಗಳು ಚಟಚಟನೆ ಮುರಿದು ಬಿದ್ದವು, ಹೊಲ ನಿರ್ಮಿತ 
ವಾಯಿತು, ಗೋಧಿ ಬೆಳೆ ಬೆಳೆಯಿತು. ಅರುಣೋದಯವಿನ್ನೂ ಆಗಿರಲಿಲ್ಲ ಆಗಲೇ ಬ್ರೆಡ್ 
ಸಿದ್ಧವಾಗಿತ್ತು . ಬೇಟೆಗಾರನ ಮಗ ಅದನ್ನು ಹಾವಿನ ಗುಡಿಸಿಲಿಗೆ ಕೊಂಡೊಯು ಅದರ ಬೆಳ 
ಗಿನ ಉಪಾಹಾರದ ಮೇಜಿನ ಮೇಲಿರಿಸಿದ. 
ಹಾವು ಎಚ್ಚರಗೊಂಡಿತು , ಅಂಗಳಕ್ಕೆ ಬಂದಿತು. ನೋಡಿತು – ಕಾಡಿದ್ದ ಸ್ಥಳದಲ್ಲಿ ವಿಶಾಲ 
ವಾದ ಹೊಲವಿತ್ತು . ಅದರಲ್ಲಿ ಕಟಾವಾದನಂತರದಗೋಧಿಪೈರಿನ ಮೋಟುಗಳಿದ್ದವು. ಇನ್ನೊಂದು 
ಕಡೆ ಗೋಧಿ ರಾಶಿ ಹಾಕಲಾಗಿತ್ತು . ಆಗ ಅದು ಹೇಳಿತು : 

“ಸರಿ, ನಾನು ಹೇಳಿದ ಹಾಗೆಯೇ ಮಾಡಿದ್ದೀಯ . ಆದರೆ ನೋಡು ಇನ್ನೊಂದು ಕೆಲಸ 
ವನ್ನೂ ಮಾಡಬೇಕು. ಈ ಬೆಟ್ಟದಲ್ಲಿ ನೀನೊಂದು ಸುರಂಗ ತೋಡಬೇಕು. ಆ ಸುರಂಗದಮೂಲಕ 
ದ್ವೀಪರ್ ನದಿ ಹರಿಯುವಂತಾಗಬೇಕು. ನದಿಯ ಬಳಿ ಗೋಧಿ ಕಣಜಗಳನ್ನು ಕಟ್ಟಬೇಕು. 
ನದಿಯ ಮೂಲಕ ಹಡಗುಗಳು ಇಲ್ಲಿಗೆ ಬರುವಂತಾಗಬೇಕು. ನೀನು ಈ ಗೋಧಿಯನ್ನೆಲ್ಲ ಆ 
ಹಡಗುಗಳಿಗೆ ಮಾರಬೇಕು. ನಾನು ಬೆಳಿಗ್ಗೆ ಏಳುವುದರೊಳಗೆ ಇದೆಲ್ಲ ಆಗಿರಬೇಕು ! ” 

ಅವನು ಮತ್ತೆ ಆ ಕಲ್ಲಿನ ಸ್ತಂಭದ ಬಳಿಗೆ ಹೋಗಿ ಗಟ್ಟಿಯಾಗಿ ಅಳುತ್ತ ನಿಂತ. ಹಾವಿನ 
ಹೆಣ್ಣು ಮರಿ ಮತ್ತೆ ಕೇಳಿತು : 

“ ಯಾಕೆ ಅಳುತ್ತಿದ್ದೀಯ ? ” 

ಹಾವು ಅವನಿಗೆ ಏನೇನು ಮಾಡಬೇಕೆಂದು ಹೇಳಿದ್ದಿತೋ ಅದೆಲ್ಲವನ್ನೂ ಅವನು ಅದಕ್ಕೆ 
ಹೇಳಿದ. 

ಅದು ಅವನಿಗೆ ಹೇಳಿತು : 
“ನೀನು ಮಲಗಲು ಹೋಗು. ಎಲ್ಲವೂ ಹೇಳಿದ ಹಾಗೆ ಮಾಡಲ್ಪಟ್ಟಿರುತ್ತೆ . ” 

ಅದು ಹಿಂದಿನಂತೆಯೇ ಶಿಳ್ಳೆ ಹಾಕಿತು . ಬೆಟ್ಟದಲ್ಲಿ ಸುರಂಗವಾಯಿತು . ದ್ವೀಪರ್ ನದಿ ಅದರ 
ಮೂಲಕ ಹರಿಯ ತೊಡಗಿತು . ಅದರ ದಡಗಳ ಮೇಲೆ ಗೋಧಿಯ ಕಣಜಗಳು ನಿರ್ಮಿತ 
ವಾದವು. ಆಗ ಅದು ಅವನನ್ನು ಎಚ್ಚರಿಸಲು ಹೋಯಿತು - ಅವನು ಹಡಗುಗಳಲ್ಲಿ ಬಂದ ವರ್ತ 
ಕರಿಗೆ ಗೋಧಿ ಮಾರಲೆಂದು. 

ಹಾವು ಬೆಳಿಗ್ಗೆ ಎದ್ದಿತು . ಎಲ್ಲವೂ ತಾನು ಹೇಳಿದ್ದಂತೆ ಮಾಡಲ್ಪಟ್ಟಿರುವುದನ್ನು ಕಂಡು 
ಆಶ್ಚರ್ಯಪಟ್ಟಿತು. 

ಆಗ ಅದು ಅವನಿಗೆ ಮೂರನೆಯ ಕೆಲಸವನ್ನು ನೀಡಿತು : 
- “ ಈ ರಾತ್ರಿ ನೀನು ಚಿನ್ನದ ಮೊಲವನ್ನು ಹಿಡಿದು ಹೊತ್ತು ಮೂಡುತ್ತಿದ್ದಂತೆಯೇ 
ನನ್ನ ಗುಡಿಸಿಲಿಗೆ ತಂದುಕೊಡಬೇಕು !” 

ಅವನು ಮತ್ತೆ ಆ ಕಲ್ಲಿನ ಸ್ತಂಭದ ಬಳಿಗೆ ಹೋಗಿ ಅಳ ತೊಡಗಿದ. ಹಾವಿನ ಹೆಣ್ಣುಮರಿ 
ಅವನನ್ನು ಕೇಳಿತು : 

“ ಏನು ಆಜ್ಞೆ ಕೊಟ್ಟಿದೆ ? ” 
ಅವನು ಹೇಳಿದ : “ ಚಿನ್ನದ ಮೊಲವನ್ನು ಹಿಡಿದು ತಾ ಅಂತ ಆಜ್ಞಾಪಿಸಿದೆ. ” 

ಆಗ ಅದು ಹೇಳಿತು : “ಓಹ್, ಇದು ತುಂಬ ಕಷ್ಟದ ಕಾರ್ಯಭಾರ . ಯಾರು ಅದನ್ನು 
ತಿಳಿದಿದ್ದಾರೆ, ಯಾರು ಅದನ್ನು ಹಿಡಿಯಬಲ್ಲರು ! ಆದರೆ ವಿಧಿಯಿಲ್ಲ, ಮಾಡಲೇ ಬೇಕು. ಬಾ , ಆ 
ಬಂಡೆಯ ಬಳಿಗೆ ಹೋಗೋಣ.” 

ಅವರು ಅಲ್ಲಿಗೆ ಹೋದರು. ಅದು ಹೇಳಿತು: 

“ನೀನು ಆ ಬಿಲದ ಬಳಿ ನಿಂತಿರು . ನಾನು ಅದನ್ನು ಹೊರಕ್ಕೆ ಓಡಿಸುತ್ತೇನೆ. ನೀನು ಅದನ್ನು 
ಹಿಡಿಯಬೇಕು. ನೋಡು, ಆ ಬಿಲದಿಂದ ಹೊರಕ್ಕೆ ಏನು ಬಂದರೂ ಸರಿ ನೀನು ಅದನ್ನು 
ಹಿಡಿಯಬೇಕು. ಅದೇ ಚಿನ್ನದ ಮೋಲವಾಗಿರುತ್ತೆ ! ” 

ಅದು ಹೋಗಿ ಮೊಲವನ್ನು ಬಿಲದಿಂದ ಹೊರಕ್ಕೆ ಓಡಿಸಿತು . ಆಗ ಬಿಲದಿಂದ ಒಂದು 
ವಿಷಸರ್ಪ ಬುಸುಗುಟ್ಟಿಕೊಂಡು ಹೊರಬಂದಿತು . ಅವನು ಅದನ್ನು ಬಿಟ್ಟುಬಿಟ್ಟ , ಹಾವಿನ ಹೆಣ್ಣು 
ಮರಿ ಬಿಲದಿಂದ ಹೊರಬಂದು ಅವನನ್ನು ಕೇಳಿತು : 

“ ಬಿಲದಿಂದ ಯಾರೂ ಹೊರಬರಲಿಲ್ಲವೇ ? ” 
“ ಬಂದಿತು . ಒಂದು ವಿಷಸರ್ಪ ಹೊರಬಂದಿತು . ನಾನು ಭಯಪಟ್ಟು ಅದನ್ನು ಬಿಟ್ಟುಬಿಟ್ಟೆ . ” 
ಅದು ಅವನಿಗೆ ಹೇಳಿತು : 

“ನೀನು ಎಂಥವನು ! ಅದೇ ಚಿನ್ನದ ಮೊಲ. ಹೋಗಲಿ, ನೋಡು. ನಾನು ಮತ್ತೆ ಹೋಗ್ತಿನಿ. 
ಯಾರಾದರೂ ಬಿಲದಿಂದ ಹೊರಬಂದು ಅಲ್ಲಿ ಚಿನ್ನದ ಮೊಲ ಇಲ್ಲ ಅಂತ ಹೇಳಿದರೆ ನೀನು 
ನಂಬಬೇಡ, ಅದನ್ನೇ ಹಿಡಿದು ಇರಿಸಿಕೋ .” 

ಅದು ಬಿಲದೊಳಗೆ ಹೋಗಿ ಮತ್ತೆ ಚಿನ್ನದ ಮೊಲವನ್ನು ಹೊರಕ್ಕೆ ಅಟ್ಟಿತು. ಬಿಲದಿಂದ | 
ಎಂತಹ ಹಣ್ಣು ಹಣ್ಣು ಮುದುಕಿ ಹೊರಬಂದಳೋ ಹೇಳುವುದು ಕಷ್ಟ . ಅವಳು ಹುಡು 
ಗನನ್ನು ಕೇಳಿದಳು: 

“ ಇಲ್ಲಿ ನೀನು ಯಾರಿಗಾಗಿ ಕಾಯುತ್ತಿದ್ದೀಯ, ಮಗು ? ” 
ಅವನು ಅವಳಿಗೆ ಹೇಳಿದ: “ ಚಿನ್ನದ ಮೊಲಕ್ಕೆ . ” 

ಅವಳು ಅವನಿಗೆ ಹೇಳಿದಳು : “ ಅದು ಇಲ್ಲಿ ಯಾಕೆ ಇರುತ್ತೆ ? ನೀನು ವ್ಯರ್ಥವಾಗಿ 
ಕಾಯುತ್ತಿದ್ದೀಯ .” 

ಹಾಗೆಂದು ಅವಳು ಅವನಿಂದ ದೂರ ಹೊರಟು ಹೋದಳು. ಹಾವಿನ ಹೆಣ್ಣುಮರಿ ಬಿಲ 
ದಿಂದ ಹೊರಬಂದು ಹುಡುಗನನ್ನು ಕೇಳಿತು : 

“ ಏನು ಮೊಲವನ್ನು ಹಿಡಿಯಲಿಲ್ಲವೇ ? ಯಾರೂ ಬಿಲದಿಂದ ಹೊರಬರಲಿಲ್ಲವೇ ? ”
ಅವನು ಹೇಳಿದ : “ ಒಬ್ಬ ಹಣ್ಣು ಹಣ್ಣು ಮುದುಕಿ ಹೊರಬಂದಳು . ನಾನು ಯಾರಿಗಾಗಿ 
ಕಾಯುತ್ತಿದ್ದೇನೆ ಅಂತಕೇಳಿದಳು . ಚಿನ್ನದ ಮೊಲಕ್ಕೆ ಅಂತ ನಾನು ಹೇಳಿದೆ . ಅದು ಇಲ್ಲಿ ಇಲ್ಲ ಎಂದು 
ಅವಳು ಹೇಳಿದಳು . ನಾನು ಅವಳನ್ನು ಬಿಟ್ಟುಬಿಟ್ಟೆ .” 

ಆಗ ಅದು ಹೇಳಿತು : 
“ ಏನು ಮಾಡಿಬಿಟ್ಟೆ ನೀನು ! ಆ ಮುದುಕಿಯೇ ಚಿನ್ನದ ಮೊಲ, ಇನ್ನು ನೀನು ಅದನ್ನು 
ಎಲ್ಲೂ ಕಂಡುಹಿಡಿಯಲಾರೆ. ಈಗ ಹೀಗೆ ಮಾಡೋಣ. ನಾನೇ ಚಿನ್ನದ ಮೊಲದ ರೂಪ ತಾಳು 
ತೇನೆ. ನೀನು ನನ್ನನ್ನು ಹಾವಿನ ಮೇಜಿನ ಮೇಲೆ ಇರಿಸು , ಹಾವಿನ ಕೈಗೆ ಮಾತ್ರ ಕೊಡಬೇಡ. 
ಹಾಗೆ ಮಾಡಿದರೆ ಅದು ತಿಳಿದುಬಿಟ್ಟು ನಿನ್ನನ್ನೂ ನನ್ನನ್ನೂ ಕೊಂದು ಹಾಕುತ್ತೆ . ” 

ಅದು ಹಾಗೆಯೇ ಮಾಡಿತು - ಚಿನ್ನದ ಮೊಲದ ರೂಪ ತಾಳಿತು . ಅವನು ಅದನ್ನು ಎತ್ತಿ 
ಕೊಂಡು ಹೋಗಿ ಹಾವಿನ ಮುಂದೆ ಮೇಜಿನ ಮೇಲೆ ಇರಿಸಿ ಹೇಳಿದ: 

“ ಇಲ್ಲಿದೆ ನೋಡು, ಚಿನ್ನದ ಮೊಲ. ನಾನಿನ್ನು ಹೊರಡುತ್ತೇನೆ. ” 
“ ಹುಂ . ಹೋಗು” ಅದು ಹೇಳಿತು . 
ಅವನು ಹೊರಟು ಹೋದ. 

ಹಾವು ಗುಡಿಸಿಲಿನಿಂದ ಹೊರಕ್ಕೆ ಹೋದುದೇ ತಡ ಮೊಲ ಸುಂದರ ಯುವತಿಯ ರೂಪ 
ತಳೆಯಿತು. ಅವಳು ಹೊರಕ್ಕೆ ಓಡಿ ಹೋಗಿ ಯುವಕನ ಜೊತೆಕೂಡಿಕೊಂಡಳು . ಅವರಿಬ್ಬರೂ 
ಜೊತೆಯಾಗಿ ಓಡ ತೊಡಗಿದರು . ಈ ಮಧ್ಯೆ ಹಾವು ತನ್ನ ಗುಡಿಸಿಲಿಗೆ ಹಿಂದಿರುಗಿತು .ನೋಡಿತು - 
ಮೊಲ ಇಲ್ಲವೇ ಇಲ್ಲ . ತಾನು ಮೋಸಮಾಡಲ್ಪಟ್ಟಿದಿತೆಂದು ಅದಕ್ಕೆ ಅರಿವಾಯಿತು. ಕೂಡಲೇ 
ಅವರನ್ನು ಹಿಡಿದು ತರುವಂತೆ ತನ್ನ ಗಂಡನನ್ನು ಕಳುಹಿಸಿಕೊಟ್ಟಿತು. ಅದರ ಓಟದ ಆರ್ಭಟಕ್ಕೆ 
ಭೂಮಿ ನಡುಗಿತು, ಗುಡುಗುಟ್ಟಿತು... ಆಗ ಹಾವಿನ ಹೆಣ್ಣುಮರಿ ಹೇಳಿತು : 
- “ಓಹ್ , ಅವನು ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದ್ದಾನೆ ! ನಾನು ನನ್ನನ್ನು ಒಂದು 
ಗೋಧಿಹೊಲವನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ನಿನ್ನನ್ನು ಒಬ್ಬ ಮುದುಕನನ್ನಾಗಿ ಪರಿವರ್ತಿಸು 
ತೇನೆ. ಅವನು ಬಂದು ಒಬ್ಬ ಹುಡುಗ, ಒಬ್ಬ ಹುಡುಗಿ ಓಡಿ ಬಂದುದನ್ನು ನೋಡಿದೆಯಾ ? ” 
ಎಂದು ಕೇಳಿದಲ್ಲಿ ನೀನು , ಹೌದು, ನೋಡಿದೆ. ಅದು ತುಂಬ ಹಿಂದೆ, ಈ ಗೋಧಿ ಬೆಳೆಗೆ ಬೀಜ 
ಬಿತ್ತುತ್ತಿದಾಗ ಅಂತ ಹೇಳು. ” 

ಹಾವಿನ ಗಂಡ ಅಟ್ಟಿಸಿಕೊಂಡು ಬಂದು ಅಲ್ಲಿದ ಮುದುಕನನ್ನು ಕೇಳಿತು : “ನೀನುನೋಡಲಿ 
ಲ್ಲವೇ , ಮುದುಕಪ್ಪ , ಈ ಕಡೆ ಒಬ್ಬ ಹುಡುಗಿ, ಒಬ್ಬ ಹುಡುಗ ಓಡಿ ಹೋದುದನ್ನು ? ” 

ಅವನು ಹೇಳಿದ : “ ಹೌದು, ಓಡಿ ಹೋದರು .” 
ಅದು ಕೇಳಿತು : “ ತುಂಬ ಹಿಂದೆಯೇ ? ” 
ಅವನು ಹೇಳಿದ: “ಹೌದು. ಈ ಗೋಧಿ ಬೆಳೆಯ ಬೀಜ ಬಿತ್ತುತ್ತಿದ್ದಾಗ.” 

ಹಾವಿನ ಗಂಡ ಹೇಳಿತು : “ ಅಯೊ , ಈ ಗೋಧಿ ಆಗಲೇ ಮಾಗಿ ಕಟಾವಿಗೆ ಬಂದಿದೆ. 
ಆದರೆ ಅವರು ನಿನ್ನೆಯಷ್ಟೆ ಓಡಿ ಹೋದುದು ! ” 

ಹಾವಿನ ಗಂಡ ಹಿಂದಿರುಗಿತು . ಹಾವಿನ ಹೆಣ್ಣುಮರಿ ಮತ್ತೆ ತನ್ನನ್ನು ಹುಡುಗಿಯನ್ನಾಗಿ 
ಪರಿವರ್ತಿಸಿಕೊಂಡಿತು . ಮುದುಕನನ್ನು ಹುಡುಗನನ್ನಾಗಿ ಮಾಡಿತು. ಇಬ್ಬರೂ ಓಡ ತೊಡ 
ಗಿದರು . 

ಹಾವಿನ ಗಂಡ ಮನೆಗೆ ಹಿಂದಿರುಗಿತು . ಅದರ ಹೆಂಡತಿ ಕೇಳಿತು : 
“ ಏನು ಸಿಗಲಿಲ್ಲವೇ ? ದಾರಿಯಲ್ಲಿ ಯಾರನ್ನೂ ನೀನು ಸಂಧಿಸಲಿಲ್ಲವೇ ? ” 

ಅದು ಹೇಳಿತು : “ ಹೌದು ಸಂಧಿಸಿದೆ, ಒಬ್ಬ ಮುದುಕಪ್ಪನನ್ನು . ಅವನು ಗೋಧಿ ಹೊಲ 
ಕಾಯುತ್ತಿದ್ದ. ಹುಡುಗ, ಹುಡುಗಿ ಓಡಿ ಹೋದುದನ್ನು ಕಂಡೆಯಾ ಅಂತ ಕೇಳಿದೆ. ಕಂಡೆ, ಆದರೆ 
ಈ ಗೋಧಿಬೀಜ ಬಿತ್ತನೆ ಮಾಡುತ್ತಿದ್ದಾಗ ಅಂತ ಹೇಳಿದ. ಗೋಧಿ ಆಗಲೇ ಮಾಗಿ ಕಟಾವಿಗೆ 
ನಿಂತಿತ್ತು . ಅದಕ್ಕೇ ನಾನು ಹಿಂದಿರುಗಿ ಬಂದೆ. ” 
* ಹಾವಿನ ಹೆಂಡತಿ ಹೇಳಿತು : “ ಅಯ್ಯೋ , ನೀನು ಏನು ಮಾಡಿಬಿಟ್ಟೆ ! ಅವರೇ ಅವರಾಗಿದ್ದರು ! 
ಬೇಗ ಓಡು ಮತ್ತೆ ಅವರ ಹಿಂದೆ ! ” 

ಹಾವಿನ ಗಂಡ ಹಾರಿ ಹೋಗುತ್ತೆ . ಅದರ ಓಟದ ಆರ್ಭಟಕ್ಕೆ ಭೂಮಿ ನಡುಗುತ್ತೆ , 
ಗುಡುಗುತ್ತೆ . ಹಾವಿನ ಹೆಣ್ಣುಮರಿ ಬೇಟೆಗಾರನ ಮಗನಿಗೆ ಹೇಳಿತು : 

“ ನಾನು ನನ್ನನ್ನು ಒಂದು ಹಳೆಯ ಕೋಟೆಯನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ನಿನ್ನನ್ನು 
ಒಬ್ಬ ಸೈನಿಕನನ್ನಾಗಿ ಪರಿವರ್ತಿಸುತ್ತೇನೆ. ಹಾವಿನ ಗಂಡ ಬಂದು “ ಅಂಥವರನ್ನು ಕಂಡೆಯಾ? 
ಅಂತ ಕೇಳಿದರೆ, ಕಂಡೆ , ಆದರೆ ಈ ಕೋಟೆಯನ್ನು ಕಟ್ಟುತ್ತಿದ್ದಾಗ ಅಂತ ಹೇಳು. ” 

ಹಾವಿನ ಗಂಡ ಹಾರಿ ಬಂದಿತು . ಈ ಸೈನಿಕನನ್ನು ಕೇಳಿತು : 
“ ಒಬ್ಬ ಹುಡುಗಿ, ಒಬ್ಬ ಹುಡುಗ ಈ ಕಡೆ ಓಡಿ ಬಂದುದನ್ನು ನೀನೇನಾದರೂ ಕಂಡೆಯಾ, 


ಸೈನಿಕ ? ” 


ಸೈನಿಕ ಹೇಳಿದ: “ಕಂಡೆ. ಆದರೆ ಈ ಕೋಟೆ ಕಟ್ಟುತ್ತಿದ್ದಾಗ . ” 

ಹಾವಿನ ಗಂಡ ಹೇಳಿತು : “ ಹೌದೆ ? ಅವರು ನಿನ್ನೆಯಷ್ಟೆ ಓಡಿ ಹೋದದ್ದು . ಈ ಕೋಟೆ 
ಯನ್ನು ಕಟ್ಟಿ ಬಹಳ ಕಾಲವೇ ಆಗಿರಬೇಕು. ” 

ಹಾಗೆ ಹೇಳಿ ಅದು ಮನೆಗೆ ಹಿಂದಿರುಗಿತು . 
ಮನೆಗೆ ಹಿಂದಿರುಗಿದ್ದೇ ಅದು ತನ್ನ ಹೆಂಡತಿಗೆ ವರದಿ ಮಾಡಿತು : 

“ಒಬ್ಬ ಸೈನಿಕನನ್ನು ಕಂಡೆ, ಒಂದು ಹಳೆಯ ಕೋಟೆಯ ಬಳಿ, ನಾನು ಅವನನ್ನು ಕೇಳಿದೆ. 
ಅವನು ಹೇಳಿದ , ಆ ಕೋಟೆ ಕಟ್ಟುತ್ತಿದ್ದಾಗ ಕಂಡ ಅಂತ . ಕೋಟೆ ತುಂಬ ಹಳೆಯದಾಗಿತ್ತು . 
ಯಾವಾಗ ಕಟ್ಟಿದ್ರೋ . ಅವರು ನಿನ್ನೆಯಷ್ಟೆ ಓಡಿ ಹೋದದ್ದು . ” 

ಆಗ ಹಾವಿನ ಹೆಂಡತಿ ಹೇಳಿತು : 
“ನೀನು ಯಾಕೆ ಆ ಸೈನಿಕನನ್ನು ಕೊಲ್ಲಲಿಲ್ಲ ? ಆ ಕೋಟೆಯನ್ನು ಯಾಕೆ ಪುಡಿಪುಡಿ ಮಾಡ 
ಲಿಲ್ಲ ? ಅದು ಅವರೇ ! ಈಗ ನಾನೇ ಹೋಗಿ ಹಿಡಿಯಬೇಕು ಅಂತ ಕಾಣುತ್ತೆ ! ” 

ಹಾಗೆಂದು ಅದು ಓಡಿತು . 
ಓಡಿತು , ಓಡಿತು ... ಭೂಮಿ ನಡುಗುತ್ತೆ , ಗುಡುಗುತ್ತೆ . ಹಾವು ಕೆಂಪಗೆ ಕಾಯುತ್ತೆ . ಹಾವಿನ 
ಹೆಣ್ಣು ಮರಿ ಹೇಳುತ್ತೆ : 

“ ಅಯ್ಯೋ , ಇನ್ನು ನಾವು ಸಿಕ್ಕಿಬಿದ್ದೆವು ಅಂತಲೇ ! ಹಾವೇ ಹಾರಿ ಬರುತ್ತಿದೆ ! ನಾನು ನಿನ್ನನ್ನು 
ಒಂದು ನದಿಯನ್ನಾಗಿ ಪರಿವರ್ತಿಸುತ್ತೇನೆ. ನಾನು ಪೆರ್ಚ್‌ ಮಿಾನು ಆಗುತ್ತೇನೆ.” 

ಅದು ಹಾಗೇ ಮಾಡಿತು . 
ಹಾವು ಹಾರಿ ಬಂದಿತು . ನದಿಯನ್ನು ಕಂಡು ಕೇಳಿತು : 
“ ಏನು ? ತಪ್ಪಿಸಿಕೊಂಡೆವು ಅಂದುಕೊಂಡು ಬಿಟ್ಟಿರಾ ? ” 

ಅದು ಪೈಕ್ ಮಾನಾಗಿ ಪೆರ್ಚ್‌ ಮಾನನ್ನು ಅಟ್ಟಿಸಿಕೊಂಡು ಹೋಯಿತು. ಇನ್ನೇನು ಹಿಡಿ 
ಯಿತು ಅನ್ನುವಾಗಲೆಲ್ಲ ಪೆರ್ಚ್‌ ಮಾನು ತನ್ನ ಚೂಪು ತುದಿಯ ಈಜುರೆಕ್ಕೆಗಳನ್ನು ಅದರ 
ಕಡೆಗೆ ತಿರುಗಿಸುತ್ತಿತ್ತು . ಹಾಗಾಗಿ ಅದು ಪೆರ್ಚ್‌ ಮಾನನ್ನು ಹಿಡಿಯಲು ಆಗುತ್ತಿರಲಿಲ್ಲ. ಅಟ್ಟಿಸಿ 
ಕೊಂಡು ಹೋಯಿತು, ಅಟ್ಟಿಸಿಕೊಂಡು ಹೋಯಿತು. ಆದರೂ ಹಿಡಿಯಲು ಆಗಲಿಲ್ಲ. ನದಿಯ 
ನೀರನ್ನು ಕುಡಿದು ಬಿಡೋಣ ಅಂತ ಯೋಚಿಸಿತು . ಕುಡಿಯಿತು, ಕುಡಿಯಿತು. ಅದರ ಹೊಟ್ಟೆ 
ಊದಿಕೊಂಡು ಸಿಡಿಯಿತು. ಅದು ಸತ್ತು ಬಿದ್ದಿತು. 

ಆಗ ವಿಾನಾಗಿದ್ದ ಹುಡುಗಿ ನದಿಯಾಗಿದ್ದ ಹುಡುಗನಿಗೆ ಹೇಳಿದಳು : 

“ ಇನ್ನು ನಾವು ಹೆದರಬೇಕಾಗಿಲ್ಲ . ನಿನ್ನ ತಂದೆ ತಾಯಿಯ ಬಳಿಗೆ ಹೋಗೋಣ. ಆದರೆ 
ಒಂದು ವಿಷಯ ಮಾತ್ರ ನೆನಪಿನಲ್ಲಿಟ್ಟಿರು : ಮನೆಯ ಒಳಗೆ ಹೋದಾಗ ಎಲ್ಲರಿಗೂ ಮುತ್ತು 
ಕೊಡು, ಆದರೆ ನಿನ್ನ ಚಿಕ್ಕಪ್ಪನ ಮಗುವನ್ನು ಮಾತ್ರ ಚುಂಬಿಸಬೇಡ. ಏಕೆಂದರೆ ನೀನು ಅದನ್ನು 
ಚುಂಬಿಸಿದರೆ ನನ್ನನ್ನು ಸಂಪೂರ್ಣವಾಗಿ ಮರೆತು ಬಿಡುತ್ತೀಯ . ನಾನು ಬೇರೆ ಯಾರ ಬಳಿಯಾ 
ದರೂ ಕೆಲಸಕ್ಕೆ ಇರಬೇಕಾಗುತ್ತೆ .” 
ಅವನು ಮನೆಯ ಒಳ ಹೋದ. ಎಲ್ಲರನ್ನೂ ಚುಂಬಿಸಿ ನಮಸ್ಕರಿಸಿದ. ಆಮೇಲೆ ತನ್ನಲ್ಲೇ 
ಹೇಳಿಕೊಂಡ : “ ಚಿಕ್ಕಪ್ಪನ ಮಗುವನ್ನು ಚುಂಬಿಸದೆ ಇದ್ದರೆ ಹೇಗೆ? ಅವರು ನನ್ನ ಬಗೆಗೆ ತಪ್ಪು 
ತಿಳಿಯಬಹುದು . ಹಾಗೆಂದುಕೊಂಡು ಅವನು ಚಿಕ್ಕಪ್ಪನ ಮಗುವಿನ ಬಳಿಗೂ ಹೋಗಿ ಚುಂಬಿಸಿದ. 
ಅವನು ಚುಂಬಿಸಿದನೋ ಇಲ್ಲವೋ ಹುಡುಗಿಯ ವಿಷಯವನ್ನು ಸಂಪೂರ್ಣವಾಗಿ ಮರೆತ. 

ತುಂಬ ಸಮಯವೋ , ಸ್ವಲ್ಪ ಸಮಯವೋ , ಅಂತೂ ಕಳೆಯಿತು. ಹುಡುಗ ಮದುವೆಯಾಗ 
ಬೇಕು ಅಂತ ಯೋಚಿಸಿದ. ಅವನಿಗಾಗಿ ಒಬ್ಬ ಸುಂದರ ಕನೈಯನ್ನು ಕರೆತಂದರು . ಹಾವಿನ ಹಿಡಿತ 
ದಿಂದ ಸಂರಕ್ಷಿಸಿದ ಯುವತಿಯ ವಿಷಯವನ್ನು ಸಂಪೂರ್ಣವಾಗಿ ಮರೆತು ಅವನು ಈ ಯುವತಿ 
ಯನ್ನು ಪ್ರೀತಿಸ ತೊಡಗಿದ. 

ಮದುವೆಯ ಸಮಾರಂಭಕ್ಕೆ ಮುನ್ನ ಒಂದು ದಿನ ಸಂಜೆ ಆ ಗ್ರಾಮದ ಯುವತಿಯರನ್ನೆಲ್ಲ 
ಔತಣಕ್ಕೆ ಆಹ್ವಾನಿಸಲಾಯಿತು. ಅವನು ಹಾವಿನಿಂದ ತಪ್ಪಿಸಿಕೊಂಡು ಯಾವ ಯುವತಿಯ ಜೊತೆ 
ಓಡಿ ಬಂದನೋ ಆ ಯುವತಿಯನ್ನೂ ಆಹ್ವಾನಿಸಲಾಯಿತು. ಆದರೆ ಅವಳು ಯಾರು, ಎಲ್ಲಿಂದ 
ಬಂದಳು ಅನ್ನುವುದು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಸಂತೋಷದಿಂದ ಹಾಡಿದರು , ಆಟ 
ಆಡಿದರು . ಒಟ್ಟಿನಿಂದ ತರಹೇವಾರಿ ಬೊಂಬೆಗಳನ್ನು ಮಾಡಿದರು . ಹಾವಿನ ಮಗಳು ಹಿಟ್ಟಿನಿಂದ 
ಒಂದು ಹೆಣ್ಣು ಒಂದು ಗಂಡು ಪಾರಿವಾಳಗಳನ್ನು ಮಾಡಿ ಅವುಗಳನ್ನು ಮೇಲಕ್ಕೆ ಎಸೆದಳು. 
ಅವು ಜೀವ ತಳೆದು ಹಾರಾಡ ತೊಡಗಿದವು. ಹೆಣ್ಣು ಪಾರಿವಾಳ ಗಂಡುಪಾರಿವಾಳಕ್ಕೆ ಹೇಳಿತು : 

“ ಏನು ನೀನು ಮರೆತು ಬಿಟ್ಟೆಯಾ, ಹೇಗೆ ನಾನು ನಿನಗಾಗಿ ಒಂದು ಇಡೀ ಕಾಡನ್ನು 
ಕಡಿದು ಹಾಕಿ , ಅಲ್ಲಿ ಗೋಧಿ ಬೆಳೆದು , ಅದರಿಂದ ಬ್ರೆಡ್ ಮಾಡಿ, ಅದನ್ನು ನೀನು ಹಾವಿಗೆ 
ತೆಗೆದುಕೊಂಡು ಹೋಗಿಕೊಡುವುದಕ್ಕೆ ನೆರವಾದೆ, ಅನ್ನುವುದನ್ನು ? ” 

ಗಂಡುಪಾರಿವಾಳ ಹೇಳಿತು : 
“ ಇಲ್ಲ, ಇಲ್ಲ ! ನನಗೆ ಯಾವುದೂ ಜ್ಞಾಪಕವಿಲ್ಲ ! ” 
ಹೆಣ್ಣು ಪಾರಿವಾಳ ಮತ್ತೆ ಕೇಳಿತು : 

“ ಮತ್ತೆ ನೀನು ಮರೆತು ಬಿಟ್ಟೆಯಾ ನಾನು ಹೇಗೆ ನಿನಗಾಗಿ ಬೆಟ್ಟದಲ್ಲಿ ಸುರಂಗ ಮಾಡಿದೆ, 
ಅದರಲ್ಲಿ ದ್ವೀಪರ್ ನದಿ ಹರಿಯುವಂತೆ ಮಾಡಿದೆ, ಆ ನದಿಯಲ್ಲಿ ಹಡಗುಗಳು ಬಂದವು, ನೀನು 
ಅವುಗಳಿಗೆ ಗೋಧಿ ಮಾರಿದೆ, ಅನ್ನುವುದನ್ನು ? ” 

ಗಂಡುಪಾರಿವಾಳ ಹೇಳಿತು : 
“ ಇಲ್ಲ, ಇಲ್ಲ ! ನನಗೆ ಯಾವುದೂ ಜ್ಞಾಪಕವಿಲ್ಲ ! ” 
ಹೆಣ್ಣು ಪಾರಿವಾಳ ಮತ್ತೆ ಕೇಳಿತು : 
“ ನಾವಿಬ್ಬರೂ ಒಟ್ಟಿಗೆ ಹೇಗೆ ಚಿನ್ನದ ಮೊಲಕ್ಕಾಗಿ ಹುಡುಕಾಡಿದೆವು ಅನ್ನುವುದನ್ನು ಮರೆತು 
ಬಿಟ್ಟೆಯಾ? ನೀನು ನನ್ನನ್ನು ಸಂಪೂರ್ಣವಾಗಿ ಮರೆತು ಬಿಟ್ಟೆಯಾ? ” 

ಗಂಡುಪಾರಿವಾಳ ಉತ್ತರಿಸಿತು : 
“ ಇಲ್ಲ, ಇಲ್ಲ ! ನನಗೆ ಯಾವುದೂ ಜ್ಞಾಪಕವಿಲ್ಲ ! ” 

ಇವುಗಳ ಸಂಭಾಷಣೆಯನ್ನು ಕೇಳಿದಾಗ ಬೇಟೆಗಾರನ ಮಗನಿಗೆ ಹಿಂದಿನದೆಲ್ಲ ನೆನಪಿಗೆ 
ಬಂದಿತು . ಅವನು ಆ ಯುವತಿಯ ಗುರುತನ್ನೂ ಹಿಡಿದ. ಅವಳನ್ನೇ ಮದುವೆಯಾದ . ಈಗಲೂ 
ಅವರು ಹಾಯಾಗಿ ಸುಖ ಜೀವನ ನಡೆಸುತ್ತಿದ್ದಾರೆ . 

