ಒಮ್ಮೆ ಒಬ್ಬ ರಾಜ , ಒಬ್ಬಳು ರಾಣಿ ವಾಸಿಸುತ್ತಿದ್ದರು . ಅವರಿಗೆ ತುಂಬ ಕಾಲ ಮಕ್ಕಳೇ 
ಆಗಲಿಲ್ಲ . ಆದರೆ ವಯಸ್ಸಾದಾಗ ಅವರಿಗೆ ಒಬ್ಬ ಮಗ ಹುಟ್ಟಿದ. ಅದರಿಂದ ಅವರಿಗೆ ತುಂಬ 
ಸಂತೋಷವಾಯಿತು. ಮಗ ಬೆಳೆದು ದೊಡ್ಡವನಾದ. ಅವನಿಗೆ ಮದುವೆ ಮಾಡಬೇಕೆಂದು 
ನಿರ್ಧರಿಸಿದರು . ಆದರೆ ಮಗ ಹೇಳಿದ: 

“ ನನಗೊಂದು ಕುದುರೆ ಬಳುವಳಿಯಾಗಿ ಕೊಡಿ. ಅದು ಬೆಂಕಿ ತಿನ್ನುವಂಥದಾಗಿರಬೇಕು, 
ಉರಿ ಕುಡಿಯುವಂಥದಾಗಿರಬೇಕು. ಅದು ಓಡಿದಾಗ ನೆಲ ನಡುಗಬೇಕು, ಗುಡುಗು ಮೊಳಗ 
ಬೇಕು, ಓಕ್ ಮರಗಳ ಎಲೆಗಳೆಲ್ಲ ಉದುರಬೇಕು. ಅಂಥ ಕುದುರೆ ಕೊಟ್ಟರಷ್ಟೆ ನಾನು ಮದು 
ವೆಗೆ ಒಪ್ಪೋದು.” 
- ರಾಜ ತನ್ನ ರಾಜ್ಯದಲ್ಲಿದ್ದ ಅತ್ಯುತ್ತಮರಾದ ಅತ್ಯಂತ ಧೈರ್ಯಶಾಲಿಗಳಾದ ಯೋಧರ 
ನ್ನೆಲ್ಲ ಕರೆದು, ಅವರು ಎಂದಾದರೂ ಅಂತಹ ಕುದುರೆ ಕಂಡಿದ್ದರೆ ಅಥವಾ ಅಂತಹ ಕುದುರೆಯ 
ವಿಷಯ ಕೇಳಿದ್ದರೆ , ಎಂದು ವಿಚಾರಿಸಿದ. ಅವರೆಲ್ಲ “ಇಲ್ಲ” ಎಂದೇ ಹೇಳಿದರು . ಆಮೇಲೆ ರಾಜ 
ತನ್ನ ರಾಜ್ಯದ ಮೂಲೆಮೂಲೆಗಳಿಗೂ ಸಂದೇಶ ಕಳುಹಿಸಿದ. ಅಂತಹ ಕುದುರೆಯ ವಿಷಯವನ್ನು 
ಎಂದಾದರೂ ಕೇಳಿದಂಥ ಅಥವಾ ತಾನು ಪತ್ತೆಹಚ್ಚಬಲ್ಲ ಎಂದು ಭಾವಿಸಿದಂಥ ಯಾರೇ ಆಗಲಿ 
ತಕ್ಷಣವೇ ಅರಮನೆಗೆ ಬರಬೇಕೆಂದು ಡಂಗುರ ಹೊಡೆಸಿದ. 

ಸಂದೇಶ ದೂರದೂರ ಹಳ್ಳಿಗಳಿಗೂ ತಲುಪಿತು . ರೈತರೂ ಈ ಸಂದೇಶ ಓದಿದರು . ಅವ 
ರಲ್ಲೊಬ್ಬ ಅನಂತರ ಈ ವಿಷಯವನ್ನು ತನ್ನ ಹೆಂಡತಿಗೆ ಹೇಳಿದ. 
“ 

ನೋಡಿದೆಯಾ ! ಅಂಥ ಕುದುರೆ ಎಲ್ಲಿದೆ ಅನ್ನೋದು ಗೊತ್ತಿದೆ ಅಂತ ಹೇಳಿದರೆ ಸಾಕು , 
ಅರಮನೆಗೆ ಹೋಗಿ ರಾಜನನ್ನು ಕಾಣಬಹುದಲ್ಲ ! ” ಎಂದವನು ಹೇಳಿದ. 

ಈ ರೈತನಿಗೆ ಇವಾನ್ ಎಂಬ ಹೆಸರಿನ ಒಬ್ಬ ಮಗನಿದ್ದ. ಅವನು ಹೇಳಿದ : 
“ ನನಗೆ ಗೊತ್ತು ಅಂಥ ಕುದುರೆ ಎಲ್ಲಿದೆ ಅಂತ ! ” 

“ ಹುಚ್ಚು ಮಾತನಾಡಬೇಡ! ” ತಂದೆ ಹೇಳಿದ , “ಗೇಟಿನಿಂದ ಹೊರಗೆ ಹೋದರೆ ಸಾಕು 
ನೆರೆಯವರ ಮಕ್ಕಳೂ ನಿನ್ನನ್ನು ಚೆನ್ನಾಗಿ ಚಚ್ಚಿ ಹಾಕ್ತಾರೆ. ನೀನಿಲ್ಲಿ ಅಂಥ ಕುದುರೆಯ ಬಗ್ಗೆ 
ಹರಟುತ್ತೀಯಲ್ಲ ! ” 

ಆದರೆ ಇವಾನ್ ಸುಮ್ಮನಿರದಾದ. ಮತ್ತೆ ಹೇಳಿದ: “ಹೊರಗೆ , ಅಂಗಳಕ್ಕೆ , ಬಾ , ಅಪ್ಪ . 
ನಾನು ನಿನಗೆ ಒಂದು ವಿಷಯ ತೋರಿಸಬೇಕು ! ” 

ಅವರು ಹೊರಗೆ ಹೋದರು . ಮಗ ಓಕ್ ಮರವೊಂದನ್ನು ಹಿಡಿದು ಒಂದೇ ಕೈಯಿಂದ 
ಅದನ್ನು ನೆಲಕ್ಕೆ ತಾಗುವಂತೆ ಬಾಗಿಸಿದ. ಅದನ್ನು ಕಂಡು ತಂದೆ ಅಂಜಿಕೆಯಿಂದ ಬಿಳಿಚಿಕೊಂಡು 
ನಿಂತ. ಅವನ ಕಣ್ಣುಗುಡ್ಡೆಗಳು ಹೊರಕ್ಕೆ ಕಿತ್ತು ಬರುವಂತೆ ಕಂಡುಬಂದವು. 

“ ಈಗ ನಿನ್ನ ಮಾತನ್ನು ನಾನು ನಂಬುತ್ತೇನೆ, ಮಗು !” ಅವನೆಂದ. 

ಅವರು ಜಿಲ್ಲಾ ಮುಖ್ಯಾಧಿಕಾರಿಗಳ ಬಳಿಗೆ ಹೋದರು . ತಂದೆ ಇವಾನ್‌ನನ್ನು ಹೊರಗೆ 
ಅಂಗಳದಲ್ಲೇ ಬಿಟ್ಟು ತಾನೊಬ್ಬನೇ ಒಳ ಹೋದ. 
“ ನನ್ನ ಮಗ ರಾಜನಿಗೆ ಬೇಕಾದಂಥ ಕುದುರೆಯನ್ನು ತಂದು ಕೊಡಬಲ್ಲ” ಅವನೆಂದ . 

ಇದನ್ನು ಕೇಳಿ ಅವರೆಲ್ಲ ಅವನನ್ನು ಬಯ್ಯ ತೊಡಗಿದರು . ಇಂಥ ಸುಳ್ಳು ವದಂತಿಗಳನ್ನು 
ಹರಡುತ್ತಿರುವುದಕ್ಕಾಗಿ ರೈತನನ್ನೂ ಅವನ ಮಗನನ್ನೂ ಜೈಲಿಗೆ ದಬ್ಬಬೇಕಷ್ಟೆ , ಎಂದವರು 
ಹೇಳಿದರು . 

“ ನಿನ್ನ ಮಗ ಒಬ್ಬ ಮೂರ್ಖ ಬಡಾಯಿಕೋರ!” ಅವರು ಕೂಗಿ ಹೇಳಿದರು . 
“ ಅವನು ಗೇಟಿನಿಂದ ಹೊರಗೆ ಬಂದರೆ ಸಾಕು ನೆರೆಯ ಮಕ್ಕಳೇ ಅವನನ್ನು ಚಚ್ಚಿ ಹಾಕು 
ತಾರೆ ! ” 

ಅಪ್ಪನನ್ನೂ ಮಗನನ್ನೂ ಜೈಲಿಗೆ ದಬ್ಬಲಾಯಿತು. ಕೊನೆಗೆ ಜಿಲ್ಲಾ ಮುಖ್ಯಾಧಿಕಾರಿಗಳು 
ಪುನರಾಲೋಚಿಸಿ, ಹೇಳಿದರು : “ ಅವನು ರಾಜನಿಗೆ ಸುಳ್ಳು ಹೇಳಿದರೆ ನಮಗೇನಂತೆ ? ಶಿಕ್ಷೆಗೆ 
ಗುರಿಯಾಗುವವನು ಅವನಷ್ಟೆ , ನಾವಲ್ಲ !” 

