by admin | ನವೆಂ 16, 2010 | ಪ್ರಯೋಗ, ಮಾಡಿ ತಿಳಿ
ಯಾವುದೇ ಕೆಲಸ ಮಾಡೋ ಮುಂಚೆ ಬೇಕಿರೋದು ಆತ್ಮ ವಿಶ್ವಾಸ. ಆಮೇಲೆ ಕೆಲ್ಸಾ ಅಂದರೆ ಕೆಲ್ಸಾ. ಮೇಲು ಕೀಳು ಅಂತಾ ಇಲ್ಲಾ. ನಮ್ಮಲ್ಲಿ ಸೈಕಲ್ ಕೆಲ್ಸ ಅಂದರೆ ಕೀಳು ಅನ್ನುವ ಭ್ರಮೆ ಎಷ್ಟೋ ಜನರಿಗೆ ಇದೆ. ನಿಮ್ಮ್ ಸೈಕಲ್ ಪಂಚರ್ ಆದಾಗ ಏನ್ ಮಾಡ್ತೀರಿ ?
1. ರಿಪೇರಿ ಅಂಗಡಿ ಹುಡುಕಿಕೊಂಡು ಹೋಗಿ ರಿಪೇರಿ ಮಾಡಿಸ್ತೀನಿ.
2. ಅಪ್ಪಾ / ಅಮ್ಮಾ ರಿಪೇರಿ ಅಂಗಡಿ ಹುಡುಕಿಕೊಂಡು ಹೋಗಿ ರಿಪೇರಿ ಮಾಡಿಸ್ತಾರೆ.
3. ನಮ್ಮ್ ಮನೆ ಹತ್ತಿರಾ ಸೈಕಲ್ ರಿಪೇರಿ ಅಂಗಡಿ ಇಲ್ಲಾ ಅದಕ್ಕೆ ರಿಪೇರಿ ಮಾಡಿಸದೆ ಸೈಕಲ್ ಮೂಲೆಗೆ ತಳ್ತೀನಿ.
ಸೈಕಲ್ ಪಂಚರ್ ರಿಪೇರ್ ಮಾಡೋದು ಸಿಕ್ಕಾಪಟ್ಟೆ ಸುಲಭ. ಬನ್ನಿ ಅದಕ್ಕೂ ಮುಂಚೆ ರಿಪೇರ್ ಮಾಡೋದಕ್ಕೆ ಏನೇನು ಟೂಲ್ಸ್ ಬೇಕು ತಿಳಿಯೋಣ.
ಇವು ಎಲ್ಲಾ ಸೈಕಲ್ ಮಾರುವ ಅಂಗಡಿಯಲ್ಲಿ ಸಿಗುತ್ತವೆ. ಇವುಗಳ ಬೆಲೆ ನೂರು ರೂಪಾಯಿಯೊಳಗೆ. ಎಲ್ಲವನ್ನೂ ಖರೀದಿ ಮಾಡಿ ಎಂದು ಡಬ್ಬದಲ್ಲಿ ಜೋಪಾನವಾಗಿಡಿ. ಆಗ ಅದು ಯಾವಾಗ ಬೇಕೋ ಆಗ ಸಿಗತ್ತೆ.
ಸೈಕಲ್ ರಿಪೇರಿ ಮಾಡುವಾಗ ಅನುಸರಿಸ ಬೇಕಾದಸೂತ್ರಗಳು ಇಲ್ಲಿವೆ.
೧. ಸೈಕಲ್ ಟ್ಯೂಬ್ ಹೊರಗೆ ತೆಗೆ.
೨. ಪಂಚರ್ ಆಗಿರುವ ಜಾಗ ಹುಡುಕಿ ಒಂದು ಗುರುತು ಮಾಡು.
೩. ಪಂಚರ್ ಜಾಗಕ್ಕೆ ಒಂದು ಸಣ್ಣ ಬ್ಯಾಂಡೇಜ್ ಮೆತ್ತಿ.
೪. ಪಂಚರ್ ಇಲ್ಲಾ ಎಂಬುದು ಖಚಿತ ಮಾಡಿಕೊ..