ತೆಲೇಸಿಕ್

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ, ಒಬ್ಬ ಮುದುಕಿ ವಾಸವಾಗಿದ್ದರು. ಅವರು 
ಆಗಲೇ ಮುಪ್ಪಿಗೆ ಬಂದಿದ್ದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಇದು ಅವರನ್ನು ನಿಜಕ್ಕೂ ತುಂಬ 
ದುಃಖಿತರನ್ನಾಗಿ ಮಾಡಿತ್ತು . “ ಯಾರು ನಮ್ಮನ್ನು ಮುಪ್ಪಿನಲ್ಲಿ ನೋಡಿಕೊಳ್ಳುವವರು ? ಯಾರು 
ನಮ್ಮ ಕಣ್ಣುಗಳನ್ನು ಮುಚ್ಚುವವರು ? ” ಎಂದು ಅವರು ದುಃಖಿಸುತ್ತಿದ್ದರು . 

ಒಂದು ದಿನ ಮುದುಕಿ ಮುದುಕನಿಗೆ ಹೇಳಿದಳು : 

“ಕಾಡಿಗೆ ಹೋಗಿ, ಮುದುಕಪ್ಪ , ಒಂದು ಮರವನ್ನು ಕಡಿದುಕೊಂಡು ಬಾ . ಅದರಿಂದ 
ನನಗೆ ಒಂದು ತೊಟ್ಟಿಲು ಮಾಡಿಕೊಡು. ಅದರಲ್ಲಿ ನಾನು ಒಂದು ಮರದ ತುಂಡನ್ನಿರಿಸಿ ಅದನ್ನೇ 
ಮಗುವೆಂದು ತೂಗುತ್ತೇನೆ. ಅದರಿಂದ ನನಗೆ ಎಷ್ಟೋ ಸಮಾಧಾನವಾಗುತ್ತೆ .” 

ಮುದುಕನಿಗೆ ಮೊದಲು ಹಾಗೆ ಮಾಡಲು ಇಷ್ಟವಾಗಲಿಲ್ಲ. ಆದರೆ ಮುದುಕಿ ಒಂದೇ ಸಮನೆ 
ಕೇಳುತ್ತಲೇ ಹೋದಳು . ಅವಳ ಗೋಳನ್ನು ಕೇಳಲಾರದೆ ಕೊನೆಗೆ ಮುದುಕ ಕಾಡಿಗೆ ಹೋದ. 
ಒಂದು ಮರವನ್ನು ಕಡಿದು ಅದರಿಂದ ಒಂದು ತೊಟ್ಟಿಲು ಮಾಡಿದ. ಮುದುಕಿ ಆ ತೊಟ್ಟಿಲಿ 
ನಲ್ಲಿ ಒಂದು ಮರದ ತುಂಡನ್ನಿರಿಸಿ ತೂಗುತ್ತಾಳೆ, ಜೋಗುಳ ಹಾಡುತ್ತಾಳೆ: 


“ ಲಾಲಿ , ಲಾಲೀ , ತೆಲೇಸಿಕ್ ಮಗುವೇ , 
ಹೂರಣದ ಕಡುಬನು ನಿನಗೆ ಬೇಯಿಸಿಕೊಡುವೆ, 
ಮುರಬ್ಬ ಜೆಲ್ಲಿಯ ನಿನಗೆ ಮಾಡಿಕೊಡುವೆ, 
ಲಾಲಿ , ಲಾಲೀ , ತೆಲೇಸಿಕ್ ಮಗುವೇ ! ” 
ಮುದುಕಿ ಹೀಗೆ ಹಾಡುತ್ತಾ ತೂಗುತ್ತಾ ಹೋದಳು . ಸಂಜೆಯಾಯಿತು. ಮಲಗುವ ಹೊತ್ತೂ 
ಬಂದಿತ್ತು . 

ಬೆಳಿಗ್ಗೆ ಎದ್ದರು . ನೋಡುತ್ತಾರೆ - ತೊಟ್ಟಿಲಿನಲ್ಲಿ ಮರದ ತುಂಡಿಗೆ ಬದಲು ಒಂದು ಪುಟ್ಟ 
ಮಗು ಮಲಗಿದೆ ! ಅವರಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಅವರು ಮಗುವಿಗೆ ತೆಲೇ 
ಸಿಕ್ ಅಂತ ನಾಮಕರಣ ಮಾಡಿದರು . 

ತೆಲೇಸಿಕ್ ತುಂಬ ಬೇಗ ಬೆಳೆಯುತ್ತ ಹೋದ. ಎಷ್ಟು ಸುಂದರವಾಗಿ ಬೆಳೆದನೆಂದರೆ ಮುದುಕ 
ಮುದುಕಿಗೆ ಅವನನ್ನು ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. 

ಒಂದು ದಿನ ತೆಲೇಸಿಕ್ ಬೆಳೆದ ಹುಡುಗನಾದಾಗ, ಮುದುಕನಿಗೆ ಹೇಳಿದ: 

“ ಅಪ್ಪ ! ನನಗೊಂದು ಚಿನ್ನದ ದೋಣಿ, ಬೆಳ್ಳಿಯ ಹುಟ್ಟುಗೋಲು ಮಾಡಿಕೊಡು. ಮಿಾನು 
ಹಿಡಿದು ನಿಮ್ಮಿಬ್ಬರಿಗೂ ತಿನ್ನಲು ತಂದು ಕೊಡುತ್ತೀನಿ.” 
- ಮುದುಕ ಚಿನ್ನದ ದೋಣಿಯನ್ನೂ ಬೆಳ್ಳಿಯ ಹುಟ್ಟುಗೋಲನ್ನೂ ಮಾಡಿದ.ದೋಣಿಯನ್ನು 
ನದಿಯಲ್ಲಿ ತೇಲಿ ಬಿಟ್ಟ . ತೆಲೇಸಿಕ್ ಅದರಲ್ಲಿ ಕುಳಿತು ಮಿಾನು ಹಿಡಿಯಲು ಹೋದ. ಅವನು 
ಹೆಚ್ಚಿನ ಸಮಯವನ್ನೆಲ್ಲ ನೀರಿನ ಮೇಲೇ ಕಳೆಯುತ್ತಿದ್ದ. ವಿಾನು ಹಿಡಿಯುತ್ತಿದ್ದ, ಮುದುಕ 
ಮುದುಕಿಗೆ ತಂದು ಕೊಡುತ್ತಿದ್ದ, ಮತ್ತೆ ಹುಟ್ಟು ಹಾಕಿಕೊಂಡು ಹೋಗುತ್ತಿದ್ದ. ಮುದುಕಿ 
ಅವನಿಗೆ ಊಟವನ್ನು ಅಲ್ಲಿಗೆ ತಂದು ಕೊಡುತ್ತಿದಳು . ಅವನು ದೋಣಿಯಲ್ಲಿ ಕುಳಿತೇ ಊಟ 
ಮಾಡುತ್ತಿದ್ದ. 
ಊಟ ತಂದಾಗಲೆಲ್ಲ ಮುದುಕಿ ಅವನಿಗೆ ಹೇಳುತ್ತಿದಳು : 

“ ನೆನಪಿನಲ್ಲಿಡು, ಮಗು. ನಾನು ಕರೆದಾಗ ಮಾತ್ರ ದಡಕ್ಕೆ ಬಾ . ಬೇರೆ ಯಾರಾದರೂ ಕರೆ 
ದರೆ ದೋಣಿಯನ್ನು ದೂರ ನಡೆಸಿಕೊಂಡು ಹೋಗಿ ಬಿಡು, ತಿಳಿಯಿತಾ ? ” 
ಒಂದು ದಿನ ಅವಳು ತೆಲೇಸಿಕ್‌ಗಾಗಿ ಉಣಲು ತಿನಿಸು ತಂದು ಕೂಗಿ ಹೇಳಿದಳು : 

“ ಬಾ , ಮಗುವೆ, ಬಾ , ತೆಲೇಸಿಕ್ ! 
ತಂದಿಹೆನು ನಿನಗಾಗಿ ಹೂರಣದ ಕಡುಬು . 
ಬಾ ದಡಕೆ , ಬಾ ಬೇಗ, ತಿನಿಸು ತಿನ್ನಲಿಕೆ ! ” 


ತೆಲೇಸಿಕ್‌ಗೆ ಅವಳು ಕೂಗಿ ಹೇಳಿದುದು ಕೇಳಿಸಿತು . ಅವನು ತನ್ನ ದೋಣಿಗೆ ಹೇಳಿದ: 
“ ಸಾಗು , ಸಾಗು , ದೋಣಿ, ದಡಕೆ ! ತಂದಿಹಳು ತಾಯಿ ನನಗಾಗಿ ತಿನಿಸು . ” 
ಅವನು ದಡಕ್ಕೆ ಬಂದ , ದೋಣಿ ನಿಲ್ಲಿಸಿದ , ತಾಯಿ ಕೊಟ್ಟುದನ್ನು ತಿಂದ, ಕುಡಿದ, ಬೆಳ್ಳಿ 
ಹುಟ್ಟಿನಿಂದ ದೋಣಿಯನ್ನೊಮ್ಮೆ ನೀರಿನೊಳಕ್ಕೆ ದೂಕಿ, ಹುಟ್ಟು ಹಾಕಿಕೊಂಡು ಮತ್ತೆ ಮಿಾನು 
ಹಿಡಿಯಲು ಹೊರಟ . 

ಅದೇ ಹೊತ್ತಿನಲ್ಲಿ ದಡದ ಮೇಲೆ ಒಂದು ಹಾವು ಮಲಗಿತ್ತು . ಅದು ತಾಯಿ ತನ್ನ ಮಗನನ್ನು 
ಕೂಗಿಕರೆದುದನ್ನು ಕೇಳಿಸಿಕೊಂಡಿತು . ತಾಯಿ ಹೊರಟು ಹೋದಮೇಲೆ ಅದು ತಾನೂ ದಡಕ್ಕೆ 
ಹೋಗಿ ತನ್ನ ಕರ್ಕಶ ಧ್ವನಿಯಲ್ಲಿ ಕೂಗಿ ಹೇಳಿತು : 

“ ಬಾ , ಮಗುವೆ, ಬಾ , ತೆಲೇಸಿಕ್ ! 
ತಂದಿಹೆನು ನಿನಗಾಗಿ ಹೂರಣದ ಕಡುಬು. 

ಬಾ ದಡಕೆ, ಬಾ ಬೇಗ, ತಿನಿಸು ತಿನ್ನಲಿಕೆ ! ” 
ತೆಲೇಸಿಕ್ ಕೇಳಿಸಿಕೊಂಡ . ಅವನನ್ನು ಮೋಸಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ. 

“ ಇದು ನನ್ನ ತಾಯಿಯ ಧ್ವನಿಯಲ್ಲ” ಎಂದವನು ತನ್ನಲ್ಲೇ ಹೇಳಿಕೊಂಡ. ಆಮೇಲೆ ಗಟ್ಟಿ 
ಯಾಗಿ ತನ್ನ ದೋಣಿಗೆ ಹೇಳಿದ : 

“ಹೋಗು, ದೋಣಿ, ಹೋಗು, ತೀರದಿಂದ ದೂರ! ಹೋಗು, ದೋಣಿ, ಹೋಗು, ತೀರ 
ದಿಂದ ದೂರ! ” 
- ಅವನು ಜೋರಾಗಿ ಹುಟ್ಟು ಹಾಕಿದ .ದೋಣಿದಡದಿಂದ ಇನ್ನೂ ಹೆಚ್ಚು ದೂರ ಚಲಿಸಿತು. 
ಹಾವು ದಡದ ಮೇಲೆ ಸ್ವಲ್ಪ ಹೊತ್ತು ಕಾದು ಅನಂತರ ಪೊದೆಯೊಳಕ್ಕೆ ತೆವಳಿಕೊಂಡು ಹೊರಟು 
ಹೋಯಿತು . 

ಸ್ವಲ್ಪ ಹೊತ್ತಾದ ಮೇಲೆ ತೆಲೇಸಿಕ್‌ನ ತಾಯಿ ಅವನಿಗೆ ಊಟ ತಂದಳು . ನದಿಯ ದಡದ 
ಮೇಲೆ ನಿಂತು ಕೂಗಿ ಹೇಳಿದಳು : 

“ ಬಾ , ಮಗುವೆ, ಬಾ , ತೆಲೇಸಿಕ್ ! 
ತಂದಿಹೆನು ನಿನಗಾಗಿ ಹೂರಣದ ಕಡುಬು . 
ಬಾ ದಡಕೆ , ಬಾ ಬೇಗ, ತಿನಿಸು ತಿನ್ನಲಿಕೆ ! ” 


ತೆಲೇಸಿಕ್ ಕೇಳಿಸಿಕೊಂಡ. ಹೇಳಿದ: 
“ಸಾಗು, ಸಾಗು , ದೋಣಿ ದಡಕೆ ! ತಂದಿಹಳು ತಾಯಿ ನನಗಾಗಿ ಊಟ! ” 

ದಡಕ್ಕೆ ಬಂದ, ತಿಂದ, ಕುಡಿದ, ತಾಯಿಗೆ ತಾನು ಹಿಡಿದಿದ್ದ ಮಿಾನು ಕೊಟ್ಟ, ದೋಣಿಯನ್ನು 
ನೀರಿನೊಳಕ್ಕೆ ನೂಕಿ, ಮತ್ತೆ ಹುಟ್ಟು ಹಾಕಿಕೊಂಡು ಹೊರಟ. 
ಹಾವು ಮತ್ತೆ ದಡಕ್ಕೆ ಬಂದು ತನ್ನ ಕರ್ಕಶ ಧ್ವನಿಯಲ್ಲಿ ಕೂಗಿ ಹೇಳಿತು : 

“ ಬಾ , ಮಗುವೆ, ಬಾ , ತೆಲೇಸಿಕ್ ! 
ತಂದಿಹೆನು ನಿನಗಾಗಿ ಹೂರಣದ ಕಡುಬು. 

ಬಾ ದಡಕೆ, ಬಾ ಬೇಗ, ತಿನಿಸು ತಿನ್ನಲಿಕೆ !” 
ಆದರೆ ಈಗ ತನ್ನನ್ನು ಕರೆಯುತ್ತಿರುವುದು ತನ್ನ ತಾಯಿಯಲ್ಲ ಎಂದು ತಿಳಿದಿದ್ದ ಅವನು 
ಹೆಚ್ಚು ಬೇಗ ಬೇಗ ಹುಟ್ಟು ಹಾಕುತ್ತ ತನ್ನ ದೋಣಿಗೆ ಹೇಳಿದ : 

“ಹೋಗು, ದೋಣಿ, ಹೋಗು, ತೀರದಿಂದ ದೂರ ! ಹೋಗು, ದೋಣಿ, ಹೋಗು, ತೀರ 
ದಿಂದ ದೂರ! ” 
ದೋಣಿ ಹಾಗೆಯೇ ದೂರ ಸಾಗಿತು . 

ಹಾವುನೋಡುತ್ತೆ - ತನ್ನ ಆಟ ಸಾಗದು ಅಂತ ಅದಕ್ಕೆ ತಿಳಿದು ಬರುತ್ತೆ . ಅದು ಕಮ್ಮಾರನ 
ಬಳಿಗೆ ಹೋಗುತ್ತೆ . 

“ಕಮ್ಮಾರ, ಕಮಾರ ! ನನ್ನ ಗಂಟಲನ್ನು ಸ್ವಲ್ಪ ಸರಿ ಮಾಡು. ಅದು ತೆಲೇಸಿಕ್‌ನ ತಾಯಿ 
ಯಂತೆ ಅಷ್ಟೇ ಸಣ್ಣ ಧ್ವನಿ ಹೊರಡಿಸುವಂತಾಗಬೇಕು, ಹಾಗೆ ಮಾಡು .” 
ಕಮಾರ ಹಾಗೆಯೇ ಮಾಡಿದ. ಹಾವು ದಡಕ್ಕೆ ಹೋಗಿಕೂಗಿ ಹೇಳಿತು : 

“ ಬಾ , ಮಗುವೆ, ಬಾ , ತೆಲೇಸಿಕ್ ! 
ತಂದಿಹೆನು ನಿನಗಾಗಿ ಹೂರಣದ ಕಡುಬು. 
ಬಾ ದಡಕೆ , ಬಾ ಬೇಗ, ತಿನಿಸು ತಿನ್ನಲಿಕೆ ! ” 


ಇದು ತನ್ನ ತಾಯಿಯೇ ಕರೆಯುತ್ತಿರುವುದು ಅಂತ ತೆಲೇಸಿಕ್ ಅಂದುಕೊಂಡ. ತನ್ನ ದೋಣಿಗೆ 
ಹೇಳಿದ : 

“ ಸಾಗು , ಸಾಗು , ದೋಣಿ, ದಡಕೆ ! ನನ್ನ ತಾಯಿ ಕರೆಯುತಿಹಳು ಊಟಕೆ. ” 

ಅವನು ದಡಕ್ಕೆ ಬಂದ. ಹಾವು ತಕ್ಷಣವೇ ಅವನನ್ನು ದೋಣಿಯಿಂದ ಹೊರಕ್ಕೆ ಎಳೆದು 
ಕೊಂಡು ತನ್ನ ಮನೆಗೆ ಕರೆದೊಯ್ದಿತು. 

ಕರೆದೊಯು ಒಳಗಿದ್ದ ತನ್ನ ಮರಿಗೆ ಹೇಳಿತು : 
“ ಬಾಗಿಲು ತೆರೆ , ಅಲ್ಲೋ೦ಕ , ನನ್ನ ಪುಟ್ಟ ಮರಿ ! ” 
ಅಲ್ಲೋ೦ಕ ಬಾಗಿಲು ತೆರೆಯಿತು. ಹಾವು ಒಳಕ್ಕೆ ಹೋಯಿತು. 
“ ಅಯ್ಯೋಂಕ , ನನ್ನ ಮುದ್ದು ಮರಿ ! ಒಲೆ ಹಚ್ಚು . ಚೆನ್ನಾಗಿ ಕಾಯಿಸು. ಈ ತೆಲೇಸಿಕ್‌ನನ್ನು 
ಗರಿಗರಿಯಾಗಿ ಬೇಯಿಸು. ನಾನು ಹೋಗಿ ಅತಿಥಿಗಳನ್ನು ಕರೆದುಕೊಂಡು ಬರೀನಿ. ಸೊಗಸಾದ 
ಊಟ ಮಾಡೋಣ. ” 

ಹಾಗೆ ಹೇಳಿ ಅದು ಅತಿಥಿಗಳನ್ನು ಆಹ್ವಾನಿಸಲು ಹೊರಟು ಹೋಯಿತು . 
ಅಲೋ೦ಕ ಒಲೆ ಹತ್ತಿಸಿತು . ಕೆಂಪಗೆ ಕಾಯಿಸಿತು . ಆಮೇಲೆ ಹೇಳಿತು : 
“ಮೊರಗುದ್ದಲಿಯ ಮೇಲೆ ಕುಳಿತುಕೊ , ತೆಲೇಸಿಕ್ ! ” 
ಆದರೆ ಅವನು ಉತ್ತರಿಸಿದ : 
“ ನನಗೆ ಗೊತ್ತಿಲ್ಲ, ಹೇಗೆ ಅದರ ಮೇಲೆ ಕುಳಿತುಕೊಳ್ಳೋದು ಅಂತ . ” 
" ತರಲೆ ಮಾಡಬೇಡ, ಬೇಗ ಕುಳಿತುಕೊ ” ಕೂಗಿ ಹೇಳಿತು ಅಲೋಂಕ . 
ಅವನು ಮೊರಗುದಲಿಯ ಮೇಲೆ ತನ್ನ ಕೈ ಇರಿಸಿ ಹೇಳಿದ: 
“ಹೀಗಾ? ಸರಿಯಾ ? ” 
“ಉಹೂಂ. ಪೂರ್ತಿ ಕುಳಿತುಕೊ .” 
ಅವನು ತಲೆಯನ್ನಿರಿಸಿದ : 
" ಹ್ಯಾಗೆ ? ಹೀಗಾ ? ” 
“ಉಹೂಂ, ಹಾಗೂ ಅಲ್ಲ ! ಪೂರ್ತಿ ಕುಳಿತುಕೊ .” 
“ ಹಾಗಾದರೆ , ಹೇಗೆ ? ಹೀಗಾ ? ” ಎಂದವನು ಕಾಲನ್ನಿರಿಸಿದ. 
“ಉಹೂಂ, ಹಾಗೂ ಅಲ್ಲ” ಅಲೊಂಕ ಹೇಳಿತು . “ ಅಲ್ಲ, ಹಾಗೂ ಅಲ್ಲ ! ” 
“ ಹಾಗಾದರೆ ಹ್ಯಾಗೆ ಅಂತ ತೋರಿಸಿಕೊಡು. ನನಗಂತೂ ಗೊತ್ತಿಲ್ಲ ” ತೆಲೇಸಿಕ್ ಹೇಳಿದ . 

ಅದು ತೋರಿಸಬೇಕು ಅಂತ ಮೊರಗುದ್ದಲಿಯ ಮೇಲೆ ಕುಳಿತಿತು . ಅದು ಕುಳಿತಿತೋ 
ಇಲ್ಲವೋ ತಕ್ಷಣವೇ ತೆಲೇಸಿಕ್ ಅದನ್ನು ಒಲೆಯೊಳಕ್ಕೆ ಹಾಕಿ ಅದರ ಬಾಗಿಲು ಮುಚ್ಚಿದ. 
ಆಮೇಲೆ ತಾನೇ ಆ ಹಾವಿನ ಮನೆಯಿಂದ ಹೊರಬಂದು ಒಂದು ಎತ್ತರದ ಮೇಫ್ಲ್ ಮರ 
ಹತ್ತಿ ಕುಳಿತ. 

ಸ್ವಲ್ಪ ಹೊತ್ತಾದ ಮೇಲೆ ಹಾವು ತನ್ನ ಅತಿಥಿಗಳೊಂದಿಗೆ ಬಂದಿತು. 
“ ಮುದ್ದುಮರಿ ಅಲ್ಲೊಂಕ ! ಬಾಗಿಲು ತೆರೆ ! ” 
ಒಳಗಿನಿಂದ ಮಾತೇ ಇಲ್ಲ. 
ಹಾವು ಮತ್ತೆ ಹೇಳಿತು: | 
“ ಮುದ್ದು ಮರಿ ಅಲ್ಲೊಂಕ ! ಬಾಗಿಲು ತೆರೆ ! ” 
ಉತ್ತರವಿಲ್ಲ . 
“ ಹಾಳಾದ ಅಲ್ಲೊಂಕ ! ಎಲ್ಲಿ ಹೋಯಿತೋ ಏನೋ ! ” 

ಹಾವು ತಾನೇ ತಳ್ಳಿ ಬಾಗಿಲು ತೆರೆಯಿತು. ಅತಿಥಿಗಳನ್ನು ಒಳಕ್ಕೆ ಕರೆಯಿತು. ಎಲ್ಲವೂ 
ಉತ್ಸಾಹದಿಂದ ಊಟದ ಮೇಜಿನ ಸುತ್ತ ಕುಳಿತವು. ಹಾವು ಒಲೆಯ ಬಾಗಿಲು ತೆರೆದು ಚೆನ್ನಾಗಿ 
ಬೆಂದು ಗರಿಗರಿಯಾಗಿದ್ದ ಭಕ್ಷವನ್ನು ಹೊರ ತೆಗೆದು ಎಲ್ಲರಿಗೂ ಬಡಿಸಿತು. ಎಲ್ಲವೂ ಬಾಯಿ 
ಚಪ್ಪರಿಸಿಕೊಂಡು ಹೊಟ್ಟೆ ತುಂಬ ತಿಂದವು. ಅಂದುಕೊಂಡವು ತಾವು ತೆಲೇಸಿಕ್‌ನನ್ನು ತಿಂದುದು , 
ಅಂತ. 

ಮನಸ್ಸಿಗೆ ತೃಪ್ತಿಯಾಗುವಷ್ಟು ತಿಂದ ಮೇಲೆ ಅವು ಮನೆಯಿಂದ ಹೊರಗೆ ಬಂದು ಹುಲ್ಲಿನ 
ಮೇಲೆ ಮೈ ಚಾಚಿದವು. 

“ ಹಾಯಾಗಿ ಹುಲ್ಲಿನ ಮೇಲೆ ಸ್ವಲ್ಪ ಹೊರಳಾಡೋಣ, ತೆಲೇಸಿಕ್‌ನನ್ನು ತಿಂದು ಮುಗಿಸಿ 
ದಾಯಿತಲ್ಲ ” ಎಂದವು ಹೇಳಿಕೊಂಡವು. 

ಮರದ ಮೇಲಿನಿಂದ ತೆಲೇಸಿಕ್ ಹೇಳಿದ: 
“ ಹೌದು, ಹಾಯಾಗಿ ಹೊರಳಾಡಿ, ಅಲ್ಲೊಂಕಳನ್ನು ತಿಂದು ಮುಗಿಸಿದ್ದಾಯಿತಲ್ಲ ! ” 
ಅವು ಕೇಳಿಸಿಕೊಳ್ಳುತ್ತವೆ - ಏನಿದು ? ಅವು ಮತ್ತೆ ಹೇಳಿಕೊಳ್ಳುತ್ತವೆ: 

“ ಹಾಯಾಗಿ ಹುಲ್ಲಿನ ಮೇಲೆ ಸ್ವಲ್ಪ ಹೊರಳಾಡೋಣ. ತೆಲೇಸಿಕ್‌ನನ್ನು ತಿಂದು ಮುಗಿಸಿ 
ದಾಯಿತಲ್ಲ. ” 

ಅವನು ಮತ್ತೆ ಹೇಳಿದ : 
“ ಹೌದು, ಹಾಯಾಗಿ ಹೊರಳಾಡಿ, ಅಲ್ಲೊಂಕಳನ್ನು ತಿಂದು ಮುಗಿಸಿದ್ದಾಯಿತಲ್ಲ ! ” 
ಅವು ಬೆರಗಾಗಿ ಯೋಚಿಸಿದವು - ಯಾರು ಹೀಗೆ ಹೇಳುತ್ತಿರೋದು? 

ಸುತ್ತಮುತ್ತ ಹುಡುಕ ತೊಡಗಿದವು,ನೋಡತೊಡಗಿದವು.ಕೊನೆಗೆ ಮರದ ಮೇಲೆ ತೆಲೇಸಿಕ್ 
ನನ್ನು ಕಂಡವು. ಅವು ಮರದ ಬಳಿಗೆ ಹೋಗಿ ಅದನ್ನು ಕೆಡವಲೋಸುಗ ಬುಡದ ಬಳಿ ಜಗಿಯ 
ತೊಡಗಿದವು. ತುಂಬ ಹೊತ್ತು ಜಗಿದವು. ಆದರೆ ಮರ ಮಿಸುಕಲಿಲ್ಲ. ಅವುಗಳ ಹಲ್ಲುಗಳೇ 
ಮುರಿದವು. ಅವು ಕಮಾರನ ಬಳಿಗೆ ಓಡಿದವು. ಹೇಳಿದವು: 

- “ಕಮ್ಮಾರ, ಕಮ್ಮಾರ ! ಆ ಮೇಪಲ್ ಮರವನ್ನು ಜಗಿದು ಬೀಳಿಸುವಷ್ಟು ಗಟ್ಟಿಯಾಗು 
ವಂತೆ ನಮ್ಮ ಹಲ್ಲುಗಳನ್ನು ಮಾಡು ! ” 

ಕಮ್ಮಾರ ಅವಕ್ಕೆ ಗಟ್ಟಿಯಾದ ಲೋಹದ ಹಲ್ಲುಗಳನ್ನು ಮಾಡಿ ಕೊಟ್ಟ. ಅವು ಮತ್ತೆ 
ಮರವನ್ನು ಜಗಿಯ ತೊಡಗಿದವು... 

ಅವು ಇನ್ನೇನು ಜಗಿದು ಮರವನ್ನು ಬೀಳಿಸಲಿದ್ದವು ಅಷ್ಟು ಹೊತ್ತಿಗೆ ಅಲ್ಲಿಗೆ ಏನು ಬಂದವು 
ಅಂತೀರ - ಬಾತುಕೋಳಿಗಳ ಒಂದು ಹಿಂಡು ! 

ತೆಲೇಸಿಕ್ ಅವುಗಳನ್ನು ಕಂಡು ಕೇಳಿದ: 


“ ಬಾತುಕೋಳಿಗಳೇ , ಬಾತುಕೋಳಿಗಳೇ ! 
ಮುದ್ದು ಬಾತುಕೋಳಿಗಳೇ ! 
ಒಯ್ದಿರಿ ನನ್ನನೂ ನಿಮ್ಮೊಂದಿಗೆ ! 
ಕಾದಿಹರು ನನಗಾಗಿ ತಾಯಿತಂದೆ. 
ಒಯ್ಯರಿ ನನ್ನನೂ ಮುಗಿಲ ಮೇಲೆ, 

ಬಿಡಿಸಿರಿ ನನ್ನನೀ ಭವಣೆಯಿಂದ ! ” 
ಅವುಗಳು ಹೇಳಿದವು: 

“ ನಾವು ಮುಂದೆ ಹಾರಿ ಹೋಗುತ್ತಿರುವವರು . ಮಧ್ಯದಲ್ಲಿ ಹಾರಿ ಬರುತ್ತಿರುವವರನ್ನು 
ಕೇಳು.” 

ಹಾವುಗಳು ಜಗಿಯುತ್ತಿವೆ, ಜಗಿಯುತ್ತಿವೆ... ಈಗ ಇನ್ನೊಂದು ಬಾತುಕೋಳಿಗಳ ಹಿಂಡು 
ಹಾರಿ ಬರುತ್ತದೆ. 
ತೆಲೇಸಿಕ್ ಅವನ್ನೂ ಕೇಳಿಕೊಳ್ಳುತ್ತಾನೆ: 

“ ಬಾತುಕೋಳಿಗಳೇ , ಬಾತುಕೋಳಿಗಳೇ ! 
ಮುದ್ದು ಬಾತುಕೋಳಿಗಳೇ ! 
ಒಯ್ದಿರಿ ನನ್ನನೂ ನಿಮ್ಮೊಂದಿಗೆ ! 
ಕಾದಿಹರು ನನಗಾಗಿ ತಾಯಿತಂದೆ. 
ಒಯ್ದಿರಿ ನನ್ನನೂ ಮುಗಿಲ ಮೇಲೆ, 
ಬಿಡಿಸಿರಿ ನನ್ನನೀ ಭವಣೆಯಿಂದ ! ” 


ಅವು ಉತ್ತರಿಸುತ್ತವೆ: 

“ನಾವು ಮಧ್ಯದಲ್ಲಿದ್ದೇವೆ! ನಮಗೂ ಹಿಂದೆ ಕೊನೆಯಲ್ಲಿ ಹಾರಿ ಬರುತ್ತಿರುವವರನ್ನು 
ಕೇಳು ! ” 

ಹಾಗೆಂದು ಅವೂ ಹಾರಿ ಹೋದವು. 
ಮರ ಆಗಲೇ ತೂಗಾಡುತ್ತಿದೆ. ಹಾವುಗಳು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಜಗಿಯ 
ತೊಡಗುತ್ತವೆ... ವಿಶ್ರಾಂತಿ ತೆಗೆದುಕೊಳ್ಳುತ್ತವೆ, ಮತ್ತೆ ಜಗಿಯುತ್ತವೆ... ಇನ್ನಷ್ಟು ಬಾತುಕೋಳಿ 
ಗಳು ಹಾರಿ ಬರುತ್ತವೆ. 

ತೆಲೇಸಿಕ್ ಅವನ್ನೂ ಕೇಳಿಕೊಳ್ಳುತ್ತಾನೆ: 


“ ಬಾತುಕೋಳಿಗಳೇ , ಬಾತುಕೋಳಿಗಳೇ ! 
ಮುದ್ದು ಬಾತುಕೋಳಿಗಳೇ ! 
ಒಯ್ದಿರಿ ನನ್ನನೂ ನಿಮ್ಮೊಂದಿಗೆ ! 
ಕಾದಿಹರು ನನಗಾಗಿ ತಾಯಿತಂದೆ . 
ಒಯ್ದಿರಿ ನನ್ನನೂ ಮುಗಿಲ ಮೇಲೆ, 
ಬಿಡಿಸಿರಿ ನನ್ನನೀ ಭವಣೆಯಿಂದ ! ” 


ಅವು ಹೇಳುತ್ತವೆ: 
“ನಮಗೂ ಹಿಂದೆ ಕೊನೆಯಲ್ಲಿ ಹಾರಿ ಬರುತ್ತಿರುವ ಬಾತುಕೋಳಿಯನ್ನು ಕೇಳು ! ” 
ಹಾಗೆಂದು ಅವೂ ಹಾರಿ ಹೋದವು. 

ತೆಲೇಸಿಕ್ ಮರದ ಮೇಲೇ ದುಃಖದಿಂದ ಕುಳಿತಿದ್ದ . ಮರ ಇನ್ನೇನು ಮುರಿದು ಬೀಳು 
ವುದು , ಅದರ ಜೊತೆಗೆ ತಾನೂ ಬಿದ್ದು ಸಾಯಲಿರುವನು ಎಂದು ಅವನು ಖಚಿತವಾಗಿ ತಿಳಿದಿದ್ದ . 

ಆಗ ಇದಕ್ಕಿದಂತೆ ಏನು ಬಂತು ಅಂತೀರಾ ? - ಇನ್ನೊಂದು ಬಾತುಕೋಳಿ, ಒಂದೇ ಒಂದು . 
ಹಿಂದೆ ಬಿದ್ದಿತ್ತು . ತುಂಬ ಬಳಲಿತ್ತು . ಕಷ್ಟಪಟ್ಟುಕೊಂಡು ಹಾರುತ್ತಿತ್ತು . 

ತೆಲೇಸಿಕ್ ಅದನ್ನು ಕಂಡು ಕೇಳಿದ : 


“ ಬಾತುಕೋಳಿ, ಬಾತುಕೋಳಿ! 
ಮುದ್ದು ಬಾತುಕೋಳಿ! 
ಒಳ್ಳೆಯವನಾಗಿ ನೀ ಕಂಡುಬರುವೆ, 
ಒಮ್ಮೆ ನೀ ನನ್ನನೂ ನಿನ್ನೊಂದಿಗೆ ! 
ಕಾದಿಹರು ನನಗಾಗಿ ತಾಯಿತಂದೆ, 
ಎತ್ತಿಕೊ ನನ್ನನು ಬೇಗ ಇಲ್ಲಿಂದ, 
ಇಲ್ಲದಿರೆ ಆಗುವೆನು ಹಾವುಗಳಿಗಾಹಾರ ! 


ಬಾತುಕೋಳಿಗೆ ಮನ ಕರಗಿತು . “ಕೂತುಕೊ ” ಎಂದದು ಹೇಳಿತು . 

ತನ್ನ ಬೆನ್ನ ಮೇಲೆ ಹತ್ತಿ ಕೂರಲು ಅವನಿಗೆ ಸಹಾಯಮಾಡಿ ಅದು ಮುಂದಕ್ಕೆ ಹಾರಿ ಹೊರ 
ಟಿತು . ಆದರೆ ಎಷ್ಟು ಬಳಲಿದ್ದಿತೆಂದರೆ ಮೇಲೆ ಹಾರಿ ಹೋಗಲಾಗದೆ ಕ್ಷಣಕ್ಷಣಕ್ಕೂ ಕೆಳಗಿಳಿಯು 
ತಿತ್ತು . ಅದನ್ನು ಕಂಡು ಹಾವುಗಳು ಅದನ್ನು ಹಿಂಬಾಲಿಸಿ ಹೊರಟವು. ಅಕೋ , ಅಕೋ , 
ಇನ್ನೇನು ಸಿಕ್ಕಿಬಿಟ್ಟಿತು, ಹಾವುಗಳು ಅದನ್ನು ಹಿಡಿದು ಬಿಟ್ಟವು, ಅನ್ನುವ ಹೊತ್ತಿಗೆ 
ಬಾತುಕೋಳಿ ಮತ್ತೆ ಮೇಲೇರಿತು . ಹಿಡಿಯಲಾಗದೆ ಹಾವುಗಳು ಹಿಂದಿರುಗಿದವು. 