ಅವರು ಅಪ್ಪನನ್ನೂ ಮಗನನ್ನೂ ಬಿಟ್ಟು ಬಿಟ್ಟರು, ತಾವೇ ರಾಜನಿಗೆ ಸಂದೇಶ ಕಳುಹಿಸಿ 
ದರು . ರಾಜ ಸಂದೇಶ ಓದಿದ. ತನ್ನ ಅತ್ಯುತ್ತಮ ಯೋಧರೂ ಮಾಡಲಾಗದುದನ್ನು ಸಾಮಾನ್ಯ 
ರೈತನೊಬ್ಬನ ಮಗ ಮಾಡಬಲ್ಲನೇ ಎಂದು ನಂಬಲಾಗದಾದರೂ ಅವನು ಆ ರೈತನ ಮಗನನ್ನು 
ಕರೆದು ವಿಚಾರಿಸಲು ನಿರ್ಧರಿಸಿದ. 

ರಾಜನ ಸೇವಕರು ಇವಾನ್‌ನನ್ನು ಅರಮನೆಗೆ ಕರೆತಂದರೋ ಇಲ್ಲವೋ ಕೂಡಲೇ ಅವ 
ನನ್ನು ರಾಜನ ಮುಂದೆ ಹಾಜರು ಪಡಿಸಲಾಯಿತು. 

“ನೀನು ನಿಜಕ್ಕೂ ನನಗೆ ಬೇಕಾದ ಕುದುರೆಯನ್ನು ತಂದು ಕೊಡಬಲ್ಲೆಯಾ? ” ರಾಜ ಕೇಳಿದ. 
“ ತಂದು ಕೊಡಬಲ್ಲೆ ! ” ಇವಾನ್ ಉತ್ತರಿಸಿದ. 
“ನಿನ್ನ ಕೆಲಸ ಸುಲಭವಾಗುವಂತೆ ನಾವೇನಾದರೂ ಮಾಡುವುದಿದೆಯೆ ? ” 
“ ಏನಿಲ್ಲ. ನನಗೊಂದು ಒಳ್ಳೆಯ ಕುದುರೆ, ಒಂದು ಭಾರಿ ಬಡಿಗೆ ಕೊಡಿ, ಸಾಕು.” 

ರಾಜನು ತನ್ನ ಪ್ರಧಾನ ಅಶ್ವಪಾಲನಿಗೆ ಒಂದು ಚೀಟಿ ಬರೆದು ಅದನ್ನು ಇವಾನ್‌ನಿಗೆಕೊಟ್ಟು 
ಹೇಳಿದ: “ ಈ ಚೀಟಿಯನ್ನು ನನ್ನ ಅಶ್ವಪಾಲನಿಗೆ ಕೊಡು. ಅವನು ನಿನಗೆ ಒಂದು ಒಳ್ಳೆಯ 
ಕುದುರೆಯನ್ನು ಹುಡುಕಿ ಕೊಡುತ್ತಾನೆ. ” 

ಇವಾನ್ ಅಶ್ವಪಾಲನನ್ನು ಕಂಡು ರಾಜನ ಚೀಟಿಯನ್ನು ಅವನ ಕೈಗಿತ್ತ . ಅವನು ಅದನ್ನು 
ಓದಿದನಂತರ ಹೇಳಿದ: 

“ ತಾಳು . ನಾನು ನನ್ನ ಕುದುರೆಗಳನ್ನೆಲ್ಲ ನೀರಿಗೆ ಒಯ್ಯುತ್ತೇನೆ. ಆಗ ನೀನೇ ಅವುಗಳಲ್ಲಿ 
ಅತ್ಯುತ್ತಮವಾದುದನ್ನು ಆರಿಸಿಕೋ .” 

ಅಶ್ವಪಾಲ ಕುದುರೆಗಳನ್ನು ನೀರಿಗೆ ಕರೆದೊಯ್ದ . ಇವಾನ್ ಅವುಗಳನ್ನು ಪರೀಕ್ಷಿಸ ತೊಡ 
ಗಿದ. ಅವನು ಕುದುರೆಯೊಂದರ ಬಾಲವನ್ನೊ ಕೇಸರವನ್ನೂ ಹಿಡಿದ ಕೂಡಲೇ ಅವು ಅವನ 
ಕೈಗೆ ಕಿತ್ತು ಬರುತ್ತಿದ್ದವು. ಹೀಗೆ ಅವನು ಇಪ್ಪತ್ತು ಚರ್ಮಗಳನ್ನು ಸುಲಿದ, ಆದರೆ ಕುದುರೆಯನ್ನು 
ಆರಿಸಿಕೊಳ್ಳಲಿಲ್ಲ. 

ಮನೆಗೆ ಹಿಂದಿರುಗಲು ನಿರ್ಧರಿಸಿದ. ಮಾರ್ಗ ಮಧ್ಯದಲ್ಲಿ ಅವನು ಒಂದು ಬಡಕಲು ಗುಡಿ 
ಸಿಲನ್ನು ಕಂಡ. ಅದರ ಚಾವಣಿಯೆಲ್ಲ ತೂತುಗಳಿಂದ ತುಂಬಿತ್ತು . ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ 
ಕಪ್ಪು ಮೋಡಗಳು ಕಾಣಿಸಿಕೊಂಡವು. ಮಳೆ ಹುಯ್ಯುವಂತೆ ಕಂಡುಬಂದಿತು. ಗುಡಿಸಿಲಿನ ಪಕ್ಕ 
ದಲ್ಲಿ ಕುಳಿತಿದ್ದ ಮುದುಕಿ ಅವನನ್ನು ಕಂಡು ಕೇಳುತ್ತಾಳೆ: 

“ ಹುಡುಗ ! ಈ ಮುದುಕಿಗೆ ಒಂದಿಷ್ಟು ಸಹಾಯ ಮಾಡಪ್ಪ , ಯಾರೂ ನನ್ನ ವಿಷಯ 
ಯೋಚಿಸುತ್ತಲೇ ಇಲ್ಲ. ಮಳೆ ಬಂದರೆ ನೀರೆಲ್ಲ ನನ್ನ ಮನೆಯೊಳಗೇ ಸುರಿಯುತ್ತೆ .” 

ಇವಾನ್ ತನ್ನ ಬಳಿ ಇದ್ದ ಕುದುರೆಯ ಚರ್ಮಗಳನ್ನೆಲ್ಲ ಗುಡಿಸಿಲಿನ ಚಾವಣಿಯ ಮೇಲೆ 
ಹೊದಿಸಿ ಮಳೆಯ ನೀರು ಒಳಕ್ಕೆ ಸುರಿಯದಂತೆ ಮಾಡಿದ. ಮುದುಕಿ ಅವನಿಗೆ ತುಂಬ ಉಪಕಾರ 
ಹೇಳಿದಳು . ಇವಾನ್ ಅವಳಿಗೆ ಶುಭ ಕೋರಿ ಮುಂದುವರಿದ. 

ಅವನು ಅರಮನೆಗೆ ಬಂದ. ರಾಜನನ್ನು ಸಂಧಿಸಿದ. ಅವನಿಗೆ ಬೇಕಾದಂಥ ಕುದುರೆ ಸಿಗದಿದ್ದ 
ವಿಷಯ ಕೇಳಿ ರಾಜ ಆಶ್ಚರ್ಯಗೊಂಡ. 

“ರೈತನ ಮಗ ಇವಾನ್ ! ನನ್ನ ಕುದುರೆಲಾಯಕ್ಕೆ ಹೋಗಿನೋಡು. ಬಹುಶಃ ಅಲ್ಲಿ ನೀನು 
ನಿನಗೆ ಇಷ್ಟವಾದಂಥ ಕುದುರೆ ಕಂಡುಕೊಳ್ಳಬಹುದು ! ” ಅವನೆಂದ. 

ಇವಾನ್ ರಾಜನ ಕುದುರೆಲಾಯಕ್ಕೆ ಹೋದ. ಅವನು ಕುದುರೆಯೊಂದನ್ನು ಮುಟ್ಟಿದರೆ 
ಸಾಕು ಅದು ನೆಲಕ್ಕೆ ಕುಸಿದು ಬೀಳುತ್ತಿತ್ತು . ಹಾಗಾಗಿ ಅಲ್ಲಿ ಕೂಡ ಬೇಕಾದಂಥ ಕುದುರೆ ಸಿಗಲಿಲ್ಲ . 

