ಮಾಯಾ ಪತ್ರ / ಮ್ಯಾಜಿಕ್ ಲೆಟರ್

ಮಕ್ಕಳೇ,

ಇವತ್ತು ನಾನು ನಿಮಗೆ ಮ್ಯಾಜಿಕ್ ಲೆಟರ್ ಬರೆಯೋದು ಹೇಗೆ ಅಂತ ಹೇಳಿ ಕೊಡ್ತಿನಿ.

ಸಿದ್ದತೆ:


ಮೊದಲು ಎರಡು ಖಾಲಿ ಬಿಳಿಹಾಳೆಗಳನ್ನ ತೆಗೆದುಕೊಳ್ಳಿ, ಅದರಲ್ಲಿ ಒಂದು ಹಾಳೆಯನ್ನ ನೀರಿನಲ್ಲಿ ಅದ್ದಿರಿ ನಂತರ ಅದನ್ನು ತೆಗೆದುಕೊಂಡು ಯಾವುದಾದರೂ ಸಮತಟ್ಟಾದ ಮತ್ತು ಕ್ಲೀನ್ ಇರುವ ಸ್ಥಳದ( ಕನ್ನಡಿ ಆದ್ರೂ Ok) ಮೇಲೆ ಹಾಸಿರಿ, ಅದರ ಮೇಲೆ ಇನ್ನೊಂದು ಒದ್ದೆ ಮಾಡದ ಹಾಳೆ ಹಾಕಿ ಆ ಹಾಳೆಯ ಮೇಲೆ ನಿಮ್ಮ ಸಂದೇಶ ಬರೆಯಿರಿ, ಆಗ ಅದು ಒದ್ದೆ ಹಾಳೆಯ ಮೇಲೆ ಮೂಡುತ್ತದೆ ನಂತರ ಒದ್ದೆ ಹಾಳೆಯನ್ನು 5-6 ನಿಮಿಷ ಬಿಸಿಲಲ್ಲಿಡಿ, ಆ ಹಾಳೆ ಒಣಗಿದ ನಂತರ ಅದರಲ್ಲಿನ ಅಕ್ಷರಗಳು ಕಾಣಲಾರವು.

ಪ್ರಯೋಗ:

ನಂತರ ಅದನ್ನು ನಿಮ್ಮ ಸ್ನೇಹಿತರಿಗೆ ಕೊಟ್ಟು ಇದು ಮ್ಯಾಜಿಕ್ ಪೇಪರ್ ಇದರಲ್ಲಿ ಇರುವುದನ್ನು ಓದಿ ಎಂದು ಹೇಳಿ, ಅವರು ಅದನ್ನ ಓದಲಾರರು (ಏನಾದರೂ ಕಂಡರೆ ತಾನೆ ಓದೋದು?) ನಿಮ್ಮ ಸ್ನೇಹಿತನಿಂದ ಅದನ್ನು ಪಡೆದು ಅಬ್ರಕ ದಬ್ರ (ಏನಾದರೂ ಹೇಳಿ) ಎಂದು ಹೇಳಿ, ಆ ಹಾಳೆಯನ್ನು ನೀರಲ್ಲಿ ಅದ್ದಲು ಹೇಳಿ, ಆಗ ನೀವು ಬರೆದ ಸಂದೇಶ ಮತ್ತೆ ಹಾಳೆಯಲ್ಲಿ ಮೂಡುವುದು. ಆಗ ನಿಮ್ಮ ಸ್ನೇಹಿತ ಶಾಕ್ ನೀವು ಪುಲ್ ಖುಷ್

ಮ್ಯಾಜಿಕ್ ಮಾಡಿ ಹೇಗೆ ಮಜಾ ಮಾಡಿದ್ರಿ ಹೇಳ್ತೀರಲ್ಲಾ?

ಮ್ಯಾಜಿಕ್ ಕಲಿಸಿ ಕೊಟ್ಟವರು: ಬಸವರಾಜ್ ಬಿ, ಕುಂಬಳೂರು, ಹರಿಹರ  ತಾಲ್ಲೂಕು, ದಾವಣಗೆರೆ. ಜಿಲ್ಲೆ

 

6 ಪ್ರತಿಕ್ರಿಯೆಗಳು

  1. ಉತ್ತಮ ಮಾಹಿತಿ.. ನಾವೂ ಟ್ರೈ ಮಾಡ್ಬಹುದು.

  2. ಮ್ಯಾಜಿಕ್ ಟ್ರಿಕ್ ಚೆನ್ನಾಗಿದೆ :)

  3. ಮ್ಯಾಜಿಕ್ ಲೆಟರ್ ಓದಿ ನಾನು ಕೂಡ ಅದನ್ನು ಮಾಡಿದೆ. ನಂತರ ನನ್ನ ಮಗನಿಗೆ ಮಾಡಲು ಹೇಳಿದೆ.

    ತುಂಬಾ ಚೆನ್ನಾಗಿದೆ ಈ ಮ್ಯಾಜಿಕ್.

  4. ಚೆನ್ನಾಗಿದೆ ಈ ಮ್ಯಾಜಿಕ್, ನಾವೂ ಮಾಡಿ ನೋಡ್ತೀವಿ!

  5. ನಾನು ಮಾಡಿ ನೋಡಿದೆ …. ಚೆನ್ನಾಗಿದೆ