ಹೇಗೋ ಅಂತೂ ಹಾರುತ್ತ ಬಾತುಕೋಳಿ ತೆಲೇಸಿಕ್‌ನನ್ನು ಮನೆ ಮುಟ್ಟಿಸಿತು, ಅವನನ್ನು 
ಮನೆಯ ಮುಂದೆ ಇಳಿಸಿ ತಾನು ಅಂಗಳಕ್ಕೆ ಹೋಗಿ ಸುಸ್ತಾಗಿ ಬಿದ್ದುಕೊಂಡಿತು . 

ತೆಲೇಸಿಕ್‌ ಕಿಟಕಿಯ ಕೆಳಗೆ ಕುಳಿತು ಮನೆಯ ಒಳಗೆ ಏನು ನಡೆಯುತ್ತಿದೆ ಅನ್ನುವುದನ್ನು 
ಕೇಳಿಸಿಕೊಳ್ಳುತ್ತಾನೆ. ಅದೀಗ ಮುದುಕಿ ಸೀದೋಸೆ ಬೇಯಿಸುತ್ತಿದ್ದಳು , ಕೆಲವನ್ನು ಒಲೆಯಿಂದ 
ಹೊರ ತೆಗೆಯುತ್ತ ಮುದುಕನಿಗೆ ಹೇಳಿದಳು : 

“ ಮುದುಕಪ್ಪ , ಈ ಸೀದೋಸೆ ನಿನಗೆ , ಈ ಇನ್ನೊಂದು ನನಗೆ ! ” 
ತೆಲೇಸಿಕ್ ಕಿಟಕಿಯ ಕೆಳಗಿನಿಂದ ಹೇಳುತ್ತಾನೆ: 
“ ನನಗೆ ? ” 
ಮುದುಕಿ ಮತ್ತಷ್ಟು ಸೀದೋಸೆಯನ್ನು ಹೊರ ತೆಗೆದು ಹೇಳುತ್ತಾಳೆ: 
“ ಮುದುಕಪ್ಪ , ಇದು ನಿನಗೆ . ಮತ್ತೆ ಇದು ನನಗೆ ! ” 
ತೆಲೇಸಿಕ್ ಮತ್ತೆ ಹೇಳುತ್ತಾನೆ: 
“ ನನಗೆ ? ” 
ಅವರು ಕಿವಿ ಆನಿಸಿ ಕೇಳಿದರು . ಯಾರದು ಹೀಗೆ ಹೇಳುತ್ತಿರುವುದು ? 
ಮುದುಕಿ ಹೇಳಿದಳು : 
“ ನಿನಗೆ ಕೇಳಿಸಿತೆ, ಮುದುಕಪ್ಪ ? ಯಾರೋ ಮಾತನಾಡುತ್ತಿದಾರೆ. ” 
ಆದರೆ ಮುದುಕ ಉತ್ತರಿಸಿದ: 
“ ನಿನಗೆಲ್ಲೋ ಭ್ರಾಂತಿ.” 
ಮುದುಕಿ ಇನ್ನಷ್ಟು ಸೀದೋಸೆಗಳನ್ನು ಒಲೆಯಿಂದ ಹೊರ ತೆಗೆದು ಹೇಳಿದಳು : 
“ ಇದು ನಿನಗೆ, ಇದು ನನಗೆ ! ” 
ತೆಲೇಸಿಕ್ ಮತ್ತೆ ಹೇಳಿದ: 
“ ನನಗೆ ? ” 

“ನೀನು ಏನೇ ಹೇಳು, ಯಾರೋ ಮಾತನಾಡುತ್ತಿದಾರೆ ” ಅಂತ ಮುದುಕಿ ಕಿಟಕಿಯ ಬಳಿ 
ಹೋಗಿ ಬಾಗಿ ನೋಡಿದಳು . ಅಲ್ಲಿ ಕೂತಿದಾನೆ ತೆಲೇಸಿಕ್ ಬೆಂಚಿನ ಮೇಲೆ! 

ಮುದುಕ ಮುದುಕಿ ಹೊರಕ್ಕೆ ಓಡಿ ಬಂದರು . ತೆಲೇಸಿಕ್‌ನನ್ನು ಎತ್ತಿಕೊಂಡು ಒಳಕ್ಕೆ 
ಹೋದರು . ಅವರಿಗೆ ಆನಂದವೋ ಆನಂದ!.. 

ಬಾತುಕೋಳಿ ಅಂಗಳದಲ್ಲೇ ಅಡ್ಡಾಡುತ್ತಿತ್ತು . ಅದು ಅಜ್ಜಿಯ ಕಣ್ಣಿಗೆ ಬಿದ್ದಿತು. ಅವಳು 
ಹೇಳಿದಳು : 

“ ಅಂಗಳದಲ್ಲಿ ಒಂದು ಬಾತುಕೋಳಿ ಅಡ್ಡಾಡುತ್ತಿದೆ. ಹಿಡಿದುಕೊಂಡು ಬಂದು ನಿನಗೆ ಬೇಯಿಸಿ 
ಹಾಕುತ್ತೀನಿ. ” 
ತೆಲೇಸಿಕ್ ಹೇಳುತ್ತಾನೆ: 

“ಬೇಡ, ಅಮ್ಮ , ಬೇಡ! ಅದನ್ನು ಹಿಡಿಯಲೂ ಬೇಡ, ಬೇಯಿಸಲೂ ಬೇಡ ! ಅದಿಲ್ಲದಿದ್ದಿ 
ದ್ದರೆ ನಾನೂ ಇಲ್ಲಿ ನಿಮ್ಮ ಬಳಿ ಇರುತ್ತಿರಲಿಲ್ಲ.” 

ಅವರು ಬಾತುಕೋಳಿಗೆ ಅನ್ನಾಹಾರ ಕೊಟ್ಟರು, ಕುಡಿಯಲು ನೀರು ಕೊಟ್ಟರು. ಅದು 
ಆಮೇಲೆ ತಿನ್ನಲೆಂದು ಅದರ ರೆಕ್ಕೆಗಳ ಕೆಳಗೆ ಒಂದಿಷ್ಟು ಕಾಳು ಚೆಲ್ಲಿದರು. ಅವನ್ನೆಲ್ಲ ತಿಂದು ಬಾತು 
ಕೋಳಿಗೆ ಶಕ್ತಿ ಬಂದಿತು . ಅದು ಹಾರಿ ಹೋಯಿತು. 

ಹೀಗೆ ನೋಡಿ, ನಿಮಗೆ ಲಭಿಸಿತು ಒಂದು ಕಥಾ ಪ್ರಸಂಗ , ಮತ್ತೆ ನನಗೆ – ರೊಟ್ಟಿ ಜೇನು 
ಹೊಟ್ಟೆತುಂಬ ! 

ಸಿಂಹದ ಆಡಳಿತ

ಒಂದು ದಿನ ಕಾಡಿನ ಮೃಗಗಳೂ ಹೊಲದ ಪ್ರಾಣಿಗಳೂ ಎಲ್ಲ ಸಭೆ ಸೇರಿ ತಮ್ಮ ಮೇಲೆ 
ಆಡಳಿತ ನಡೆಸಲು ಯೋಗ್ಯನಾದಂಥ ಒಬ್ಬ ದೊರೆಯನ್ನು , ಯಾರನ್ನು ಕಂಡರೆ ಎಲ್ಲರೂ ಹೆದರು 
ವರೋ ವಿಧೇಯರಾಗಿ ವರ್ತಿಸುವರೋ ಅಂತಹ ದೊರೆಯನ್ನು , ಆಯ್ಕೆ ಮಾಡಿಕೊಳ್ಳಲು 
ನಿರ್ಧರಿಸಿದವು. ಆದರೆ ಅಂದಿನ ಸಭೆಗೆ ಅತ್ಯಂತ ಭಾರಿಯಾದ ಅತ್ಯಂತ ಬಲಶಾಲಿಯಾದ ಪ್ರಾಣಿ 
ಗಳು ಬಂದಿರಲಿಲ್ಲ . ಹಾಗಾಗಿ ಆ ಸಭೆಯಲ್ಲಿ ಪ್ರಶ್ನೆ ಇತ್ಯರ್ಥವಾಗಲಿಲ್ಲ. ಕೆಲವು ದಿನಗಳನಂತರ 
ಇನ್ನೊಂದು ಸಭೆಯನ್ನು ಕರೆಯಬೇಕು, ಅದರಲ್ಲಿ ಎಲ್ಲ ಪ್ರಾಣಿಗಳೂ , ಚಿಕ್ಕವು ದೊಡ್ಡವು ಎಲ್ಲವೂ , 
ಹಾಜರಿರಬೇಕು, ಈ ಪ್ರಶ್ನೆಯನ್ನು ಆಖೈರಾಗಿ ಇತ್ಯರ್ಥಪಡಿಸಲೇ ಬೇಕು, ಎಂದು ನಿರ್ಧರಿಸ 
ಲಾಯಿತು . 

ಗೊತ್ತು ಮಾಡಿದ ದಿನ ಬಂದಿತು . ಎಲ್ಲ ಪ್ರಾಣಿಗಳೂ ಬಂದಿದ್ದವು - ಆನೆ, ಸಿಂಹ, ಹುಲಿ, 
ಹಿಪ್ಪೋ , ರೈನೋಸರೆಸ್‌ , ಕರಡಿ , ತೋಳ, ಜಿಂಕೆ, ಒಂಟೆ, ನರಿ , ಮೊಲ, ಕಾಡುಹಂದಿ, ಜೀಬ್ರ , 
ಮೇಕೆ, ಕುರಿ, ಕುದುರೆ , ಹಸು , ನಾಯಿ , ಬೆಕ್ಕು , ಪೋಲ್‌ಕ್ಯಾಟ್ , ಗಾಫರ್ , ಇಲಿ, ಸುಂಡಿಲಿ , 
ಕತ್ತೆ - ಎಲ್ಲವೂ ಬಂದಿದ್ದವು. 

ಜಿಂಕೆಯೇ ಮೊದಲು ಮಾತನಾಡಿದುದು : 
“ ಕಾಡಿನ ಒಡೆಯರೇ ! ದಯವಿಟ್ಟು ನಿಮಗೆ ಒಂದು ಅರಿಕೆ ಮಾಡಿಕೊಳ್ಳಲು ಅವಕಾಶ 
ನೀಡಿ. ನೀವೆಲ್ಲ ದೊಡ್ಡವರು , ಬಲಶಾಲಿಗಳು . ನಾವಾದರೋ ಚಿಕ್ಕವರು , ತ್ರಾಣವಿಲ್ಲದವರು . 
ನಿಮ್ಮನ್ನು ಇಲ್ಲಿಗೆ ಬನ್ನಿ ಅಂತ ಕರೆದಿದ್ದಕ್ಕೆ ಕೋಪ ಮಾಡಿಕೊಳ್ಳಬೇಡಿ. ಈ ಸಭೆ ಸೇರಿರುವುದರ 
ಉದ್ದೇಶ ನಿಮ್ಮಲ್ಲಿ ಒಬ್ಬರನ್ನು ದೊರೆಯನ್ನಾಗಿ ಆರಿಸಬೇಕು ಅನ್ನುವುದು . ನಮ್ಮ ಕಾಡಿಗೆ ಒಬ್ಬ 
ದೊರೆ ಇರುವುದು ತುಂಬ ಅವಶ್ಯವಾಗಿದೆ. ಅವನು ನ್ಯಾಯವಂತನಾಗಿರಬೇಕು, ಎಲ್ಲರನ್ನೂ 
ಸಮನಾಗಿ ನೋಡಿಕೊಳ್ಳಬೇಕು. ಎಲ್ಲಕ್ಕೂ ಹೆಚ್ಚಾಗಿ ಕಾಡಿನಲ್ಲಿ ಶಾಂತಿ ಶಿಸ್ತು ಇರುವಂತೆ ನೋಡಿ 
ಕೊಳ್ಳಬೇಕು.” 

ಅನಂತರ ಆನೆ ಮಾತನಾಡಿತು : 

“ನೀನು ಹೇಳಿದ್ದು ಸರಿ. ನಮಗೀಗ ಒಬ್ಬ ದೊರೆ ಬೇಕಾಗಿದ್ದಾನೆ. ಕಳ್ಳತನ, ದರೋಡೆ, 
ದುಷ್ಕೃತ್ಯಗಳು ಹೆಚ್ಚಿಬಿಟ್ಟಿವೆ. ಅವನ್ನೆಲ್ಲ ಇಲ್ಲದಂತೆ ಮಾಡಿ ತಪ್ಪಿತಸ್ಥರಿಗೆ ಸರಿಯಾಗಿ ಶಿಕ್ಷೆ ನೀಡುವ 
ದೊರೆ ಬೇಕು. ನೀವೆಲ್ಲ ಕಲೆತು ಯೋಚನೆ ಮಾಡಿ ಬುದ್ದಿವಂತಿಕೆಯಿಂದ ಸರಿಯಾದ ದೊರೆಯನ್ನು 
ಆಯ್ಕೆ ಮಾಡಿ. ನಾನೇನೋ ನಿಮ್ಮಲೆಲ್ಲ ತುಂಬ ಭಾರಿ ಗಾತ್ರದವ, ತುಂಬ ಬಲಶಾಲಿ. ಸಹಜ 
ವಾಗಿಯೇ ನಾನು ದೊರೆಯಾಗಲು ಸರಿಯಾದವ. ಆದರೆ ಅದನ್ನು ತೀರ್ಮಾನಿಸುವವರು 
ನೀವೇ . ನೀವು ಏನು ನಿರ್ಧರಿಸಿದರೆ ನಾನು ಅದಕ್ಕೆ ಬದ್ಧ. ” 
- ಆನೆ ಇನ್ನೂ ಮಾತು ಮುಗಿಸಿರಲೇ ಇಲ್ಲ ಆಗಲೇ ಸಿಂಹ ಮುಂದೆ ನುಗ್ಗಿ ಬಂದು 
ಹೇಳಿತು : 
- “ ಆನೆಯನ್ನು ದೊರೆಯನ್ನಾಗಿ ಮಾಡುವುದೇ ? ಹುಚ್ಚು ಮಾತು ! ಅದು ಎಂತಹ ಒಡ್ಡ 
ಪ್ರಾಣಿ. ನಡಿಗೆಯ ನಿಧಾನ ನನ್ನನ್ನು ನೋಡಿ. ನಾನು ಎಷ್ಟು ಜೋರಾಗಿ ಓಡಬಲ್ಲೆ. ನಾನು 
ಬಲಶಾಲಿಯೂ ಆಗಿದೀನಿ. ನೋಡೋಕೂ ಚೆನ್ನಾಗಿದೀನಿ. ಎಲ್ಲರೂ ನನ್ನ ಮಾತು ಕೇಳುತ್ತಾರೆ. 
ದೊರೆಯಾಗಲು ನನಗಿಂತ ಹೆಚ್ಚು ಉತ್ತಮರು ಇನ್ನಾರು ಇರಲು ಸಾಧ್ಯ ? ” 

ಅದು ಹೀಗೆಯೇ ಮಾತು ಮುಂದುವರಿಸುತ್ತಲೇ ಇತ್ತು , ಆಗ ಇದ್ದಕ್ಕಿದ್ದಂತೆ ನರಿ ಪ್ರಾಣಿ 
ಗಳ ಮಧ್ಯದಿಂದ ಮುಂದಕ್ಕೆ ನೂಕಿಕೊಂಡು ಬಂದು ಒಂದು ಮರದ ಮೋಟಿನ ಮೇಲೆ ನೆಗೆದು 
ನಿಂತು ಹೇಳಿತು : 

“ ನಮಗೆಲ್ಲ ಗೊತ್ತಿದೆ ನೀವಿಬ್ಬರೂ ದೊರೆಯಾಗಬೇಕೂಂತ ಬಯಸುತ್ತಿದ್ದೀರ ಅಂತ. 
ನೀವಿಬ್ಬರೂ ಅದಕ್ಕೆ ಯೋಗ್ಯರೂ ಆಗಿದ್ದೀರ. ಆದರೆ ನಿಮ್ಮ ಮಧ್ಯೆ ಜಗಳ ಆಗುವುದು ಒಳ್ಳೆಯ 
ದಲ್ಲ. ಆದ್ದರಿಂದ ನಾವು ನಿಮ್ಮಿಂದ ಸ್ವಲ್ಪ ದೂರ ಹೋಗಿ, ನಿಮ್ಮ ಗೈರುಹಾಜರಿಯಲ್ಲಿ ತೀರ್ಮಾನ 
ಮಾಡಿದರೆ ಒಳ್ಳೆಯದು ಅಂತ ನನಗೆ ಅನಿಸುತ್ತೆ . ” 


ನರಿಯ ಸಲಹೆಯನ್ನು ಎಲ್ಲರೂ ಹೊಗಳಿ ಸ್ವಾಗತಿಸಿದರು . ಅದು ಹೇಳಿದಂತೆಯೇ ಮಾಡ 
ಬೇಕೆಂದು ನಿರ್ಧರಿಸಲಾಯಿತು. ಆನೆಯ ಸಿಂಹವೂ ಇದ್ದ ಕಡೆಯೇ ಇದ್ದವು. ಉಳಿದ ಪ್ರಾಣಿ 
ಗಳೆಲ್ಲ ಕಾಡಿನ ಇನ್ನೊಂದು ಭಾಗಕ್ಕೆ ಹೋದವು. 

ಈಗ ಭಾರಿ ಕೋಲಾಹಲವೇ ಉಂಟಾಯಿತು. ದುರ್ಬಲವಾದ ಆತ್ಮರಕ್ಷಣೆ ಇಲ್ಲದ ಪ್ರಾಣಿ 
ಗಳು ಆನೆಯೇ ಮೃಗಗಳ ರಾಜನಾಗಬೇಕೆಂದು ಬಯಸಿದಲ್ಲಿ ಬಲಶಾಲಿ ಪ್ರಾಣಿಗಳು ಸಿಂಹವೇ 
ಹೆಚ್ಚು ಉತ್ತಮವಾದ ಆಯ್ಕೆ ಎಂದು ಒತ್ತಾಯಿಸ ತೊಡಗಿದವು. 
- ಇದಕ್ಕೆ ಮುಂಚೆ ಸಿಂಹ ನರಿಯನ್ನು ಪಕ್ಕಕ್ಕೆ ಕರೆದು ಎಚ್ಚರಿಕೆ ನೀಡಿತ್ತು . ಸಾರ್ವಜನಿಕಾಭಿ 
ಪ್ರಾಯವನ್ನು ತನ್ನ ಕಡೆಗೆ ಇರುವಂತೆ ಮಾಡದೆ ಹೋದರೆ ಅದಕ್ಕಾಗಿ ತಕ್ಕ ಶಾಸ್ತಿ ಮಾಡುವು 
ದಾಗಿ ಅದು ನರಿಯನ್ನು ಬೆದರಿಸಿದ್ದಿತು . ಹಾಗಾಗಿ ಸಿಂಹದ ಕೋಪಕ್ಕೆ ತುತ್ತಾಗಲಿಚ್ಚಿಸದೆ ನರಿ 
ಬೇರಾವ ಪ್ರಾಣಿಗಳಿಗಿಂತ ಹೆಚ್ಚಾಗಿ ಸಿಂಹದ ಪರವಾಗಿ ಪ್ರಚಾರ ನಡೆಸಿತು . ಎಲ್ಲರ ಗಮನವನ್ನೂ 
ತನ್ನ ಕಡೆಗೆ ಆಕರ್ಷಿಸಲೋಸುಗ ಅದು ಮತ್ತೆಮತ್ತೆ ಮರದ ಮೊಟೊಂದರ ಮೇಲೆ ನೆಗೆದು 
ನಿಂತು ಹೇಳುತ್ತಿತ್ತು : 
- “ ನಮ್ಮ ಮಧ್ಯೆ ಆನೆಗೇ ಮತ ನೀಡಬೇಕು ಅನ್ನುವವರೂ ಕೆಲವರಿದ್ದಾರೆ. ಆದರೆ ಅವರ 
ವಿಚಾರ ತಪ್ಪು , ನಾನು ಖಾತರಿಯಾಗಿ ಹೇಳುತ್ತೇನೆ. ನಿಜ, ಆನೆ ಕುಶಲಿ, ಬಲಶಾಲಿ, ತಾನೂ ಮಾಂಸ 
ತಿನ್ನುವುದಿಲ್ಲ , ಇತರರಿಗೂ ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲಲು ಬಿಡುವುದಿಲ್ಲ . ಆದರೆ ಅದೊಂದು 
ಒಡ್ಡ ಪ್ರಾಣಿ. ಅದರ ಓಟ ನಿಧಾನ. ತಮ್ಮನ್ನು ಹಿಡಿಯಲು ಆನೆಗೆ ಎಂದೂ ಆಗದು ಎಂದು 
ತಿಳಿದ ನಮ್ಮ ಶತ್ರುಗಳು ಆನೆಗೆ ಎಷ್ಟು ಮಾತ್ರವೂ ಹೆದರುವುದಿಲ್ಲ . ಬದಲು ಇನ್ನೂ ಹೆಚ್ಚು 
ದುಷ್ಟ ಕೃತ್ಯಗಳನ್ನು ಮಾಡ ತೊಡಗುತ್ತವೆ. ಆದ್ದರಿಂದ ಎಲ್ಲರೂ ಸಿಂಹಕ್ಕೆ ಮತ ನೀಡಿ ! ಸಿಂಹ 
ಸೊಗಸಾದ ಮೃಗರಾಜನಾಗುವುದು . ಏಕೆಂದರೆ ಅದೂ ಆನೆಯಷ್ಟೇ ಕುಶಲಿ ಮತ್ತು 
ಹೆಚ್ಚು ಕಮ್ಮಿ ಅಷ್ಟೇ ಬಲಶಾಲಿ. ಆದರೆ ಆನೆಯಂತಲ್ಲದೆ ಇದು ಹೆಚ್ಚು ಬೇಗ ಓಡುತ್ತೆ . 
ಎಲ್ಲರೂ ಇದಕ್ಕೆ ಹೆದರುತ್ತಾರೆ. ದೆವ್ವವೂ ಇದರ ಕೈಯಿಂದ ತಪ್ಪಿಸಿಕೊಂಡು ಹೋಗ 
ಲಾರದು. ” 

“ನೀನು ಹೇಳೋದೇನೋ ಸರಿಯೆ , ನರಿಯಣ್ಣ ” ಎಂದು ಜಿಂಕೆ ಧೈರ್ಯ ಮಾಡಿ ಹೇಳ 
ತೊಡಗಿತು . ಆದರೆ ಯಾರಿಗೂ ದೂರುವುದಕ್ಕೆ ಅವಕಾಶ ಮಾಡಿ ಕೊಡಬಾರದು , 
ನೋಡು. ಆದ್ದರಿಂದ ನಾನು ಸಲಹೆ ಮಾಡೋದೇನೂಂದರೆ, ಚೀಟಿ ಎತ್ತಿ ತೀರ್ಮಾನ 
ಮಾಡೋಣ.” 

“ ಒಳ್ಳೆಯ ವಿಚಾರ ! ” ಎಲ್ಲರೂ ಒಪ್ಪಿದರು . ಆದರೆ ಹೇಗೆ ಇದನ್ನು ಮಾಡೋದು? ” 
“ ಅದೇನು ತುಂಬ ಸರಳ ” ಹೇಳಿತು ಜಿಂಕೆ, “ ಅಲ್ಲಿ ಒಂದು ಮರದ ಪೊಟರೆ ಕಾಣಿಸೋ 
ನಿಮಗೆ ? ಯಾರು ಸಿಂಹದ ಪರವೋ ಅವರು ಅದರೊಳಕ್ಕೆ ಒಂದು ಕರಟಕಾಯಿ ಹಾಕಲಿ. ಯಾರು 
ಆನೆಯ ಪರವೋ ಅವರು ಅದರೊಳಕ್ಕೆ ಒಂದು ಓಕ್ ಬೀಜ ಹಾಕಲಿ . ” 

“ಭೇಷ್, ಭೇಷ್ ! ಸರಿಯಾಗಿ ಹೇಳಿದೆ.” 

ಅವು ಕರಟಕಾಯಿಗಳನ್ನೂ ಓಕ್ ಬೀಜಗಳನ್ನೂ ಸಂಗ್ರಹಿಸಿ ಎರಡನ್ನೂ ಬೆರಸಿ ಗುಡ್ಡೆ 
ಹಾಕಿದವು. ಆಮೇಲೆ ನರಿ ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತು ಪ್ರಕಟಿಸಿತು : 

“ ಸರಿ , ಎಲ್ಲರೂ ಮತದಾನ ಮಾಡಲು ಬನ್ನಿ ! ” 

ಎಲ್ಲ ಪ್ರಾಣಿಗಳೂ ಬೇಗನೆಯೇ ಸಾಲು ನಿಂತವು. ಪ್ರತಿಯೊಂದು ಪ್ರಾಣಿಯ ಸರದಿಯಲ್ಲಿ 
ಗುಡ್ಡೆಯ ಬಳಿ ಹೋಗಿ ತನ್ನ ಮತಕ್ಕನುಗುಣವಾಗಿ ಕರಟಕಾಯನ್ನೋ ಓಕ್ ಬೀಜವನ್ನೋ 
ಎತ್ತಿಕೊಂಡು ಪೊಟರೆಯಲ್ಲಿ ಹಾಕ ತೊಡಗಿತು . ಹಿಂಸ್ರ ಪ್ರಾಣಿಗಳೆಲ್ಲ ಸಿಂಹಕ್ಕೆ ಮತ 
ನೀಡಿದವು. ಹುಲ್ಲು , ಹಣ್ಣು , ಮೂಲಿಕೆಗಳನ್ನು ತಿನ್ನುವ ಪ್ರಾಣಿಗಳು ಆನೆಗೆ ಮತ 
ನೀಡಿದವು. 
- ನರಿ ಕರಟಕಾಯಿ ಹಾಗೂ ಓಕ್ ಬೀಜಗಳ ಗುಡ್ಡೆಯ ಮೇಲೆ ಕಣ್ಣಿಟ್ಟಿತ್ತು . ಗುಡ್ಡೆಯಲ್ಲಿ 
ಓಕ್ ಬೀಜಗಳಿಗಿಂತ ಕರಟಕಾಯಿಗಳೇ ಹೆಚ್ಚಾಗಿ ಹಿಂದೆ ಉಳಿದಿದ್ದುದನ್ನು ಕಂಡಿತು . ಅಂದರೆ 
ಹೆಚ್ಚಿನ ಪ್ರಾಣಿಗಳು ಆನೆಗೇ ಮತ ನೀಡುತ್ತಿದ್ದವು ಎಂದಾಯಿತು. ಆಗ ನರಿ ಕಾಣದಂತೆ ಮತದಾ 
ರರ ಬಳಿಗೆ ಹೋಗಿ ಅವುಗಳ ಮೇಲೆ ಪ್ರಭಾವ ಹಾಗೂ ಒತ್ತಡ ತರ ತೊಡಗಿತು . ಪುಟ್ಟ ಪ್ರಾಣಿ 
ಗಳ ಕಿವಿಯಲ್ಲಿ ಪಿಸುಮಾತಿನಲ್ಲಿ ಹೇಳುತ್ತಿತ್ತು : “ ಏಯಮ್ ನೋಡು, ಸಿಂಹಕ್ಕೆ ಮತ 
ನೀಡು. ಇಲ್ಲದಿದ್ದರೆ ಅದು ನಿನ್ನನ್ನು ಕೀಟದಂತೆ ಹೊಸಕಿ ಹಾಕುತ್ತೆ .” ಆ ಪುಟ್ಟ ಪ್ರಾಣಿಗಳು 
ಹೆದರಿದವು. ಸಿಂಹವನ್ನೇಕೆ ಶತ್ರುವನ್ನಾಗಿ ಮಾಡಿಕೊಳ್ಳಬೇಕು ಎಂದು ಅದಕ್ಕೆ ಮತ 
ನೀಡಿದವು. 

ಕುತಂತ್ರಿ ನರಿ ಇಷ್ಟಕ್ಕೇ ನಿಲ್ಲಲಿಲ್ಲ . ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಕಂಡುಬಂದಾಗ 
ಅದು ಮೆಲ್ಲನೆ ಒಂದು ಬೊಗಸೆ ಕರಟಕಾಯಿಗಳನ್ನು ಎತ್ತಿಕೊಂಡು ಹೋಗಿ ಪೊಟರೆಯೊಳಕ್ಕೆ 
ಹಾಕಿ ಬಿಟ್ಟಿತು. 

ಕೊನೆಯಲ್ಲಿ ಎಣಿಕೆ ನಡೆದಾಗ, ಕರಟಕಾಯಿಗಳೂ ಓಕ್ ಬೀಜಗಳೂ ಸರಿಸಮ ಇದ್ದುದು 
ಕಂಡುಬಂದಿತು . 

“ ಇಲ್ಲೇನೋ ತಪ್ಪಾಗಿದೆ , ಮಿತ್ರರೇ ” ಎಂದಿತು ಕರಡಿ, “ ನಾವು ಮತ್ತೆ ಮತ ನೀಡಬೇಕು. 
ಯಾರೂ ಒಂದಕ್ಕಿಂತ ಹೆಚ್ಚು ಬಾರಿ ಮತ ನೀಡದಂತೆ ನೋಡಿಕೊಳ್ಳಬೇಕು. ” 
ನರಿ ಮಧ್ಯೆ ಬಾಯಿ ಹಾಕಿ ಹೇಳಿತು : 

“ಬೇಡ, ಬೇಡ, ಎರಡನೆಯ ಸಾರಿ ಮತದಾನ ಬೇಕಿಲ್ಲ. ನಾವು ಹೀಗೆ ಮಾಡೋಣ. 
ಸಿಂಹ ಹಾಗೂ ಆನೆ ಬಳಿಗೆ ಹೋಗಿ, ನಮಗೆ ನೀವಿಬ್ಬರೂ ಸಮಾನರೇ . ಆದರೆ 
ನಿಮ್ಮಲ್ಲಿ ಯಾರು ರಾಜನಾಗಬೇಕು ಅನ್ನುವುದನ್ನು ಆಮೇಲೆ ತೀರ್ಮಾನಿಸುತ್ತೇವೆ. ಇಷ್ಟರ 
ಮೇಲೆ ನಿಮಗೆ ಹೇಗೆ ಸರಿ ಅಂತ ಕಂಡುಬರುತ್ತೋ ಹಾಗೆ ಮಾಡಿ ಅಂತ ಸಲಹೆ 
ನೀಡೋಣ. ” 

ಎಲ್ಲವೂ ಸಿಂಹ ಹಾಗೂ ಆನೆ ಬಳಿಗೆ ಹೋಗಿ ತಮ್ಮ ನಿರ್ಧಾರ ತಿಳಿಸಿದವು. 
ಮತ್ತೆ ನರಿಯೇ ಮುಂದೆ ಬಂದು ಹೇಳಿತು : 

“ ಮಿತ್ರರೇ , ನಮ್ಮ ಪ್ರಾಣಿಗಳ ಸಮಾಜ ಯಾರು ರಾಜನಾಗಬೇಕು, ಸಿಂಹವೇ ಅಥವಾ 
ಆನೆಯೇ , ಅನ್ನುವುದನ್ನು ತೀರ್ಮಾನಿಸಲು ಮತದಾನ ನಡೆಸಿತು . ನಿಮ್ಮಿಬ್ಬರಲ್ಲಿ ಯಾರು ರಾಶಿ 
ನಾಗಬೇಕು ಅನ್ನುವುದನ್ನು ನಿರ್ಧರಿಸಲು ನಾವು ಒಬ್ಬೊಬ್ಬರೂ ನಮ್ಮ ಇಷ್ಟದ ಪ್ರಕಾರ ಪೊಟಃ 
ಯೊಳಕ್ಕೆ ಕರಟಕಾಯಿ ಹಾಗೂ ಓಕ್ ಬೀಜ ಹಾಕಿದೆವು. ಕೊನೆಯಲ್ಲಿ ಎಣಿಸಿದೆವು. ನೀವಿಬ್ಬರು 
ಸರಿಸಮನಾಗಿ ಮತ ಗಳಿಸಿದ್ದಿರಿ . ಈಗ ಮತ್ತೆ ನಿಮ್ಮಿಬ್ಬರಲ್ಲಿ ಯಾರು ರಾಜನಾಗಬೇಕು ಅನ್ನು 
ದನ್ನು ಯೋಚಿಸಬೇಕಾಗಿದೆ. ನನಗನಿಸುತ್ತೆ ಹೀಗೆ ಮಾಡೋಣ ಅಂತ : ಯಾರು ಯಾರನ್ನ 
ಓಟದಲ್ಲಿ ಸೋಲಿಸುತ್ತಾರೋ ಅವರು ರಾಜನಾಗಲಿ , ಆದ್ದರಿಂದ ಈಗ ಓಟದ ಸ್ಪರ್ಧೆ ಏರ್ಪಡಿ 
ಸೋಣ. ಯಾರು ಜೋರಾಗಿ ಓಡುತ್ತಾರೋ ಅವರೇ ರಾಜನಾಗಲಿ.” 
- “ಶುದ್ಧ ಅವಿವೇಕ !” ಎಂದಿತು ಆನೆ. “ಜೋರಾಗಿ ಓಡುವುದು ನನ್ನ ಕೈಲಾಗದು . ಓಡುವ 
ರೀತಿಯಲ್ಲಿ ನಾನು ಹುಟ್ಟೇ ಇಲ್ಲ. ಆದರೆ ನನಗನಿಸುತ್ತೆ , ರಾಜನಿಗೆ ಜೋರಾಗಿ ಓಡುವುದಾದರೂ 
ಯಾಕೆ ಬೇಕು ? ಅವನು ನ್ಯಾಯಸಮ್ಮತವಾಗಿ, ಬುದ್ದಿವಂತಿಕೆಯಿಂದ ರಾಜ್ಯಭಾರ ಮಾಡ 
ಬೇಕು, ಅಷ್ಟೆ . ಯಾರನ್ನಾದರೂ ಹಿಡಿಯಬೇಕಾಗಿ ಬಂದರೆ ರಾಜನೇ ಯಾಕೆ ಓಡಿ ಹೋಗಿಹಿಡಿಯ 
ಬೇಕು ? ಬೇರೆ ಯಾರನ್ನಾದರೂ ಕಳಿಸಿ ತಪ್ಪಿತಸ್ಥನನ್ನು ಹಿಡಿಸಿ ತರಿಸಬಹುದು.” 
- “ ಸರಿ , ಒಳ್ಳೆಯದೇ . ಹಾಗಾದರೆ ಹೀಗೆ ಮಾಡೋಣ. ನಿಮ್ಮಿಬ್ಬರಲ್ಲಿ ಯಾರು ಹೆಚ್ಚು ಎತ್ತರ 
ನೆಗೆಯುತ್ತಾರೋ ಅವರು ರಾಜನಾಗಲಿ. ” 

ಆನೆ ಮತ್ತೆ ಹೇಳಿತು : 
“ಉಹೂಂ. ನಾನು ನೆಗೆಯಲಾರೆ. ನಾನು ಅಷ್ಟು ಹಗುರವಲ್ಲ . ” 

“ ಹಾಗಾದರೆ ಸಿಂಹವೇ ರಾಜನಾಗಲಿ ! ” ಎಂದು ಸಿಂಹದ ಪರವಾಗಿದ್ದ ಪ್ರಾಣಿಗಳೆಲ್ಲ ಕೂಗಿ 
ಹೇಳಿದವು. 
ಆನೆ ಮತ್ತೆ ಹೇಳಿತು : 
“ನೀವು ಹಾಗೆ ಹೇಳಿದರೆ ಹಾಗೇ ಆಗಲಿ, ನನಗೆಲ್ಲ ಒಂದೇ . ಆದರೆ ಅದು ನ್ಯಾಯವಾಗುವು 
ದಿಲ್ಲ , ಅಷ್ಟೆ . ಯಾಕೆಂದರೆ , ಸಿಂಹ ಏನು ಮಾಡಬಲ್ಲುದೋ ಅದನ್ನು ನಾನು ಮಾಡಲಾರೆ, 
ನಾನು ಏನು ಮಾಡಬಲ್ಲೆನೋ ಅದನ್ನು ಸಿಂಹ ಮಾಡಲಾರದು. ಹಾಗೆ ಬೇಕು ಅನ್ನುವುದಾದರೆ 
ಸಿಂಹ ನನ್ನ ಜೊತೆಗೆ ಹೋರಾಡಲಿ. ಹೋರಾಟದಲ್ಲಿ ಯಾರು ಗೆಲ್ಲುತ್ತಾರೋ ಅವರು ರಾಜನಾ 
ಗಲಿ . ” 

ನರಿ ಅಷ್ಟು ಹೊತ್ತಿಗೆ ತುಂಬ ಯೋಚನೆ ಮಾಡಿ ಆನೆಯನ್ನು ಮೋಸಗೊಳಿಸಲು ಮತ್ತೊಂದು 
ಕುತಂತ್ರ ಕಂಡುಹಿಡಿದಿದ್ದಿತು . ಅದು ಹೇಳಿತು : 

“ಸರಿ, ನೀನು ಹೇಳಿದ ಹಾಗೇ ಆಗಲಿ. ಇಬ್ಬರೂ ಹೋರಾಡಿ ! ಆದರೆ ಈಗ ಆಗಲೇ ತುಂಬ ತಡ 
ವಾಗಿದೆ. ನಾವೆಲ್ಲ ತುಂಬ ಬಳಲಿದ್ದೇವೆ, ಹಸಿದಿದ್ದೇವೆ. ನಾಳೆ ಬೆಳಿಗ್ಗೆ ನಾಷ್ಟಾ ಆದ ಮೇಲೆ ಅದನ್ನು 
ಮಾಡೋದು ಒಳ್ಳೆಯದು. ಮತ್ತೆ ನೀವು, ಪ್ರಾಣಿಗಳೇ , ಹೋರಾಟ ನೋಡಲು ಬೆಳಿಗ್ಗೆ ಬೇಗ 
ಎದ್ದು ಬಂದು ಬಿಟ್ಟು ಅವಕ್ಕೆ ತೊಂದರೆಕೊಡಬೇಡಿ. ನಾವು ತಡವಾಗಿ ಬಂದು ಯಾರು ಯಾರನ್ನು 
ಸೋಲಿಸಿದರು ಅನ್ನುವುದನ್ನು ತಿಳಿಯುವುದೇ ಒಳ್ಳೆಯದು.” 