ರಾತ್ರಿಯಾಯಿತು. ಇವಾನ್ ಬೆಂಗಾಡಿಗೆ ಹೋಗಿ ಗಟ್ಟಿಯಾಗಿ ಶಿಳ್ಳೆ ಹಾಕಿದ. ಕೂಡಲೇ 
ಎಲ್ಲಿಂದಲೋ ಒಂದು ಕುದುರೆ ಅವನತ್ತ ಓಡಿಕೊಂಡು ಬಂದಿತು. 

“ನೀವು ನನ್ನನ್ನು ಕರೆದಿರಾ , ಒಡೆಯ ? ” ಅದು ಕೇಳಿತು . 
“ ಹೌದು. ನಾವು ನಮ್ಮ ದಾರಿ ಹಿಡಿದು ಹೋಗುವ ಸಮಯ ಬಂದಿದೆ. ” 
“ನೀವು ಸಿದ್ದವಾಗಿದ್ದರೆ ನಾನೂ ಸಿದ್ದ ! ” 

ಇವಾನ್ ಆ ಕುದುರೆಯನ್ನು ರಾಜನ ಕುದುರೆಲಾಯಕ್ಕೆ ಕರೆದೊಯ್ದ . ಆ ಕುದುರೆ ಎಷ್ಟು 
ದೊಡ್ಡದಾಗಿದ್ದಿತೆಂದರೆ ಲಾಯದ ಎಲ್ಲ ಗೋಡೆಗಳೂ ಮುರಿದು ಬಿದ್ದವು. ಆದರೂ ಅವನು 
ಹೇಗೋ ಅಂತೂ ಅದನ್ನು ಒಳಗೆ ಕರೆದೊಯ್ದು ಗೂಟಕ್ಕೆ ಕಟ್ಟಿದ. ಅದಕ್ಕೆ ಬಿಳಿಯ ಅತ್ಯುತ್ತ 
ಮವಾದ ಗೋಧಿಯನ್ನು ತಿನ್ನಲು ಕೊಟ್ಟು, ತಾನೇ ಮಲಗಲು ಹೋದ. 

ರಾಜನು ಬೆಳಿಗ್ಗೆ ಬೇಗನೆಯೇ ಎದ್ದು ಇವಾನ್‌ನು ಏನಾದರೂ ಕುದುರೆಯನ್ನು 
ಕಂಡನೇ ಎಂಬುದನ್ನು ತಿಳಿಯುವಂತೆ ಆಜ್ಞಾಪಿಸಿದ. 

ಇವಾನ್ ಹೇಳಿದ : “ ನನ್ನ ಬಳಿ ಆಗಲೇ ಒಂದು ಕುದುರೆ ಇದೆ. ಅದನ್ನು ಲಾಯದಲ್ಲಿ ಕಟ್ಟಿ 
ಹಾಕಿದ್ದೇನೆ... ” 

ಅವರು ಲಾಯಕ್ಕೆ ಹೋಗಿನೋಡಿದರು . ರಾಜನು ಆ ಕುದುರೆಯನ್ನು ಕಂಡು ದಿಗಿಲು 
ಗೊಂಡ. ಅವನು ಹಿಂದೆಂದೂ ಅಂಥ ಭಾರಿ ಕುದುರೆಯನ್ನು ಕಂಡಿರಲಿಲ್ಲ. 

“ ಈಗ ನನಗೆ ಒಂದು ದೊಡ್ಡ ಬಡಿಗೆ ಬೇಕಾಗಿದೆ. ಅದು ಎಷ್ಟು ದೊಡ್ಡದಾಗಿರಬೇಕೆಂದರೆ 
ಅದನ್ನು ಕಾಡಿನಿಂದ ಎಳೆದು ತರಲು ಎರಡು ಜೊತೆ ಎತ್ತುಗಳು ಬೇಕಾಗುತ್ತವೆ ಎಂದು ಇವಾನ್ 
ಹೇಳಿದ. 


ಬಡಿಗೆಯನ್ನು ತರಿಸಿ ಕೊಡಲಾಯಿತು. ಅವನು ಅದನ್ನು ಆಕಾಶಕ್ಕೆ ಎಸೆದು, ತಾನೇ ಮಲ 
ಗಲು ಹೋದ. ಅವನು ಒಂದು ಹಗಲು ಒಂದು ರಾತ್ರಿ ಮಲಗಿದ. ಆಮೇಲೆ ಇನ್ನೊಂದು ದಿನ 
ಮಲಗಿದ. ಅವನು ಎದ್ದಾಗ ಬಡಿಗೆ ಅವನವೇ ಹಾರಿ ಬರುತ್ತಿದ್ದುದನ್ನು ಕಂಡ. ಹಾರಿ ಬರುತ್ತ 
ಅದು ಸುಯೊಂದು ಶಬ್ದ ಮಾಡುತ್ತಿತ್ತು . ಅವನು ತನ್ನ ಕಿರುಬೆರಳನ್ನು ಎತ್ತಿಹಿಡಿದ. ಬಡಿಗೆ 
ಕಿರುಬೆರಳಿಗೆ ಬಡಿದು ಚೂರುಚೂರಾಗಿ ಬಿದ್ದಿತು . 

“ ಇದು ಅಷ್ಟು ಒಳ್ಳೆಯ ಬಡಿಗೆಯಲ್ಲ !” ಇವಾನ್ ಎಂದ. “ ನನಗೆ ಇನ್ನೊಂದು ಮಾಡಿ 
ಕೊಡಿ. ಅದು ಎಷ್ಟು ದೊಡ್ಡದಾಗಿರಬೇಕೆಂದರೆ, ಅದನ್ನು ಕಾಡಿನಿಂದ ಎಳೆದು ತರಲು ನಾಲ್ಕು 
ಜೊತೆ ಎತ್ತುಗಳು ಬೇಕಾಗುತ್ತವೆ. ” 

ಅಂತೆಯೇ ಅವರು ಒಂದು ನೂರು ವರ್ಷದ ದೊಡ್ಡ ಓಕ್ ಮರವನ್ನು ಕಡಿದು ಅದರಿಂದ 
ಬಡಿಗೆ ಮಾಡಿದರು . ಅದನ್ನು ಕಾಡಿನಿಂದ ನಾಲ್ಕು ಜೊತೆ ಎತ್ತುಗಳು ಎಳೆದು ತಂದವು. ಇವಾನ್ 
ಅದನ್ನೂ ಆಕಾಶಕ್ಕೆ ಎಸೆದು ತಾನೇ ಮಲಗಲು ಹೋದ. ಅವನು ಮೂರು ಹಗಲು ಮೂರು 
ರಾತ್ರಿ ಮಲಗಿದ. ಎದ್ದಾಗ ಬಡಿಗೆ ತನ್ನತ್ಯವೇ ಹಾರಿಕೊಂಡು ಬರುತ್ತಿದ್ದುದನ್ನು ಕಂಡ. ಹಾರಿ 
ಬಂದಂತೆ ಅದು ಸುಯೊಂದು ಶಬ್ದ ಮಾಡುತ್ತಿತ್ತು . ಅವನು ತನ್ನ ಒಂದು ಮಧ್ಯಬೆರಳನ್ನು 
ಎತ್ತಿ ಹಿಡಿದ. ಬಡಿಗೆ ಬೆರಳಿಗೆ ಬಡಿದು ಕೆಳಕ್ಕೆ ಬಿದ್ದಿತು . ಬಿದ ಭಾರಕ್ಕೆ ಅದು ನೆಲದಲ್ಲಿ ಐದು ಅಡಿ 
ಆಳಕ್ಕೆ ಹೂತುಕೊಂಡಿತು. 

“ ಇದೀಗ ಸರಿಯಾದ ಬಡಿಗೆ ” ಎಂದ ಇವಾನ್ . 

