ಹಾರುವ ಹಡಗು

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬ ಮುದುಕಿ ವಾಸವಾಗಿದ್ದರು. ಅವರಿಗೆ 
ಮರು ಗಂಡು ಮಕ್ಕಳು. ಇಬ್ಬರು ಬುದ್ದಿವಂತರು, ಮೂರನೆಯವ ದಡ್ಡ , ಮುದುಕ ಮುದುಕಿ 
ಬುದ್ದಿವಂತ ಮಕ್ಕಳನ್ನು ಪ್ರೀತಿಸುತ್ತಿದ್ದರು . ಮುದುಕಿ ಪ್ರತಿವಾರವೂ ಅವರಿಗೆ ತೊಟ್ಟುಕೊಳ್ಳಲು 
ಹೊಸ ಹೊಸ ಅಂಗಿಕೊಡುತ್ತಿದ್ದಳು . ಮೂರನೆಯವನನ್ನು ಎಲ್ಲರೂ ಪೆದ್ದ, ದಡ್ಡ ಎಂದು ಗೇಲಿ 
ಮಾಡುತ್ತಿದ್ದರು. ಎಲ್ಲರೂ ಅವನ ಮೇಲೆ ರೇಗುತ್ತಿದ್ದರು. ಅವನು ಸದಾ ಬೆಂಕಿಗೂಡಿನ ಮೇಲೆ 
ತೇಪೆ ಹಾಕಿದ ಹರಕು ಅಂಗಿ ತೊಟ್ಟು ಕುಳಿತಿರುತ್ತಿದ್ದ. ಮುದುಕಿ ತಿನ್ನಲು ಕೊಟ್ಟರೆ ತಿನ್ನುತ್ತಿದ್ದ, 
ಇಲ್ಲದಿದ್ದರೆ ಹಸಿದೇ ಇರುತ್ತಿದ್ದ. 

ಒಂದು ಸಾರಿ ಹಳ್ಳಿಯಲ್ಲೆಲ್ಲ ಒಂದು ಸುದ್ದಿ ಹರಡಿತು : ರಾಜ ತನ್ನ ಮಗಳನ್ನು ಮದುವೆ 
ಮಾಡಿ ಕೊಡಲಿದ್ದಾನೆ, ಔತಣ ಸಮಾರಂಭಕ್ಕೆ ಎಲ್ಲರೂ ರಾಜಧಾನಿಗೆ ಬರಬೇಕು ಅಂತ. ಯಾರು 
ಹಾರುವ ಹಡಗು ನಿರ್ಮಿಸಿ ಅದರಲ್ಲೇ ರಾಜಧಾನಿಗೆ ಯಾನ ಮಾಡಿಕೊಂಡು ಬರುತ್ತಾರೋ 
ಅವರಿಗೆ ರಾಜ ತನ್ನ ಮಗಳನ್ನು ಮದುವೆ ಮಾಡಿ ಕೊಡಲಿದ್ದ. 

ಬುದ್ದಿವಂತ ಸೋದರರು ಕಾಡಿಗೆ ಹೋದರು . 

ಒಂದು ಮರವನ್ನು ಕಡಿದು, ಅದರಿಂದ ಹಾರುವ ಹಡಗು ಹೇಗೆ ಮಾಡುವುದು ಅಂತ 
ಯೋಚನೆ ಮಾಡುತ್ತ ಕುಳಿತರು . 
ಅವರ ಬಳಿಗೆ ಒಬ್ಬ ಹಣ್ಣು ಹಣ್ಣು ಮುದುಕ ಬಂದ. 

“ದೇವರು ನಿಮಗೆ ಸಹಾಯ ಮಾಡಲಿ, ಮಕ್ಕಳೇ ! ನನಗೆ ಸ್ವಲ್ಪ ಬೆಂಕಿಕೊಡ್ತೀರ? ಹೊಗೆ 
ಬತ್ತಿ ಸೇದಬೇಕಾಗಿದೆ .” 

“ ಅದಕ್ಕೆಲ್ಲ ನಮಗೆ ಸಮಯವಿಲ್ಲ, ಹೋಗು, ಹೋಗು, ಮುದುಕಪ್ಪ ! ” 
ಹಾಗೆಂದು ಅವರು ಮತ್ತೆ ತಮ್ಮ ಯೋಚನೆಯಲ್ಲೇ ತೊಡಗಿದರು . 

ಮುದುಕ ಹೇಳಿದ : “ ಹಡಗನ್ನು ಮಾಡಲು ನಿಮ್ಮ ಕೈಲಿ ಎಲ್ಲಾಗುತ್ತೆ . ಹಂದಿ ಬಾನೆಯನ್ನಷ್ಟೆ 
ನೀವು ಮಾಡಬಲ್ಲಿರಿ. ರಾಜಕುಮಾರಿಯನ್ನು ನೀವೆಂದೂ ಕಾಣಲಾರಿರಿ - ನಿಮ್ಮ ಕಿವಿಯನ್ನು 
ಹೇಗೆ ಕಾಣಲಾರಿರೋ ಹಾಗೆ. ” 

ಹಾಗೆ ಹೇಳಿ ಮುದುಕ ಅಲ್ಲಿ ನಿಲ್ಲದೆ ಹೊರಟು ಹೋದ. ಸೋದರರು ಹಡಗು ಮಾಡಲು 
ತುಂಬ ಯತ್ನ ಮಾಡಿದರು. ಏನು ಮಾಡಿದರೂ ಯಶಸ್ವಿಯಾಗಲಿಲ್ಲ. 

“ಹೋಗಲಿ , ರಾಜಧಾನಿಗೆ ಕುದುರೆ ಮೇಲೇ ಹೋಗೋಣ” ಎಂದ ಹಿರಿಯವ. " ರಾಜ 
ಕುಮಾರಿಯನ್ನು ಮದುವೆಯಾಗದೆ ಹೋದರೆ ಅಷ್ಟೇ ಹೋಯಿತು. ಚೆನ್ನಾಗಿ ಊಟವನ್ನಾ 
ದರೂ ಉಂಡು ಬರೋಣ.” 

ಮುದುಕ ಮುದುಕಿ ಅವರಿಗೆ ಹರಸಿ ಕಳುಹಿಸಿಕೊಟ್ಟರು. ದಾರಿ ಮಧ್ಯದಲ್ಲಿ ತಿನ್ನಲೆಂದು 
ಬುತ್ತಿ ಕಟ್ಟಿ ಕೊಟ್ಟರು. ಅವರಿಗಾಗಿ ಮುದುಕಿ ಘಮಘಮಿಸುವ ಬ್ರೆಡ್ ಮಾಡಿಕೊಟ್ಟಳು, 
ರುಚಿಯಾದ ಹಂದಿಮಾಂಸ ಬೇಯಿಸಿ ಕೊಟ್ಟಳು, ಒಂದು ಫ್ಲಾಸ್ಕಿನಲ್ಲಿ ಉಕ್ರೇನಿನ ವೋದ್ಯ 
ತುಂಬಿ ಕೊಟ್ಟಳು . 

ಇಬ್ಬರು ಸೋದರರೂ ಕುದುರೆ ಹತ್ತಿ ಹೊರಟರು . 
ಅಣ್ಣಂದಿರು ಹೋದ ವಿಷಯ ತಿಳಿದು ದಡ್ಡ ಹುಡುಗ ತಾನೂ ಹೇಳಿದ: 
“ ಅಣ್ಣಂದಿರು ಎಲ್ಲಿಗೆ ಹೋದರೆ ಅಲ್ಲಿಗೆ ನಾನೂ ಹೋಗ್ತಿನಿ! ” 

“ನೀನೆಲ್ಲಿಗೆ ಹೋಗ್ತಿಯೋ , ಪೆದ್ದ ! ” ಎಂದಳು ತಾಯಿ . “ ನಿನ್ನನ್ನು ಕಾಡಿನಲ್ಲಿ ತೋಳಗಳು 
ತಿಂದು ಹಾಕುತ್ತವೆ. ” 

“ ಇಲ್ಲ , ತಿನ್ನಲ್ಲ ! ” 
“ಹೋಗ್ರೀನಿ, ಹೋಗ್ತಿನಿ! ” ಅಂತ ಹಟ ಹಿಡಿದ . 

ಮುದುಕಿ ಅವನಿಗೆ ಒಂದು ತುಂಡು ಹಳಸಲು ಕಪ್ಪು ಬ್ರೆಡ್, ಒಂದು ಡಬ್ಬಿ ನೀರು ಚೀಲದ 
ಲ್ಲಿಟ್ಟು ಕಳುಹಿಸಿಕೊಟ್ಟಳು. 
- ಪೆದ್ದ ಕಾಡಿಗೆ ಹೋದ. ದಾರಿಯಲ್ಲಿ ಒಬ್ಬ ಹಣ್ಣು ಹಣ್ಣು ಮುದುಕನನ್ನು ಸಂಧಿಸಿದ. ಎಂಥ 
ಮುದುಕನೆಂದರೆ ಅವನ ಗಡ್ಡವೆಲ್ಲ ಸಂಪೂರ್ಣವಾಗಿ ನರೆತಿತ್ತು . ಅದು ಸೊಂಟದ ವರೆಗೂ ಇಳಿ 
ಬಿದ್ದಿತ್ತು . 

“ ಆರೋಗ್ಯವೇ , ಅಜ್ಜ ! ” 
“ ಆರೋಗ್ಯ, ಮಗು ! ” 
“ ಎಲ್ಲಿಗೆ ಹೊರಟಿರಿ , ಅಜ್ಜ ? ” 
ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತ ಪ್ರಪಂಚ ಸುತ್ತುತ್ತಿದೀನಿ. ನೀನು ಎಲ್ಲಿಗೆ ಹೊರಟೆ ? ” 
“ ನಾನು ಅರಮನೆಯಲ್ಲಿ ಔತಣಕ್ಕೆ ಹೊರಟಿದೀನಿ.” 
“ ನಿನಗೆ ಹಾರುವ ಹಡಗು ಮಾಡೋದಕ್ಕೆ ಬರುತ್ತೆಯೆ ? ” 
“ ಇಲ್ಲ , ಬರೋಲ್ಲ. ” 
“ ಹಾಗಾದರೆ ಯಾಕೆ ಹೊಗೀಯ ? ” 

“ ನನ್ನ ಅಣ್ಣಂದಿರು ಹೋದರು . ನಾನೂ ಹೋಗ್ತಿದೀನಿ. ಬಹುಶಃ ಅಲ್ಲಿ ನನಗೆ ಭಾಗ್ಯ 
ಲಭಿಸಬಹುದು . ” 

“ಸರಿ. ಕೂತುಕೋ . ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ. ನಿನ್ನ ಚೀಲದಲ್ಲೇನಿದೆ, ತೆಗಿ 
ನೋಡೋಣ. ” 

“ ಅಯ್ಯೋ , ಅಜ್ಜ , ನೀವು ಅದನ್ನು ತಿನ್ನಲಾರಿರಿ . ಅಲ್ಲಿ ಗಟ್ಟಿಯಾದ ಹಳಸಲು ಕಪ್ಪು ಬ್ರೆಡ್ 
ಅಷ್ಟೆ ಇರೋದು. ” 
“ ಪರವಾಗಿಲ್ಲ. ಏನಿದೆಯೋ ಅದನ್ನೇ ಕೊಡು.” 

ಪೆದ್ದ ಚೀಲದೊಳಕ್ಕೆ ಕೈ ಹಾಕಿ ಬ್ರೆಡ್ಡನ್ನು ಹೊರ ತೆಗೆದ. ಅದು ಇನ್ನೆಷ್ಟು ಮಾತ್ರವೂ ಅಮ್ಮ 
ಕೊಟ್ಟಿದ್ದ ಗಟ್ಟಿಯಾದ ಹಳಸಲು ಕಪ್ಪು ಬ್ರೆಡ್ ಆಗಿರಲಿಲ್ಲ. ಆದರೆ ಹಸನಾದ ಘಮಘಮಿಸುವ 
ಬಿಳಿ ಬ್ರೆಡ್ ಆಗಿತ್ತು . ಶ್ರೀಮಂತರು ಔತಣ ಕೂಟಗಳಲ್ಲಷ್ಟೆ ತಿನ್ನುವಂಥ ಬ್ರೆಡ್ ಆಗಿತ್ತು . ಪೆದ್ದ 
ದಿಗ್ಗಾಂತನಾದ. ಮುದುಕ ಮುಗುಳಕ್ಕ . 

ಅವರು ವಿಶ್ರಾಂತಿ ತೆಗೆದುಕೊಂಡರು , ಹೊಟ್ಟೆ ತುಂಬ ತಿಂದರು . ಮುದುಕ ಪೆದ್ದನಿಗೆ ವಂದನೆ 
ತಿಳಿಸಿ, ಹೇಳಿದ: 

“ಇಲ್ಲಿ ಕೇಳು, ಮಗು. ನಾನು ಹೇಳುವುದನ್ನು ಗಮನವಿಟ್ಟು ಕೇಳು. ಕಾಡಿಗೆ ಹೋಗು. 
ಅಲ್ಲಿ ಅತ್ಯಂತ ದೊಡ್ಡ ಓಕ್ ಮರವನ್ನು ಕಂಡುಹಿಡಿ. ಅದರ ಕೊಂಬೆಗಳು ಮೂಲೆಮೂಲೆಯಾಗಿ 
ಹರಡಿಕೊಂಡಿರಬೇಕು. ಆ ಮರಕ್ಕೆ ಮೂರು ಬಾರಿ ಕೊಡಲಿಯಿಂದ ಪೆಟ್ಟು ಕೊಡು. ಆಮೇಲೆ 
ನೀನೇ ನೆಲದ ಮೇಲೆ ಬಿದ್ದು ಯಾರಾದರೂ ಬಂದು ನಿನ್ನನ್ನು ಎಬ್ಬಿಸುವವರೆಗೂ ಹಾಗೆಯೇ 
ಮಲಗಿರು . ಆಗ ನಿನ್ನ ಹಡಗು ನಿರ್ಮಾಣವಾಗಿರುತ್ತೆ . ನೀನು ಅದರಲ್ಲಿ ಕುಳಿತು ಎಲ್ಲಿಗೆ ಬೇಕೊ 
ಅಲ್ಲಿಗೆ ಹೋಗಬಹುದು. ಆದರೆ ಒಂದು ವಿಷಯ - ದಾರಿಯಲ್ಲಿ ನಿನಗೆ ಯಾರು ಯಾರು 
ಸಿಕ್ತಾರೋ ಅವರನ್ನೆಲ್ಲ ಕರೆದುಕೊಂಡು ಹೋಗು! ” 
- ಪೆದ್ದ ಅಜ್ಜನಿಗೆ ವಂದನೆ ಸಲ್ಲಿಸಿದ. ಅವರು ತಮ್ಮತಮ್ಮ ದಾರಿ ಹಿಡಿದು ಹೋದರು. ಪೆದ್ದ 
ಕಾಡಿಗೆ ಹೋದ, ಕೊಂಬೆಗಳು ಮೂಲೆಮೂಲೆಯಾಗಿ ಹರಡಿಕೊಂಡಿದ್ದ ದೊಡ್ಡ ಓಕ್ ಮರವನ್ನು 
ಕಂಡುಹಿಡಿದ , ಅದಕ್ಕೆ ಕೊಡಲಿಯಿಂದ ಮೂರು ಬಾರಿ ಪೆಟ್ಟು ಕೊಟ್ಟ, ತಾನೇ ನೆಲದ ಮೇಲೆ 
ಬಿದ್ದು ನಿದ್ರೆ ಮಾಡ ತೊಡಗಿದ. ಮಲಗಿದ , ಮಲಗಿದ, ಆಗ ಇದಕ್ಕಿದಂತೆ ಯಾರೋ ಅವನನ್ನು 
ಕರೆಯುತ್ತಿದ್ದಂತೆ ಕೇಳಿಸಿತು . 

“ ಏಳು , ಮಿತ್ರ , ಏಳು , ನಿನ್ನ ಭಾಗ್ಯ ನೌಕೆ ಸಿದ್ದವಾಗಿದೆ ! ” 

ಅವನು ಕಣ್ಣು ಬಿಟ್ಟು ನೋಡುತ್ತಾನೆ - ಹಡಗು ನಿಂತಿದೆ. ಎಲ್ಲ ಚಿನ್ನದ್ದು . ಅದರ ಕೂವೆ 
ಕಂಬಗಳು ಬೆಳ್ಳಿಯವು. ಹಾಯಿಗಳು ರೇಷ್ಮೆಯವು.ಕೂತುಕೊ , ಹಾರಿ ಹೋಗು, ಎಂದು ಹೇಳು 
ತಿವೆಯೋ ಅನ್ನುವಂತೆ ಪಟಗುಟ್ಟುತ್ತಿವೆ ! 

ಅವನು ಹೆಚ್ಚು ಹೊತ್ತು ಯೋಚನೆ ಮಾಡುತ್ತ ಕೂರಲಿಲ್ಲ. ತಕ್ಷಣವೇ ಹಡಗು ಹತ್ತಿ 
ಕುಳಿತ . ಹಾಯಿಗಳನ್ನು ಬಿಚ್ಚಿದ, ಹಾರಿಕೊಂಡು ಹೊರಟ . 

ಅಬ್ಬಾ , ಎಷ್ಟು ವೇಗವಾಗಿ ಹಾರಿ ಹೋಗುತ್ತಿತ್ತು ಆ ಹಡಗು ! ಹಾರಿತು , ಹಾರಿತು . 
ಅದರ ಮೇಲಿನಿಂದ ಇಡೀ ಭೂಮಂಡಲವೇ ಕಾಣುತ್ತಿತ್ತು . ನೋಡುತ್ತಾನೆ - ವ್ಯಕ್ತಿಯೊಬ್ಬ 
ಭೂಮಿಗೆ ಕಿವಿಗೊಟ್ಟು ಏನನ್ನೂ ಕೇಳುತ್ತಿದ್ದಾನೆ. ಪೆದ್ದ ಕೂಗಿಕೇಳಿದ : 

“ ನಮಸ್ಕಾರ, ಪೂಜ್ಯರೇ ! ನೀವು ಏನು ಮಾಡುತ್ತಿದ್ದೀರ ? ” 

“ಕೇಳುತ್ತಿದ್ದೇನೆ – ಜನ ರಾಜನ ಅರಮನೆಯಲ್ಲಿ ಔತಣಕ್ಕೆ ನೆರೆದರೋ ಇಲ್ಲವೋ ಅನ್ನುವು 
ದನ್ನು ಕೇಳುತ್ತಿದ್ದೇನೆ. ” 

“ನೀವೂ ಅರಮನೆಗೆ ಹೋಗುತ್ತಿದೀರ ? ” 
“ ಹೌದು. ” 
“ ಹಾಗಾದರೆ ಬನ್ನಿ ನನ್ನ ಜೊತೆಗೆ , ನಾನು ಕರೆದುಕೊಂಡು ಹೋಗುತ್ತೇನೆ. ” 
ಅವನು ಕುಳಿತುಕೊಂಡ. ಅವರು ಮುಂದಕ್ಕೆ ಹೋದರು . 

ಹಾರಿದರು , ಹಾರಿದರು . ನೋಡುತ್ತಾರೆ - ರಸ್ತೆಯಲ್ಲಿ ಒಬ್ಬ ವ್ಯಕ್ತಿ ಹೋಗುತ್ತಿದ್ದಾನೆ. 
ಅವನು ತನ್ನ ಒಂದು ಕಾಲನ್ನು ತನ್ನ ಕಿವಿಯವರೆಗೂ ಎತ್ತಿ ಕಟ್ಟಿಕೊಂಡಿದ್ದಾನೆ, ಇನ್ನೊಂದು 
ಕಾಲಿನಿಂದ ಕುಪ್ಪಳಿಸಿಕೊಂಡು ಹೋಗುತ್ತಿದ್ದಾನೆ. ಪೆದ್ದ ಮತ್ತೆ ಕೂಗಿ ಕೇಳುತ್ತಾನೆ: 
“ ನಮಸ್ಕಾರ, ಪೂಜ್ಯರೇ ! ಯಾಕೆ ನೀವು ಒಂದೇ ಕಾಲಿನಲ್ಲಿ ಕುಪ್ಪಳಿಸಿಕೊಂಡು ಹೋಗು 
ತಿದ್ದೀರ?” 

“ ಯಾಕೆಂದರೆ, ಇನ್ನೊಂದು ಕಾಲನ್ನೂ ಉಪಯೋಗಿಸಿದರೆ ಒಂದೇ ಹೆಜ್ಜೆಗೆ ಇಡೀ ಭೂಮಂಡ 
ಲವನ್ನೇ ದಾಟಿ ಬಿಡುತ್ತೇನೆ. ಅದು ನನಗೆ ಇಷ್ಟವಿಲ್ಲ.” 

“ ಎಲ್ಲಿಗೆ ಹೊರಟಿರಿ ? ” 
“ ರಾಜನ ಅರಮನೆಗೆ, ಔತಣಕ್ಕೆ .” 
“ ಹಾಗಾದರೆ ಬನ್ನಿ , ನಮ್ಮ ಹಡಗಿನಲ್ಲಿ ಕುಳಿತುಕೊಳ್ಳಿ !” 
“ ಸರಿ, ಒಳ್ಳೆಯದೇ ಆಯಿತು ! ” 
ಅವನು ಕುಳಿತುಕೊಂಡ. ಅವರು ಮತ್ತೆ ಮುಂದಕ್ಕೆ ಹೋದರು . 
ಹೋದರು , ಹೋದರು . ನೋಡುತ್ತಾರೆ - ರಸ್ತೆಯಲ್ಲಿ ಒಬ್ಬ ಬಿಲ್ಲುಗಾರ ನಿಂತಿದ್ದಾನೆ. 
ಅವನು ಬಿಲ್ಲನ್ನು ಎಳೆದು ಬಾಣ ಹೊಡೆಯಲು ಸಿದ್ದನಾಗುತ್ತಿದ್ದಾನೆ. ಆದರೆ ಸುತ್ತಮುತ್ತ 
ಏನೂ ಕಾಣುತ್ತಿಲ್ಲ - ಹಕ್ಕಿಯಾಗಲೀ ಮೃಗವಾಗಲೀ ಏನೂ ಇಲ್ಲ . ಖಾಲಿ ಹೊಲವಷ್ಟೆ ಕಾಣು 
ತಿದೆ. 

“ ನಮಸ್ಕಾರ, ಪೂಜ್ಯರೇ ! ನೀವು ಎಲ್ಲಿಗೆ ಗುರಿ ಇಟ್ಟಿದ್ದೀರ ? ಯಾವ ಪಕ್ಷಿಯಾಗಲೀ ಮೃಗ 
ವಾಗಲೀ ಕಾಣುತ್ತಿಲ್ಲವಲ್ಲ ! ” 

“ನಿಮಗೆ ಏನೂ ಕಾಣಿಸದೆ ಇರಬಹುದು. ನನಗೆ ಕಾಣಿಸುತ್ತೆ . ” 
“ ಎಲ್ಲಿ ಕಾಣಿಸುತ್ತಿದೆ ? ” 

“ ಹಾ ! ಅದು ಆ ಕಾಡಿನ ಹಿಂದೆ, ನೂರು ವೆರ್ಸ್ಟ್ * ದೂರದಲ್ಲಿದೆ. ಅಲ್ಲಿ ಓಕ್ ಮರದ 
ಮೇಲೆ ಒಂದು ಹದ್ದು ಕೂತಿದೆ.” 

“ ಬನ್ನಿ , ನಮ್ಮ ಹಡಗಿನಲ್ಲಿ ಕುಳಿತುಕೊಳ್ಳಿ ! ” 

ಅವನು ಕುಳಿತುಕೊಂಡ. ಮತ್ತೆ ಎಲ್ಲರೂ ಹಾರಿ ಹೊರಟರು . ಹೋದರು, ಹೋದರು. 
ನೋಡುತ್ತಾರೆ - ಮಾರ್ಗದಲ್ಲಿ ಒಬ್ಬ ಮುದುಕ ಹೋಗುತ್ತಿದ್ದಾನೆ. ಅವನು ಒಂದು ದೊಡ್ಡ 
ಚೀಲದ ತುಂಬ ಬ್ರೆಡ್ ಹೊತ್ತುಕೊಂಡು ಹೋಗುತ್ತಿದ್ದಾನೆ. 

“ಎಲ್ಲಿಗೆ ಹೊರಟಿರಿ, ಅಜ್ಜ ? ಇಷ್ಟು ಬೇಗ ಬೇಗ ಹೆಜ್ಜೆ ಹಾಕಿಕೊಂಡು ಹೋಗುತ್ತಿದ್ದೀರ.” 
“ ನನ್ನ ಊಟಕ್ಕೆ ಸ್ವಲ್ಪ ಬ್ರೆಡ್ ಪಡೆದುಕೊಳ್ಳೋಣ, ಅಂತ ಹೋಗ್ತಿದೀನಿ ! ” 


* ಒಂದು ರಷ್ಯನ್ ಉದಳತೆ, ಸುಮಾರು 1ಕಿ. ಮೀ . ಗೆ ಸಮ . - ಸಂ . 
 ಹೌದೆ? ಆದರೆ ನಿಮ್ಮ ಬಳಿ ಆಗಲೇ ಒಂದು ಚೀಲ ಬ್ರೆಡ್ ಇದೆಯಲ್ಲ! ” 
“ ಇದು ಸಾಲದು ! ನನಗೆ ಇದು ಒಂದು ತುತ್ತಿಗೂ ಸಾಲದು. ” 
“ ಬನ್ನಿ , ನಮ್ಮ ಹಡಗಿನಲ್ಲಿ ಕುಳಿತುಕೊಳ್ಳಿ ! ” 
ಆ ಮುದುಕನೂ ಹತ್ತಿ ಕುಳಿತ . ಅವರು ಮತ್ತೆ ಹಾರಿ ಹೋರಟರು . 
ನೋಡುತ್ತಾರೆ - ಒಂದು ಸರೋವರದ ಬಳಿ ಯಾರೋ ಒಬ್ಬ ಮುದುಕ ಹೋಗುತ್ತಿದ್ದಾನೆ . 
ಅವನು ಏನನ್ನೋ ಹುಡುಕುತ್ತಿದ್ದಾನೆ. 

“ ಏನು ನೀವು ಇಲ್ಲಿ ಹುಡುಕುತ್ತಿದ್ದೀರ, ಅಜ್ಜ ? ” ಪೆದ್ದ ಕೂಗಿ ಕೇಳಿದ. 
“ ನನಗೆ ಬಾಯಾರಿಕೆಯಾಗಿದೆ. ನೀರಿಗಾಗಿ ಹುಡುಕುತ್ತಿದ್ದೇನೆ.” 

“ ಇದೇನು, ನಿಮ್ಮ ಮುಂದೆ ಒಂದು ಇಡೀ ಸರೋವರವೇ ಇದೆ ! ಅದನ್ನೇಕೆ ನೀವು ಕುಡಿ 
ಯುತ್ತಿಲ್ಲ ? ” 

“ ಅಯೋ , ಇದು ಯಾವ ಮೂಲೆಗೆ ? ಇದು ನನಗೆ ಒಂದು ಗುಟುಕಿಗೂ ಸಾಲದು . ” 
“ ಬನ್ನಿ , ನಮ್ಮ ಹಡಗಿನಲ್ಲಿ ಕುಳಿತುಕೊಳ್ಳಿ ! ” 

ಮುದುಕ ಕುಳಿತುಕೊಂಡ . ಮುಂದೆ ಹಾರಿಕೊಂಡು ಹೋದರು . ಇನ್ನೊಬ್ಬ ಮುದುಕ 
ನನ್ನು ಸಂಧಿಸಿದರು . ಅವನು ಹಳ್ಳಿಗೆ ಹೋಗುತ್ತಿದ್ದ. ಹೆಗಲಿನ ಮೇಲೆ ಹುಲ್ಲಿನ ಹೊರೆ ಹೊತ್ತಿದ್ದ. 

“ನಮಸ್ಕಾರ, ಅಜ್ಜ ! ಹುಲ್ಲಿನ ಹೊರೆಯನ್ನು ಎಲ್ಲಿಗೆ ಒಯುತ್ತಿದ್ದೀರ? ” 


“ ಅಯ್ಯೋ , ಏನು ನೀವು! ಹಳ್ಳಿಯಲ್ಲೇನು ಹುಲ್ಲಿಗೆ ಬರವೇ ? ” 
“ ಹಾ . ಇದು ಆ ತರಹ ಹುಲ್ಲಲ್ಲ !” 
“ ಮತ್ತೆ , ಯಾವ ತರಹ ಹುಲ್ಲು ? ” 

“ ಯಾವ ತರಹ ಅಂದರೆ , ಬೆಚ್ಚಗಿನ ಬೇಸಿಗೆ ದಿನದಲ್ಲೂ ಈ ಹುಲ್ಲನ್ನು ಹರಡಿದರೆ ಕೂಡಲೇ 
ಹಿಮಶೈತ್ಯ ಉಂಟಾಗಿ ಮಂಜು ಬೀಳ ತೊಡಗುತ್ತೆ .” 

“ ಬನ್ನಿ , ನಮ್ಮ ಹಡಗಿನಲ್ಲಿ ಕುಳಿತುಕೊಳ್ಳಿ. ರಾಜನ ಅರಮನೆಗೆ ಹೋಗೋಣ!” 
“ ಅದಕ್ಕೇನಂತೆ ! ನಡೆಯಿರಿ ಹೋಗೋಣ.” 
ಕುಳಿತುಕೊಂಡ. ಅವರು ಮುಂದೆ ಹಾರಿ ಹೊರಟರು . 

ತುಂಬ ಕಾಲ ಹಾರಿ ಹೋದರೋ , ಸ್ವಲ್ಪ ಕಾಲವೋ , ಯಾರು ಬಲ್ಲರು . ಅಂತೂ ಔತಣದ 
ಹೊತ್ತಿಗೆ ಸರಿಯಾಗಿ ರಾಜನ ಅರಮನೆಯನ್ನು ಬಂದು ಸೇರಿದರು . ಅಲ್ಲಿ ಆಗಲೇ ಅಂಗಳದಲ್ಲಿ 
ಊಟದ ಮೇಜುಗಳನ್ನು ಇರಿಸಲಾಗಿತ್ತು . ಮೇಜುಗಳ ಮೇಲೆ ನಾನಾ ರೀತಿಯ ಭಕ್ಷ್ಯಭೋಜ್ಯ 
ಗಳನ್ನು - ಹಿಟ್ಟಿನಿಂದ ಮಾಡಿದವು, ಮಾಂಸದಿಂದ ಮಾಡಿದವು, ಕೋಳಿ ಮತ್ತು ಪಕ್ಷಿಗಳಿಂದ 
ಮಾಡಿದವು ಹೀಗೇ ತರಹೇವಾರಿ ಭಕ್ಷ್ಯಭೋಜ್ಯಗಳನ್ನು - ಇರಿಸಲಾಗಿತ್ತು . ಪಕ್ಕದಲ್ಲೇ ದೊಡ್ಡ 
ದೊಡ್ಡ ಪೀಪಾಯಿಗಳಲ್ಲಿ ನಾನಾ ರೀತಿಯ ಪೇಯಗಳು - ಮದ್ಯ , ಸಾರಾಯಿ , ವೋಡ್ಕ, ಇತ್ಯಾದಿ, 
ಇತ್ಯಾದಿ. ಎಲ್ಲರೂ ಹೊಟ್ಟೆ ತುಂಬುವಷ್ಟು , ಬೇಕಾದಷ್ಟು ತಿನ್ನಬಹುದಿತ್ತು , ಕುಡಿಯಬಹುದಿತ್ತು . 
ಹಾಗಿದ್ದ ಮೇಲೆ ಬಂದಿದ್ದ ಜನರ ಸಂಖ್ಯೆ ಕಮ್ಮಿಯೇ ? - ಇಡೀ ರಾಜ್ಯದ ಜನರೆಲ್ಲ ಅಲ್ಲಿ ನೆರೆದಿದ್ದರು ! 
ಮುದುಕರು , ಮಕ್ಕಳು, ಯುವಕರು , ಬಡವರು , ಬಲ್ಲಿದರು, ಒಟ್ಟಿನಲ್ಲಿ ಅಲ್ಲಿಗೆ ಬರದೇ ಇದ್ದವರೇ 
ಇಲ್ಲ ! ಪೆದ್ದನ ಅಣ್ಣಂದಿರೂ ಆಗಲೇ ಅಲ್ಲಿ ಕುಳಿತಿದ್ದರು . 

ಆ ಸಮಯಕ್ಕೆ ಸರಿಯಾಗಿ ಪೆದ್ದ ಬಂದ ತನ್ನ ಸಂಗಾತಿಗಳೊಂದಿಗೆ , ಚಿನ್ನದ ಹಾರುವ ಹಡಗಿ 
ನಲ್ಲಿ. ಅವನ ಹಡಗು ರಾಜನ ಕೋಣೆಯ ಕಿಟಕಿಯ ಮುಂದೇ ಸರಿಯಾಗಿ ಬಂದಿಳಿಯಿತು. 
ಪೆದ್ದ ಮತ್ತು ಅವನ ಸಂಗಾತಿಗಳು ಹಡಗಿನಿಂದ ಇಳಿದು ಭೋಜನಕ್ಕೆ ಹೊರಟರು. 

ಅದನ್ನು ಕಂಡು ರಾಜ ಬೆಕ್ಕಸಬೆರಗಾದ. ಚಿನ್ನದ ಹಡಗಿನಲ್ಲಿ ಸಾಮಾನ್ಯ ರೈತ. ಅವನ 
ಅಂಗಿಯೊ ರಂಧ್ಯಮಯ , ತೇಪೆಗಳಿಂದ ತುಂಬಿತ್ತು . ಷರಾಯಿ ಹಳೆಯದು, ಸಾಮಾನ್ಯದ್ದು . 
ಹೋಗಲಿ ಪಾದರಕ್ಷೆ - ಏನೇನೂ ಇಲ್ಲ. ಬರಿಗಾಲು ! 

ರಾಜ ತಲೆ ಅಲ್ಲಾಡಿಸುತ್ತ ಹೇಳಿದ: 

“ ನನ್ನ ಮಗಳನ್ನು ಇಂಥ ಹರಕು ಚಿಂದಿ ತೊಟ್ಟ ಹೊಲಸು ಮನುಷ್ಯನಿಗೆ ನೀಡುವುದೆ ? 
ಎಂದಿಗೂ ಸಾಧ್ಯವಿಲ್ಲ ! ” 

ಈ ರೈತನಿಂದ ಹೇಗೆ ಪಾರಾಗುವುದು ಎಂದು ಯೋಚನೆ ಮಾಡುತ್ತ ಕುಳಿತ. ಅವನಿಗೆ 
ಒಂದಿಷ್ಟು ಅಸಾಧ್ಯವಾದ ಕಾರ್ಯಭಾರಗಳನ್ನು ನೀಡುವುದೆಂದು ಯೋಚಿಸಿದ . ತನ್ನ ಸೇವಕ 
ನನ್ನು ಕರೆದು ಹೇಳಿದ : 

“ಹೋಗು, ಹೇಳು ಆ ಜೀತದಾಳಿಗೆ, ಅವನು ಚಿನ್ನದ ಹಡಗಿನಲ್ಲಿ ಬಂದಿದ್ದರೇನಂತೆ, ನನ್ನ 
ಅತಿಥಿಗಳು ಊಟ ಮುಗಿಸುವುದರೊಳಗೆ ಸಂಜೀವಿನಿ ನೀರನ್ನು ತರದೆ ಹೋದರೆ ನನ್ನ ಮಗಳನ್ನು 
ಅವನಿಗೆ ಕೊಡುವುದಿಲ್ಲ, ಅಂತ, ಆ ನೀರು ತರದೆ ಹೋದರೆ ನನ್ನ ಕತ್ತಿ ಅವನ ತಲೆಯನ್ನು ತುಂಡ 
ರಿಸುತ್ತೆ ! ” 

ಸೇವಕ ಹೋದ. 

