ಪುಸ್ತಕ: ತಾರಾವಲೋಕನ
ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳುವ ಆಸಕ್ತಿ ಇರುವವರಿಗಾಗಿ ೨೦೦೯ ರಲ್ಲಿ ಎ.ವಿ ಗೋವಿಂದರಾವ್ ಕನ್ನಡದಲ್ಲಿ ಬರೆದ ಮಾರ್ಗದರ್ಶೀ ಪುಸ್ತಕ. ಪ್ರಕಾಶಕರು: ಅತ್ರಿ ಬುಕ್ ಸೆಂಟರ್, ಮಂಗಳೂರು.
Read Moreವಿಜ್ಞಾನ ಬೆಳಕಿಗೊಂದು ಶಿಬಿರ

`ಪರೀಕ್ಷೆಗಷ್ಟೇ ಪಾಠ’ ಇಂದಿನ ಬಹುತೇಕ ಶಾಲೆಗಳ ಮೂಲಮಂತ್ರ. ಆದರೆ ಮಕ್ಕಳಿಗೆ ಪಾಠಕ್ಕೂ ಮೀರಿ ಅಗತ್ಯವಾದ ವಿಶೇಷ ಜ್ಞಾನವೂ ಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡಿದೆ ಬಸವನಗುಡಿಯ ನ್ಯಾಷನಲ್ ಕಾಲೇಜು.
ಈ ಜ್ಞಾನ ಸಂಪಾದನೆ ಸಾಧ್ಯವಾಗುವುದು ವಿಜ್ಞಾನದಿಂದ ಎಂಬ ಉದ್ದೇಶದಿಂದ ಆರಂಭಿಸಿದ್ದು `ಬೆಂಗಳೂರು ವಿಜ್ಞಾನ ವೇದಿಕೆ‘. ಇಂದಿಗೂ ಅದೇ ಛಾಪನ್ನು ಉಳಿಸಿಕೊಂಡು ಸಾಗುತ್ತಿರುವ ವೇದಿಕೆ ಈ ಬಾರಿಯೂ ಅಂತಹ ವಿಜ್ಞಾನ ಸರಮಾಲೆಯನ್ನು ತಿಂಗಳ ಕಾರ್ಯಕ್ರಮ ಮತ್ತು ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಪಸರಿಸಲಿದೆ.
ಪ್ರತಿ ತಿಂಗಳೂ ಕಾಲೇಜಿನಲ್ಲಿ ಒಂದಿಲ್ಲೊಂದು ವಿಜ್ಞಾನ ಸಂಬಂಧಿ ಚಟುವಟಿಕೆ ಇದ್ದೇ ಇರುತ್ತದೆ. ಅದರಂತೆ ಈ ಏಪ್ರಿಲ್‌ನಲ್ಲೂ ವಿಶೇಷ ಉಪನ್ಯಾಸಗಳನ್ನು ಸಂಸ್ಥೆ ಆಯೋಜಿಸಿದೆ.
ಏಪ್ರಿಲ್ 3ರಂದು ಭಾರತೀಯ ವಾಯು ಪಡೆಯ ಜಿ.ಬಿ. ಅತ್ರಿ, ಭಾರತೀಯ ವಾಯು ಪಡೆಯಲ್ಲಿನ ಆವಿಷ್ಕಾರ, ಆಗುಹೋಗುಗಳ ಕುರಿತು ಮಾತನಾಡಲಿದ್ದಾರೆ. `ಆ್ಯನ್ ಅಡ್ವೆಂಚರ್ ಆಫ್ ಇಂಡಿಯನ್ ಏರ್‌ಫೋರ್ಸ್ ವಿತ್ ಎ ಕರಿಯರ್‘ ಎಂಬುದು ಅವರ ಉಪನ್ಯಾಸದ ತಿರುಳು.