ಅವನು ಪ್ರಯಾಣ ಹೊರಡಲು ಸಿದ್ಧನಾದ. ರಾಜ ಅವನಿಗೆ ಹೇಳಿದ: “ ಅಂಥ ಕುದುರೆ 
ಯನ್ನು ತಂದು ಕೊಟ್ಟರೆ ನಾನು ನಿನಗೆ ಕೇಳಿದುದನ್ನು ಕೊಡುವೆ. ನಿನಗೆ ಮಾತು ಕೊಡುವೆ - 
ನಾನೆಂದೂ ನಿನಗೆ ಹಾನಿ ಮಾಡುವುದಿಲ್ಲ. ” 

ಇವಾನ್ ಕುದುರೆ ಹತ್ತಿ ಹೊರಟ. ಆದರೂ ರಾಜನಿಗೆ ರೈತನ ಮಗನೊಬ್ಬ ಅಂಥ ಮಹ 
ತ್ಯಾರ್ಯ ಎಸಗಬಲ್ಲನೆ ಎಂಬ ಸಂದೇಹ ಇದ್ದೇ ಇದ್ದಿತು . ಆದ್ದರಿಂದ ಅವನು ತನ್ನ ಇಬ್ಬರು ಭೀಮ 
ಕಾಯದ ಯೋಧರನ್ನು ಇವಾನ್‌ನ ಹಿಂದೆಯೇ ಹೋಗುವಂತೆ ಹೇಳಿ ಕಳುಹಿಸಿ ಕೊಟ್ಟ. ಅವರಿ 
ಬ್ಬರೂ ಕುಲೀನರಾಗಿದ್ದರು . 
- “ ಆ ರೈತನ ಮಗ ಇವಾನ್‌ನ ಸಮಸಮಕ್ಕೆ ಹೋಗುತ್ತಿರಿ. ಅವನು ಎಲ್ಲಿಗೆ ಹೋದರೆ ನೀವೂ 
ಅಲ್ಲಿಗೇ ಹೋಗಿ” ಎಂದವನು ಆಜ್ಞಾಪಿಸಿದ. 

ತನ್ನ ಕೆಳಗೆ ಭೂಮಿ ಕಂಪಿಸುತ್ತಿದ್ದುದನ್ನು ಕೇಳಿದ ಇವಾನ್ ತನ್ನಲ್ಲೇ ಹೇಳಿಕೊಂಡ : 
“ ನನ್ನ ಹಿಂದೆ ಡೇಗನೆ ಅಥವಾ ಯಾರೋ ಭೀಮಕಾಯರು ಹಿಂಬಾಲಿಸಿಕೊಂಡು ಬರು 
ತಿರಬೇಕು .” 

ರಾಜನ ಇಬ್ಬರು ಯೋಧರೂ ಇವಾನ್‌ನ ಬಳಿ ಬಂದರು . ಅವನಿಗೆ ಶುಭಾಶಯ ಹೇಳಿದರು. 
“ ಯಾರು ನೀವು? ” ಎಂದು ಇವಾನ್ ಅವರನ್ನು ಕೇಳಿದ. 

“ರಾಜ ನಮ್ಮನ್ನು ಕಳುಹಿಸಿದ್ದಾನೆ. ನೀನು ಹೋದೆಡೆಯಲ್ಲೆಲ್ಲ ನಾವೂ ಹೋಗಬೇಕೆಂದು 
ಆಜ್ಞಾಪಿಸಿದ್ದಾನೆ ” ಅವರೆಂದರು . 

“ ಸರಿ . ಆದರೆ ಒಂದು ವಿಷಯ . ನಮ್ಮ ಮಧ್ಯೆ ಶಿಸ್ತು ಇರಬೇಕಾದರೆ ನಮ್ಮಿ ಬ್ಬರು 
ನಾಯಕರಾಗಿರಬೇಕು, ಉಳಿದವರು ಅವನು ಹೇಳಿದ ಹಾಗೆ ಕೇಳಬೇಕು ” ಇವಾನ್ ಎಂದ. 

“ ಹಾಗಾದರೆ ನಾನು ನಾಯಕನಾಗುತ್ತೇನೆ! ” ಮೊದಲನೆಯ ಯೋಧ ಹೇಳಿದ. “ ಇಲ್ಲ. 
ನಾನು ಆಗುತ್ತೇನೆ! ” ಎರಡನೆಯವನೆಂದ. 

ಆದರೆ ರೈತನ ಮಗ ಇವಾನ್ ಹೇಳಿದ : “ ಇಲ್ಲ, ಮಿತ್ರರೇ , ಜಗಳ ಮಾಡಿ ಪ್ರಯೋಜನ 
ವಿಲ್ಲ . ಇದನ್ನು ಹೀಗೆ ತೀರ್ಮಾನಿಸೋಣ. ನಮ್ಮಲ್ಲಿ ಒಬ್ಬೊಬ್ಬರೂ ಸರದಿಯಲ್ಲಿ ನಮ್ಮ ಬಡಿಗೆ 
ಗಳನ್ನು ಎಸೆಯೋಣ. ಯಾರು ಹೆಚ್ಚು ದೂರ ಎಸೆಯುತ್ತಾರೋ ಅವರು ನಾಯಕರಾಗೋಣ. 
ಏನಂತೀರ ? ” 

ಇದಕ್ಕೆ ಅವರು ಒಪ್ಪಿಕೊಂಡರು . ಅವರಲ್ಲೊಬ್ಬ ಮುಂದೆ ಬಂದು ತನ್ನ ಬಡಿಗೆಯನ್ನು 
ಜೋರಾಗಿ ಎಸೆದ. ಅದು ಕಣ್ಣಿಗೆ ಕಾಣದಷ್ಟು ದೂರ ಹೋಗಿ ಬಿದ್ದಿತು . ಅವರು ಒಂದು ದಿನ, 
ಎರಡು ದಿನ ಪ್ರಯಾಣ ಮಾಡಿಕೊಂಡು ಹೋಗುತ್ತಾರೆ - ಬಡಿಗೆ ಇಲ್ಲ... ಮೂರನೆಯ ದಿನ 
ನೋಡುತ್ತಾರೆ - ಅದು ದಾರಿಯಲ್ಲಿ ಬಿದ್ದಿದೆ. 

ಆಮೇಲೆ ಎರಡನೆಯವ ತನ್ನ ಬಡಿಗೆಯನ್ನು ಬೀಸಿ ಎಸೆದ . ಅವರು ಒಂದು ದಿನ, ಎರಡು 
ದಿನ, ಮೂರು ದಿನ ಪ್ರಯಾಣ ಮಾಡಿಕೊಂಡು ಹೋದರು . ಆದರೂ ಅದು ಕಾಣಬರಲಿಲ್ಲ. 
ಒಂದು ಇಡೀ ವಾರ ಪ್ರಯಾಣ ಮಾಡಿದನಂತರವಷ್ಟೆ ಅದು ಕಾಣಬಂದಿತು . 

ಈಗ ರೈತನ ಮಗ ಇವಾನ್‌ನ ಸರದಿ . ಅವನು ತನ್ನ ಬಡಿಗೆಯನ್ನು ಎಸೆದ . ಅನಂತರ 
ಮೂವರೂ ಅದನ್ನು ಹುಡುಕಿಕೊಂಡು ಪ್ರಯಾಣ ಹೊರಟರು . ಒಂದು ವಾರ ಹೋದರು , 
ಎರಡು ವಾರ ಹೋದರು, ಮೂರು ವಾರ ಹೋದರು . ಆದರೂ ಅದು ಕಾಣಬರಲೇ ಇಲ್ಲ . 

“ನಮ್ಮ ಕಣ್ಣು ತಪ್ಪು ಹೋಗಿರಬೇಕು. ಎಲ್ಲೋ ದಾಟಿ ಬಿಟ್ಟೆವೋ ಏನೋ ” ಎಂದು ಆ 
ಇಬ್ಬರು ಯೋಧರೂ ಹೇಳಿದರು . “ ಇಲ್ಲ, ಇಲ್ಲ !” ಇವಾನ್ ಎಂದ. “ ಯಾರೋ ಅದನ್ನು ಕಂಡು 
ತೆಗೆದುಕೊಂಡು ಹೋಗಿರಬೇಕು.” 

ಅವರು ಪ್ರಯಾಣ ಮಾಡಿಕೊಂಡು ಹೋದರು . ಮತ್ತೊಂದು ವಾರ ಹೋಗಿರಬೇಕು, 
ಆಗ ಅವರಿಗೆ ಒಂದು ದೊಡ್ಡ ಮನೆ ಕಾಣಬಂದಿತು . ಅದರ ಸುತ್ತ ತಾವದ ಬೇಲಿ ಇತ್ತು . 
ಆ ಮನೆಯ ಬಳಿಗೆ ಒಂದು ತಾಮ್ರದಸೇತುವೆ ದಾಟಿ ಹೋಗಬೇಕಿತ್ತು . ಇವರು ಒಳಗೆ ಹೋಗಿ 
ನೋಡುತ್ತಾರೆ - ಅಕೋ , ಅಲ್ಲಿದೆ ಇವಾನ್‌ನ ಬಡಿಗೆ ! ಅದು ಮನೆಯ ಪಕ್ಕದಲ್ಲಿ ನೆಲದ ಮೇಲೆ 
ಬಿದ್ದಿದೆ. ಅದು ಸುತ್ತ ಇದ್ದ ತಾಮ್ರದ ಬೇಲಿಯ ಮೇಲೆ ಹಾರಿ ಬಂದು ಕೆಳಗೆ ಬೀಳುವಾಗ ಮನೆಯ 
ಒಂದು ಮೂಲೆಯನ್ನು ಮುರಿದಿದ್ದಿತು . 