ರಾಜ ಹೇಳಿದುದನ್ನು ಪೆದ್ದನ ಜೊತೆ ಬಂದಿದ್ದ ಚುರುಕುಕಿವಿಯ ಮುದುಕ ಕೇಳಿಸಿಕೊಂಡು 
ಬಿಟ್ಟ . ಅವನು ಪೆದ್ದನಿಗೆ ಎಲ್ಲವನ್ನೂ ಹೇಳಿದ . ಪೆದ್ದ ಗರಬಡಿದವನಂತೆ ಕುಳಿತ. ತಿನ್ನಲಿಲ್ಲ, ಕುಡಿ 
ಯಲಿಲ್ಲ, ಸುಮ್ಮನೆ ತಲೆ ತಗ್ಗಿಸಿಕೊಂಡು ಬೆಂಚಿನ ಮೇಲೆ ಕುಳಿತಿದ್ದ. 
ಭೀಮಹೆಜ್ಜೆಯ ಮುದುಕ ಕೇಳಿದ : 
“ ಯಾಕೆ, ಮಿತ್ರ , ದುಃಖಿತನಾಗಿ ಕುಳಿತಿದ್ದೀಯ ? ” 

“ ರಾಜ ನನಗೆ ಅಸಾಧ್ಯದ ಕೆಲಸ ಕೊಟ್ಟಿದ್ದಾನೆ. ಈ ಅತಿಥಿಗಳೆಲ್ಲ ಊಟ ಮುಗಿಸುವುದರ 
ಒಳಗೆ ಅವನಿಗೆ ಸಂಜೀವಿನಿ ನೀರು ತಂದು ಕೊಡಬೇಕಂತೆ. ಹೇಗೆ ತಂದು ಕೊಡಲಿ ? ” 

“ ದುಃಖಿಸಬೇಡ, ನಾನು ನಿನಗೆ ತಂದು ಕೊಡುತ್ತೇನೆ. ” 
“ ಸರಿ, ನೋಡು, ಆಗುತ್ತದೆ ಅಂತ. ” 
ಸೇವಕ ರಾಜನ ಆಜ್ಞೆ ತಿಳಿಸಲು ಬಂದ. ಆದರೆ ಪೆದ್ದ ಅದನ್ನು ಆಗಲೇ ತಿಳಿದಿದ್ದ . 
“ತಂದು ಕೊಡುವೆನೆಂದು ರಾಜನಿಗೆ ಹೇಳು ! ” ಅವನೆಂದ. 

ಭೀಮಹೆಜ್ಜೆಯ ಮುದುಕ ಕಿವಿಗೆ ಕಟ್ಟಿಕೊಂಡಿದ್ದ ತನ್ನ ಕಾಲನ್ನು ಬಿಚ್ಚಿ ಒಂದು ಹೆಜ್ಜೆ 
ಮುಂದಿಟ್ಟ - ಆಗಲೇ ಸಂಜೀವಿನಿ ನೀರಿದ್ದ ಸ್ಥಳದಲ್ಲಿದ್ದ ! ನೀರನ್ನು ಸಂಗ್ರಹಿಸಿಕೊಂಡ, ಬಳಲಿದ. 

“ ಇನ್ನೂ ಅವರೆಲ್ಲ ಊಟ ಮಾಡುತ್ತಿದಾರೆ . ಸಮಯ ಇದೆ. ಈ ಪೊದೆಯ ಕೆಳಗೆ ಕುಳಿತು 
ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ” ಅಂದುಕೊಂಡ . 

ಕೂತ, ಹಾಗೆಯೇ ನಿದ್ದೆ ಹೋಗಿ ಬಿಟ್ಟ . ಅರಮನೆಯಲ್ಲಿ ಔತಣ ಇನ್ನೇನು ಮುಗಿಯುತ್ತಲಿದೆ, 
ಅವನು ಬರಲೇ ಇಲ್ಲ. ಪೆದ್ದ ಜೀವಂತನಾಗಿ ಅಲ್ಲ ಆದರೆ ನಿರ್ಜಿವಿಯಾದವನಂತೆ ಕುಳಿತು ಬಿಟ್ಟ . 
“ ನನ್ನ ಕಥೆ ಮುಗಿಯಿತು ” ಅವನೆಂದುಕೊಂಡ. ಚುರುಕುಕಿವಿ ಮುದುಕ ಭೂಮಿಗೆ ಕಿವಿ ಇಟ್ಟು 
ಕೇಳಿದ. ಕೇಳಿದ, ಕೇಳಿದ... 

ಕೊನೆಗೆ ಹೇಳಿದ: " ದುಃಖಪಡಬೇಡ. ಅವನು ಯಾವುದೋ ಪೊದೆಯ ಕೆಳಗೆ ಮಲಗಿ 
ನಿದ್ರಿಸುತ್ತಿದ್ದಾನೆ. ” 

“ಈಗ ನಾವೇನು ಮಾಡುವುದು ? ” ಪೆದ್ದ ಕೇಳಿದ. “ ಅವನನ್ನು ಎಚ್ಚರಗೊಳಿಸುವುದು 
ಹೇಗೆ ? ” 

ಬಿಲ್ಲುಗಾರ ಹೇಳಿದ: 
“ ಹೆದರಬೇಡ. ನಾನು ಅವನನ್ನು ಈಗಲೇ ಎಚ್ಚರಗೊಳಿಸುತ್ತೇನೆ.” 

ಹಾಗೆಂದು ಅವನು ಬಿಲ್ಲನ್ನು ಎತ್ತಿಕೊಂಡು ಪೊದೆಗೆ ಗುರಿ ಇಟ್ಟು ಬಾಣ ಬಿಟ್ಟ . ಅದು 
ಪೊದೆಯ ಕೊಂಬೆಗಳನ್ನು ಥರಥರನೆ ನಡುಗಿಸಿತು . ಕೊಂಬೆಗಳು ಕೆಳಗೆ ಮಲಗಿದ್ದ ಭೀಮಹೆಜ್ಜೆಯ 
ಮುದುಕನಿಗೆ ತರಚಿದವು. ಅವನು ಎಚ್ಚರಗೊಂಡ . ಒಂದು ಹೆಜ್ಜೆ ಇಟ್ಟ . ಆಗಲೇ ಅರಮನೆಯ 
ಲ್ಲಿದ್ದ. ಅತಿಥಿಗಳು ಇನ್ನೂ ಊಟ ಮುಗಿಸಿರಲಿಲ್ಲ, ಆಗಲೇ ಅವನು ಸಂಜೀವಿನಿ ನೀರನ್ನು ತಂದಿದ್ದ. 

ರಾಜ ಅತ್ಯಾಶ್ಚರ್ಯಗೊಂಡ. ಆದರೆ ತಕ್ಷಣವೇ ಏನೂ ಹೇಳಲಿಲ್ಲ. 
ಆಮೇಲೆ ತನ್ನ ಸೇವಕನಿಗೆ ಹೇಳಿದ : “ಹೋಗು, ಹೇಳು ಆ ಜೀತದಾಳಿಗೆ, ಅವನು ತನ್ನ 
ಸಂಗಾತಿಗಳೊಂದಿಗೆ ಒಂದೇ ಬಾರಿಗೆ ಹನ್ನೆರಡು ಜೊತೆ ಕರಿದ ಎತ್ತುಗಳನ್ನೂ ಹನ್ನೆರಡು ಒಲೆ 
ಗಳಲ್ಲಿ ಬೇಯಿಸಿದ ಬ್ರೆಡ್ಡನ್ನೂ ತಿಂದು ಮುಗಿಸಿದರಷ್ಟೆ ನನ್ನ ಮಗಳನ್ನು ಮದುವೆ ಮಾಡಿಕೊಡು 
ವುದು , ಅಂತ. ಅವನು ತಿನ್ನದೆ ಹೋದರೆ , ನನ್ನ ಕತ್ತಿ ಅವನ ತಲೆಯನ್ನು ತುಂಡರಿಸುತ್ತೆ ! ” 

ಚುರುಕುಕಿವಿ ಮುದುಕ ಕೇಳಿಸಿಕೊಂಡು ಮತ್ತೆ ಪೆದ್ದನಿಗೆ ಎಲ್ಲವನ್ನೂ ಹೇಳಿದ. 

“ ಈಗ ನಾನೇನು ಮಾಡಲಿ ? ನಾನೋ ಒಂದು ಬಾರಿಗೆ ಒಂದು ತುಂಡು ಬ್ರೆಡ್ಡನ್ನೂ ಪೂರ್ತಿ 
ತಿಂದು ಮುಗಿಸಲಾರೆ ! ” ಪೆದ್ದ ಹೇಳಿದ. 

ಮತ್ತೆ ತಲೆ ತಗ್ಗಿಸಿಕೊಂಡು ಚಿಂತಾಕ್ರಾಂತನಾಗಿ ಕುಳಿತ. 
ಹೊಟ್ಟೆಬಾಕ ಮುದುಕ ಹೇಳಿದ : 

“ ದುಃಖಪಡಬೇಡ, ಗೆಳೆಯ , ನಿಮಗಾಗಿ ನಾನೇ ಎಲ್ಲವನ್ನೂ ತಿಂದು ಮುಗಿಸುತ್ತೇನೆ. 
ಅವರು ಕೊಡುವುದು ಇನ್ನೂ ಕಮ್ಮಿಯೇ ಆಗುತ್ತೆ .” 

ರಾಜನ ಸೇವಕ ಬಂದ. ಪೆದ್ದ ಅವನಿಗೆ ಹೇಳಿದ : 

“ಗೊತ್ತಾಯಿತು, ಗೊತ್ತಾಯಿತು ರಾಜನ ಆಜ್ಞೆ ! ಹೋಗಿ ಹೇಳು ತಿನ್ನುವುದಕ್ಕೆ ಸಿದ್ಧತೆ 
ಮಾಡಲಿ. ” 

ತಕ್ಷಣವೇ ಹನ್ನೆರಡು ಜೊತೆ ಎತ್ತುಗಳನ್ನು ಎಣ್ಣೆಯಲ್ಲಿ ಕರಿಯಲಾಯಿತು, ಹನ್ನೆರಡು 
ಒಲೆಗಳಲ್ಲಿ ಬೇಯಿಸಿದ ಬ್ರೆಡ್ಡನ್ನು ತಂದಿರಿಸಲಾಯಿತು. ಅವರು ತಂದಿಟ್ಟರೋ ಇಲ್ಲವೋ 
ಹೊಟ್ಟೆಬಾಕ ಮುದುಕ ಎಲ್ಲವನ್ನೂ ಒಂದೇ ಬಾರಿಗೆ ತಿಂದು ಮುಗಿಸಿ ಚೊಕ್ಕಟ ಮಾಡಿದ, 
ಇನ್ನೂ ಬೇಕೆಂದು ಕೇಳಿದ. 

“ ಅಯ್ಯೋ , ಇದೇನು ಮಹಾ ! ಇನ್ನೂ ಇಷ್ಟು ಕೊಟ್ಟರೂ ತಿನ್ನುತ್ತೀನಿ!” ಅವನೆಂದ. 

ರಾಜನಿಗೆಕೋಪ ಬಂದಿತು . ಇನ್ನೂ ಒಂದು ಕೆಲಸ ಕೊಟ್ಟ . ಹನ್ನೆರಡು ಪೀಪಾಯಿ ತುಂಬ 
ಸಾರಾಯಿಯನ್ನೂ , ಹನ್ನೆರಡು ಪೀಪಾಯಿ ತುಂಬ ದ್ರಾಕ್ಷಾರಸವನ್ನೂ ತರಿಸಿದ. ಎಲ್ಲವನ್ನೂ 
ಒಂದೇ ಬಾರಿಗೆ ಕುಡಿಯಬೇಕೆಂದು ಆಜ್ಞಾಪಿಸಿದ. 

“ಕುಡಿಯದೆ ಹೋದರೆ, ನನ್ನ ಕತ್ತಿ ಅವನ ತಲೆಯನ್ನು ತುಂಡರಿಸುತ್ತೆ ! ” 

ಚುರುಕುಕಿವಿ ಮುದುಕ ಕೇಳಿಸಿಕೊಂಡು ಬಿಟ್ಟ . ವಿಷಯವನ್ನು ಪೆದ್ದನಿಗೆ ತಿಳಿಸಿದ. ಅತಿ 
ಬಾಯಾರಿಕೆಯ ಮುದುಕ ಹೇಳಿದ: 

“ ಆಗಲಿ , ಗೆಳೆಯ , ದುಃಖಪಡಬೇಡ. ನಾನೇ ಎಲ್ಲವನ್ನೂ ಕುಡಿಯುತ್ತೇನೆ. ಅವರು 
ಕೊಡೋದು ಇನ್ನೂ ಕಮ್ಮಿಯೇ ಆಗುತ್ತೆ . ” 
ಹನ್ನೆರಡು ಪೀಪಾಯಿ ತುಂಬ ಸಾರಾಯಿ , ಹನ್ನೆರಡು ಪೀಪಾಯಿ ತುಂಬ ದ್ರಾಕ್ಷಾರಸ 
ತಂದಿರಿಸಲಾಯಿತು. ತಂದಿಟ್ಟಿದ್ದೇ ತಡ ಅತಿಬಾಯಾರಿಕೆಯ ಮುದುಕ ಎಲ್ಲವನ್ನೂ ಕೊನೆಯ 
ಹನಿಯವರೆಗೂ ಕುಡಿದು ಮುಗಿಸಿ ಹೇಳಿದ: 

“ ರಾಜರ ಆತಿಥ್ಯ ಯಾಕೆ ಇಷ್ಟು ಅಲ್ಪ ! ನಾನು ಇನ್ನೂ ಇಷ್ಟು ಕೊಟ್ಟರೂ ಕುಡೀತೀನಿ.” 

ರಾಜ ನೋಡುತ್ತಾನೆ - ತಾನು ಮಾಡಿದ್ದೆಲ್ಲ ವಿಫಲ . ಮತ್ತೆ ಯೋಚನೆ ಮಾಡುತ್ತಾನೆ: 
“ ಈ ಪದನನ್ನು ಈ ಜಗತ್ತಿನಿಂದಲೇ ಅಳಿಸಿ ಹಾಕಬೇಕು ! ” 
ಸೇವಕನಿಗೆ ಹೇಳುತ್ತಾನೆ: 

“ಹೋಗಿ ಹೇಳು, ಮದುವೆಗೆ ಮುನ್ನ ಅವನು ಶುಭ್ರವಾಗಿ ಆವಿ ಸ್ನಾನ ಮಾಡಬೇಕು , 
ಅಂತ .” 

ಆಮೇಲೆ ಎರಕ ಹೊಯ್ದ ಕಬ್ಬಿಣದ ಸ್ನಾನಗೃಹವನ್ನು ಕೆಂಪಗಾಗುವವರೆಗೂ ಕಾಯಿಸು 
ವಂತೆ ಹೇಳಿದ. ಅದರ ಬಳಿಗೆ ಹೋಗಲೇ ಆಗುತ್ತಿಲ್ಲ, ಸ್ನಾನ ಮಾಡುವುದು ಹೇಗೆ ? 

ಪೆದ್ದನಿಗೆ ಸ್ನಾನ ಮಾಡುವಂತೆ ತಿಳಿಸಲಾಯಿತು . ಅವನು ಸ್ನಾನಗೃಹಕ್ಕೆ ಹೋದ. ಅವನಿಗೂ 
ಮುಂದೆ ಹಿಮಶೈತ್ಯದ ಮುದುಕ ಹುಲ್ಲಿನ ಕಂತೆಗಳನ್ನು ಹೊತ್ತು ನಡೆದ. ಅವರು ಸ್ನಾನಗೃಹದ 
ಒಳ ಹೋದರು. ಅದು ಬೆಂಕಿಯಂತೆ ಕೆಂಪಗೆ ಕಾದಿದೆ. ಧಗೆಯಿಂದ ಉಸಿರಾಡಲೇ ಆಗುತ್ತಿಲ್ಲ. 
ಹಿಮಶೈತ್ಯದ ಮುದುಕ ಹುಲ್ಲಿನ ಕಂತೆಗಳನ್ನು ಹರಡಿದ. ತಕ್ಷಣವೇ ಎಷ್ಟು ತಂಪಾಯಿತೆಂದರೆ 
ಪೆದ್ದ ಕಷ್ಟದಿಂದ ಸ್ನಾನ ಮಾಡಬೇಕಾಯಿತು. ಅವನು ಒಲೆಗೂಡಿನ ಮೇಲೆ ಹತ್ತಿ ಹೋಗಿ ಮೈ 
ಬೆಚ್ಚಗೆ ಮಾಡಿಕೊಳ್ಳಲು ಕುಳಿತ. 

ರಾಜನು ಸೇವಕನಿಗೆ ಸ್ನಾನಗೃಹದ ಬಾಗಿಲು ತೆರೆಯುವಂತೆ ಹೇಳಿದ . ಅವನು ಅಂದು 
ಕೊಂಡಿದ್ದ, ಅದರೊಳಗೆ ಪೆದ್ದನ ಶರೀರದ ಬೂದಿಯಷ್ಟೆ ಉಳಿದಿರುತ್ತದೆ, ಅಂತ. ಆದರೆ ಪೆದ್ದ 
ಒಲೆಗೂಡಿನ ಮೇಲೆ ಕುಳಿತು ಮೈ ಕಾಯಿಸಿಕೊಳ್ಳುತ್ತಿದ್ದಾನೆ ! 

“ ರಾಜನ ಸ್ನಾನಗೃಹ ಎಷ್ಟು ಕೆಟ್ಟುದಾಗಿದೆ ! ಎಷ್ಟು ತಣ್ಣಗಿದೆ, ಇಡೀ ಚಳಿಗಾಲ ಇದನ್ನು 
ಬೆಚ್ಚಗಾಗಿಸಲೇ ಇಲ್ಲವೇನೋ ಅನ್ನುವಂತೆ ! ” 

ರಾಜ ಗೊಂದಲಕ್ಕೊಳಗಾದ. ಈ ಜೀತದಾಳನ್ನು ಕೊನೆಗಾಣಿಸಲು ಇನ್ನೇನು ಮಾಡ 
ಬಹುದು ? 
ಯೋಚನೆ ಮಾಡಿದ , ಮಾಡಿದ. ಕೊನೆಗೆ ಹೇಳಿದ : 

“ನಮ್ಮ ನೆರೆಯ ರಾಜ ನಮ್ಮ ಮೇಲೆ ಯುದ್ಧಕ್ಕೆ ಬರುತ್ತಿದ್ದಾನೆ. ಯುದ್ದದಲ್ಲಿ ಅತ್ಯಂತ 
ಹೆಚ್ಚಿನ ಶೌರ್ಯ ತೋರಿದ ವೀರನಿಗೆ ನನ್ನ ಮಗಳನ್ನು ಮದುವೆ ಮಾಡಿಕೊಡುತ್ತೇನೆ. ” 
ಅನೇಕ ವೀರರು ಯುದ್ಧಕ್ಕೆ ಹೋಗಲು ಅಣಿಯಾದರು. ಪೆದ್ದನ ಅಣ್ಣಂದಿರೂ ಕುದುರೆ 
ಹತ್ತಿ ಹೊರಟರು. ಆದರೆ ಪೆದ್ದನ ಬಳಿ ಕುದುರೆಯೇ ಇಲ್ಲ. ರಾಜನ ಅಶ್ವಪಾಲನನ್ನು ಒಂದು 
ಕುದುರೆ ಕೊಡುವಂತೆ ಕೇಳಿದ. ಅವನು ಪದನಿಗೆ ಒಂದು ಮುದಿ ಗೊಡ್ಡು ಕುದುರೆ ಕೊಟ್ಟ. ಅದು 
ಬೀದಿಯಲ್ಲಿ ಕುಂಟಿಕೊಂಡು ಹೋಗುತ್ತಿತ್ತು . ಎಲ್ಲ ವೀರರೂ ಆಗಲೇ ಇವನನ್ನು ದಾಟಿ 
ಹೋದರು . ಇವನಿನ್ನೂ ದೇಕಿಕೊಂಡು ಹೋಗುತ್ತಿದ್ದಾನೆ. ಆ ಸ್ಥಳ ತಲುಪೇ ಇಲ್ಲ . 

ಆಗ ಕಾಡಿನಿಂದ ಒಬ್ಬ ಹಣ್ಣು ಹಣ್ಣು ಮುದುಕ ಬಂದ - ಪೆದ್ದನಿಗೆ ಹಡಗು ಪಡೆಯಲು 
ನೆರವಾಗಿದ್ದ ಮುದುಕ. 

“ ದುಃಖಿಸಬೇಡ, ಮಗು. ನಾನು ನಿನಗೆ ಸಹಾಯ ಮಾಡುತ್ತೇನೆ” ಎಂದ ಮುದುಕ . “ನೀನು 
ಅಕೋ ಅಲ್ಲಿ ಕಾಣುತ್ತಲ್ಲ ಆ ದೊಡ್ಡ ಕಾಡಿಗೆ ಹೋಗು, ಬಲಗಡೆ ನಿನಗೆ ಕೊಂಬೆಗಳು ಚೆನ್ನಾಗಿ 
ಹರಡಿಕೊಂಡಿರುವ ಒಂದು ಲಿಂಡನ್ ಮರ ಕಂಡುಬರುತ್ತೆ . ನೀನು ಅದರ ಬಳಿಗೆ ಹೋಗಿಹೇಳು : 
ಲಿಂಡನ್ ಮರ, ಲಿಂಡನ್ ಮರ, ಇಬ್ಬಾಗವಾಗು !? ಲಿಂಡನ್ ಮರ ಇಬ್ಬಾಗವಾಗಿ ಒಡೆಯುತ್ತೆ . 
ಅದರೊಳಗಿಂದ ಸಜ್ಜು ಹಾಕಿದ ಒಂದು ಕುದುರೆ ಹೊರ ಬರುತ್ತೆ . ಆ ಕುದುರೆಯ ಸಜ್ಜಿಗೆ ಒಂದು 
ಚೀಲವನ್ನು ಲಗತ್ತಿಸಿರಲಾಗುತ್ತೆ . ನೀನು ಚೀಲದಿಂದ ಹೊರ ಬಾ ಅಂದರೆ ಸಾಕು ನಿನಗೆ ಸಹಾಯ 
ಸಿಗುತ್ತೆ . ಆಗ ಏನಾಗುತ್ತೆ ಅನ್ನುವುದನ್ನು ನೀನೇ ನೋಡುವಿಯಂತೆ. ಸರಿ, ಹೋಗಿ ಬಾ ! ” 

ಪೆದ್ದನಿಗೆ ಅಪಾರ ಸಂತೋಷವಾಯಿತು. ಆ ಚಿಕ್ಕ ಕುದುರೆಯ ಮೇಲಿನಿಂದ ಕೆಳಕ್ಕೆ ನೆಗೆದ – 
ಆ ಕುದುರೆ ಅವನಿಗೆ ತೊಂದರೆಯಷ್ಟೆ ಆಗಿದ್ದಿತು . ತಾನೇ ಕಾಡಿಗೆ ಓಡಿ ಹೋದ. ಲಿಂಡನ್ 
ಮರವನ್ನು ಕಂಡುಹಿಡಿದ. 

“ಲಿಂಡನ್ ಮರ, ಲಿಂಡನ್ ಮರ, ಇಬ್ಬಾಗವಾಗು ! ” 

ಲಿಂಡನ್ ಮರ ಇಬ್ಬಾಗವಾಯಿತು . ಅದರೊಳಗಿಂದ ಒಂದು ಅದ್ಭುತ ಕುದುರೆ ಹೊರ 
ಬಂದಿತು . ಅದರ ಕತ್ತಿನ ಮೇಲೆ ಬಂಗಾರದ ಕೂದಲಿತ್ತು . ಅದರ ಸಜ್ಜು ಪ್ರಕಾಶಮಾನವಾಗಿ 
ಬೆಳಗುತ್ತಿತ್ತು . ಜೀನಿನ ಮೇಲೆ ಯುದ್ದ ಕವಚವಿದ್ದಿತು. ಜೀನಿಗೆ ಒಂದು ಚೀಲವನ್ನೂ ತಗುಲಿ 
ಹಾಕಲಾಗಿತ್ತು . 

ಪೆದ್ದ ಆ ಯುದ್ದ ಕವಚವನ್ನು ತೊಟ್ಟುಕೊಂಡು, ಅನಂತರ ಹೇಳಿದ : 
“ಹೇಯ್, ಚೀಲದಿಂದ ಹೊರ ಬಾ ! ” 
ತಕ್ಷಣವೇ ಒಂದು ಭಾರಿ ಸೈನ್ಯದಳ ಹೊರಬಂದಿತು... 

ಪೆದ್ದ ತನ್ನ ಸೈನ್ಯದಳದ ಮುಂದೆ ಕುದುರೆಯ ಮೇಲೆ ಕುಳಿತು ಶತ್ರುಗಳನ್ನು ಸಂಧಿಸಲು 
ಹೊರಟ. 
ಬೇಗನೆಯೇ ಅವನು ಶತ್ರುಗಳನ್ನು ಸಂಧಿಸಿದ. ತನ್ನ ಸೈನ್ಯದಳವನ್ನು ಅವರ ಮೇಲೆ ಹರಿ 
ಬಿಟ್ಟ . ಅವನ ಸೈನಿಕರು ಶತ್ರುಗಳನ್ನು ಹೇಗೆ ಖಂಡ ತುಂಡರಿಸಿದರು. ಯುದ್ಧ ಇನ್ನೇನು ಕೊನೆ 
ಗಾಣುತ್ತಿದೆ ಅನ್ನುವಾಗ ಅವನಿಗೆ ಕಾಲಿನಲ್ಲಿ ಗಾಯವಾಯಿತು. 

ಈ ಹೊತ್ತಿಗೆ ರಾಜನ ರಾಜಕುಮಾರಿಯ ಯುದ್ಧ ಹೇಗೆ ಜರುಗುತ್ತಿದೆ ಅನ್ನುವುದನ್ನು 
ನೋಡಲು ಬಂದರು . ಈ ವೀರನಿಗೆ ಗಾಯವಾದುದನ್ನು ಕಂಡು ರಾಜಕುಮಾರಿ ತನ್ನ ಕರವಸ್ತ್ರ 
ವನ್ನೇ ಎರಡು ಭಾಗ ಮಾಡಿ ಒಂದು ಭಾಗವನ್ನು ತಾನು ಇರಿಸಿಕೊಂಡು , ಇನ್ನೊಂದನ್ನು ವೀರನ 
ಕಾಲಿನ ಗಾಯಕ್ಕೆ ಪಟ್ಟಿ ಕಟ್ಟಿದಳು . 

ಯುದ್ಧ ಮುಗಿಯಿತು . ಪೆದ್ದ ಕಾಡಿಗೆ ಲಿಂಡನ್ ಮರದ ಬಳಿಗೆ ಹೋಗಿ ಹೇಳಿದ: 
“ ಲಿಂಡನ್ ಮರ, ಲಿಂಡನ್ ಮರ, ಇಬ್ಬಾಗವಾಗು ! ” 

ಲಿಂಡನ್ ಮರ ಇಬ್ಬಾಗವಾಯಿತು. ಅವನು ಎಲ್ಲವನ್ನೂ - ಆ ಕುದುರೆ, ಆ ಚೀಲ, ಆ 
ಯುದ್ದ ಕವಚ ಎಲ್ಲವನ್ನೂ – ಅದರಲ್ಲಿ ಮುಚ್ಚಿಟ್ಟ . ತಾನೇ ಮತ್ತೆ ತನ್ನ ಚಿಂದಿ ಅಂಗಿಯನ್ನೂ 
ಹಳೆಯ ಷರಾಯಿಯನ್ನೂ ತೊಟ್ಟ . 

ರಾಜ ಆಗಲೇ ವಿಜಯಗೊಂಡ ವೀರನನ್ನು ತನ್ನ ಬಳಿಗೆ ಬರುವಂತೆ ಆಹ್ವಾನಿಸಿದ್ದ . ರಾಜ 
ಕುಮಾರಿಯ ಕರವಸ್ತ್ರವನ್ನು ಗಾಯಕ್ಕೆ ಕಟ್ಟಲಾಗಿದ್ದ ವೀರನನ್ನು ಹುಡುಕುವಂತೆ ದೂತರನ್ನು 
ಮಲೆಮಲೆಗೆ ಅಟ್ಟಿದ. ಅವರಿಗೆ ಎಲ್ಲೂ ಅಂಥವನು ಕಂಡುಬರಲಿಲ್ಲ. ಆಗ ರಾಜ ಅಂಥವನಿ 
ಗಾಗಿ ಶ್ರೀಮಂತರ ಮಧ್ಯೆಯಷ್ಟೆ ಅಲ್ಲ ಸಾಮಾನ್ಯ ಪ್ರಜೆಗಳ ಮಧ್ಯೆಯ ಹುಡುಕಬೇಕೆಂದು 
ಆಜ್ಞಾಪಿಸಿದ. ಅವನ ಸೇವಕರು ಬಡ ಜನರ ಮನೆಗಳಲ್ಲೆಲ್ಲ ಹುಡುಕ ತೊಡಗಿದರು. ತುಂಬ ಕಾಲ 
ಅವರು ಅಂಥ ಯಾರನ್ನೂ ಕಂಡುಹಿಡಿಯದಾದರು . ಕೊನೆಗೆ ರಾಜನ ಇಬ್ಬರು ಸೇವಕರು ಊರಿನ 
ತುದಿಯಲ್ಲಿದ್ದ ಮನೆಗೆ ಬಂದರು . ಆ ಮನೆಯಲ್ಲಿ ಆ ಸಮಯದಲ್ಲಿ ಪೆದ್ದನ ಅಣ್ಣಂದಿರು ಊಟಕ್ಕೆ 
ಅಣಿಯಾಗಿ ಕುಳಿತಿದ್ದರು. ಪೆದ್ದನೇ ಅವರಿಗೆ ರೊಟ್ಟಿ ಬೇಯಿಸಿಕೊಡುತ್ತಿದ್ದ. ಅವನ ಒಂದು ಕಾಲಿಗೆ 
ರಾಜಕುಮಾರಿಯ ಕರವಸ್ತ್ರದ ಪಟ್ಟಿ ಕಟ್ಟಿದಿತು . ರಾಜನ ಸೇವಕರು ತಕ್ಷಣವೇ ಅವನನ್ನು ರಾಜನ 
ಅರಮನೆಗೆ ಕರೆದೊಯ್ಯಲು ಬಯಸಿದರು . 

ಆದರೆ ಅವನು ಕೇಳಿಕೊಂಡ: 

“ಸೋದರರೇ , ನಾನು ಹೇಗೆ ಈ ಅಂದಗೆಟ್ಟ ರೀತಿಯಲ್ಲಿ ರಾಜನ ಬಳಿಗೆ ಹೋಗಲಿ ? ಸ್ನಾನ 
ವನ್ನಾದರೂ ಮಾಡುತ್ತೇನೆ. ಸ್ನಾನಗೃಹಕ್ಕೆ ಹೋಗಲು ಬಿಡಿ. ನೀವು ಇಲ್ಲಿ ನನಗಾಗಿ ಊಟಕ್ಕೆ 
ಕಾಯುತ್ತಿರಿ. ” 

“ ಆಗಲಿ , ಬೇಗ ಮೈ ತೊಳೆದುಕೊಂಡು ಬಾ . ” 

ಹಾಗೆಂದು ಅವರು ಮೇಜಿನ ಮುಂದೆ ಕುಳಿತು ಗಬಗಬನೆ ತಿನ್ನ ತೊಡಗಿದರು . ಹಾಗೆ ತಿನ್ನು 
ವಾಗ ಅವರ ಎರಡು ಕೆನ್ನೆಗಳೂ ಉಬ್ಬಿಕೊಂಡಿದ್ದವು. ಈ ಮಧ್ಯೆ ಪೆದ್ದ ಕಾಡಿಗೆ ಓಡಿದ. ಲಿಂಡನ್ 
ಮರದ ಬಳಿ ಹೋಗಿ ಹೇಳಿದ: 

“ಲಿಂಡನ್ ಮರ, ಲಿಂಡನ್ ಮರ, ಇಬ್ಬಾಗವಾಗು !” 

ಲಿಂಡನ್ ಮರ ಇಬ್ಬಾಗವಾಯಿತು. ಕುದುರೆ ಹೊರ ಬಂದಿತು. ಪೆದ್ದ ತನ್ನ ಬಟ್ಟೆ ಬದಲಾಯಿ 
ಸಿದ. ಎಷ್ಟು ಆಕರ್ಷಕನಾಗಿ , ಎಷ್ಟು ಸುಂದರನಾಗಿ ಆದನೆಂದರೆ ಅವನನ್ನು ನೋಡುವುದು ಕಣ್ಣು 
ಗಳಿಗೆ ಹಬ್ಬವೆನಿಸುತ್ತಿತ್ತು . ಕುದುರೆಯ ಮೇಲೆಕುಳಿತು ರಾಜನ ಅರಮನೆಗೆ ಬಂದ. 

ರಾಜನೂ ರಾಜಕುಮಾರಿಯ ಪರಮಾನಂದಗೊಂಡರು . ಆ ವೀರನನ್ನು ರಾಜಮರ್ಯಾದೆ 
ಗೌರವಗಳೊಂದಿಗೆ ಬರಮಾಡಿಕೊಂಡರು . ತಕ್ಷಣವೇ ಮದುವೆಯ ಸಮಾರಂಭವೂ ಪ್ರಾರಂಭ 
ವಾಯಿತು. 

ವಿಜಯಿಾ ಇವಾನ್

ತುಂಬ ತುಂಬ ಕಾಲದ ಹಿಂದೆ, ಪುರಾತನ ಕಾಲದಲ್ಲಿ, ಒಂದು ಭಯಂಕರ ಡೇಗನ್ ವಾಸಿ 
ಸುತ್ತಿತ್ತು . ಅದು ಆಗಾಗ್ಗೆ ಒಂದಾನೊಂದು ಹಳ್ಳಿಗೆ ಬಂದು ಅಲ್ಲಿದ್ದ ಜನರನ್ನು ತಿಂದು ಹಾಕು 
ತಿತ್ತು . ಕೊನೆಗೆ ಆ ಹಳ್ಳಿಯಲ್ಲಿ ಒಬ್ಬನೇ ಒಬ್ಬ ಉಳಿದ. ಅವನೂ ಮುದುಕ, ಗನ್ ತನ್ನಲ್ಲೇ 
ಹೇಳಿಕೊಂಡಿತು : 

“ ಇವನನ್ನು ನಾಳೆಯವರೆಗೆ ಬಿಟ್ಟಿದ್ದೀನಿ. ನಾಳೆ ಬೆಳಗಿನ ಉಪಾಹಾರಕ್ಕೆ ಸರಿಹೋಗುತ್ತೆ ! ” 

ಅದೇ ದಿನ ಒಬ್ಬ ಬಡ ಯುವಕ ಅಕಸ್ಮಾತ್ತಾಗಿ ಆ ಹಳ್ಳಿಗೆ ಬಂದ. ಅವನು ಮುದುಕನ 
ಗುಡಿಸಿಲಿನ ಬಾಗಿಲು ತಟ್ಟಿ ಅಂದು ರಾತ್ರಿ ಅಲ್ಲಿ ಕಳೆಯಲು ಅವಕಾಶ ಕೊಡಬೇಕೆಂದು ಕೇಳಿಕೊಂಡ. 

“ ಇಲ್ಲಿ ಇರಬೇಕೂಂತ ಯಾಕಪ್ಪ ನಿನಗೆ ಇಷ್ಟ ? ನಿನಗೇನು ಜೀವನ ಸಾಕಾಗಿಹೋಗಿದೆಯಾ ? ” 
ಮುದುಕ ಕೇಳಿದ. 

“ ಯಾಕೆ ಹಾಗೆ ಕೇಳೀಯ, ಅಜ್ಜ ? ” ಯುವಕ ಮರು ಪ್ರಶ್ನೆ ಹಾಕಿದ. 

ಮುದುಕ ಅವನಿಗೆ ಡೇಗನ್‌ನ ವಿಷಯ ತಿಳಿಸಿದ. ಅದು ಹಳ್ಳಿಯಲ್ಲಿದ್ದ ಸಮಸ್ತರನ್ನೂ 
ತಿಂದು ಹಾಕಿದ್ದಿತೆಂದೂ ತನ್ನನ್ನೂ ತಿನ್ನಲು ಮಾರನೆಯ ಬೆಳಿಗ್ಗೆ ಬರಲಿದ್ದಿತೆಂದೂ ತಿಳಿಸಿದ. 

ಯುವಕ ಹೇಳಿದ: “ ಪರವಾಗಿಲ್ಲ ! ಅದು ನಿನ್ನನ್ನೇನೂ ತಿನ್ನೋಲ್ಲ. ಅದೇ ಉಸಿರು ಕಟ್ಟಿ 
ಸಾಯುತ್ತೆ ! ” 

- ಮಾರನೆಯ ಬೆಳಿಗ್ಗೆ ಡೇಗನ್ ಹಳ್ಳಿಗೆ ಹಾರಿಕೊಂಡು ಬಂದಿತು. ಹುಡುಗನನ್ನು ಕಂಡು 
ಸಂತೋಷಪಟ್ಟಿತು : 
“ಓಹೋ , ಒಳ್ಳೆಯದೇ ಆಯಿತು. ನಿನ್ನೆ ಒಬ್ಬನೇ ಒಬ್ಬ ಇದ್ದ. ಇವತ್ತು ಇಬ್ಬರು 
ಇದ್ದಾರೆ.” 