ಇನ್ನು ಪ್ರಾಣಿ ಸಂಕುಲದ ಬಗ್ಗೆ ಆಸಕ್ತಿ ಇರುವವರಿಗೆ ಏಪ್ರಿಲ್ 4ರಂದು ಹಾವುಗಳ ಕುರಿತು ವಿಶೇಷ ಸ್ಲೈಡ್ ಶೋ ಏರ್ಪಡಿಸಲಾಗಿದೆ. ಇದರ ಬಗ್ಗೆ ಪರಿಸರವಾದಿ ಎಸ್. ಅಜಯ್ ಪ್ರಭು, `ಕಾಮನ್ ಸ್ನೇಕ್ಸ್ ಆಫ್ ಬ್ಯಾಂಗಲೊರ್; ಆರ್ ದೇ ಡಿಸಪಿಯರಿಂಗ್?‘ ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಏಪ್ರಿಲ್ 17ರಂದು ಬೆಂಗಳೂರು ವಿವಿ ಕುಲಪತಿ ಡಾ. ಬಿ. ತಿಮ್ಮೇಗೌಡ ಅವರು ರಸಾಯನಶಾಸ್ತ್ರದ ವಿವಿಧ ಮಜಲುಗಳನ್ನು ಪರಿಚಯಿಸಿಕೊಡಲಿದ್ದು, `ಇಂಪಾರ್ಟೆಂಟ್ ಮೈಲ್‌ಸ್ಟೋನ್ಸ್ ಇನ್ ದಿ ಫೀಲ್ಡ್ ಆಫ್ ಕೆಮಿಸ್ಟ್ರಿ‘ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ಇದು 2500ನೇ ಉಪನ್ಯಾಸ ಎಂಬುದು ಸಂಸ್ಥೆಯ ಅಗ್ಗಳಿಕೆ.
ಏಪ್ರಿಲ್ 24ರಂದು ಆರ್.ವಿ. ದಂತವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ದಿನೇಶ್ ದಂತವೈದ್ಯಕೀಯದಲ್ಲಿನ ವಿದ್ಯಮಾನಗಳ ಕುರಿತು `ಕಾಂಟೆಂಪೊರರಿ ಡೆಂಟಿಸ್ಟ್ರಿ‘ ಉಪನ್ಯಾಸ ನೀಡುತ್ತಾರೆ.
ಕೇವಲ ಉಪನ್ಯಾಸ ಮಾತ್ರವಲ್ಲದೆ ಸಂವಾದ ಮತ್ತು ಸಿನಿಮಾ ಪ್ರದರ್ಶನವೂ ಇಲ್ಲಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳೂ ಸಂಜೆ 6ರಿಂದ ಡಾ. ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ಬಸವನ ಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತವೆ.
ಬೇಸಿಗೆ ವಿಜ್ಞಾನ ಶಿಬಿರ
ಸತತ 45 ವರ್ಷಗಳಿಂದ ಬೇಸಿಗೆ ಶಿಬಿರ ನಡೆಸುತ್ತಾ ಬಂದಿರುವ ಕಾಲೇಜು, ಈ ಬಾರಿಯೂ ಅಂತಹ ಶಿಬಿರವನ್ನು ಹಮ್ಮಿಕೊಂಡಿದೆ. 8ನೇ ತರಗತಿ ಮಕ್ಕಳಿಗೆ ನಡೆಸುವ 23ನೇ ವಾರ್ಷಿಕ ಶಿಬಿರ ಇದಾಗಿದ್ದು, ಏಪ್ರಿಲ್ 4ರಿಂದ ಏಪ್ರಿಲ್ 21ರವರೆಗೆ ಶಿಬಿರ ನಡೆಯುತ್ತದೆ.
ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಏಪ್ರಿಲ್ 22ರಿಂದ ಆರಂಭಗೊಂಡು ಮೇ.11ರವರೆಗೂ ಶಿಬಿರ ಮುಂದುವರೆಯಲಿದ್ದು, ಬರೋಬ್ಬರಿ 46ನೇ ವಾರ್ಷಿಕ ಶಿಬಿರ ಇದಾಗಿದೆ. ವಿಜ್ಞಾನದ ಬಗ್ಗೆ ಕುತೂಹಲವಿರುವ ಮಕ್ಕಳಿಗೆ ಉತ್ತಮ ಅವಕಾಶ ಇದಾಗಿದ್ದು, ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನದ ಆವಿಷ್ಕಾರ, ಹೀಗೆ ಹಲವು ವಿಚಾರಗಳು ಮಕ್ಕಳಲ್ಲಿ ಚಿಂತನೆಗೆ ಎಡೆಮಾಡಿಕೊಡಲಿದೆ.
ಬೆಳಿಗ್ಗೆ 8.30ರಿಂದ 11.30ರವರೆಗೆ ನಡೆಯುವ ತರಗತಿಗಳಲ್ಲಿ ಉಪನ್ಯಾಸಗಳೊಂದಿಗೆ ವೈಜ್ಞಾನಿಕ ಸಾಕ್ಷ್ಯ ಚಿತ್ರಗಳು, ವೈಜ್ಞಾನಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಮಕ್ಕಳಿಗಿದೆ.