ಈ ಮನೆ ಡೇಗನ್‌ಗಳ ಒಂದು ಕುಟುಂಬಕ್ಕೆ ಸೇರಿದ್ದಿತು . ಅವು ಭಯಂಕರ ಡೇಗನ್‌ಗಳಾ 
ಗಿದ್ದವು. ಆದರೆ ಅವು ಆಗ ಮನೆಯಲ್ಲಿರಲಿಲ್ಲ. ಅವೆಲ್ಲ ಎಲ್ಲಿಯೋ ಯುದ್ಧ ಮಾಡಲು ಹೋಗಿದ್ದವು. 

ಮನೆಯೊಳಗೆ ಯಾರೂ ಇರದಿದ್ದುದನ್ನು ಕಂಡು ಇವಾನ್ ಅಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳಲು 
ನಿರ್ಧರಿಸಿದ. ಅವನು ಒಬ್ಬ ಯೋಧನಿಗೆ ಹೊರಗೆ ತಾಮ್ರದ ಸೇತುವೆಯ ಬಳಿ ಕಾವಲು ನಿಲ್ಲಲು 
ಹೇಳಿದ. ಇನ್ನೊಬ್ಬನಿಗೆ ಕುದುರೆಗಳನ್ನು ಕಾಯುವಂತೆ ಹೇಳಿದ. ತಾನೇ ಒಳಗೆ ಮಲಗಲು ಹೋದ. 

ಸೇತುವೆ ಕಾಯುತ್ತಿದ್ದವ ಸ್ವಲ್ಪ ಹೊತ್ತು ಪಹರೆ ನಡೆಸಿದ. ಆದರೆ ದೀರ್ಘ ಪ್ರಯಾಣದಿಂದ 
ಬಳಲಿದ್ದ ಅವನು ನಂತರ ಮಲಗಿ ಬಿಟ್ಟ . ಮಧ್ಯರಾತ್ರಿಯಲ್ಲಿ ಇವಾನ್‌ಗೆ ಎಚ್ಚರವಾಗಿ ಬಂದು 
ನೋಡುತ್ತಾನೆ - ಸೇತುವೆ ಕಾಯುವವ ಗಾಢ ನಿದ್ರೆಯಲ್ಲಿ ಮುಳುಗಿದ್ದಾನೆ. 

ಆಗ ಇದ್ದಕ್ಕಿದ್ದಂತೆ ಭೂಮಿ ಅದುರಿತು ... ಆರು ತಲೆಗಳ ಒಂದು ಡೇಗನ್ ಕುದುರೆಯ ಮೇಲೆ 
ಸವಾರಿ ಮಾಡಿಕೊಂಡು ಮನೆಯ ಕಡೆಗೆ ಬರುತ್ತಿದ್ದಿತು . ಅದು ತನ್ನ ಕುದುರೆಗೆ ಹೀಗೆ ಹೇಳಿತು : 

“ನಿಶ್ಚಲವಾಗಿ ನಿಲ್ಲು , ಕೆನೆಯಬೇಡ ! ಇಲ್ಲಿ ನಮ್ಮ ಎದುರು ನಿಲ್ಲಬಲ್ಲಂಥವರು ಯಾರೂ 
ಇಲ್ಲ. ರೈತನ ಮಗ ಇವಾನ್‌ನಷ್ಟೆ ನಮ್ಮ ಎದುರು ನಿಲ್ಲಬಲ್ಲ. ಆದರೆ ಅವನಿನ್ನೂ ಬಾಲಕ . ಅಲ್ಲದೆ 
ಇಲ್ಲಿಂದ ತುಂಬ ದೂರದಲ್ಲಿದ್ದಾನೆ, ರಣಹದ್ರೂ ಅಷ್ಟು ದೂರ ಹಾರಿ ಹೋಗಿ ಅವನ ಮಳೆ 
ಗಳನ್ನು ತರಲಾರದು. ” 

“ ಹಾಗೇನು ? ರಣಹದ್ದು ಮಾಡಲಾಗದುದನ್ನು ಕೆಚ್ಚೆದೆಯ ಮನುಷ್ಯ ಮಾಡಬಲ್ಲ ! ” ಎಂದ 
ರೈತನ ಮಗ ಇವಾನ್ . 
- “ ಯಾತಕ್ಕೆ ಬಂದಿದ್ದೀಯ ? ನನ್ನ ಜೊತೆ ಹೋರಾಡಲೋ ಅಥವಾ ಶಾಂತಿ ಮಾಡಿ 
ಕೊಳ್ಳಲೋ ? ” ಡೇಗನ್ ಕೇಳಿತು. 

“ಹೋರಾಡಲು ಬಂದಿದ್ದೇನೆ. ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳುವೆ ಅಂದು 
ಕೊಂಡೆಯಾ ? ” 

“ಸರಿ ಹಾಗಾದರೆ, ನೀನೇ ಮೊದಲ ಪ್ರಹಾರ ನೀಡು.” 
“ ಇಲ್ಲ, ನೀನೇ ನೀಡು. ನೀನಷ್ಟೆ ನಿನ್ನ ಇಡೀ ರಾಜ್ಯದಲ್ಲಿ ಎಲ್ಲರಿಗಿಂತ ಹೆಚ್ಚು ಹಿರಿಯವ! ” 

ಆರು ತಲೆಗಳ ಡೇಗನ್ ಇವಾನ್‌ನ ಮೇಲೆ ಎರಗಿ ಬಂದು ಅವನಿಗೆ ಭಾರಿ ಪ್ರಹಾರ ನೀಡಿತು. 
ಆದರೆ ಇವಾನ್ ನಿಂತ ಸ್ಥಳದಿಂದ ಸ್ವಲ್ಪ ಮಿಸುಕಿದ, ಅಷ್ಟೆ . ಈಗ ಇವಾನ್‌ನ ಸರದಿ. ಅವನು
ತನ್ನ ಬಡಿಗೆಯಿಂದ ಡೇಗನ್‌ನ ಮೇಲೆ ಭಾರಿ ಪ್ರಹಾರ ನೀಡಿದ – ಓಹ್ , ಒಂದೇ ಹೊಡೆತಕ್ಕೆ 
ಡೇಗನ್‌ನ ಆರು ತಲೆಗಳೂ ನೆಲಕ್ಕೆ ಉರುಳಿದವು! 

ಬೆಳಗಾಯಿತು. ಇವಾನ್ ಸೇತುವೆ ಕಾಯುತ್ತಿದವನನ್ನು ಕರೆದು ಅವನು ರಾತ್ರಿಯಲ್ಲಿ ಸೇತುವೆ 
ಯನ್ನು ಎಷ್ಟು ಚೆನ್ನಾಗಿ ಕಾದ, ಎಂದು ಕೇಳಿದ. 

“ ತುಂಬ ಚೆನ್ನಾಗಿಯೇ ಕಾದೆ. ಒಂದು ಹಕ್ಕಿಯ ಹಾದು ಬರಲು ಸಾಧ್ಯವಿರಲಿಲ್ಲ” ಅವ 
ನೆಂದ. 

ಹಗಲು ಕಳೆಯಿತು. ರಾತ್ರಿ ಬಂದಿತು . ರೈತನ ಮಗ ಇವಾನ್ ಮೊದಲ ಯೋಧನನ್ನು ಕುದುರೆ 
ಗಳನ್ನು ಕಾಯಲು ಕಳುಹಿಸಿ ಕುದುರೆಗಳನ್ನು ಕಾಯುತ್ತಿದವನನ್ನು ಸೇತುವೆ ಕಾಯಲು ಕಳು 
ಹಿಸಿಕೊಟ್ಟ . 

ಆ ಎರಡನೆಯವನೂ ನಿದ್ರೆ ಮಾಡಿಬಿಟ್ಟ . ಆದರೆ ಇವಾನ್ ಸಕಾಲದಲ್ಲೇ ಎಚ್ಚೆತ್ತು ತಾನೇ 
ಸೇತುವೆ ಬಳಿ ಕಾಯಲು ಹೋದ. ಆಗ ಇದಕ್ಕಿದಂತೆ ಭೂಮಿ ಅದುರಿತು , ನಡುಗ ತೊಡಗಿತು . 
ಗುಡುಗಿನಂಥ ಶಬ್ದ ಕೇಳಿ ಬಂದಿತು. ಒಂಬತ್ತು ತಲೆಗಳ ಒಂದು ಡೇಗನ್ ಸವಾರಿ ಮಾಡಿಕೊಂಡು 
ಬಂದಿತು. 