“ ಹುಷಾರಾಗಿರು ! ” ಯುವಕ ಹೇಳಿದ. “ ನಮ್ಮನ್ನು ತಿನ್ನೋಕೆ ಮುಂಚೆ ನೀನೇ ಉಸಿರು 
ಕಟ್ಟಿ ಸಾಯಬಹುದು. ” 

ಡೇಗನ್ ಅವನು ಆಶ್ಚರ್ಯದಿಂದ ನೋಡಿತು . 
“ ನನಗಿಂತ ನೀನು ಹೆಚ್ಚು ಬಲಶಾಲಿ ಅಂದುಕೊಂಡು ಬಿಟ್ಟೆಯಾ? ” ಅದು ಕೇಳಿತು. 
“ ಅಂದುಕೊಳ್ಳೋದು ಅಷ್ಟೇ ಅಲ್ಲ, ನಿಜಕ್ಕೂ ಹಾಗೇ ಇದೀನಿ ! ” 

“ನೀನು - ಬಲಶಾಲಿ ? ನಾನು ನಂಬೋಲ್ಲ. ನೋಡು ನಾನು ಏನು ಮಾಡಬಲ್ಲೆ 
ಅಂತ ! ” 

ಹಾಗೆಂದು ಅದು ಒಂದು ಕಲ್ಲುಗುಂಡನ್ನು ತೆಗೆದುಕೊಂಡು ಗಟ್ಟಿಯಾಗಿ ಹಿಸುಕಿತು . ಕಲ್ಲು 
ಗುಂಡು ಪುಡಿಪುಡಿಯಾಯಿತು. 

“ ಇದೇನು ಮಹಾ !?” ಅಂದ ಯುವಕ. “ಕಲ್ಲುಗುಂಡನ್ನು ಹಿಸುಕಿ ನೀರು ತರಿಸಬೇಕು. 
ಅದೀಗ ನಿಜವಾದ ಶೌರ್ಯ, ನೋಡು ನನ್ನನ್ನು .” 

ಹಾಗೆಂದು ಯುವಕ ಆಗಷ್ಟೆ ಮಾಡಿದ್ದ ಹಸನಾದ ಒಂದು ತುಂಡು ಕಾಟೇಜ್ ಚೀಸ್ ತೆಗೆದು 
ಕೊಂಡ . ಅದನ್ನು ಒಣಗಲೆಂದು ಒಂದು ತುಂಡು ಬಟ್ಟೆಯಲ್ಲಿ ಕಟ್ಟಿ ಇರಿಸಲಾಗಿತ್ತು . ಅದು 
ಕಲ್ಲುಗುಂಡನ್ನು ಹೋಲುವಂತಿತ್ತು . ಯುವಕ ಅದನ್ನು ತೆಗೆದುಕೊಂಡು ಗಟ್ಟಿಯಾಗಿ ಅವುಕಿದ. 
ಅದರಿಂದ ನೀರು ಹೊರ ಸುರಿಯ ತೊಡಗಿತು . 
“ ಬಲ ಅಂದರೆ ನೋಡು ಇದು !” ಅವನೆಂದ. 

“ ಹೌದು. ನೋಡಿದೆಯಾ ನೀನೀಗ ನಿಜಕ್ಕೂ ಬಲಶಾಲಿ ! ” ಡೇಗನ್ ಹೇಳಿತು . “ಹೋಗಲಿ 
ಬಿಡು. ನಾವಿಬ್ಬರೂ ಸ್ನೇಹಿತರಾಗಿರೋಣ.” 

“ ಆಗಲಿ, ಆದರೆ ನಾನು ಹೇಳಿದ ಹಾಗೆ ನೀನು ಮಾಡೋದಾದರೆ ! ” 

ಅವರಿಬ್ಬರೂ ಒಟ್ಟಿಗೇ ಡೇಗನ್‌ನ ಮನೆಗೆ ಹೋದರು . ಡೇಗನ್ ಯುವಕನನ್ನು “ನಿನ್ನ 
ಹೆಸರೇನು ? ” ಎಂದು ಕೇಳಿತು . 

“ ನನ್ನನ್ನು ವಿಜಯಾ ಇವಾನ್ ಅಂತ ಕರೀತಾರೆ. ” 

ಅದನ್ನು ಕೇಳಿ ಡೇಗನ್‌ಗೆ ಆಗಲೇ ಪುಕ್ಕಲು. “ ಅಯ್ಯೋ , ಇವನು ನನ್ನನ್ನೂ ಕೊಂದು 
ಬಿಡುತ್ತಾನೋ ಏನೋ ! ” ಎಂದು ತನ್ನಲ್ಲೇ ಹೇಳಿಕೊಂಡಿತು. 

ಊಟದ ಸಮಯ ಬಂದಿತು . ಡೇಗನ್ ಹೇಳಿತು : 
“ಹೋಗು, ಇವಾನ್ ! ಒಂದು ಎತ್ತನ್ನು ಹಿಡಿದುಕೊಂಡು ಬಾ , ಇವತ್ತಿನ ಅಡಿಗೆಗೆ ! ” 

ಯುವಕ ಡೇಗನ್‌ನ ಪಶುಗಳ ಮುಂದೆ ಮೇಯುತ್ತಿದ್ದ ಸ್ಥಳಕ್ಕೆ ಹೋದ. ಅಲ್ಲಿದ್ದ ಎಲ್ಲ ಪಶುಗಳ 
ಬಾಲಗಳನ್ನೂ ಒಟ್ಟಿಗೆ ಕಟ್ಟ ತೊಡಗಿದ. ಡೇಗನ್ ತುಂಬ ಹೊತ್ತು ಕಾಯಿತು. ಆಮೇಲೆ ಯಾಕೆ 
ಇಷ್ಟು ಹೊತ್ತಾದರೂ ಬರಲಿಲ್ಲ ಎಂದು ನೋಡಲು ಓಡಿ ಬಂದಿತು . 

“ ಏನು ಮಾಡುತ್ತಿದ್ದೀಯ , ಇವಾನ್ ? ” ಅದು ಕೇಳಿತು . 

“ಒಂದೇ ಒಂದು ಎತ್ತನ್ನು ತರುವುದು ನನಗೆ ಇಷ್ಟವಿಲ್ಲ. ಎಲ್ಲವನ್ನೂ ಒಟ್ಟಿಗೇ ತರಬೇಕೆಂಬ 
ಆಸೆ ” ಅವನೆಂದ . 

“ ಹಾಳಾಗಿ ಹೋಗ! ನೀನು ಹಾಗೇನಾದರೂ ಮಾಡಿದರೆ ನನ್ನ ಬಳಿ ಒಂದು ಎತ್ತೂ 
ಉಳಿಯೊಲ್ಲ! ” ಡೇಗನ್ ಕೂಗಿ ಹೇಳಿತು. 

ಅದು ಒಂದು ಎತ್ತನ್ನು ಕೊಂದು , ಚರ್ಮ ಸುಲಿದು , ಮಾಂಸವನ್ನೂ ಚರ್ಮವನ್ನೂ 
ಮನೆಗೆ ಎಳೆದುಕೊಂಡು ಹೋಯಿತು . ಮನೆ ತಲುಪಿದ ಮೇಲೆ ಚರ್ಮವನ್ನು ಇವಾನ್‌ಗೆ ಕೊಟ್ಟು 
ಹೇಳಿತು : 

“ ತಗೋ , ಈ ಚರ್ಮದಲ್ಲಿ ಒಂದಿಷ್ಟು ನೀರು ಹಿಡಿದುಕೊಂಡು ಬಾ .” 

ಇವಾನ್ ಚರ್ಮವನ್ನು ತೆಗೆದುಕೊಂಡ . ಬಾವಿಯ ಬಳಿಗೆ ಅದನ್ನು ಕಷ್ಟದಿಂದ ಎಳೆದುಕೊಂಡು 
ಹೋದ. ಆಮೇಲೆ ಬಾವಿಯೊಳಕ್ಕೆ ಇಳಿಬಿಟ್ಟ . ಅಷ್ಟೆ ಅವನು ಮಾಡಿದ್ದು , ನೀರು ತುಂಬಿದ ಆ 
ಚರ್ಮವನ್ನು ಹೊರಕ್ಕೆ ಎಳೆಯುವುದು ಅವನ ಕೈಲಿ ಆಗಲಿಲ್ಲ. ಆಗ ಅವನು ಮರದಿಂದ ಒಂದು 
ಗುದ್ದಲಿಯನ್ನು ಮಾಡಿಕೊಂಡು ಬಾವಿಯ ಸುತ್ತ ಅಗೆಯ ತೊಡಗಿದ. 

ಎಷ್ಟು ಹೊತ್ತಾದರೂ ಬರಲಿಲ್ಲವಲ್ಲ, ಇವನು ಏನು ಮಾಡುತ್ತಿದ್ದಾನೆ ಎಂದು ನೋಡಲು 
ಡೇಗನ್ ಓಡಿ ಬಂದಿತು . 

“ ಇದೇನು ಮಾಡುತ್ತಿದ್ದೀಯ , ಇವಾನ್ ? ” ಅದು ಕೇಳಿತು . 

“ ಅಯೋ , ಆ ಪುಟ್ಟ ಚರ್ಮದಲ್ಲಿ ಯಾರು ನೀರು ಹೊರುತ್ತಾರೆ ! ಇಡೀ ಬಾವಿಯನ್ನೇ 
ತೆಗೆದು ತರುತ್ತೇನೆ. ” 

“ ಹಾಳಾಗಿ ಹೋಗ! ” ಡೇಗನ್ ಎಂದಿತು . ಇವಾನ್‌ನ ಭಾರಿ ಬಲವನ್ನು ಕಂಡು ದಿಗಿಲು 
ಬಿದ್ದಿತು . ತಾನೇ ಚರ್ಮದಲ್ಲಿ ನೀರು ತುಂಬಿಕೊಂಡು ಒಯ್ದಿತು. 

“ಹೋಗಲಿ , ಹೋಗಿ ಒಂದಿಷ್ಟು ಸೌದೆಯನ್ನಾದರೂ ಕಡಿದು ತಾ ! ” ಎಂದದು ಇವಾನ್‌ಗೆ 
ಹೇಳಿತು . “ ಒಂದೇ ಒಂದು ಒಣಗಿದ ಓಕ್ ಮರವನ್ನು ಕಿತ್ತು ತಾ , ಸಾಕು ! ” 

“ ನನಗದೆಲ್ಲ ಆಗೊಲ್ಲ. ಸುಮ್ಮನೆ ಒಂದು ಓಕ್ ಮರವನ್ನು ಯಾರು ಕಿತ್ತು ತರುತ್ತಾರೆ ? 
ಹತ್ತಿಪ್ಪತ್ತು ಮರಗಳನ್ನಾದರೂ ಕಿತ್ತು ತಾ ಅಂದರೆ ಅದು ಪರವಾಗಿಲ್ಲ ” ಇವಾನ್ ಕೋಪಗೊಂಡ 
ವನಂತೆ ನಟಿಸಿ ಹೋಗಲೇ ಇಲ್ಲ. 

ಡೇಗನ್ ಅಡಿಗೆ ಮಾಡಿತು . ಆಮೇಲೆಊಟಕ್ಕೆ ಕುಳಿತು ತಿನ್ನ ತೊಡಗಿತು. ಆದರೆ ಇವಾನ್ 
ಅದರ ಜೊತೆಊಟಕ್ಕೆ ಕೂರಲಿಲ್ಲ . ತಾನು ತಿನ್ನುವುದು ಎಷ್ಟು ಸ್ವಲ್ಪ ಎಂದು ಅದಕ್ಕೆ ತಿಳಿದರೆ 
ತಾನು ಅಷ್ಟು ಬಲಶಾಲಿಯಲ್ಲ ಎಂದು ಅದು ಊಹಿಸಿ ತಿಳಿದು ಬಿಡುವುದು ಎಂದು ಅವನು 
ಹೆದರಿದ್ದ. ಡೇಗನ್ ಹೆಚ್ಚಿನ ಮಾಂಸವನ್ನೆಲ್ಲ ತಿಂದು ಪಾತ್ರೆಯಲ್ಲಿ ತೀರ ಸ್ವಲ್ಪವಷ್ಟೆ ಉಳಿದಾಗ 
ಯುವಕ ಮೇಜಿನ ಮುಂದೆ ಕುಳಿತು ಎಳ್ಳಷ್ಟು ತಿಂದು ಹೇಳಿದ : 

“ ಏನು ಇಷ್ಟೇ ಇದೆ. ಇದು ಯಾರಿಗೆ ಸಾಕು ? ” 

“ಹೋಗಲಿ , ಬಾ , ನಮ್ಮ ಅಮ್ಮನ ಮನೆಗೆ ಹೋಗೋಣ. ಅವಳು ಸೀಕಡುಬು ಮಾಡಿ 
ಕೊಡುತ್ತಾಳೆ ! ” ಡೇಗನ್ ಹೇಳಿತು . 

“ ಹುಂ . ನಡಿ, ಹೋಗೋಣ! ” ಇವಾನ್ ಹೇಳಿದ. ತನ್ನಲ್ಲೇ ಹೇಳಿಕೊಂಡ : “ ಅಯೋ , 
ಇನ್ನು ನನ್ನ ಕತೆ ಮುಗೀತು ಅಂತಲೇ ! ” 

ಅವರು ಡೇಗನ್‌ನ ತಾಯಿಯ ಮನೆಗೆ ಬಂದರು . ಅಲ್ಲಿ ಇವರಿಗೆ ಇಪ್ಪತ್ತು ಪೀಪಾಯಿಗಳ 
ತುಂಬ ಸೀಕಡುಬು ತಿನ್ನಲು ಕೊಡಲಾಯಿತು. 

ಇವಾನ್‌ನೂ ಡ್ರಗನ್ನೂ ಮೇಜಿನ ಮುಂದೆ ಕುಳಿತರು. ಟ್ರೇಗನ್ ಒಂದಾದ ಮೇಲೊಂದ 
ರಂತೆ ಸೀಕಡುಬನ್ನು ನುಂಗ ತೊಡಗಿತು . ಇವಾನ್ ತಿನ್ನುತ್ತಿರುವಂತೆ ಸೋಗುಹಾಕಿದ , ಅಷ್ಟೆ . 
ಸೀಕಡುಬುಗಳನ್ನು ತೆಗೆದುಕೊಂಡು ತನ್ನ ಅಂಗಿಯ ತೋಳುಗಳೊಳಕ್ಕೂ ಎದೆಯ ಬಳಿಯೂ 
ತುರುಕಿಕೊಂಡ. ಇಪ್ಪತ್ತು ಪೀಪಾಯಿಗಳು ಬೇಗನೆಯೇ ಬರಿದಾದವು. ಡೇಗನೆ ಎದ್ದು ನಿಂತು 
ಹೇಳಿತು : 
- “ ಬಾ , ಕಲ್ಲಿನ ಬಂಡೆಗೆ ಹೋಗಿ ಸುತ್ತಿಕೊಳ್ಳೋಣ. ಯಾರು ಹೆಚ್ಚು ಬಲಶಾಲಿ ಅನ್ನೋ 
ದನ್ನು ನೋಡೋಣ. ” 

“ ಹುಂ . ನಡಿ , ಹೋಗೋಣ! ” ಇವಾನ್ ಒಪ್ಪಿದ. 

ಅವರು ಹೊಲದಲ್ಲಿ ಒಂದು ದೊಡ್ಡ ಕಲ್ಲಿನ ಬಂಡೆಯನ್ನು ಕಂಡರು. ಡೇಗನ್ ಅದರ ಸುತ್ತ 
ಎಷ್ಟು ಬಲವಾಗಿ ಸುತ್ತಿಕೊಂಡಿತೆಂದರೆ ಆ ಕಲ್ಲಿನ ಬಂಡೆಯಿಂದ ಕಿಡಿಗಳು ಹಾರಿದವು! 

“ ಅದು ಏನು ಮಹಾ! ” ಇವಾನ್ ಹೇಳಿದ. “ನೀನು ಕಲ್ಲು ಬಂಡೆಯಿಂದ ನೀರು ಹೊರ 
ಬರುವ ಹಾಗೆ ಸುತ್ತಿಕೊಂಡಿದ್ದರೆ ಪರವಾಗಿರಲಿಲ್ಲ.” 

ಅವನು ತಾನೇ ಕಲ್ಲು ಬಂಡೆಯ ಸುತ್ತ ಕೈಗಳನ್ನು ಬಳಸಿ ತಂದು ತನ್ನ ಶರೀರವನ್ನು ಅದಕ್ಕೆ 
ಬಲವಾಗಿ ಒತ್ತಿದ. ಅವನ ಅಂಗಿಯ ತೋಳುಗಳಲ್ಲೂ ಎದೆಯ ಬಳಿಯ ಇದ ಸೀಕಡುಬುಗಳು 
ಜಜ್ಜಿ ಹೋದಂತಾಗಿ ನೀರು ಹೊರ ಸುರಿಯ ತೊಡಗಿತು . 

“ನೋಡಿದೆಯಾ, ಹೀಗೆ ಮಾಡಬೇಕು ! ” ಅವನೆಂದ. 
ಡೇಗನ್ ಹೆದರಿ ನಡುಗ ತೊಡಗಿತು . 

“ಹೋಗಲಿ , ಬಾ , ಇವಾನ್ , ನಾವು ಶಿಳ್ಳೆ ಹಾಕಿನೋಡೋಣ. ಯಾರು ಹೆಚ್ಚು ಗಟ್ಟಿಯಾಗಿ 
ಶಿಳ್ಳೆ ಹಾಕಬಲ್ಲರು, ನೋಡೋಣ” ಡೇಗನ್ ಹೇಳಿತು . ಅದು ಎಷ್ಟು ಗಟ್ಟಿಯಾಗಿ ಶಿಳ್ಳೆ ಹಾಕಿ 
ತೆಂದರೆ ಸುತ್ತ ಇದ್ದ ಗಿಡಮರಗಳೆಲ್ಲ ಬುಡದವರೆಗೂ ಬಾಗಿದವು. 

“ಈಗ ನಾನೇನು ಮಾಡುವುದು ? ” ಎಂದು ಇವಾನ್ ತನ್ನಲ್ಲೇ ಹೇಳಿಕೊಂಡ. ಸುತ್ತ 
ನೋಡಿದ. ಹತ್ತಿರದಲ್ಲೇ ನೆಲದ ಮೇಲೆ ಒಂದು ಕಬ್ಬಿಣದ ತುಂಡು ಬಿದ್ದಿದ್ದಿತು . ಅವನೆಂದ : 

“ ನಿನ್ನ ಕಣ್ಣುಗಳನ್ನು ಮುಚ್ಚಿಕೊ , ಡೇಗನ್ ! ನಾನೀಗ ಎಷ್ಟು ಜೋರಾಗಿ ಶಿಳ್ಳೆ ಹಾಕು 
ತೇನೆಂದರೆ ನಿನ್ನ ಕಣ್ಣುಗುಡ್ಡೆಗಳು ಕಿತ್ತು ಬಂದು ಬಿಡುತ್ತವೆ !” 

ಡೇಗನ್ ಕಣ್ಣು ಮುಚ್ಚಿಕೊಂಡಿತು. ಇವಾನ್ ಶಿಳ್ಳೆ ಹಾಕುತ್ತ ಕಬ್ಬಿಣದ ತುಂಡನ್ನು ಎತ್ತಿ 
ಕೊಂಡು ಅದರಿಂದ ಡೇಗನ್‌ನ ಹಣೆಯ ಮೇಲೆ ಬಲವಾಗಿ ಬಾರಿಸಿದ. ಡೇಗನ್ ನೋವಿನಿಂದ 
ನುಲಿಯಿತು. 

“ಹೌದು, ನೀನು ಹೇಳಿದ್ದು ಸರಿ ” ಎಂದಿತು ಅದು. ಕಣ್ಣು ಮುಚ್ಚಿಕೊಂಡಿದ್ದರೂ ನನ್ನ 
ಕಣ್ಣುಗುಡ್ಡೆಗಳು ಇನ್ನೇನು ಕಿತ್ತು ಬಂದು ಬಿಡಲಿದವು! ” 

ಅದು ಇವಾನ್‌ಗೆ ಎಷ್ಟು ಹೆದರಿದ್ದಿತೆಂದರೆ ಇವಾನ್‌ನ ಜೊತೆ ಒಂದೇ ಮನೆಯಲ್ಲಿ ವಾಸಿ 
ಸಲೂ ಬಯಸಲಿಲ್ಲ. ಹಾಗಾಗಿ ಇವಾನ್‌ನಿಗೆ ಒಂದು ಮನೆಯನ್ನು ಹಳ್ಳಿಯ ಸರಹದ್ದಿನಲ್ಲಿ ಕಟ್ಟಿ 
ಕೊಟ್ಟಿತು. ಅನಂತರ ಅದೂ ಅದರ ತಾಯಿಯ ಜೊತೆಗೂಡಿ ಇವಾನ್‌ನನ್ನು ಹೇಗೆ ಸಾಯಿ 
ಸುವುದು ಅಂತ ಹಂಚಿಕೆ ಮಾಡ ತೊಡಗಿದವು. 

“ ಅವನು ಒಳಗೆ ಮಲಗಿದ್ದಾಗ ಅವನ ಜೊತೆಗೇ ಅವನ ಮನೆಯನ್ನು ಸುಟ್ಟು ಹಾಕಿ 
ಬಿಡೋಣ” ಎಂದವು ತೀರ್ಮಾನಿಸಿದವು. 

ಆದರೆ ಇವಾನ್ ಅವುಗಳ ಈ ಮಾತನ್ನು ಕೇಳಿಸಿಕೊಂಡು ಬಿಟ್ಟ . ತನ್ನ ಮನೆಯ ಹೊರಗೆ 
ಅವಿತು ಕುಳಿತ . 


ಅವು ಅವನ ಮನೆಯನ್ನು ಸುಟ್ಟು ಹಾಕಿದವು. ಅವನು ಕೂಡಲೇ ಅಡಗಿದ್ದ ಸ್ಥಳದಿಂದ 
ಅವುಗಳಿಗೆ ಕಾಣದಂತೆ ಹೊರಬಂದು ಬೂದಿಯಾಗಿದ್ದ ಮನೆಯ ಮಧ್ಯೆ ನಿಂತ. ತನ್ನ ಬಟ್ಟೆಗೆ 
ಮೆತ್ತಿದ್ದ ಬೂದಿಯನ್ನು ಕೊಡವಿಕೊಳ್ಳುವವನಂತೆ ನಟಿಸುತ್ತ ನಿಂತ . 
ಅವನನ್ನು ಕಂಡು ಡೇಗನ್ ಬೆಕ್ಕಸಬೆರಗಾಗಿ ನಿಂತಿತು. 

“ ಏನು , ನೀನು ಇನ್ನೂ ಜೀವಂತವಾಗಿದ್ದೀಯ , ಇವಾನ್ ? ” ಎಂದದು ಆಶ್ಚರ್ಯ ಭಯ 
ಗಳಿಂದ ಕೇಳಿತು . 

“ ಯಾಕಿರಬಾರದು ! ” ಇವಾನ್ ಹೇಳಿದ, “ ಆದರೆ ರಾತ್ರಿ ನನಗೇಕೋ ಅಷ್ಟು ಚೆನ್ನಾಗಿ 
ನಿದ್ದೆ ಬರಲಿಲ್ಲ. ಸೊಳ್ಳೆ ಕಚ್ಚಿತು ಅಂತ ಕಾಣುತ್ತೆ .” 

“ಇವನು ಎಂಥ ಮನುಷ್ಯನಪ್ಪ ! ಬೆಂಕಿ ಉರಿಯ ಇವನಿಗೆ ಏನೂ ಮಾಡಲಾರದಲ್ಲ ! ” 
ಎಂದು ಡೇಗನ್ ತನ್ನಲ್ಲೇ ಹೇಳಿಕೊಂಡಿತು. ಅವನಿಗೆ ಹೆದರಿ ಅದು ಆ ಸ್ಥಳವನ್ನೇ ಬಿಟ್ಟು 
ಹೋಯಿತು. ಅದು ಆ ಪ್ರದೇಶಗಳಲ್ಲಿ ಮತ್ತೆಂದೂ ಕಂಡುಬರಲಿಲ್ಲ. 

ಉರುಳುಕಾಳು

ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಇದ್ದ . ಅವನಿಗೆ ಆರು ಮಂದಿ ಗಂಡುಮಕ್ಕಳು, 
ಒಬ್ಬಳು ಮಗಳು . ಗಂಡುಮಕ್ಕಳು ಹೊಲಕ್ಕೆ ಉಳಲು ಹೋದರು . ತಮಗೆ ಊಟ ತಂದು 
ಕೊಡಬೇಕೆಂದು ತಂಗಿಗೆ ಹೇಳಿದರು . 

ಅವಳು ಕೇಳಿದಳು : 
“ನೀವು ಹೊಲದಲ್ಲಿ ಎಲ್ಲಿರುತ್ತೀರೋ , ನನಗೆ ಹೇಗೆ ಗೊತ್ತಾಗುವುದು ? ” 
ಅವರು ಹೇಳಿದರು : 

“ ನಾವು ಮನೆಯಿಂದ ಹಿಡಿದು ಎಲ್ಲಿ ಉಳುತ್ತೇವೋ ಅಲ್ಲಿಯವರೆಗೆ ಚಾಚಿರುವಂತೆ ಒಂದು 
ನೇಗಿಲ ಸಾಲು ಮಾಡಿರುತ್ತೇವೆ. ನೀನು ಅದನ್ನು ನೋಡಿಕೊಂಡು ಬಾ .” 

ಹಾಗೆಂದು ಅವರು ಹೊಲಕ್ಕೆ ಉಳಲು ಹೋದರು. 

ಈ ಹೊಲದ ಹತ್ತಿರ ಕಾಡಿನಲ್ಲಿ ಒಂದು ಡೇಗನ್ ವಾಸವಾಗಿತ್ತು . ಅದು ಈ ಹುಡುಗರು 
ಮಾಡಿದ್ದ ನೇಗಿಲ ಸಾಲನ್ನು ಮಣ್ಣಿನಿಂದ ಮುಚ್ಚಿ ಇನ್ನೊಂದು ಹೊಸ ಸಾಲನ್ನು ಮಾಡಿತು . 
ಆ ಸಾಲು ನೇರವಾಗಿ ಅವರ ಮನೆಗೆ ಕರೆದೊಯುತ್ತಿತ್ತು . ಹುಡುಗಿ ಅಣ್ಣಂದಿರಿಗೆ ಊಟ ತೆಗೆದು 
ಕೊಂಡು ಈ ಸಾಲು ಅನುಸರಿಸಿಕೊಂಡು ಹೋದಳು . ಅದು ಅವಳನ್ನು ಡೇಗನ್‌ನ ಮನೆಯ 
ಅಂಗಳಕ್ಕೆ ಕರೆದೊಯ್ದಿತು. ಅವಳು ಅಲ್ಲಿಗೆ ಹೋದಕೂಡಲೇ ಅವಳನ್ನು ಡೇಗನ್ ಹಿಡಿದು 
ತನ್ನ ಮನೆಯೊಳಕ್ಕೆ ಎಳೆದೊಯ್ದಿತು. 

ಹೊಲ ಉತ್ತನಂತರ ಗಂಡು ಮಕ್ಕಳು ಸಂಜೆ ಮನೆಗೆ ಬಂದು ತಾಯಿಯನ್ನು ಕೇಳಿದರು : 


143 


“ ನಾವು ಇಡೀ ದಿನ ಉತ್ತೆವು. ನೀನು ನಮಗೆ ತಿನ್ನಲು ಏನನ್ನೂ ಕಳಿಸಿಕೊಡಲೇ ಇಲ್ಲ ! ” 
ಅವರ ತಾಯಿ ಉತ್ತರಿಸುತ್ತಾಳೆ: 

“ ಏನೋ ಹೀಗಂತೀರಾ ? ಅಲ್ಲೊಂಕ ತಂದು ಕೊಡಲಿಲ್ಲವೇ ? ಅವಳೂ ನಿಮ್ಮ ಜೊತೆಯೇ 
ಮನೆಗೆ ಹಿಂದಿರುಗುತ್ತಾಳೆ ಅಂತ ನಾನು ಅಂದುಕೊಂಡಿದ್ದೆ. ದಾರಿ ತಪ್ಪಿಬಿಟ್ಟಳೊ 
ಏನೋ ? ” 
ಸೋದರರು ಹೇಳಿದರು : 
“ ಹಾಗಾದರೆ ಹೋಗಿ ಅವಳನ್ನು ಹುಡುಕಬೇಕು. ” 

ಆರು ಮಂದಿಯ ಆ ನೇಗಿಲ ಸಾಲನ್ನೇ ಅನುಸರಿಸಿ ಹೋಗಿ ಅದೇ ಡೇಗನ್‌ನ ಮನೆಯ 
ಅಂಗಳ ತಲುಪಿದರು . ಅಲ್ಲಿಗೆ ಹೋಗಿನೋಡ್ತಾರೆ - ಅವಳು ಅಲ್ಲಿದ್ದಾಳೆ. 

ಅವರನ್ನು ನೋಡಿ ಅವಳು ಹೇಳಿದಳು : 

“ಓಹ್ , ನನ್ನ ಪ್ರೀತಿಯ ಅಣ್ಣಂದಿರೇ ! ನಿಮ್ಮನ್ನೆಲ್ಲಿ ಅಡಗಿಸಿ ಇಡಲಿ ಈಗ ? ಡೇಗನ್ 
ಹೊರಗೆ ಹೋಗಿದೆ. ಬಂದು ಕಂಡರೆ ನಿಮ್ಮನ್ನೆಲ್ಲ ತಿಂದು ಹಾಕುತ್ತದೆ ! ” 

ಅವಳು ಇನ್ನೂ ಹೇಳಿ ಮುಗಿಸಿಲ್ಲ, ಆಗಲೇ ಡೇಗನ್ ಬಂದೇ ಬಂದಿತು . 

“ಓಹೋ , ಮನುಷ್ಯರ ವಾಸನೆ ಬರುತ್ತಿದೆ! ” ಎಂದದು ಫೂತ್ಕರಿಸುತ್ತದೆ. “ ಏನು , ಹುಡು 
ಗರೇ , ನನ್ನ ಜೊತೆಹೋರಾಡುವುದಕ್ಕೆ ಬಂದಿದ್ದೀರೋ , ಶಾಂತಿ ಮಾಡಿಕೊಳ್ಳಲು ಬಂದಿದ್ದೀರೋ ? ” 

ಅವರು ಕೂಗಿ ಹೇಳುತ್ತಾರೆ: 
“ಹೋರಾಡಲು ! ” 
ಆಗ ಡೇಗನ್ ಹೇಳಿತು : 
“ ಹಾಗಾದರೆ ನಡೆಯಿರಿ ಹೋಗೋಣ, ಕಬ್ಬಿಣದ ಕಣಕ್ಕೆ ! ” 

ಕಬ್ಬಿಣದ ಕಣಕ್ಕೆ ಹೋರಾಡಲು ಹೋದರು . ಹೆಚ್ಚು ಕಾಲವೇನೂ ಹೋರಾಡಬೇಕಾಗಲಿಲ್ಲ. 
ಡೇಗನ್ ಅವರಿಗೆ ಎಂಥ ಹೊಡೆತ ನೀಡಿತೆಂದರೆ ಅವರು ಒಂದೇ ಏಟಿಗೆ ಕಬ್ಬಿಣದ ಕಣದೊಳಗೆ 
ಹೂತು ಹೋದರು . ಅನಂತರ ಅದು ಅವರನ್ನು ಕಿತ್ತು ಹೊರಗೆಳೆಯಿತು. ಅವರು ಜೀವಂತ 
ವಾಗಿರುವುದಕ್ಕಿಂತ ಹೆಚ್ಚಾಗಿ ಸತ್ತಂತಿದ್ದರು . ಅವರನ್ನು ಡೇಗನ್ ಒಂದು ಆಳವಾದ ಕತ್ತಲ ಕೂಪ 
ದೊಳಕ್ಕೆ ಎಸೆಯಿತು. 

ಮನೆಯಲ್ಲಿ ಅಮ್ಮ ಅಪ್ಪ ಮಕ್ಕಳಿಗಾಗಿ ಕಾದರು . ಆದರೆ ಅವರು ಹಿಂದಿರುಗಲೇ ಇಲ್ಲ. 

ಒಂದು ದಿನ ತಾಯಿ ಬಟ್ಟೆ ಒಗೆಯಲು ನದಿಗೆ ಹೋದಳು . ನೋಡುತ್ತಾಳೆ - ದಾರಿಯಲ್ಲಿ 
ಒಂದು ಕಾಳು ಉರುಳಿಕೊಂಡು ಬರುತ್ತಿದೆ ! ಅವಳು ಅದನ್ನು ಎತ್ತಿಕೊಂಡು ತಿಂದಳು . 


145 


ಸ್ವಲ್ಪ ಕಾಲವಾದ ಮೇಲೆ ಅವಳಿಗೆ ಒಬ್ಬ ಮಗ ಹುಟ್ಟಿದ. ಅವರು ಅವನಿಗೆ “ಉರುಳು 
ಕಾಳು ” ಎಂದೇ ಹೆಸರಿಟ್ಟರು. 

ಈ ಮಗ ಬೇಗನೆಯೇ ಬೆಳೆದ. ದೊಡ್ಡದಾಗಿ ಬೆಳೆದ. ವಯಸ್ಸಿನಲ್ಲಿ ಚಿಕ್ಕವನಾದರೂ 
ಆಕಾರದಲ್ಲಿ ದೊಡ್ಡದಾಗಿ ಬೆಳೆದ. 

ಒಂದು ಸಾರಿ ತಂದೆ ಮಗನೊಂದಿಗೆ ಬಾವಿ ತೋಡಲು ಹೊರಟ . ಕೆಳಗೆ ಅವರಿಗೆ ಒಂದು 
ದೊಡ್ಡ ಬಂಡೆ ಅಡ್ಡ ಬಂತು. ಅದನ್ನು ತೆಗೆದು ಹಾಕಲು ಜನರನ್ನು ಕರೆಯೋಣ ಅಂತ ತಂದೆ 
ನೆರೆಯ ಹೊಲಕ್ಕೆ ಓಡಿದ. ಅವನು ಹಿಂದಿರುಗಿ ಬರುವುದರೊಳಗೇ ಉರುಳುಕಾಳು ಒಬ್ಬನೇ 
ಆ ಬಂಡೆಯನ್ನು ಮೇಲಕ್ಕೆ ಎತ್ತಿ ಹಾಕಿದ್ದ . ಅಕ್ಕಪಕ್ಕದವರೆಲ್ಲ ಬಂದು ನೋಡಿ ಆಶ್ಚರ್ಯಪಟ್ಟರು. 
ಆಶ್ಚರ್ಯಕ್ಕಿಂತ ಹೆಚ್ಚಾಗಿ ಅವರಿಗೆ ದಿಗಿಲಾಯಿತು. ಎಂಥ ಶಕ್ತಿ ಇವನದು ಎಂದವರು ತುಂಬ 
ಹೆದರಿ ಅವನನ್ನು ಕೊಂದು ಹಾಕಬೇಕು ಅಂತ ನಿರ್ಧರಿಸಿದರು. ಆದರೆ ಉರುಳುಕಾಳು ಆ ಬಂಡೆ 
ಯನ್ನು ಎತ್ತಿ ಒಮ್ಮೆ ಗಾಳಿಯಲ್ಲಿ ಎಸೆದು ಮತ್ತೆ ಅದನ್ನು ಕೈಗಳಲ್ಲಿ ಹಿಡಿದ. ಜನ ಅದನ್ನು 
ಕಂಡಿದ್ದೇ ಭಯದಿಂದ ಓಟ ಕಿತ್ತರು. 

ತಂದೆ ಹಾಗೂ ಮಗ ಬಾವಿಯನ್ನು ಅಗೆಯುವ ಕಾರ್ಯವನ್ನು ಮುಂದುವರಿಸಿದರು. 
ಅವರಿಗೆ ಮತ್ತೆ ಒಂದು ದೊಡ್ಡ ಕಬ್ಬಿಣದ ತುಂಡು ಅಡ್ಡ ಬಂದಿತು. ಉರುಳುಕಾಳು ಅದನ್ನು 
ತೆಗೆದು ಅಡಗಿಸಿಟ್ಟ . 

ಸ್ವಲ್ಪ ಕಾಲ ಕಳೆಯಿತು. ಒಮ್ಮೆ ಉರುಳುಕಾಳು ತನ್ನ ತಂದೆ ತಾಯಿಯರಿಗೆ ಹೇಳಿದ : 
“ ನನಗೆ ಸೋದರಿಸೋದರರು ಇದ್ದರೇ ? ” 

“ ಅಯ್ಯೋ , ಏನು ಹೇಳೀಯ, ಮಗು ? ” ಎಂದು ಅವರು ದುಃಖದಿಂದ ಉತ್ತರಿಸಿದರು. 
“ ನಿನಗೆ ಸೋದರಿಯೂ ಇದ್ದಳು, ಆರು ಮಂದಿ ಸೋದರರೂ ಇದ್ದರು . ಹೌದು, ಇದ್ದರು 
ಅಷ್ಟೆ .” 