ಎಲ್ಲ ಪ್ರಾಣಿಗಳೂ ಈ ಸಲಹೆಗೆ ಒಪ್ಪಿದವು. ರಾತ್ರಿಯಾಯಿತು. ಆನೆ ನಿದ್ರೆ ಮಾಡಲು 
ಹೋಯಿತು. ಅದು ಕಾಡಿಗೆ ಹೋಗಿ ಅಷ್ಟೇನೂ ದಪ್ಪನಲ್ಲದ ಒಂದು ಓಕ್ ಮರಕ್ಕೆ ಒರಗಿ 
ನಿಂತು ನಿದ್ರೆ ಮಾಡ ತೊಡಗಿತು . ಆನೆಗಳು ಯಾವತ್ತೂ ನಿಂತೇ ಮರಕ್ಕೆ ಒರಗಿ 
ನಿದ್ರಿಸೋದು. ಅವು ಮಲಗಿ ಬಿಟ್ಟರೆ ಮತ್ತೆ ಬೇರೆಯವರ ಸಹಾಯವಿಲ್ಲದೆ ತಮಗೆ ತಾವೇ 
ಏಳಲಾರವು. 

ನರಿ ಇದನ್ನೇ ದೂರದಿಂದ ನೋಡುತ್ತ ಇತ್ತು . ಆನೆ ಆಗಲೇ ಗಾಢವಾಗಿ ನಿದ್ರೆ ಹೋಯಿತು 
ಅನ್ನುವುದು ತಿಳಿದ ಕೂಡಲೇ ಸಿಂಹದ ಬಳಿಗೆ ಓಡಿ ಹೋಗಿ ಹೇಳಿತು : 

“ಸಿಂಹರಾಯ , ಬಾ , ಬೇಗ ಬಾ . ಆನೆ ಆಗಲೇ ನಿದ್ರೆ ಹೋಗಿದೆ. ಅದನ್ನು ಸೋಲಿಸಲು ಇದೀಗ 
ಸೂಕ್ತ ಕಾಲ. ” 
- “ ಹೇಗೆ ಸೋಲಿಸೋದು? ” ಸಿಂಹ ಕೇಳಿತು . “ ಆನೆಯನ್ನು ಹಿಸುಕುವಷ್ಟು ಶಕ್ತಿ ನನಗಿಲ್ಲ. 
ಅದನ್ನು ತಳ್ಳಿ ಹಿಸುಕೋಕೆ ಹೋದರೆ ಅದು ಎಚ್ಚರಾಗಿ ಬಿಡುತ್ತೆ .” 

“ಉಹೂಂ, ಅದನ್ನು ನಾನು ಹೇಳಿರೋದು. ಅದನ್ನೇನೂ ತಳ್ಳಿ ಹಿಸುಕಬೇಕಾಗಿಲ್ಲ. 
ನಿದ್ರೆ ಮಾಡುವಾಗ ಆನೆಗೆ ಮರಕ್ಕೆ ಒರಗಿಕೊಂಡಿರೋದು ಅಭ್ಯಾಸವಾಗಿಬಿಟ್ಟಿದೆ. ಈಗ ಏನು 
ಮಾಡಬೇಕು ಅಂದರೆ ಅದು ಒರಗಿಕೊಂಡಿರೋ ಮರವನ್ನು ಹಲ್ಲುಗಳಿಂದ ಕಡಿದು ಹಾಕಬೇಕು. 
ಮರ ಬೀಳುತ್ತೆ , ಅದರ ಜೊತೆಗೆ ಆನೆಯ ಬೀಳುತ್ತೆ . ನೀನು ಆನೆಯನ್ನು ಉರುಳಿಸಿ ಬೀಳಿಸಿದೆ 
ಅಂತ ಎಲ್ಲರಿಗೂ ತಿಳಿಸಿ ಬಿಡೋಣ.” 

“ ಭಲೆ, ಭೇಷ್ ! ಎಷ್ಟು ಚೆನ್ನಾಗಿ ಯೋಚನೆ ಮಾಡಿದೆ. ಆದರೆ ನಾನೊಬ್ಬನೇ ಬೆಳಗಾಗುವ 
ಮುನ್ನ ಮರವನ್ನು ಹಲ್ಲುಗಳಿಂದ ಕಡಿದು ಬೀಳಿಸೋಕೆ ಎಲ್ಲಾಗುತ್ತೆ ? ಹಲ್ಲು ನೋಯುತ್ತೆ 
ಅಷ್ಟೆ . ನೀನು ಹೋಗಿ ಬೇರೆ ಯಾರನ್ನಾದರೂ ಸಹಾಯಕ್ಕೆ ಕರೆದುಕೊಂಡು ಬಾ.” 
- ನರಿ ಓಡಿ ಹೋಗಿ ಹನ್ನೆರಡು ತೋಳಗಳನ್ನು ಕರೆತಂದಿತು . ಅವು ಆನೆ ಒರಗಿದ್ದ ಓಕ್ 
ಮರದ ಬುಡವನ್ನು ತಮ್ಮ ಹಲ್ಲುಗಳಿಂದ ಕಡಿಯ ತೊಡಗಿದವು. ಕಡಿದವೂ ಕಡಿದವೂ , ಅರು 
ಸೋದಯದವರೆಗೂ ಕಡಿದವು. ಆದರೂ ಇನ್ನೂ ತುಂಬ ಉಳಿದುಕೊಂಡಿತ್ತು . ಮರವೇನೋ 
ಆಗಲೇ ಸ್ವಲ್ಪ ವಾಲಿತ್ತು . ಆದರೆ ಇನ್ನೂ ಬಿದ್ದಿರಲಿಲ್ಲ. ಏನು ಮಾಡೋದು? ಆಗಲೇ ಬೆಳಗಾಗು 
ತಿದೆ. ಆನೆ ಯಾವುದೇ ಘಳಿಗೆಯಲ್ಲಿ ಎಚ್ಚರಾಗಿ ಬಿಡಬಹುದು. ಮತ್ತೆ ಮರ ಬೀಳುತ್ತಿಲ್ಲ. ನರಿ 
ಪುನಃ ಯೋಚನೆ ಮಾಡಿತು . ಮೂರುಕರಡಿಗಳನ್ನು ಕರೆದು ಹೇಳಿತು : 

“ ನಮ್ಮ ಭಾವೀ ರಾಜ ಆನೆ ಈ ಮರದ ಮೇಲೆ ಜೇನು ಇದೆ ಅಂತ ಕಂಡುಕೊಂಡಿತು . 
ಮಲಗೋಕೆ ಮುಂಚೆ, ನಿಮ್ಮನ್ನು ಕರೆದು ಆ ಜೇನನ್ನು ಕೆಳಕ್ಕೆ ತಂದಿರಿಸುವಂತೆ ನಿಮಗೆ ಹೇಳು 
ವಂತೆ ನನಗೆ ಹೇಳಿತು . ನೀವು ಅದು ಹೇಳಿದ ಹಾಗೆ ಮಾಡಬೇಕು. ಇಲ್ಲದಿದ್ದರೆ ಅದಕ್ಕೆ ಕೋಪ 
ಬರುತ್ತೆ .” 

ಕರಡಿಗಳಿಗೆ ಈ ಕೆಲಸ ಮಾಡಲು ಸಂತೋಷವೇ ಆಯಿತು. ಮರ ಹತ್ತ ತೊಡಗಿದವು. 
ನರಿ ಕೆಳಗೆ ನಿಂತು ಮೆಲ್ಲಗೆ “ಮೇಲೆ, ಮೇಲಕ್ಕೆ , ಅಲ್ಲಿಗೆ ಹತ್ತಿ ಹೋಗಿ” ಎಂದು ಮರದ ತುದಿಯಲ್ಲಿ, 
ಅದು ವಾಲಿದ್ದ ಕಡೆಯಲ್ಲಿ, ತೂಗಿ ಬಿದ್ದಿದ್ದ ರೂಕ್ ಹಕ್ಕಿಯ ಗೂಡೊಂದನ್ನು ತೋರಿಸುತ್ತ ಹೇಳಿತು. 
ಕರಡಿಗಳು ಮರದ ತುಟ್ಟತುದಿಯವರೆಗೂ ಹತ್ತಿ ಹೋದವು, ಮರಕ್ಕೆ ಅವುಗಳ ಭಾರವನ್ನು 
ತಡೆಯಲು ಆಗಲಿಲ್ಲ. ಅದು ಕಟಕಟನೆ ಶಬ್ದ ಮಾಡುತ್ತ ಮುರಿದು ಬಿದ್ದಿತು. ಅದರ ಜೊತೆಗೆ 
ಆನೆಯ ನೆಲದ ಮೇಲೆ ಅಂಗತ್ತನಾಗಿ ಬಿದ್ದಿತು . ಅದಕ್ಕೆ ಸ್ವತಃ ಮೇಲೇಳಲು ಆಗಲಿಲ್ಲ . 
ಕರಡಿಗಳು ಮರದ ಮೇಲಿನಿಂದ ಬಿದ್ದವೋ ಇಲ್ಲವೋ ಹಾಗೆಯೇ ಅವುಗಳ ಪ್ರಾಣವೂ ಹಾರಿ | 
ಹೋಯಿತು. 

ನಾಷ್ಟಾ ಆದನಂತರ ಪ್ರಾಣಿಗಳೆಲ್ಲ ಸಭೆ ಸೇರ ತೊಡಗಿದವು. ಸಿಂಹ ಕೆಳಗೆ ಬಿದ್ದಿದ್ದ ಆನೆಯ 
ಮೇಲೆ ನಿಂತಿದ್ದಿತು. ನರಿ ಒಂದು ಪಕ್ಕದಲ್ಲಿ ನಿಂತು ತನ್ನ ಬಾಲ ಆಡಿಸುತ್ತಿತ್ತು . ಎಲ್ಲ ಪ್ರಾಣಿಗಳೂ 
ಬಂದ ಮೇಲೆ ನರಿ ಪ್ರಕಟಿಸಿತು : 

“ನೋಡಿ, ಮಾನ್ಯರೇ ! ನಮ್ಮ ರಾಜ ಎಷ್ಟು ಶಕ್ತಿವಂತ, ಆನೆಯನ್ನು ಉರುಳಿಸಿ ಬೀಳಿಸಿದೆ. 
ಬೀಳುವಾಗ ಆನೆ ಮರಕ್ಕೆ ಒರಗಿಕೊಂಡು ನಿಲ್ಲಲು ಬಯಸಿತು . ಸಿಂಹ ಆನೆಯನ್ನು ಮರದ ಸಮೇತ 
ಉರುಳಿಸಿತು . ಮರವಾದರೂ ನೋಡಿ ಎಷ್ಟು ಬಲವಾದುದು. ಆದರೂ ಸಿಂಹದ ಹೊಡೆತ 
ತಡೆಯಲಾರದೆ ಅದೂ ಮುರಿದು ಬಿದ್ದಿದೆ. ಇದೂ ಸಾಲದು ಅಂತ ಆನೆಗೆ ಬೆಂಬಲ 
ಕೊಡಲು ಬಂದ ಮರು ಕರಡಿಗಳನ್ನೂ ಸಿಂಹ ಎಷ್ಟು ಜೋರಾಗಿ ಕುಕ್ಕಿ ಬಡಿಯಿತು 
ಅಂದರೆ ಅವು ಮೂರೂ ಸತ್ತು ಬಿದವು. ನೋಡಿ, ಅಲ್ಲಿ ಬಿದ್ದಿವೆ, ಆ ಬಡಪಾಯಿ 
ಪ್ರಾಣಿಗಳು ! ” 

ಪ್ರಾಣಿಗಳು ಭಯದಿಂದ ನಡುಗಿದವು. ಎಲ್ಲವೂ ಒಕ್ಕೊರಲಿನಿಂದ ಕೂಗಿ ಹೇಳಿದವು: 
“ಸಿಂಹವೇ ನಮ್ಮ ರಾಜನಾಗಲಿ ! ” 

ಅಂದಿನಿಂದ ಎಲ್ಲ ಪ್ರಾಣಿಗಳೂ ಸಿಂಹಕ್ಕೆ ಹೆದರ ತೊಡಗಿದವು. ಸಿಂಹವನ್ನೇ ತಮ್ಮ ರಾಜ 
ನೆಂದು ಕರೆಯ ತೊಡಗಿದವು. ಸಿಂಹ ಕಾಡಿನಲ್ಲಿ ಒಮ್ಮೆ ಘರ್ಜಿಸಿದರೆ ಸಾಕು ಎಲ್ಲ ಪ್ರಾಣಿಗಳೂ 
ನಡುಗುತ್ತಿದವು. 

ತನಗೆ ಸಹಾಯಕರಾಗಿ ಸಿಂಹ ರಾಜ್ಯಪಾಲರುಗಳನ್ನು ನೇಮಿಸಿತು . ಅದು ತೋಳನನ್ನು 
ಬಯಲುಗಳ ರಾಜ್ಯಪಾಲನನ್ನಾಗಿ ಮಾಡಿತು , ಹುಲಿಯನ್ನು ಕಾಡುಗಳ ರಾಜ್ಯಪಾಲನನ್ನಾಗಿ 
ಮಾಡಿತು , ನರಿಯನ್ನು ಹೊಲಗಳ ರಾಜ್ಯಪಾಲನನ್ನಾಗಿ ಮಾಡಿತು . 

ರಾಜ್ಯಪಾಲರುಗಳು ಸಿಂಹಕ್ಕೆ ತಮ್ಮ ವಂದನೆ ಸಲ್ಲಿಸಿ ತಾವು ನೇಮಿತರಾಗಿದ್ದ ಸ್ಥಳಗಳಿಗೆ 
ಹೊರಟು ಹೋದವು. ಉಳಿದ ಪ್ರಾಣಿಗಳು ತಮ್ಮತಮ್ಮಲ್ಲೇ ಮಾತನಾಡಿಕೊಂಡವು: 

“ತೋಳನೂ ನರಿಯ ಈ ಗೌರವಕ್ಕೆ ಪಾತ್ರರಾಗುವಂತೆ ಮಾಡಿದ ಅಂತಹ ಮಹಾ 
ಕಾರ್ಯವಾದರೂ ಏನು ? ನಮ್ಮ ಮಧ್ಯೆ ರಾಜ್ಯಪಾಲರ ಪದವಿಗೆ ಇನ್ನೂ ಹೆಚ್ಚು ಅರ್ಹರಾದಂಥ 
ಪ್ರಾಣಿಗಳು ಎಷ್ಟೋ ಇವೆ. ” 

ಜಿಂಕೆ ಹೇಳಿತು : 

“ ಹೌದು, ಮಾನ್ಯರೇ , ಇಲ್ಲೇನೋ ದುಷ್ಟ ಹಂಚಿಕೆ ನಡೆದಿದೆ. ಸತ್ಯವಾದುದು, ಶುದ್ದವಾ 
ದುದು ರಾಜನ ಗಮನಕ್ಕೆ ಬರುತ್ತಿಲ್ಲ. ಸಿಂಹ ಅಷ್ಟು ಸರಳವಾಗಿಯೇನೂ ಆನೆಯನ್ನು ಸೋಲಿ 
ಸಿಲ್ಲ ಅಂತ ನನಗೆ ತಕ್ಷಣವೇ ಗೊತ್ತಾಯಿತು . ಇಲ್ಲೇನೋ ಕುತಂತ್ರ ನಡೆದಿದೆ. ನರಿ ಇಂತಹ ಕುತಂತ್ರ 
ಗಳಲ್ಲೆಲ್ಲ ಚಾಣಾಕ್ಷ . ಅದೇ ಇಲ್ಲಿ ಏನೋ ಉಪಾಯ ನಡೆಸಿರಬೇಕು. ತೋಳಗಳೂ ಸ್ಪಷ್ಟವಾಗಿಯೇ 
ಅದಕ್ಕೆ ಸಹಾಯ ಮಾಡಿರಬೇಕು. ಆದ್ದರಿಂದಲೇ ಅವಕ್ಕೆ ಈ ಗೌರವ ಪದವಿಗಳು . ಇನ್ನು ಹುಲಿಯ 
ವಿಷಯ ಹೇಳುವುದಾದರೆ ಅದೇ ಬೇರೆ ಸಂಗತಿ. ಹುಲಿ ಶಕ್ತಿವಂತ ಪ್ರಾಣಿ. ಅದು ರಾಜ್ಯಪಾಲನಾ 
ಗಲು ತಕ್ಕನಾದ ಪ್ರಾಣಿ. ಅದೂ ಅಲ್ಲದೆ ಹುಲಿಯನ್ನು ಕಡೆಗಾಣಿಸಲೂ ಆಗದು. ಹಾಗೆ ಮಾಡಿ 
ದರೆ ಅದು ಸಿಂಹದ ಮೇಲೆಕೋಪ ತಾಳಿ ಸೇಡು ತೀರಿಸಿಕೊಳ್ಳುತ್ತಿತ್ತು . ಶಕ್ತಿಯಲ್ಲಿ ಹುಲಿ 
ಸಿಂಹಕ್ಕಿಂತ ಕಮ್ಮಿ ಏನೂ ಇಲ್ಲ. ಅದನ್ನು ತಿಳಿದೇ ಸಿಂಹ ಅದಕ್ಕೆ ರಾಜ್ಯಪಾಲ ಪದವಿ 
ನೀಡಿದೆ. ” 

“ ನನಗೂ ಹಾಗೇ ಅನ್ನಿಸ್ತು ” ಎಂದಿತು ಕರಡಿ, “ ಇವು ಕುತಂತ್ರ ನಡೆಸಿವೆ ಅನ್ನೋದು ತಕ್ಷ 
ಣವೇ ಗೊತ್ತಾಗುತ್ತೆ . ಆನೆಗೆ ಮೋಸ ಮಾಡಿದಾವೆ, ನನ್ನ ಮೂರು ತಮ್ಮಂದಿರನ್ನೂ ಕೊಂದಿದಾವೆ. 
ತೋಳಗಳೇ ಹಲ್ಲುಗಳಿಂದ ಕಡಿದು ಮರ ಬೀಳುವಂತೆ ಮಾಡಿರಬೇಕು ಅಂತ ನನಗೆ ಆಗಲೇ 
ಸಂಶಯ ಬಂತು ... ” 

“ ಹೌದು ! ಹಾಗೇ ಆಗಿರಬೇಕು ! ” ಎಂದು ಉಳಿದ ಪ್ರಾಣಿಗಳೂ ಧ್ವನಿಗೂಡಿಸಿದವು. 
ನೋಡುತ್ತವೆ – ಹತ್ತಿರದಲ್ಲೇ ನರಿ ಹೋಗುತ್ತಿದೆ ! ಎಲ್ಲವೂ ಮೌನವಾದವು. 

“ ಹುಷ್ ! ಮೌನ ! ನಮ್ಮ ಮಾತು ಅದಕ್ಕೆ ಕೇಳಿಸಿದರೆ ತೊಂದರೆ ಆಗುವುದು ಖಂಡಿತ. 
ಕುರಿಮರಿಗಳನ್ನೂ ದಬ್ಬದಂಥ ಸ್ಥಳಕ್ಕೆ ನಮ್ಮನ್ನು ದಬ್ಬಿ ಬಿಡುತ್ತದೆ. ” 

ಅಷ್ಟು ಹೊತ್ತಿಗೆ ನರಿ ಹತ್ತಿರಕ್ಕೆ ಬಂದಿತು. ಅದು ಕೇಳಿತು : 

“ ಯಾತಕ್ಕೆ ನೀವೆಲ್ಲ ಇಲ್ಲಿ ಸಭೆ ಸೇರಿರೋದು? ಒಳಸಂಚನ್ನೇನೂ ಮಾಡುತ್ತಿಲ್ಲ 
ವಷ್ಟೆ ? ” 

“ ಅಯ್ಯೋ ಏನು ನೀವು ಹೇಳೊದು! ನಾವೆಲ್ಲ ನಿನ್ನಿನ ವಿಷಯವನ್ನೇ ಮಾತನಾಡುತ್ತಿದ್ದೆವು. 
ನಮಗೆಲ್ಲ ಎಂತಹ ಸಂತಸದ ದಿನವಾಗಿತ್ತು ಅದು. ನಮಗೆ ಎಂತಹ ರಾಜ ಸಿಕ್ಕಿದ, ಎಂತಹ ಬುದ್ದಿ 
ವಂತರಾದ ನ್ಯಾಯವಂತರಾದ ರಾಜ್ಯಪಾಲರುಗಳು ಸಿಕ್ಕಿದರು ಅಂತ ನಮಗೆ ತುಂಬ ಸಂತೋಷ 
ವಾಗಿದೆ. ” 

“ಓಹ್ , ಹಾಗೂ ! ಹಾಗಾದರೆ ಪರವಾಗಿಲ್ಲ. ಇನ್ನು ಮುಂದೆ ನೀವೆಲ್ಲ ಹೀಗೆ ಸಭೆ ಸೇರ 
ಬಾರದು. ರಹಸ್ಯ ಸಭೆಗಳನ್ನು ಕಾನೂನಿನ ಪ್ರಕಾರ ನಿಷೇಧಿಸಲಾಗಿದೆ.” 

ಇದಾದನಂತರ ಪ್ರಾಣಿಗಳು ಒಂದೊಂದೂ ತಮ್ಮಷ್ಟಕ್ಕೆ ತಾವು ಇದ್ದುಕೊಂಡು ಹೋಗಲು 
ಯತ್ನಿಸಿದವು. ಹುಲ್ಲು , ಗೆಡ್ಡೆಗೆಣಸುಗಳನ್ನು ತಿನ್ನುತ್ತಿದ ಪ್ರಾಣಿಗಳು ಶಾಂತಿಯಿಂದ ಬಾಳುತ್ತಿದ್ದವು, 
ಯಾರನ್ನೂ ಮುಟ್ಟಿ ಹೋಗುತ್ತಿರಲಿಲ್ಲ. ಆದರೆ ಹಿಂಸ್ರ ಪ್ರಾಣಿಗಳು ದುರ್ಬಲವಾದವನ್ನು ನಿಸ್ಸ 
ಹಾಯಕವಾದವನ್ನು ಹಿಂಸಿಸಿದವು, ಬೇಕಾದಷ್ಟು ದುಷ್ಟ ಕಾರ್ಯಗಳನ್ನೆಸಗಿದವು. ರಾಜನ 
ಮುಂದೂ ಕಾನೂನಿನ ಮುಂದೂ ದೋಷಮುಕ್ತರೆಂದು ಕಾಣಿಸಿಕೊಳ್ಳಲು ಅವು ತಾವು ಈ ದುಷ್ಯ 
ತ್ಯಗಳನ್ನೆಲ್ಲ ಸ್ವ - ಇಚ್ಛೆಯಿಂದ ಮಾಡಲಿಲ್ಲ, ಆದರೆ ಸೇವಾ ಕರ್ತವ್ಯ ಪಾಲನೆಯ ಸಮಯದಲ್ಲಿ 
ಮಾಡಿದವು, ಎಂದು ಸಾಧಿಸಿ ತೋರಲು ಯತ್ನಿಸಿದವು. ಮೊಲವನ್ನೊ ಮತ್ತಾವುದೋ ಪುಟ್ಟ 


ಪ್ರಾಣಿಯನ್ನೂ ಕೊಂದದ್ದೇಕೆ ಎಂದು ರಾಜ ಏನಾದರೂ ಕೇಳಿದರೆ , ಅವು, ಆ ಪ್ರಾಣಿಗಳು ರಾಜ 
ನನ್ನು ಗೇಲಿ ಮಾಡುತ್ತಿದವು ಎಂದೂ ರಾಜನನ್ನು ಕೊಲ್ಲಲು ಸಂಚು ನಡೆಸುತ್ತಿದವು ಎಂದೋ 
ಹೇಳಿ, ಅದಕ್ಕಾಗಿಯೇ ತಾವು ಅವನ್ನು ಕೊಂದದ್ದೆಂದು ಕಾರಣ ಕೊಡುತ್ತಿದ್ದವು. ಸಿಂಹ ಈ ಸುಳ್ಳು 
ಮಾತುಗಳನ್ನೇ ನಂಬಿ ತನಗೆ ಇಂತಹ ಅಮೋಘಸೇವೆ ಸಲ್ಲಿಸಿದುದಕ್ಕಾಗಿ ಆ ಪ್ರಾಣಿಗಳಿಗೆ ಇನಾಮು 
ನೀಡುತ್ತಿದ್ದಿತು . 

ಹೀಗೆಯೇ ಮುಂದುವರಿಯುತ್ತಿತ್ತು . ಹೊಲದ ರಾಜ್ಯಪಾಲನಾಗಿ ನರಿಗೆ ಬೇಸರವಾಗ ತೊಡ 
ಗಿತು . ಹೊಲದಲ್ಲಿ ನರಿಗೆ ತಿನ್ನಲು ಇಲಿಗಳು ಮತ್ತಿತರ ಸಣ್ಣ ಪುಟ್ಟ ಚಿಲ್ಲರೆ ಪ್ರಾಣಿಗಳನ್ನು ಬಿಟ್ಟು 
ಬೇರೇನೂ ಇರುತ್ತಿರಲಿಲ್ಲ. ಅದಕ್ಕೆ ಕೋಳಿಯನ್ನೊ ಬಾತುಕೋಳಿಯನ್ನೂ ತಿನ್ನಬೇಕೆಂದು 
ಆಸೆ. ಅದು ರಾಜನ ಬಳಿಗೆ ಹೋಗಿ ಹೇಳಿತು : 
- “ಮಹಾಪ್ರಭು! ನನ್ನನ್ನು ಈ ಹೊಲದ ರಾಜ್ಯಪಾಲರ ಹುದ್ದೆಯಿಂದ ಬಿಡುಗಡೆ ಮಾಡು 
ವಿರಾ ? ನನಗೆ ಕೋಳಿಗಳ ಹಾಗೂ ಬಾತುಕೋಳಿಗಳ ಮೇಲೆಉಸ್ತುವಾರಿ ನಡೆಸಬೇಕು, ಅವನ್ನು 
ಅವುಗಳ ಶತ್ರುಗಳಿಂದ ರಕ್ಷಿಸಬೇಕು ಅಂತ ಆಸೆ.” 

“ ಏನು ಕೋಳಿಗಳು ಅಂದೆಯಾ ? ” ಸಿಂಹ ಆಶ್ಚರ್ಯದಿಂದ ಕೇಳಿತು . “ ನನ್ನ ಅಧಿಕಾರ ಅಲ್ಲಿ 
ಯವರೆಗೂ ಹೋಗುವುದಿಲ್ಲವಲ್ಲ . ಕೋಳಿಗಳು ಪಕ್ಷಿಗಳು , ಪಕ್ಷಿಗಳಿಗೆ ಅವುಗಳದೇ ರಾಜನಿದ್ದಾನೆ. 
ಅದು ಸರಿ, ಯಾರು ಈ ಕೋಳಿಗಳಿಗೆ ಕಾಟ ಕೊಡುತ್ತಿರೋದು? ” 
- “ಪೋಲ್‌ಕ್ಯಾಟ್* ಗಳೂ ಇಲಿಗಳೂ , ಮಹಾ ಸ್ವಾಮಿ , ಅವು ಕೋಳಿಗಳನ್ನೂ ಕೋಳಿ 
ಮರಿಗಳನ್ನೂ ಸದಾಕಾಲವೂ ನಿಷ್ಕರುಣೆಯಿಂದ ಕೊಲ್ಲುತ್ತಿವೆ. ಅದರ ಬಗ್ಗೆ ಹುಂಜ ದೂರಿತು. 
ನಿಮಗೆ ಈ ವಿಷಯ ಹೇಳಬೇಕೆಂದು ಕೇಳಿತು . ನೀವು ಈ ಸಣ್ಣ ಪುಟ್ಟ ಪ್ರಾಣಿಗಳ ರಕ್ಷಣೆ ಮಾಡು 
ತಿಲ್ಲ, ಶಾಂತಿ ಪಾಲನೆ ಮಾಡುತ್ತಿಲ್ಲ, ಅಂತ ಎಲ್ಲರೂ ನಗಾಡುತ್ತಿದಾರೆ ಅಂತ ಅದು 
ಹೇಳಿತು . ” 
- ಸಿಂಹ ನರಿಯ ಮಾತನ್ನು ನಂಬಿತು . ಅದಕ್ಕೆ ಕೋಳಿಪಾಲಕನ ಹುದ್ದೆ ನೀಡಿತು . 

ನರಿಗೆ ತುಂಬ ಸಂತೋಷವಾಯಿತು. ತಕ್ಷಣವೇ ಹಳ್ಳಿಗೆ ಓಡಿತು . ಕತ್ತಲಾಗುತ್ತಲೇ ತನ್ನ 
ಸುಫರ್ದಿನಲ್ಲಿರುವವರನ್ನು ಕಾಣಲು ಹೋಯಿತು. ಅಂದಿನಿಂದ ಅದು ಪ್ರತಿದಿನವೂ ಕೋಳಿ 


* ಯುರೋಪಿನಲ್ಲಿರುವ ಮಾಂಸಾಹಾರಿಯಾದ ಮುಂಗುಸಿಯನ್ನು ಹೋಲುವ ಒಂದು 
ಪ್ರಾಣಿ. - ಸಂ . 


ಹಂಜರಗಳಿಗೆ ಭೇಟಿಕೊಡ ತೊಡಗಿತು . ಪ್ರತಿ ಬಾರಿ ಹೋದಾಗಲೂ ಒಂದೆರಡು ಕೋಳಿಗಳನ್ನು 
ಕದ್ದು ತಿನ್ನುತ್ತಿತ್ತು . 

ಒಂದು ದಿನ ಈ ಕೋಳಿಗಳ ಮಾಲೀಕನಾಗಿದ್ದ ರೈತ ಹಂಜರದ ಬಳಿಯೇ ಕಾದು ಕೂತಿದ್ದ. 
ನರಿ ಬಂದು ಕೋಳಿಗಳ ಮೇಲೆ ಎರಗಿದ ಕೂಡಲೇ ಅವನು ಅದನ್ನು ಅದರ ಬಾಲದಿಂದ ಹಿಡಿದು 
ಅದಕ್ಕೆ ಎಂತಹ ಜೋರು ಏಟು ಕೊಟ್ಟನೆಂದರೆ ನರಿ ಸತ್ತೇ ಬಿಡುವುದರಲ್ಲಿತ್ತು . ಆಮೇಲೆ ಅವನು 
ಅದರ ಬಾಲಕ್ಕೆ ಒಂದು ಹಗ್ಗ ಕಟ್ಟಿ ಅದನ್ನು ಬೇಲಿ ಕಂಬಕ್ಕೆ ನೇತು ಹಾಕಿ ಮಲಗಲು 
ಹೋದ. 

ಸ್ವಲ್ಪ ಹೊತ್ತಾದ ಮೇಲೆ ನರಿಗೆ ಜೀವ ಬಂದಂತಾಯಿತು. ಅದು ಹಗ್ಗವನ್ನು ಜಗ್ಗಿ ಎಳೆದು 
ಹರಿಯಲು ಯತ್ನಿಸಿತು. ಆಗಲಿಲ್ಲ. ಆಮೇಲೆ ತುಂಬ ನೋವಾದರೂ ಸರಿಯೆ ಎಂದು ತನ್ನ 
ಬಾಲಕ್ಕೇ ಹಲ್ಲು ಹಾಕಿ ಜೋರಾಗಿ ಕಚ್ಚಿತು. ಬಾಲ ಕತ್ತರಿಸಿಕೊಂಡು ಬಿದ್ದಿತು. ಬಿಡುಗಡೆ 
ಹೊಂದಿದ ನರಿ ಓಟ ಕಿತ್ತಿತು. 

“ ಈಗ ನಾನೇನು ಮಾಡಲಿ ? ” ಎಂದದು ತನ್ನಲ್ಲೇ ಯೋಚನೆ ಮಾಡ ತೊಡಗಿತು. “ ಇತ 
ರರ ಮುಂದೆ ಹೇಗೆ ಕಾಣಿಸಿಕೊಳ್ಳೋದು? ಅವರು ಇನ್ನೆಷ್ಟು ಮಾತ್ರವೂ ನನ್ನ ಮಾತು ಕೇಳೊಲ್ಲ. 
ನನ್ನ ಹಿಂದೆ ನಗಾಡ್ತಾರೆ, ಅಷ್ಟೆ . ಆದರೆ ಅದು ಪರವಾಗಿಲ್ಲ . ನನಗೆ ಸಿಂಹದ್ದೇ ಯೋಚನೆ. ನನ್ನ 
ಬಾಲದ ವಿಷಯ ಕೇಳಿದರೆ ಏನು ಹೇಳೋದು? ಬಾಲವಿಲ್ಲದ ರಾಜ್ಯಪಾಲ ! ನಾಚಿಕೆಗೇಡು ! 
ಆ ರೈತ ನನ್ನನ್ನು ಕೊಂದು ಹಾಕಿದ್ದರೇ ಚೆನ್ನಾಗಿತ್ತು ! ಸರಿ, ಇನ್ನೇನು ಮಾಡೋಕಾಗುತ್ತೆ ? ಬಾಲ 
ಇಲ್ಲದೆ ಇದ್ದರೂ ಹೇಗೋ ಜೀವನವನ್ನಂತೂ ಸಾಗಿಸಬೇಕಲ್ಲ. ಮೊಲದ ಗುಡಿಸಿಲಿಗೆ ಹೋಗಿ 
ಗಾಯ ಮಾಯುವವರೆಗೂ ಅಲ್ಲೇ ಇದ್ದರಾಯಿತು. ” 

ಹೀಗೆ ನಿರ್ಧರಿಸಿ ಅದು ನೇರವಾಗಿ ಮೊಲದ ಗುಡಿಸಿಲಿಗೆ ಹೋಯಿತು. 

“ಮೊಲ, ಮೊಲ, ಇವತ್ತು ರಾತ್ರಿ ನಿನ್ನ ಮನೆಯಲ್ಲಿ ಇರಲು ಅವಕಾಶ ಕೊಡು. ನಿನಗೂ 
ಎಂದಾದರೂ ಸಹಾಯ ಮಾಡ್ತೀನಿ. ” 

“ ಇಲ್ಲಪ್ಪ . ನನ್ನ ಮನೆಯಲ್ಲಿ ಎಲ್ಲಿ ಜಾಗ ಇದೆ. ನನ್ನ ಮಕ್ಕಳಿಗೇ ಜಾಗ ಸಾಲದು.” 