ಬೇಸಿಗೆ ಶಿಬಿರವನ್ನು ಏಪ್ರಿಲ್ 4ರಂದು ಬೆಳಿಗ್ಗೆ 10ಕ್ಕೆ ಭೂವಿಜ್ಞಾನಿ ಮತ್ತು ವೈಜ್ಞಾನಿಕ ಬರಹಗಾರ ಪ್ರೊ. ಟಿ. ಆರ್. ಅನಂತರಾಮು ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರು ವಿಜ್ಞಾನ ವೇದಿಕೆ ಅಧ್ಯಕ್ಷ ಪ್ರೊ. ಎ.ಎಚ್. ರಾಮರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಿಮ್ಹಾನ್ಸ್‌ನ ಡಾ. ಸಿ. ಆರ್. ಚಂದ್ರ ಶೇಖರ್, ನ್ಯಾಷನಲ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಬಾಲಚಂದ್ರರಾವ್, ಪ್ರೊ. ಬಿ.ಕೆ. ವಿಶ್ವನಾಥ್‌ರಾವ್, ಪ್ರೊ. ಎಚ್.ಆರ್. ರಾಮಕೃಷ್ಣ ರಾವ್, ಡಾ. ವೈ. ತುಳಜಪ್ಪ, ಒಟ್ಟು 23 ಮಂದಿ ಪರಿಣತರು ಉಪನ್ಯಾಸ ಕೈಗೊಳ್ಳಲಿದ್ದಾರೆ. ವಿಜ್ಞಾನದ ಹಲವು ಮಜಲುಗಳನ್ನು ತಿಳಿಯಲು ನಿಮಗೂ ಕುತೂಹಲವಿದ್ದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಶುಲ್ಕ ರೂ 250. ಸಂಪರ್ಕಕ್ಕೆ: 080-26674441/9900320532.
ಸುದ್ದಿ ಮೂಲ: ಪ್ರಜಾವಾಣಿ
Read Moreಶುಕ್ರ ಸಂಕ್ರಮ ಜೂನ್ ೬ ರಂದು

ಮಕ್ಕಳೆ, ಮತ್ತೊಮ್ಮೆ ವಿಸ್ಮಯದ ಖಗೋಳ ವಿಧ್ಯಮಾನವೊಂದನ್ನು ನೋಡುವ ಅವಕಾಶ ನಮ್ಮೆಲ್ಲರಿಗೆ. ಶುಕ್ರಗ್ರಹ ಜೂನ್ ೬ ರಂದು ಸೂರ್ಯನನ್ನು ಹಾದು ಹೋಗಲಿದೆ. ಇವುಗಳ ಬಗ್ಗೆ ಅನೇಕ ಮಾಹಿತಿಗಳನ್ನು ಈಗಾಗಲೇ ನೀವು ಪತ್ರಿಕೆಗಳಲ್ಲಿ ಓದಿರಬಹುದು. ಇಲ್ಲಿ ಕೆಲವೊಂದು ವಿಷಯಗಳನ್ನು ನಿಮಗೆಂದೇ ಮತ್ತೆ ಒಂದೆಡೆ ಸೇರಿಸುತ್ತಿದ್ದೇವೆ.
ನ್ಯಾಶನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋಫಿಸಿಕ್ಸ್ ಸಂಸ್ಥೆಯು ಪ್ರಕಟಿಸಿರುವ ಈ ಪುಸ್ತಕವನ್ನು ಇಲ್ಲಿ ಓದಿರಿ.
ಈ ಪುಸ್ತಕದ ವಿವಿಧ ಭಾಷೆಗಳ ಆವೃತ್ತಿಯನ್ನು ಇಲ್ಲಿ ಪಡೆಯಬಹುದು:
- https://transitofvenusncra.wordpress.com/
- https://mutha.ncra.tifr.res.in/ncra/for-public/transit-of-venu
ಈ ಪುಸ್ತಕದ ಮಾಹಿತಿಯನ್ನು ಹಂಚಿಕೊಂಡಿದ್ದು, ಮಿತ್ರಮಾಧ್ಯಮ.ಕಾಮ್.