ಹಾಗೆಂದು ಅವರು ಅವನಿಗೆ ಎಲ್ಲವನ್ನೂ ಹೇಳಿದರು . 
ಅದನ್ನು ಕೇಳಿದ ಮೇಲೆ ಉರುಳುಕಾಳು ಹೇಳಿದ : 
“ ಸರಿ. ಹಾಗಾದರೆ, ನಾನು ಹೋಗಿ ಅವರನ್ನು ಹುಡುಕುತ್ತೀನಿ.” 
ಅವನ ಅಪ್ಪ ಅಮ್ಮ ಬೆಚ್ಚಿಬಿದ್ದರು. ಒಟ್ಟಿಗೇ ಹೇಳಿದರು : 

“ಬೇಡ, ಮಗು, ಬೇಡ ! ಆರು ಮಂದಿ ಹೋದರು , ಏನೂ ಮಾಡೋಕೆ ಆಗಲಿಲ್ಲ. ಮತ್ತೆ 
ನೀನೊಬ್ಬನೇ ಹೋಗಿ ಏನು ಮಾಡಬಲ್ಲೆ ? ” 

ಆದರೆ ಉರುಳುಕಾಳು ಉತ್ತರಿಸಿದ: 


146 


“ ಇಲ್ಲ, ನಾನು ಹೋಗ ಹೋಗ್ತಿನಿ! ಅವರದು ನನ್ನದೇ ರಕ್ತಮಾಂಸ, ಅವರು ನನ್ನ 
ಒಡಹುಟ್ಟಿದವರು . ನಾನು ಅವರನ್ನು ಬಿಡಿಸದಿದ್ದರೆ ಹೇಗೆ? ” 

ಅವನು ಬಾವಿ ಅಗೆದಾಗ ಸಿಕ್ಕಿದ್ದ ಕಬ್ಬಿಣದ ತುಂಡನ್ನು ತೆಗೆದುಕೊಂಡು ಕಮಾರನ ಬಳಿಗೆ 
ಹೋದ. 

ಹೋಗಿ ಹೇಳಿದ: 

“ ಇದರಿಂದ ನನಗೆ ಒಂದು ದೊಡ್ಡ ಖಡ್ಗ ಮಾಡಿ ಕೊಡು! ಎಷ್ಟು ದೊಡ್ಡದಾದರೆ ಅಷ್ಟೂ 
ಉತ್ತಮ ! ” 

ಕಮ್ಮಾರ ಎಂಥ ದೊಡ್ಡ ಹಾಗೂ ಭಾರವಾದ ಖಡ್ಗ ಮಾಡಿದನೆಂದರೆ ಅದನ್ನು ಕಮಾರ 
ಸಾಲೆಯಿಂದ ಯಾರಿಗೂ ಹೊರಗೊಯ್ಯಲಾಗಲಿಲ್ಲ. ಆದರೆ ಉರುಳುಕಾಳು ಅದನ್ನು ಬಹು 
ಸುಲಭವಾಗಿ ಎತ್ತಿ ಹೇಗೆ ಗಾಳಿಯಲ್ಲಿ ಎತ್ತರಕ್ಕೆ ಎಸೆದ ! ಆಮೇಲೆ ಅಪ್ಪನಿಗೆ ಹೇಳಿದ : 

“ ನಾನು ನಿದ್ದೆ ಮಾಡೋಕೆಹೋಗ್ತಿನಿ. ಹನ್ನೆರಡು ದಿನ ಆದ ಮೇಲೆ ಖಡ್ಗ ಮತ್ತೆ ಹಾರಿ 
ಕೊಂಡು ಬರುತ್ತೆ . ಆಗ ನನ್ನನ್ನು ಎಬ್ಬಿಸು.” 

ಅವನು ನಿದ್ದೆ ಹೋದ. ಹದಿಮೂರನೆಯ ದಿನ ಖಡ್ಗ ಹಾರಿಕೊಂಡು ಬಂದಿತು. ತಂದೆ ಮಗ 
ನನ್ನು ಎಬ್ಬಿಸಿದ. ಉರುಳುಕಾಳು ಎದ್ದು ಕುಳಿತ. ತನ್ನ ಮುಷ್ಟಿಯನ್ನು ಮುಂದಕ್ಕೆ 
ಚಾಚಿದ . ಖಡ್ಡ ಬಂದು ಅದಕ್ಕೆ ಬಡಿಯಿತು. ಬಡಿದುದೇ ತುಂಡುತುಂಡಾಗಿ ಬಿದ್ದಿತು . ಮಗ 
ಹೇಳಿದ : 

“ ಇಂಥ ಖಡ್ಗ ತೆಗೆದುಕೊಂಡು ಸೋದರರನ್ನೂ ಸೋದರಿಯನ್ನೂ ಹುಡುಕಿಕೊಂಡು 
ಹೋಗೋದು ಹೇಗೆ ಸಾಧ್ಯ ? ಇನ್ನೊಂದನ್ನು ಮಾಡಿಸಿಕೊಳ್ಳಬೇಕು. ” 

ಹಾಗೆಂದು ಉರುಳುಕಾಳು ಮುರಿದ ಖಡ್ಗವನ್ನು ಮತ್ತೆ ಕಮಾರನ ಬಳಿಗೆ ಕೊಂಡೊಯ್ದ . 

“ ಇದರಿಂದ ನನಗೆ ಒಂದು ಹೊಸ ಖಡ್ಗ ಮಾಡಿ ಕೊಡು. ನನಗೆ ಸರಿಹೋಗುವಂಥದನ್ನು 
ಮಾಡಿ ಕೊಡು ! ” 

ಕಮ್ಮಾರ ಮೊದಲಿನದಕ್ಕಿಂತ ಹೆಚ್ಚು ದೊಡ್ಡದಾದ ಖಡ್ಗವನ್ನು ಮಾಡಿದ. ಉರುಳುಕಾಳು 
ಅದನ್ನೂ ಎತ್ತಿಕೊಂಡು ಗಾಳಿಯಲ್ಲಿ ಎತ್ತರಕ್ಕೆ ಎಸೆದು , ಮತ್ತೆ ಹನ್ನೆರಡು ದಿನ ನಿದ್ದೆ ಹೋದ. 
ಹದಿಮೂರನೆಯ ದಿನ ಈ ಖಡ್ಗ ಹಿಂದಕ್ಕೆ ಹಾರಿ ಬಂದಿತು . ಅದು ಘೀಳಿಟ್ಟುಕೊಂಡು ಬರುತ್ತಿದ್ದ 
ಶಬ್ದಕ್ಕೆ ಭೂಮಿಯೇ ನಡುಗಿತು. ಉರುಳುಕಾಳನ್ನು ಎಬ್ಬಿಸಲಾಯಿತು. ಅವನು ಎದ್ದು 
ಕುಳಿತು ತನ್ನ ಮುಷ್ಟಿಯನ್ನು ಮುಂದಕ್ಕೆ ಚಾಚಿದ. ಖಡ್ಗ ಅದಕ್ಕೆ ಜೋರಾಗಿ ಬಂದು ಬಡಿಯಿತು. 
ಅದು ಹಿಂದಿನಂತೆ ಮುರಿಯಲಿಲ್ಲ, ಆದರೆ ಸ್ವಲ್ಪವಷ್ಟೆ ಬಳುಕಿತು . 


147 


“ ಇದೀಗ ನನಗೆ ಸರಿಯಾದ ಖಡ್ಗ, ಇದರೊಂದಿಗೆ ನಾನು ನನ್ನ ಸೋದರರನ್ನೂ ಸೋದ 
ರಿಯನ್ನೂ ಹುಡುಕಲು ಹೋಗಬಹುದು. ಅಮ್ಮ , ನನಗೆ ಸ್ವಲ್ಪ ಬ್ರೆಡ್ಡು , ಸ್ವಲ್ಪ ರಸ್ಕ್ ಮಾಡಿ 
ಕೊಡು, ನಾನು ಹೊರಡುತ್ತೇನೆ.” 

ಅವನು ಆ ಖಡ್ಗವನ್ನು ತೆಗೆದುಕೊಂಡು, ತಾಯಿ ಕೊಟ್ಟ ಬುತ್ತಿಯನ್ನು ಕಟ್ಟಿಕೊಂಡು, 
ತಾಯಿತಂದೆಯರಿಗೆ ವಿದಾಯ ಹೇಳಿ ಮನೆಯಿಂದ ಹೊರಟ . 

ಅವನು ಡೇಗನ್‌ನ ಅದೇ ಹಳೆಯ ನೇಗಿಲ ಸಾಲನ್ನೇ ಅನುಸರಿಸಿ ಹೊರಟ. ಬೇಗನೆಯೇ 
ಕಾಡಿನ ಒಳ ಹೊಕ್ಕ . ಕಾಡಿನಲ್ಲೇ ಮುಂದೆ ಮುಂದಕ್ಕೆ ನಡೆದುಹೋದ. ಕೊನೆಗೆ ಅವನಿಗೆ ಸುತ್ತ 
ಬೇಲಿ ಇದ್ದ ದೊಡ್ಡ ಅಂಗಳದ ಮಧ್ಯೆ ಒಂದು ಭಾರಿ ಮನೆ ಕಾಣಬಂದಿತು. ಅವನು ಅಂಗಳದ 
ಒಳಕ್ಕೆ ಹೋಗಿ ಅನಂತರ ಮನೆಯ ಒಳಕ್ಕೂ ಹೋದ. ಆದರೆ ಪ್ರೇಗನ್ ಮನೆಯಲ್ಲಿರಲಿಲ್ಲ. 
ಸೋದರಿ ಅಲ್ಲೊಂಕಳಷ್ಟೆ ಒಬ್ಬಳೇ ಮನೆಯಲ್ಲಿದ್ದಳು . 

ಅವನು ಹೇಳಿದ: 
“ನಮಸ್ಕಾರ, ಚೆಲುವ ಹುಡುಗಿ !” 
ಅಲ್ಲೊಂಕ ಉತ್ತರಿಸಿದಳು : 

“ನಮಸ್ಕಾರ, ಸದ್ಭಾವದ ಹುಡುಗ ! ಯಾತಕ್ಕೆ ಇಲ್ಲಿಗೆ ಬಂದೆ ? ಡೇಗನ್ ಇನ್ನೇನು ಬರುತ್ತೆ , 
ನಿನ್ನನ್ನು ತಿಂದುಹಾಕುತ್ತೆ . ” 

“ ಆಗಲಿ , ತಿನ್ನಲಿ ನೋಡೋಣ! ಅದು ಸರಿ, ನೀನು ಯಾರು ? ” 

“ ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು . ಈ ಡೇಗನ್ ನನ್ನನ್ನು ಕದ್ದು ಇಲ್ಲಿ ಹಿಡಿ 
ದಿರಿಸಿದೆ. ನನ್ನ ಆರು ಮಂದಿ ಸೋದರರು ನನ್ನನ್ನು ಬಿಡಿಸಲು ಯತ್ನಿಸಿದರು. ಆದರೆ ಯಶಸ್ವಿ 
ಯಾಗಲಿಲ್ಲ. ” 

“ ಅವರೆಲ್ಲಿ ? ” 

“ಡೇಗನ್ ಅವರನ್ನು ಕತ್ತಲ ಕೂಪಕ್ಕೆ ತಳ್ಳಿತು . ಅವರು ಬದುಕಿದ್ದಾರೋ ಇಲ್ಲವೋ ನನಗೆ 
ತಿಳಿಯದು. ” 

ಉರುಳುಕಾಳು ಹೇಳಿದ : 
“ ಬಹುಶಃ ನಾನು ನಿನ್ನನ್ನು ಬಿಡಿಸಲು ಸಾಧ್ಯವಾಗಬಹುದು. ” 
ಆದರೆ ಅಲ್ಲೊಂಕ ಹೇಳಿದಳು : 

“ನಿನಗೆಲ್ಲಿ ಆಗುತ್ತಪ್ಪ ! ನನ್ನ ಆರು ಮಂದಿ ಸೋದರರ ಕೈಲೇ ಆಗಲಿಲ್ಲ. ನೀನು ಒಬ್ಬ , 
ನಿನ್ನ ಕೈಲಿ ಎಲ್ಲಿ ಆಗುತ್ತೆ ? ” 


148 


“ ಪರವಾಗಿಲ್ಲ ! ಒಬ್ಬನಾದರೇನಂತೆ ” ಉರುಳುಕಾಳು ಉತ್ತರಿಸಿದ . 
ಅವನು ಕಿಟಕಿಯ ಬಳಿ ಡೇಗನ್ ಬರುವುದಕ್ಕಾಗಿಯೇ ಕಾದು ಕುಳಿತ . 

ಸ್ವಲ್ಪ ಹೊತ್ತಿಗೆ ಡೇಗನ್ ಹಾರಿಕೊಂಡು ಬಂದಿತು . ಮನೆಯ ಒಳಹೊಕ್ಕಿತು, ಆಳವಾಗಿ 
ಉಸಿರೆಳೆದುಕೊಳ್ಳುತ್ತ ಹೇಳಿತು : 

“ ಹುಂ . ಮನುಷ್ಕರ ವಾಸನೆ ಬರುತ್ತಿದೆಯಲ್ಲ! ” 
“ ಬರದೇ ಏನಂತೆ ? ” ಉರುಳುಕಾಳು ಹೇಳಿದ. “ ನಾನು ಇಲ್ಲೇ ಇದ್ದೇನಲ್ಲ.” 
“ ಆಹ್ವಾ , ಹುಡುಗ ! ನಿನಗೇನು ಬೇಕು - ಯುದ್ದವೋ ಶಾಂತಿಯೋ ? ” 
ಉರುಳುಕಾಳು ಉತ್ತರಿಸಿದ : 
“ ಎಲ್ಲಿ ಶಾಂತಿ ಸಾಧ್ಯವಿಲ್ಲವೋ ಅಲ್ಲಿ ಯುದ್ಧ ಮಾಡಲೇ ಬೇಕು !” 
“ ಸರಿ , ನಡಿ ಹಾಗಾದರೆ , ಕಬ್ಬಿಣದ ಕಣಕ್ಕೆ ಹೋಗೋಣ.” 
“ ನಡಿ, ಹೋಗೋಣ! ” 
ಹೋದರು . ಡೇಗನ್ ಹೇಳಿತು : 
“ನೀನೇ ಮೊದಲು ಹೊಡಿ! ” 
“ ಇಲ್ಲ, ನೀನೇ ಮೊದಲು ಹೊಡಿ! ” ಉರುಳುಕಾಳು ಹೇಳಿದ. 
ಡೇಗನ್ ಎಷ್ಟು ಜೋರಾಗಿ ಪ್ರಹಾರ ನೀಡಿತೆಂದರೆ ಉರುಳುಕಾಳು ಕಾಲಿನ ಹರಡಿನವರೆಗೆ 
ಆ ಕಬ್ಬಿಣದ ಕಣದೊಳಕ್ಕೆ ಕುಸಿದ. ಆದರೆ ಅವನು ಕ್ಷಣ ಮಾತ್ರದಲ್ಲೇ ಹೊರ ಬಂದು ತನ್ನ 
ಖಡ್ಗದಿಂದ ಡೇಗನ್ ಮೇಲೆ ಎಷ್ಟು ಜೋರಾಗಿ ಹೊಡೆದನೆಂದರೆ ಡೇಗನ್ ಮೊಣಕಾಲಿನ 
ವರೆಗೆ ಕಣದೊಳಕ್ಕೆ ಕುಸಿಯಿತು. ಅದೂ ತಕ್ಷಣವೇ ಕಣದಿಂದ ಬಿಡಿಸಿಕೊಂಡು ಹೊರಬಂದು 
ಉರುಳುಕಾಳಿನ ಮೇಲೆ ಮತ್ತೊಂದು ಭಾರಿ ಪ್ರಹಾರ ನೀಡಿತು . ಈಗ ಉರುಳುಕಾಳೂ ಮೊಣ 
ಕಾಲಿನವರೆಗೆ ಹೂತುಕೊಂಡ. ಆದರೆ ಇದರಿಂದ ಅವನೇನೂ ಭಯಗೊಳ್ಳಲಿಲ್ಲ. ಡೇಗನ್ 
ಮೇಲೆ ತಾನೂ ಮತ್ತೊಂದು ಪ್ರಹಾರ ನೀಡಿದ. ಡೇಗನ್ ಈಗ ಕಣದೊಳಗೆ ಸೊಂಟದವರೆಗೂ 
ಹೂತುಕೊಂಡಿತು . ತಕ್ಷಣವೇ ಉರುಳುಕಾಳು ಮೂರನೆಯ ಪ್ರಹಾರ ನೀಡಿದ. ಡೇಗನ್ ಸತ್ತು 
ಬಿದ್ದಿತು . 

ಅನಂತರ ಉರುಳುಕಾಳು ತನ್ನ ಸೋದರರನ್ನು ಕೂಡಿಹಾಕಿದ್ದ ಕತ್ತಲ ಕೂಪಕ್ಕೆ ಹೋಗಿ 
ಅವರನ್ನು ಬಿಡಿಸಿದ. ಅವರು ಜೀವದಿಂದಿರುವುದಕ್ಕಿಂತ ಹೆಚ್ಚಾಗಿ ಸತ್ತಂತೆಯೇ ಇದ್ದರು . ಅವರನ್ನೂ 
ಸೋದರಿ ಅಲ್ಲೊಂಕಳನ್ನೂ ಕರೆದುಕೊಂಡು ಉರುಳುಕಾಳು ಡೇಗನ್‌ನ ಬಳಿ ಇದ್ದ ಚಿನ್ನ ಬೆಳ್ಳಿ 
ಯನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಮನೆಯ ಕಡೆಗೆ ಹೊರಟ . 


149 


ಆದರೆ ಉರುಳುಕಾಳು ಅವರಿಗೆ ತಾನು ಅವರ ಸೋದರ ಅನ್ನುವ ವಿಷಯ ತಿಳಿಸಲಿಲ್ಲ. 
ಅವರು ತುಂಬ ದೂರ ಹೋದರೋ ಸ್ವಲ್ಪ ದೂರ ಹೋದರೋ ತಿಳಿಯದು. ಬಳಲಿ ಒಂದು 
ಮರದ ಕೆಳಗೆ ಆಯಾಸ ಪರಿಹರಿಸಿಕೊಳ್ಳಲು ಕುಳಿತರು . ಡೇಗನ್‌ನ ಜೊತೆ ನಡೆಸಿದ ಹೋರಾ 
ಟದಿಂದ ಉರುಳುಕಾಳು ತುಂಬ ಬಳಲಿದ್ದ . ಬೇಗನೆಯೇ ಗಾಢ ನಿದ್ರೆಯಲ್ಲಿ ಮೈಮರೆತು ಮಲ 
ಗಿದ. ಆ ಆರುಮಂದಿ ಸೋದರರೂ ತಮ್ಮತಮ್ಮಲ್ಲೇ ಮಾತನಾಡಿಕೊಂಡರು : 

“ ನಾವು ಆರು ಮಂದಿಯ ಡೇಗನ್‌ಅನ್ನು ಕೊಲ್ಲಲು ಆಗಲಿಲ್ಲ, ಈ ಒಬ್ಬ ಕೊಂದ, ಅಂತ 
ತಿಳಿದರೆ ಜನ ನಮ್ಮನ್ನು ನೋಡಿ ನಗುತ್ತಾರಷ್ಟೆ . ಅಲ್ಲದೆ ಪ್ರೇಗನ್‌ನ ಸಿರಿಸಂಪತ್ತೆಲ್ಲ ಇವನದೇ 
ಆಗುತ್ತಿದೆ.” 

ಹೀಗೆಂದು ಮಾತನಾಡಿಕೊಂಡು ಅವರು ನಿರ್ಧರಿಸಿದರು : ಈಗ ಇವನು ನಿದ್ದೆ ಮಾಡ್ತಿದಾನೆ , 
ಮೈ ಮರೆತಿದಾನೆ ; ಇವನನ್ನು ಮರಕ್ಕೆ ಕಟ್ಟಿ ಹಾಕಿ, ಕಾಡು ಮೃಗಗಳು ತಿಂದು ಹಾಕೋಕೆಬಿಟ್ಟು 
ಹೋಗೋಣ. ನಿರ್ಧರಿಸಿದರೋ ಇಲ್ಲವೋ ಹಾಗೆಯೇ ಮಾಡಿದರು . ಅವನನ್ನು ಮರಕ್ಕೆ ಕಟ್ಟಿ 
ಹಾಕಿ ಹೊರಟು ಹೋದರು. 

ಉರುಳುಕಾಳು ಮಲಗಿದ್ದ. ಎಷ್ಟು ಗಾಢವಾಗಿ ಮಲಗಿದ್ದನೆಂದರೆ ಅವನಿಗೆ ಇವೆಲ್ಲ ಒಂದಿಷ್ಟೂ 
ಗೊತ್ತಾಗಲೇ ಇಲ್ಲ . ಒಂದು ದಿನ ಒಂದು ರಾತ್ರಿ ಮಲಗಿದ. ಆಮೇಲೆ ಎಚ್ಚರಗೊಂಡು ನೋಡು 
ತಾನೆ - ತನ್ನನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ. ಅವನೊಮ್ಮೆ ಮೈ ಕೊಡವಿ ಎದ್ದು ನಿಂತ – 
ಮರವೇ ಬುಡ ಸಮೇತ ಕಿತ್ತುಬಂತು. ಉರುಳುಕಾಳು ಆ ಮರವನ್ನು ಹೆಗಲ ಮೇಲೆ ಹೊತ್ತು 
ಕೊಂಡು ಮನೆಗೆ ಬಂದ. ಮನೆಯ ಒಳಹೊಕ್ಕಾಗ ಅವನಿಗೆ ಅವನ ಸೋದರರ ಮಾತು ಕೇಳಿ 
ಸಿತು . ಅವರು ತಮ್ಮ ತಾಯಿಯನ್ನು ಕೇಳುತ್ತಿದ್ದರು : 

“ ಏನಮ್ಮ , ನಾವು ಬಿಟ್ಟು ಹೋದ ಮೇಲೆ ನಿಮಗೆ ಇನ್ನೂ ಮಕ್ಕಳಾದವೆ ? ” 

“ ಹೌದು ಕಣೋ ! ಉರುಳುಕಾಳು ಹುಟ್ಟಿದ. ನಿಮ್ಮನ್ನು ಹುಡುಕಿಕೊಂಡು ಬದ್ದೀನಿ 
ಅಂತ ಹೋದ. ” 

ಆಗ ಅವರು ಹೇಳಿದರು : 
“ ಅಯೋ , ಹಾಗೇನು ? ನಾವು ಮರಕ್ಕೆ ಕಟ್ಟಿ ಹಾಕಿ ಬಂದವನು ಅವನೇ ಇರಬೇಕು ! ಅವ 
ನನ್ನು ಕೂಡಲೇ ಹೋಗಿ ಬಿಡಿಸಬೇಕು ! ” 

ಉರುಳುಕಾಳು ತನ್ನೊಂದಿಗೆ ತಂದಿದ್ದ ಮರವನ್ನು ಆ ಮನೆಯ ಚಾವಣಿಯ ಮೇಲೆ ಎಷ್ಟು 
ಜೋರಾಗಿ ಇರಿಸಿದನೆಂದರೆ ಮನೆಯೇ ಇನ್ನೇನು ಮುರಿದು ಬೀಳುವುದರಲ್ಲಿದ್ದಿತು . 

ಹೀಗೆ ಹೇಳಿದ : 


150 


“ನೀವೇನೂ ಎಲ್ಲಿಗೂ ಹೋಗಬೇಕಾಗಿಲ್ಲ . ನೀವು ಎಂಥವರು ಅನ್ನುವುದು ನನಗೀಗ ಗೊತ್ತಾ 
ಯಿತು. ನೀವು ಮನೆಯಲ್ಲೇ ಸುಖವಾಗಿರಿ. ನಾನು ಈ ವಿಶಾಲ ಜಗತ್ತಿನಲ್ಲಿ ಸುತ್ತಾಡೋಕೆ 
ಹೋಗ್ರೀನಿ. ” 

ಅವನು ಖಡ್ಗವನ್ನು ಹೆಗಲ ಮೇಲಿಟ್ಟುಕೊಂಡು ಹೊರಟು ಹೋದ. 

ಒಬ್ಬನೇ ಹೋದ, ಹೋದ. ನೋಡ್ತಾನೆ - ಅಲ್ಲಿ ಬೆಟ್ಟ , ಇಲ್ಲಿ ಬೆಟ್ಟ , ಮಧ್ಯೆ ಒಬ್ಬ ವ್ಯಕ್ತಿ . 
ಆ ವ್ಯಕ್ತಿ ತನ್ನ ಕೈಗಳಿಂದಲೂ ಕಾಲುಗಳಿಂದಲೂ ಬೆಟ್ಟಗಳನ್ನು ದೂರ ಹೋಗುವಂತೆ ತಳ್ಳುತ್ತಿ 
ದಾನೆ. 

ಉರುಳುಕಾಳು ಹೇಳಿದ: 
“ ನಮಸ್ಕಾರ, ಮಿತ್ರ ! ” 
“ ನಮಸ್ಕಾರ !” 
“ಸಜ್ಜನನೇ , ಏನು ಮಾಡ್ತಿದೀಯ ನೀನು? ” 
“ ಬೆಟ್ಟಗಳನ್ನು ಸರಿಸುತ್ತಿದೇನೆ. ಮಧ್ಯೆ ದಾರಿ ಆಗಲಿ ಅಂತ.” 

ದಾರಿ ಮಾಡಿಕೊಂಡು ಎಲ್ಲಿಗೆ ಹೋಗಬೇಕೂಂತ ? ” 
“ ಸುಖ ಹುಡುಕಿಕೊಂಡು ಹೊರಟಿದ್ದೇನೆ. ” 
“ ನಾನೂ ಹಾಗೇ ಹೊರಟಿದ್ದೇನೆ. ನಿನ್ನ ಹೆಸರೇನು ? ” 
“ ಬೆಟ್ಟಸರಿಸು ಅಂತ. ನಿನ್ನ ಹೆಸರು ? ” 
“ ಉರುಳುಕಾಳು ಅಂತ, ಒಟ್ಟಿಗೆ ಹೋಗೋಣವಾ ? ” 
“ಓಹೋ , ಹೋಗೋಣ ನಡಿ.” 

ಇಬ್ಬರೂ ಹೋದರು . ಹೋದರೂ , ಹೋದರೂ ... ಕೊನೆಗೆ ಕಾಡಿನಲ್ಲಿ ಒಬ್ಬ ಮನುಷ್ಯ 
ನನ್ನು ಕಂಡರು. ಅವನು ಬರಿಗೈಗಳಿಂದಲೇ ಮರಗಳನ್ನು ಬೇರು ಸಹಿತ ಕಿತ್ತು ಹಾಕುತ್ತಿದ್ದ. 

ಅವರು ಹೇಳಿದರು : 
“ ನಮಸ್ಕಾರ ! ” 
“ ನಮಸ್ಕಾರ ! ” 
“ ಏನು ಮಾಡ್ತಿದೀಯ ನೀನು, ಸಜ್ಜನನೇ ? ” 
“ಮರಗಳನ್ನು ಕಿತ್ತು ಹಾಕ್ತಿದೀನಿ, ದಾರಿ ಆಗಲಿ ಅಂತ ” 
“ ದಾರಿ ಮಾಡಿಕೊಂಡು ಎಲ್ಲಿಗೆ ಹೋಗಬೇಕೂಂತ ? ” 
“ ಸುಖ ಹುಡುಕಿಕೊಂಡು ಹೊರಟಿದ್ದೇನೆ. ” 


151 


“ ನಾವೂ ಹಾಗೇ ಹೊರಟಿದೇವೆ. ನಿನ್ನ ಹೆಸರೇನು ? ” 
“ ಮರಕೀಳು ಅಂತ. ನಿಮ್ಮ ಹೆಸರು ? ” 
“ ಉರುಳುಕಾಳು , ಬೆಟ್ಟಸರಿಸು ಅಂತ, ಒಟ್ಟಿಗೆ ಹೋಗೋಣವಾ ? ” 
“ಓಹೋ , ಹೋಗೋಣ. ನಡೆಯಿರಿ.” 

ಮೂವರೂ ಹೊರಟರು . ಹೋದರೂ , ಹೋದರೂ , ಕೊನೆಗೆ ನದಿಯ ದಡದ ಮೇಲೆ 
ಒಬ್ಬ ಉದ್ದ ಮಾಸೆಯ ವ್ಯಕ್ತಿಯನ್ನು ಕಂಡರು. ಅವನು ಮಿಾಸೆಯನ್ನು ತಿರುಚಿಕೊಂಡು ಅಡ್ಡ 
ಹಿಡಿದಂತೆ ನದಿಯ ಹರಿತ ನಿಂತು ಮಧ್ಯೆ ಹೋಗಲು ದಾರಿ ಆಗುತ್ತಿತ್ತು . 

ಅವರು ಅವನನ್ನು ಕಂಡು ಹೇಳಿದರು : 
“ ನಮಸ್ಕಾರ! ”. 
“ ನಮಸ್ಕಾರ!” : 
“ ಸಜ್ಜನನೇ , ಏನು ಮಾಡ್ತಿದೀಯ ನೀನು ? ” 
“ನೀರನ್ನು ನಿಲ್ಲಿಸುತ್ತಿದೀನಿ, ನದಿ ದಾಟಲು ಸುಲಭವಾಗಲಿ ಅಂತ.” 
“ ದಾಟಿ ಎಲ್ಲಿಗೆ ಹೋಗಬೇಕೂಂತ ? ” 
“ ಸುಖ ಹುಡುಕಿಕೊಂಡು ಹೊರಟಿದೀನಿ. ” 
“ ನಾವೂ ಹಾಗೇ ಹೊರಟಿದೀವಿ. ನಿನ್ನ ಹೆಸರೇನು ? ” 
“ ಮಾಸೆತಿರುಚು ಅಂತ. ನಿಮ್ಮ ಹೆಸರು ? ” 
“ ಉರುಳುಕಾಳು, ಬೆಟ್ಟಸರಿಸು, ಮರಕೀಳು, ಅಂತ, ಒಟ್ಟಿಗೆ ಹೋಗೋಣವಾ ? ” 
“ಓಹೋ , ಹೋಗೋಣ ನಡೆಯಿರಿ.” 

ಅವರು ಹೊರಟರು . ಎಷ್ಟು ಚೆನ್ನಾಗಿತ್ತು ಅವರ ಪ್ರಯಾಣ . ದಾರಿಗೆ ಬೆಟ್ಟಗುಡ್ಡಗಳೇ 
ನಾದರೂ ಅಡ್ಡ ಬಂದರೆ ಬೆಟ್ಟಸರಿಸು ಅವುಗಳನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡುತ್ತಿದ್ದ; ಕಾಡು 
ಅಡ್ಡ ಬಂದರೆ ಮರಕೀಳು ಮರಗಳನ್ನು ಕಿತ್ತು ದಾರಿ ಮಾಡುತ್ತಿದ್ದ; ನದಿ ಅಡ್ಡ ಬಂದರೆ ಮಾಸೆ 
ತಿರುಚು ನೀರಿನ ಹರಿತವನ್ನು ತನ್ನ ಮಾಸೆಗಳಿಂದ ತಡೆದು ದಾರಿ ಮಾಡುತ್ತಿದ್ದ. 

ಹೀಗೆ ಅವರು ಕೊನೆಗೆ ಒಂದು ಭಾರಿ ಕಾಡಿಗೆ ಬಂದರು. ಅಲ್ಲಿ ಅವರಿಗೊಂದು ಗುಡಿಸಿಲು 
ಕಾಣಿಸಿತು. ಒಳಗೆ ಹೋಗಿ ನೋಡಿದರು - ಯಾರೂ ಇಲ್ಲ. 

ಉರುಳುಕಾಳು ಹೇಳಿದ : 
“ ಇವತ್ತು ರಾತ್ರಿ ಇಲ್ಲಿಯೇ ಕಳೆಯೋಣ. ” 
ಅವರು ಅಂದು ರಾತ್ರಿ ಆ ಗುಡಿಸಿಲಿನಲ್ಲೇ ಕಳೆದರು . 


152 


ಬೆಳಿಗ್ಗೆ ಉರುಳುಕಾಳು ಹೇಳಿದ: 

“ ಬೆಟ್ಟಸರಿಸು , ನೀನು ಮನೆಯಲ್ಲೇ ಇದ್ದು ಊಟಕ್ಕೆ ಏರ್ಪಾಟು ಮಾಡು . ನಾವುಮೂವರೂ 
ಬೇಟೆಯಾಡಿಕೊಂಡು ಬರುತ್ತೇವೆ. ” 

ಅವರು ಹೊರಟರು . ಬೆಟ್ಟಸರಿಸು ಬೇಯಿಸಿದ, ಕಾಯಿಸಿದ, ಊಟ ಸಿದ್ಧಗೊಳಿಸಿ ವಿಶ್ರಾಂತಿ 
ತೆಗೆದುಕೊಳ್ಳಲು ಸ್ವಲ್ಪ ಮಲಗಿದ . ಆಗ ಯಾರೋ ಬಾಗಿಲು ತಟ್ಟಿದ ಶಬ್ದವಾಯಿತು. 

“ ಬಾಗಿಲು ತೆಗಿ ! ” 
ಬೆಟ್ಟಸರಿಸು ಉತ್ತರಿಸಿದ: 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ತೆಗೆದುಕೊ .” 
ಬಾಗಿಲು ತೆರೆಯಿತು. ಮತ್ತೆ ಅದೇ ಧ್ವನಿ ಕೇಳಿಸಿತು : 
“ ನನ್ನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸು ! ” 
ಆದರೆ ಬೆಟ್ಟಸರಿಸು ಹೇಳಿದ : 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ದಾಟಿಕೊಂಡು ಬಾ ” 

ಅಕೋ , ಬಂದ ಹೊಸ್ತಿಲು ದಾಟಿಕೊಂಡು ಒಬ್ಬ ಅತ್ಯಂತ ಪುಟ್ಟ ಅಜ್ಜ , ಅಷ್ಟು ಪುಟ್ಟ 
ಮನುಷ್ಯ ಹಿಂದೆಂದೂ ಇದ್ದುದೇ ಇಲ್ಲ ಅನ್ನಬಹುದು. ಅವನಿಗೊಂದು ಉದ್ದವಾದ ಗಡ್ಡವಿತ್ತು . 
ಅದು ನೆಲದ ಮೇಲೆ ಹರಡುವವರೆಗೂ ಬೆಳೆದಿತ್ತು . ಆ ಗಿಡ್ಡ ಅಜ್ಜ ಬೆಟ್ಟಸರಿಸಿನ ಮುಂಗುರುಳನ್ನು 
ಹಿಡಿದು ಮೇಲೆತ್ತಿ ಗೋಡೆಯ ಮೇಲಿದ್ದ ಒಂದು ಮೊಳೆಗೆ ಅವನನ್ನು ನೇತು ಹಾಕಿದ. ತಾನೇ 
ಅಲ್ಲಿ ಏನೇನು ಅಡಿಗೆ ಮಾಡಿ ಇರಿಸಲಾಗಿತ್ತೊ ಎಲ್ಲವನ್ನೂ ತಿಂದು , ಕುಡಿದು ಮುಗಿಸಿದ, 
ಹೊರಟು ಹೋದ. 

ಬೆಟ್ಟಸರಿಸು ಒದ್ದಾಡಿ ಹೊರಳಾಡಿ ಕೊನೆಗೂ ಮೊಳೆಯಿಂದ ತನ್ನ ಮುಂಗುರುಳನ್ನು 
ಬಿಡಿಸಿಕೊಂಡ. ಮತ್ತೆ ಹೊಸ ಅಡಿಗೆ ತಯಾರಿಸುವುದರಲ್ಲಿ ನಿರತನಾದ. ಅವನ ಸಂಗಾತಿಗಳು 
ಹಿಂದಿರುಗಿದರು . ಅವನು ಇನ್ನೂ ಬೇಯಿಸುತ್ತಲೇ ಇದ್ದಾನೆ ! 

ಅವರು ಕೇಳಿದರು : 
“ ಏನು ನೀನು ? ಅಡಿಗೆ ಇನ್ನೂ ಮಾಡುತ್ತಿದ್ದೀಯ ? ಯಾಕೆ ಇಷ್ಟು ತಡ ? ” 
ಅವನು ಉತ್ತರಿಸಿದ : 
“ಸಣ್ಣ ನಿದ್ದೆ ಮಾಡೋಣ ಅಂತ ಮಲಗಿ ಬಿಟ್ಟೆ .” 

ಎಲ್ಲರೂ ಹೊಟ್ಟೆ ತುಂಬ ತಿಂದರು , ಮಲಗಿದರು . ಮಾರನೆಯ ದಿನ ಎದ್ದು ಉರುಳು 
ಕಾಳು ಹೇಳಿದ : 


153 


“ ಮರಕೀಳು, ಇವತ್ತು ನೀನು ಮನೆಯಲ್ಲಿದ್ದು ಅಡಿಗೆ ಮಾಡು. ನಾವು ಬೇಟೆಗೆ ಹೋಗಿ 
ಬತ್ತೇವೆ. ” 

ಅವರು ಹೊರಟರು . ಮರಕೀಳು ಬೇಯಿಸಿದ, ಕಾಯಿಸಿದ, ಅಡಿಗೆ ಸಿದ್ಧಗೊಳಿಸಿ ಸ್ವಲ್ಪ 
ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದ. ಆಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಬಂದಿತು . 

