ಬಳೆ
ಬಳೇ ಬೇಕೆ ಬಳೆ!
ತೊಡುವುದಕೆ ಬಳೆ!
ಕೈಯಿಗೊಳೆ
ಗಾಜುಬಳೆ |
ಬಳೇ ಬೇಕೆ ಬಳೆ |
ಬಳೇ ಬೇಕೆ ಬಳೆ!
ತಿನುವುದಕೆ ಬಳೆ !
ಬಾಯಿಗೊಳ್ಳೆ
ಕೋಡುಬಳೆ!
ಬಳೇ ಬೇಕೆ ಬಳೆ |
ಬಳೇ ಬೇಕೆ ಬಳೆ!
ತರಹವಾರಿ ಬಳೆ |
ಗಾಜುಬಳೆ !
ಕೋಡುಬಳೆ!
ಬಳೇ ಬೇಕೆ ಬಳೆ!
ಬರೆದವರು: ಜಿ. ಪಿ. ರಾಜರತ್ನಂ
ಬಳೇ ಬೇಕೆ ಬಳೆ!
ತೊಡುವುದಕೆ ಬಳೆ!
ಕೈಯಿಗೊಳೆ
ಗಾಜುಬಳೆ |
ಬಳೇ ಬೇಕೆ ಬಳೆ |
ಬಳೇ ಬೇಕೆ ಬಳೆ!
ತಿನುವುದಕೆ ಬಳೆ !
ಬಾಯಿಗೊಳ್ಳೆ
ಕೋಡುಬಳೆ!
ಬಳೇ ಬೇಕೆ ಬಳೆ |
ಬಳೇ ಬೇಕೆ ಬಳೆ!
ತರಹವಾರಿ ಬಳೆ |
ಗಾಜುಬಳೆ !
ಕೋಡುಬಳೆ!
ಬಳೇ ಬೇಕೆ ಬಳೆ!
ಬರೆದವರು: ಜಿ. ಪಿ. ರಾಜರತ್ನಂ
ಬೊಬ್ಬೊಭೋಂ ಬೊಮ್ಮ
ಬಂತೊಂದು ಗುಮ್ಮ
ಶೀತ ಅದರೆ ಕೆಮ್ಮ
ಹುಟ್ಟಿಸಿದನು ಬೊಮ್ಮ
ನೀನು ನನ್ನ ತಮ್ಮ
ಕೇಳುವರಿಲ್ಲ ನಮ್ಮ
ಲಾಗ ಹೊಡಿಯೊ ತಿಮ್ಮ
ಬೊಬ್ಬೊಭೋಂ ಬೊಮ್ಮ.
ಬರೆದವರು: ಶಿವರಾಮ ಕಾರಂತ
ಬರೆದವರು: ಶಿವರಾಮ ಕಾರಂತ
ಹಣ್ಣು | ಹಣ್ಣು ! ಮಾವಿನ ಹಣ್ಣು [
ಮಕ್ಕಳ ಬಾಯಿಗೆ ಬಾಳೇ ಹಣ್ಮು !
ಹೆತ್ತವರ ಜಾಯಿಗೆ ಹಲಸಿನ ಹಣ್ಣು [
ಮುದುಕರ ಬಾಯಿಗೆ ಹಾಗಲ ಹಣ್ಣು [
ಕಣ್ಣು ಮುಚ್ಚು!
ಬಾಯಿ ಬಿಚ್ಚು !
ಅಕ್ಕಿ ನುಚ್ಚು!
ನೀ ಬರಿ ಹುಚ್ಚು |
ಹಾಲಿಗೊಂದು ಕಾಸು
ಮೊಸರಿಗೊಂದು ಕಾಸು
ಬೆಣ್ಣಿ ಗೊಂದು ಕಾಸು
ತುಪ್ಪಕ್ಕೊಂದು ಕಾಸು
ಚಿಕ್ಕಪ್ಪ ಕೊಟ್ಟ ಕಾಸು
ಪುಕಸಟ್ಟೆ ಹೋಯು,
ಮಾವಯ್ಯ ಕೊಟ್ಟ ಕಾಸು
ಮಾಯವಾಗೆ ಹೋಯ್ತು.
ತಾರಕ್ಕ ಬಿಂದಿಗೆ
ನೀರಿಗೆ ಹೋಗುವ
ತಾರೇ ಬಿಂದಿಗೆಯ
ಬಿಂದಿಗೆ ಒಡೆದರೆ
ಒಂದೇ ಕಾಸು
ತಾರೇ ಬಿಂದಿಗೆಯ.
ಜಿ. ಪಿ. ರಾಜರತ್ನಂ ಅವರ ಕಂದನ ಕಾವ್ಯಮಾಲೆಯಿಂದ