ಜೊತೆಗೆ, ನಾಗೇಶ್ ಹೆಗಡೆಯವರ “ಶುಕ್ರ ಸಂಕ್ರಮ ಮತ್ತು ರಿಯೊ ಸಂಗಮ” ಕೂಡ ಇಲ್ಲಿ ಲಭ್ಯ. ಈ ಲೇಖನ ನಿಮ್ಮ ಅಪ್ಪ ಅಥವಾ ಅಮ್ಮನ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಅಪ್ಲಿಕೇಷನ್ ಹಾಕುವುದರ ಮೂಲಕ ಕೂಡ ಈ ವಿಸ್ಮಯವನ್ನು ನೋಡುವುದು ಹೇಗೆ ಎಂಬುದನ್ನು ತಿಳಿಸುತ್ತದೆ. (www.transitofvenus.nl ತಾಣವನ್ನು ನೋಡಲು ಮರೆಯದಿರಿ)
ಮುಂಜಾಗ್ರತೆ ಕ್ರಮಗಳು:- ಶುಕ್ರನ ಈ ಸಂಕ್ರಮವನ್ನು ಬರಿಗಣ್ಣಿನಿಂದ ನೋಡುವುದು ಉಚಿತವಲ್ಲ. ಇದಕ್ಕೆಂದೇ ತಾರಾಲಯ ಮತ್ತಿತರ ಕಡೆಗಳಲ್ಲಿ ವಿಶೇಷ ಕನ್ನಡಕಗಳನ್ನು ಮಾರುತ್ತಾರೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಈ ಲೇಖನದಿಂದ ಪಡೆದುಕೊಳ್ಳಿ.
ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ಕಿರುಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 94489 57666 / 99862 21889 (ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ), 99452 25015 (ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ).
Read Moreಜಂತರ್ ಮಂತರ್: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ

ಹೈಸ್ಕೂಲ್ ಮಕ್ಕಳಿಗೆ ಉಪಯೋಗವಾಗುವಂತೆ ಹಾಗೂ ಕನ್ನಡದಲ್ಲಿ ವಿಜ್ಞಾನ ಲೇಖನಗಳ ಬರವಣಿಗೆಗೆ ಪ್ರೋತ್ಸಾಹಿಸಲು ಮಿತ್ರಮಾಧ್ಯಮ ವಿಜ್ಞಾನ ಸಂಚಿಕೆಯನ್ನು ಹೊರತಂದಿದೆ. ‘ಜಂತರ್ ಮಂತರ್’ ಹೆಸರಿನ ಈ ಸಂಚಿಕೆಯ ಮೊದಲ ಭಾಗ ಓದಲಿಕ್ಕೆ ಇಲ್ಲಿ ಕ್ಲಿಕ್ಕಿಸಿ.
Read More
ಗರ್ ಗಸ
ಫಿರಾನ್ಹಾ!!ಈ ಹೆಸರು ಕೇಳದೇ ಇರುವವರು ಇದರ ಬಗ್ಗೆ ತಿಳಿದುಕೊಳ್ಳ ಬೇಕಾದದ್ದು ಏನೆಂದರೆ ಅದು ಅಮೇಜಾನ್ ನದಿಯಲ್ಲಿ ವಾಸಿಸುವ ಒಂದು ಮೀನು. ಸಂಘಜೀವಿಯಾದ ಈ ಮೀನು ಗುಂಪಾಗಿ ವಾಸಿಸುತ್ತವೆ. ನದಿಯ
ನೀರಿಗೆ ಬೇರೆ ಯಾವುದಾದರು ಪ್ರಾಣಿ (ಚಿರತೆ, ಡಾಲ್ಫಿನ್, ಮನುಷ್ಯ ಇತ್ಯಾದಿ) ಏನಾದರು ಬಿದ್ದರೆ ಕ್ಷಣಾರ್ಧದಲ್ಲಿ ಸಿಗಿದು ತಿಂದು ಹಾಕಿ ಬಿಡುತ್ತವೆ. ನದಿಯ ನೀರಿಗೆ ಕೈ ಅದ್ದಿ ತೆಗೆಯುವಷ್ಟರಲ್ಲಿ ಕೈಬೆರಳುಗಳನ್ನೇ ತಿಂದು ಮಾಯಮಾಡಿ ಬಿಟ್ಟಿರುತ್ತವೆ!.
ಇವುಗಳ ಹಲ್ಲುಗಳೋ ರೇಜರ್ ನಷ್ಟು ಚೂಪಾಗಿದ್ದೂ ಯಾವುದೇ ಜೀವಿಯನ್ನಾದರೂ ಜೀವಂತ ಸಿಗಿಯಬಲ್ಲವು. ಪ್ರಕೃತಿಯ ವೈಶಿಷ್ಟ್ಯ ನೋಡಿ, ಈ ಭಯಾನಕ ಮೀನೂ ಕೂಡ ಏನು ಮಾಡಲಾಗದಂತಹ ಬಲಿಷ್ಠ ರಕ್ಷಾಕವಚವನ್ನು ‘ಆರಪೈಮ’,ಎಂಬ ಮೀನು. ಹೊಂದಿದೆ!.