“ ನಿಶ್ಚಲವಾಗಿ ನಿಲ್ಲು , ಕೆನೆಯಬೇಡ ” ಎಂದು ತನ್ನ ಕುದುರೆಗೆ ಹೇಳಿತು . “ನಮ್ಮ ಎದುರು 
ನಿಲ್ಲಬಲ್ಲಂಥವರು ಇಲ್ಲಿ ಯಾರೂ ಇಲ್ಲ. ರೈತನ ಮಗ ಇವಾನ್‌ನಷ್ಟೆ ನಮ್ಮ ಎದುರು ನಿಲ್ಲಬಲ್ಲ. 
ಆದರೆ ಅವನಿನ್ನೂ ಬಾಲಕ . ಅಲ್ಲದೆ ಇಲ್ಲಿಂದ ತುಂಬ ದೂರದಲ್ಲಿದ್ದಾನೆ. ರಣಹದ್ರೂ ಅಷ್ಟು 
ದೂರ ಹಾರಿ ಹೋಗಿ ಅವನ ಮೂಳೆಗಳನ್ನು ತರಲಾರದು.” 

“ ಹಾಗೇನು ? ರಣಹದ್ದು ಮಾಡಲಾಗದುದನ್ನು ಕೆಚ್ಚೆದೆಯ ಮನುಷ್ಯ ಮಾಡಬಲ್ಲ ! ” 
ಎಂದ ರೈತನ ಮಗ ಇವಾನ್ , 

- “ ಯಾತಕ್ಕೆ ಬಂದಿದ್ದೀಯ ? ನನ್ನ ಜೊತೆ ಹೋರಾಡಿ ಅಥವಾ ಶಾಂತಿ ಮಾಡಿ 
ಕೊಳ್ಳಲೋ ? ” ಡೇಗನ್ ಕೇಳಿತು. 

“ಹೋರಾಡಲು ಬಂದಿದ್ದೇನೆ. ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳುವೆ ಅಂದು 
ಕೊಂಡೆಯಾ ? ” 

“ ಸರಿ , ಹಾಗಾದರೆ, ನೀನೇ ಮೊದಲ ಪ್ರಹಾರ ನೀಡು ! ” 
“ ಇಲ್ಲ. ನೀನೇ ನೀಡು. ನೀನಷ್ಟೆ ಜಗತ್ತಿನ ಈ ಭಾಗದಲ್ಲಿ ಎಲ್ಲರಿಗಿಂತ ಹೆಚ್ಚು ಹಿರಿಯವ! ” 

ಒಂಬತ್ತು ತಲೆಗಳ ಡೇಗನ್ ಹೆಚ್ಚಿಗೆ ಕಾಯಲಿಲ್ಲ. ಅದು ಇವಾನ್‌ನ ಮೇಲೆ ಎರಗಿ ಬಂದು 
ಎಷ್ಟು ಜೋರಾಗಿ ಪ್ರಹಾರ ನೀಡಿತೆಂದರೆ ಇವಾನ್ ಕಾಲಿನ ಹರಡಿನವರೆಗೆ ನೆಲದೊಳಕ್ಕೆ ಕುಸಿದ. 
ಆದರೂ ಹೋರಾಡಿದ, ಡೇಗನ್‌ಗೆ ಎಂಥ ಪ್ರಹಾರ ಕೊಟ್ಟನೆಂದರೆ , ಒಂದೇ ಏಟಿಗೆ ಅದರ 
ಏಳು ತಲೆಗಳು ಉರುಳಿ ಬಿದ್ದವು. ಇನ್ನೊಂದು ಪ್ರಹಾರಕೊಟ್ಟು ಅವನು ಅದರ ಉಳಿದ ಎರಡು 
ತಲೆಗಳನ್ನೂ ಕೊಚ್ಚಿ ಹಾಕಿದ... ಇವಾನ್ ಮನೆಗೆ ಹಿಂದಿರುಗಿ ಮಲಗಿದ. 
- ಬೆಳಗಾಯಿತು. ಇವಾನ್ ಸೇತುವೆ ಕಾಯುತ್ತಿದ್ದವನನ್ನು ಕರೆದು ಅವನು ರಾತ್ರಿಯಲ್ಲಿ ಹೇಗೆ 
ಸೇತುವೆಯನ್ನು ಕಾದ ಎಂದು ಕೇಳಿದ. 

“ತುಂಬ ಚೆನ್ನಾಗಿ ಕಾದೆ. ಒಂದು ಇಲಿಯನ್ನೂ ಹೋಗಲು ಬಿಡಲಿಲ್ಲ ” ಅವನೆಂದ. 

ಮೂರನೆಯ ರಾತ್ರಿ ಇವಾನ್ ಇಬ್ಬರು ಯೋಧರನ್ನೂ ಮನೆಗೆ ಕರೆದು , ತನ್ನ ಕೈಗವಸನ್ನು 
ಗೋಡೆಯ ಮೇಲೆ ನೇತು ಹಾಕಿ, ಹೇಳಿದ : 

“ ಇವತ್ತು ರಾತ್ರಿ ನಾನೇ ಸೇತುವೆ ಕಾಯಲು ಹೋಗುತ್ತೇನೆ. ನೀವು ನನ್ನ ಈ ಕೈಗವಸನ್ನು 
ನೋಡುತ್ತಿರಿ. ಅದರಿಂದ ಬೆವರು ಹೊರಸೂಸಿದರೆ ಆಗ ನೀವು ಪ್ರಶಾಂತವಾಗಿ ಕುಳಿತುಕೊಳ್ಳಿ! 
ಅದರಿಂದ ರಕ್ತ ಹೊರ ಸೂಸಿದರೆ ನನ್ನ ಕುದುರೆಯನ್ನು ಬಿಚ್ಚಿ ಅದಕ್ಕೆ ಇಷ್ಟವಾದಲ್ಲಿಗೆ ಹೋಗಲು 
ಬಿಟ್ಟು ಬಿಡಿ.” 
- ಅವನು ಸೇತುವೆಯ ಕೆಳಗೆ ನಿಂತು ಕಾದ. ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಭೂಮಿ ನಡುಗ 
ತೊಡಗಿತು , ಗುಡುಗುಟ್ಟಿತು. ಓಕ್ ಮರಗಳಿಂದ ಎಲೆಗಳು ಉದುರಿದವು. ಅಲ್ಲಿನ ಡೇಗನ್ 
ಗಳಲ್ಲೆಲ್ಲ ಅತ್ಯಂತ ಹಿರಿಯ ಡೇಗನ್ ಬಂದಿತು . ಅದು ಬೆಂಕಿ ತಿನ್ನುವ, ಉರಿಯನ್ನು ಕುಡಿಯುವ, 
ಇವಾನ್‌ನಿಗೆ ಬೇಕಿದ್ದ ಅದೇ ಕುದುರೆಯ ಮೇಲೆ ಕುಳಿತಿತ್ತು . ಸೇತುವೆ ಹತ್ತಿರ ಬಂದಾಗ ಅದು 
ಕುದುರೆಗೆ ಹೇಳಿತು : 

“ ನಿಶ್ಚಲವಾಗಿ ನಿಲ್ಲು , ಮುಗ್ಗರಿಸಬೇಡ. ರೈತನ ಮಗ ಇವಾನ್‌ನನ್ನು ಬಿಟ್ಟು ಬೇರಾರೂ 
ನಮ್ಮ ಎದುರು ನಿಲ್ಲಲಾರರು . ಇವಾನ್ ಇನ್ನೂ ಬಾಲಕ . ಒಲೆಯ ಗೂಡಿನ ಮೇಲೆ ಕುಳಿತು 
ಕೊಳ್ಳುವುದು ಬಿಟ್ಟು ಅವನಿಗೆ ಬೇರೇನೂ ಕೆಲಸ ಇಲ್ಲ. ಅವನೂ ಎಷ್ಟು ದೂರ ಇದ್ದಾನೆಂದರೆ ರಣ 
ಹರೂ ಅಷ್ಟು ದೂರ ಹಾರಿ ಹೋಗಿ ಅವನ ಮೂಳೆಗಳನ್ನು ತರಲಾರದು. ” 

ಅದರ ಮಾತನ್ನು ಕೇಳಿಸಿಕೊಂಡು ರೈತನ ಮಗ ಇವಾನ್ ಹೇಳಿದ : “ ರಣಹದ್ದು ಮಾಡಲಾಗ 
ದುದನ್ನು ಕೆಚ್ಚೆದೆಯ ಮನುಷ್ಯ ಮಾಡಬಲ್ಲ! ” 

“ ಯಾತಕ್ಕೆ ಬಂದಿದ್ದೀಯ ? ನನ್ನ ಜೊತೆ ಹೋರಾಡಿ ಅಥವಾ ಶಾಂತಿ ಮಾಡಿ 
ಕೊಳ್ಳಲೋ ? ” ಡೇಗನ್ ಕೇಳಿತು . 

“ಹೋರಾಡಲು ಬಂದಿದ್ದೇನೆ. ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳುವೆ ಅಂದು 
ಕೊಂಡೆಯಾ ? ” 
“ ಸರಿ , ಹಾಗಾದರೆ, ನೀನೇ ಮೊದಲ ಪ್ರಹಾರ ನೀಡು ! ” ಡೇಗನ್ ಹೇಳಿತು . 

