ನಾನು ಕೋಳೀಕೆ ರಂಗ

ಹಲೋ ಪುಟಾಣಿಗಳೇ,

ನೀವು ಟಿ.ಪಿ.ಕೈಲಾಸಂರವರ “ನಾನು ಕೋಳೀಕೆ ರಂಗ” ಹಾಡು ಕೇಳಿದ್ದೀರಾ? ಇಲ್ಲಾಂದ್ರೆ ಇಲ್ಲಿ ನೋಡಿ ಮತ್ತು ಕೇಳಿ ಮೊದಲೆರಡು ಟಂಗ್ ಟ್ವಿಸ್ಟರ್  ಸಾಲುಗಳು ಪುಟಾಣಿ ವರ್ಷಳ ದನಿಯಲ್ಲಿ.

ಜೊತೆಗೆ ನೀವೂ ಕಲಿತು ಹಾಡಿರಿ.

“ನಾನು ಕೋಳೀಕೆ ರಂಗ, ಕೋನು ಳೀನು ಕೆನು ರನು ಸೊನ್ನೆ ಗ

ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ

ಇದನ್ನ ಹಾಡಕ್ ಬರ್ದೆ ಬಾಯ್ ಬಿಡೋನು ಬೆಪ್ಪು ನನ್ಮಗ!!”

ಕಾವೇರಿ ತೀರದಲ್ಲಿ ಒಂದು ಕಾಡು

ಜನ್ಮ ರಹಸ್ಯ್ ಚಿತ್ರದ ಈ ಗೀತೆ ಹಾಡ್ಲಿಕ್ಕೆ ಮತ್ತು ಕುಣಿಲಿಕ್ಕೆ ಎರಡಕ್ಕೂ ಚೆನ್ನ..

 

ಸಂಗೀತ: ರಾಜನ್-ನಾಗೇಂದ್ರ

ಸಾಹಿತ್ಯ:


ಕಾವೇರಿ ತೀರದಲ್ಲಿ ಒಂದು ಕಾಡು,
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ | – ೨

ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು
ಕಾಣಿಕೆಯಾಗಿ ತಂತು

ಕಾವೇರಿ ತೀರದಲ್ಲಿ ಒಂದು ಕಾಡು,
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ರಾಜನ ನೋಡಿ ಹರುಷದಿ ಕೂಡಿ
ಕೋಗಿಲೆ ಮೆರೆಯಿತು ಹಾಡಿ
ಹಾಡನು ಕೇಳಿ, ಸ್ಫೂರ್ತಿಯ ತಾಳಿ
ಕತ್ತೆಯು ಹಡಿತು ಜೊತೆಗೂಡಿ

ಕಾವೇರಿ ತೀರದಲ್ಲಿ ಒಂದು ಕಾಡು,
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಆಡೋಣ ಬನ್ನಿ ಆಡೋಣ ಬನ್ನಿ, ಅಪ್ಪಲೆ ತಿಪ್ಪಲೆ
ಹಾಕೋಣ ಬನ್ನಿ ಹಾಕೋಣ ಬನ್ನಿ, ರಾಜಾಗೆ ಹೂಮಾಲೆ
ಕೋರುವೆವಿಂದು ದೇವರು ನಿನ್ನ ಸುಖವಾಗಿಡಲೆನುತ
ನ್ಯಾಯವ ನುಡಿದು ಕೇಳಿದ ಪಡೆದು ಬಾಳಲಿ ಎಂದೆನುತ
ನಗುನಗುತ ನಲಿನಲಿತ ಗೆಳೆಯರಿಗೆ ಸೈಎನುತ
ಸಾವಿರ ವರುಷ ಗೆಲ್ಲುತ ಹರುಷ ನೀನಿರು ಅನವರತ

ಗೋವಿನ ಹಾಡು

ಕನ್ನಡ ನಾಡಿನ ಜನಪ್ರಿಯ ಹಾಡುಗಳಲ್ಲಿ ಒಂದಾದ ಗೋವಿನ ಹಾಡು – ಭಾವದಲ್ಲಿ ಭಾವರ್ಥದಲ್ಲಿ ಸಮಸ್ತ ವೇದಗಳನ್ನು ಮೀರಿದೆ.
ಇದೊಂದು ಹಾಡು ಕಲಿತರೆ ಸುಶಿಕ್ಷಿತರಾದಂತೆ ಸರಿ. ಈ ಹಾಡು ಹಾಡಿದರೆ ಭಗವಂತನ ಮೆಚ್ಚಿಸಿದಂತೆ.

“ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು” ಎಂದು ಹಾಡುತ್ತಾ ಸತ್ಯ ಹೇಳುವವರು ಯಾವಾಗಲೂ ಅಗ್ನಿ ಪರಿಕ್ಷೆಗೆ ಒಳಗಾಗಬೇಕು ಎನ್ನುತ್ತಾ ಚೆಂದವಾಗಿ ಕಾವ್ಯ ಮೂಡಿ ಬಂದಿದೆ.

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ ಇರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ..

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

|| ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು ||

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ದುಡುಕಲೆಗರಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

|| ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು ||

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು,

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

|| ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು ||

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು.

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.

ಅರ ಮೊಲೆಯನು ಕುಡಿಯಲಮ್ಮ
ಅರ ಸೇರಿ ಬದುಕಲಮ್ಮ
ಅರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

|| ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು ||

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ

ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

|| ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು ||

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾದಿಂತೆಂಡಿತು

ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.

 

ಸಂಗ್ರಹ: ಮುರಳಿ, ಬೆಂಗಳೂರು