“ ಬಾಗಿಲು ತೆಗಿ ! ” 
ಮರಕೀಳು ಹೇಳಿದ: 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ತೆಗೆದುಕೋ ! ” 
“ ನನ್ನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸು ! ” 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ದಾಟಿಕೊಂಡು ಬಾ ! ” 

ಅಕೋ ಬಂದ ಹೊಸ್ತಿಲು ದಾಟಿಕೊಂಡು ಒಬ್ಬ ಅತ್ಯಂತ ಪುಟ್ಟ ಅಜ್ಜ , ಅವನ ಉದ್ದ ಗಡ್ಡ 
ನೆಲದ ಮೇಲೆ ಎಳೆದುಕೊಂಡು ಬರುತ್ತೆ . ಒಳ ಬಂದವನೇ ಅವನು ಮರಕೀಳುವಿನ ಮುಂಗುರು 
ಳನ್ನು ಹಿಡಿದು ಮೇಲೆತ್ತಿ ಗೋಡೆಯ ಮೇಲಿದ್ದ ಒಂದು ಮೊಳೆಗೆ ಅವನನ್ನು ನೇತುಹಾಕಿದ. 
ಆಮೇಲೆ ತಾನೇ ಅಲ್ಲಿ ಮಾಡಿರಿಸಿದ್ದ ಅಡಿಗೆ ಎಲ್ಲವನ್ನೂ ತಿಂದ, ಎಲ್ಲವನ್ನೂ ಕುಡಿದ, ಆಮೇಲೆ 
ಹೊರಟು ಹೋದ. 

ಮರಕೀಳು ಒದ್ದಾಡಿ ಹೊರಳಾಡಿ ಕೊನೆಗೂ ಮೊಳೆಯಿಂದ ತನ್ನ ಮುಂಗುರುಳನ್ನು ಬಿಡಿಸಿ 
ಕೊಂಡ. ಬೇಗ ಬೇಗ ಹೊಸದಾಗಿ ಅಡಿಗೆ ಮಾಡಲು ಪ್ರಾರಂಭಿಸಿದ . 

ಅವನ ಸಂಗಾತಿಗಳು ಬೇಟೆಯಿಂದ ಹಿಂದಿರುಗಿದರು . 
“ ಏನು ನೀನು ? ಅಡಿಗೆ ಇನ್ನೂ ಮಾಡುತ್ತಿದ್ದೀಯ ? ಯಾಕೆ ಇಷ್ಟು ತಡ ? ” 
ಅವನು ಉತ್ತರಿಸಿದ: 
“ಹೌದು, ಸಣ್ಣ ನಿದ್ದೆ ಮಾಡೋಣ ಅಂತ ಮಲಗಿ ಬಿಟ್ಟೆ .” 
ಏನು ಜರುಗಿದ್ದಿತು ಅನ್ನುವುದನ್ನು ಊಹಿಸಿ ತಿಳಿದ ಬೆಟ್ಟಸರಿಸು ಸುಮ್ಮನಿದ್ದ. 
ಮೂರನೆಯ ದಿನ ಮಾಸೆತಿರುಚು ಮನೆಯಲ್ಲಿ ಉಳಿದ. ಅವನಿಗೂ ಹೀಗೇ ಆಯಿತು. 
ಉರುಳುಕಾಳು ಹೇಳಿದ: 

“ನೀವುಮೂವರೂ ಅಡಿಗೆ ಮಾಡುವುದರಲ್ಲಿ ತುಂಬ ನಿಧಾನ ! ಆಗಲಿ , ನಾಳೆ ನೀವು ಬೇಟೆಗೆ 
ಹೋಗಿ, ನಾನು ಮನೆಯಲ್ಲೇ ಉಳಿಯುತ್ತೇನೆ. ” 

ಮಾರನೆಯ ದಿವಸ ಹಾಗೇ ಆಯಿತು. ಆ ಮೂವರು ಬೇಟೆಗೆ ಹೋದರು, ಉರುಳುಕಾಳು 
ಮನೆಯಲ್ಲಿ ಉಳಿದ. 


154 


ಅವನೂ ಬೇಯಿಸಿದ, ಕಾಯಿಸಿದ , ಅಡಿಗೆ ಸಿದ್ಧಗೊಳಿಸಿ ಸ್ವಲ್ಪ ವಿರಮಿಸಲು ಹೋದ. 
ಕೇಳುತ್ತಾನೆ, ಯಾರೋ ಬಾಗಿಲು ತಟ್ಟುತ್ತಿದಾರೆ . 

“ ಬಾಗಿಲು ತೆಗೆ ! ” 
ಉರುಳುಕಾಳು ಹೇಳಿದ: 
“ಸ್ವಲ್ಪ ತಾಳು , ತೆಗೀತೀನಿ. ” 

ಬಾಗಿಲು ತೆಗೆದು ನೋಡಿದ – ಒಬ್ಬ ಪುಟ್ಟ ಅಜ್ಜ ನಿಂತಿದ್ದಾನೆ. ಅವನ ಗಡ್ಡ ಉದ್ದವಾಗಿ 
ನೆಲದ ಮೇಲೆಲ್ಲ ಹರಡಿದೆ. 

ಆ ಅಜ್ಜ ಹೇಳಿದ : 
“ ನನ್ನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸು ! ” 

ಉರುಳುಕಾಳು ಅವನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸಿ ಒಳಗೆ ಕರೆತಂದ. ನೆಲದ ಮೇಲೆ 
ಇರಿಸಿದ ಕೂಡಲೇ ಆ ಪುಟ್ಟ ಅಜ್ಜ ಕುಣಿದಾಡ ತೊಡಗಿದ, ಆಗಾಗ್ಗೆ ಉರುಳುಕಾಳಿಗೆ ಡಿಕ್ಕಿ 
ಹೊಡೆಯ ತೊಡಗಿದ . 

ಉರುಳುಕಾಳು ಕೇಳಿದ : 
“ ನಿನಗೇನು ಬೇಕು ? ” 

“ ತಾಳು , ಏನು ಅನ್ನುವುದನ್ನು ನೀನೇ ನೋಡುವಿಯಂತೆ ” ಎಂದು ಹೇಳಿ ಆ ಪುಟ್ಟ ಅಜ್ಜ 
ತನ್ನ ಕೈಯನ್ನು ಉರುಳುಕಾಳಿನ ಮುಂಗುರುಳಿನ ಕಡೆಗೆ ಚಾಚಿ ಅದನ್ನು ಹಿಡಿಯುವುದರಲ್ಲಿದ್ದ. 

ಆಗ ಉರುಳುಕಾಳು : 
“ಓಹೋ , ಇಂಥವನೋ ನೀನು ! ” 

ಹಾಗೆ ಎಂದು ತಾನೇ ಆ ಅಜ್ಜನ ಗಡ್ಡ ಹಿಡಿದ. ಆಮೇಲೆ ಒಂದು ಕೊಡಲಿಯನ್ನು ತೆಗೆದು 
ಕೊಂಡ, ಆ ಅಜ್ಜನನ್ನು ಹೊರಗೆ ಒಂದು ಓಕ್ ಮರದ ಬಳಿಗೆ ಎಳೆದುಕೊಂಡು ಹೋದ. ಮರ 
ವನ್ನು ಎರಡು ಹೋಳುಗಳಾಗಿ ಒಡೆದು ಅಜ್ಜನ ಗಡ್ಡವನ್ನು ಹೋಳುಗಳ ಮಧ್ಯೆ ಒಳಗಿನವರೆಗೂ 
ತೂರಿಸಿ ಭದ್ರವಾಗಿ ಸಿಕ್ಕಿ ಹಾಕಿಸಿದ. 

ಹೀಗೆ ಹೇಳಿದ : 

“ನೀನು ಎಂಥ ನೀಚ, ನನ್ನ ಮುಂಗುರುಳು ಹಿಡಿಯ ಬಂದಿದ್ದೆಯಲ್ಲ. ಈಗ ಕೂತಿರು ಇಲ್ಲೇ , 
ನಾನು ಹಿಂದಿರುಗಿ ಬರುವವರೆಗೂ . ” 

ಅವನು ಗುಡಿಸಿಲಿಗೆ ಹಿಂದಿರುಗಿದ. ಅವನ ಸಂಗಾತಿಗಳು ಆಗಲೇ ಬಂದಿದ್ದರು . 
ಅವರು ಕೇಳಿದರು : 


155 


“ ಅಡಿಗೆ ಆಯಿತಾ ? ” 
ಅವನು ಉತ್ತರಿಸಿದ: 
“ಓಹೋ ! ಆಗಿ ಎಷ್ಟೋ ಹೊತ್ತಾಯಿತು ! ” 
ಎಲ್ಲರೂ ಊಟ ಮಾಡಿದರು . ಆಮೇಲೆ ಉರುಳುಕಾಳು ಹೇಳಿದ: 
“ ಬನ್ನಿ ನನ್ನ ಜೊತೆ ನಾನು ನಿಮಗೆ ಒಂದು ಚಮತ್ಕಾರವನ್ನು ತೋರಿಸುತ್ತೇನೆ.” 

ಅವರು ಓಕ್ ಮರದ ಬಳಿಗೆ ಬಂದರು . ಆದರೆ ಅಲ್ಲಿ ಆ ಓಕ್ ಮರವೂ ಇಲ್ಲ, ಆ ಅಜ್ಜನ 
ಇಲ್ಲ. ಆ ಅಜ್ಜ ಓಕ್ ಮರವನ್ನು ಬೇರು ಸಹಿತ ಕಿತ್ತು ಮರವನ್ನೂ ಎಳೆದುಕೊಳ್ಳುತ್ತ ಓಡಿ 
ಹೋಗಿದ್ದ. ಆಗ ಉರುಳುಕಾಳು ತನ್ನ ಸಂಗಾತಿಗಳಿಗೆ ಅವರು ಬೇಟೆಗೆ ಹೋಗಿದ್ದಾಗ ತನಗೆ 
ಏನಾಯಿತು ಅನ್ನುವುದನ್ನೆಲ್ಲ ವಿವರಿಸಿ ತಿಳಿಸಿದ . ಅವರೂ ಹೇಗೆ ಆ ಅಜ್ಜ ತಮ್ಮನ್ನು ಮುಂಗು 
ರುಳಿನಿಂದ ಮೊಳೆಗೆ ನೇತು ಹಾಕಿದ್ದ ಅನ್ನುವುದನ್ನು ತಿಳಿಸಿದರು . 

ಆಗ ಉರುಳುಕಾಳು ಹೇಳಿದ: 
“ಹೌದಾ? ಅವನು ಅಂಥವನಾ ? ಹಾಗಾದರೆ ಬನ್ನಿ , ಹುಡುಕಿ ಅವನನ್ನು ಹಿಡಿಯೋಣ.” 

ಆ ಅಜ್ಜ ಓಕ್ ಮರವನ್ನು ಎಲ್ಲಿಗೆ ಎಳೆದುಕೊಂಡು ಹೋಗಿದ್ದನೋ ಅಲ್ಲಿಯವರೆಗೆ ನೆಲದ 
ಮೇಲೆ ಮರ ಎಳೆದ ಗುರುತಿತ್ತು . ಅವರು ಆ ಗುರುತನ್ನೇ ಅನುಸರಿಸಿಕೊಂಡು ಹೋದರು. 

ಅದು ಅವರನ್ನು ಒಂದು ಆಳವಾದ ಕುಳಿಯ ಬಳಿಗೆ ಕರೆದೊಯ್ದಿತು. ಆ ಕುಳಿ ಎಷ್ಟು 
ಆಳವಾಗಿದ್ದಿತೆಂದರೆ ಅದರ ತಳವೇ ಕಾಣುತ್ತಿರಲಿಲ್ಲ. 

ಉರುಳುಕಾಳು ಹೇಳಿದ : 
“ ಬೆಟ್ಟಸರಿಸು , ನೀನು ಕುಳಿಯ ಒಳಕ್ಕೆ ಇಳಿದು ಹೋಗಿನೋಡು!” 
ಆದರೆ ಅವನು ಉತ್ತರಿಸಿದ: 
“ ಅಯ್ಯೋ , ನನ್ನ ಕೈಯಲ್ಲಾಗೊಲ್ಲಪ್ಪ ! ” 
“ಹೋಗಲಿ, ನೀನು ಹೋಗು, ಮರಕೀಳು ! ” 
ಅವನೂ ಹೋಗಲು ಇಷ್ಟಪಡಲಿಲ್ಲ. ಮಾಸೆತಿರುಚುವೂ ಹೋಗಲು ಬಯಸಲಿಲ್ಲ . 
ಅದನ್ನು ನೋಡಿ ಉರುಳುಕಾಳು ಹೇಳಿದ : 
“ ಹಾಗಾದರೆ ನಾನೇ ಹೋಗ್ತಿನಿ. ಆದರೆ ನನಗೊಂದು ಹಗ್ಗ ಬೇಕು. ಬನ್ನಿ ಹೊಸೆಯೋಣ!” 

ಅವರು ಒಂದು ಉದ್ದವಾದ ಹಗ್ಗ ಹೊಸೆದರು . ಉರುಳುಕಾಳು ಅದರ ಒಂದು ತುದಿಯನ್ನು 
ಕೈಯಲ್ಲಿ ಹಿಡಿದು ಹೇಳಿದ : 

“ ನನ್ನನ್ನು ಕೆಳಕ್ಕೆ ಇಳಿಬಿಡಿ ! ” 


156 


ಅವರು ಇಳಿಬಿಡಲು ಶುರು ಮಾಡಿದರು . ತುಂಬ ಹೊತ್ತು ಇಳಿಬಿಡುತ್ತಲೇ ಹೋದರು , 
ಎಷ್ಟು ಹೊತ್ತಾದರೂ ತಳವೇ ಸಿಗುತ್ತಿಲ್ಲ. ಅಂತೂ ಕೊನೆಗೆ ತಳ ಸಿಕ್ಕಿತು. 

ಉರುಳುಕಾಳು ಅಲ್ಲಿ ಹುಡುಕ ಹೊರಟ .ನೋಡುತ್ತಾನೆ - ಅಲ್ಲೊಂದು ದೊಡ್ಡ ಅರಮನೆ 
ಇದೆ. ಅವನು ಅದರ ಒಳಗೆಹೋದ. ಅಲ್ಲಿ ಎಲ್ಲವೂ ಕಣ್ಣುಕೋರೈಸುವಂತೆ ಥಳಥಳಿಸುತ್ತಿದ್ದವು - 
ಅವನ್ನೆಲ್ಲ ಚಿನ್ನದಿಂದ ಮಾಡಲಾಗಿತ್ತು , ಮಧ್ಯೆಮಧ್ಯೆ ಪ್ರಶಸ್ತ ಶಿಲೆಗಳನ್ನಿರಿಸಿ ಅಲಂಕರಿಸಲಾಗಿತ್ತು . 
ಅವನು ಒಂದು ಕೋಣೆಯಿಂದ ಇನ್ನೊಂದಕ್ಕೆ ಹೋಗುತ್ತ ಹೋದ. ಕೊನೆಗೆ ನೋಡುತ್ತಾನೆ - 
ಒಬ್ಬ ರಾಜಕುಮಾರಿ ಅವನತ್ತ ಓಡಿ ಬರುತ್ತಿದ್ದಾಳೆ. ಅವಳು ಎಂಥ ಸುಂದರಿಯಾಗಿದ್ದಳೆಂದರೆ 
ಅವಳ ಸೌಂದರ್ಯವನ್ನು ಕಥೆಗಳಲ್ಲಿ ವಿವರಿಸಿ ತಿಳಿಸಲು ಸಾಧ್ಯವಿಲ್ಲ, ಲೇಖನಿಯಿಂದ ಬರೆದು 
ತಿಳಿಸಲು ಸಾಧ್ಯವಿಲ್ಲ. 

ಅವಳು ಕೇಳಿದಳು : 
“ ಅಯ್ಯೋ , ಸಜ್ಜನನೇ , ನೀನು ಇಲ್ಲಿಗೇಕೆ ಬಂದೆ ? ” 
ಉರುಳುಕಾಳು ಉತ್ತರಿಸಿದ : 
“ನಾನು ಉದ್ದ ಗಡ್ಡದ ಒಬ್ಬ ಗಿಡ್ಡ ಅಜ್ಜನನ್ನು ಹುಡುಕಿಕೊಂಡು ಬಂದಿದ್ದೇನೆ.” 
ಆ ಹುಡುಗಿ ಹೇಳಿದಳು : 

“ ಅವನ ಗಡ್ಡ ಒಂದು ಓಕ್ ಮರದ ಸೀಳಿನ ಮಧ್ಯೆ ಸಿಕ್ಕಿಕೊಂಡು ಬಿಟ್ಟಿದೆ. ಅದನ್ನು ಬಿಡಿಸಿ 
ಕೊಳ್ಳಲು ಯತ್ನಿಸುತ್ತಿದ್ದಾನೆ. ಅವನ ಬಳಿಗೆ ಹೋಗಬೇಡ. ನಿನ್ನನ್ನು ಕೊಂದು ಹಾಕಿ ಬಿಡ್ತಾನೆ ! 
ಅವನಾಗಲೇ ಎಷ್ಟೋ ಜನರನ್ನು ಕೊಂದು ಹಾಕಿದಾನೆ ! ” 

ಆದರೆ ಉರುಳುಕಾಳು ಹೇಳಿದ: 

“ ಇಲ್ಲ, ನನ್ನನ್ನು ಕೊಲ್ಲೋಕೆ ಆಗೋಲ್ಲ. ನಾನೇ ಅವನ ಗಡ್ಡವನ್ನು ಮರಕ್ಕೆ ಸಿಕ್ಕಿ ಹಾಕಿಸಿ 
ರೋದು. ನೀನೇಕೆ ಇಲ್ಲಿ ವಾಸಿಸುತ್ತಿದ್ದೀಯ ? ” 

ಅವಳು ಉತ್ತರಿಸಿದಳು : 
“ ನಾನೊಬ್ಬ ರಾಜಕುಮಾರಿ. ಈ ಮುದುಕ ನನ್ನನ್ನು ಕದ್ದು ತಂದ. ಇಲ್ಲಿ ಬಂಧನದಲ್ಲಿರಿಸಿ 
ದಾನೆ.” 

ಅದನ್ನು ಕೇಳಿ ಉರುಳುಕಾಳು ಹೇಳಿದ : 

“ ಆಗಲಿ , ನಾನು ನಿನ್ನನ್ನು ಬಿಡಿಸುತ್ತೇನೆ. ನನ್ನನ್ನು ಅವನ ಬಳಿಗೆ ಕರೆದುಕೊಂಡು 
ಹೋಗು! ” 


ಅವಳು ಅವನನ್ನು ಅಲ್ಲಿಗೆ ಕರೆದುಕೊಂಡು ಹೋದಳು . ನೋಡುತ್ತಾನೆ - ನಿಜವೇ ! ಆ 


157 


ಮುದುಕ ಅಲ್ಲಿ ಕುಳಿತಿದ್ದಾನೆ. ಗಡ್ಡವನ್ನು ಓಕ್ ಮರದಿಂದ ಆಗಲೇ ಬಿಡಿಸಿಕೊಂಡಿದ್ದಾನೆ. ಗಡ್ಡ 
ವನ್ನು ನೀವಿಕೊಳ್ಳುತ್ತಿದ್ದಾನೆ. ಉರುಳುಕಾಳನ್ನು ಕಂಡ ಕೂಡಲೇ ಕೂಗಿ ಕೇಳುತ್ತಾನೆ: 

“ ಯಾತಕ್ಕೆ ಬಂದೆ ? ಹೋರಾಡಿ , ಶಾಂತಿ ಮಾಡಿಕೊಳ್ಳಲೋ ? ” 
ಉರುಳುಕಾಳು ಹೇಳುತ್ತಾನೆ: 
“ ಶಾಂತಿ ನನಗೆ ಬೇಕಿಲ್ಲ. ನಾನು ಹೋರಾಡಲು ಬಂದಿದ್ದೇನೆ.” 

ಇಬ್ಬರೂ ಹೋರಾಡಲು ಪ್ರಾರಂಭಿಸಿದರು . ಹೋರಾಡಿದರು , ಹೋರಾಡಿದರು . ಕೊನೆಗೆ 
ಉರುಳುಕಾಳು ತನ್ನ ಖಡ್ಗದಿಂದ ಹೊಡೆದು ಅಜ್ಜನನ್ನು ಕೊಂದು ಹಾಕಿದ. ಆಮೇಲೆ ಉರುಳು 
ಕಾಳೂ ರಾಜಕುಮಾರಿಯ ಆ ಅರಮನೆಯಲ್ಲಿದ್ದ ಎಲ್ಲ ಚಿನ್ನ ಮತ್ತು ಪ್ರಶಸ್ತ ಶಿಲೆಗಳನ್ನೂ 
ಮರು ಮೂಟೆಗಳಲ್ಲಿ ಕಟ್ಟಿಕೊಂಡು , ಅವನು ಇಳಿದು ಬಂದಿದ್ದ ಆ ಕುಳಿಯ ಬಳಿಗೆ 
ಹೋದರು. 

ಉರುಳುಕಾಳು ಕೆಳಗಿನಿಂದ ಕೂಗಿ ಹೇಳಿದ : 
“ಹೇಯ್, ಸೋದರರೇ , ಇದ್ದೀರ ನೀವು ಅಲ್ಲಿ ? ” 
ಅವರು ಉತ್ತರಿಸಿದರು : 
“ ಇದೇವಿ. ” 
ಉರುಳುಕಾಳು ಒಂದು ಮೂಟೆಯನ್ನು ಹಗ್ಗಕ್ಕೆ ಕಟ್ಟಿ ಹೇಳಿದ : 
“ ಎಳೆದುಕೊಳ್ಳಿ, ಸೋದರರೇ ! ಈ ಮೂಟೆ ನಿಮಗಾಗಿ ! ” 
ಅವರು ಮೂಟೆಯನ್ನು ಮೇಲಕ್ಕೆ ಎಳೆದುಕೊಂಡು ಹಗ್ಗವನ್ನು ಮತ್ತೆ ಕೆಳಕ್ಕೆ ಇಳಿಬಿಟ್ಟರು. 
ಉರುಳುಕಾಳು ಎರಡನೆಯ ಮೂಟೆಯನ್ನು ಅದಕ್ಕೆ ಕಟ್ಟಿದ: 
“ ಎಳೆದುಕೊಳ್ಳಿ . ಈ ಮೂಟೆಯ ನಿಮ್ಮದೇ ! ” 

ಇದೇ ರೀತಿ ಅವನು ಮೂರನೆಯ ಮೂಟೆಯನ್ನೂ ಕಳಿಸಿಕೊಟ್ಟ. ಆಮೇಲೆ ರಾಜಕುಮಾರಿ 
ಯನ್ನು ಕಟ್ಟಿದ. 

“ ಎಳೆದುಕೊಳ್ಳಿ. ಈ ರಾಜಕುಮಾರಿ ನನ್ನವಳು ! ” ಕೂಗಿ ಹೇಳಿದ. 

ಅವರು ಮೂವರೂ ರಾಜಕುಮಾರಿಯನ್ನೂ ಮೇಲಕ್ಕೆ ಎಳೆದುಕೊಂಡರು. ಇನ್ನು ಉರುಳು 
ಕಾಳನ್ನಷ್ಟೆ ಎಳೆದುಕೊಳ್ಳಬೇಕು. ಅಷ್ಟರಲ್ಲೇ ಅವರು ಯೋಚಿಸಿದರು : 

“ ಅವನನ್ನೇಕೆ ಮೇಲಕ್ಕೆ ಎಳೆಯಬೇಕು? ಅವನನ್ನು ಅಲ್ಲೇ ಬಿಟ್ಟುಬಿಡುವುದೇ ಮೇಲು. 
ರಾಜಕುಮಾರಿಯ ನಮ್ಮವಳೇ ಆಗುತ್ತಾಳೆ. ಅವನನ್ನು ಮೇಲಿನವರೆಗೂ ಎಳೆದು ಆಮೇಲೆ 
ಹಗ್ಗವನ್ನು ಬಿಟ್ಟು ಬಿಡೋಣ. ಅವನು ಕೆಳಕ್ಕೆ ಬಿದ್ದು ಸಾಯುತ್ತಾನೆ. ” 


158 


ಅವರು ಏನು ಮಾಡಲಿದ್ದರೆಂಬುದನ್ನು ಉರುಳುಕಾಳು ಊಹಿಸಿ ತಿಳಿದ. ಅವನು ಹಗ್ಗ ಕ್ಕೆ 
ಒಂದು ದೊಡ್ಡ ಕಲ್ಲು ಕಟ್ಟಿ ಕೂಗಿ ಹೇಳಿದ: 

“ ಹುಂ . ನನ್ನನ್ನು ಎಳೆದುಕೊಳ್ಳಿ ! ” 

ಅವರು ಮೇಲಿನವರೆಗೂ ಎಳೆದು ಆಮೇಲೆ ಹಗ್ಗವನ್ನು ಬಿಟ್ಟು ಬಿಟ್ಟರು. ಕಲ್ಲು ದೊಪ್ಪನೆ 
ಬಿದ್ದಿತು . 

“ಎಂಥ ಸ್ನೇಹಿತರು ನೀವು! ಆಗಲಿ, ಆಗಲಿ ! ” ಅಂದುಕೊಂಡ ಉರುಳುಕಾಳು . 
ಅವನು ಆ ಕುಳಿ ತಳದ ಅಧೋಲೋಕದಲ್ಲಿ ಅಲೆಯ ತೊಡಗಿದ . 
ಹೋದ, ಹೋದ. ಆಗ ಇದಕ್ಕಿದಂತೆ ಆಕಾಶದಲ್ಲೆಲ್ಲ ಮೋಡ ಮುಸುಕಿತು . ಭಾರಿ ಆಲಿ 
ಕಲ್ಲಿನ ಮಳೆ ಬೀಳ ತೊಡಗಿತು . ಉರುಳುಕಾಳು ಒಂದು ಓಕ್ ಮರದ ಮರೆ ಮಾಡಿಕೊಂಡು 
ನಿಂತ. ಅಲ್ಲಿ ನಿಂತಿದ್ದಾಗ ಅವನಿಗೆ ಮರದ ಮೇಲಿನ ಗೂಡೊಂದರಿಂದ ಹದ್ದಿನ ಮರಿಗಳು ಚಿಲಿಪಿಲಿ 
ಗುಟ್ಟುತ್ತಿದ್ದುದು ಕೇಳಿಸಿತು . ಅವನು ಮರ ಹತ್ತಿ ಹೋಗಿ ತನ್ನ ಕೋಟನ್ನೇ ಬಿಚ್ಚಿ ಆ ಮರಿಗಳ 
ಮೇಲೆ ಹೊದಿಸಿದ. 

ಮಳೆ ನಿಂತಿತು . ಒಂದು ದೊಡ್ಡ ಹಕ್ಕಿ - ಹದ್ದು , ಆ ಮರಿಗಳ ತಂದೆ - ಹಾರಿ ಬಂದಿತು . 
ಮರಿಗಳ ಮೇಲೆಕೋಟು ಹೊದಿಸಿರುವುದನ್ನು ಕಂಡು ಕೇಳಿತು : 

“ ಯಾರು ನಿಮಗೆ ಇದನ್ನು ಹೊದಿಸಿದವರು ? ” 
ಮರಿಗಳು ಉತ್ತರಿಸಿದವು: 
“ನೀನು ತಿಂದು ಹಾಕುವುದಿಲ್ಲ ಅಂತ ಮಾತು ಕೊಟ್ಟರೆ ಹೇಳುತ್ತೇವೆ. ” 
ಅದು ಹೇಳಿತು : 
“ ಇಲ್ಲ. ತಿನ್ನುವುದಿಲ್ಲ. ಹೇಳಿ.” 
ಆಗ ಮರಿಗಳು ಎಂದವು: 
“ ಅಲ್ಲಿ ಮರದ ಕೆಳಗೆ ಕುಳಿತಿದ್ದಾನಲ್ಲ, ಆ ವ್ಯಕ್ತಿಯೇ ನಮಗೆ ಹೊದಿಸಿದುದು. ” 
ಹದ್ದು ಉರುಳುಕಾಳಿನ ಬಳಿಗೆ ಹಾರಿ ಬಂದು ಹೇಳಿತು : 

“ ನಿನಗೆ ಏನು ಬೇಕೋ ಹೇಳು. ನಾನು ಎಲ್ಲ ನಿನಗೆ ಕೊಡುತ್ತೇನೆ. ಇದೇ ಮೊದಲ ಬಾರಿಗೆ 
ನನ್ನ ಒಂದು ಮರಿಯ ಇಂಥ ಭಾರಿ ಮಳೆಯಲ್ಲಿ ಸತ್ತಿಲ್ಲ – ಅದೂ ನಾನು ಮನೆಯಲ್ಲಿಲ್ಲದಿರು 
ವಾಗ. ” 
ಉರುಳುಕಾಳು ಉತ್ತರಿಸುತ್ತಾನೆ: 
“ ನಾನು ಎಲ್ಲಿಂದ ಇಲ್ಲಿಗೆ ಬಂದೆನೋ ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು. ” 


159 


“ಓಹ್ , ನೀನು ನನಗೆ ಒಂದು ಅಸಾಧ್ಯ ಕೆಲಸವನ್ನೇ ಕೊಡುತ್ತಿದ್ದೀಯಲ್ಲ ! ಆದರೂ ಇನ್ನೇನು 
ಮಾಡುವುದು ! ಹಾರಿ ಹೋಗಲೇ ಬೇಕು . ನಮ್ಮ ಜೊತೆಗೆ ಆರು ಪೀಪಾಯಿ ತುಂಬ ಮಾಂಸ , 
ಆರು ಪೀಪಾಯಿ ತುಂಬ ನೀರು ಕೊಂಡೊಯ್ಯಬೇಕು. ಹಾರಿ ಹೋಗುವಾಗ ನಾನು ತಲೆಯನ್ನು 
ಬಲ ಗಡೆ ತಿರುಗಿಸಿದಾಗ ನೀನು ನನ್ನ ಬಾಯಿಗೆ ಒಂದು ತುಂಡು ಮಾಂಸ ಹಾಕಬೇಕು. ಎಡಗಡೆಗೆ 
ತಿರುಗಿಸಿದಾಗ ಸ್ವಲ್ಪ ನೀರು ಕೊಡಬೇಕು. ಇಲ್ಲದಿದ್ದರೆ ನಾವು ಅಲ್ಲಿಗೆ ಹೋಗಲು ಆಗುವುದೇ 
ಇಲ್ಲ. ನಾನು ಮಧ್ಯದಲ್ಲೇ ಸಾಯುತ್ತೇನೆ.” 

ಅವರು ಆರು ಪೀಪಾಯಿ ತುಂಬ ಮಾಂಸ , ಆರು ಪೀಪಾಯಿ ತುಂಬ ನೀರು ತೆಗೆದುಕೊಂಡು 
ಹೊರಟರು. ಉರುಳುಕಾಳು ಹದ್ದಿನ ಬೆನ್ನಿನ ಮೇಲೆಕುಳಿತ . ಹಾರಿ ಹೋದರು, ಹಾರಿ ಹೋದರು. 
ಹದ್ದು ತಲೆಯನ್ನು ಬಲಗಡೆಗೆ ತಿರುಗಿಸಿದಾಗಲೆಲ್ಲ ಉರುಳುಕಾಳು ಅದರ ಬಾಯಿಯೊಳಕ್ಕೆ 
ತುಂಡು ಮಾಂಸ ಹಾಕುತ್ತಿದ್ದ. ಎಡಗಡೆಗೆ ತಿರುಗಿಸಿದಾಗಲೆಲ್ಲ ನೀರು ಕೊಡುತ್ತಿದ್ದ. ಹೀಗೆ ತುಂಬ 
ಕಾಲ ಹಾರಿ ಹೋದರು . ಇನ್ನೇನು ತಾವು ತಲುಪಬೇಕಾದ ಸ್ಥಳ ತಲುಪಲಿದ್ದರು. ಆಗ ಹದ್ದು 
ತಲೆಯನ್ನು ಬಲಗಡೆಗೆ ತಿರುಗಿಸಿತು . ಆದರೆ ಪೀಪಾಯಿಯಲ್ಲಿ ಮಾಂಸವೆಲ್ಲ ಮುಗಿದುಹೋಗಿದೆ . 
ಆಗ ಉರುಳುಕಾಳು ತನ್ನ ಕಾಲಿನಿಂದಲೇ ಒಂದು ಚೂರು ಮಾಂಸ ಕಿತ್ತು ತೆಗೆದು ಹಕ್ಕಿಯ ಬಾಯಿಗೆ 
ಹಾಕಿದ. ಹದ್ದು ಮತ್ತೆ ಮೇಲಕ್ಕೆ ಹಾರಿತು . 

ಅದು ಕೇಳಿತು : 
“ನೀನು ಈಗ ನನಗೆ ಕೊಟ್ಟೆಯಲ್ಲಿ ಆ ಮಾಂಸ ಯಾವುದು ? ಎಷ್ಟು ರುಚಿಯಾಗಿತ್ತು ! ” 
ಉರುಳುಕಾಳು ತನ್ನ ಕಾಲು ತೋರಿಸಿ ಹೇಳಿದ: 
“ ಈ ಮಾಂಸ. ” 

ಆಗ ಹದ್ದು ತಾನು ತಿಂದಿದ್ದ ಮಾಂಸದ ಚೂರನ್ನು ಹೊರಕ್ಕೆ ಉಗುಳಿತು, ಹಾರಿ ಹೋಗಿ 
ಸಂಜೀವಿನಿ ನೀರು ತಂದಿತು . ಆ ಚೂರು ಮಾಂಸವನ್ನು ಉರುಳುಕಾಳಿನ ಕಾಲಿನಲ್ಲಿ ಅದರ ಸ್ಥಳ 
ದಲ್ಲಿ ಇರಿಸಿ ಅದರ ಮೇಲೆ ಈ ನೀರನ್ನು ಚಿಮುಕಿಸಿತು . ಆ ಮಾಂಸದ ಚೂರು ಮತ್ತೆ ಕಾಲಿಗೆ 
ಬೇಗ ಸೇರಿಕೊಂಡಿತು . 

ಹದ್ದು ಅನಂತರ ತನ್ನ ಮನೆಗೆ ಹಿಂದಿರುಗಿತು . ಉರುಳುಕಾಳು ತನ್ನ ಮಿತ್ರರನ್ನು ಹುಡುಕಿ 
ಕೊಂಡು ಹೊರಟ . 

ಅವರು ಆಗಲೇ ಆ ರಾಜಕುಮಾರಿಯ ತಂದೆಯ ಮನೆಗೆ ಹೋಗಿ ಅಲ್ಲಿ ವಾಸಿಸುತ್ತಿದ್ದರು . 
ಅವರಲ್ಲಿ ಒಬ್ಬೊಬ್ಬರೂ ರಾಜಕುಮಾರಿಯನ್ನು ಮದುವೆಯಾಗಲು ಇಚ್ಚಿಸಿ ತಮ್ಮತಮ್ಮಲ್ಲೇ 
ಜಗಳವಾಡುತ್ತಿದ್ದರು . 


ಆಗ ಇದಕ್ಕಿದಂತೆ ಅಲ್ಲಿ ಉರುಳುಕಾಳು ಕಾಣಿಸಿಕೊಳ್ಳುತ್ತಾನೆ. ಅವನು ತಮ್ಮನ್ನು ಕೊಲ್ಲು 
ತಾನೆಂದು ಅವರು ಹೆದರಿದರು . ಆದರೆ ಅವನು ಹೇಳಿದ: 

“ ನನ್ನ ಒಡಹುಟ್ಟಿದ ಸೋದರರೇ ನನಗೆ ಮೋಸ ಮಾಡಿದರು . ಇನ್ನು ನಿಮ್ಮ ವಿಷಯ 
ಏನು ! ನಿಮ್ಮನ್ನು ಕ್ಷಮಿಸುವುದೇ ವಾಸಿ.” 

ಅವನು ಅವರನ್ನು ಕ್ಷಮಿಸಿದ. 
ತಾನೇ ಆ ರಾಜಕುಮಾರಿಯನ್ನು ಮದುವೆಯಾಗಿ ಸುಖದಿಂದ ಜೀವನ ನಡೆಸ ತೊಡಗಿದ. 

ಓಹ್


ಬಹಳ ಕಾಲದ ಹಿಂದೆ, ನಮ್ಮ ತಂದೆಯರೂ ಅಜ್ಜಂದಿರೂ ಇನ್ನೂ ಹುಟ್ಟೇ ಇರದಿದ್ದಂಥ
ಕಾಲದಲ್ಲಿ , ಒಬ್ಬ ಬಡವ ಮತ್ತು ಅವನ ಹೆಂಡತಿ ವಾಸವಾಗಿದ್ದರು . ಅವರಿಗೊಬ್ಬ ಮಗನಿದ್ದ .
ಅವನೊಬ್ಬ ಶುದ್ಧ ಸೋಮಾರಿ . ಅಂಥ ಸೋಮಾರಿ ಇನ್ನೊಬ್ಬನಿರಲಿಲ್ಲ ! ಯಾವ ಕೆಲಸವನ್ನೂ
ಮಾಡುತ್ತಿರಲಿಲ್ಲ . ಮೂರು ಹೊತ್ತೂ ಬೆಂಕಿಗೂಡಿನ ಮೇಲೆ ಕೂತಿರೋದು. ಅಮ್ಮ ಅಲ್ಲಿಗೇ
ಊಟ ತಿಂಡಿ ತಂದುಕೊಟ್ಟರೆ ತಿನ್ನುತ್ತಿದ್ದ. ಇಲ್ಲದಿದ್ದರೆ ಹಾಗೇ ಉಪವಾಸ ಕೂತಿರುತ್ತಿದ್ದ. ಅದ
ಕ್ಕಾಗಿ ಒಂದು ಬೆರಳನ್ನೂ ಆಡಿಸುತ್ತಿರಲಿಲ್ಲ . ಅಂಥ ಸೋಮಾರಿಯಾಗಿದ್ದ ಅವ !