ಮಾರ್ಕ್ ಮೇಯರ್ಸ್ ಎಂಬಾತ ಒಂದು ದಿನ ಮೋಜಿಗಾಗಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವಾಗ ಒಮ್ಮೆ ಈ ಆರಪೈಮ ಮೀನು ಸಿಕ್ಕಿತಂತೆ. 2.5 ಮೀಟರ್ ಉದ್ದವಿದ್ದು , 150 ಕೇಜಿ ತೂಗುವ ಈ ಮೀನುಗಳ ಮೈ ಮೇಲೆ ಹತ್ತು ಸೆಂಟೀ ಮೀಟರ್ ಉದ್ದವಿರುವ ಅನೇಕ ಉರುಪೆಗಳು ಇವೆಯಂತೆ!. ಈ ಆರಪೈಮ ಮೀನಿನ ಉರುಪೆಗಳು ಫಿರಾನ್ಹಾ ಮೀನಿನ ಹಲ್ಲುಗಳ ಕಡಿತದ ಹಿಡಿತಕ್ಕೆ ಸಿಗದೇ ಇರಲು ಕಾರಣವಾದರೂ ಏನು? ಎಂಬುದನ್ನು ತಿಳಿಯಲು ಅದರ ಉರುಪೆಗಳನ್ನು ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನಲ್ಲಿ ನೋಡಿ ಕಂಡುಹಿಡಿದಿದ್ದಾನೆ. ಈ ಉರುಪೆಗಳು(ಸ್ಕೇಲ್ಸ್) ಎರಡು ಪದರಗಳಾಗಿ ರಚನೆಯಾಗಿದ್ದು ಒಳಗಿನ ಪದರ ಕೋಲಾಜನ್ ಎಂಬ ವಸ್ತುವಿನಿಂದ ಮಾಡಲ್ಪಟ್ಟಿದ್ದು ಸ್ವಲ್ಪ ಮೆತುವಾಗಿದೆ,. ಉರುಪೆಯ ಹೊರಪದರವೂ ಸಹ ಕೋಲಾಜನ್ ಎಳೆಗಳಿಂದ ರಚಿತವಾಗಿದ್ದು, ಕ್ಯಾಲ್ಷಿಯಮ್ ನಿಂದ ಲೇಪನವಾಗಿರುವುದರಿಂದ ಕಲ್ಲಿನಂತೆ ಗಟ್ಟಿಯಾಗಿದೆ. ಕೋಲಾಜನ್ ಎಂಬುದು ಮೂಳೆಗಳ ಸಂಧಿಗಳಲ್ಲಿ ಕಂಡು ಬರುವ ವಸ್ತು. ಈ ಗಟ್ಟಿ-ಮೆತು ಪದರಗಳ ರಚನೆಯಿಂದ ಫಿರಾನ್ಹದ ಹಲ್ಲುಗಳು ಮುರಿದು ಬೀಳುತ್ತವೆ.ಫಿರಾನ್ಹದ ದೊಡ್ಡ ಗುಂಪಿನ ಮಧ್ಯೆ ಈ ಅರಪೈಮಾ ಮೀನು ಸಲೀಸಾಗಿ ತಪ್ಪಿಸಿಕೊಳ್ಳುವದನ್ನು ಕಂಡು ಕೊಂಡಿರುವ ಏಕೈಕ ಜೀವಿ. ಇದರ ಇನ್ನೊಂದು ವಿಶೇಷವೇನೆಂದರೆ ಲಂಗ್ ಫಿಶ್ ಇರುವ ಹಾಗೆ ಶ್ವಾಸಕೋಶವನ್ನೂ ಸಹ ಹೊಂದಿದೆ. ಅರಪೈಮಾ ಮೀನು ಜೀವವಿಕಾಸದಲ್ಲಿ ಮೀನುಗಳಿಂದ ಉಭಯವಾಸಿಗಳ ನಡುವೆ ಇರುವ ‘ಮಿಸ್ಸಿಂಗ್ ಲಿಂಕ್’.
ಮೂಲ: ಕಾನನ, ವಿ ವಿ ಅಂಕಣ
Read More