“ ಇಲ್ಲ. ನೀನೇ ನೀಡು! ನೀನೇ ಅಲ್ಲವೇ ಇಡೀ ಜಗತ್ತಿನಲ್ಲಿ ಬೇರೆ ಯಾರಿಗಿಂತ ಹೆಚ್ಚು ಶಕ್ತಿ 
ವಂತ ! ” 

ಡೇಗನ್ ಹೆಚ್ಚು ಕಾಲ ಕಾಯಲಿಲ್ಲ. ಇವಾನ್‌ನ ಮೇಲೆ ಎರಗಿ ಬಿದ್ದಿತು . ಎಷ್ಟು ಜೋರಾಗಿ 
ಪ್ರಹಾರ ನೀಡಿತೆಂದರೆ ಇವಾನ್‌ನ ಮುಖ ಬಿಳಚಿಕೊಂಡಿತು. ಆದರೆ ಅವನು ತತ್ತರಿಸಲಿಲ್ಲ . ಹೋರಾ 
ಡುತ್ತಲೇ ಹೋದ. ಕೊನೆಗೆ ಡೇಗನ್‌ನ ಹನ್ನೆರಡು ತಲೆಗಳಲ್ಲಿ ಮೂರಷ್ಟೆ ಉಳಿದವು. ಆದರೆ 
ಡೇಗನ್ ಇವಾನ್‌ನ ಮೇಲೆ ಒಂದೇ ಸಮನಾಗಿ ಪ್ರಹಾರ ನೀಡಿ ಅವನು ಸೊಂಟದವರೆಗೂ 
ನೆಲದಡಿ ಕುಸಿಯುವಂತೆ ಮಾಡಿತು . ಯುವಕನ ಶಕ್ತಿ ಕುಗ್ಗುತ್ತ ಹೋಯಿತು. ಇನ್ನೇನು ಪೂರ್ತಿ 
ಹೋಗುವುದರಲ್ಲಿತ್ತು . 

“ ಇಲ್ಲಿ ಕೇಳು. ನಿನಗೆ ಅಪ್ಪ ಇದ್ದನೆ ? ” ಡೇಗನ್ ಕೇಳಿತು . 


“ ಅವನ ಬಳಿ ಎತ್ತುಗಳಿದ್ದವೆ ? ” 
“ಇದವು.” 
“ ಅವುಗಳಿಂದ ಅವನು ಭೂಮಿ ಉಳುತ್ತಿದ್ದನೆ ? ” 
“ ಉಳುತ್ತಿದ.” 
“ ಅವುಗಳಿಗೆ ವಿಶ್ರಾಂತಿ ತೆಗೆದುಕೊಳ್ಳಲು ಬಿಡುತ್ತಿದ್ದನೆ ? ” 
“ ಬಿಡುತ್ತಿದ್ದ. ” 
“ ಹಾಗಾದರೆ ನಾವು ವಿಶ್ರಾಂತಿ ತೆಗೆದುಕೊಳ್ಳೋಣ. ” 

ಇವಾನ್ ಅದಕ್ಕೆ ಒಪ್ಪಿಕೊಂಡ. ತನ್ನ ಬಡಿಗೆಯನ್ನು ಕೆಳಗೆ ಹಾಕಿದ. ಎಷ್ಟು ಜೋರಾಗಿ 
ಹಾಕಿದನೆಂದರೆ ಅದು ಅವನು ಉದ್ದೇಶಿಸಿದ್ದುದಕ್ಕಿಂತ ಹೆಚ್ಚು ದೂರ ಹಾರಿ ಹೋಗಿ ಬಿದ್ದಿತು . 
ಅದು ಲಾಯಕ್ಕೆ ಹೋಗಿ ಬಡಿದು ಅದರ ಗೋಡೆಗಳಲ್ಲೊಂದನ್ನು ಮುರಿದು ಬೀಳಿಸಿತು . ಅಲ್ಲಿದ್ದ 
ಅವನ ಕುದುರೆ ಹಗ್ಗ ಕಿತ್ತುಕೊಂಡು ಇವಾನ್ ಇದ್ದ ಬಳಿಗೆ ಬಂದಿತು . ಅದು ತನ್ನ ಗೊರಸುಗಳಿಂದ 
ಇವಾನ್‌ನ ಸುತ್ತ ಇದ್ದ ಮಣ್ಣನ್ನು ಅಗೆದು ಹಾಕ ತೊಡಗಿತು. 

ಮನೆಯಲ್ಲಿದ್ದ ಇಬ್ಬರು ಯೋಧರೂ ಎಚ್ಚರಗೊಂಡರು. ನೋಡುತ್ತಾರೆ – ಇವಾನ್‌ನ 
ಕೈಗವಸಿನಿಂದ ರಕ್ತ ಒಸರುತ್ತಿದೆ. ಅವರಿಗೆ ತುಂಬ ಗಾಬರಿಯಾಯಿತು. ಅವರು ಇವಾನ್‌ನ 
ಸಹಾಯಕ್ಕೆ ಹೋಗ ಬಯಸಲಿಲ್ಲ. 

ಈಮಧ್ಯೆ ಇವಾನ್‌ನ ಕುದುರೆ ಅವನ ಸುತ್ತ ಇದ್ದ ಮಣ್ಣನ್ನೆಲ್ಲ ಅಗೆದು ಹಾಕಿ ಅವನನ್ನು
ಬಿಡಿಸಿತು . ಇವಾನ್ ಡೇಗನ್‌ಗೆ ಹೇಳಿದ : “ ಇದೇ ನಿನ್ನ ಕೊನೆ, ಡೇಗನ್ , ನಿನ್ನನ್ನೀಗ ಕೊಂದು 
ಹಾಕುತ್ತೇನೆ. ” 

“ ಆಗಲಿ , ಕೊಂದು ಹಾಕು , ಸಾಯುವ ಮುನ್ನ ನಿನಗೆ ಒಂದು ಮಾತು ಹೇಳೀನಿ, ಕೇಳು. 
ನಿನಗೆ ಬೇಕಾದ ಮಾಂತ್ರಿಕ ಕುದುರೆಯನ್ನು ನೀನು ಪಡೆದುಕೊಂಡರೂ ದೊರೆಯ ಬಳಿಗೆ ಕೊಂಡೊ 
ಯ್ಯಲಾರೆ , ತಿಳಿ, ನನಗೆ ಇನ್ನೂ ಮೂವರು ತಂಗಿಯರಿದ್ದಾರೆ, ಅಮ್ಮ , ಅಪ್ಪ ಇದ್ದಾರೆ. ನನ್ನ ಅಪ್ಪ 
ದೊರೆ ಹೆರೋದ್. ಅವರು ನಿನ್ನನ್ನೂ ನಿನ್ನ ಯೋಧರನ್ನೂ ಮುಗಿಸುತ್ತಾರೆ. ” 

ಇವಾನ್ ಡೇಗನ್‌ನ ಉಳಿದ ಮೂರು ತಲೆಗಳನ್ನೂ ಕಡಿದು ಹಾಕಿದ. ಆಮೇಲೆ ಡೇಗನ್ 
ಹೇಳಿದ್ದ ಮಾತುಗಳನ್ನು ನೆನಪು ಮಾಡಿಕೊಂಡು ಯೋಚನೆ ಮಾಡುತ್ತ ನಿಂತ. ಅವನಿಗೆ ಏನು 
ಮಾಡಬೇಕೋ ತಿಳಿಯದಾಯಿತು. ಆಗ ಅವನು ಹಿಂದೆ ಮಳೆ ಬಂದಾಗ ತನ್ನ ಕುದುರೆ ಚರ್ಮ 
ಗಳನ್ನೇ ಗುಡಿಸಿಲಿನ ಮೇಲೆ ಹೊದಿಸಿ ಸಹಾಯ ಮಾಡಿದ್ದನಲ್ಲ ಆ ಮುದುಕಿ ಅವನಿಗೆ ಸಹಾಯ 
ಮಾಡಿದಳು . ಅವಳಿಗೆ ಈ ಜಗತ್ತಿನಲ್ಲಾಗುತ್ತಿದ್ದುದೆಲ್ಲ ಗೊತ್ತಿಗೆ ಬರುತ್ತಿತ್ತು . ಇವಾನ್ ಅಪಾಯ 
ದಲ್ಲಿದ್ದನೆಂದು ತಿಳಿದು ಅವನ ಬಳಿಗೆ ತನ್ನ ಪುಟ್ಟ ನಾಯಿಯನ್ನು ಕಳುಹಿಸಿ ಕೊಟ್ಟಳು. 