“ ಏನು ಅನ್ನೋದು ನೀನು ? ಬಾಗಿಲು ತೆಗೆ ಮೊದಲು . ಯಾರ ಜೊತೆ ಮಾತಾಡ್ತಿದೀನಿ 
ಅಂದುಕೊಂಡಿದೀಯ ? ನಾನು ಹೊಲದ ರಾಜ್ಯಪಾಲ , ಕೋಳಿಗಳ ಮೇಲ್ವಿಚಾರಕ , ರಾಜನ 
ಕೆಲಸದ ಮೇಲೆ ಬಂದಿದೀನಿ. ” 

ಮೊಲ ಹೆದರಿ ಬಾಗಿಲು ತೆರೆಯಿತು. ನರಿ ಒಳಗೆ ಹೋದದ್ದೇ ಮೊಲದ ಮಕ್ಕಳನ್ನು ಹಾಸಿಗೆ 
ಯಿಂದ ಹೊರಕ್ಕೆ ಹಾಕಿ ತಾನೇ ಅದರ ಮೇಲೆ ಮಲಗಿತು . ಮೊಲ ಏನೂ ಹೇಳಲಿಲ್ಲ. ನರಿಗೆ 
ಎಲ್ಲಿ ಕೋಪವಾಗುತ್ತೋ ಅಂತ ಅದಕ್ಕೆ ಹೆದರಿಕೆ. 

ಸ್ವಲ್ಪ ಹೊತ್ತಾದ ಮೇಲೆ ಮೊಲ ತನ್ನ ಮಕ್ಕಳಿಗೆ ಆಹಾರ ತರಲು ಹೋಯಿತು. ನರಿಗೆ 
ಅಷ್ಟು ಹೊತ್ತಿಗಾಗಲೇ ತುಂಬ ಹಸಿವಾಗಿತ್ತು . ಅದು ಒಂದು ಮೊಲದ ಮರಿಯನ್ನು ಹಿಡಿದು 
ತಿಂದು ಹಾಕಿತು . 

ಮೊಲ ಹಿಂದಿರುಗಿ ಬಂದಿತು . ನೋಡುತ್ತೆ - ಒಂದು ಮರಿ ಇಲ್ಲ ! 

“ಪೂಜ್ಯರೇ , ನನ್ನ ಒಂದು ಮರಿ ಎಲ್ಲಿ ? ” ಅದು ನರಿಯನ್ನು ನಮ್ರತೆಯಿಂದ 
ಕೇಳಿತು . 

“ ನನ್ನನ್ನು ಏನು ಕೇಳೀಯ ನಿನ್ನ ಮರಿಗಳ ವಿಷಯ ? ಎಷ್ಟು ಧೈರ್ಯ ನಿನಗೆ ! ನಾನೇನು 
ನಿನ್ನ ಮರಿಗಳ ದಾದಿಯೇ ? ” ನರಿ ಜಬರ್ದಸ್ತಿನಿಂದ ಹೇಳಿತು . “ ನಿನಗೆ ನೂರು ಮರಿಗಳಿರಬಹುದು . 
ನಾನೇನು ಅವುಗಳನ್ನು ಎಣಿಸುತ್ತ ಕೂತಿರಬೇಕೆ? ನಿನಗೆ ಜೀವದಿಂದ ಇರಬೇಕು ಅಂತ ಆಸೆ 
ಇದ್ದರೆ ಹೀಗೆಲ್ಲ ಮಾತನಾಡುವುದನ್ನು ನಿಲ್ಲಿಸು . ಅಲ್ಲದೆ ರಾಜನ ಕೋಪದಿಂದ ಪಾರಾಗಬೇಕು 
ಅನ್ನುವುದಾದರೆ ಸರಿಯಾದ ನಡವಳಿಕೆಯನ್ನು ಕಲಿ. ” 

ಮೋಲ ಗುಡಿಸಿಲಿನಿಂದ ಹೊರಹೋಯಿತು, ಅತ್ತಿತು. ಮತ್ತೆ ಆಹಾರ ತರಲು ಹೋಯಿತು . 
ಹಿಂದಿರುಗಿದಾಗ ನೋಡುತ್ತೆ – ಇನ್ನೂ ಒಂದು ಮರಿ ಇಲ್ಲ. ಮೊಲ ಒಂದು ಮಾತೂ ಆಡಲಿಲ್ಲ. 
ಉಳಿದಿದ್ದ ಮರಿಗಳಿಗೆ ಆಹಾರ ಕೊಟ್ಟು ಮನೆಯಿಂದ ಹೊರ ಹೋಗಿ ಗಟ್ಟಿಯಾಗಿ ಅಳುತ್ತ 
ಕುಳಿತುಕೊಂಡಿತು . 

ಅಷ್ಟು ಹೊತ್ತಿಗೆ ಇನ್ನೊಂದು ಮೊಲ – ಅದರ ನೆರೆಮನೆಯದು - ಅದರ ಬಳಿಗೆ ಬಂದಿತು . 
ಕೇಳಿತು : 

“ ಯಾಕೆ ಅಳುತಿದೀಯ , ತಮ್ಮ ? ” 

“ ಅಳದೆ ಏನು ಮಾಡಲಿ ? ನರಿ ನನ್ನ ಮನೆಯಲ್ಲಿ ವಾಸಮಾಡುತ್ತ ನನ್ನ ಮರಿಗಳನ್ನೆಲ್ಲ 
ತಿಂದು ಹಾಕುತ್ತ ಇದೆ. ಒಂದು ಮಾತೂ ಆಡೋ ಹಾಗಿಲ್ಲ. ರಾಜನಿಗೆ ಹೇಳಿ ಶಿಕ್ಷೆ ಮಾಡಿಸ್ತೀನಿ 
ಅಂತ ಹೆದರಿಸುತ್ತೆ . ” 

“ ನೀನೇ ರಾಜನ ಬಳಿಗೆ ಹೋಗಿ ಯಾಕೆ ದೂರುಕೊಡಬಾರದು ? ” 

“ ಅದರಿಂದ ಏನು ಪ್ರಯೋಜನ ? ನಮ್ಮಂಥವರು ಎಷ್ಟು ದೂರು ಕೊಟ್ಟರೂ ಒಂದೇ . 
ಅದು ರಾಜನವರೆಗೂ ತಲುಪೋದೇ ಇಲ್ಲ. ಅವನ ಸುತ್ತಮುತ್ತ ಇರೋರೆಲ್ಲ ನರಿಯ ಸ್ನೇಹಿತರೇ . 
ಯಾರೂ ನಮ್ಮ ಪರವಾಗಿ ಒಂದು ಮಾತೂ ಹೇಳೊಲ್ಲ. ” 

ಪಕ್ಕದ ಮನೆಯ ಮೊಲ ಹೊರಟು ಹೋಯಿತು. ಮೊದಲ ಮೊಲ ತನ್ನ ಮನೆಗೆ ಹಿಂದಿ 
ರುಗಿತು . ಬಾಗಿಲು ತೆರೆದು ನೋಡುತ್ತೆ - ಅದಕ್ಕೆ ಸಿಡಿಲು ಬಡಿದಂತಾಯಿತು - ಒಂದು ಮರಿಯ 
ಇಲ್ಲ ! ನರಿಗೆ ಮುಖ ತೋರಿಸಲೂ ಹೆದರಿ ಅದು ಹೊಲಕ್ಕೆ ಓಡಿ ಹೋಗಿಕುಳಿತು ಗಟ್ಟಿಯಾಗಿ 
ಅಳ ತೊಡಗಿತು . ಅಷ್ಟು ಹೊತ್ತಿಗೆ ಒಂದು ತೋಳ ಆ ಕಡೆ ಬಂದಿತು . ಮೊಲವನ್ನು ಕಂಡು 
“ ಯಾಕೆ ಅಳುತ್ತಿದೀಯ ? ” ಅಂತ ಕೇಳಿತು . 

“ ಅಳದೆ ಏನು ಮಾಡಲಿ, ನರಿ ನನ್ನ ಮನೆ ಹೊಕ್ಕು ನನ್ನ ಮರಿಗಳನ್ನೆಲ್ಲ ತಿಂದು 
ಹಾಕಿದೆ. ನನಗೆ ಒಳಕ್ಕೆ ಹೋಗೋಕೆ ಭಯ . ಹೋದರೆ ನನ್ನನ್ನೂ ತಿಂದು ಹಾಕಿ 
ಬಿಡುತ್ತೆ . ” 

“ ಅಳಬೇಡ, ಮೊಲ, ನಾನು ನಿನ್ನ ಜೊತೆಗೆ ಬಡ್ತೀನಿ. ಅದನ್ನು ಹೊರಕ್ಕೆ ಓಡಿಸ್ತೀನಿ.” 
ಅವು ಗುಡಿಸಿಲಿಗೆ ಹೋದವು. ತೋಳ ಬಾಗಿಲ ಬಳಿ ಹೋಗಿಕೂಗಿ ಹೇಳಿತು : 
“ ಯಾರದು ಮನೆಯಲ್ಲಿ ಸೇರಿಕೊಂಡಿರೋದು? ಹೊರಕ್ಕೆ ಬಂದು ಮೊಲಕ್ಕೆ ಶಾಂತಿಯಿಂದಿ 
ರಲು ಬಿಡಿ ! ” 

“ ನಾನು ನರಿ , ಹೊಲಗಳ ರಾಜ್ಯಪಾಲ . ಯಾರದು ನನ್ನ ಜೊತೆ ಹೀಗೆ ಮಾತನಾಡುವ 
ಸಾಹಸ ಮಾಡುತ್ತಿರೋದು? ” 

“ಓಹ್ , ನೀನಾ, ನರಿ ! ” ತೊಳ ಹೇಳುತ್ತೆ . ನಿನಗೆ ನಾಚಿಕೆಯಾಗಬೇಕು. ಬಡಪಾಯಿ 
ಮೊಲಕ್ಕೆ ತೊಂದರೆ ಕೊಡುತ್ತಿದ್ದೀಯಲ್ಲ! ಬೇಡ, ಸುಮ್ಮನೆ ಹೊರಕ್ಕೆ ಬಾ !” 
- “ನೀನು ನನ್ನ ವಿಷಯದಲ್ಲೆಲ್ಲ ತಲೆ ಹಾಕೋಕೆ ಬರಬೇಡ, ತೋಳ, ನಿನ್ನ ವಿಷಯ ನೀನು 
ನೋಡಿಕೋ ಹೋಗು” ನರಿ ಹೇಳಿತು . 

ನರಿಯೊಂದಿಗೆ ವಾದ ಮಾಡುವುದರಲ್ಲಿ ಏನೂ ಪ್ರಯೋಜನವಿಲ್ಲ ಎಂದು ಕಂಡುಕೊಂಡ 
ತೋಳ ರಾಜನ ಬಳಿಗೆ ಹೋಗಿ ನರಿಯ ಮೇಲೆ ದೂರುಕೊಟ್ಟಿತು. ಸಿಂಹ ತಕ್ಷಣವೇ ನರಿಯನ್ನು 
ಕರೆತರುವಂತೆ ಜಿಂಕೆಯನ್ನು ಕಳುಹಿಸಿ ಕೊಟ್ಟಿತು. ನರಿ ಕಂಡದ್ದೇ ತಡ ಸಿಂಹ ಘರ್ಜಿಸುತ್ತ 
ಕೇಳಿತು : 

“ ಏನು ನೀನು ಇಷ್ಟೆಲ್ಲ ದಾಂದಲೆ ಮಾಡ್ತಿದೀಯ ? ” 
ನರಿ ಅಡ್ಡ ಬಿದ್ದು ತಲೆ ಬಾಗಿ ನಮಸ್ಕರಿಸಿ, ಹೇಳಿತು : 
“ಮಹಾಪ್ರಭು ! ನನ್ನನ್ನು ದಂಡಿಸಬೇಡಿ, ಮೊದಲು ನನ್ನ ಮಾತು ಕೇಳಿ! ” 
"ಹೇಳು, ಏನದು ನಿನ್ನ ಮಾತು .” 

“ಮಹಾಪ್ರಭು. ನನಗೆ ಗೊತ್ತು , ತೋಳಹೊಟ್ಟೆಕಿಚ್ಚಿನಿಂದ ನನ್ನ ಮೇಲೆ ನಿಮಗೆ ಏನೇನೋ 
ಹೇಳಿದೆ, ಅಂತ . ನಿಜ ಹೇಳೊದಾದರೆ , ತೋಳನೇ ತಪ್ಪಿತಸ್ಥ , ನಾನಲ್ಲ , ತೋಳನೇ ಮೊಲದ 
ಮರಿಗಳನ್ನು ತಿಂದು ಹಾಕಿರೋದು. ನಾನು ಮೊಲದ ರಕ್ಷಣೆಗೆ ಹೋದಾಗ ತೋಳ ನನ್ನ ಬಾಲ 
ವನ್ನೂ ಕಡಿದು ಹಾಕಿತು . ನೋಡಿ, ಮಹಾಪ್ರಭು, ನೀವೇ , ಅದು ನನಗೆ ಏನು ಮಾಡಿದೆ 
ಅಂತ. ನಾನು ಬಾಲವಿಲ್ಲದ ನರಿ ಆಗಿಬಿಟ್ಟಿದ್ದೇನೆ. ಹೀಗೆ ನಾನು ಬಾಳೊದಾದರೂ ಹೇಗೆ, 
ಹೇಳಿ, ಮಹಾಪ್ರಭು. ಇಷ್ಟೆಲ್ಲ ಮಾಡಿ ತೋಳ ನನ್ನ ಮೇಲೇ ತಪ್ಪ ಹೊರಿಸ್ತಿದೆ, 
ನೋಡಿದಿರಾ ! ” 

ಸಿಂಹ ಯೋಚನೆ ಮಾಡಿ , ಯೋಚನೆ ಮಾಡಿ, ಕೊನೆಗೆ ಹೇಳಿತು : 

“ ಸರಿ , ನೀನು ಹೇಳೋದು ನಿಜ, ಅನ್ನು , ಆದರೆ ನೀನು ಇನ್ನೆಷ್ಟು ಮಾತ್ರವೂ ರಾಜ್ಯಪಾಲ 
ನಾಗಿರಲಾರೆ . ನೀನು ನನ್ನ ಬಳಿಯೇ ಕೆಲಸಕ್ಕಿರು. ನನ್ನ ಅರಮನೆಯ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ 
ನಾಗಿರು . ತೋಳನಿಗೆ ತಕ್ಕ ಶಿಕ್ಷೆ ಕೊಡುತ್ತೇನೆ. ” 

ಅದು ತೋಳಕ್ಕೆ ಹೇಳಿ ಕಳುಹಿಸಿ ಮತ್ತೆ ತಾನೇ ಚಿಂತಿಸ ತೊಡಗಿತು . ಇವರಿಬ್ಬರಲ್ಲಿ ಯಾರು 
ಸರಿ, ಯಾರು ತಪ್ಪು ಅಂತ ಹೇಳೋದೇ ಕಷ್ಟ . ಆದರೆ ಇಬ್ಬರೂ ಸುಳ್ಳು ಹೇಳುತ್ತಿದಾರೆ , ಅನಿ 
ಸಿತು ಅದಕ್ಕೆ ಇವರಲ್ಲಿ ಒಬ್ಬರು ಸಾಯಲು ಅರ್ಹರು, ಆದರೆ ಯಾರು ಅನ್ನುವ ಬಗೆಗೆ ಯೋಚನೆ 
ಮಾಡಬೇಕು. ನರಿಯೇನೋ ಕುತಂತ್ರಿಯೇ ಸರಿ . ಆದರೆ ಅದರ ಕುತಂತ್ರವೇ ಅಲ್ಲವೇ ತನ್ನನ್ನು 
ರಾಜನನ್ನಾಗಿ ಮಾಡಿದ್ದು ? ಹಾಗಾಗಿ ಅದಕ್ಕೆ ಹೇಗೆ ಶಿಕ್ಷಿಸುವುದು ? ಇನ್ನು ತೋಳ? ನಿಜ, 
ಅದೇನೋ ಕಡಿದು ಮರ ಬೀಳಿಸುವುದರಲ್ಲಿ ನೆರವಾಯಿತು . ಆದರೆ ಅದೇನೂ ಅಂತಹ ಮಹಾ 
ಕೆಲಸವಲ್ಲ - ಯಾವ ಮರ್ಖನೂ ಕಡಿಯಬಲ್ಲ . ತೋಳನಿಗೇ ಶಿಕ್ಷೆ ಕೊಡಬೇಕು ಅಂತ ಕಾಣಿ 
ಸುತ್ತೆ . ಎರಡಕ್ಕೂ ಶಿಕ್ಷೆ ಕೊಡದೆ ಇರುವುದು ಸಾಧ್ಯವಿಲ್ಲ. 

ತೋಳರಾಜನ ಬಳಿಗೆ ಬಂದಿತು . ಸಿಂಹ ಮಾತುಕತೆಗೆ ಒಂದಿಷ್ಟೂ ಅವಕಾಶ ನೀಡದೆ ತೋಳ 
ನನ್ನು ತನ್ನ ಪಂಜಾದಿಂದ. ಅಪ್ಪಳಿಸಿ ಕೊಂದಿತು . 

ಈ ವಿಷಯ ಇತರ ತೋಳಗಳಿಗೆ ತಿಳಿದಾಗ ಅವಕ್ಕೆ ತುಂಬ ಕೋಪ ಬಂದಿತು . ಪ್ರತೀಕಾ 
ರಕ್ಕೆ ಹಂಬಲಿಸಿದವು. ತಮ್ಮ ಸೋದರನ ಸಾವಿಗಾಗಿ ನರಿಗೆ ತಕ್ಕ ಶಾಸ್ತಿ ಮಾಡಬೇಕು, ಸಿಂಹಕ್ಕೂ 
ಪಾಠ ಕಲಿಸಬೇಕು, ಅದಕ್ಕೆ ಯುದ್ದವೊಂದಷ್ಟೆ ಮಾರ್ಗ ಎಂದು ಅವಕ್ಕೆ ಕಂಡುಬಂದಿತು . ಅವು 
ಹಿಂಡುಗೂಡಿ ನರಿಗಳ ಮನೆಗಳ ಮೇಲೆ ದಾಳಿ ಮಾಡಿದವು, ದೊಡ್ಡವು ಚಿಕ್ಕವು ಎನ್ನದೆ ಎಲ್ಲ 
ನರಿಗಳನ್ನೂ ನಾಶಮಾಡ ತೊಡಗಿದವು. 

ಈ ಯುದ್ಧ ಮುಗಿಯುತ್ತಲೇ ಇರಲಿಲ್ಲವೇನೋ . ಆದರೆ ಅಷ್ಟರಲ್ಲೇ ತಮ್ಮ ಕೋಳಿಗಳನ್ನೂ 
ಕುರಿಗಳನ್ನೂ ಕರುಗಳನ್ನೂ ಕಳೆದುಕೊಳ್ಳುತ್ತಿದ್ದ ರೈತರು ಸಹನೆಯನ್ನು ಕಳೆದುಕೊಂಡು ಕಳ್ಳರ 
ನ್ನೆಲ್ಲ ಹಿಡಿದು ಹಾಕಲು ನಿರ್ಧರಿಸಿದರು . ಸಿಂಹವನ್ನು ಹಿಡಿದು ಬೋನಿನಲ್ಲಿಟ್ಟರು. ತೋಳಗಳನ್ನು 
ಚೆನ್ನಾಗಿ ಥಳಿಸಿದರು . ಇತರ ಪ್ರಾಣಿಗಳು ಎಷ್ಟು ಅಂಜಿದವೆಂದರೆ ಸಿಕ್ಕಿದೆಡೆಯಲ್ಲೇ ಅಡಗಿ ಕುಳಿತು 
ಪ್ರಾಣ ಉಳಿಸಿಕೊಂಡವು. 

ಇದಾದ ಮೇಲೆ ಗ್ರಾಮಾಂತರದಲ್ಲಿ ಶಾಂತಿ ಶಿಸ್ತು ಪುನಃ ಸ್ಥಾಪಿತವಾಯಿತು. ಎಲ್ಲರೂ 
ಮತ್ತೆ ನೆಮ್ಮದಿಯಿಂದ ಬಾಳ ತೊಡಗಿದರು . 

ಬಾವಿಗೆ ಬಿದ್ದ ಮೃಗರಾಜ

ತುಂಬ ತುಂಬ ಕಾಲದ ಹಿಂದೆ ಒಂದು ದಟ್ಟವಾದ ಕಾಡಿನಲ್ಲಿ ಒಂದು ಸಿಂಹ ವಾಸಿಸುತ್ತಿತ್ತು , 
ಅದು ಭಾರಿಯಾಗಿತ್ತು , ಭಯಂಕರವಾಗಿತ್ತು . ಅದು ಒಮ್ಮೆ ಗರ್ಜಿಸಿದರೆ ಸಾಕು ಕಾಡಿನ ಪ್ರಾಣಿ 
ಗಳೆಲ್ಲ ಒಣಗಿದ ಆಸ್ಪೆನ್ ಮರದ ಎಲೆಗಳಂತೆ ಹೆದರಿಕೆಯಿಂದ ತರತರ ನಡುಗುತ್ತಿದ್ದವು. ಅದು 
ಬೇಟೆಗೆ ಹೊರಗೆ ಹೊರಟಾಗಲೆಲ್ಲ ತನ್ನ ಎದುರಿಗೆ ಬಂದ ಪ್ರಾಣಿಗಳನ್ನೆಲ್ಲ ಕೊಂದು, ಸಿಗಿದು , 
ಚೂರುಗಳನ್ನು ಸುತ್ತಮುತ್ತ ಚೆಲ್ಲುತ್ತಿತ್ತು . ಕಾಡುಹಂದಿಗಳ ಗುಂಪು ಸಿಕ್ಕಿದರೂ ಅಷ್ಟೆ , ಎಲ್ಲವು 
ಗಳನ್ನೂ ಕತ್ತು ಹಿಸುಕಿ ಕೊಂದು ಎಸೆಯುತ್ತಿತ್ತು . ತನಗೆ ತಿನ್ನುವುದಕ್ಕೆ ಮಾತ್ರ ಒಂದೇ ಒಂದು 
ಕಾಡುಹಂದಿಯನ್ನು ಉಳಿಸಿಕೊಳ್ಳುತ್ತಿತ್ತು . 
- ಕಾಡಿನ ಪ್ರಾಣಿಗಳೆಲ್ಲ ಸತತವಾಗಿ ಜೀವ ಭಯದಿಂದ ವಾಸಿಸುತ್ತಿದ್ದವು. ಇಂತಹ ಪರಿಸ್ಥಿತಿ 
ಯನ್ನು ಹೀಗೆಯೇ ಹೆಚ್ಚು ಕಾಲ ಬಿಟ್ಟುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಭಾವಿಸಿ ಅವು 
ಮುಂದೇನು ಮಾಡುವುದು ಅನ್ನುವುದನ್ನು ನಿರ್ಧರಿಸಲು ಒಂದು ದಿನ ಸಭೆ ಸೇರಿದವು. 

ಕರಡಿಯೇ ಮೊದಲು ನಿಂತು ಮಾತನಾಡಿದುದು. 

“ ಇಲ್ಲಿ ಕೇಳಿ, ನನ್ನ ಮಿತ್ರರೇ ! ” ಎಂದದು ಮಾತು ಪ್ರಾರಂಭಿಸಿತು. “ ಸಿಂಹ ಪ್ರತಿದಿನವೂ 
ನಮ್ಮನ್ನು ಹತ್ತಕ್ಕೆ ಕಮ್ಮಿ ಇಲ್ಲದಂತೆ ಕೊಲ್ಲುತ್ತಿದೆ. ಕೆಲವು ದಿನ ಇಪ್ಪತ್ತು ಪ್ರಾಣಿಗಳನ್ನು 
ಕೊಂದುದೂ ಉಂಟು. ಆದರೆ ಅದು ತಿನ್ನುವುದು ಮಾತ್ರ ಒಂದನ್ನಷ್ಟೆ. ಹೆಚ್ಚೆಂದರೆ 
ಎರಡನ್ನು . ಆದ್ದರಿಂದ ಉಳಿದ ಪ್ರಾಣಿಗಳು ನಿರರ್ಥಕವಾಗಿ ಸಾಯುತ್ತವೆ ಎಂದಾಯಿತು. 
ಏಕೆಂದರೆ ಪ್ರತಿದಿನವೂ ಅದಕ್ಕೆ ತಿನ್ನಲು ಹೊಸ ಪ್ರಾಣಿಯೇ ಬೇಕು. ನಿನ್ನೆ ಕೊಂದ ಪ್ರಾಣಿಯನ್ನೂ 
ಅದು ತಿನ್ನುವುದಿಲ್ಲ. ಆದ್ದರಿಂದ ನಾನು ಒಂದು ಸಲಹೆ ಮಾಡುತ್ತೇನೆ. ನಾವು ಸಿಂಹದ ಬಳಿಗೆ 
ಹೋಗಬೇಕು, ಮಾತನಾಡಬೇಕು , ವಾದಿಸಬೇಕು . ಅದು ತನ್ನ ಈ ವರ್ತನೆಯನ್ನು ಬದಲಿಸಿಕೊಳ್ಳು 
ವಂತೆ ಮಾಡಬೇಕು. ” 

“ ಓಹೋ , ಹೇಳೋದೇನೋ ಸುಲಭ , ಆದರೆ ಹೋಗಿ ಮಾತನಾಡು , ನೋಡೋಣ!” 
ಅಂತ ತೋಳ ಪ್ರತಿಹೇಳಿತು . “ಸಿಂಹ ಎಲ್ಲಾದರೂ ನಮ್ಮ ಮಾತು ಕೇಳುತ್ತಯೇ ? ಅಷ್ಟೇ 
ಅಲ್ಲ ನಾವು ಯಾರನ್ನಾದರೂ ಕಳುಹಿಸಿದರೆ ಅದು ಅದನ್ನೂ ಕೊಂದು ಹಾಕುತ್ತದಷ್ಟೆ .” 

“ ಹಾಗೇನೂ ಇಲ್ಲ ! ” ಅಂತ ಕರಡಿ ಮತ್ತೆ ತನ್ನ ವಾದವನ್ನೇ ಸಮರ್ಥಿಸಿತು. ಆದರೆ ಈಗಿನ 
ಪ್ರಶ್ನೆ ಎಂದರೆ, ಯಾರನ್ನು ಕಳುಹಿಸುವುದು , ಅಂತ. ” 

“ನೀನೇ ಯಾಕೆ ಹೋಗಬಾರದು ? ” ತೋಳ ಹೇಳಿತು . “ನೀನೇ ನಮ್ಮೆಲ್ಲರಿಗಿಂತ ಭಾರಿ 
ಗಾತ್ರದವ. ತುಂಬ ಬಲಶಾಲಿಯೂ ಹೌದು.” 

“ಬಲಶಾಲಿಯಾಗಿದ್ದರೇನಂತೆ ! ಸಿಂಹದ ಉಗುರುಗಳು ನನ್ನನ್ನು ಸಿಗಿದು ಹಾಕದೆ ಬಿಟ್ಟಾ 
ವೆಯೇ ? ನೀನೇ ಹೋಗೋದು ಹೆಚ್ಚು ಉತ್ತಮ , ತೋಳರಾಯ , ನೀನು ನನಗಿಂತ ಜೋರಾಗಿ 
ಓಡಬಲ್ಲೆ.” 

“ ಅದೇನೂ ನನ್ನನ್ನು ಸಿಂಹದಿಂದ ರಕ್ಷಿಸೋಲ್ಲ” ಎಂದಿತು ತೋಳ, “ಸಿಂಹವನ್ನು ಮಾರಿಸಿ 
ಓಡೋಕಾಗುತ್ತೆಯೇ ನನ್ನ ಕೈಲಿ ? ನೀನು ಹೇಳೋದು ಸರಿ ಇಲ್ಲ. ನಾವು ಬೇರೆ ಯಾವುದಾದರೂ 
ಉಪಾಯ ಹುಡುಕಬೇಕು.” 

ಜಿಂಕೆ ಎದ್ದು ನಿಂತು ಹೇಳಿತು : 

“ಮಹಾಶಯರೇ ! ನನಗನಿಸುತ್ತೆ , ನಾವು ಏನೇ ಮಾಡಲಿ , ಬಿಡಲಿ , ಸಿಂಹವನ್ನಂತೂ ಕೆಣಕ 
ಬಾರದು . ನಾವು ಅದರ ಜೊತೆಗೆ ತುಂಬ ನಮ್ರತೆಯಿಂದ ವರ್ತಿಸಬೇಕು.” 

“ಓಹೋಹೋ , ತುಂಬ ಜಾಣ ಮಾತು ಹೇಳಿದೆ, ಅಲ್ಲವೇ ? ನೀನು ಅಷ್ಟು ಬುದ್ದಿವಂತ 
ನಾದರೆ ನೀನೇ ಯಾಕೆ ಹೋಗಿ ಮಾತನಾಡಬಾರದು ? ” ಅದರ ಮಿತ್ರರೆಲ್ಲ ಹೇಳಿದರು . 

“ಓಹ್ , ಇಲ್ಲ, ಇಲ್ಲ . ಅದು ನನ್ನ ಕೈಲಾಗದು. ಸಿಂಹ ನಮ್ಮ ತರಹ ಅಲ್ಲ , ಅದರ ಜೊತೆಗೆ 
ಮಾತನಾಡೋದು ಅಷ್ಟು ಸುಲಭವಲ್ಲ, ಅಂತಷ್ಟೆ ನಾನು ಹೇಳಿದ್ದು . ” 

“ ನಿಜ , ಆದರೆ ಅದರ ಬಳಿಗೆ ಹೋಗೋರು ಯಾರು ? ” 

“ ನರಿಯನ್ನೇಕೆ ಕಳುಹಿಸಬಾರದು ? ಅದು ಒಳ್ಳೆಯ ತಂತ್ರಗಾರ ಪ್ರಾಣಿ. ಅದು ಸಿಂಹದ 
ಜೊತೆ ನಯವಾಗಿ ವ್ಯವಹರಿಸಿ ನಮ್ಮ ಮಾತು ತಿಳಿಸಬಲ್ಲುದು. ” 
“ ಅದೀಗ ಸರಿಯಾದ ವಿಚಾರ ! ನಮ್ಮಲ್ಲಿ ಯಾರಾದರೂ ಈ ಕೆಲಸ ಮಾಡಲು ಸಾಧ್ಯ 
ವಿದ್ದರೆ ಅದು ನರಿಯಷ್ಟೆ !” 

ಅವು ನರಿಯನ್ನು ಕರೆದವು. ಕರಡಿ ಅದಕ್ಕೆ ಹೇಳಿತು : 
“ ನರಿಯಕ್ಕ , ನೀನು ಸಿಂಹದ ಬಳಿಗೆ ಹೋಗಿ ಮಾತನಾಡಬೇಕು ಅಂತ ನಾವು ತೀರ್ಮಾನಿ 
ಸಿದೀವಿ. ನಿನಗೇ ಚೆನ್ನಾಗಿ ಗೊತ್ತಿದೆ ಸಿಂಹ ಹ್ಯಾಗೆ ದಿನದಿನವೂ ನಮ್ಮಲ್ಲಿ ಎಷ್ಟೊಂದು ಪ್ರಾಣಿ 
ಗಳನ್ನು ಕೊಂದು ಹಾಕುತ್ತಿದೆ ಅಂತ ! ” 

“ ಅದು ಸರಿ. ಗೊತ್ತಿದ್ದ ಮಾತ್ರಕ್ಕೇ , ನೀವು ಯಾರೂ ಹೋಗದಿರುವಾಗ ನಾನು ಹೋಗ 
ಬೇಕು, ಅಂತಲೇ ? ಚೀಟಿ ಎತ್ತೋಣ. ಯಾರಿಗೆ ಬಂದರೆ ಅವರು ಹೋಗಲಿ . ” 

“ಉಹೂಂ, ನರಿಯಕ್ಕ , ಅದಾಗೊಲ್ಲ” ಕರಡಿ ಹೇಳಿತು . “ ತುಂಬ ಹೆದರುಪುಕ್ಕಲನಿಗೆ, 
ಅಥವಾ ಏನು ಹೇಳಬೇಕು ಅನ್ನೋದೇ ತಿಳಿಯದ ಪೆದ್ದನಿಗೆ ಚೀಟಿ ಬಂದು ಬಿಟ್ಟರೆ ಏನು 
ಮಾಡೋದು? ಸಿಂಹ ನಮ್ಮ ವಿಷಯದಲ್ಲಿ ನಯವಾಗಿ ವರ್ತಿಸುವಂತೆ ಮಾಡುವುದು ಬಿಟ್ಟು 
ಹೆಚ್ಚು ಕೋಪ ತಾಳುವಂತೆ ಮಾಡಿ ಬಿಟ್ಟರೆ! ಆದ್ದರಿಂದ ಅದೆಲ್ಲ ಆಗೊಲ್ಲ. ನಾವು ತೀರ್ಮಾನ 
ಮಾಡಿದೀವಿ. ನೀನೇ ಹೋಗಬೇಕು, ಹೋಗದಿದ್ದರೆ ನಾವು ನಿನ್ನನ್ನು ಕೊಂದು ಹಾಕ್ತಿವಿ, ಅಷ್ಟೆ ! ” 

ಇದನ್ನು ಕೇಳಿ ನರಿಗೆ ತುಂಬ ಬೇಸರವಾಯಿತು. ಸಿಂಹದ ಬಳಿಗೆ ಹೋದರೂ ಅಪಾಯ , 
ಹೋಗದೆ ಇದ್ದರೂ ಅಪಾಯ ! ತುಂಬ ಯೋಚನೆ ಮಾಡಿ ಅದು ಕೊನೆಗೆ ಹೇಳಿತು : 

“ಸರಿ, ಹಾಗಾದರೆ, ಹೋಗಲೇ ಬೇಕು ಅನ್ನೋದಾದರೆ ಹೋಗ್ತಿನಿ! ಅದೇ ನನ್ನ ಹಣೆಯ 
ಬರಹವೇನೋ !.. ” 

ತುಂಬ ಕಾಲ ನರಿ ಕಾಡಿನಲ್ಲಿ ಅಲೆದಾಡಿತು - ಸಿಂಹದ ಬಳಿಗೆ ಬರುವುದಕ್ಕೂ ಅದಕ್ಕೆ ಭಯ . 
ಒಮ್ಮೆ ಒಂದು ಬದಿಗೆ ಹೋಗುತ್ತೆ , ಮತ್ತೊಮ್ಮೆ ಇನ್ನೊಂದು ಬದಿಗೆ ಹೋಗುತ್ತೆ ... ಅದು 
ಉಪಾಯ ಯೋಚನೆ ಮಾಡುತ್ತದೆ - ಸಿಂಹಕ್ಕೆ ಹೇಗೆ ಮೋಸಮಾಡುವುದು ? ಸಾವೆಂದರೆ 
ಅದಕ್ಕೆ ತುಂಬ ಭಯ . 
ಹೋಗುತ್ತಾ ಹೋಗುತ್ತಾ ಅದಕ್ಕೊಂದು ಬಾವಿ ಸಿಕ್ಕಿತು. 

“ ಹೇಗಿದ್ದರೂ ಸಾಯಬೇಕಾಗುತ್ತೆ . ಈ ಬಾವಿಯಲ್ಲೇ ಬಿದ್ದು ಯಾಕೆ ಸಾಯಬಾರದು ? ” 
ಎಂದದು ತನ್ನಲ್ಲೇ ಹೇಳಿಕೊಂಡಿತು . “ ಆ ಭೀಕರ ಸಿಂಹದ ಕೈಗೆ ಸಿಕ್ಕಿ ಮೈ ಕೈ ಹರಿಸಿಕೊಳೊ 
ದಕ್ಕಿಂತ ಇದೇ ವಾಸಿ ! ” 

ಹಾಗೆಂದುಕೊಂಡು ಅದು ಬಾವಿ ಸುತ್ತ ಒಮ್ಮೆ ಹೋಗಿ ಬಂದಿತು , ಮಸುನೋಡಿತು , 
ಆಮೇಲೆ ಒಳಕ್ಕೆ ಬಗ್ಗಿ ನೋಡಿತು . ಓಹ್ , ಏನಾಶ್ಚರ್ಯ, ಬಾವಿಯೊಳಗೆ ನೀರಿನಿಂದ ಅದರ 
ರೀತಿಯದೇ ಮತ್ತೊಂದು ನರಿ ಇದರತ್ವವೇ ನೋಡುತ್ತಿದೆ ! ಅದು ತನ್ನ ಸ್ವಂತ ಪ್ರತಿಬಿಂಬ 
ಎಂದು ನರಿಯ ಮನಸ್ಸಿಗೆ ಕೂಡಲೇ ಹೊಳೆಯಲಿಲ್ಲ . ನರಿ ತಲೆ ಆಡಿಸಿತು - ಬಾವಿಯೊಳಗಿನ 
ನರಿಯ ಪ್ರತಿಯಾಗಿ ತಲೆ ಆಡಿಸಿತು . ನರಿ ನಾಲಿಗೆ ಮುಂಚಾಚಿತು - ಬಾವಿಯೊಳಗಿನ ನರಿಯ 
ಹಾಗೆಯೇ ಮಾಡಿತು. 

