ಪುಸ್ತಕ: ತಾರಾವಲೋಕನ

ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳುವ ಆಸಕ್ತಿ ಇರುವವರಿಗಾಗಿ ೨೦೦೯ ರಲ್ಲಿ ಎ.ವಿ ಗೋವಿಂದರಾವ್ ಕನ್ನಡದಲ್ಲಿ ಬರೆದ ಮಾರ್ಗದರ್ಶೀ ಪುಸ್ತಕ. ಪ್ರಕಾಶಕರು: ಅತ್ರಿ ಬುಕ್ ಸೆಂಟರ್, ಮಂಗಳೂರು.

ಶುಕ್ರ ಸಂಕ್ರಮ ಜೂನ್ ೬ ರಂದು

 ಮಕ್ಕಳೆ, ಮತ್ತೊಮ್ಮೆ ವಿಸ್ಮಯದ ಖಗೋಳ ವಿಧ್ಯಮಾನವೊಂದನ್ನು ನೋಡುವ ಅವಕಾಶ ನಮ್ಮೆಲ್ಲರಿಗೆ. ಶುಕ್ರಗ್ರಹ ಜೂನ್ ೬ ರಂದು ಸೂರ್ಯನನ್ನು ಹಾದು ಹೋಗಲಿದೆ. ಇವುಗಳ ಬಗ್ಗೆ ಅನೇಕ ಮಾಹಿತಿಗಳನ್ನು ಈಗಾಗಲೇ ನೀವು ಪತ್ರಿಕೆಗಳಲ್ಲಿ ಓದಿರಬಹುದು. ಇಲ್ಲಿ ಕೆಲವೊಂದು ವಿಷಯಗಳನ್ನು ನಿಮಗೆಂದೇ ಮತ್ತೆ ಒಂದೆಡೆ ಸೇರಿಸುತ್ತಿದ್ದೇವೆ.

ನ್ಯಾಶನಲ್‌ ಸೆಂಟರ್‌ ಫಾರ್‌ ರೇಡಿಯೋ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯು ಪ್ರಕಟಿಸಿರುವ ಈ ಪುಸ್ತಕವನ್ನು ಇಲ್ಲಿ ಓದಿರಿ.

ಈ ಪುಸ್ತಕದ ವಿವಿಧ ಭಾಷೆಗಳ ಆವೃತ್ತಿಯನ್ನು ಇಲ್ಲಿ ಪಡೆಯಬಹುದು:

  • https://transitofvenusncra.wordpress.com/
  • https://mutha.ncra.tifr.res.in/ncra/for-public/transit-of-venu

ಈ ಪುಸ್ತಕದ ಮಾಹಿತಿಯನ್ನು  ಹಂಚಿಕೊಂಡಿದ್ದು, ಮಿತ್ರಮಾಧ್ಯಮ.ಕಾಮ್.

ಜೊತೆಗೆ, ನಾಗೇಶ್ ಹೆಗಡೆಯವರ “ಶುಕ್ರ ಸಂಕ್ರಮ ಮತ್ತು ರಿಯೊ ಸಂಗಮ” ಕೂಡ ಇಲ್ಲಿ ಲಭ್ಯ. ಈ ಲೇಖನ ನಿಮ್ಮ ಅಪ್ಪ ಅಥವಾ ಅಮ್ಮನ ಆಂಡ್ರಾಯ್ಡ್  ಮೊಬೈಲ್ ನಲ್ಲಿ ಅಪ್ಲಿಕೇಷನ್ ಹಾಕುವುದರ ಮೂಲಕ ಕೂಡ ಈ ವಿಸ್ಮಯವನ್ನು ನೋಡುವುದು ಹೇಗೆ ಎಂಬುದನ್ನು ತಿಳಿಸುತ್ತದೆ. (www.transitofvenus.nl ತಾಣವನ್ನು ನೋಡಲು ಮರೆಯದಿರಿ)

ಮುಂಜಾಗ್ರತೆ ಕ್ರಮಗಳು:- ಶುಕ್ರನ ಈ ಸಂಕ್ರಮವನ್ನು ಬರಿಗಣ್ಣಿನಿಂದ ನೋಡುವುದು ಉಚಿತವಲ್ಲ. ಇದಕ್ಕೆಂದೇ ತಾರಾಲಯ ಮತ್ತಿತರ ಕಡೆಗಳಲ್ಲಿ ವಿಶೇಷ ಕನ್ನಡಕಗಳನ್ನು ಮಾರುತ್ತಾರೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಈ ಲೇಖನದಿಂದ ಪಡೆದುಕೊಳ್ಳಿ.

ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ಕಿರುಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 94489 57666 / 99862 21889 (ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ), 99452 25015 (ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ).

ಚಿತ್ರದ ಮೂಲ ಸ್ಪೇಸ್.ಕಾಮ್

ಆಕಾಶ

ಹಲೋ ಪುಟಾಣಿಗಳೇ,

ನಾವು ಮನೆ ಹೊರಗೆ ಬಂದು ನಿಂತು ತಲೆಯೆತ್ತಿ ನೋಡಿದರೆ ಕಾಣುವುದೇ ಆಕಾಶ. ಇದನ್ನ ಆಗಸ, ಗಗನ, ಬಾನು, ನಭ, ಅಂತರಿಕ್ಷ, ಅಂಬರ, ಬಾಂದಳ, ಮುಗಿಲು ಅಂತಾನೂ ಕರೆಯುತ್ತಾರೆ.

ಈ ಆಕಾಶ ಯಾವ ಬಣ್ಣದಲ್ಲಿದೆ ಹೇಳಬಲ್ಲಿರಾ?

ನಮಗೆ ತಟ್ಟನೆ ಹೊಳೆಯುವ ಉತ್ತರ ನೀಲಿ. ಆದರೆ ನೆನಪು ಮಾಡಿಕೊಳ್ಳಿ, ಬೆಳಗ್ಗೆ ಸೂರ್ಯ ಹುಟ್ಟುವಾಗ ಆಕಾಶ ಹಳದಿ,ಕೆಂಪು, ಕಿತ್ತಳೆ ಬಣ್ಣದಲ್ಲಿರತ್ತೆ , ಆಮೇಲೆ ದಿನವಿಡೀ ನೀಲಿ, ಮತ್ತೆ ರಾತ್ರಿ ಹೊತ್ತು ಕಪ್ಪಾಗಿ ಕಾಣುತ್ತಲ್ವಾ..!

ದಿನಕ್ಕೆರಡು ಬಾರಿಯಾದರೂ ಆಕಾಶವನ್ನ ನೋಡಬೇಕು ಅಂತ ನಮಪ್ಪ ನನಗೆ ಚಿಕ್ಕಂದಿನಲ್ಲಿ ಹೇಳ್ತಾ ಇದ್ರು.

ಮುಂದಿನ ಲೇಖನದಲ್ಲಿ ಆಕಾಶ ಯಾಕೆ ಬೇರೆ ಬೇರೆ ಬಣ್ಣಗಳಲ್ಲಿ ಕಾಣತ್ತೆ ಅನ್ನೋದರ  ಬಗ್ಗೆ ತಿಳಿದುಕೊಳ್ಳೋಣ. ಈವತ್ತಿಂದ ನೀವು ಕೂಡ ಆಕಾಶವನ್ನ ನೋಡ್ತೀರಾ :)

ಪರಿಚಯಿಸಿದವರು:- ಸವಿತ ಎಸ್. ಆರ್.