೫. ಸೈಕಲ್ ಟ್ಯೂಬ್ ಒಳಗೆ ತೂರಿಸು.
ಅಷ್ಟೇ ಇದೇನ್ ಬ್ರಹ್ಮ ವಿದ್ಯೆ ಅಂತೂ ಅಲ್ಲವೇ ಅಲ್ಲಾ ! ಮುಂದಿನ ಬಾರಿ ನಿಮ್ಮ ಸೈಕಲ್ ಜವಾಬ್ದಾರಿ ನೀವೆ ತಗೋತ್ತೀರಾ ?
by admin | ಆಗಸ್ಟ್ 5, 2010 | ಗಣಿತ, ಪ್ರಯೋಗ, ಮಾಡಿ ತಿಳಿ
ಕೆಲವೊಬ್ಬರು ಇರ್ತಾರೆ ತಮಗೆ ಏನೂ ಗೊತ್ತಿಲ್ಲದೇ ಇದ್ರೂ ಎಲ್ಲಾ ನನಗೆ ಗೊತ್ತು ಅಂತ ತೋರಿಸಿಕೊಳ್ಳೋ ಚಟ ಇರುತ್ತೆ. ಅವರ ಸೊಕ್ಕು ಅಡಗಿಸೋದು ಹೇಗೆ ಅಂತ ಯೋಚ್ನೆ ಮಾಡ್ತಾ ಇದ್ದೀರಾ…ಅವರೇ ಆಯ್ದುಕೊಂಡ ಅಂಕಿಗಳೊಂದಿಗೆ ಆಟ ಆಡಿ ಅವರಿಗಿಂತ ವೇಗವಾಗಿ ಉತ್ತರ ಹೇಳಬಹುದಾದರೆ ಚೆನ್ನಾಗಿರುತ್ತಲ್ಲ.ಪೀಠಿಕೆ ಜಾಸ್ತಿ ಆಯ್ತು ಆಟ ಏನು ಅಂತ ಕೇಳ್ತೀರಾ ಸರಿ ಆಟ ಹೀಗೆ…
ಆಟಕ್ಕೆ ಮೊದಲು ಒಂದು ಷರತ್ತು ಹಾಕಿ.ಇಬ್ಬರಿಗೂ ಸಂಖ್ಯೆಯ ಆಯ್ಕೆಯಲ್ಲಿ ಸಮಾನಾವಕಾಶ ಇರಬೇಕು. ಹಾಗಾಗಿ ಮೊದಲ ಸಂಖ್ಯೆಯ ಆಯ್ಕೆ ಅವರದ್ದು ಮುಂದೆ ಅದರ ಮೇಲೆ ಮಾಡಬೇಕಾದ ಗುಣಾಕಾರಕ್ಕೆ ಸಂಖ್ಯೆಗಳ ಆಯ್ಕೆ ನಿಮ್ಮದು ಅಂತ.
೧. ಯಾವುದಾದರೂ ಎರಡಂಕಿ ಸಂಖ್ಯೆಯನ್ನು ಆರಿಸಿ ನಿಮಗೆ ತಿಳಿಸಲು ಹೇಳಿ.(ಉದಾ:67)
೨. 3,7,13,37ರನ್ನು ಆಸಂಖ್ಯೆಯೊಂದಿಗೆ ಗುಣಿಸಲು ಹೇಳಿ (67x3x7x13x37)
೩. ಅವರಿನ್ನೂ ಲೆಕ್ಕ ಮಾಡುತ್ತಿರುವಾಗಲೇ ಅವರು ಆರಿಸಿದ ಸಂಖ್ಯೆಯನ್ನು ಮೂರು ಬಾರಿ ಬರೆದು(ಮೇಲೆ ಆರಿಸಿಕೊಂಡ ಸಂಖ್ಯೆಗೆ ಉತ್ತರ :676767) ನಿಮ್ಮ ಉತ್ತರ ಸಿದ್ಧವೆಂದು ಹೇಳಿ.