“ಇದು ನೀರಿನೊಳಗೆ ನನ್ನ ಪ್ರತಿಬಿಂಬ ಅಷ್ಟೆ ” ಎಂದು ನರಿ ಅರ್ಥಮಾಡಿಕೊಂಡಿತು . “ಸರಿ, 
ಈಗ ಗೊತ್ತಾಯಿತು, ಸಿಂಹಕ್ಕೆ ಹೇಗೆ ಮೋಸ ಮಾಡಬಹುದು, ಅಂತ . ಸಿಂಹಕ್ಕೆ ಈ ವಿಷಯ 
ಗೊತ್ತಿರಬಾರದಷ್ಟೆ . ಹಾಗಿದ್ದರೆ ನಾನು ಅದಕ್ಕೆ ಮೋಸ ಮಾಡಬಹುದು.” 

ಅದು ನೇರವಾಗಿ ಸಿಂಹದ ಗುಹೆಯ ಕಡೆಗೆ ಹೊರಟಿತು . ಕತ್ತಲಾಗುತ್ತಿತ್ತು . ಆದರೂ ನರಿ 
ಹಿಂದಿಗಿಂತ ಹೆಚ್ಚು ಗೆಲುವಾಗಿತ್ತು , ಚುರುಕಿನಿಂದ ನಡೆಯಿತು. 

ಬೇಗನೆಯೇ ಸಿಂಹದ ಗರ್ಜನೆಯ ಧ್ವನಿ ಕೇಳಿ ಬಂದಿತು. ಕೊನೆಗೆ ಸಿಂಹವೇ ಮುಂದೆ ಕಾಣ 
ಬಂದಿತು . ಎಷ್ಟೇ ಧೈರ್ಯ ತಂದುಕೊಂಡರೂ ಪುಕಪುಕನೆ ಹೆದರುತ ನರಿ ಬಾಗಿ ವಂದಿಸಿ 
ಹೇಳಿತು : 

“ಮಹಾಪ್ರಭು, ನಿಮ್ಮಲ್ಲಿ ಒಂದು ವಿಷಯ ಅರಿಕೆ ಮಾಡಿಕೊಳ್ಳಲು ಅಪ್ಪಣೆ ಕೊಡಿ. ನಾನು 
ಯಾಕೆ ಇಲ್ಲಿಗೆ ಬಂದೆ ಅನ್ನೋದನ್ನು ಮೊದಲು ತಿಳಿಸ್ತೀನಿ. ಅದು ಹೀಗಾಯಿತು, ಮಹಾಪ್ರಭು. 
ಇವತ್ತು ನಿಮ್ಮ ಹುಟ್ಟಿದ ಹಬ್ಬ ಅಂತ ಈ ಕಾಡಿನ ಪ್ರಾಣಿಗಳಿಗೆಲ್ಲ ಗೊತ್ತಿತ್ತು . ಅದಕ್ಕೇ ಅವು 
ಬೆಳಿಗ್ಗೆ ನನ್ನನ್ನೂ ಎರಡು ಮೊಲಗಳನ್ನೂ ನಿಮಗೆ ಶುಭಾಶಯ ತಿಳಿಸಲು ಕಳಿಸಿಕೊಟ್ಟವು. ಆದರೆ 
ನಾವು ಬರುತ್ತಾ ಇದ್ದಾಗ ಮಧ್ಯದಲ್ಲಿ ನಿಮ್ಮ ತರಹದೇ ಒಂದು ಮೃಗ ಸಿಕ್ಕಿತು. ಅದು ನಮ್ಮನ್ನು 
ನಿಲ್ಲಿಸಿ ಎಲ್ಲಿಗೆ ಹೋಗುತ್ತಿರೋದು ಅಂತ ಕೇಳಿತು . ನಿಮಗೆ ಹುಟ್ಟಿದ ಹಬ್ಬದ ದಿನ ಶುಭಾಶಯ 
ಹೇಳಲು ಹೋಗ್ತಿದೀವಿ ಅಂತ ಹೇಳಿದಾಗ ಅದಕ್ಕೆ ತುಂಬ ಕೋಪ ಬಂತು. ತಾನೇ ಈ ಕಾಡಿನ 
ರಾಜ , ನೀವಲ್ಲ, ಅಂತ ಅದು ಹೇಳಿತು . ಕಾಡಿನಲ್ಲಿರೋ ಪ್ರಾಣಿಗಳೆಲ್ಲ ತನಗೆ ಅಧೀನವಾಗಿರಬೇಕು, 
ಅಂತ ಹೇಳಿ ನಮ್ಮನ್ನು ಮುಂದಕ್ಕೆ ಹೋಗೋಕೆ ಬಿಡಲಿಲ್ಲ. ಅಯ್ಯೋ , ಬೇಡ, ಬೇಡ. ಇವತ್ತು 
ನಮ್ಮ ಮೃಗರಾಜನ ಹುಟ್ಟಿದ ಹಬ್ಬ . ನಮ್ಮನ್ನು ಅದು ನಿರೀಕ್ಷಿಸುತ್ತ ಇದೆ. ನಾವು ಹೋಗದೆ 
ಇದ್ದರೆ ನಮ್ಮನ್ನು ಕೊಂದು ಹಾಕುತ್ತದಷ್ಟೆ ಅಂತ ನಾನು ಹೇಳಿದೆ. ಅದು ಏನು ಹೇಳಿತು ಅಂತೀರಿ, 
ಮಹಾಪ್ರಭು ! ಅದರ ಹುಟ್ಟಿದ ಹಬ್ಬ ಆದರೆ ನನಗೇನಂತೆ ? ನಾನು ಅದನ್ನೂ ತಿಂದು ಹಾಕ್ತಿನಿ, 
ಅಷ್ಟೆ ! ನನ್ನನ್ನು ಬಿಟ್ಟು ಕೊಡು ಅಂತ ಅದರ ಮನವೊಲಿಸೋಕೆ ನನಗೆ ಅರ್ಧ ದಿನವೇ ಬೇಕಾ 
ಯಿತು. ಕೊನೆಗೆ ಅದು ಮೊಲಗಳನ್ನು ಹಿಡಿದುಕೊಂಡು ನನ್ನನ್ನಷ್ಟೆ ಬಿಟ್ಟು ಕೊಟ್ಟಿತು. ” 

ಇದನ್ನು ಕೇಳಿ ಸಿಂಹದಕೋಪ ನೆತ್ತಿಗೇರಿತು . ಅದಕ್ಕೆ ಹಸಿವೇ ಮರೆಯಿತು. 

“ ಎಲ್ಲಿದೆ ಆ ನೀಚ ಮೃಗ ? ” ಅದು ಗರ್ಜಿಸಿತು . 
“ ಇಲ್ಲೇ , ಹತ್ತಿರದಲ್ಲೇ , ಕಲ್ಲಿನ ಅರಮನೆಯೊಂದರಲ್ಲಿ . ” 

ಸಿಂಹ ಕೆರಳಿ ಕುಪ್ಪಳಿಸಿತು . ಅದು ಮಾಡಿದ ಗರ್ಜನೆ ಕಾಡಿನಲ್ಲೆಲ್ಲ ಪ್ರತಿಧ್ವನಿಸಿತು – ಕಾಡಿನ 
ಮತ್ತೊಂದು ಕೊನೆಯಲ್ಲಿ ಇನ್ನೊಂದು ಸಿಂಹ ಗರ್ಜಿಸುತ್ತಿದ್ದಿತೇನೋ ಅನ್ನುವಂತೆ. 

ನರಿ ಹೇಳಿತು : 
“ನಿಮಗೆ ಅದು ಗರ್ಜಿಸಿದುದು ಕೇಳಿಸಿತೇ , ಮಹಾಪ್ರಭು ? ಅದು ನಿಮ್ಮನ್ನು ಅಣಕಿಸುತ್ತಿದೆ. ” 
ಸಿಂಹಕ್ಕೆ ಇನ್ನೂ ಹೆಚ್ಚು ಕೋಪ ಬಂತು . 

“ ಎಲ್ಲಿದೆ ಅದು ? ಅದನ್ನು ಹರಿದು ತುಂಡುತುಂಡು ಮಾಡ್ತೀನಿ! ” ಎಂದದು ಗರ್ಜಿಸಿತು. 
“ ನನ್ನನ್ನು ಕೆಣಕೋದಕ್ಕೆ ಎಷ್ಟು ಧೈರ್ಯ ಅದಕ್ಕೆ ! ಈ ಕಾಡು ನನ್ನದು. ಬಾ , ಅದರ ಬಳಿಗೆ 
ಹೋಗೋಣ.” 

ನರಿ ಸಿಂಹವನ್ನು ಬಾವಿಯ ಬಳಿಗೆ ಕರೆದೊಯ್ದಿತು. 

ಅದು ದೂರದಲ್ಲಿ ಕಾಣುತ್ತಿದ್ದಾಗಲೇ ಸಿಂಹ ತನ್ನ ಶತ್ರು ಎಲ್ಲಿ ಅಡಗಿದೆ ಎಂದು ತಿಳಿಸು 
ವಂತೆ ನರಿಯನ್ನು ಕೇಳಿತು . 

ನರಿ ಬಾವಿಯನ್ನು ತೋರಿಸುತ್ತ ಹೇಳಿತು : 

“ ಅದು ಅಲ್ಲಿ ಆ ಕಲ್ಲಿನ ಅರಮನೆಯ ಒಳಗೆ ಅಡಗಿಕೊಂಡಿದೆ ಮಹಾಪ್ರಭು ! ನಾನು ಮಾತ್ರ 
ಇನ್ನು ಹೆಚ್ಚು ಹತ್ತಿರ ಬರೋಲ್ಲ. ಅದು ನನ್ನನ್ನು ತಿಂದು ಹಾಕಿ ಬಿಡಬಹುದು ಅಂತ ಹೆದರಿಕೆ 
ನನಗೆ, ನೀವು ಬಾವಿಯ ಹತ್ತಿರ ಹೋಗಿ ಬಾಗಿ ನೋಡಿದರೆ ಕಾಣುತ್ತೆ .” 
- ಸಿಂಹ ಬಾವಿಯ ಬಳಿ ಹೋಗಿ ಬಾಗಿ ನೋಡಿತು . ಅದಕ್ಕೆ ಕಂಡದ್ದೇನು ? - ಮತ್ತೊಂದು 
ಸಿಂಹ ಇದನ್ನೇ ದಿಟ್ಟಿಸಿ ನೋಡುತ್ತಿದೆ! ಇದು ತನ್ನ ಹಲ್ಲುಗಳನ್ನು ಕಟಕಟನೆ ಕಡಿಯಿತು. ಅದೂ 
ಹಾಗೆಯೇ ಮಾಡಿತು. ಆಗ ಈ ಮೃಗರಾಜ ಗಟ್ಟಿಯಾಗಿ ಗರ್ಜಿಸಿ ಬಾವಿಯೊಳಕ್ಕೆ ನೆಗೆಯಿತು. 
ನೀರು ಸಿಡಿದ ಶಬ್ದ ಕೇಳಿ ಬಂದಿತು . ಸಿಂಹ ನೀರಿನಲ್ಲಿ ಬಿದ್ದಿತ್ತು ! ಬಾವಿ ತುಂಬ ಅಗಲವಾಗಿತ್ತು . 
ಅದರ ಕಲ್ಲಿನ ಗೋಡೆಗಳು ತುಂಬ ನಯವಾಗಿದ್ದವು. ಸಿಂಹ ಹತ್ತಿ ಹೊರಬರದಾಯಿತು. ಅದು 
ಅಲ್ಲೇ ಮುಳುಗಿತು. 

ಇದನ್ನೆಲ್ಲ ಕಂಡ ನರಿ ಇತರ ಪ್ರಾಣಿಗಳಿಗೆ ಈ ವಿಷಯ ತಿಳಿಸಲು ಓಡಿತು . ಅವುಗಳ ಬಳಿ 
ಹೋದಾಗ ಅದರ ಮುಖ ಹಿಗ್ಗುತ್ತಿತ್ತು . ಅದನ್ನು ಕಂಡಾಗಲೇ ಅದು ಶುಭ ಸಮಾಚಾರ ತರು 
ತಿದ್ದಿತೆಂದು ಇತರ ಪ್ರಾಣಿಗಳು ಅರಿತವು. 

“ ಏನು ಮೃಗರಾಜನನ್ನು ಕಂಡೆಯಾ, ಇಲ್ಲವೇ ? ” ಅವು ಕೇಳಿದವು. 
“ಕಂಡೆ, ಕಂಡೆ ! ಇನ್ನು ನೀವು ಅದನ್ನು ಸಂಪೂರ್ಣವಾಗಿ ಮರೆಯಬಹುದು. ಅದೀಗ ಸತ್ತಿದೆ. 
ಹೇಗೆ ಸಾಯಿತು, ಗೊತ್ತ ? ನಾನದಕ್ಕೆ ಚೆನ್ನಾಗಿ ಮೋಸ ಮಾಡಿದೆ. ” 

“ಮೋಸ ಮಾಡಿದೆಯ ? ಹೇಗೆ? ” 

ನರಿ ಎಲ್ಲ ಹೇಳಿತು. ಅದನ್ನು ಕೇಳಿದ ಕೂಡಲೇ ಪ್ರಾಣಿಗಳೆಲ್ಲ ಆನಂದದಿಂದ ಕುಣಿದಾಡಿದವು. 
ಅವು ಎಷ್ಟು ಸಂತೋಷಪಟ್ಟವೆಂಬುದನ್ನು ನನ್ನ ನಾಲಿಗೆ ಹೇಳಲಾಗದು, ನನ್ನ ಲೇಖನಿ 
ಬರೆಯಲಾಗದು ! 


ಹಂಸ, ಮುಳ್ಳುನಳ್ಳಿ ಹಾಗೂ ಪೈಕ್ ಮಾನು 


ಹಂಸ ನದಿಯ ತೀರದ ಬಳಿ ಈಜುತ್ತಿತ್ತು . ಕತ್ತು ಬಾಗಿಸಿ ನೀರಿನೊಳಗೆ ನೋಡಿತು . ನೀರಿ 
ನಲ್ಲಿ ಒಂದು ಪೈಕ್ ಮಿಾನು ಈಜಿಕೊಂಡು ಹೋಗುತ್ತಿತ್ತು . ಅದು ಹಂಸವನ್ನು ಕೇಳಿತು : 

“ ದಯವಿಟ್ಟು ಹೇಳು. ಚಳಿಗಾಲದಲ್ಲಿ ನದಿಯ ನೀರು ಗಡ್ಡೆ ಕಟ್ಟಿದಾಗ ನೀನು ಎಲ್ಲಿಗೆ ಹಾರಿ 
ಹೋಗುತ್ತೀಯ ? ” 

“ಅದು ಯಾತಕ್ಕೆ ನಿನಗೆ ? ” 

“ ನಾನೂ ಚಳಿಗಾಲದಲ್ಲಿ ಎಲ್ಲಾದರೂ ಬೆಚ್ಚಗಿನ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳಬೇಕೂಂತ. 
ನೀರ್ಗಲ್ಲಿನ ಕೆಳಗೆ ಹಚ್ಚ ಹೊಸ ಗಾಳಿಯಿಲ್ಲದೆ ಎಂಥ ವಿಶ್ರಾಂತಿ ! ” 

“ ನಾನು ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶಕ್ಕೆ ಹಾರಿ ಹೋಗುತ್ತೇನೆ. ವಸಂತದವರೆಗೂ 
ಅಲ್ಲೇ ಇರುತ್ತೇನೆ.” 
- “ ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು” ಪೈಕ್ ಮಿಾನು ಕೇಳಿಕೊಂಡಿತು . 

“ಓಹೋ , ಅದಕ್ಕೇನಂತೆ, ಹಾಗೇ ಮಾಡು . ಒಟ್ಟಿಗೇ ಹಾರಿ ಹೋದರೆ ಉಲ್ಲಾಸಕರ 
ವಾಗಿರುತ್ತೆ .” 

ಈ ಸಂಭಾಷಣೆಯನ್ನು ಮುಳುನಳ್ಳಿ ಕೇಳಿಸಿಕೊಂಡಿತು . ಅದು ಹೇಳಿತು : 
“ ನನ್ನನ್ನೂ ಕರೆದುಕೊಂಡು ಹೋಗಿ.” 
“ಓಹೋ , ಅದಕ್ಕೇನಂತೆ, ಬಾ , ಹೋಗೋಣ! ನೀನೂ ನಮ್ಮ ಜೊತೆ ಬಂದರೆ ನಮ್ಮ 
ಪಯಾಣ ಇನ್ನೂ ಹೆಚ್ಚು ಉಲ್ಲಾಸಕರವಾಗುತ್ತೆ . ಶರತ್ಕಾಲದವರೆಗೂ ಕಾಯೋಣ. ಯಾವಾಗ 
ಹಾರಿ ಹೋಗೋದು ಅನ್ನೋದನ್ನು ನಾನು ನಿಮಗೆ ತಿಳಿಸುತ್ತೇನೆ. ” 
- ಹಂಸ ಸ್ಪಷ್ಟವಾಗಿಯೇ ಭಾವಿಸಿತ್ತು , ಅವು ನೀರಿನಲ್ಲಿ ಈಜುತ್ತವಾದರೆ ಹಾರಲೂ ಬಲ್ಲವು 
ಅಂತ . 

ಬೇಸಿಗೆ ಕಳೆಯಿತು. ಶರತ್ಕಾಲ ಬಂದಿತು . ಹಂಸ ಹೇಳಿತು : 

“ ಸರಿ, ಮಿತ್ರರೇ , ಬೆಚ್ಚನ ಪ್ರದೇಶಕ್ಕೆ ಹೋಗುವ ಸಮಯ ಬಂದಿದೆ. ಸಿದ್ದರಾಗಿ , ನಾಳೆ 
ಭೋಜನದನಂತರ ದಾರಿ ಹಿಡಿಯಬೇಕು. ” 

ಪೈಕ್ ಮಿಾನು ಈ ವಿಷಯವನ್ನು ಮುಳುನಳ್ಳಿಗೆ ತಿಳಿಸಿತು . ಮುಳುನಳ್ಳಿ ಯೋಚನೆ ಮಾಡಿ 
ಮಾಡಿ ಕೊನೆಗೆ ಹೇಳಿತು : 

“ ಏನು ತಂಗಮ್ಮ , ಪ್ರಯಾಣ ಮಾರ್ಗದಲ್ಲಿ ನೀರಿಲ್ಲದೆ ನಾವು ಜೀವಿಸುವುದಾದರೂ ಹೇಗೆ? 
ಆಹಾರವಿಲ್ಲದೆ ಇರುವುದೆ ? ಪ್ರಯಾಣದ ಕೊನೆಯವರೆಗೂ ಸಾಲುವಂತೆ ಒಂದಿಷ್ಟು ಬುತ್ತಿ 
ಕಟ್ಟಿಕೊಂಡು ಹೋಗೋಣ.” 

“ ಆದರೆ ಅದನ್ನೆಲ್ಲ ಹೇಗೆ ತೆಗೆದುಕೊಂಡು ಹೋಗೋದು? ” ಪೈಕ್ ಮಿಾನು ಕೇಳಿತು. 

“ ಆಹಾರ ಪದಾರ್ಥಗಳನ್ನೆಲ್ಲ ಒಂದು ಬಂಡಿಯಲ್ಲಿ ತುಂಬಿಕೊಳ್ಳೋಣ. ಹಂಸವನ್ನೂ 
ಕರೆಯೋಣ. ಮೂವರೂ ಸೇರಿ ಎಳೆದುಕೊಂಡು ಹೋಗೋಣ. ” 

ಮುಳುನಳ್ಳಿಯ ಪೈಕ್ ಮಾನೂ ಬಂಡಿಯನ್ನು ಸಿದ್ಧಗೊಳಿಸಿದವು. ಅದಕ್ಕೆ ಹುಲ್ಲಿನಿಂದ 
ಎಳೆಪಟ್ಟಿ ಜೋಡಿಸಿದವು. ಹಂಸ ಬರುವುದಕ್ಕಾಗಿಯೇ ಕಾದವು. ಮಾರನೆಯ ದಿನ ಹಂಸ ಬಂದಿತು . 
ಹೇಳಿತು : 

“ ಏನು ಸಿದ್ದವಾಗಿದ್ದೀರ ? ನಾನಾಗಲೇ ಹಾರಿ ಹೊರಟಿದ್ದೇನೆ. ” 

“ ಸಿದ್ದವಾಗಿದ್ದೇವೆ, ಸಿದ್ದವಾಗಿದ್ದೇವೆ ! ಆದರೆ ದಯವಿಟ್ಟು ಈ ಬಂಡಿಯನ್ನು ಎಳೆದು 
ಕೊಂಡು ಹೋಗಲು ಸಹಾಯ ಮಾಡು . ಮೂವರೂ ಎಳೆದುಕೊಂಡು ಹೋಗೋಣ. ಮಾರ್ಗ 
ಮಧ್ಯದಲ್ಲಿ ಉಪಯೋಗಿಸಿಕೊಳ್ಳೋಣ.” 

“ ಆಗಲಿ, ನನ್ನ ಕಾಲಿಗೆ ಕಟ್ಟಿ .” 

ಮುಳುನಳ್ಳಿಯು ಬಂಡಿಯ ಒಂದು ಎಳೆಪಟ್ಟಿಯನ್ನು ಹಂಸದ ಕಾಲಿಗೆ ಕಟ್ಟಿತು. 
ಇನ್ನೊಂದನ್ನು ತನ್ನ ಚಿಮುಟಾಂಗದಿಂದ ಹಿಡಿದುಕೊಂಡಿತು . ಮೂರನೆಯದನ್ನು ಪೈಕ್ 
ಮಾನು ತನ್ನ ಹಲ್ಲುಗಳಿಂದ ಹಿಡಿದುಕೊಂಡಿತು . 

“ ಸರಿ , ಬನ್ನಿ , ಒಟ್ಟಿಗೆ ಹಾರಿ ಹೋಗೋಣ!” 
ಮುಳುನಳ್ಳಿ ತನಗೆ ಸಹಜವಾದ ರೀತಿಯಲ್ಲಿ ಹಿಂದೆ ಹಿಂದಕ್ಕೆ ಸರಿಯಿತು. ಪೈಕ್ ಮಾನು 
ತನ್ನ ಪ್ರಕೃತಿಗೆ ತಕ್ಕಂತೆ ನೀರಿನ ಕಡೆಗೆ ಬಾಣದಂತೆ ಹೋಯಿತು. ಹಂಸವಾದರೋ ರೆಕ್ಕೆ ಬಡಿದು 
ಕೊಂಡು ಆಕಾಶಕ್ಕೇರಿತು. ಮೂರು ಬೇರೆ ಬೇರೆ ದಿಕ್ಕುಗಳಲ್ಲಿ ಎಳೆದುದರಿಂದ ಮೂರು ಎಳೆಪಟ್ಟಿ 
ಗಳೂ ಹರಿದು ಹೋದವು. ಬಂಡಿ ಎಲ್ಲಿತ್ತೋ ಅಲ್ಲೇ ನಿಂತಿತು . ಈ ಏರ್ಪಾಟು ಮಾಡುವುದರಲ್ಲಿ 
ಯಾರದು ತಪ್ಪು , ಯಾರದು ಸರಿ, ಯಾರಿಗೂ ಗೊತ್ತಾಗಲಿಲ್ಲ. ಇದನ್ನು ತೀರ್ಮಾನಿಸುವ ಗೊಡ 
ವೆಗೂ ಯಾರೂ ಹೋಗಲಿಲ್ಲ. ಆದರೆ ಇವನ್ನೆಲ್ಲ ಕಂಡ ಕಪ್ಪೆಗಳಷ್ಟೆ ನಕ್ಕವೂ , ನಕ್ಕವೂ ! ಎಲ್ಲಕ್ಕೂ 
ಹೆಚ್ಚಿನ ಆಶ್ಚರ್ಯವೆಂದರೆ ಈ ಮುಳುನಳ್ಳಿಯ ಪೈಕ್ ಮಾನೂ ತಮ್ಮದಲ್ಲದ ಈ ವ್ಯವಹಾರ 
ವನ್ನು ಯಾಕೆ ಕೈಕೊಂಡವೋ ? 

ಸೇರೋ

ಒಮ್ಮೆ ಒಬ್ಬ ಮನುಷ್ಯನ ಬಳಿ ಸೇರೋ ಎಂಬ ಹೆಸರಿನ ಒಂದು ನಾಯಿ ಇತ್ತು . ಅದು 
ತುಂಬ ತುಂಬ ಮುದಿಯಾಗಿತ್ತು . ಮಾಲೀಕ ಅದನ್ನು ಮನೆಯಿಂದ ಹೊರಕ್ಕೆ ಅಟ್ಟಿಬಿಟ್ಟ . ಅದು 
ಹೊಲಗದ್ದೆಗಳಲ್ಲೆಲ್ಲ ಅಲೆದಾಡಿಕೊಂಡು ಹೋಯಿತು. ಅದಕ್ಕೆ ತುಂಬ ದುಃಖವಾಗಿತ್ತು . 

“ ಎಷ್ಟು ವರ್ಷ ನಾನು ನನ್ನ ಯಜಮಾನನ ಸೇವೆ ಮಾಡಿದೆ . ಅವನ ಮನೆ ಕಾದೆ. ಈಗ 
ನನಗೆ ವಯಸ್ಸಾಗಿದೆ. ಅವನು ನನಗೆ ಒಂದು ಚೂರು ರೊಟ್ಟಿ ಕೊಡೋಕೂ ಕೊಸರಾನಲ್ಲ. 
ನನ್ನನ್ನು ಮನೆ ಬಿಟ್ಟು ಓಡಿಸಿದಾನಲ್ಲ ! ” 

ಹೀಗೆಯೋಚಿಸಿಕೊಂಡೇ ಅದು ಹೋಗುತ್ತಿತ್ತು . ಆಗ ಅದಕ್ಕೆ ಇದಕ್ಕಿದ್ದಂತೆ ತೋಳಕಂಡು 
ಬಂದಿತು . ನಾಯಿಯ ಬಳಿಗೆ ಬಂದು ಅದು ಕೇಳಿತು : 

“ ಏನು ನೀನು ಇಲ್ಲಿ ಯಾಕೆ ಹೀಗೆ ಅಲೆದಾಡುತ್ತಿದೀಯ ? ” 

“ ಇನ್ನೇನು ಮಾಡಲಿ ? ಯಜಮಾನ ನನ್ನನ್ನು ಮನೆಯಿಂದ ಹೊರ ಹಾಕಿದ್ದಾನೆ ” ಸೇರೋ 
ಹೇಳಿತು . 

“ ಅದಕ್ಕೆ ಯಾಕೆ ಇಷ್ಟು ಚಿಂತೆ ಮಾಡ್ತೀಯ ? ನಿನ್ನ ಯಜಮಾನ ನಿನ್ನನ್ನು ಮತ್ತೆ ಮನೆಗೆ 
ಸೇರಿಸಿಕೊಳ್ಳೋ ಹಾಗೆ ಮಾಡಲಾ ? ” ತೋಳಕೇಳಿತು. 

“ದಯವಿಟ್ಟು ಸಹಾಯ ಮಾಡು ,ತೋಳರಾಯ ! ನೀನು ನನ್ನ ನೆಚ್ಚಿನ ಗೆಳೆಯ ! ” ಸೇರೋ 
ಸಂತೋಷದಿಂದ ಹೇಳಿತು . “ ನಾನೂ ನಿನಗೆ ಎಂದಾದರೂ ಪ್ರತ್ಯುಪಕಾರ ಮಾಡ್ತೀನಿ.” 
“ಸರಿ , ಹಾಗಾದರೆ, ಒಂದು ಉಪಾಯ ಹೇಳಿಕೊಡುತ್ತೇನೆ, ಕೇಳು. ನಿನ್ನ ಯಜಮಾನ , 
ಯಜಮಾನಿ ಸದ್ಯದಲ್ಲೇ ಫಸಲು ಕಟಾವು ಮಾಡುವುದಕ್ಕೆ ಹೋಗುತ್ತಾರಷ್ಟೆ . ಯಜಮಾನಿ 
ಆಗ ಏನು ಮಾಡ್ತಾಳೆ - ತನ್ನ ಮಗುವನ್ನು ಒಂದು ಪೊದೆ ಕೆಳಗೆ ಮಲಗಿಸಿ ಯಜಮಾನನಿಗೆ 
ಸಹಾಯ ಮಾಡಲು ಹೋಗ್ತಾಳೆ, ಅಲ್ಲವೇ ? ಆಗ ನೀನು ಆ ಮಗುವಿನ ಸಮೀಪದಲ್ಲೇ ಇರು . 
ಅದರಿಂದ ನನಗೆ ಗೊತ್ತಾಗುತ್ತೆ ಮಗು ಎಲ್ಲಿದೆ ಅಂತ . ನಾನು ಓಡಿ ಬಂದು ಮಗುವನ್ನು ಎತ್ತಿ 
ಕೊಂಡು ಹೋಗೋಕೆ ಯತ್ನ ಮಾಡ್ತೀನಿ. ಆಗ ನೀನು ನನ್ನನ್ನು ಅಟ್ಟಿಸಿಕೊಂಡು ಬರಬೇಕು. 
ನಾನು ಹೆದರಿದ ಹಾಗೆ ನಟಿಸಿ ಮಗುವನ್ನು ಬಿಟ್ಟು ಬಿಟ್ಟು ಓಡಿ ಹೋಗೇನೆ.” 

ಸುಗ್ಗಿ ಕಾಲ ಬಂತು . ಯಜಮಾನ ಯಜಮಾನಿ ಹೊಲಕ್ಕೆ ಬೆಳೆ ಕುಯಿಲಿಗೆ ಹೋದರು . 
ಯಜಮಾನಿ ಎಂದಿನಂತೆ ಮಗುವನ್ನು ಒಂದು ಪೊದೆ ಕೆಳಗೆ ಮಲಗಿಸಿ ಯಜಮಾನನಿಗೆ ಸಹಾಯ 
ಮಾಡಲು ಹೋದಳು. ಅವರೇನೂ ಹೆಚ್ಚಿಗೆ ಹೊತ್ತು ಕೆಲಸ ಮಾಡಿರಲಿಲ್ಲ, ಆಗ ತೋಳ 
ಎಲ್ಲಿಂದಲೋ ಬಂದಿತು, ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೊಲದ ಮಧ್ಯೆ ಓಡಿತು. 
ಸೇರೋ ಅದನ್ನು ಅಟ್ಟಿಸಿಕೊಂಡು ಹೋಯಿತು. ಯಜಮಾನ ಕೂಗಿ ಹೇಳಿದ : 
- “ ಹಿಡಿ ಅದನ್ನು , ಸೇರೋ , ಹಿಡಿ !” 

ಸೇರೊ ತೋಳವನ್ನು ಹಿಡಿಯಿತು, ಮಗುವನ್ನು ಅದರಿಂದ ಕಿತ್ತುಕೊಂಡಿತು , ಯಜ 
ಮಾನನ ಮುಂದೆ ತಂದಿರಿಸಿತು . ಯಜಮಾನನಿಗೆ ತುಂಬ ಸಂತೋಷವಾಯಿತು. ಕೂಡಲೇ ಚೀಲ 
ದಿಂದ ಒಂದು ಚೂರು ಬ್ರೆಡ್ಡು , ಒಂದು ತುಣುಕು ಕೊಬ್ಬಿನಿಂದಕೂಡಿದ ಮಾಂಸ ತೆಗೆದು ನಾಯಿಗೆ 
ಕೊಡುತ್ತ ಹೇಳಿದ: 

“ ತಗೋ , ಸೇರೋ , ತಿನ್ನು ! ನಮ್ಮ ಮಗುವನ್ನು ಉಳಿಸಿದ್ದಕ್ಕೆ ನಿನಗೆ ಇನಾಮು. ” 

ಸಂಜೆಯಾಯಿತು. ಯಜಮಾನ ಯಜಮಾನಿ ಮನೆಗೆ ಹೋದರು . ಸೇರೋನನ್ನೂ 
ತಮ್ಮೊಂದಿಗೆ ಕರೆದೊಯ್ದರು. ಮನೆ ಒಳ ಹೊಕ್ಕಕೂಡಲೇ ಯಜಮಾನ ತನ್ನ ಹೆಂಡತಿಗೆ ಹೇಳಿದ : 

“ ಇವತ್ತು ಹಬ್ಬದ ಅಡಿಗೆ ಮಾಡು , ಹೆಂಗಸೆ ! ಪಾಯಿಸ ಸ್ವಲ್ಪ ಜಾಸ್ತಿನೆ ಮಾಡು. ತುಂಬ 
ಹಾಲು ತುಪ್ಪ ಹಾಕಲು ಕೈ ಹಿಂದೆ ಮಾಡಬೇಡ! ” 

ಅಡಿಗೆ ಸಿದ್ಧವಾಯಿತು. ಪಾಯಿಸದ ಘಮಘಮ ಬರುತ್ತಿತ್ತು . ಯಜಮಾನ ಸೇರೋ 
ನನ್ನು ಊಟದ ಮೇಜಿನ ಬಳಿ ತನ್ನ ಪಕ್ಕದಲ್ಲೇ ಕೂರಿಸಿಕೊಂಡ. 

“ ಪಾಯಸ ಬಡಿಸು , ಹೆಂಗಸೆ ! ” ಅವನೆಂದ. “ ಇವತ್ತು ಹಬ್ಬದ ಊಟ ಮಾಡೋಣ. ” 

ಯಜಮಾನಿ ಪಾಯಿಸದ ಪಾತ್ರೆಯನ್ನು ಮೇಜಿನ ಮೇಲೆ ಇರಿಸಿದಳು . ಯಜಮಾನ ಒಂದು 
ಬೋಗುಣಿ ತುಂಬ ಪಾಯಿಸ ಹಾಕಿ ಸೇರೋನ ಮುಂದಿರಿಸಿದ. ಆರಲೆಂದು ಅದರ ಮೇಲೆ 
ಗಾಳಿ ಊದ ತೊಡಗಿದ - ಬಿಸಿಯಾದುದನ್ನೇ ತಿಂದು ಎಲ್ಲಿ ಸೇರೋ ನಾಲಿಗೆ ಸುಟ್ಟುಕೊಂಡು 
ಬಿಡುತ್ತದೆ ಎಂದು ಅಂಜಿ . 

“ ಇದೆಲ್ಲ ತೋಳನ ಉಪಾಯದ ಫಲ ” ಎಂದು ಸೇರೋ ತನ್ನಲ್ಲೇ ಹೇಳಿಕೊಂಡಿತು . “ ನಾನೂ 
ತೋಳನಿಗೆ ಯಾವ ರೀತಿಯಲ್ಲಾದರೂ ಪ್ರತ್ಯುಪಕಾರ ಮಾಡಬೇಕು.” 

ಸ್ವಲ್ಪ ಕಾಲವಾದ ಮೇಲೆ ಯಜಮಾನ ತನ್ನ ಹಿರಿಯ ಮಗಳ ಮದುವೆ ಮಾಡಬೇಕೆಂದು 
ನಿರ್ಧರಿಸಿದ. 

ಸೇರೋ ಹೊಲಕ್ಕೆ ಹೋಯಿತು. ತೋಳನನ್ನು ಹುಡುಕಿ ಕಂಡುಹಿಡಿದು ಹೇಳಿತು : 

“ ಭಾನುವಾರ ಸಂಜೆ ನಮ್ಮ ಮನೆಯ ಅಂಗಳದ ತೋಟಕ್ಕೆ ಬಾ . ನಾನು ನಿನ್ನನ್ನು ಮನೆಯ 
ಒಳಕ್ಕೆ ಕರೆದುಕೊಂಡು ಹೋಗಿ ನಿನ್ನ ಉಪಕಾರಕ್ಕೆ ಸೂಕ್ತವಾಗಿ ಪ್ರತ್ಯುಪಕಾರ ಮಾಡ್ತೀನಿ.” 