ಅವನ ಅಮ್ಮ ಅಪ್ಪ ಹೇಳಿದರು :
“ ಏನು ಮಾಡೋದು ನಿನ್ನನ್ನು ಕಟ್ಟಿಕೊಂಡು, ಮಗನೇ ! ನೀನು ನಮ್ಮ ಪಾಲಿಗೆ ದುಃಖವೇ !
ಎಲ್ಲ ಮಕ್ಕಳೂ ತಮ್ಮ ತಂದೆಯರಿಗೆ ಸಹಾಯ ಮಾಡ್ತಾರೆ. ನೀನು ಸುಮ್ಮನೆ ತಿಂದುಕೊಂಡು
ಬಿದ್ದಿದೀಯ ! ”

ಅವರು ತುಂಬ ದುಃಖ ಪಟ್ಟರು. ತುಂಬ ಶೋಕಿಸಿದರು . ಕೊನೆಗೆ ಮುದುಕಿ ಹೇಳಿ
ದಳು :
“ ಏನು ಯೋಚನೆ ಮಾಡ್ತಿದೀಯ , ಮುದುಕ ? ಮಗ ಆಗಲೇ ಬೆಳೆದಿದ್ದಾನೆ. ಆದರೆ ಅವನಿಗೆ 
ಏನು ಕೆಲಸವೂ ಬರುತ್ತಿಲ್ಲ. ಯಾರ ಹತ್ತಿರವಾದರೂ ಕಳಿಸಿಕೊಟ್ಟು ಒಂದಿಷ್ಟು ಏನಾದರೂ 
ಕೆಲಸ ಕಲಿಯುವ ಹಾಗೆ ಮಾಡಿದರೆ ಒಳ್ಳೆಯದಲ್ಲವೆ ? ” 
- ತಂದೆ ಅವನನ್ನು ಒಬ್ಬ ಬೇಸಾಯಗಾರನ ಬಳಿಗೆ ಕಳಿಸಿಕೊಟ್ಟ. ಅವನು ಅಲ್ಲಿ ಮೂರು 
ದಿನ ಅಷ್ಟೆ ಇದ್ದ . ಆಮೇಲೆ ಮನೆಗೆ ಓಡಿ ಬಂದ. ಮತ್ತೆ ಹಿಂದಿನಂತೆಯೇ ಬೆಂಕಿಗೂಡಿನ ಮೇಲೆ 
ಸೋಮಾರಿಯಾಗಿ ಕೂತ! 
- ತಂದೆ ಅವನನ್ನು ಬಯು ಹೊಡೆದು ಒಬ್ಬ ದರ್ಜಿಯ ಬಳಿಗೆ ಕೆಲಸ ಕಲಿಯಲು ಕಳಿಸಿ 
ಕೊಟ್ಟ. ಅಲ್ಲಿಂದಲೂ ಅವನು ಅದೇ ರೀತಿ ಓಡಿ ಬಂದ. ಆಮೇಲೆ ತಂದೆ ಅವನನ್ನು ಒಬ್ಬ ಕಮ್ಮಾ 
ರನ ಬಳಿಗೆ, ಅನಂತರ ಒಬ್ಬ ಮೋಚಿಯ ಬಳಿಗೆ ಕಳಿಸಿಕೊಟ್ಟ – ಎಲ್ಲಿಗೆ ಕಳಿಸಿದರೂ ಒಂದೇ ! 
ಕೆಲವು ದಿನಗಳಷ್ಟೆ ಅಲ್ಲಿರುತ್ತಿದ್ದ. ಮತ್ತೆ ಓಡಿ ಬರುತ್ತಿದ್ದ, ಬೆಂಕಿಗೂಡಿನ ಮೇಲೆಕೂರುತ್ತಿದ್ದ ! 
ಏನು ಮಾಡೋದು? 

“ ಸರಿ, ಇವನನ್ನು ಯಾವುದಾದರೂ ಬೇರೆ ರಾಜ್ಯಕ್ಕೆ ಕರಕೊಂಡು ಹೋಗಿ ಬಿಡ್ತೀನಿ. 
ಅಲ್ಲಿಂದ ಅಷ್ಟು ಸುಲಭವಾಗಿ ಹಿಂದಿರುಗಿ ಓಡಿ ಬರೋಕೆ ಆಗೋಲ್ಲ” ಹೇಳಿದ 
ಮುದುಕ. 
- ಅವರು ಗಂಟುಮೂಟೆಕಟ್ಟಿಕೊಂಡು ಹೊರಟರು . ತುಂಬ ಕಾಲ ನಡೆದು ಹೋದರೋ 
ಸ್ವಲ್ಪ ಕಾಲವೋ ತಿಳಿಯದು. ಕೊನೆಗೆ ಒಂದು ಕತ್ತಲು ಕವಿದ ದಟ್ಟವಾದ ಕಾಡು ತಲುಪಿದರು . 
ಆ ಕತ್ತಲಿನಲ್ಲೂ ಅವರಿಗೆ ಒಂದು ಸುಟ್ಟ ಮರದ ಮೊಟುಕಾಣಿಸಿತು . ಮುದುಕ ಆ ಮೋಟಿನ 
ಮೇಲೆ ಹೋಗಿ ಕುಳಿತು ಹೇಳಿದ : 

“ಓಹ್, ನಾನು ಎಷ್ಟು ಬಳಲಿದೀನಿ ! ” 

ಹೇಳಿದ ಅಷ್ಟೆ , ತಕ್ಷಣವೇ ಎಲ್ಲಿಂದಲೋ ಒಬ್ಬ ಗಿಡ್ಡ ಮುದುಕ ಕಾಣಿಸಿಕೊಂಡ. ಅವನ ಮೈ 
ಎಲ್ಲ ಸುಕ್ಕುಗಟ್ಟಿತ್ತು . ಅವನ ಗಡ್ಡ ಹಸುರಾಗಿತ್ತು . ಅದು ಅವನ ಮೊಣಕಾಲಿನವರೆಗೂ ಇಳಿ 
ಬಿದ್ದಿತ್ತು . 

“ ಏನಪ್ಪ , ಏನು ಕರೆದೆ ? ನನ್ನಿಂದ ನಿನಗೆ ಏನು ಬೇಕು ? ” 

ಮುದುಕನಿಗೆ ಆಶ್ಚರ್ಯವಾಯಿತು. ಎಲ್ಲಿಂದ ಬಂತು ಇಂಥ ಪವಾಡ ? ಅವನು 
ಹೇಳಿದ : 

“ ನಾನೆಲ್ಲಿ ನಿನ್ನನ್ನು ಕರೆದೆ? ” 
“ಕರೀಲಿಲ್ಲವೇ ? ಆ ಮರದ ಮೋಟಿನ ಮೇಲೆ ಕುಳಿತು “ಓಹ್ !” ಅಂತ ಹೇಳ 
ಲಿಲ್ಲವೇ ? ” 

“ ಹೌದು. ನಾನು ತುಂಬ ಬಳಲಿದ್ದೆ. “ಓಹ್ ಅಂತ ಅಂದೆ . ನೀನು ಯಾರು ? ” 
“ ನಾನೇ ಆ ಓಹ್ – ಈ ಕಾಡಿನ ದೊರೆ, ನೀನು ಎಲ್ಲಿಗೆ ಹೊರಟೆ ? ” 

“ ನನ್ನ ಮಗನನ್ನು ಎಲ್ಲಾದರೂ ಕೆಲಸಕ್ಕೆ ಸೇರಿಸೋಣಇಲ್ಲವೇ ಕೆಲಸ ಕಲಿಯಲಿಕ್ಕೆ ಸೇರಿಸೋಣ 
ಅಂತ ಕರಕೊಂಡು ಹೊರಟೆ. ಅವನಿಗೆ ಏನಂದರೆ ಏನೂ ಬರದು. ಯಾರಾದರೂ ಪುಣ್ಯಾತ್ಮರು 
ಇವನ ತಲೆಗೆ ಒಂದಿಷ್ಟು ಬುದ್ದಿ ತುಂಬಬಹುದು. ಮನೆಯಲ್ಲಿದ್ದರೆ ಇವನು ಏನೂ ಕಲಿಯೋಲ್ಲ. 
ಎಲ್ಲಿ ಬಿಟ್ಟರೂ ಮತ್ತೆ ಓಡಿ ಬರಾನೆ, ಮೂರು ಹೊತ್ತೂ ಬೆಂಕಿಗೂಡಿನ ಮೇಲೆ 
ಕೂತಿರಾನೆ. ” 

“ ಅವನನ್ನು ನನ್ನ ಬಳಿ ಬಿಡು. ನಾನು ಅವನಿಗೆ ಬುದ್ದಿ ಕಲಿಸ್ತೀನಿ. ಆದರೆ ಒಂದು ಷರತ್ತಿನ 
ಮೇಲೆ ಒಂದು ವರ್ಷ ಆದ ಮೇಲೆನೀನು ನಿನ್ನ ಮಗನನ್ನು ಕರೆದುಕೊಂಡು ಹೋಗೋಕೆ ಬಾ . 
ಅವನನ್ನು ಗುರುತು ಹಿಡಿದರೆ ಕರಕೊಂಡು ಹೋಗು. ಇಲ್ಲವೇ , ಇನ್ನೊಂದು ವರ್ಷ ಅವನು 
ನನ್ನ ಸೇವೆಯಲ್ಲೇ ಉಳೀತಾನೆ. ” 

ಮುದುಕ ಹೇಳಿದ: 
“ ಹಾಗೇ ಆಗಲಿ. ” 

ಇಬ್ಬರೂ ಕೈಕುಲುಕಿ ಒಪ್ಪಂದ ಮಾಡಿಕೊಂಡರು . ಮುದುಕ ಮನೆಗೆ ಹಿಂದಿರುಗಿದ. ಮಗ 
ಓಹ್ನ ಬಳಿ ಉಳಿದ. 

ಓಹ್ ಹುಡುಗನನ್ನು ನೇರವಾಗಿ ಪಾತಾಳ ಲೋಕಕ್ಕೆ ಕರೆದುಕೊಂಡು ಹೋದ. ಅಲ್ಲಿ ತನ್ನ 
ಹಸುರು ಮನೆಗೆ ಕರೆದೊಯ್ದ . ಆ ಮನೆಯಲ್ಲಿ ಎಲ್ಲ ಹಸುರೆ –ಗೋಡೆಗಳು ಹಸುರು, ಚಾವಣಿ 
ಹಸುರು , ಓಸ್‌ನ ಹೆಂಡತಿ ಹಸುರು, ಅವನ ಮಕ್ಕಳೆಲ್ಲ ಹಸುರು . ಅವನ ಕೆಲಸಗಾರರೂ ಸಹ 
ಹಸುರೇ ! ಓಹ್ ಹುಡುಗನಿಗೆ ಕುಳಿತುಕೊಳ್ಳುವಂತೆ ಹೇಳಿದ. ಅವನಿಗೆ ಒಂದಿಷ್ಟು ತಿನ್ನಲು 
ಕೊಡುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದ. ಅವರು ಅವನಿಗೆ ಕೊಟ್ಟ ಮಾಂಸದ ಸಾರೂ ಹಸು 
ರಾಗಿತ್ತು , ಕುಡಿಯಲು ಕೊಟ್ಟ ನೀರೂ ಹಸುರಾಗಿತ್ತು . ಅವನು ಕೊಟ್ಟಿದ್ದನ್ನೆಲ್ಲ ತಿಂದ, 
ಕುಡಿದ. 

“ ಸರಿ , ಇನ್ನು ಕೆಲಸಕ್ಕೆ ಹೊರಡು . ಹೋಗಿಒಂದಿಷ್ಟು ಕಟ್ಟಿಗೆ ಕಡಿದು ಮನೆಗೆ ತಂದು ಹಾಕು ” 
ಎಂದ ಓಹ್ . 
ಹುಡುಗ ಹೋದ. ಕಟ್ಟಿಗೆ ಕಡಿದನೊ ಬಿಟ್ಟನೋ ತಿಳಿಯದು, ಆದರೆ ಹೋದ, ಮೃದು 
ವಾದ ಹುಲ್ಲಿನ ಮೇಲೆ ಮಲಗಿದ. ಓಹ್ ಬಂದು ನೋಡ್ತಾನೆ - ಹುಡುಗ ಮಲಗಿದಾನೆ ! ಓಹ್ 
ತನ್ನ ಸೇವಕರನ್ನು ಕೂಗಿ ಕರೆದ. ಕಟ್ಟಿಗೆ ರಾಶಿ ಹಾಕಿ ಅದರ ಮೇಲೆ ಆ ಹುಡುಗನನ್ನು ಮಲಗಿಸಿ 
ಬೆಂಕಿ ಹಚ್ಚಿ ಅವನನ್ನು ಸುಟ್ಟುಹಾಕಬೇಕೆಂದು ಆಜ್ಞಾಪಿಸಿದ. 

ಹುಡುಗ ಸುಟ್ಟು ಬೂದಿಯಾದ ! ಓಹ್ ಆ ಬೂದಿಯನ್ನು ಗಾಳಿಯಲ್ಲಿ ತೂರಿದ. ಆದರೆ 
ಒಂದು ಸಣ್ಣ ಕೆಂಡ ಆ ಬದಿಯಿಂದ ಬಿದ್ದಿತು. ಓಹ್ ಅದರ ಮೇಲೆ ಸಂಜೀವಿನಿ ನೀರನ್ನು 
- ಚಿಮುಕಿಸಿದ. ಹುಡುಗ ಜೀವ ತಳೆದು ಎದ್ದು ನಿಂತ – ಅವನಿಗೆ ಏನೂ ಆಗಿರಲಿಲ್ಲವೇನೋ 
ಅನ್ನುವಂತೆ ! 

ಮತ್ತೆ ಅವನನ್ನು ಕಟ್ಟಿಗೆಕಡಿದು ತರುವಂತೆ ಕಳಿಸಿಕೊಡಲಾಯಿತು. ಅವನು ಮತ್ತೆ ಮಲಗಿದ . 
ಓಹ್ ಹಿಂದೆ ಮಾಡಿದಂತೆಯೇ ಮಾಡಿದ. ಹುಡುಗನನ್ನು ಸುಟ್ಟು ಬೂದಿ ಮಾಡಿದ . ಬೂದಿಯನ್ನು 
ಗಾಳಿಯಲ್ಲಿ ತೂರಿದ. ಒಂದು ಕೆಂಡದ ಮೇಲೆ ಸಂಜೀವಿನಿ ನೀರು ಚಿಮುಕಿಸಿದ. ಹುಡುಗ ಮತ್ತೆ 
ಜೀವಂತನಾದ. ಆದರೆ ಈಗವನು ಬೇರೆಯೇ ರೀತಿಯಿದ್ದ. ಎಷ್ಟು ಮೋಹಕನಾಗಿದ್ದ, ಕಣ್ಣಿಗೆ 
ಹಬ್ಬವಾಗಿದ್ದ ! ಓಹ್ ಇದೇ ರೀತಿಮೂರನೆಯ ಬಾರಿ ಹುಡುಗನನ್ನು ಸುಟ್ಟು ಬೂದಿ ಮಾಡಿದ, 
ಕೆಂಡದ ಮೇಲೆ ಮತ್ತೆ ಸಂಜೀವಿನಿ ನೀರನ್ನು ಚಿಮುಕಿಸಿದ . ಹುಡುಗ ಮೂರನೆಯ 
ಬಾರಿಗೆ ಪುನರ್‌ಜನ್ಮ ಪಡೆದ. ಈಗಂತೂ ಅವನು ಎಂಥ ಚೆಲುವನಾಗಿದ್ದನೆಂದರೆ ಅವನ 
ಸೌಂದರ್ಯವನ್ನು ನಾಲಿಗೆಯಿಂದ ವರ್ಣಿಸುವುದು ಸಾಧ್ಯವಿಲ್ಲ. ಅದು ಊಹೆಗೂ 
ಮಾರಿದುದಾಗಿತ್ತು . ಎಂದೂ ಕಾಣದಂಥದಾಗಿದ್ದಿತು. ರಮ್ಯ ಕಥೆಗಳಲ್ಲಷ್ಟೆ ಅದು ಸಾಧ್ಯ 
ವಿದ್ದಿತು ! 

ಹುಡುಗ ಓಹ್ನ ಬಳಿಗೆ ಬಂದು ಆಗಲೇ ಒಂದು ವರ್ಷವಾಯಿತು. ತಂದೆ ಹುಡುಗನಿಗಾಗಿ 
ಬಂದ. ಅದೇ ಕತ್ತಲ ಕಾಡಿಗೆ ಬಂದು, ಅದೇ ಸುಟ್ಟ ಮರದ ಮೋಟಿನ ಮೇಲೆಕುಳಿತು “ಓಹ್ ! ” 
ಎಂದ. 

ಅಕೊ , ಓಹ್ ಹೊರಬಂದ ಮರದ ಮೊಟಿನ ಕೆಳಗಿನಿಂದ . 
“ ನಮಸ್ಕಾರ, ಅಜ್ಜ ! ” 
“ ನಮಸ್ಕಾರ, ಓಹ್ ! ನಾನು ಮಗನಿಗಾಗಿ ಬಂದೆ. ” 

“ ಸರಿ , ನಡಿ . ಗುರುತು ಹಿಡಿದರೆ - ಅವನು ನಿನ್ನವನು . ಇಲ್ಲವೇ ಅವನು ಇನ್ನೂ ಒಂದು ವರ್ಷ 
ನನ್ನ ಸೇವೆಯಲ್ಲಿರುತ್ತಾನೆ.” 
ಅವರು ಹಸುರು ಮನೆಗೆ ಹೋಗುತ್ತಾರೆ. ಓಹ್ ಒಂದು ಚೀಲ ಕಾಳು ತೆಗೆದುಕೊಂಡು 
ಅಂಗಳದಲ್ಲಿ ಎರಚಿದ . ಗುಬ್ಬಚ್ಚಿಗಳು ಬಂದವು ಮೋಡದಂತೆ ಕವಿದುಕೊಂಡು ಕಾಳು 
ತಿನ್ನಲು. 

“ ಹುಂ . ಆರಿಸಿಕೋ . ನಿನ್ನ ಮಗ ಯಾರು ? ” 

ಮುದುಕ ದಿಗ್ವಾಂತನಾದ : ಎಲ್ಲ ಗುಬ್ಬಚ್ಚಿಗಳೂ ಒಂದೇ ತರಹ ಇವೆ. ಒಂದರಂತೆ ಎಲ್ಲವೂ . 
ಅವನು ತನ್ನ ಮಗನನ್ನು ಗುರುತು ಹಿಡಿಯದೆ ಹೋದ. 

“ ಸರಿ , ಮನೆಗೆ ಹೋಗು! ” ಎಂದ ಓಹ್ , ನಿನ್ನ ಮಗನನ್ನು ಇನ್ನೂ ಒಂದು ವರ್ಷ ಇರಿಸಿ 
ಕೊಂಡಿರುತ್ತೇನೆ. ” 

ಇನ್ನೊಂದು ವರ್ಷವೂ ಆಯಿತು . ಮತ್ತೆ ಮುದುಕ ಓಹ್ನ ಬಳಿಗೆ ಬಂದ. ಮರದ 
ಮೋಟಿನ ಮೇಲೆ ಕುಳಿತು “ಓಹ್ ! ” ಎಂದು ಹೇಳಿದ. 

ಓಹ್ ಕಾಣಿಸಿಕೊಂಡ. 
“ ಸರಿ , ನಡಿ, ನಿನ್ನ ಮಗನನ್ನು ಆರಿಸಿಕೋ .” 

ಅವನು ಮುದುಕನನ್ನು ಕೊಟ್ಟಿಗೆಗೆ ಕರೆದೊಯ್ದ . ಅಲ್ಲಿ ಟಗರುಗಳು , ಒಂದರಂತೆ 
ಎಲ್ಲವೂ . 

ಮುದುಕ ನೋಡಿದ, ನೋಡಿದ - ಮಗನನ್ನು ಗುರುತು ಹಿಡಿಯದೆ ಹೋದ. 
“ ನಿನ್ನ ದಾರಿ ಹಿಡಿದು ಹೋಗು!” ಓಹ್ ಹೇಳಿದ , “ ಇನ್ನೂ ಒಂದು ವರ್ಷ ನಿನ್ನ ಮಗ 
ನನ್ನ ಬಳಿ ಇರುತ್ತಾನೆ.” 

ಮುದುಕನಿಗೆ ಅಪಾರ ದುಃಖವಾಯಿತು. ಆದರೆ ಏನು ಮಾಡುವುದು - ಒಪ್ಪಂದ ಆ ರೀತಿ 
ಇದೆ. ಬೇರೆ ಏನೂ ಮಾಡಲಾಗದು. 

ಮೂರನೆಯ ವರ್ಷವೂ ಕಳೆಯಿತು. ಮುದುಕ ಮತ್ತೆ ಮಗನನ್ನು ಕರೆದುಕೊಂಡು ಬರಲು 
ಹೋದ. ಆಲೋಚನಾಮಗ್ನನಾಗಿ ಕಾಡಿನಲ್ಲಿ ಹೋಗುತ್ತಿದ್ದ. ಆಗ ಅವನ ಬಳಿಗೆ ಒಂದು ನೊಣ 
ಝೂಂಗುಟ್ಟಿಕೊಂಡು ಬಂದಿತು. 

ಮುದುಕ ಅದನ್ನು ಅಟ್ಟುತ್ತಿದ್ದಾನೆ, ಆದರೆ ಅದು ಮತ್ತೆ ಝಂಗುಟ್ಟುತ್ತಿದೆ. 

ಅದು ಅವನ ಕಿವಿಯ ಮೇಲೆ ಬಂದು ಕುಳಿತುಕೊಂಡಿತು . ತಕ್ಷಣವೇ ಮುದುಕನಿಗೆ ಕೇಳಿ 
ಬರುತ್ತೆ : 

“ ಅಪ್ಪ , ಇದು ನಾನು, ನಿನ್ನ ಮಗ! ಓಹ್ ನನಗೆ ತುಂಬ ವಿದ್ಯೆ ಬುದ್ದಿ ಕಲಿಸಿದ್ದಾನೆ. ನಾನೀಗ 
ಅವನಿಗೆ ತಿರುಮಂತ್ರ ಕಲಿಸುತ್ತೇನೆ. ಅವನು ಮತ್ತೆ ನನ್ನನ್ನು ಆರಿಸಿಕೊ ಅಂತ ನಿನ್ನ ಮುಂದೆ 
ಅನೇಕ ಪಾರಿವಾಳಗಳನ್ನು ಬಿಡುತ್ತಾನೆ. ನೀನು ಬೇರೆ ಯಾವ ಪಾರಿವಾಳವನ್ನೂ ತೆಗೆದುಕೊಳ್ಳ 
ಬೇಡ. ಅವನು ಎರಚಿದ ಕಾಳುಗಳನ್ನು ತಿನ್ನದೆ ಪೇರು ಹಣ್ಣಿನ ಮರದ ಕೆಳಗೆ ಒಂಟಿಯಾಗಿ ಕುಳಿ 
ತಿರುವ ಪಾರಿವಾಳವನ್ನಷ್ಟೆ ತೆಗೆದುಕೋ .” 

ಮುದುಕನಿಗೆ ಮಹದಾನಂದವಾಯಿತು. ಮಗನೊಂದಿಗೆ ಇನ್ನಷ್ಟು ಮಾತನಾಡ ಬಯಸಿದ್ದ . 
ಆದರೆ ನೊಣ ಆಗಲೇ ಹಾರಿ ಹೋಗಿತ್ತು . 

ಮುದುಕ ಸುಟ್ಟ ಮರದ ಮೋಟಿನ ಬಳಿಗೆ ಬಂದು “ಓಹ್ ! ” ಎಂದು 
ಹೇಳಿದ . 

ಓಹ್ ಹೊರ ಬಂದ. ಮುದುಕನನ್ನು ತನ್ನ ಕಾಡಿನ ಭೂಮಿಯ ಕೆಳಗಿದ್ದ ರಾಜ್ಯಕ್ಕೆ ಕರೆ 
ದೊಯ್ದ . ತನ್ನ ಹಸುರು ಮನೆಗೆ ಕರೆದುಕೊಂಡು ಹೋಗಿ ಅಂಗಳದಲ್ಲಿ ಒಂದಿಷ್ಟು ಕಾಳು ಚೆಲ್ಲಿ 
ಪಾರಿವಾಳಗಳನ್ನು ಕರೆಯ ತೊಡಗಿದ. ಅವು ಎಷ್ಟು ಭಾರಿ ಸಂಖ್ಯೆಯಲ್ಲಿ ಬಂದವು, ಅಬ್ಬಾ , 
ದೇವರೇ ! ಮತ್ತೆ ಎಲ್ಲ ಒಂದೇ ತರಹ . ಒಂದರಂತೆ ಎಲ್ಲ. 

" ಸರಿಯಪ್ಪ , ಆರಿಸಿಕೊ , ನಿನ್ನ ಮಗನನ್ನು ! ” 

ಎಲ್ಲ ಪಾರಿವಾಳಗಳೂ ಕಾಳು ತಿನ್ನುತ್ತಿವೆ. ಆದರೆ ಒಂದು ಮಾತ್ರ ಕಾಳು ತಿನ್ನದೆ ಪೇರು 
ಹಣ್ಣಿನ ಮರದ ಕೆಳಗೆ ಒಂಟಿಯಾಗಿ ಕುಳಿತಿದೆ. 

“ ಇದು ನನ್ನ ಮಗ. ” 

“ ಸರಿ, ಈ ಬಾರಿ ನೀನು ಗೆದ್ದೆ , ಮುದುಕಪ್ಪ ! ನಿನ್ನ ಮಗನನ್ನು ಕರೆದುಕೊಂಡು 
ಹೋಗು. ” 
- ಓಹ್ ಆ ಪಾರಿವಾಳವನ್ನು ಹಿಡಿದುಕೊಂಡು ತನ್ನ ಎಡ ಭುಜದ ಮೂಲಕ ಅದನ್ನು ಎಸೆದ. 
ಆಹ್ , ಏನಾಶ್ಚರ್ಯ - ಮುಂದೆ ಎಂತಹ ಸ್ಪುರದ್ರೂಪಿ ಯುವಕ ನಿಂತಿದ್ದ ! ಅಂತಹವನನ್ನು 
ಈ ಪ್ರಪಂಚ ಇನ್ನೂ ಕಂಡುದೇ ಇಲ್ಲ. 

ತಂದೆಗೆ ತುಂಬ ಸಂತೋಷವಾಯಿತು. ಮಗನನ್ನು ಅಪ್ಪಿಕೊಂಡ, ಮುದ್ದಾಡಿದ. 
ಮಗನೂ ಆನಂದದಿಂದ ತಂದೆಯನ್ನು ಆಲಂಗಿಸಿಕೊಂಡ . 
“ ಸರಿ, ನಡಿ . ಮನೆಗೆ ಹೋಗೋಣ, ಮಗು ! ” 

ಇಬ್ಬರೂ ಊರ ದಾರಿ ಹಿಡಿದು ಹೋಗುತ್ತಾರೆ. ಮಗ ತಾನು ಓನ್‌ನ ಮನೆಯಲ್ಲಿ ಹೇಗೆ 
ವಾಸಿಸುತ್ತಿದ್ದ ಅನ್ನುವುದನ್ನೆಲ್ಲ ವಿವರಿಸಿ ತಿಳಿಸುತ್ತಾನೆ. 
ಅಪ್ಪ ಹೇಳುತ್ತಾನೆ: 
“ ಒಳ್ಳೆಯದು, ಮಗು! ನೀನು ಮೂರು ವರ್ಷ ಆ ಭೂತನ ಸೇವೆಯಲ್ಲಿದ್ದೆ. ಆದರೆ 
ಏನೂ ಸಂಪಾದನೆ ಮಾಡಲಿಲ್ಲ. ನಾವು ಹಿಂದಿನಂತೆಯೇ ಬಡವರಾಗಿಯೇ ಉಳಿದಿದ್ದೇವೆ. 
ಹೋಗಲಿ, ಬಿಡು. ಅದೇನೂ ಅಷ್ಟು ದುಃಖದಲ್ಲ ! ನೀನು ಜೀವಂತವಾಗಿದ್ದೀಯಲ್ಲ, ಅಷ್ಟೇ 
ಸಾಕು ! ” 

“ನೀನು ದುಃಖಪಡಬೇಡ, ಅಪ್ಪ , ಎಲ್ಲ ಬದಲಾಗುತ್ತೆ .” 

ಅವರು ಮುಂದೆ ಹೋಗುತ್ತಾರೆ. ಕೆಲವು ಬೇಟೆಗಾರರನ್ನು ಕಾಣುತ್ತಾರೆ. ನೆರೆಯ ಗ್ರಾಮದ 
ಪ್ರಭುಗಳು ನರಿಗಳ ಬೇಟೆಗೆ ಹೊರಟಿದ್ದರು . ಮಗ ತನ್ನನ್ನು ಬೇಟೆ ನಾಯಿಯನ್ನಾಗಿ ಪರಿವರ್ತಿಸಿ 
ಕೊಂಡು ತಂದೆಗೆ ಹೇಳಿದ : 

“ ಆ ಪ್ರಭುಗಳು ಬೇಟೆ ನಾಯಿಯನ್ನು ಕೊಳ್ಳಲು ನಿನ್ನ ಬಳಿಗೆ ಬರುತ್ತಾರೆ. ಮುನ್ನೂರು 
ರೂಬಲ್‌ಗಳಿಗೆ ಮಾರು . ಕೊರಳಪಟ್ಟಿಯನ್ನು ಮಾತ್ರ ಕೊಡಬೇಡ. ” 

ಮಗ ನಾಯಿಯಾಗಿ ತಾನೇ ನರಿಯನ್ನು ಅಟ್ಟಿಸಿಕೊಂಡು ಹೋದ. ಅದನ್ನು ಹಿಡಿದು ತಂದ. 
ಪ್ರಭುಗಳು ಕಾಡಿನಿಂದ ಹೊರ ಬಂದು ಈ ಮುದುಕನ ಬಳಿ ಬಂದರು . 

“ ಏನಪ್ಪ , ಆ ನಾಯಿ ನಿನ್ನದೆ ? ” 
“ ಹೌದು, ನನ್ನದು.” 
“ ಒಳ್ಳೇ ಬೇಟೆ ನಾಯಿ ! ನಮಗೆ ಮಾರುತ್ತೀಯ ? ” 
“ಕೊಂಡುಕೊಳ್ಳಿ. ” 
“ಎಷ್ಟು ಕೊಡಬೇಕು ? ” 
“ ಮುನ್ನೂರು ರೂಬಲ್ , ಆದರೆ ಕೊರಳಪಟ್ಟಿ ಇಲ್ಲದೆ. ” 

“ ನಮಗೇಕೆ ನಿನ್ನ ಕೊರಳಪಟ್ಟಿ ! ಅದಕ್ಕಿಂತ ಹೆಚ್ಚು ಉತ್ತಮವಾದುದನ್ನು ಕೊಳ್ಳುತ್ತೇವೆ. 
ತಗೋ ಹಣ, ನಾಯಿ ನಮ್ಮದು. ” 

ಅವರು ನಾಯಿಯನ್ನು ಪಡೆದುಕೊಂಡು ಮತ್ತೆ ಅದನ್ನು ಮತ್ತೊಂದು ನರಿಯನ್ನು ಹಿಡಿದು 
ತರುವಂತೆ ಕಳಿಸಿಕೊಟ್ಟರು. ನಾಯಿ ನರಿಯನ್ನೇನೂ ಅಟ್ಟಿಸಿಕೊಂಡು ಹೋಗದೆ ನೇರವಾಗಿ ಕಾಡಿ 
ನೊಳಕ್ಕೆ ಓಡಿಕೊಂಡು ಹೋಯಿತು. ಅಲ್ಲಿ ನಾಯಿಯ ರೂಪ ಬದಲಿತು . ಮಗ ಮತ್ತೆ ತನ್ನ 
ತಂದೆಯ ಬಳಿಗೆ ಬಂದ. 

ಇನ್ನಷ್ಟು ದೂರಹೋದರು . ತಂದೆ ಮತ್ತೆ ಹೇಳಿದ: 
“ಏನು, ಮಗು, ಈ ಮುನ್ನೂರು ರೂಬಲ್ ಯಾವ ಮಲೆಗೊ ನಮಗೆ ! ಕೇವಲ 
ಕೆಲವು ದನಕರು, ಉಪಕರಣಗಳನ್ನು ಕೊಳ್ಳಲು ಮತ್ತು ಮನೆ ರಿಪೇರಿ ಕೆಲಸಕ್ಕಷ್ಟೆ ಸಾಲಬಹುದು, 
ಆಮೇಲೆ ಮತ್ತೆ ನಮ್ಮ ಜೀವನಕ್ಕೆ ದುಡ್ಡ ಇರುವುದಿಲ್ಲ. ” 

“ ಆಗಲಿ, ಅಪ್ಪ , ದುಃಖಿಸಬೇಡ, ಈಗ ಇನ್ನು ಕೆಲವು ಬೇಡರು ನಮಗೆ ಸಿಕ್ತಾರೆ. ಅವರು 
ಡೇಗೆಯ ಸಹಾಯದಿಂದ ಪಕ್ಷಿಗಳನ್ನು ಹಿಡಿಯುವಂಥವರು. ನಾನು ಒಂದು ಡೇಗೆಯಾಗಿ 
ರೂಪ ಬದಲಿಸಿಕೊಳ್ಳುತ್ತೇನೆ. ನೀನು ನನ್ನನ್ನು ಮುನ್ನೂರು ರೂಬಲ್‌ಗೆ ಮಾರು . 
ಆದರೆ ಜ್ಞಾಪಕದಲ್ಲಿಟ್ಟಿರು, ನನ್ನ ತಲೆಯ ಮೇಲಿನ ತೊಗಲಿನ ಮುಸುಕನ್ನು ಮಾತ್ರ 
ಕೊಡಬೇಡ! ” 

ಅವರು ಹೊಲದಲ್ಲಿ ಒಂದಷ್ಟು ದೂರ ಹೋದರು . ಅವರಿಗೆ ಕೆಲವು ಬೇಡರು 
ಭೇಟಿಯಾದರು . ಮುದುಕನ ಬಳಿ ಒಂದು ಸೊಗಸಾದ ಡೇಗೆ ಇರುವುದನ್ನು ಅವರು 
ಕಂಡರು . 

“ ಏನಪ್ಪ , ನಿನಗೇಕೆ ಈ ಡೇಗೆ ? ನಮಗೆಕೊಟ್ಟು ಬಿಡು ! ” 
“ಕೊಂಡುಕೊಳ್ಳಿ. ” 
“ಎಷ್ಟು ಹಣ ಕೊಡಬೇಕು ? ” 

“ ಮುನ್ನೂರು ರೂಬಲ್ ಕೊಡಿ. ಡೇಗೆಯನ್ನು ಕೊಡುತ್ತೇನೆ. ಆದರೆ ಅದರ ತಲೆಯ 
ಮೇಲಿನ ಮುಸುಕನ್ನು ಮಾತ್ರ ಕೊಡುವುದಿಲ್ಲ. ” 

“ ನಮಗೇಕೆ ಆ ಮುಸುಕು ! ನಾವದಕ್ಕೆ ಇನ್ನೂ ಸೊಗಸಾದ ಮುಸುಕು ಹಾಕುತ್ತೇವೆ. ” 

ಒಪ್ಪಿಗೆಯಾಯಿತು. ಕೈ - ಕೈ ಕುಲುಕಿದರು . ಮುದುಕ ಮುನ್ನೂರುರೂಬಲ್ ಪಡೆದುಕೊಂಡ. 
ಮುಂದೆ ಹೋದ. 

ಬೇಡರು ಹೊಸದಾಗಿ ಕೊಂಡ ಡೇಗೆಯನ್ನು ಪಕ್ಷಿ ಹಿಡಿದು ತರಲೆಂದು ಬಿಟ್ಟರು. ಅದು 
ನೇರವಾಗಿ ಕಾಡಿನೊಳಕ್ಕೆ ಹಾರಿ ಹೋಯಿತು. ಭೂಮಿಗೆ ಇಳಿಯಿತು. ಮತ್ತೆ ಹುಡುಗನಾಯಿತು. 
ಹುಡುಗ ಅಪ್ಪನನ್ನು ಸೇರಿಕೊಂಡ. 

" ಈಗ ಪರವಾಗಿಲ್ಲ ! ನಾವು ತಕ್ಕ ಮಟ್ಟಿಗೆ ಜೀವನ ನಡೆಸಬಹುದು ! ” ಎಂದ 
ಮುದುಕ. 