ಯಾವುದೇ ಎರಡಂಕಿ ಸಂಖ್ಯೆಗೆ ಈ ತಂತ್ರ ಬಳಸಬಹುದು
ಆಮೇಲೆ ಒಂದೇ ಆಟ ಎಷ್ಟು ಬಾರಿ ಅಂತ ಆಡ್ತೀರಾ… ಪ್ರತಿ ಬಾರಿ ಅದೇ ಅಂಕಿ ಹೇಳಿದ್ರೆ ನಿನಗೆ ಇದನ್ನ ಬಿಟ್ರೆ ಬೇರೆ ಬರೊಲ್ಲ ಅಂತ ಅವರೇ ನಿಮ್ಮನ್ನ ಹಂಗಿಸ್ತಾರೆ. ಅದಕ್ಕೆ ಬೇರೆ ಬೇರೆ ಆಟಗಳು ಬೇಕಲ್ವಾ.
೧. ಯಾವುದಾದರೂ ಮೂರಂಕಿ ಸಂಖ್ಯೆಯನ್ನು ಆರಿಸಿಕೊಂಡು ನಿಮಗೂ ತಿಳಿಸಲು ಹೇಳಿ. (ಉದಾ:756)
೨. 7,11 ಹಾಗೂ 13ರೊಂದಿಗೆ ಆ ಸಂಖ್ಯೆಯನ್ನು ಗುಣಿಸಲು ಹೇಳಿ.(756x7x11x13)
೩. ಇಲ್ಲಿ ಅವರು ಆರಿಸಿಕೊಂಡ ಸಂಖ್ಯೆಯನ್ನೇ ಎರಡು ಬಾರಿ ಬರೆದರೆ ಅದೇ ಉತ್ತರ.(ಮೇಲೆ ಆರಿಸಿಕೊಂಡ ಸಂಖ್ಯೆಗೆ ಉತ್ತರ 756756)
ಯಾವುದೇ ಮೂರಂಕಿ ಸಂಖ್ಯೆಗಳಿಗೆ ಇದನ್ನು ಬಳಸಬಹುದು.
ಇವೆರಡು ಚಿಕ್ಕದಾಯ್ತು. ಸ್ವಲ್ಪ ದೊಡ್ಡ ಅಂಕಿಗಳನ್ನು ಆರಿಸಿಕೊಳ್ಳೋಣ
೧. ಯಾವುದಾದರೂ ಐದಂಕಿ ಸಂಖ್ಯೆಯನ್ನು ಆರಿಸಿಕೊಳ್ಳಿ.(ಉದಾ:34216)
೨. ಅದನ್ನು 9091 ಹಾಗೂ 11ರಿಂದ ಗುಣಿಸಲು ಹೇಳಿ.(34216x9091x11)
೩. ಉತ್ತರ ಮತ್ತೆ ಅವರು ಆರಿಸಿದ ಸಂಖ್ಯೆಯನ್ನೇ ಎರಡು ಬಾರಿ ಬರೆಯುವುದು.(ಮೇಲೆ ಆರಿಸಿಕೊಂಡ ಸಂಖ್ಯೆಗೆ ಉತ್ತರ 3421634216)
ಅಲ್ಲ ಇದು ಹೇಗೆ ಅಂತ ಕೇಳ್ತೀರಾ ಅದನ್ನು ಕಂಡು ಹಿಡಿಯೋದು ನಿಮ್ಮ ಕೆಲಸ. ಸ್ವಲ್ಪ ಯೋಚಿಸಿ. ಗೊತ್ತಾಗಲಿಲ್ವಾ…
ಸರಿ ಒಂದು ಸುಳಿವು ಕೊಡ್ತೀನಿ. ಮೂರು ಆಟಗಳಲ್ಲಿ ೨ನೇ ಹಂತದಲ್ಲಿ ಕೊಟ್ಟಿರುವ ಸಂಖ್ಯೆಗಳನ್ನಷ್ಟೇ ಗುಣಿಸಿ ಬಂದ ಉತ್ತರ ನೋಡಿ…
ಲೇಖಕರು:– ಇಂದುಶ್ರೀ