ತೋಳ ಭಾನುವಾರಕ್ಕಾಗಿಯೇ ಕಾದು , ಕೊನೆಗೆ ಅಂದು ನಾಯಿ ಹೇಳಿದ ಸ್ಥಳಕ್ಕೆ ಸರಿಯಾಗಿ 
ಹೋಯಿತು. 

ಅದೃಷ್ಟಕ್ಕೆ ತಕ್ಕಂತೆ ಅಂದೇ ಭಾರಿ ಮದುವೆಯ ಔತಣಕ್ಕೆ ಏರ್ಪಾಟು ಮಾಡಲಾಗಿತ್ತು . 
ಸೇರೋ ತೋಳನನ್ನು ಒಳಕ್ಕೆ ಕರೆದೊಯ್ದು ಊಟದ ಮೇಜಿನ ಕೆಳಗೆ ಅಡಗಿಸಿ ಇರಿಸಿತು. ಮೇಜಿನ 
ಮೇಲೆ ಭಕ್ಷ ಭೋಜ್ಯಗಳನ್ನೆಲ್ಲ ಇರಿಸಲಾಗಿತ್ತು . ಸೇರೋ ಒಂದು ಬಾಟಲ್ ವೋ , ಒಂದು 
ದೊಡ್ಡ ಮಾಂಸದ ತುಂಡು ತೆಗೆದುಕೊಂಡು ತೋಳನಿಗೆ ಕೊಟ್ಟಿತು. ಅವನ್ನು ತೆಗೆದುಕೊಳ್ಳು 
ತಿದಾಗ ಅತಿಥಿಗಳು ನಾಯಿಗೆ ಹೊಡೆಯಲು ಹೋದರು . ಆದರೆ ಯಜಮಾನ ತಡೆದ . 

“ ಬೇಡಿ, ಸೇರೋನಿಗೆ ಹೊಡೆಯಬೇಡಿ! ” ಅವನೆಂದ. “ ಈ ನಾಯಿ ನನಗೆ ಭಾರಿ ಉಪ 
ಕಾರ ಮಾಡಿದೆ. ನಾನು ಯಾವತ್ತೂ ಅದಕ್ಕೆ ಋಣಿಯಾಗಿರುತ್ತೇನೆ.” 

ಸೇರೋ ಇನ್ನಷ್ಟು ಇನ್ನೂ ಹೆಚ್ಚು ಉತ್ತಮವಾದ ಮಾಂಸದ ತುಂಡುಗಳನ್ನು ತೆಗೆದು 
ಕೊಂಡು ತೋಳನಿಗೆ ಕೊಟ್ಟಿತು. ತೋಳ ಚೆನ್ನಾಗಿ ತಿಂದಿತು , ಬೇಕಾದಷ್ಟು ಕುಡಿಯಿತು. ಭಾರಿ 
ಉಲ್ಲಾಸಗೊಂಡು ಹೇಳಿತು : 

“ ನಾನೀಗ ಹಾಡುತ್ತೇನೆ! ” 

“ ಅಯ್ಯೋ , ಬೇಡ, ಬೇಡ ! ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೇವೆ” ಎಂದು ಸೇರೋ ಅಂಜಿ 
ಬೇಡಿಕೊಂಡಿತು . “ನೀನು ಗಲಾಟೆ ಮಾಡದೆ ಸುಮ್ಮನಿರುತ್ತೀನಿ ಅನ್ನುವುದಾದರೆ ನಿನಗೆ ಇನ್ನಷ್ಟು 
ವೋದ್ಯ ಕೊಡುತ್ತೇನೆ.” 
ತೋಳ ಇನ್ನಷ್ಟು ವೋದ್ಯ ಕುಡಿದು ಹೇಳಿತು : 
“ಉಹೂಂ ನನಗೆ ಸುಮ್ಮನಿರೋಕಾಗೋಲ್ಲ. ಏನಾದರೂ ಆಗಲಿ ನಾನು ಹಾಡಲೇ ಬೇಕು ! ” 
ಹಾಗೆಂದು ತೋಳ ಮೇಜಿನ ಕೆಳಗಿನಿಂದ ಗಟ್ಟಿಯಾಗಿ ಅರುಚ ತೊಡಗಿತು . 

ಅತಿಥಿಗಳು ಹೆದರಿ ನೆಗೆದು ನಿಂತರು , ಅತ್ಯ - ಇತ್ಯ ಓಡಿದರು . ಮೇಜಿನ ಕೆಳಗೆ ನೋಡುತ್ತಾರೆ - 
ಅಲ್ಲಿ ತೋಳ ಇದೆ ! ಕೆಲವರು ಅಂಜಿ ಓಡಿದರು . ಇನ್ನು ಕೆಲವರು ತೋಳನನ್ನು ಹೊಡೆಯ ಬಯ 
ಸಿದರು . ಆಗ ಸೇರೊ ತೋಳನ ಮೇಲೆ ಬಿದ್ದು ಅದನ್ನು ಕೊಲ್ಲಲು ಯತ್ನಿಸುತ್ತಿರುವಂತೆ ಸೋಗು 
ಹಾಕಿತು . 

“ತೋಳನಿಗೆ ಹೊಡೆಯಬೇಡಿ ! ನಾಯಿಗೂ ಎಲ್ಲಾದರೂ ಪೆಟ್ಟು ಬಿದ್ದೀತು ! ” ಯಜಮಾನ 
ಕೂಗಿ ಹೇಳಿದ. “ನೀವೇನೂ ಚಿಂತಿಸಬೇಡಿ ! ನಾಯಿಯೇ ಈ ತೋಳನಿಗೆ ತಕ್ಕ ಪಾಠ ಕಲಿಸುತ್ತೆ ! ” 

ಸೇರೊ ತೋಳನನ್ನು ಹೊಲಕ್ಕೆ ಕರೆದೊಯು ಹೇಳಿತು : 

“ ಒಮ್ಮೆ ನೀನು ನನಗೆ ಒಳ್ಳೆಯದು ಮಾಡಿದೆ. ಈಗ ನಾನು ನಿನಗೆ ಒಳ್ಳೆಯದು ಮಾಡಿ 
ದೇನೆ.” 

ಎರಡೂ ಪರಸ್ಪರರಿಗೆ ವಿದಾಯ ಹೇಳಿ, ಬೇರೆಬೇರೆ ದಾರಿ ಹಿಡಿದವು. 

ತಂತ್ರಗಾರ ನರಿ

ಒಂದು ಸಾರಿ ಒಂದು ನರಿ ಒಂದು ಕೋಳಿಮರಿಯನ್ನು ಕದ್ದಿತು. ಅದನ್ನು ಕಚ್ಚಿಕೊಂಡು 
ಓಡಿತೂ , ಓಡಿತೂ , ಅದಕ್ಕೆ ತಿಳಿಯೋಕೆ ಮುನ್ನವೇ ಕತ್ತಲಾಗಿ ಬಿಟ್ಟಿತು. ಅದಕ್ಕೊಂದು ಗುಡಿ 
ಸಿಲು ಕಾಣಿಸಿತು. ಅದು ಅದರೊಳಕ್ಕೆ ಹೋಯಿತು. ಒಳಗೆ ಕೆಲವು ಜನ ಕೂತಿದ್ದರು . 

“ ನಮಸ್ಕಾರ, ಸಜ್ಜನರೇ ! ” 
“ ನಮಸ್ಕಾರ, ನರಿಯಕ್ಕ ! ” 
“ ನನಗೆ ಸ್ವಲ್ಪ ಈ ರಾತ್ರಿ ನಿಮ್ಮಲ್ಲಿರೋಕೆ ಅವಕಾಶ ಕೊಡ್ತೀರ? ” 

“ ಅಯ್ಯೋ , ನರಿಯಕ್ಕ ! ನಮ್ಮ ಗುಡಿಸಿಲು ಚಿಕ್ಕದು. ನಮಗೇ ಸಾಲುತ್ತಿಲ್ಲ, ನಿನ್ನನ್ನು 
ಎಲ್ಲಿ ಇರಿಸೋದು! ” 

“ ಪರವಾಗಿಲ್ಲ , ಹೇಗೊ ಹೊಂದಿಸಿಕೊತೀನಿ. ಈ ಬೆಂಚಿನ ಕೆಳಗೇ ಮುದುಡಿ ಮಲಗಿ 
ಕೋತೀನಿ, ಬಾಲವನ್ನೇ ಹೊದ್ದುಕೊತೀನಿ. ಹೇಗೋ ರಾತ್ರಿ ಕಳೆದರೆ ಸಾಕು ! ” 

“ ಸರಿ, ಹಾಗಾದರೆ , ಹಾಗೇ ಮಾಡು. ” 
“ ನನ್ನ ಈ ಕೋಳಿಮರಿಯನ್ನು ಎಲ್ಲಿ ಇಡಲಿ ? ” 
“ ಅಗ್ಗಿಷ್ಟಿಕೆ ಕೆಳಗೆ ಇರಿಸು . ” 

ನರಿ ಹಾಗೇ ಮಾಡಿತು . ಮಧ್ಯರಾತ್ರಿಯಲ್ಲಿ ಯಾರಿಗೂ ಕಾಣದ ಹಾಗೆ ಎದ್ದು ಕೋಳಿಮರಿ 
ಯನ್ನು ತಿಂದು ಹಾಕಿ ಪುಕ್ಕಗಳನ್ನು ಬಚ್ಚಿಟ್ಟಿತು. 
ಮಾರನೆಯ ಬೆಳಿಗ್ಗೆ ಎಲ್ಲರಿಗಿಂತ ಮೊದಲು ತಾನೇ ಎದ್ದಿತು . ಮುಖ ತೊಳೆದುಕೊಂಡು 
ಎಲ್ಲರಿಗೂ ಸುಪ್ರಭಾತ ಹೇಳಿತು . 

“ ನನ್ನ ಕೋಳಿಮರಿ ಎಲ್ಲಿ ? ” ಅದು ಕೇಳಿತು . 
“ ಅಗ್ಗಿಷ್ಟಿಕೆ ಕೆಳಗೇ ಇರಬೇಕು.” 
“ ಇಲ್ಲವಲ್ಲ. ನಾನು ನೋಡಿದೆ. ಅಲ್ಲಿ ಇಲ್ಲವೇ ಇಲ್ಲ.” 
ಹಾಗೆಂದು ಅದು ಜೋರಾಗಿ ಅಳ ತೊಡಗಿತು . 

“ ನನ್ನ ಬಳಿ ಇದ್ದುದೆಲ್ಲ ಈ ಕೋಳಿಮರಿ ಒಂದೇ . ಈಗ ಅದೂ ಹೊರಟು ಹೋಯಿತಲ್ಲ ” 
ಎಂದದು ಬಿಕ್ಕಳಿಸಿ ಅಳ ತೊಡಗಿತು . “ ಈಗ ನೀವು ಅದರ ಬದಲಿಗೆ ನನಗೆ ಒಂದು ಬಾತುಕೋಳಿ 
ಕೊಡಬೇಕು ! ” 

ವಿಧಿ ಇಲ್ಲದೆ ಅವರು ಅದಕ್ಕೆ ಒಂದು ಬಾತುಕೋಳಿಕೊಟ್ಟರು. ನರಿ ಬಾತುಕೋಳಿಯನ್ನು 
ಚೀಲದಲ್ಲಿ ತುರುಕಿಕೊಂಡು ಓಡಿತು . ಓಡಿತೂ , ಓಡಿತೂ , ಅದಕ್ಕೆ ತಿಳಿಯೋಕೆ ಮುನ್ನವೇ ಕತ್ರ 
ಲಾಗಿ ಬಿಟ್ಟಿತು. ಅಷ್ಟು ಹೊತ್ತಿಗೆ ಸರಿಯಾಗಿ ಅದಕ್ಕೊಂದು ಗುಡಿಸಿಲು ಕಾಣಿಸಿತು . ಒಳಗೆ ಹೋಗಿ 
ಹೇಳಿತು : 

“ ನಮಸ್ಕಾರ, ಸಜ್ಜನರೇ ! ” 
“ ನಮಸ್ಕಾರ , ನರಿಯಕ್ಕ !” 
“ ನನಗೆ ಸ್ವಲ್ಪ ಈ ರಾತ್ರಿ ನಿಮ್ಮಲ್ಲಿರೋಕೆ ಅವಕಾಶ ಕೊಡ್ತೀರ ? ” 

“ಎಲ್ಲಾಗುತ್ತೆ ನರಿಯಕ್ಕ ! ಈ ಗುಡಿಸಿಲು ನಮಗೇ ಚಿಕ್ಕದು. ನಿನಗೆಲ್ಲಿಂದ ಸ್ಥಳ 
ತರೋಣ? ” 

“ ಪರವಾಗಿಲ್ಲ ! ಹೇಗೊ ಹೊಂದಿಸಿಕೊತೀನಿ. ಈ ಬೆಂಚಿನ ಕೆಳಗೇ ಮುದುಡಿ ಮಲಗಿ 
ಕೋತೀನಿ, ಬಾಲವನ್ನೇ ಹೊದ್ದುಕೊತೀನಿ. ಹೇಗೋ ರಾತ್ರಿ ಕಳೆದರೆ ಸಾಕು ! ” 

“ ಸರಿ, ಹಾಗಾದರೆ, ಹಾಗೇ ಮಾಡು ! ” 
“ ನನ್ನ ಬಾತುಕೋಳಿಯನ್ನು ಎಲ್ಲಿ ಇರಿಸಲಿ ? ” 
“ಕಣಜದಲ್ಲಿರಿಸು, ವರಟೆಗಳ ಜೊತೆಗೆ.” 
- ನರಿ ಹಾಗೇ ಮಾಡಿತು. ಮಧ್ಯರಾತ್ರಿಯಲ್ಲಿ ಮೆಲ್ಲಗೆದ್ದು ಬಾತುಕೋಳಿಯನ್ನು ತಿಂದು 
ಹಾಕಿ ಪುಕ್ಕಗಳನ್ನೆಲ್ಲ ಬಚ್ಚಿಟ್ಟಿತು. 

ಮಾರನೆಯ ಬೆಳಿಗ್ಗೆ ಹೊತ್ತಿಗೆ ಮುಂಚೆಯೇ ಎದ್ದು ಮುಖ ತೊಳೆದುಕೊಂಡು ಆತಿಥೇ 
ಯರಿಗೆ ಸುಪ್ರಭಾತ ಹೇಳಿತು . 
“ ನನ್ನ ಬಾತುಕೋಳಿ ಎಲ್ಲಿ ?” ಅದು ಕೇಳಿತು . 
ಅವರು ಕಣಜದಲ್ಲಿ ನೋಡಿದರು . ಬಾತುಕೋಳಿ ಇರಲಿಲ್ಲ. 
ಮನೆಯ ಯಜಮಾನ ಹೇಳಿದ: 

“ ಯಾರಿಗೆ ಗೊತ್ತು ? ಬಹುಶಃ ನಾವು ಅದನ್ನೂ ವರಟೆಗಳೊಂದಿಗೆ ಹೊರಕ್ಕೆ ಬಿಟ್ಟು ಬಿಟ್ಟೆವೋ 
ಏನೋ ? ” 

ನರಿ ಗಟ್ಟಿಯಾಗಿ ಅಳ ತೊಡಗಿತು : 
- “ ಅಯ್ಯೋ , ಏನು ಮಾಡೋದು? ನನ್ನ ಬಳಿ ಇದ್ದುದೆಲ್ಲ ಇದೊಂದು ಬಾತುಕೋಳಿ 
ಯಷ್ಟೆ. ಈಗ ಅದೂ ಹೋಯಿತಲ್ಲ ! ” 

ಅದು ಬಿಕ್ಕಿ ಬಿಕ್ಕಿ ಅಳುತ್ತ ಹೇಳಿತು : “ನೀವು ಬಾತುಕೋಳಿಯ ಬದಲಿಗೆ ನನಗೆ ಒಂದು 
ವರಟೆ ಕೊಡಬೇಕು.” 

ವಿಧಿ ಇಲ್ಲದೆ ಅವರು ನರಿಗೆ ಒಂದು ವರಟೆ ಕೊಟ್ಟರು. ನರಿ ಅದನ್ನು ತನ್ನ ಚೀಲದಲ್ಲಿ 
ತುರುಕಿಕೊಂಡು ಓಡಿತು . ಓಡಿ , ಓಡಿತ . ಅದಕ್ಕೆ ತಿಳಿಯೋಕೆ ಮುನ್ನವೇ ಕತ್ತಲಾಗಿ ಬಿಟ್ಟಿತು. 
ಅಷ್ಟು ಹೊತ್ತಿಗೆ ಸರಿಯಾಗಿ ಅದಕ್ಕೊಂದು ಗುಡಿಸಿಲು ಕಾಣಿಸಿತು . ಒಳಗೆ ಹೋಗಿ 
ಹೇಳಿತು : 
- “ ನಮಸ್ಕಾರ, ಸಜ್ಜನರೇ , ನನಗೆ ಸ್ವಲ್ಪ ಇವತ್ತು ರಾತ್ರಿ ನಿಮ್ಮಲ್ಲಿರೋಕೆ ಅವಕಾಶ 
ಕೊಡ್ತೀರ? ” 

- “ ಅಯೊ , ಅದೆಲ್ಲಿ ಆಗುತ್ತೆ , ನರಿಯಕ್ಕ ! ಈ ಗುಡಿಸಿಲು ನಮಗೇ ಚಿಕ್ಕದು. ನಿನಗೆಲ್ಲಿಂದ 
ಸ್ಥಳ ತರೋಣ? ” 

“ ಪರವಾಗಿಲ್ಲ, ಹೇಗೋ ಹೊಂದಿಸಿಕೋತೀನಿ. ಈ ಬೆಂಚಿನ ಕೆಳಗೇ ಮುದುಡಿ ಮಲಗಿ 
ಕೊತೀನಿ, ಬಾಲವನ್ನೇ ಹೊದ್ದುಕೊತೀನಿ ಹೇಗೋ ರಾತ್ರಿ ಕಳೆದರೆ ಸಾಕು ! ” 

“ ಸರಿ, ಹಾಗಾದರೆ ಹಾಗೇ ಮಾಡು !” 
“ ನನ್ನ ವರಟೆಯನ್ನು ಎಲ್ಲಿ ಇರಿಸಲಿ ? ” 
“ಕಣಜದಲ್ಲಿಡು , ಕುರಿಗಳ ಜೊತೆ.” 

ನರಿ ಹಾಗೇ ಮಾಡಿತು . ಮಧ್ಯರಾತ್ರಿಯಲ್ಲಿ ಮೆಲ್ಲಗೆದುವರಟೆಯನ್ನು ತಿಂದು ಹಾಕಿ ಪುಕ್ಕ 
ಗಳನ್ನೆಲ್ಲ ಬಚ್ಚಿಟ್ಟಿತು. 

ಮಾರನೆಯ ಬೆಳಿಗ್ಗೆ ಹೊತ್ತಿಗೆ ಮುಂಚೆಯೇ ಎದ್ದು ಮುಖ ತೊಳೆದುಕೊಂಡು ಆತಿಥೇಯ 
ರಿಗೆ ಸುಪ್ರಭಾತ ಹೇಳಿತು . 

“ ನನ್ನ ವರಟೆ ಎಲ್ಲಿ ? ” ಅದು ಕೇಳಿತು . 
ಅವರು ಕಣಜದಲ್ಲಿ ನೋಡಿದರು . ವರಟೆ ಇರಲಿಲ್ಲ. ಆಗ ಅದು ಹೇಳಿತು : 
“ ಅಯ್ಯೋ , ನಾನು ಎಲ್ಲೆಲ್ಲೋ ಹೋಗಿ ಬಂದಿದೀನಿ. ಎಲ್ಲೂ ಹೀಗೆ ಆದುದಿಲ್ಲ. ನನ್ನ 
ಬಳಿ ಇದ್ದುದೆಲ್ಲ ಅದೊಂದು ವರಟೆಯಷ್ಟೆ. ಈಗ ಅದೂ ಹೋಯಿತಲ್ಲ ! ” 

ಮನೆಯ ಯಜಮಾನ ಹೇಳಿದ : 
“ ಯಾರಿಗೆ ಗೊತ್ತು ? ಕುರಿಗಳು ಅದನ್ನು ತುಳಿದು ಹಾಕಿದವೋ ಏನೋ ! ” 

“ ಅದು ಏನೇ ಆಗಲಿ, ನೀವು ನನಗೆ ವರಟೆಯ ಬದಲಿಗೆ ಒಂದು ಕುರಿ ಕೊಡಿ” ನರಿ 
ಎಂದಿತು . 

ಅವರು ಅದಕ್ಕೆ ಒಂದು ಕುರಿ ಕೊಟ್ಟರು. ಅದು ಅದನ್ನು ತನ್ನ ಚೀಲದೊಳಕ್ಕೆ ತುರುಕಿ 
ಕೊಂಡು ಓಡಿತು. ಓಡಿತೂ , ಓಡಿತ . ಮತ್ತೆ ಕತ್ತಲೆಯಾಯಿತು. ಅದಕ್ಕೊಂದು ಗುಡಿಸಿಲು 
ಕಾಣಿಸಿತು . ಒಳಗೆ ಹೋಗಿ ಹೇಳಿತು : 

“ ನಮಸ್ಕಾರ, ಸಜ್ಜನರೇ ! ನನಗೆ ಸ್ವಲ್ಪ ಇವತ್ತು ರಾತ್ರಿ ನಿಮ್ಮಲ್ಲಿರೋಕೆ ಅವಕಾಶ 
ಕೊಡ್ತೀರ? ” 

“ ಅಯ್ಯೋ , ಅದೆಲ್ಲಿ ಆಗುತ್ತೆ , ನರಿಯಕ್ಕ ? ಈ ಗುಡಿಸಿಲು ನಮಗೇ ಚಿಕ್ಕದು. ನಿನಗೆಲ್ಲಿಂದ 
ಸ್ಥಳ ತರೋಣ? ” 

“ ಪರವಾಗಿಲ್ಲ, ಹೇಗೋ ಹೊಂದಿಸಿಕೊತೀನಿ, ಈ ಬೆಂಚಿನ ಕೆಳಗೇ ಮುದುಡಿ ಮಲಗಿ 
ಕೋತೀನಿ, ಬಾಲವನ್ನೇ ಹೊದ್ದಿಕೋತೀನಿ. ಹೇಗೋ ರಾತ್ರಿ ಕಳೆದರೆ ಸಾಕು !” 

“ ಸರಿ. ಹಾಗೇ ಮಾಡು, ಹಾಗಾದರೆ ! ” 
“ ನನ್ನ ಕುರಿಯನ್ನು ಎಲ್ಲಿ ಇರಿಸಲಿ ? ” 
“ ಅಂಗಳದಲ್ಲಿ ಬಿಡು. ” 

ನರಿ ಹಾಗೇ ಮಾಡಿತು. ಮಧ್ಯರಾತ್ರಿಯಲ್ಲಿ ಮೆಲ್ಲಗೆದ್ದು ಕುರಿಯನ್ನು ತಿಂದು ಹಾಕಿತು. 
ಮಾರನೆಯ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಮುಖ ತೊಳೆದು ಆತಿಥೇಯರಿಗೆ ಸುಪ್ರಭಾತ - 
ಹೇಳಿತು . 

“ ನನ್ನ ಕುರಿ ಎಲ್ಲಿ ? ” ಅದು ಕೇಳಿತು . 
ಆಮೇಲೆಕೂತುಕೊಂಡು ಬಿಕ್ಕಿ ಬಿಕ್ಕಿ ಅಳ ತೊಡಗಿತು : 

“ ನಾನು ಎಲ್ಲೆಲ್ಲೋ ಹೋಗಿ ಬಂದಿದೀನಿ. ಎಲ್ಲೂ ಹೀಗೆ ಆದುದಿಲ್ಲ ! ನನ್ನ ಬಳಿ ಇದ್ದು 
ದೆಲ್ಲ ಆ ಕುರಿಯಷ್ಟೆ . ಈಗ ಅದೂ ಹೋಯಿತು ! ” 
ಮನೆಯ ಯಜಮಾನ ಹೇಳಿದ: 

“ ಯಾರಿಗೆ ಗೊತ್ತು ? ನಮ್ಮ ಸೊಸೆ ದನಕರುಗಳನ್ನು ಮೇಯಲು ಬಿಟ್ಟಾಗ ಕುರಿಯನ್ನೂ 
ಬಿಟ್ಟುಬಿಟ್ಟಳೋ ಏನೋ ! ” 

“ ಅದು ಏನೇ ಆಗಲಿ, ನೀವು ನನಗೆ ಕುರಿಯ ಬದಲಿಗೆ ನಿಮ್ಮ ಸೊಸೆಯನ್ನು ಕೊಡಿ” ನರಿ 
ಹೇಳಿತು . 

ಇದನ್ನು ಕೇಳಿ ಎಲ್ಲರೂ ಅಳ ತೊಡಗಿದರು . ಯಜಮಾನ ಅತ್ಯ , ಯಜಮಾನಿ ಅತ್ತಳು, 
ಮಗ ಅತ್ಯ , ಮಗನ ಮಕ್ಕಳು ಅತ್ತರು. ಆದರೆ ನರಿ ಮಾತ್ರ ಇದಾವುದಕ್ಕೂ ಗಮನ ಕೊಡದೆ 
ಸೊಸೆಯನ್ನು ಚೀಲದಲ್ಲಿ ತುರುಕಿ ಇರಿಸಿ, ಒಂದು ಘಳಿಗೆ ಹೊರಗೆ ಹೋಯಿತು. ಅದು ಹೊರಗೆ 
ಹೋಗಿದ್ದಾಗ ಮನೆಯ ಮಗ ತನ್ನ ಹೆಂಡತಿಯನ್ನು ಚೀಲದಿಂದ ಹೊರಕ್ಕೆ ಬಿಟ್ಟು ಅವಳ ಸ್ಥಳ 
ದಲ್ಲಿ ಒಂದು ನಾಯಿ ಕೂರಿಸಿ ಹಾಗೇ ಗಂಟುಹಾಕಿ ಇರಿಸಿದ . 

ನರಿ ಹಿಂದಕ್ಕೆ ಬಂತು . ಚೀಲ ಎತ್ತಿಕೊಂಡು ಹೊರಟಿತು . ಹೋಗುತ್ತಾ ತನ್ನಲ್ಲೇ ಹೇಳಿ 
ಕೊಂಡಿತು : 

“ಓಹ್ ಎಲ್ಲ ಎಷ್ಟು ಚೆನ್ನಾಗಿ ಆಯ್ತು .ಕೋಳಿಹೋಯ್ತು, ಬಾತುಕೋಳಿ ಬಂತು . ಬಾತು 
ಕೋಳಿಹೋಯಿತು, ವರಟೆ ಬಂತು . ವರಟೆ ಹೊಯಿತು, ಕುರಿ ಬಂತು . ಕುರಿ ಹೋಯಿತು, 
ಹುಡುಗಿ ಬಂದಳು ! ” 

ಅದು ಚೀಲವನ್ನು ಕೆಳಗಿರಿಸಿತು .ಕೂಡಲೇ ಒಳಗಿನಿಂದ “ಗುರ್ ” ಅನ್ನುವ ಶಬ್ದ ಕೇಳಿಬಂತು. 

“ ಅಯ್ಯೋ , ಇದೇನು ಈ ಹುಡುಗಿ ಭಯದಿಂದ ನಾಯಿಯ ಹಾಗೆ ಗುರುಗುಟ್ಟುತಾಳಲ್ಲ . 
ಸ್ವಲ್ಪ ನೋಡೋಣ ಎಂಥವಳು ಇವಳು ಅಂತ ! ” ಎಂದುಕೊಂಡು ಅದು ಚೀಲ ಬಿಚ್ಚಿತು. 
ಕೂಡಲೇ ನಾಯಿ ಹೊರಕ್ಕೆ ಹಾರಿ ಬಂತು . ನರಿ ಓಡಿತು . ಅದನ್ನು ಅಟ್ಟಿಸಿಕೊಂಡು ನಾಯಿ . 
ನರಿ ಕಾಡಿನ ಒಳಕ್ಕೆ ಹೆಚ್ಚು ಹೆಚ್ಚು ದೂರಹೋಯಿತು. ಆದರೂ ನಾಯಿ ಅದರ ಹಿಂದೆಯೇ ! 
ಕೊನೆಗೆ ನರಿ ತನ್ನ ಬಿಲ ಸೇರಿಕೊಂಡಿತು . ಅಲ್ಲೇ ಅಡಗಿ ಕುಳಿತಿತು . ಒಳ ಹೋಗಲಾರದೆ ನಾಯಿ 
ಹೊರಗೇ ಕಾಯುತ್ತ ನಿಂತಿತು . 

ಒಳಗೆ ಕುಳಿತ ನರಿ ಕೇಳ ತೊಡಗಿತು : 

“ ನನ್ನ ಪುಟ್ಟ ಕಿವಿಗಳೇ , ನನ್ನ ಮುದ್ದು ಕಿವಿಗಳೇ , ಹೇಳಿ ನೋಡೋಣ. ನೀವು ಆ ನೀಚ 
ನಾಯಿಯಿಂದ ಅಷ್ಟು ಬೇಗ ಓಡಿದಾಗ ನಿಮಗೇನು ಅನಿಸ್ತು ? ” 

ಪುಟ್ಟ ಕಿವಿಗಳು ಹೇಳಿದವು: “ ನಮಗೇನು ಅನಿಸ್ತು ಅಂದರೆ, ನರಿಯಕ್ಕ , ಎಲ್ಲಿ ಆ ನೀಚ 
ನಾಯಿ ನಿನ್ನನ್ನು ಹಿಡಿದು ನಿನ್ನ ಚಿನ್ನದ ಮೈ ಚರ್ಮವನ್ನು ಹರಿದು ಹಾಕಿ ಬಿಡುತ್ತೋ , ಅಂತ ! ” 
“ ವಂದನೆಗಳು , ಕಿವಿಗಳೇ ! ಇದಕ್ಕಾಗಿ ನಿಮಗೆ ಒಂದು ಜೊತೆ ಬಂಗಾರದ ಓಲೆ ಕೊಡ್ತೀನಿ! ” 
ನರಿ ಮತ್ತೆ ಕೇಳಿತು : 

“ ನನ್ನ ಪುಟ್ಟ ಪಾದಗಳೇ , ನನ್ನ ಮುದ್ದಿನ ಪಾದಗಳೇ ! ಹೇಳಿ ನೋಡೋಣ. ನೀವು ಆ 
ನೀಚ ನಾಯಿಯಿಂದ ಅಷ್ಟು ಬೇಗ ಓಡಿದಾಗ ನಿಮಗೇನು ಅನಿಸ್ತು ? ” 

“ ನಮಗೇನು ಅನಿಸ್ತು ಅಂದರೆ, ನರಿಯಕ್ಕ , ಆ ನೀಚ ನಾಯಿಗೆ ನೀನು ಸಿಕ್ಕಿ ಬೀಳದ ಹಾಗೆ, 
ಅದು ನಿನ್ನ ಚಿನ್ನದ ಮೈ ಚರ್ಮವನ್ನು ಹರಿಯದ ಹಾಗೆ, ಬೇಗ ಓಡಬೇಕು. ಅಂತ ! ” 

“ ವಂದನೆಗಳು ನಿಮಗೆ, ಪಾದಗಳೇ ! ವಂದನೆಗಳು , ಮುದ್ದಿನ ಪಾದಗಳೇ ! ನಾನು ನಿಮಗೆ 
ಬೆಳ್ಳಿಯ ಹಿಮ್ಮಡಿಗಳಿರುವ ಚಿನ್ನದ ಕೆಂಪು ಬೂಟುಗಳನ್ನು ಕೊಂಡು ಕೊಡುತ್ತೇನೆ! ” 

ಆಮೇಲೆ ನರಿ ಮತ್ತೆ ಕೇಳಿತು : 
“ನೀನು ಆ ನೀಚ ನಾಯಿಯಿಂದ ಓಡಿದಾಗ ಏನು ಯೋಚನೆ ಮಾಡಿದೆ , ಪೊರಕೆ ಬಾಲವೇ ? ” 

ಬಾಲ ಉತ್ತರಿಸಿತು : “ಮೊದಲು ಜೋರಾಗಿ ಓಡೋಣ ಅಂದುಕೊಂಡೆ. ಆಮೇಲೆ, ಹಾಳಾಗಿ 
ಹೋಗಲಿ. ನಾಯಿ ನರಿಯನ್ನು ಹಿಡಿದರೆ ಏನಂತೆ ಅಂದುಕೊಂಡು ನಿಧಾನ ಮಾಡಿದೆ. ” 

ನರಿಯಕ್ಕನಿಗೆ ತುಂಬ ಕೋಪ ಬಂತು . ಬಾಲವನ್ನು ಬಿಲದಿಂದ ಹೊರಕ್ಕೆ ಹಾಕಿ ಹೇಳಿತು : 
“ಹೇಯ್, ನಾಯಿ ! ತಗೋ ನನ್ನ ಈ ಬಾಲವನ್ನು ಎಷ್ಟು ಬೇಕೋ ಅಷ್ಟು ಕಚ್ಚಿಕೋ ! ” 

ನಾಯಿ ಗಬಕ್ಕನೆ ಬಾಯಿ ಹಾಕಿ ಎಷ್ಟು ಜೋರಾಗಿ ಕಚ್ಚಿತೆಂದರೆ ನರಿಯ ಇಡೀ ಬಾಲವೇ 
ಅದರ ಬಾಯಿಗೆ ಬಂದಿತು . ನಾಯಿ ಹೊರಟು ಹೋಯಿತು. 

ಅನಂತರ ನರಿ ಮೊಲಗಳ ಬಳಿಗೆ ಹೋಯಿತು. ಬಾಲವಿಲ್ಲದ ನರಿಯನ್ನು ಕಂಡು ಮೊಲ 
ಗಳಿಗೆ ನಗು ಬಂತು . ಅವು ಪಕ್ಕೆ ಬಿರಿಯುವಂತೆ ನಕ್ಕವು. 

ನರಿ ಹೇಳಿತು : “ ಬಾಲ ಇಲ್ಲದೆ ಇದ್ದರೆ ಏನಂತೆ ? ನಾನು ನಿಮಗಿಂತ ಹೆಚ್ಚು ಚೆನ್ನಾಗಿ 
ಕುಣಿತದಲ್ಲಿ ಮೊದಲಿಗನಾಗಬಲ್ಲೆ ! ” 

“ ಅದು ಹೇಗೆ ಸಾಧ್ಯ ? ” 
“ ಅದೇನು ಸರಳ ! ನಿಮ್ಮ ಬಾಲಗಳನ್ನೆಲ್ಲ ಸೇರಿಸಿ ಗಂಟು ಹಾಕಿದರೆ ಸುಲಭವಾಗಿ ಆಗುತ್ತೆ . ” 
“ ಸರಿ , ಹಾಗಾದರೆ ಗಂಟು ಹಾಕು ! ” 

ನರಿ ಮೊಲಗಳ ಬಾಲಗಳನ್ನೆಲ್ಲ ಒಂದಕ್ಕೊಂದು ಸೇರಿಸಿ ಗಂಟು ಹಾಕಿತು . ಆಮೇಲೆ ತಾನೇ 
ಗುಡ್ಡ ಏರಿ ಹೋಗಿ ಅಲ್ಲಿಂದ ಗಟ್ಟಿಯಾಗಿ ಕಿರುಚಿ ಹೇಳಿತು : 

“ ಅಯೋ , ಬೂದುತೋಳ ಬರಿದೆ. ಓಡಿ ಹೋಗಿ, ಮೊಲಗಳೇ ! ಓಡಿ ! ” 
ಮೊಲಗಳು ಓಡಲು ಯತ್ನಿಸಿದವು. ಆದರೆ ಅವುಗಳ ಬಾಲಗಳೆಲ್ಲ ಗಂಟಾಗಿವೆ. ಅವುಜೋರಾಗಿ 
ಎಳೆದು ದೌಡಾಯಿಸಿದವು. ಎಲ್ಲವುಗಳ ಬಾಲಗಳೂ ಕಿತ್ತು ಬಂದವು. ತುಂಬ ದೂರ ಓಡಿ ಹೋದ 
ಮೇಲೆ ಅವು ನಿಂತು ಪರಸ್ಪರ ನೋಡಿಕೊಂಡವು. ಒಂದಕ್ಕೂ ಬಾಲವಿರಲಿಲ್ಲ ! 