“ ತಾಳು , ಅಪ್ಪ . ನಮಗೆ ಇನ್ನಷ್ಟು ಹಣ ಬರುತ್ತೆ ! ನಾವು ಸಂತೆಯ ಸಮಿಾಪ ಹೋದಾಗ 
ನಾನು ಒಂದು ಕುದುರೆಯಾಗಿ ರೂಪ ಬದಲಿಸಿಕೊಳ್ಳುತ್ತೇನೆ. ನೀನು ನನ್ನನ್ನು ಮಾರು .
ನಿನಗೆ ಒಂದು ಸಾವಿರ ರೂಬಲ್ ಕೊಡುತ್ತಾರೆ. ಆದರೆ ಲಗಾಮನ್ನು ಮಾತ್ರ 
ಕೊಡಬೇಡ ! ” 

ಸ್ವಲ್ಪ ಹೊತ್ತಾದ ಮೇಲೆ ಅವರು ಸಂತೆಯ ಬಳಿ ಬಂದರು . ಮಗ ಕುದುರೆಯಾಗಿ ರೂಪ 
ಬದಲಿಸಿಕೊಂಡ. ಎಂಥ ಜರ್ಬಾದ ಕುದುರೆ – ಹತ್ತಿರ ಹೋಗಲೇ ಹೆದರಿಕೆ ! ಮುದುಕ ಅದರ 
ಲಗಾಮನ್ನು ಹಿಡಿದುಕೊಂಡು ಕರೆದೊಯ್ದ . ಆದರೆ ಅದನ್ನು ಅಂಕೆಯಲ್ಲಿರಿಸುವುದು ಅವನಿಗೆ 
ಕಷ್ಟವಾಗಿತ್ತು . ಅದು ಎಡಬಿಡದೆ ಕುಪ್ಪಳಿಸುತ್ತಿತ್ತು , ಹಿಂಗಾಲುಗಳನ್ನು ಚಿಮ್ಮುತ್ತಿತ್ತು , 
ನೆಲವನ್ನು ಗೊರಸುಗಳಿಂದ ಬಗೆಯುತ್ತಿತ್ತು . ವರ್ತಕರು ಈ ಕುದುರೆಯನ್ನು ಕಂಡು 
ಆಕರ್ಷಿತರಾದರು . ಅದರ ಬಳಿಗೆ ಧಾವಿಸಿ ಬಂದರು . ವ್ಯಾಪಾರ ಚೌಕಾಶಿ ಪ್ರಾರಂಭ 
ವಾಯಿತು. 

“ಒಂದು ಸಾವಿರ ರೂಬಲ್, ಆದರೆ ಲಗಾಮಿಲ್ಲದೆ ” ಎಂದ ಮುದುಕ. “ ಅಷ್ಟಕ್ಕಾದರೆ 
ಕೊಡ್ತೀನಿ! ” 

“ ನಮಗೇಕೆ ಬೇಕು ನಿನ್ನ ಲಗಾಮು ! ನಾವು ಅದಕ್ಕೆ ಚಿನ್ನದ ಲಗಾಮು ಹಾಕೀವಿ” ಎಂದರು 
ವರ್ತಕರು . 

ಐನೂರು ರೂಬಲ್ ಕೊಡ್ತಾರೆ. ಆದರೆ ಮುದುಕ ಒಪ್ಪಲಿಲ್ಲ . ಕುದುರೆಯನ್ನು ಕೊಡಲಿಲ್ಲ. 
ಆಗ ಅವನ ಬಳಿಗೆ ಒಬ್ಬ ವಕ್ರಾಕಾರದ ಜಿಪ್ಪಿ ಬಂದ. 

“ ಏನಪ್ಪ , ಎಷ್ಟು ಕೊಡಬೇಕು , ನಿನ್ನ ಕುದುರೆಗೆ ? ” 
“ಒಂದು ಸಾವಿರ ರೂಬಲ್ . ಆದರೆ ಲಗಾಮಿಲ್ಲದೆ. ” 

“ಹೋಹೋ ! ತುಂಬ ದುಬಾರಿ ಕಣಯ್ಯ ! ಐನೂರು ತಗೋ , ಲಗಾಮನ್ನೂ 
ಕೊಡು. ” 

“ಇಲ್ಲ. ಒಪ್ಪಿಗೆ ಇಲ್ಲ ! ” ಎಂದ ಮುದುಕ. 
“ಹೋಗಲಿ , ಆರು ನೂರು ತಗೋ . ” 

ಹೀಗೆ ಆ ಜಿಪ್ಪಿ ಎಷ್ಟು ಚೌಕಾಶಿ ಮಾಡಿದರೂ ಮುದುಕ ಒಂದು ಹೆಜ್ಜೆಯ 
ಕೆಳಗಿಳಿಯಲಿಲ್ಲ . 

“ ಹುಂ , ಹೋಗಲಿ , ತಗೋ , ಸಾವಿರ ರೂಬಲ್ ! ಆದರೆ ಲಗಾಮ ಸೇರಿ. ” 
“ ಇಲ್ಲ . ಲಗಾಮು ನನ್ನದು ! ” 
“ಎಂಥ ಮನುಷ್ಯನಪ್ಪ ನೀನು. ಎಲ್ಲಾದರೂ ಉಂಟೆ, ಕುದುರೆಯನ್ನು ಯಾರಾದರೂ 
ಲಗಾಮಿಲ್ಲದೆ ಮಾರುತ್ತಾರೆಯೆ ? ಕುದುರೆಯನ್ನು ಕೈಯಿಂದ ಕೈಗೆ ಕೊಡುವುದು 
ಹೇಗೆ? ” 

“ ನಿನಗೆ ಇಷ್ಟ ಬಂದ ಹಾಗೆ ಮಾಡಿಕೋ . ಆದರೆ ಲಗಾಮು ನನ್ನದು ! ” 

“ಸರಿ, ತಗೊಪ್ಪ, ಇನ್ನೈದು ರೂಬಲ್ ಕೊಡ್ತೀನಿ. ಕುದುರೆಯನ್ನು ಲಗಾಮಿನ ಸಹಿತ 
ಕೊಟ್ಟು ಬಿಡು ! ” 

ಮುದುಕ ಯೋಚನೆ ಮಾಡಿದ. ಲಗಾಮಿಗೆ ಹೆಚ್ಚೆಂದರೆ ಮೂವತ್ತೊ ಮೂವತ್ತೈದೋ 
ಕೊಪೆಕ್ ಆಗಬಹುದು. ಮತ್ತೆ ಈ ಜಿಪ್ಪಿ ಐದು ರೂಬಲ್ ಕೊಡ್ತಿದಾನಲ್ಲ ! 

ಇಸುಕೊಂಡ , ಕೊಟ್ಟು ಬಿಟ್ಟ . 

ಇಬ್ಬರೂ ಕೈ - ಕೈ ಕುಲುಕಿದರು . ಮುದುಕ ಮನೆಯ ಕಡೆಗೆ ನಡೆದ. ಜಿಪ್ಪಿ ಕುದುರೆ ಹತ್ತಿ 
ಕುಳಿತ. ವಾಸ್ತವವಾಗಿ ಅವನು ಜಿಪ್ಪಿ ಆಗಿರಲೇ ಇಲ್ಲ . ಓಹ್ನೇ ಆ ರೂಪದಲ್ಲಿ ಬಂದಿದ್ದ. ಅವನು 
ಮುದುಕನಿಗೆ ಮೋಸ ಮಾಡಿದ್ದ. ಕುದುರೆ ಗಿಡಗಳಿಗೂ ಮೇಲೆ ಮುಗಿಲಿಗೆ ಸ್ವಲ್ಪ ಕೆಳಗೆ ಬಾಣ 
ದಂತೆ ಹಾರಿ ಹೋಯಿತು. ಅದು ನಾಲ್ಕು ಕಾಲುಗಳನ್ನೂ ರೂಡಿಸಿತು . ಓನ್‌ನನ್ನು ಕೆಳಕ್ಕೆ 
ಬೀಳಿಸಲು ತುಂಬ ಪ್ರಯತ್ನ ಪಟ್ಟಿತು. ಆದರೆ ಅದು ಆಗದಾಯಿತು ! 

ಹೀಗೆ ಅವರು ಕಾಡಿಗೆ ಬಂದರು , ಅಲ್ಲಿಂದ ಭೂಮಿ ಕೆಳಗಿನ ಅವನ ರಾಜ್ಯ ತಲುಪಿದರು . 
ಓಹ್ ಮನೆಗೆ ಹೋದ. ಕುದುರೆಯನ್ನು ಲಾಯದಲ್ಲಿ ಕಟ್ಟಿಹಾಕಿದ . 

“ ಅಂತೂ ಬಡ್ಡಿ ಮಗನನ್ನು ಹಿಡಿದು ಹಾಕಿದೆ ! ” ಎಂದು ಹೇಳಿದ ಓಹ್ ತನ್ನ ಹೆಂಡತಿಗೆ. 
“ಸಂಜೆ ಅದನ್ನು ನೀರಿಗೆ ಕರೆದುಕೊಂಡು ಹೋಗು. ” 

ಸಂಜೆಯಾಯಿತು. ಓನ್‌ನ ಹೆಂಡತಿಕುದುರೆಯನ್ನು ಹೊಳೆಗೆ ಕರೆದೊಯ್ದಳು.ಕುದುರೆ ಹೊಳೆ 
ಯಲ್ಲಿ ನಿಂತು ನೀರು ಕುಡಿಯುತ್ತ ಕೊನೆಗೆ ಹೆಚ್ಚು ಹೆಚ್ಚು ಆಳಕ್ಕೆ ಸುಳಿಗಳೊಳಕ್ಕೆ ಎಳೆದುಕೊಂಡು 
ಹೋಗ ತೊಡಗಿತು . ಆ ಹೆಂಗಸೂ ಅದರ ಹಿಂದೆಯೇ ಓಡಿದಳು , ಕೂಗಿಕೊಂಡಳು , 
ರೇಗಿದಳು . ಆದರೆ ಅದು ಇನ್ನೂ ಹೆಚ್ಚು ಹೆಚ್ಚು ಆಳಕ್ಕೆ ಹೋಗುತ್ತಿದೆ. ಕೊನೆಗೆ ಅದು ತನ್ನ 
ತಲೆಯನ್ನೊಮ್ಮೆ ಗಟ್ಟಿಯಾಗಿ ಒದರಿತು . ಅವಳು ಕೈಯಲ್ಲಿ ಹಿಡಿದಿದ್ದ ಲಗಾಮನ್ನು ಬಿಟ್ಟು 
ಕೊಟ್ಟಳು. ಕುದುರೆ ನೀರಿನಲ್ಲಿ ಮುಳುಗಿ ಪೆರ್ಚ್‌ ಮಾನಾಗಿ ಪರಿವರ್ತಿತವಾಯಿತು. ಹೆಂಗಸು 
ಗಟ್ಟಿಯಾಗಿ ಕಿರುಚಿಕೊಂಡಳು . ಓಹ್ ಓಡೋಡಿ ಬಂದ, ಒಂದು ಕ್ಷಣವೂ ಯೋಚನೆ ಮಾಡಲು 
ನಿಲ್ಲದೆ ಪೈಕ್ ಮಾನಾಗಿ ತನ್ನನ್ನು ಪರಿವರ್ತಿಸಿಕೊಂಡು ಪೆರ್ಚ್‌ ಮಾನನ್ನು ಅಟ್ಟಿಸಿಕೊಂಡು 
ಹೋದ. 
" ಪೆರ್ಚ್‌ ಮಾನೇ , ಮುದ್ದಿನ ಮಾನಿನ ಮರಿಯೇ , ನೀನೊಂದು ಒಳ್ಳೆಯ ಮಿಾನು, ಭಲೆ 
ಭೇಷ್ ! ನನ್ನ ಬಳಿಗೆ ಹಿಂದಿರುಗಿ ಬಾ . ಕೂಡಿ ಮಾತನಾಡೋಣ! ” 

ಪೆರ್ಚ್‌ ಮಿಾನು ಉತ್ತರಿಸಿತು : 
“ನೀನು ಏನಾದರೂ ವದಂತಿ ಹೇಳಲು ಬಯಸಿದ್ದರೆ ಹೇಳು. ನನಗೆ ದೂರದಲ್ಲಿದ್ದೇ ಕೇಳಿಸು 


ತದೆ. ” 


ಪೈಕ್ ಮಿಾನು ಪೆರ್ಚ್‌ ಮಾನನ್ನು ತುಂಬ ಹೊತ್ತು ಅಟ್ಟಿಸಿಕೊಂಡು ಹೋಯಿತು. ಆದರೂ 
ಅದಕ್ಕೆ ಪೆರ್ಚ್‌ ಮಾನನ್ನು ಹಿಡಿಯಲಾಗಲಿಲ್ಲ. ಈ ಹೊತ್ತಿಗೆ ಪೆರ್ಚ್‌ ಮಾನೂ ತುಂಬ 
ಬಳಲಿತ್ತು , 

ಆ ಸಮಯಕ್ಕೆ ಸರಿಯಾಗಿ ಅದಕ್ಕೆ ತೀರದ ಮೇಲೆ ಒಂದು ಸ್ನಾನಗೃಹ ಕಂಡುಬಂದಿತು. 
ರಾಜನ ಮಗಳು ಆಗಷ್ಟೆ ಸ್ನಾನಕ್ಕೆ ಅಣಿಯಾಗಿ ಹೋಗುತ್ತಿದ್ದಳು. ಪೆರ್ಚ್‌ ಮಿಾನು ತೀರದ ಮೇಲೆ 
ಹಾರಿ ತನ್ನನ್ನು ಒಂದು ವಜ್ರದ ಉಂಗುರವನ್ನಾಗಿ ಪರಿವರ್ತಿಸಿಕೊಂಡಿತು . ರಾಜಕುಮಾರಿಯ 
ಕಾಲಿನ ಬಳಿಯೇ ಕಾಣಿಸಿಕೊಂಡಿತು . ರಾಜಕುಮಾರಿ ಅದನ್ನು ಕಂಡಳು . 
- “ ಆಹ್ ! ಎಷ್ಟು ಚೆನ್ನಾಗಿದೆ ಈ ಉಂಗುರ ! ” ಎಂದುಕೊಂಡು ಅದನ್ನು ಎತ್ತಿಕೊಂಡು 
ತನ್ನ ಬೆರಳಿಗೆ ಹಾಕಿಕೊಂಡಳು. 

ಅರಮನೆಗೆ ಓಡಿ ಹೋಗಿ ರಾಜನಿಗೆ ಹೊಗಳುತ್ತ ಹೇಳಿದಳು : 
“ನೋಡಪ್ಪ . ನನಗೆ ಎಂಥ ಸುಂದರವಾದ ಉಂಗುರ ಸಿಕ್ಕಿತು! ” 
ರಾಜನೂ ಆಶ್ಚರ್ಯಪಟ್ಟ . 

ಆದರೆ ಪೆರ್ಚ್‌ ಮಿಾನು ಉಂಗುರವಾಗಿ ಪರಿವರ್ತಿತವಾದುದನ್ನು ಓಹ್ ಕಂಡಿದ್ದ . ಅವನು 
ಕೂಡಲೇ ತನ್ನನ್ನು ಒಬ್ಬ ವ್ಯಾಪಾರಿಯನ್ನಾಗಿ ಪರಿವರ್ತಿಸಿಕೊಂಡು ರಾಜನ ಬಳಿಗೆ 
ಹೋದ. 

“ ನಮಸ್ಕಾರ, ಮಹಾಪ್ರಭು, ನಮಸ್ಕಾರ ! ನಾನು ತಮ್ಮಲ್ಲಿಗೆ ಒಂದು ಕೆಲಸದ ಮೇಲೆ 
ಬಂದಿದ್ದೇನೆ. ನನ್ನ ಉಂಗುರ ನಿಮ್ಮ ಮಗಳ ಬಳಿ ಇದೆ. ದಯವಿಟ್ಟು ಅದನ್ನು ನನಗೆ ಕೊಡಲು 
ಹೇಳಿ, ನಾನು ಅದನ್ನು ನಮ್ಮ ರಾಜನಿಗೋಸ್ಕರ ಪಡೆದುಕೊಂಡಿದ್ದೆ. ನದಿಯ ಬಳಿ ಕಳೆದುಕೊಂಡು 
ಬಿಟ್ಟೆ , ಅದು ನಿಮ್ಮ ಮಗಳಿಗೆ ಸಿಕ್ಕಿದೆ. ” 

ರಾಜ ತನ್ನ ಮಗಳನ್ನು ಕರೆಸಿದ. 
“ ಮಗಳೇ , ಆ ಉಂಗುರವನ್ನು ಕೊಟ್ಟು ಬಿಡಮ್ಮ . ಅದು ಇವರದಂತೆ.” 
ರಾಜನ ಮಗಳು ಅತ್ತಳು, ನೆಲವನ್ನು ಕಾಲಿನಿಂದ ಕುಟ್ಟುತ್ತ ಹೇಳಿದಳು : 

“ ಇಲ್ಲ, ಕೊಡೊಲ್ಲ! ಈ ವ್ಯಾಪಾರಿಗೆ ಎಷ್ಟು ಹಣ ಬೇಕೋ ಅಷ್ಟು ಕೊಟ್ಟು ಕಳುಹಿಸು . 
ಉಂಗುರವಂತೂ ನನ್ನದು ! ” 

ಓಹ್ನೂ ತನ್ನ ಪಟ್ಟು ಬಿಟ್ಟು ಕೊಡಲಿಲ್ಲ. 

“ ನಾನು ನನ್ನ ದೊರೆಗೆ ಈ ಉಂಗುರವನ್ನು ಹಿಂದಿರುಗಿಸದೆ ಇದ್ದರೆ ನನ್ನನ್ನು ಈ ಜಗತ್ತಿ 
ನಲ್ಲಿ ಜೀವಿಸಿಕೊಂಡಿರಲೇ ಬಿಡುವುದಿಲ್ಲ ! ” 

ರಾಜ ಮತ್ತೆ ತನ್ನ ಮಗಳಿಗೆ ಕೇಳಿಕೊಳ್ಳುತ್ತಾನೆ: 

“ಕೊಟ್ಟು ಬಿಡು, ಮಗಳೇ ! ಇಲ್ಲದಿದ್ದರೆ ನಮ್ಮಿಂದಾಗಿ ಈ ವ್ಯಕ್ತಿಗೆ ಭಾರಿ ಆಪತ್ತು ಉಂಟಾ 
ಗುತ್ತೆ ! ” 

“ ಹಾಗಾದರೆ ಇದು ನನಗೂ ಬೇಡ, ಅವನಿಗೂ ಬೇಡ! ” ಎಂದು ರಾಜಕುಮಾರಿ ಉಂಗುರ 
ವನ್ನು ನೆಲದ ಮೇಲೆ ಬಲವಾಗಿ ಎಸೆದಳು . 

ಉಂಗುರ ಚೂರುಚೂರಾಗಿ ಒಡೆದು ಕೋಣೆಯ ತುಂಬ ರತ್ನದ ಕಾಳುಗಳಾಗಿ ಹರಡಿ 
ಕೊಂಡಿತು . ಒಂದು ಕಾಳು ರಾಜಕುಮಾರಿಯ ಹಿಮ್ಮಡಿಯ ಕೆಳಗೆ ಹೋಗಿಸೇರಿಕೊಂಡಿತು . ಓಹ್ 
ಕೂಡಲೇ ಒಂದು ಹದ್ದಾಗಿ ಪರಿವರ್ತಿತನಾಗಿ ಕಾಳುಗಳನ್ನು ತಿನ್ನ ತೊಡಗಿದ. ತಿಂದ, ತಿಂದ, 
ಎಲ್ಲ ಕಾಳುಗಳನ್ನೂ ತಿಂದು ಮುಗಿಸಿದ . ಚಲಿಸಲೂ ಆಗದಷ್ಟು ಭಾರವಾದ. ರಾಜಕುಮಾರಿಯ 
ಹಿಮ್ಮಡಿಯ ಕೆಳಗೆ ಸೇರಿಕೊಂಡಿದ್ದ ಒಂದು ಕಾಳು ಮಾತ್ರ ಅವನ ಗಮನಕ್ಕೆ ಬರಲಿಲ್ಲ. ಆ ಕಾಳು 
ಉರುಳಿಕೊಂಡು, ಉರುಳಿಕೊಂಡು ಹೋಯಿತು, ಗಿಡುಗವಾಗಿ ಪರಿವರ್ತಿತವಾಯಿತು, ಹದಿನ 
ಮೇಲೆ ಬಂದೆರಗಿತು . 

ಹದ್ದಿಗೆ ಹಾರಿ ಹೋಗಲೂ ಆಗಲಿಲ್ಲ . ಗಿಡುಗ ತನ್ನ ಚೂಪಾದ ಕೊಕ್ಕಿನಿಂದ ಹದ್ದಿನ ತಲೆಯ 
ಮೇಲೆ ಅನೇಕ ಬಾರಿ ಜೋರಾಗಿ ಕುಕ್ಕಿತು. ಹದ್ದಿನ ಪ್ರಾಣ ಹಾರಿಹೋಯಿತು. ಹೀಗೆ ಓಹ್ 
ಇನ್ನೆಷ್ಟು ಮಾತ್ರವೂ ಇಲ್ಲದಾದ. ಅನಂತರ ಗಿಡುಗ ನೆಲದ ಮೇಲೆ ಬಿದ್ದು ಚೆಲುವಾದ ಯುವಕ 
ನಾಗಿ ಪರಿವರ್ತಿತವಾಯಿತು. ಅವನು ಎಷ್ಟು ಚೆಲುವಾಗಿದ್ದನೆಂದರೆ ಅವನನ್ನು ಕಂಡ ಕೂಡಲೇ 
ರಾಜಕುಮಾರಿ ಅವನಲ್ಲಿ ಅನುರಕ್ತಳಾದಳು . ರಾಜನಿಗೆ ಹೇಳಿದಳು : 

“ನೀನು ಏನೇ ಹೇಳು, ನಾನು ಈ ಯುವಕನನ್ನಷ್ಟೆ ಮದುವೆಯಾಗುವುದು . ಬೇರೆ 
ಯಾರನ್ನೂ ಮದುವೆಯಾಗೋಲ್ಲ.” 

ಆದರೆ ಈ ಸಾಮಾನ್ಯ ಯುವಕನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವುದು ರಾಜ 
ನಿಗೆ ಇಷ್ಟವಿಲ್ಲ. ಈಗೇನು ಮಾಡುವುದು ! ಯೋಚನೆ ಮಾಡಿ ಮಾಡಿ , ಕೊನೆಗೆ ಒಪ್ಪಿಗೆ ಕೊಟ್ಟ. 
ಭಾರಿ ಔತಣ ಏರ್ಪಡಿಸಲು ಆಜ್ಞೆ ಮಾಡಿದ. ವಿವಾಹ ಸಮಾರಂಭ ಎಷ್ಟು ಅದ್ಭುತವಾಗಿ ಜರುಗಿ 
ತೆಂದರೆ ಜನ ಅದನ್ನು ಇಡೀ ವರ್ಷ ನೆನಪಿನಲ್ಲಿಟ್ಟಿದ್ದರು . 

ನಾನೂ ಆ ಸಮಾರಂಭಕ್ಕೆ ಹೋಗಿದ್ದೆ. ಜೇನು ಮದ್ಯ ಸೇವಿಸಿದೆ. ಅದು ಒಂದು ತೊಟ್ಟೂ 
ನನ್ನ ಬಾಯಿಯೊಳಕ್ಕೆ ಬೀಳಲಿಲ್ಲ. ಎಲ್ಲ ನನ್ನ ಉದ್ದ ಗಡ್ಡದ ಮೂಲಕ ಹರಿದು ಹೋಯಿತು. 
ಅದಕ್ಕೇ ನೋಡಿ ನನ್ನ ಗಡ್ಡ ಬೆಳ್ಳಗಿರುವುದು ! 

ಚರ್ಮ ಹದಮಾಡುವ ಕಿರೀಲ್

ಒಂದಾನೊಂದು ಕಾಲದಲ್ಲಿ ಕೀಯಪ್‌ನಲ್ಲಿ ಒಬ್ಬ ರಾಜ ವಾಸಿಸುತ್ತಿದ್ದ. ಕೀಯೆವ್ನ ಬಳಿಯೇ 
ಒಂದು ಡೇಗನ್ ಕೂಡ ವಾಸಿಸುತ್ತಿತ್ತು . ಅದು ನಗರದ ಜನರಿಂದ ಬಲವಂತವಾಗಿ ಪೊಗದಿ 
ಕೀಳುತ್ತಿತ್ತು . ಅವರು ಪ್ರತಿ ವರ್ಷವೂ ಅದಕ್ಕೆ ಒಬ್ಬ ಯುವಕನನ್ನೋ ಒಬ್ಬ ಯುವತಿಯನ್ನೋ 
ಆಹಾರವಾಗಿ ನೀಡಬೇಕಾಗಿತ್ತು . 

ಅವರು ಸರದಿಯ ಮೇಲೆ ಈ ಕೇಳಿಕೆ ಪೂರೈಸುತ್ತಿದ್ದರು . ಒಮ್ಮೆ ರಾಜನ ಸರದಿ ಬಂದಿತು. 
ಅವನು ತನ್ನ ಮಗಳನ್ನು ಹೇಗನ್‌ಗೆ ಒಪ್ಪಿಸಬೇಕಾಗಿ ಬಂದಿತು . ವಿಧಿ ಇಲ್ಲದೆ ಅವನು ಅವಳನ್ನು 
ಕಳುಹಿಸಿಕೊಟ್ಟ. ನಗರದ ಇತರ ಜನರಂತೆಯೇ ಅವನೂ ಮಾಡಬೇಕಿದ್ದಿತು . 

ಆ ರಾಜಕುಮಾರಿ ಎಷ್ಟು ಸುಂದರಿಯಾಗಿದ್ದಳೆಂದರೆ ಅವಳ ಸೌಂದರ್ಯವನ್ನು ಮಾತು 
ಗಳಿಂದ ವರ್ಣಿಸಿ ತಿಳಿಸಲು, ಲೇಖನಿಯಿಂದ ಬರೆದು ತಿಳಿಸಲು ಸಾಧ್ಯವಿಲ್ಲ. ಡೇಗನ್ ಅವಳನ್ನು 
ಕಂಡ ಕೂಡಲೇ ಅವಳಲ್ಲಿ ಮೊಹಿತವಾಯಿತು . ಅವಳೂ ಅದನ್ನು ಅರ್ಥಮಾಡಿಕೊಂಡಳು . 
ಅವಳು ಅದರೊಂದಿಗೆ ಪ್ರೀತಿಯಿಂದ ಮಾತನಾಡಿದಳು . ತಾನೂ ಅದರಲ್ಲಿ ಅನುರಕ್ತಳಾದಂತೆ 
ವರ್ತಿಸಿದಳು. 

ಹೀಗೆ ಅವಳು ಸ್ವಲ್ಪ ದಿನ ಅದರ ಜೊತೆ ಕಳೆದಳು . ಆಮೇಲೆ ಒಂದು ದಿನ ಡೇಗನ್ ಸುಪ್ರೀತ 
ಮನೋಭಾವದಲ್ಲಿದ್ದಾಗ ಅವಳು ಅದನ್ನು ಕೇಳಿದಳು : “ನೀನು ಎಷ್ಟೊಂದು ಭಾರಿ ಶಕ್ತಿವಂತ 
ನಾಗಿದ್ದೀಯ ! ಈ ಜಗತ್ತಿನಲ್ಲಿ ನಿನ್ನನ್ನು ಮಾರಿಸುವಂಥ ಶಕ್ತಿವಂತ ಯಾರಾದರೂ ಇದ್ದಾರೆಯೆ ? ” 
“ ಇದಾನೆ. ಅವನು ಕೀಯೆವ್ನಲ್ಲೇ , ದ್ವೀಪರ್ ನದಿಯ ಎತ್ತರದ ದಡದ ಮೇಲೆ ವಾಸಿಸು 
- ತ್ತಿದ್ದಾನೆ” ಎಂದಿತು ಡೇಗನ್ . 

“ ಅವನೊಬ್ಬ ಚರ್ಮ ಹದಮಾಡುವವ, ಕಿರೀಲ್ ಅಂತ ಅವನ ಹೆಸರು . ಅವನು ಎಷ್ಟು 
ಬಲಶಾಲಿ ಎಂದರೆ ಯಾವತ್ತೂ ಒಂದೇ ಬಾರಿಗೆ ಹನ್ನೆರಡಕ್ಕೆ ಕಮ್ಮಿ ಇಲ್ಲದಂತೆ ಚರ್ಮಗಳನ್ನು 
ನೆನಸುತ್ತಾನೆ. ಅವನು ಅವುಗಳನ್ನು ದ್ವೀಪರ್‌ ನದಿಯ ನೀರಿನಲ್ಲಿ ನೆನಸುತ್ತಾನೆ. ಒಮ್ಮೆ ನೆನೆದ 
ವೆಂದರೆ ಅವು ತುಂಬ ಭಾರವಾಗುತ್ತವೆ. ಕೆಲವು ವೇಳೆ ನಾನು ಅವುಗಳನ್ನು ನೀರಿನಡಿ ಭದ್ರವಾಗಿ 
ಹಿಡಿದು ಇರಿಸಿಕೊಂಡಿದ್ದೆ - ಆಗಲೂ ಅವನ ಕೈಯಲ್ಲಿ ಅವುಗಳನ್ನು ಮೇಲಕ್ಕೆ ಎಳೆದು ಹಾಕಲು 
ಸಾಧ್ಯವಾಗುವುದಾ ಎಂದು ನೋಡಲೋಸುಗ. ಸದ್ಯಕ್ಕೆ ಬಿಟ್ಟುಬಿಟ್ಟೆ ! ಇಲ್ಲದಿದ್ದರೆ ಅವನು ಅವು 
ಗಳ ಜೊತೆಗೆ ನನ್ನನ್ನೂ ಹೊರಕ್ಕೆ ಎಳೆದು ಹಾಕುತ್ತಿದ್ದ. ಇವನೊಬ್ಬನಿಗಷ್ಟೆ ನಾನು ಈ ಪ್ರಪಂಚ 
ದಲ್ಲಿ ಹೆದರುವುದು . ” 

ರಾಜಕುಮಾರಿ ಈ ಮಾತುಗಳನ್ನೆಲ್ಲ ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡಳು . ಈ ಸಮಾಚಾರ 
ವನ್ನು ತನ್ನ ತಂದೆಗೆ ಕಳುಹಿಸಿಕೊಡುವ, ಅನಂತರ ತಾನೇ ತನ್ನ ತಂದೆಯ ಬಳಿಗೆ ಹೋಗುವ 
ರೀತಿಯ ಬಗೆಗೆ ಯೋಚಿಸ ತೊಡಗಿದಳು. ಅವಳು ಒಂಟಿಯಾಗಿದ್ದಳು. ಒಂದು ಪಾರಿವಾಳ ಬಿಟ್ಟು 
ಬೇರೇನೂ ಅವಳ ಬಳಿ ಇರಲಿಲ್ಲ. ಈ ಪಾರಿವಾಳವನ್ನು ಅವಳು ಕೀಯೆವ್‌ನಲ್ಲಿದ್ದಾಗಲೇ ಸಾಕಿ 
ಕೊಂಡಿದ್ದಳು ಮತ್ತು ತನ್ನೊಂದಿಗೆ ಕರೆತಂದಿದ್ದಳು . ತುಂಬ ಯೋಚಿಸಿದನಂತರ ಅವಳು ತನ್ನ 
ತಂದೆಗೆ ಪತ್ರ ಬರೆಯಲು ನಿರ್ಧರಿಸಿದಳು . 
- “ಕೀಯೆಟ್‌ನಲ್ಲಿ ಕಿರೀಲ್ ಅನ್ನುವ ಹೆಸರಿನ ಒಬ್ಬ ಚರ್ಮ ಹದಮಾಡುವವನಿದ್ದಾನೆ ” ಎಂದ 
ವಳು ಬರೆದಳು . “ ಅವನೊಬ್ಬನೇ ಈ ಡೇಗನ್‌ನ ಜೊತೆ ಹೋರಾಡಿ ಗೆಲ್ಲಬಲ್ಲ , ನನ್ನನ್ನು ಬಿಡಿಸ 
ಬಲ್ಲ . ಆದ್ದರಿಂದ ನೀವೇ ಅವನ ಬಳಿಗೆ ಹೋಗಿ, ಇಲ್ಲವೇ ಬೇರೆ ಯಾರನ್ನಾದರೂ ಅವನಲ್ಲಿಗೆ 
ಕಳಿಸಿಕೊಡಿ. ಡೇಗನ್‌ನ ಜೊತೆ ಹೋರಾಡಿ ನನ್ನನ್ನು - ಒಬ್ಬ ಅಸುಖಿ ಯುವತಿಯನ್ನು – 
ಬಂಧನದಿಂದ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಿ. ಬರಿ ಮಾತುಗಳಿಂದ ಅವನ ಮನ ಒಲಿಸಲು 
ಆಗದಿದ್ದಲ್ಲಿ ಅವನಿಗೆ ಬೇಕಾದಷ್ಟು ಬಳುವಳಿ ನೀಡಿ, ಯಾರೂ ಅವನ ಜೊತೆ ಒರಟಾಗಿ ಮಾತ 
ನಾಡದಂತೆ ನೋಡಿಕೊಳ್ಳಿ . ಇಲ್ಲದಿದ್ದರೆ ಅವನು ಕೋಪಗೊಳ್ಳಬಹುದು. ನನ್ನ ಜೀವಮಾನದ 
ಕೊನೆಯವರೆಗೂ ನಾನು ನಿಮ್ಮಿಬ್ಬರಿಗಾಗಿ ಪ್ರಾರ್ಥನೆ ಮಾಡುವೆ, ನಿಮ್ಮನ್ನು ರಕ್ಷಿಸುವಂತೆ ದೇವ 

ರನ್ನು ಕೇಳಿಕೊಳ್ಳುವೆ...” 
- ಹೀಗೆ ಬರೆದು ಅವಳು ಪತ್ರವನ್ನು ಪಾರಿವಾಳದ ರೆಕ್ಕೆಗೆ ಕಟ್ಟಿ ಕಿಟಕಿಯ ಮೂಲಕ ಅದನ್ನು 
ಹಾರಿಬಿಟ್ಟಳು. ಪಾರಿವಾಳ ಆಗಸದಲ್ಲಿ ಎತ್ತರಕ್ಕೆ ಹಾರಿಹೋಗಿ ಅನಂತರ ನೇರವಾಗಿ ರಾಜ 
ಕುಮಾರಿಯ ಅರಮನೆಯ ಕಡೆಗೆ ತಿರುಗಿತು . ಅರಮನೆಯ ಅಂಗಳದಲ್ಲಿ ಅಡ್ಡಾಡುತ್ತಿದ್ದ ರಾಜನ 
ಮಕ್ಕಳು ಪಾರಿವಾಳವನ್ನು ಕಂಡು ಕೂಗಿ ಹೇಳಿದರು : 

“ ಅಪ್ಪ ! ಅಪ್ಪ ! ಅಕ್ಕನ ಪಾರಿವಾಳ ಬಂದಿದೆ ! ” 
- ಈ ಸುದ್ದಿ ಕೇಳಿ ರಾಜನ ಹೃದಯ ಆನಂದದ ಹೊನಲಿನಿಂದ ತುಂಬಿತು . ಆದರೆ ಅವನು 
ಯೋಚನೆ ಮಾಡಿದ ಮೇಲೆ ಮತ್ತೆ ಅದು ದುಃಖದಿಂದ ಭಾರವಾಯಿತಷ್ಟೆ . 

“ ನನ್ನ ಮಗಳು ಸತ್ತುಹೋಗಿರಬೇಕು. ಡೇಗನ್ ಅವಳನ್ನು ಕೊಂದಿರಬೇಕು. ಅದಕ್ಕೇ 
ಪಾರಿವಾಳ ಹಿಂದಿರುಗಿದೆ ” ಎಂದವನು ತನ್ನಲ್ಲೇ ಹೇಳಿಕೊಂಡ . 

ಅವನು ಪಾರಿವಾಳವನ್ನು ತನ್ನ ಕೈ ಮೇಲೆ ಬಂದು ಕೂರುವಂತೆ ಪುಸಲಾಯಿಸಿದ. ನೋಡು 
ತಾನೆ - ಅದರ ರೆಕ್ಕೆಗೆ ಒಂದು ಪತ್ರವನ್ನು ಕಟ್ಟಲಾಗಿದೆ ! ಅವನು ಅದನ್ನು ಓದಿ ತಕ್ಷಣವೇ 
ತನ್ನ ಆಸ್ಥಾನದ ಹಿರಿಯರನ್ನೆಲ್ಲ ಕರೆಸಿದ. 

“ಕೀಯಪ್‌ನಲ್ಲಿ ಚರ್ಮ ಹದಮಾಡುವ ಕಿರೀಲ್ ಎಂಬುವನೊಬ್ಬ ಇದ್ದಾನೆಯೇ ? ” 
ಅವನು ಕೇಳಿದ. 

" ಹೌದು, ಮಹಾಪ್ರಭು , ಇದ್ದಾನೆ . ದ್ವೀಪರ್ ನದಿಯ ಎತ್ತರದ ದಡದ ಮೇಲೆ ವಾಸಿ 
ಸುತ್ತಿದ್ದಾನೆ” ಅವರು ಉತ್ತರಿಸಿದರು . 

“ ಅವನಿಗೆ ಈ ವಿಷಯ ತಿಳಿಸುವುದು ಹೇಗೆ? ಅವನಿಗೆ ಒಂದಿಷ್ಟೂ ಕೋಪ ಬರಬಾರದು. 
ಅವನು ನಾವು ಕೇಳಿದಂತೆ ಮಾಡಬೇಕು. ಹೇಗೆ ಮಾಡುವುದು ? ” 

ಇದಕ್ಕೆ ಅವರ ಬಳಿ ಉತ್ತರವಿರಲಿಲ್ಲ . ಅವರು ತಮ್ಮತಮ್ಮಲ್ಲೇ ಸಮಾಲೋಚಿಸಿ ಕೀಯನ್ 
ನಲ್ಲೇ ತುಂಬ ಹಿರಿಯರೆನಿಸಿಕೊಂಡಿದ್ದ ಕೆಲವರನ್ನು ಕಿರೀಲ್‌ನ ಬಳಿಗೆ ಕಳಿಸಿಕೊಡಲು ನಿರ್ಧರಿಸಿದರು . 

ಅವರು ಕೂಡಲೇ ಹೊರಟರು. ಕಿರೀನಗುಡಿಸಿಲಿಗೆ ಬಂದರು . ಬಾಗಿಲು ತೆರೆದರು. ಘನೀ 
ಭೂತರಾಗಿ ನಿಂತರು ! ಏಕೆಂದರೆ ಚರ್ಮ ಹದಮಾಡುವ ಕಿರೀಲ್ ಅವರ ಕಡೆಗೆ ಬೆನ್ನು ಮಾಡಿ 
ಕುಳಿತಿದ್ದ. ಹನ್ನೆರಡು ಕಚ್ಚಾ ತೊಗಲುಗಳನ್ನು ಎಲ್ಲವನ್ನೂ ಒಂದೇ ಬಾರಿಗೆ ತನ್ನ ಬರಿಗೈಗಳಿಂದಲೇ 
ತಿರುಚುತ್ತಿದ್ದ, ಹಿಂಡುತ್ತಿದ್ದ. ಅವನು ಕೆಲಸ ಮಾಡಿದಂತೆ ಅವನ ಮಂಜಿನಂತೆ ಬೆಳ್ಳಗಿದ್ದ ಗಡ್ಡ 
ವಷ್ಟೆ ಮೇಲಿನಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಹೋಗಿಬರುತ್ತಿದ್ದುದು ಅವರಿಗೆ ಕಂಡುಬಂದಿತು. 
- ಅವರಲ್ಲೊಬ್ಬ ಬೇಕಂತಲೇ ಕೆಮ್ಮಿದ. ಕಿರೀಲ್ ಬೆಚ್ಚಿಬಿದ್ದು ಕೈಯಲ್ಲಿದ್ದತೊಗಲುಗಳನ್ನು ಎಷ್ಟು 
ಗಟ್ಟಿಯಾಗಿ ಹಿಂಡಿದನೆಂದರೆ ಅವು ಹರಿದವು. ಅವನು ಹಿಂದಕ್ಕೆ ತಿರುಗಿ ಹಿರಿಯರನ್ನು ಕಂಡ. 
ಅವರು ಅವನಿಗೆ ಬಾಗಿ ನಮಸ್ಕರಿಸಿ ತಮ್ಮನ್ನು ಯಾರು ಕಳುಹಿಸಿದ್ದು , ಯಾತಕ್ಕೆ ಕಳುಹಿಸಿದ್ದು 
ಅನ್ನುವುದನ್ನು ಹೇಳ ತೊಡಗಿದರು . ಆದರೆ ಅವನಿಗೆ ಎಷ್ಟು ಕೋಪ ಬಂದಿತೆಂದರೆ ಅವರನ್ನು 
ನೋಡಲಾಗಲೀ ಅವರ ಮಾತುಗಳನ್ನು ಕೇಳಿಸಿಕೊಳ್ಳಲಾಗಲೀ ಬಯಸಲಿಲ್ಲ - ಹನ್ನೆರಡು ತೊಗಲು 
ಗಳು ಹರಿಯುವುದಕ್ಕೆ ಅವರೇ ಕಾರಣರಾಗಿದ್ದರು . ಅವರು ಕೇಳಿಕೊಂಡರು , ಬೇಡಿಕೊಂಡರು , 
ಮಂಡಿ ಊರಿ ಕುಳಿತು ಯಾಚಿಸಿದರು . ಆದರೆ ಏನೂ ಪ್ರಯೋಜನವಾಗಲಿಲ್ಲ. 

ಈಗೇನು ಮಾಡುವುದು ? 

ರಾಜನ ಬಳಿಗೆ ಜೋಲುಮುಖ ಹಾಕಿಕೊಂಡು ಹಿಂದಿರುಗಿದರು . ರಾಜ ತುಂಬ ಹೊತ್ತು 
ಯೋಚಿಸಿ ಕೊನೆಗೆ ನಗರದಲ್ಲಿದ್ದ ಯುವಕರನ್ನು ಕಿರೀಲ್ ಬಳಿಗೆ ಕಳುಹಿಸಲು ನಿರ್ಧರಿಸಿದ. 

ಆದರೆ ಈ ಯುವ ದೂತರೂ ಹಿರಿಯ ದೂತರಿಗಿಂತ ಹೆಚ್ಚಿಗೇನೂ ಯಶಸ್ವಿಯಾಗಲಿಲ್ಲ. 
ಚರ್ಮ ಹದಮಾಡುವವ ಅವರ ಯಾಚನೆಗಳನ್ನೆಲ್ಲ ಮೌನದಿಂದ ಕೇಳಿದ , ಮೋಡದಂತೆ ಕಪ್ಪಾಗಿ 
ಹುಬ್ಬು ಕಟ್ಟಿ ಕುಳಿತ. 

ರಾಜ ಮತ್ತೆ ಯೋಚನೆ ಮಾಡಿದ. ತುಂಬ ಹೊತ್ತು ಯೋಚನೆ ಮಾಡಿದ.ಕೊನೆಗೆ ಕೆಲವು 
ಮಕ್ಕಳನ್ನು ಕಿರೀಲ್‌ನ ಬಳಿಗೆ ಕಳುಹಿಸಿದ. ಅವರು ಕಿರೀಲ್‌ನ ಗುಡಿಸಿಲಿಗೆ ಹೋಗಿ ಅವನ ಮುಂದೆ 
ಮಂಡಿಯೂರಿಕುಳಿತು ಬೇಡಿಕೊಳ್ಳ ತೊಡಗಿದರು , ಕಣ್ಣೀರು ಕರೆದರು . ಅದನ್ನು ಕಂಡು ಕಿರೀಲ್‌ನ 
ಕಣ್ಣುಗಳಲ್ಲೂ ನೀರೂರಿತು. 

“ ಸರಿ , ಅಳುವುದನ್ನು ಸಾಕುಮಾಡಿ ! ನೀವು ಹೇಳಿದಂತೆ ನಾನು ಮಾಡುತ್ತೇನೆ” ಅವನೆಂದ. 

ಅವನು ರಾಜನ ಬಳಿಗೆ ಹೋಗಿ ಹನ್ನೆರಡು ಪೀಪಾಯಿಗಳ ತುಂಬ ಕೀಲೆಣ್ಣೆಯನ್ನೂ 
ಹನ್ನೆರಡು ಬಂಡಿಗಳ ತುಂಬ ಕಿತ್ಯಾನಾರನ್ನೂ ಕೊಡುವಂತೆ ಕೇಳಿದ. ಅವನ್ನು ತಂದು ಕೊಟ್ಟಾಗ 
ಅವನು ಕಿತ್ಯಾನಾರನ್ನು ತನ್ನ ಮೈ ಸುತ್ತ ಸುತ್ತಿಕೊಂಡು ಅದರ ಮೇಲೆ ಕೀಲೆಣ್ಣೆ ಹಚ್ಚಿಕೊಂಡ . 
ಆಮೇಲೆ ಹತ್ತು ಪೂದ್‌ಗಳಷ್ಟು ತೂಗುವ ಖಡ್ಗವೊಂದನ್ನು ಎತ್ತಿಕೊಂಡು ಹೇಗನ್‌ನ ಬಳಿಗೆ 
ಹೋರಾಡಲು ಹೋದ. 

“ ನನ್ನ ಬಳಿಗೆ ಯಾಕೆ ಬಂದೆ, ಕಿರೀಲ್ ? ಹೋರಾಡಲೋ ಅಥವಾ ಶಾಂತಿ ಮಾಡಿ 
ಕೊಳ್ಳಲೋ ? ” ಡೇಗನ್ ಕೇಳಿತು. 

“ಹೋರಾಡಲು ಬಂದಿದ್ದೇನೆ, ಪಾಪಿಷ್ಟ ಪಿಶಾಚಿಯೇ ! ನಿನ್ನಂಥವರ ಜೊತೆ ನಾನೆಂದೂ 
ಶಾಂತಿ ಮಾಡಿಕೊಳ್ಳಲಾರೆ ” ಎಂದ ಕಿರೀಲ್. 

ಅವರು ಹೋರಾಡ ತೊಡಗಿದರು . ಓಹ್ , ಭೂಮಿ ಅವರ ಹೆಜ್ಜೆಗಳ ಕೆಳಗೆ ಹೇಗೆ ನಡು 
ಗುತ್ತಿತ್ತು ! ಡೇಗನ್ ಕಿರೀಲ್‌ನ ಬಳಿಗೆ ಕಚ್ಚಲು ಧಾವಿಸುತ್ತಿತ್ತು . ಆದರೆ ಅದರ ಹಲ್ಲುಗಳಿಗೆ 
ಕೀಲೆಣ್ಣೆಯ ತುಂಡುಗಳಷ್ಟೆ ಮೆತ್ತಿಕೊಳ್ಳುತ್ತಿದ್ದವು. ಅದು ಮತ್ತೆ ಅವನ ಬಳಿಗೆ ಧಾವಿಸುತ್ತಿತ್ತು . 
ಈ ಬಾರಿ ಅದರ ಬಾಯಿ ತುಂಬ ಕಿತ್ಯಾನಾರು ಮೆತ್ತಿಕೊಳ್ಳುತ್ತಿತ್ತು . ಕಿರೀಲ್ ಡೇಗನ್‌ನ ಮೇಲೆ 
ತನ್ನ ಖಡ್ಗದಿಂದ ಬಲವಾಗಿ ಹೊಡೆಯುತ್ತಿದ್ದ – ಅದು ನೆಲದೊಳಕ್ಕೆ ಹುಗಿಯುವಂತೆ ಮಾಡು 


ಮೇಲಿಂದ ಮೇಲೆ ಹೊಡೆತಗಳನ್ನು ತಿನ್ನುತ್ತಿದ್ದ ಡೇಗನ್‌ನ ಒಡಲು ಬೆಂಕಿಯ ಮೇಲಿ 
ದ್ವಿತೇನೋ ಅನ್ನುವಂತೆ ಬಿಸಿಯಾಗಿ ಕಾಯ ತೊಡಗಿತು. ಅದು ಆಗಾಗ್ಗೆ ಒಂದು ಮುಳುಗು 
ಹಾಕಿ , ತಣ್ಣಗಿನ ನೀರನ್ನು ಕುಡಿಯಲೆಂದು ದ್ವೀಪರ್ ನದಿಗೆಹೋಗುತ್ತಿತ್ತು . ಆಗ ಕಿರೀಲ್ ಮತ್ತೆ 
ತನ್ನ ಸುತ್ತ ಇನ್ನಷ್ಟು ಕಿತ್ತಾನಾರು ಸುತ್ತಿಕೊಂಡು ಕೀಲೆಣ್ಣೆ ಹಚ್ಚಿಕೊಳ್ಳುತ್ತಿದ್ದ. 
* ಪ್ರತಿ ಬಾರಿ ಡೇಗನ್ ನೀರಿನಿಂದ ಹೊರಬಂದು ಕಿರೀಲ್‌ನ ಕಡೆಗೆ ಧಾವಿಸಿಹೋದಾಗಲೂ 
ಕಿರೀಲ್ ತನ್ನ ಖಡ್ಗದಿಂದ ಅದಕ್ಕೆ ಪ್ರಹಾರ ನೀಡುತ್ತಿದ್ದ. ಡೇಗನ್ ಮತ್ತೆ ಅವನ ಕಡೆಗೆ ಧಾವಿ 
ಸುತ್ತಿತ್ತು . ಕಿರೀಲ್ ಮತ್ತೆ ಅದಕ್ಕೆ ಎಷ್ಟು ಜೋರಾಗಿ ಖಡ್ಗದ ಪ್ರಹಾರ ನೀಡುತ್ತಿದ್ದನೆಂದರೆ 
ಅದರ ಶಬ್ದ ಸುತ್ತಲೂ ಪ್ರತಿಧ್ವನಿಸುತ್ತಿತ್ತು . 

ಅವರು ಹೀಗೆಯೇ ತುಂಬ ಹೊತ್ತು ಹೋರಾಡಿದರು . ಮುಗಿಲು ಮುಟ್ಟುವಷ್ಟು ಹೊಗೆ 
ಎದ್ದಿತು . ಸುತ್ತಮುತ್ತ ಕಿಡಿಗಳು ಚಿಮ್ಮಿದವು. ಕಿರೀಲ್‌ನ ಹೊಡೆತಗಳು ಹೆಚ್ಚು ಬಲವಾಗಿ ಹೆಚ್ಚು 
ಬೇಗಬೇಗ ಬೀಳ ತೊಡಗಿದವು. ಡೇಗನ್ ಕುಲುಮೆಯಲ್ಲಿನ ನೇಗಿಲ ಗುಳದಂತೆ ಉರಿ ಕಾರು 
ತಿತ್ತು . ಅದು ಕೆಮ್ಮಿತು, ಉಗುಳು ಸುರಿಸಿತು , ಅದರ ಕೆಳಗಿದ್ದ ಭೂಮಿ ನಡುಗಿತು . 
- ನಗರದ ಜನರು ಗುಡ್ಡದ ಮೇಲೆ ನಿಂತು ಈ ಕದನವನ್ನು ವೀಕ್ಷಿಸಿದರು. ಅವರು ಅಲ್ಲೇ 
ಸ್ತಂಭೀಭೂತರಾಗಿ ನಿಂತರು . 

ಆಗ ಇದ್ದಕ್ಕಿದ್ದಂತೆ ಭಾರಿ ಸಿಡಿಲು ಬಡಿದಂಥ ಶಬ್ದವಾಯಿತು. ಡೇಗನ್ ನೆಲದ ಮೇಲೆ ಎಷ್ಟು 
ಬಲವಾಗಿ ಬಿದ್ದಿತೆಂದರೆ ನೆಲವೇ ಕಂಪಿಸಿತು , ಅದುರಿತು. ಗುಡ್ಡದ ಮೇಲೆ ನಿಂತಿದ್ದ ನಗರದ ಜನ 
ರೆಲ್ಲ ಚಪ್ಪಾಳೆ ತಟ್ಟುತ್ತ “ಉಘ ” ಎಂದು ಜಯಘೋಷ ಮೊಳಗಿಸುತ್ತ ಕಿರೀಲ್‌ನನ್ನು ಅಭಿನಂದಿ 
ಸಿದರು . 

ಡೇಗನ್ ಸತ್ತು ಬಿದ್ದಿದ್ದಿತು. ಅದನ್ನು ಕೊಂದ ಕಿರೀಲ್ ರಾಜಕುಮಾರಿಯನ್ನು ಬಂಧನ 
ದಿಂದ ಬಿಡಿಸಿ ಅವಳ ತಂದೆಯ ಬಳಿಗೆ ಕರೆದೊಯ್ದ . 

ಕಿರೀಲ್‌ಗೆ ಎಷ್ಟು ವಂದಿಸಬೇಕೋ ರಾಜನಿಗೆ ತಿಳಿಯದಾಯಿತು. ಅಂದಿನಿಂದ ಕಿರೀಲ್ 
ವಾಸಿಸುತ್ತಿದ್ದ ನಗರದ ವಿಭಾಗವನ್ನು ಚರ್ಮ ಹದಮಾಡುವವನ ಮೊಹಲ್ಲಾ ಎಂದೇ ಕರೆಯ 
ಲಾಯಿತು. 

ಕುರುಬ ಹುಡುಗ

ಒಂದಾನೊಂದು ಕಾಲದಲ್ಲಿ ಒಬ್ಬ ಕುರುಬ ಹುಡುಗನಿದ್ದ. ಅವನು ತನ್ನ ಎಳೆಯ ವಯಸ್ಸಿ 
ನಿಂದಲೂ ಕುರಿಗಳನ್ನು ಮೇಯಿಸುವುದನ್ನು ಬಿಟ್ಟು ಬೇರೇನೂ ಕೆಲಸ ಮಾಡುತ್ತಿರಲಿಲ್ಲ. 

ಒಂದು ದಿನ ಎಂಟು ಪೂದ್ * ಗಳಷ್ಟು ತೂಗುವ ದೊಡ್ಡ ಕಲ್ಲುಗುಂಡೊಂದು ಆಕಾಶ 
ದಿಂದ ಅವನ ಬಳಿ ಬಂದು ಬಿದ್ದಿತು. ಕುರುಬ ಹುಡುಗ ಅದನ್ನು ತೆಗೆದುಕೊಂಡು ತಮಾಷೆ ಮಾಡು 
ತಿದ್ದ. ಅದನ್ನು ಚಾಟಿಗೆ ಕಟ್ಟಿ ಆಡುತ್ತಿದ್ದ. ಆಕಾಶಕ್ಕೆ ಎಸೆದು ಹಿಡಿಯುತ್ತಿದ್ದ. 

ಕಲ್ಲು ಗುಂಡಿನೊಂದಿಗೆ ಆಟವಾಡುತ್ತಿದ್ದುದನ್ನು ಕಂಡು ಅವನ ತಾಯಿ ಅವನನ್ನು ಬಯು 
ತಿದ್ದಳು . ಅಷ್ಟು ಭಾರವಾದ ಕಲ್ಲುಗುಂಡು ಅವನಿಗೆ ಅಪಾಯ ತರಬಹುದೆಂದು ಅವಳು ಅಂಜಿ 
ದ್ದಳು. ಆದರೆ ಅವನು ಅವಳ ಮಾತಿಗೆ ಕಿವಿಗೊಡುತ್ತಿರಲಿಲ್ಲ . 
- ಕುರುಬ ಹುಡುಗ ವಾಸಿಸುತ್ತಿದ್ದ ಹಳ್ಳಿಗೆ ಅನತಿ ದೂರದಲ್ಲಿದ್ದ ಪಟ್ಟಣದಲ್ಲಿ ರಾಜ್ಯದ ದೊರೆ 
ವಾಸಿಸುತ್ತಿದ್ದ. ಅಲ್ಲಿ ಒಮ್ಮೆ ಏನಾಯಿತೊಂದರೆ , ಒಂದು ಡೇಗನ್ ಪ್ರಾಣಿ* * ಬಂದು ಕಾಟ 
ಕೊಡ ತೊಡಗಿತು . ಅದು ಒಂದೊಂದೂ ಮೂವತ್ತು ಪೂದ್ ತೂಗುವ ಕಲ್ಲುಗುಂಡುಗಳನ್ನು 
ಆ ಪಟ್ಟಣಕ್ಕೆ ತಂದು ಹಾಕಿ ಅವುಗಳಿಂದ ಅಲ್ಲಿ ಒಂದು ಅರಮನೆಯನ್ನು ಕಟ್ಟಿಕೊಂಡಿತು. ಅನಂತರ 
ತನಗೆ ರಾಜಕುಮಾರಿಯನ್ನು ಮದುವೆ ಮಾಡಿಕೊಡಬೇಕೆಂದು ದೊರೆಯನ್ನು ಪೀಡಿಸ ತೊಡ 
ಗಿತು . 


* ಒಂದು ರಷ್ಯನ್ ತೂಕದ ಅಳತೆ, 16 .38ಕಿ . ಗ್ರಾಂ .ಗೆ ಸಮ . - ಸಂ . 
** ಕಾಲ್ಪನಿಕ ರೆಕ್ಕೆಯ ಹಾವು, - ಸಂ . 
ದೊರೆಗೆ ಗಾಬರಿಯಾಯಿತು. ತನ್ನ ರಾಜ್ಯದ ಮೂಲೆಮೂಲೆಗೂ ದೂತರನ್ನು ಅಟ್ಟಿದ. 
ಈ ಡೇಗನ್ ಪ್ರಾಣಿಯ ವಿರುದ್ದ ಹೋರಾಡಿ ಅದನ್ನು ಕೊಲ್ಲುವಷ್ಟು ಧೈರ್ಯ ಸೈರ್ಯವುಳ್ಳ 
ಯಾರನ್ನಾದರೂ ಕಂಡುಹಿಡಿಯುವಂತೆ ಆಜ್ಞಾಪಿಸಿದ . 

ಈ ಸುದ್ದಿ ಕುರುಬ ಹುಡುಗನ ಕಿವಿಗೂ ಬಿದ್ದಿತು . ಅವನು ಜಂಭದಿಂದ ಹೇಳಿದ: 
“ ನಾನು ಈ ಚಾಟಿಯಿಂದಲೇ ಡೇಗನ್ ಪ್ರಾಣಿಯನ್ನು ಕೊಲ್ಲಬಲ್ಲೆ ! ” 

ಅವನು ತಮಾಷಿಗೆ ಹಾಗೆ ಹೇಳಿದ್ದಿರಬಹುದು. ಆದರೆ ಅವನ ಮಾತನ್ನು ಕೇಳಿದವರು 
ನಿಜಕ್ಕೂ ನಂಬಿದರು . ಅಂತೆಯೇ ದೊರೆಗೆ ವಿಷಯ ತಿಳಿಸಿದರು . ದೊರೆಕೂಡಲೇ ಅವನನ್ನು 
ಕರೆತರುವಂತೆ ದೂತರನ್ನು ಅಟ್ಟಿದ. 

ಕುರುಬ ಹುಡುಗ ಇನ್ನೂ ಚಿಕ್ಕವನಾಗಿದ್ದುದನ್ನು ಕಂಡು ದೊರೆ ಹೇಳಿದ : 

“ನೀನೇನೋ ಹೇಗನ್ ಪ್ರಾಣಿಯನ್ನು ಕೊಲ್ಲಬಲ್ಲೆ ಅಂತ ಹೇಳಿದೆಯಂತೆ. ನಿಜಕ್ಕೂ ಕೊಲ್ಲ 
ಬಲ್ಲೆಯಾ ? ನೀನಿನ್ನೂ ಎಷ್ಟು ಚಿಕ್ಕವನಾಗಿ ಕಾಣಿಸುತ್ತೀಯ ! ” 

“ ಚಿಕ್ಕವನಾಗಿದ್ದರೇನಂತೆ, ನಾನು ಕೊಲ್ಲಬಲ್ಲೆ ! ” ಅವನೆದ. 

ಸರಿ , ದೊರೆ ಅವನಿಗೆ ಎರಡು ದಳ ಸೈನಿಕರನ್ನು ಸಹಾಯಕ್ಕೆ ಕೊಟ್ಟ. ಕುರುಬ ಹುಡುಗ 
ಅವರಿಗೆ ಎಷ್ಟು ಆತ್ಮವಿಶ್ವಾಸದಿಂದ ಆಜ್ಞೆ ನೀಡುತ್ತಿದ್ದನೆಂದರೆ ಅವನು ಕೊನೆಯ ಪಕ್ಷ ಇಪ್ಪತ್ತು 
ವರ್ಷಗಳಿಂದ ಸೇನಾಧಿಪತಿಯ ಕಾರ್ಯ ನಿರ್ವಹಿಸುತ್ತಿದ್ದನೇನೋ ಎಂದು ಹೇಳಬಹುದಿತ್ತು . 

ಇದನ್ನು ಕಂಡು ದೊರೆ ಬೆರಗಾಗಿ ಬಾಯಿಯ ಮೇಲೆ ಬೆರಳಿಟ್ಟ . 
ಕುರುಬ ಹುಡುಗ ಸೈನಿಕರನ್ನು ಹೇಗನ್ ಅರಮನೆಯ ಬಳಿಗೆ , ಸುಮಾರು ಕಲ್ಲೆಸೆತದ ದೂರ 
ಇರುವವರೆಗೂ , ಕರೆದೊಯ್ದ . ಆಮೇಲೆ ಹೇಳಿದ: 

“ 

ನೋಡಿ, ನೀವು ಇಲ್ಲೇ ನಿಲ್ಲಿ . ಅಕೋ , ಆ ಹೊಗೆಕೊಳವಿ ಇದೆಯಲ್ಲ ಅದರಿಂದ ಹೊಗೆ 
ಬಂದರೆ ನಾನು ಡೈಗನ್ ಪ್ರಾಣಿಯನ್ನು ಕೊಂದೆ ಅಂತ ತಿಳಿಯಬೇಕು. ಅದರಿಂದ ಉರಿ ಬಂದರೆ 
ಡೇಗನ್ ಪ್ರಾಣಿಯೇ ಗೆದ್ದಿತು ಅಂತ ತಿಳಿಯಬೇಕು. ಗೊತ್ತಾಯಿತಾ ? ” 

ಹಾಗೆ ಹೇಳಿ ಕುರುಬ ಹುಡುಗ ಒಬ್ಬನೇ ದ್ರೇಗನ್‌ನ ಅರಮನೆ ಒಳಹೊಕ್ಕ. ಡೇಗನ್ 
ತಾನೊಬ್ಬ ಬಹಳ ಬಲಶಾಲಿ ಎಂದು ಭಾವಿಸಿಕೊಂಡಿತ್ತು . ಬಾಯಿಯಿಂದ ಉರಿ ಉಗುಳುತ್ತಲೇ 
ಅದು ತನ್ನ ಎದುರು ಬರುತ್ತಿದ್ದವರನ್ನೆಲ್ಲ ದೂರವೇ ಇರಿಸುತ್ತಿದ್ದಿತು . ಈ ಕುರುಬ ಹುಡುಗನನ್ನು 
ಕಂಡಾಗಲೂ ಅದು ಹಾಗೆಯೇ ಮಾಡಿತು . ಆದರೆ ಕುರುಬ ಹುಡುಗ ಕಣ್ಣು ಕೂಡ ಮಿಟುಕಿಸ 
ಲಿಲ್ಲ. 

“ಓಹೋ , ಪರವಾಗಿಲ್ಲ . ನೀನು ಧೈರ್ಯವಂತ , ಯಾತಕ್ಕಾಗಿ ಇಲ್ಲಿಗೆ ಬಂದೆ, ಹುಡುಗ ? ” 
ಡ್ರಗನ್ ಗರ್ಜಿಸುತ್ತ ಕೇಳಿತು . ನನ್ನ ಜೊತೆಹೋರಾಡಲು ಬಂದೆಯಾ, ಅಥವಾ ಶಾಂತಿ ಮಾಡಿ 
ಕೊಳ್ಳಲು ಬಂದೆಯಾ ? ” 

“ ನಾನು ಹೋರಾಡುವುದಕ್ಕೆ ಬಂದಿದೀನಿ ! ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳು 
ವಷ್ಟು ಕೆಳಮಟ್ಟಕ್ಕೆ ಇಳೀತೀನಿ ಅಂತ ಅಂದುಕೊಂಡೆಯಾ? ” 

“ ಹಾಗಾ ? ಹೋಗು. ಸ್ವಲ್ಪ ಮೈ ಬೆಳೆಸಿಕೊಂಡು, ಬಲ ಹೆಚ್ಚಿಸಿಕೊಂಡು ಮೂರು ವರ್ಷ 
ಗಳಾದ ಮೇಲೆ ಬಾ . ಆಮೇಲೆ ಹೋರಾಡೋಣ! ” ಡೇಗನ್ ಹೇಳಿತು . 

“ ಏನೂ ಬೇಕಿಲ್ಲ . ನನಗೆ ಈಗಾಗಲೇ ಸಾಕಷ್ಟು ಶಕ್ತಿ ಇದೆ ! ” 
“ ಯಾವ ಆಯುಧ ತಂದಿದೀಯ ? ” 
“ ನನ್ನ ಈ ಚಾಟಿ ! ” 

ಹಾಗೆಂದು ಅವನು ಯೋಗನ್‌ಗೆ ತನ್ನ ಚಾಟಿ ತೋರಿಸಿದ . ಅದರ ಬಾರು ಒಂದು ಇಡೀ 
ಎತ್ತಿನ ಚರ್ಮದಿಂದ ಮಾಡಲಾಗಿತ್ತು . ಅದರ ತುದಿಗೆ ಎಂಟು ಪೂದ್ ತೂಗುವ ಆ ಕಲ್ಲು 
ಗುಂಡನ್ನು ಕಟ್ಟಲಾಗಿತ್ತು , 
“ ಬಾ , ಹಾಗಾದರೆ, ನೀನೇ ಶುರು ಮಾಡು ! ” ಡೇಗನ್ ಹೇಳಿತು . 
“ ಇಲ್ಲ. ನೀನೇ ಶುರು ಮಾಡು ! ” 
ಡೇಗನ್ ಕುರುಬ ಹುಡುಗನ ಬಳಿ ಬಂದು ತನ್ನ ಖಡ್ಗದಿಂದ ಬಲವಾಗಿ ಹೊಡೆಯಿತು . 
ಆ ಖಡ್ಗ ಮೂರು ಮಿಾಟರ್ ಉದ್ದವಾಗಿತ್ತು , ಗಡುಸಾದ ಉಕ್ಕಿನಿಂದ ಮಾಡಿದುದಾಗಿತ್ತು . 
ಆದರೂ ಅದು ಮುರಿದು ಬಿದ್ದಿತು . ಕುರುಬ ಹುಡುಗ ಎಷ್ಟು ಮಾತ್ರವೂ ಹಾನಿಗೊಳಗಾಗದೆ, 
ಮಿಸುಕದೆ, ನಿಂತಿದ್ದ. 

“ ನಿನ್ನದು ಆಯಿತಲ್ಲ . ಈಗ ಹಿಡಿ ನನ್ನ ಹೊಡೆತವನ್ನು ! ” ಎಂದು ಕುರುಬ ಹುಡುಗ ಕೂಗಿ 
ಹೇಳಿದ. 


ಅವನು ದ್ವೇಗನ್‌ಗೆ ತನ್ನ ಚಾಟಿಯಿಂದ ಎಂತಹ ಹೊಡೆತ ನೀಡಿದನೆಂದರೆ ಡೇಗನ್ ನಿಂತ 
ಸ್ಥಳದಲ್ಲೇ ಸತ್ತು ಬಿದ್ದಿತು . ಅರಮನೆಯ ಹೊಗೆಕೊಳವಿಯ ಮೂಲಕ ಹೊಗೆ ಹೊರ ಬಂದಿತು. 
ಅದನ್ನು ಕಂಡು ಕುರುಬ ಹುಡುಗನೊಟ್ಟಿಗೆ ಬಂದಿದ್ದ ಸೈನಿಕರು ಅಮಿತಾನಂದಗೊಂಡರು . ವಾದ್ಯ 
ಗಾರರು ವಾದನಗಳನ್ನು ನುಡಿಸಿದರು . ಗಾಯಕರು ಹಾಡಿದರು . ಕುರುಬ ಹುಡುಗನನ್ನು ಸಂಧಿ 
ಸಲು ದೊರೆಯೇ ಹೊರಬಂದ. ಅವನ ಕೈ ಹಿಡಿದು ತನ್ನ ಅರಮನೆಯೊಳಕ್ಕೆ ಕರೆದೊಯ್ದ . 
ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ. ಯುವ ದಂಪತಿಗಳಿಗೆ ಪ್ರತ್ಯೇಕವಾಗಿ ಅರ 
ಮನೆ ಕಟ್ಟಿಸಿಕೊಟ್ಟ. ಅವರು ಅಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದರು . 


121 


ಆದರೆ ಇದು ನೆರೆಹೊರೆಯ ಕೆಲವು ರಾಜರುಗಳಿಗೆ ಅತೃಪ್ತಿ ತಂದಿತು. ಸಾಮಾನ್ಯ ಕುರುಬ 
ನೊಬ್ಬ ರಾಜಕುಮಾರಿಯನ್ನು ವಿವಾಹವಾಗಲು ಎಂದೂ ಬಿಡಬಾರದಿತ್ತು ಎಂದವರು ಹೇಳಿ 
ದರು . ಅವರ ಮಾತುಗಳಿಗೆ ಮರುಳಾಗಿ ದೊರೆಯ ಖೇದಗೊಂಡ . ಅವನು ತಕ್ಷಣವೇ ತನ್ನ 
ರಾಜ್ಯದ ಮೂಲೆಮೂಲೆಗಳಿಗೆ ದೂತರನ್ನಟ್ಟಿ , ಈ ಕುರುಬ ಹುಡುಗನನ್ನು ಕೊಲ್ಲಬಲ್ಲವರು 
ಮುಂದೆ ಬರಬೇಕೆಂದು ಕರೆಕೊಟ್ಟ. ಅಂಥ ಇಬ್ಬರು ಮುಂದೆ ಬಂದರು. ಅವರನ್ನು ಶಸ್ತ್ರಸಜ್ಜು 
ಗೊಳಿಸಿ ಹೋರಾಡಲು ಕಳಿಸಿಕೊಡಲಾಯಿತು. 

ಅವರು ಕುರುಬ ಹುಡುಗನ ಅರಮನೆಗೆ ಬಂದರು . ಕುರುಬ ಹುಡುಗ ಕೇಳಿದ: “ ದಿಟ್ಟ 
ಬಾಲಕರೇ ಇಲ್ಲಿಗೇಕೆ ಬಂದಿರಿ ? ನನ್ನ ಜೊತೆಹೋರಾಡಲು ಬಂದಿರಾ ಅಥವಾ ಶಾಂತಿ ಮಾಡಿ 
ಕೊಳ್ಳಲು ಬಂದಿರಾ ? ” 

“ಹೋರಾಡಲು ಬಂದಿದ್ದೇವೆ. ” 
ಅವರು ತಕ್ಷಣವೇ ಕಾಳಗಕ್ಕಿಳಿದರು . 

ಮೊದಲನೆಯ ಯುವಕ ಕುರುಬ ಹುಡುಗನ ಬಳಿ ಬಂದು ತನ್ನ ಖಡ್ಗದಿಂದ ಅವನ 
ಎಡ ಭುಜದ ಮೇಲೆ ಪ್ರಹಾರ ನೀಡಿದ. ಖಡ್ಗ ಮುರಿದು ಬಿದ್ದಿತು. ಆಮೇಲೆ ಎರಡನೆಯವ 
ಅವನ ಬಳಿ ಬಂದು ಅವನ ಬಲ ಭುಜದ ಮೇಲೆ ತನ್ನ ಖಡ್ಗದಿಂದ ಪ್ರಹಾರ ನೀಡಿದ . ಅದು 
ಕುರುಬ ಹುಡುಗನ ಅಂಗಿಯನ್ನಷ್ಟೆ ಹರಿಯಿತು. 

ಈಗ ಕುರುಬ ಹುಡುಗನ ಸರದಿ. ಅವನು ಪೂರ್ಣ ಎತ್ತರ ಎದ್ದು ನಿಂತ. ಇಬ್ಬರು ಯುವಕ 
ರನ್ನೂ ಹಿಡಿದು ಒಬ್ಬನನ್ನು ಇನ್ನೊಬ್ಬನಿಗೆ ಎಷ್ಟು ಬಲವಾಗಿ ಒತ್ತಿದನೆಂದರೆ ಇಬ್ಬರೂ ನಜ್ಜು 
ಗುಜ್ಜಾಗಿ ಸತ್ತರು. ಅವರ ಮೂಳೆಗಳು ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕುರುಬ ಹುಡುಗ 
ಆ ಕೆಲವು ಮಳೆ ಚೂರುಗಳನ್ನು ಎತ್ತಿಕೊಂಡು ದೊರೆಯ ಬಳಿಗೆ ಹೋದ. ಎಂದಿನಂತೆ 
ಬಾಗಿ ವಂದಿಸದೆ ನೇರವಾಗಿ ನುಡಿದ : 

“ ಈ ಮಳೆ ತುಂಡುಗಳು ಕಾಣುತ್ತವಾ ನಿನಗೆ ? ಎಚ್ಚರ ! ನಿನಗೂ ಹೀಗೆಯೇ ಆಗ 
ಬಹುದು ! ” 

ಇದರಿಂದ ದೊರೆ ಹೆದರಿ ಓಡಿಹೋದ. ಅಂದಿನಿಂದ ಆ ಕುರುಬ ಹುಡುಗನೇ ಆ ರಾಜ್ಯ 
ವನ್ನು ಆಳುತ್ತಿದ್ದಾನೆ.