- ಎಲ್ಲವೂ ಕಲೆತು ಆ ತಂತ್ರಗಾರ ನರಿಗೆ ಹೇಗಾದರೂ ಬುದ್ದಿ ಕಲಿಸಬೇಕೆಂದು ಯೋಚಿಸ 
ತೊಡಗಿದವು. ಆದರೆ ನರಿಯಕ್ಕ ಇವುಗಳ ಮಾತನ್ನು ಕೇಳಿಸಿಕೊಂಡು ಬಿಟ್ಟಿತು. ತನಗೆ ಅಪಾಯ 
ಕಾದಿದೆ ಅಂತ ಅದಕ್ಕೆ ಗೊತ್ತಾಯಿತು. ಅದು ಆ ಕಾಡಿನಿಂದಲೇ ದೂರ ಓಡಿ ಹೋಯಿತು. 
ಅಂದಿನಿಂದ ಯಾರೂ ಆ ನರಿಯನ್ನು ಕಾಣಲೇ ಇಲ್ಲ. ಮೊಲಗಳೂ ಅಂದಿನಿಂದ ಬಾಲಗಳಿಲ್ಲ 
ದೆಯೇ ವಾಸಿಸುತ್ತಿವೆ. 

ಹೋತ ಹಾಗೂ ಟಗರು

ಒಂದೂರಿನಲ್ಲಿ ಒಬ್ಬ ಅಜ್ಜ , ಒಬ್ಬ ಅಜ್ಜಿ ವಾಸವಾಗಿದ್ದರು . ಅವರ ಬಳಿ ಒಂದು ಹೊತ 
ಹಾಗೂ ಒಂದು ಟಗರು ಇದ್ದವು. ಈ ಹೋತನೂ ಈ ಟಗರೂ ಎಂಥ ಆಪ್ತ ಮಿತ್ರರಾಗಿದ್ದರೆಂದರೆ 
ಎಲ್ಲಿ ಹೋತ ಇರುತ್ತಿತ್ತೋ ಅಲ್ಲಿ ಟಗರು ಇರುತ್ತಿತ್ತು . ಹೋತಸ್ವಲ್ಪ ಕೋಸಿನ ಎಲೆ ತಿನ್ನೋಣ 
ಅಂತ ತರಕಾರಿ ತೋಟಕ್ಕೆ ಹೋದರೆ ಟಗರೂ ಅಲ್ಲಿಗೆ ಹೋಗುತ್ತಿತ್ತು . ಹೋತ ಹಣ್ಣಿನ 
ತೋಟಕ್ಕೆ ಹೋದರೆ ಟಗರೂ ಅದರ ಹಿಂದೆಯೇ ಹೋಗುತ್ತಿತ್ತು ! 

ಒಂದು ದಿನ ಅಜ್ಜ ಅಜ್ಜಿಗೆ ಹೇಳಿದ: “ ಈ ಹೋತವನ್ನೂ ಟಗರನ್ನೂ ಇಟ್ಟುಕೊಂಡು 
ನಮಗೇನು ಪ್ರಯೋಜನ ? ಸುಮ್ಮನೆಕೂತುಕೊಂಡು ತಿನ್ನುತ್ತಿವೆ. ಹೀಗೇ ಇದ್ದರೆ ನಾವೇ ಉಪ 
ವಾಸ ಬೀಳಬೇಕಾಗುತ್ತೆ .” ಆಮೇಲೆ ಹೋತ ಹಾಗೂ ಟಗರಿನ ಕಡೆಗೆ ತಿರುಗಿ ಹೇಳಿದ : “ ಇನ್ನು 
ಹೊರಡಿ ನೀವು ಇಲ್ಲಿಂದ ! ತಿರುಗಿ ನಿಮ್ಮ ಮುಖಾನೂ ತೋರಿಸಬಾರದು ನನಗೆ ! ” 

ಹೋತನೂ ಟಗರೂ ಗಂಟು ಮೂಟೆ ಕಟ್ಟಿಕೊಂಡು ಹೊರಟವು. 

ಹೋದವೂ , ಹೋದವೂ , ಕೊನೆಗೆ ಒಂದು ಮೈದಾನಕ್ಕೆ ಬಂದವು. ಅಲ್ಲಿ ಮಧ್ಯದಲ್ಲಿ ಅವಕ್ಕೆ 
ಏನು ಕಾಣಿಸಿತು ಅಂತೀರಾ - ಒಂದು ತೋಳನ ತಲೆ ! 

ಟಗರಿಗೆ ಬಲ ಇತ್ತು , ಆದರೆ ಧೈರ್ಯ ಇರಲಿಲ್ಲ. ಹೋತಕ್ಕೆ ಧೈರ್ಯ ಇತ್ತು , ಆದರೆ ಬಲ 
ಇರಲಿಲ್ಲ. 

“ ಆ ತೋಳನ ತಲೆಯನ್ನು ತೆಗೆದಿಟ್ಟುಕೋ , ಟಗರೇ ! ನಿನಗೆ ಬಲ ಇದೆ. ನಿನಗೆ ಸಾಧ್ಯ ” 
ಹೋತ ಹೇಳಿತು . 
“ ಇಲ್ಲ, ಇಲ್ಲ, ಹೋತ, ನೀನೇ ತೆಗೆದಿಟ್ಟುಕೋ . ನಿನಗೆ ತುಂಬ ಧೈರ್ಯ ಇದೆ ” ಟಗರು 
ಹೇಳಿತು . 
. ಕೊನೆಗೆ ಎರಡೂ ಒಟ್ಟಿಗೇ ಆ ತೋಳನ ತಲೆಯನ್ನು ತೆಗೆದುಕೊಂಡು ತಮ್ಮ ಚೀಲದೊಳಕ್ಕೆ 
ತುರುಕಿಕೊಂಡವು. ಆಮೇಲೆ ಮುಂದೆ ಹೊರಟವು. 

ಹೋದವೂ ಹೋದವೂ , ಕೊನೆಗೆ ನೋಡುತ್ತವೆ - ದೂರದಲ್ಲಿ ಒಂದು ಕಡೆ ಒಂದು ಶಿಬಿ 
ರಾಗ್ನಿ ಉರೀತಾ ಇದೆ. 

ಹೋತ ಹೇಳಿತು : “ ಆ ಬೆಂಕಿ ಇರೋ ಕಡೆಗೆ ಹೋಗೋಣ. ರಾತ್ರಿ ಬೆಚ್ಚಗೆ ಅಲ್ಲೇ ಕಳೀ 
ಬಹುದು. ತೋಳಗಳ ಕಾಟಾನೂ ಇರೋಲ್ಲ. ” 

ಅವು ಅಲ್ಲಿಗೆ ಹೋಗಿನೋಡುತ್ತವೆ - ಶಿಬಿರಾಗ್ನಿ ಸುತ್ತ ಮೂರುತೋಳಗಳು ಕೂತಿವೆ ! 
ಅವು ಅಂಬಲಿ ಬೇಯಿಸ್ತಾ ಇವೆ . 

“ನಮಸ್ಕಾರ, ಗೆಳೆಯರೇ ! ” ಹೊತನೂ ಟಗರೂ ಒಟ್ಟಿಗೇ ಹೇಳಿದವು. 

“ ನಮಸ್ಕಾರ, ನಮಸ್ಕಾರ! ” ತೋಳಗಳು ಹೇಳಿದವು. “ ಬನ್ನಿ , ಬನ್ನಿ . ನಮ್ಮ ಅಂಬಲಿ ಇನ್ನೂ 
ಸಿದ್ದವಾಗಿಲ್ಲ . ಅದು ಬೇಯುತ್ತ ಇರೋವಾಗ ನಾವು ಸ್ವಲ್ಪ ನಿಮ್ಮ ಮಾಂಸದ ರುಚಿ ನೋಡ 
ಬಹುದು. ” 

ಇದನ್ನು ಕೇಳಿ ಧೈರ್ಯಶಾಲಿಯಾದ ಹೋತಕ್ಕೂ ಹೆದರಿಕೆ ಆಯಿತು. ಇನ್ನು ಟಗರಿನ 
ವಿಷಯ ಹೇಳಬೇಕಾಗೇ ಇಲ್ಲ – ತೋಳಗಳು ಕಣ್ಣಿಗೆ ಬಿದ್ದಾಗಿನಿಂದಲೂ ಅದು ಥರಥರ ನಡುಗು 
ತಲೇ ಇತ್ತು . 

ಹೋತ ಧೈರ್ಯ ತಂದುಕೊಂಡು ಆ ಅಪಾಯದಿಂದ ಪಾರಾಗಲು ಒಂದು ಉಪಾಯ 
ಯೋಚಿಸುತ್ತಾ ಟಗರಿಗೆ ಗಟ್ಟಿಯಾಗಿ ಹೇಳಿತು : “ ಬಾ , ತಮ್ಮ ಟಗರೇ ! ಆ ತೋಳನ ತಲೆಯನ್ನು 
ಚೀಲದಿಂದ ಹೊರಕ್ಕೆ ತೆಗಿ ! ” 

ಟಗರು ಹಾಗೇ ಮಾಡಿತು. 
“ಉಹೂಂ, ಅದಲ್ಲ. ಇನ್ನೊಂದು ದೊಡ್ಡದು! ” ಹೋತ ಹೇಳಿತು. 
ಟಗರು ತೋಳನ ತಲೆಯನ್ನು ಚೀಲದೊಳಕ್ಕೆ ಹಾಕಿ ಮತ್ತೆ ಅದನ್ನೇ ಹೊರಕ್ಕೆ ತೆಗೆಯಿತು. 

“ಉಹೂಂ. ಅದೂ ಅಲ್ಲಪ್ಪ ! ಇನ್ನೂ ದೊಡ್ಡದಿದೆ, ನೋಡು. ಎಲ್ಲಕ್ಕಿಂತ ದೊಡ್ಡದು. 
ಅದನ್ನು ತೆಗಿ ! ” 
- ಇದನ್ನು ಕೇಳಿಸಿಕೊಂಡ ತೋಳಗಳಿಗೆ ಜಂಘಾಬಲವೇ ಉಡುಗಿ ಹೋಯಿತು. ಹೇಗಾದರೂ 
ಮಾಡಿ ಇವುಗಳಿಂದ ತಪ್ಪಿಸಿಕೊಂಡು ಹೋದರೆ ಸಾಕು ಅಂತ ಅನಿಸಿತು ಅವಕ್ಕೆ . ಅವುಯೋಚನೆ 
ಮಾಡ ತೊಡಗಿದವು. ಒಂದು ಇನ್ನೊಂದರ ಹಂಚಿಕೆ ಏನು ಅಂತ ತಿಳಿದುಕೊಳ್ಳಲು ತಲೆ ಮುಂದು 
ಮಾಡುತ್ತಿದ್ದವು. 
ಕೊನೆಗೆ ಒಂದು ತೋಳ ಹೇಳಿತು : 

“ ನಾವೆಲ್ಲ ಒಟ್ಟಿಗೆ ಸೇರಿದುದು ಎಷ್ಟು ಸಂತೋಷ, ಸೋದರರೇ ! ನಮ್ಮ ಅಂಬಲಿಯ 
ಚೆನ್ನಾಗಿ ಬೇಯುತ್ತಿದೆ. ಅದಕ್ಕೆ ಇನ್ನೂ ಸ್ವಲ್ಪ ನೀರು ಬೇಕು ಅಂತ ಕಾಣುತ್ತೆ . ನಾನು ಹೋಗಿ 
ತಗೊಂಡು ಬತ್ತೀನಿ. ” 

ಹಾಗೆಂದು ಸ್ವಲ್ಪ ದೂರ ಹೋಗಿ ತನ್ನಲ್ಲೇ “ಓಹ್, ಸಾಕಾಯಿತು ಇವುಗಳ ಸಹವಾಸ ! 
ಇವೆಲ್ಲ ಹಾಳಾಗಿ ಹೋಗಲಿ ! ” ಎಂದು ಹೇಳಿಕೊಳ್ಳುತ್ತ ಓಡಿ ಹೋಯಿತು . 

ಅದೇ ರೀತಿ ಎರಡನೆಯ ತೋಳವೂ ಹ್ಯಾಗೆ ಕಂಬಿ ಕೀಳೋದೂ ಅಂತ ಯೋಚನೆ ಮಾಡಿತು . 
ಕೊನೆಗೆ ಹೇಳಿತು : 

“ನೋಡಿದಿರಾ ಆ ಶನಿ ಮುಂಡೇ ಗಂಡ ! ಹೋದವ ಹಿಂದಿರುಗಿ ಬರಲೇ ಇಲ್ಲ ! 
ಭೂಮಿಯೇ ನುಂಗಿ ಹಾಕಿ ಬಿಟ್ಟಿತೇನೋ ಅಂತ ! ಅಂಬಲಿಗೆ ನೀರು ತರಲೇ ಇಲ್ಲ. ನಾನು ಹೋಗಿ 
ಕೋಲು ತಗೊಂಡು ಹೊಡಕೊಂಡು ಬತ್ತೀನಿ. ” 

ಹಾಗೆಂದು ಅದೂ ಓಟ ಕಿತ್ತಿತು. 
ಮೂರನೆಯ ತೋಳವೂ ಸ್ವಲ್ಪ ಹೊತ್ತು ಕಾದು ಹೇಳಿತು : 
“ ಸರಿ, ನಾನು ಹೋಗಿ ಇಬ್ಬರನ್ನೂ ಹಿಡಕೊಂಡು ಬತ್ತೀನಿ! ” 
ಅದೂ ಓಡಿತು , ಬಚಾವಾದೆನಲ್ಲ ಅಂತ ಸಂತೋಷದಿಂದ. 

" ಹುಂ , ಬೇಗ ಬಾ , ಟಗರು ತಮ್ಮ ! ಕಾಲ ಕಳೆಯಲು ಸಮಯವಿಲ್ಲ. ಬೇಗ ಬೇಗ ಅಂಬಲಿ 
ತಿಂದು ಓಡಿ ಹೋಗೋಣ! ” ಅಂದಿತು ಹೋತ. 

ಈ ಮಧ್ಯೆ ಮತ್ತೆ ಒಟ್ಟಿಗೆ ಸೇರಿದ ಮರು ತೋಳಗಳೂ ಯೋಚನೆ ಮಾಡ ತೊಡ 
ಗಿದವು. ಒಂದು ತೋಳ ಹೇಳಿತು : 

“ಏನು ಮಾಡಿ ಬಿಟ್ಟೆವು ನಾವು! ಹೊತಕ್ಕೂ ಟಗರಿಗೂ ಹೆದರೋದೆ,ಸೋದರರೇ ? ಬನ್ನಿ 
ಹೋಗೋಣ, ಆ ಶನಿ ಮುಂಡೇವನ್ನು ತಿಂದು ಹಾಕೋಣ. ” 
- ಅವು ಹಿಂದಿನ ಸ್ಥಳಕ್ಕೆ ಓಡಿ ಬಂದವು. ಆದರೆ ಹೋತ ಹಾಗೂ ಟಗರು ಅಲ್ಲಿರಲೇ ಇಲ್ಲ . 
ಅವು ಅಂಬಲಿಯನ್ನೆಲ್ಲ ತಿಂದು ಒಂದು ಮರ ಹತ್ತಿ ಕುಳಿತಿದವು. 

ತೋಳಗಳು ಏನು ಮಾಡೋದು ಅಂತ ಯೋಚನೆ ಮಾಡ ತೊಡಗಿದವು. ಸ್ವಲ್ಪ ದೂರ 
ಹೋಗಿ ಸುತ್ತಮುತ್ತ ನೋಡಿದವು. ಅಕೋ , ಹೋತನೂ ಟಗರೂ ಅಲ್ಲೇ ಇವೆ, ಮರದ ಮೇಲೆ! 
ಹೆಚ್ಚು ಧೈರ್ಯಶಾಲಿಯಾದ ಹೋತ ಹೆಚ್ಚು ಎತ್ತರಕ್ಕೆ ಹತ್ತಿ ಕುಳಿತಿತ್ತು . ಟಗರು ಸ್ವಲ್ಪ ಕೆಳಗೆ 
ಕುಳಿತಿತ್ತು . 
ಚಿಕ್ಕ ತೋಳಪೊದೆಗೂದಲಿನ ದೊಡ್ಡ ತೋಳಕ್ಕೆ ಹೇಳಿತು : “ 

ನೋಡುನೀನು ದೊಡೋನು. 
ಈಗ ಏನು ಮಾಡಬೇಕು ಅಂತ ನೀನೇ ಯೋಚನೆ ಮಾಡಿ ಹೇಳು. ” 

ಪೊದೆಗೂದಲ ತೋಳ ಮರದ ಕೆಳಗೆ ಕುಳಿತು ಯೋಚನೆ ಮಾಡ ತೊಡಗಿತು . ಮರದ 
ಮೇಲೆ ಕುಳಿತ ಟಗರಿಗೆ ಹೆದರಿಕೆ - ಗಡಗಡ ನಡುಗುತ್ತ ಇದೆ . ಕೊನೆಗೆ ತಾಳಲಾರದೆ ಕೆಳಕ್ಕೆ 
ಬಿದೇ ಬಿಟ್ಟಿತು - ನೇರವಾಗಿ ಪೊದೆಗೂದಲ ತೋಳನ ಮೇಲೆಯೇ ! ಮರದ ಮೇಲೆ ಎತ್ತರದಲ್ಲಿ 
ಕುಳಿತಿದ್ದ ಹೊತ ಹೀಗೆ ಆಗಬಹುದು ಅಂತ ಮೊದಲೇ ಅಂದುಕೊಂಡಿತ್ತು . ಅದು ಕೂಡಲೇ 
ಕೂಗಿ ಹೇಳಿತು : 

“ ಹಿಡಕೊಂಡು ಬಾ ಇಲ್ಲಿ ಆ ಪೊದೆಗೂದಲಿನವನನ್ನು ! ” ಹಾಗೆಂದು ಅದು ಕೂಡ ಮರ 
ದಿಂದ ಕೆಳಕ್ಕೆ ತೋಳಗಳ ಮೇಲೆ ಬಿದ್ದಿತು . 

ತೋಳಗಳು ಹೆದರಿ ಕಂಬಿ ಕಿತ್ತವು. ಎಷ್ಟು ಜೋರಾಗಿ ಓಡಿದವೆಂದರೆ ಅವುಗಳ ಹಿಂದೆ ಭಾರಿ 
ಧೂಳಿನ ಮೋಡವೇ ಎದ್ದಿತು . 

ಈಗ ಹೊತಕ್ಕೂ ಟಗರಿಗೂ ಯಾವ ಚಿಂತೆಯ ಇರಲಿಲ್ಲ . ಅವು ಸ್ವತಂತ್ರವಾಗಿ ಸುಖವಾಗಿ 
ಜೀವಿಸಿಕೊಂಡು ಇದ್ದವು. 

ಮಾರ್ಜಾಲ ಮಹಾಶಯ

ಒಂದು ಕಾಲದಲ್ಲಿ ಒಬ್ಬ ಮನುಷ್ಯ ಇದ್ದ. ಅವನ ಹತ್ತಿರ ಒಂದು ಬೆಕ್ಕು ಇತ್ತು . ಅದು ಎಷ್ಟು 
ಮುದಿಯಾಗಿತ್ತು ಅಂದರೆ ಇಲಿಗಳನ್ನು ಹಿಡಿಯಲೂ ಅದರ ಕೈಲಾಗುತ್ತಿರಲಿಲ್ಲ. ಅದರ ಯಜ 
ಮಾನ ಹೀಗೆ ಯೋಚನೆ ಮಾಡಿದ : “ ಈ ಬೆಕ್ಕನ್ನು ಇಟ್ಟುಕೊಂಡು ನನಗೇನು ಪ್ರಯೋಜನ ? 
ಕಾಡಿಗೆ ಕರಕೊಂಡು ಹೋಗಿ ಬಿಟ್ಟು ಬಿಡ್ತೀನಿ.” ಕರಕೊಂಡು ಹೋಗಿ ಬಿಟ್ಟು ಬಂದ. 

ಬೆಕ್ಕು ಮರದ ಕೆಳಗೆ ಕುಳಿತು ಅಳುತ್ತೆ . ಆ ಸಮಯಕ್ಕೆ ಸರಿಯಾಗಿ ನರಿಯಕ್ಕ ಆ ಕಡೆಗೆ ಓಡಿ 
ಬಂದಿತು. 
“ ಯಾರು ನೀನು ? ” ಅದು ಕೇಳುತ್ತೆ . 
ಬೆಕ್ಕು ಕೂದಲು ಕೆದರಿಸಿಕೊಂಡು ಹೇಳುತ್ತೆ : 
“ ಫುಫು! ನಾನು ಮಾರ್ಜಾಲ ಮಹಾಶಯ ! ” 

ಇಂತಹ ಮುಖ್ಯ ಮಹಾಶಯನ ಪರಿಚಯ ಪಡೆದು ನರಿಗೆ ಸಂತೋಷವೇ ಆಯಿತು. 
ಅದು ಆ ಬೆಕ್ಕಿಗೆ ಹೇಳಿತು : 

“ ನನ್ನನ್ನು ಮದುವೆಯಾಗು . ನಾನು ನಿನಗೆ ಒಳ್ಳೆಯ ಹೆಂಡತಿಯಾಗುತ್ತೇನೆ. ಚೆನ್ನಾಗಿ ಅಡಿಗೆ 
ಮಾಡಿ ಹಾಕ್ತಿನಿ.” 

“ ಆಗಲಿ ” ಬೆಕ್ಕು ಹೇಳುತ್ತೆ . “ ಮದುವೆ ಆಗ್ತಿನಿ.” 
ಹೀಗೆ ಅವು ಪರಸ್ಪರ ಒಪ್ಪಿಕೊಂಡು ನರಿಯ ಗುಡಿಸಿಲಿನಲ್ಲಿ ವಾಸ ಮಾಡಲು ಹೋದವು. 
ನರಿ ಬೆಕ್ಕಿಗೆ ನಾನಾ ರೀತಿಯ ಆಹಾರ ತಂದು ಕೊಡುತ್ತಿತ್ತು . ಒಂದು ಸಾರಿ ಕೋಳಿ ತಂದು 
ಕೊಟ್ಟಿತು, ಇನ್ನೊಂದು ಸಾರಿ ಇನ್ಯಾವುದೋ ಕಾಡಿನ ಮೃಗದ ಮಾಂಸ ತಂದು ಕೊಟ್ಟಿತು. 
ತನಗೇ ತಿನ್ನಲು ಇರಲಿ ಬಿಡಲಿ , ಬೆಕ್ಕಿಗಂತೂ ತಂದು ಕೊಡುತ್ತಿತ್ತು . 

ಒಂದು ಸಾರಿ ಶೀಘ್ರು ಓಟದ ಮೊಲ ಈ ನರಿಯನ್ನು ಸಂಧಿಸಿ ಹೇಳಿತು : 
“ ನರಿಯಕ್ಕ , ನಾನು ನಿನ್ನ ಮನೆಯ ಒಳಕ್ಕೆ ವಿವಾಹ ಪ್ರಸ್ತಾಪ ಮಾಡಲು ಬದ್ದೀನಿ! ” 
“ ಬೇಡ, ಬೇಡ. ಬರಬೇಡ ! ನನ್ನ ಮನೆಯಲ್ಲಿ ಈಗ ಮಾರ್ಜಾಲ ಮಹಾಶಯ ಇದಾನೆ. 
ಅವನು ನಿನ್ನನ್ನು ಸಿಗಿದು ಹಾಕ್ತಾನೆ. ” 

ಆ ಹೊತ್ತಿಗೆ ಸರಿಯಾಗಿ ಬೆಕ್ಕು ಬಿಲದಿಂದ ಹೊರ ಬಂದಿತು . ಕೂದಲು ಕೆದರಿಸಿಕೊಂಡು 
ಶರೀರವನ್ನು ಕಮಾನಿನಂತೆ ಬಾಗಿಸಿಕೊಂಡು ಪೂತ್ಕರಿಸಿತು : “ಫುಫು! ” 

ಮೊಲಕ್ಕೆ ಪ್ರಾಣ ಹೋದಷ್ಟು ಭಯವಾಯಿತು. ಓಟ ಕಿತ್ತಿತು. ಅದು ತೋಳಕ್ಕೆ , ಕರಡಿಗೆ, 
ಕಾಡುಹಂದಿಗೆ ತಾನು ಮಾರ್ಜಾಲ ಮಹಾಶಯ ಎಂಬ ಯಾವುದೊ ಭಯಂಕರ ಕಾಡುಮೃಗ 
ವನ್ನು ಕಂಡುದಾಗಿ ತಿಳಿಸಿತು . 
- ಅವು ಹೇಗಾದರೂ ಮಾಡಿ ಈ ಮಾರ್ಜಾಲ ಮಹಾಶಯನನ್ನು ಸಂಧಿಸಬೇಕು ಅಂತ 
ನಿರ್ಧರಿಸಿದವು. ಅದನ್ನು ನರಿಯೊಂದಿಗೆ ಊಟಕ್ಕೆ ಬರುವಂತೆ ಆಹ್ವಾನಿಸಬೇಕು ಅಂದುಕೊಂಡವು. 

ಅತಿಥಿಗಳಿಗೆ ಊಟಕ್ಕೆ ಏನು ಸಿದ್ಧಗೊಳಿಸುವುದು ಅಂತ ಸಮಾಲೋಚಿಸ ತೊಡಗಿದವು. 
ತೋಳ ಹೇಳಿತು : 
“ ನಾನು ಮಾಂಸ ತರೀನಿ. ಅದರಿಂದ ಚೆನ್ನಾದ ಸಾರು ಮಾಡಬಹುದು . ” 
ಕಾಡುಹಂದಿ ಹೇಳಿತು : 
“ ನಾನು ಹೋಗಿ ಬೀಟ್ ಗೆಡ್ಡೆ ಹಾಗೂ ಆಲೂಗೆಡ್ಡೆ ತರೀನಿ.” 
ಕರಡಿ ಹೇಳಿತು : 
“ ನಾನು ಜೇನುತುಪ್ಪ ತರೀನಿ. ಊಟಕ್ಕೆ ರುಚಿಯಾಗಿರುತ್ತೆ . ” 
ಮೊಲ ಓಡಿ ಹೋಗಿಕೋಸು ತಂದಿತು . 

ಅವು ಊಟ ಸಿದ್ಧಗೊಳಿಸಿದವು. ಎಲ್ಲವನ್ನೂ ಮೇಜಿನ ಮೇಲೆ ಇರಿಸಿದವು. ಈಗ ಯಾರು 
ಹೋಗಿ ನರಿಯನ್ನೂ ಮಾರ್ಜಾಲ ಮಹಾಶಯನನ್ನೂ ಕರೆತರುವುದು ಎಂಬ ಬಗೆಗೆ ಚರ್ಚೆ 
ಪ್ರಾರಂಭವಾಯಿತು. 

ಕರಡಿ ಹೇಳಿತು : 
“ ನಾನು ದಪ್ಪ , ಬೇಗ ಓಡಲಾರೆ . ನನಗೆ ಉಸಿರು ಕಟ್ಟುತ್ತೆ . ” 
ಕಾಡುಹಂದಿ ಹೇಳಿತು : 
“ ನಾನು ಒಡೊಡು. ಬೇಗ ಹೋಗಲಾರೆ.” 
ತೋಳ ಹೇಳಿತು : 
“ ನನಗೆ ವಯಸ್ಸಾಗಿದೆ . ಕಿವಿಯೇ ಸರಿಯಾಗಿ ಕೇಳಿಸುತ್ತಿಲ್ಲ.” 
ಹಾಗಾಗಿ ಮೊಲವೇ ಹೋಗಬೇಕಾಗಿ ಬಂದಿತು . 

ಮೋಲ ನರಿಯ ಬಿಲದ ಬಳಿಗೆ ಓಡಿ ಹೋಯಿತು . ಕಿಟಕಿಯನ್ನು ಮೂರು ಬಾರಿ ತಟ್ಟಿತು: 
“ ಟಪ್ ಟಪ್ ಟಪ್ ! ” 

ನರಿ ಹೊರಗೆ ಬಂದು ನೋಡಿತು - ಮೊಲ ಬಂದಿತ್ತು , ಹಿಂಗಾಲುಗಳ ಮೇಲೆ ನಿಂತಿತ್ತು ! 
“ನಿನಗೆ ಏನು ಬೇಕು ? ” ಅದು ಕೇಳಿತು . 

“ತೋಳ, ಕರಡಿ, ಕಾಡುಹಂದಿ ಹಾಗೂ ನಾನು ನಿಮ್ಮನ್ನು - ನಿನ್ನನ್ನೂ ಮಾರ್ಜಾಲ ಮಹಾ 
ಶಯನನ್ನೂ - ನಮ್ಮಲ್ಲಿಗೆ ಊಟಕ್ಕೆ ಆಹ್ವಾನಿಸುತ್ತಿದ್ದೇವೆ. ” 

ಹೇಳಿತು , ಓಡಿತು . ಓಡಿ ಬರುತ್ತಿರುವಾಗ ಕರಡಿ ಅದಕ್ಕೆ ಸಿಕ್ಕಿ ಕೇಳಿತು : “ ಅವರು 
ತಮ್ಮೊಂದಿಗೆ ಚಮಚಗಳನ್ನು ತರಬೇಕು ಅಂತ ಹೇಳೋದನ್ನು ಮರೀಲಿಲ್ಲ. 
ತಾನೇ ? ” 

“ಅಯ್ಯೋ , ಮರೆತೇ ಬಿಟ್ಟೆ ! ” ಮೊಲ ಹೇಳಿತು. ಮತ್ತೆ ನರಿಯ ಬಳಿಗೆ ಓಡಿತು . 
ಓಡಿ ಬಂದು ಕಿಟಕಿ ತಟ್ಟಿತು. 
“ ಚಮಚಗಳನ್ನು ತರುವುದನ್ನು ಮರೀಬೇಡಿ! ” ಹೇಳಿತು . 
ನರಿ ಉತ್ತರಿಸಿತು : 
“ ಆಗಲಿ, ಆಗಲಿ, ಮರೆಯೊಲ್ಲ!” 

ನರಿಯಕ್ಕ ಊಟಕ್ಕೆ ಹೋಗಲು ಅಣಿಯಾಯಿತು. ಮಾರ್ಜಾಲ ಮಹಾಶಯನ ಕೈ 
ಹಿಡಿದುಕೊಂಡು ಹೋಯಿತು. ಮಾರ್ಜಾಲ ಮಹಾಶಯ ಮತ್ತೆ ಕೂದಲು ಕೆದರಿಸಿಕೊಂಡು, 
ಫತ್ಕರಿಸುತ್ತೆ : “ ಫು- ಪು- ಫು ! ” ಅದರ ಕಣ್ಣುಗಳು ಎರಡು ಹಸಿರು ಬೆಂಕಿ ಉಂಡೆಗಳಂತೆ ಉರಿಯು 
ಇವೆ. 

ತೋಳಕ್ಕೆ ಭಯವಾಯಿತು. ಪೊದೆಗಳ ಹಿಂದೆ ಅವಿತುಕೊಂಡಿತು . ಕಾಡುಹಂದಿ ಮೇಜಿನ 
ಕೆಳಗೆ ಮರೆಯಾಗಿ ಕುಳಿತುಕೊಂಡಿತು . ಕರಡಿ ಹತ್ತಿರದಲ್ಲೇ ಇದ್ದ ಯಾವುದೋ ಮರದ ಮೇಲಕ್ಕೆ 
ಹತ್ತಿ ಹೋಯಿತು. ಮೊಲ ಬಿಲದೊಳಗೆ ಹೋಗಿ ಅಡಗಿಕೊಂಡಿತು . 
- ಬೆಕ್ಕು ಮೇಜಿನ ಮೇಲಿದ್ದ ಮಾಂಸದ ವಾಸನೆಯನ್ನು ಮೂಸಿಅದರ ಬಳಿಗೆ ಓಡಿಹೋಯಿತು. 
“ಮಿಯಾವ್ -ಮಿಯಾವ್ - ಮಿಯಾವ್ ! ” ಅಂತ ಕೂಗುತ್ತ ಗಬಗಬನೆ ತಿನ್ನ ತೊಡಗಿತು . 
“ಮಿಯಾವ್ -ಮಿಯಾವ್ ” ಅಂದದ್ದು ಆ ಮೃಗಗಳಿಗೆ ಬೆಕ್ಕು ಸಾಲದು- ಸಾಲದು ” ಅನ್ನು 
ದೆಯೇನೋ ಎಂದು ಅನಿಸಿತು . 

“ ಎಂಥ ಹೊಟ್ಟೆಬಾಕ ಇದು. ಎಷ್ಟಿದರೂ ಸಾಲದು ಅನ್ನುತ್ತದಲ್ಲ ! ” ಎಂದುಕೊಂಡವು 
ಅವು. 

ಮಾರ್ಜಾಲ ಮಹಾಶಯ ಚೆನ್ನಾಗಿ ತಿಂದಿತು , ಕುಡಿಯಿತು, ಮೇಜಿನ ಮೇಲೇ ಮಲಗಿ 
ನಿದ್ರೆಮಾಡಿತು . 

ಕಾಡುಹಂದಿ ಮೇಜಿನ ಕೆಳಗೆ ಅಡಗಿ ಕುಳಿತಿದ್ದಿತಷ್ಟೆ . ಅದರ ಬಾಲದ ತುದಿಯಷ್ಟೆ ಹೊರಗೆ 
ಕಾಣುತ್ತಿತ್ತು . ಅದು ಇಲಿ ಎಂದು ಬೆಕ್ಕಿಗೆ ಅನ್ನಿಸಿತು . ಅದರ ಬಳಿಗೆ ಹೋಯಿತು. ಕಾಡುಹಂದಿ 
ಯನ್ನು ಕಂಡಿತು. ಹೆದರಿ ಹತ್ತಿರದಲ್ಲೇ ಇದ್ದ ಮರ ಹತ್ತಿತು. ಅದೇ ಮರದ ಮೇಲೆ ಕರಡಿಯ 
ಕುಳಿತಿತ್ತು . 

ಬೆಕ್ಕು ತನ್ನ ಜೊತೆಗೆ ಹೋರಾಡಲು ಮೇಲಕ್ಕೆ ಹತ್ತಿ ಬರುತ್ತಿದೆ ಎಂದು ಕರಡಿಗೆ ಅನ್ನಿಸಿತು . 
ಅದು ಇನ್ನೂ ಮೇಲಕ್ಕೆ ಹತ್ತಿ ಹೋಯಿತು. ಅದರ ಭಾರಕ್ಕೆ ಕೊಂಬೆಗಳು ಮುರಿದವು. ಕರಡಿ 
ದೊಪ್ಪೆಂದು ಕೆಳಕ್ಕೆ ಬಿದ್ದಿತು. 

ಅದೂ ನೇರವಾಗಿ ತೋಳ ಅಡಗಿ ಕುಳಿತಿದ್ದ ಪೊದೆಯ ಮೇಲೆಯೇ ಬಿದ್ದಿತು . ತೋಳ 
ಅಂದುಕೊಂಡಿತು - ಬೆಕ್ಕು ಕೊನೆಗೆ ತನ್ನ ಮೇಲೇ ಬೀಳಲು ಬಂದಿದೆ. ಹಾಗೆಂದುಕೊಂಡು 
ಅದು ಓಟ ಕಿತ್ತಿತು ! ಅವು ಹೀಗೆ ಓಡಿದವು – ತೋಳ, ತೋಳದ ಹಿಂದೆ ಕರಡಿ, ಕರಡಿಯ ಹಿಂದೆ 
ಮೊಲ. 

ಬೆಕ್ಕು ಮತ್ತೆ ಊಟದ ಮೇಜಿನ ಮೇಲಕ್ಕೆ ಹೋಯಿತು. ಮಾಂಸ , ಜೇನು, ರುಚಿರುಚಿಯಾದ 
ಭಕ್ಷಗಳನ್ನೆಲ್ಲ ತಿಂದಿತು . ಎಲ್ಲವನ್ನೂ ತಿಂದು, ಕುಡಿದು , ಬೆಕ್ಕೂ ನರಿಯ ತಮ್ಮ ಮನೆಗೆ 
ಹೋದವು. 

ತೋಳ, ಕರಡಿ , ಕಾಡುಹಂದಿ ಹಾಗೂ ಮೊಲ ಮತ್ತೆ ಜೊತೆಗೂಡಿದವು. ಹೇಳುತ್ತವೆ: 
“ಎಂಥ ಪ್ರಾಣಿ ಇದು ! ನೋಡೋಕೆ ಎಷ್ಟು ಚಿಕ್ಕದಾಗಿದೆ. ನಮ್ಮ ನಾಲ್ವರನ್ನೂ ತಿಂದು ಹಾಕು 
ವುದರಲ್ಲಿತಲ್ಲ ! ”