ನಾಯಿ ಅವನಿಗೆ ಹೇಳಿತು : “ನೀವು ಮನೆಗೆ ಹಿಂದಿರುಗುವಾಗ ನಿಮಗೆ ತುಂಬ ಬಾಯಾರಿಕೆ 
ಯಾಗುತ್ತೆ . ದಾರಿಯ ಬಲಗಡೆ ಒಂದು ಕೊಳ ಇರುತ್ತೆ . ಅದರ ನೀರು ಗಾಜಿನಷ್ಟು ಶುಭ್ರವಾಗಿ 
ತಿಳಿಯಾಗಿ ಇರುತ್ತೆ . ನಿಮಗೆ ಬಾಯಾರಿಕೆಯಿಂದ ನಾಲಿಗೆ ಅಂಗುಳಿಗೆ ಅಂಟಿಕೊಳ್ಳುವಂತಾದರೂ 
ಆ ಕೊಳದ ನೀರನ್ನು ಕುಡಿಯಬೇಡಿ. ನೀನು ನಿನ್ನ ಬಡಿಗೆಯಿಂದ ಅದರ ಮೇಲೆ ಅಡ್ಡವಾಗಿ ಪ್ರಹಾರ 
ನೀಡು. ಆಗ ಏನಾಗುತ್ತೆ ಅನ್ನೋದು ನಿನಗೇ ಗೊತ್ತಾಗುತ್ತೆ . ಆಮೇಲೆ ಮುಂದಕ್ಕೆ ಹೋಗಿ, 
ಒಂದು ಚೌಬೀನೆ ಮರ ಕಾಣುತ್ತೆ . ಅದರ ಕೆಳಗೆ ಒಂದು ಮೇಜು ಇರುತ್ತೆ . ಮೇಜಿನ ಮೇಲೆ 
ತುಂಬ ತಿಂಡಿ ತೀರ್ಥ ಇರಿಸಿರಲಾಗುತ್ತೆ . ಎಷ್ಟೇ ಹಸಿವಾದರೂ ಅದನ್ನು ತಿನ್ನೋಕೆ ಮಾತ್ರ 
ಹೋಗಬೇಡಿ. ಮೇಜಿನ ಮೇಲೆ ನಿನ್ನ ಬಡಿಗೆಯಿಂದ ಪ್ರಹಾರ ನೀಡು. ಏನಾಗುತ್ತೆ ಅನ್ನೋದು 
ನಿನಗೇ ಗೊತ್ತಾಗುತ್ತೆ . ಆಮೇಲೆ ನಿಮಗೆ ಇನ್ನೊಂದು ಚೌಬೀನೆ ಮರ ಕಾಣುತ್ತೆ . ಅದರ ಕೆಳಗೆ 
ಹಾಸಿಗೆಗಳು ಇರುತ್ತವೆ. ನಿಮಗೆ ತುಂಬ ಬಳಲಿಕೆಯಾಗಿ ಕಣ್ಣು ಎಳೆದುಕೊಂಡು ಹೋಗುತ್ತಿದ್ದರೂ 
ಅವುಗಳ ಮೇಲೆ ಮಲಗಬೇಡಿ. ಬದಲು ಅವುಗಳ ಮೇಲೆ ನಿನ್ನ ಬಡಿಗೆಯಿಂದ ಬಡಿ, ಏನಾ 
ಗುತ್ತೆ ಅನ್ನೋದು ನಿನಗೇ ಗೊತ್ತಾಗುತ್ತೆ ! ” 

ಇವಾನ್ ಮುದುಕಿಯ ನಾಯಿಯ ಮಾತುಗಳನ್ನೆಲ್ಲ ಕೇಳಿಸಿಕೊಂಡು ಅದಕ್ಕೆ ವಂದನೆ ತಿಳಿ 
ಸಿದ. ಆಮೇಲೆ ಡೇಗನ್‌ನ ಮಾಂತ್ರಿಕ ಕುದುರೆಯನ್ನು ತೆಗೆದುಕೊಂಡು ಅವನು ರಾಜನ ಅರ 
ಮನೆಯ ಕಡೆಗೆ ಹೊರಟ . ರಾಜನ ಇಬ್ಬರು ಯೋಧರೂ ಅವನ ಜೊತೆ ಹೊರಟರು . ಅವರು
ಪ್ರಯಾಣ ಮಾಡುತ್ತ ಮಾಡುತ್ತ ಹೋದರು . ಅವರಿಗೆ ತುಂಬ ಬಾಯಾರಿಕೆಯಾಯಿತು. ರಸ್ತೆಯ 
ಬಲ ಬದಿಯಲ್ಲಿ ಒಂದು ಕೊಳ ಕಂಡುಬಂದಿತು. ಆ ಇಬ್ಬರು ಯೋಧರೂ ಅದರ ನೀರು ಕುಡಿಯ 
ಹೋದರು . ಆದರೆ ಇವಾನ್ ಹೇಳಿದ : 

“ ತಾಳಿ , ತಾಳಿ, ಮೊದಲು ಅದು ಏನು ಎಂದು ನೋಡಿ. ” 

ಹಾಗೆಂದು ಅವನು ಆ ಕೊಳದ ಮೇಲೆ ತನ್ನ ಬಡಿಗೆಯಿಂದ ಪ್ರಹಾರ ನೀಡಿದ. ಆಗ ಏನಾ 
ಯಿತು ಅಂತೀರಿ -ಕೊಳದ ನೀರೆಲ್ಲ ರಕ್ತವಾಯಿತು. ವಾಸ್ತವವಾಗಿ ಆ ಕೊಳಕೊಳವಾಗಿರಲಿಲ್ಲ. 
ಡೇಗನ್‌ನ ತಂಗಿ ಆ ಕೊಳದ ರೂಪದಲ್ಲಿ ಅಲ್ಲಿದಳು . 

ಅವರು ಮುಂದೆ ಹೋದರು . ಇವಾನ್‌ನು ಡೇಗನ್‌ನ ಉಳಿದ ಇಬ್ಬರು ಸೋದರಿಯರನ್ನೂ 
ಕೊಂದ : ಅವರಲ್ಲೊಬ್ಬಳು ತಿಂಡಿತೀರ್ಥಗಳಿಂದ ತುಂಬಿದ ಮೇಜಿನ ರೂಪದಲ್ಲಿದ್ದಳು , ಇನ್ನೊ 
ಬ್ಬಳು ಹಾಸಿಗೆಗಳ ರೂಪದಲ್ಲಿದ್ದಳು . ಆಮೇಲೆ ಅವರು ಮುಂದುವರಿಯುತ್ತಿದ್ದಂತೆ ಆಕಾಶ ಇದಕ್ಕೆ 
ದ್ದಂತೆ ಕಪ್ಪಾಯಿತು. ಕಾರ್ಮುಗಿಲೊಂದು ಅದನ್ನು ಆವರಿಸುತ್ತಿದ್ದುದನ್ನು ಅವರು ಕಂಡರು . 
ಮತ್ತೆ ನೋಡಿದಾಗ ಅದು ಕಪ್ಪು ಮೋಡವಾಗಿರಲಿಲ್ಲ, ಆದರೆ ಡೇಗನ್‌ನ ಮುದುಕಿ ತಾಯಿ 
ಎಂಬುದು ಅವರಿಗೆ ತಿಳಿದು ಬಂದಿತು . ಅವಳ ಮೇಲು ತುಟಿ ಆಕಾಶವನ್ನು ಮುಟ್ಟಿದರೆ ಕೆಳ ತುಟಿ 
ಭೂಮಿಯನ್ನು ಮುಟ್ಟಿದ್ದಿತು . 

ರೈತನ ಮಗ ಇವಾನ್ ಹೇಳಿದ : “ ಬನ್ನಿ ,ಸೋದರರೇ , ನಾವು ಈ ತಾಯಿ -ಡೇಗನ್ ವಿರುದ್ದ 
ಜೊತೆಗೂಡಿಹೋರಾಡೋಣ. ನಾನು ಒಬ್ಬನೇ ಹೋರಾಡೋದು ಕಷ್ಟ .” 

ಆದರೆ ಅವರು ತುಂಬ ಹೆದರಿ ಓಡಿ ಹೋದರು. ಇನ್ನು ನನ್ನ ಕತೆ ಮುಗಿಯಿತು ” ಇವಾನ್ 
ಅಂದುಕೊಂಡ. ಆದರೆ ಹತ್ತಿರದಲ್ಲೇ ಒಂದು ಕಮಾರಶಾಲೆ ಇದ್ದಿತೆಂಬುದು ಅವನಿಗೆ ಜ್ಞಾಪ 
ಕಕ್ಕೆ ಬಂದಿತು. ಅವನು ಕುದುರೆಯನ್ನು ನಾಗಾಲೋಟ ಓಡಿಸಿಕೊಂಡು ಅಲ್ಲಿಗೆ ಹೋದ. ಆ 
ಇಬ್ಬರು ಯೋಧರೂ ಅಡಗಿಕೊಳ್ಳಲು ಬೇರೆಲ್ಲೂ ಸ್ಥಳ ಕಾಣದೆ ಅಲ್ಲಿಗೇ ಬಂದರು . 

ಅವರು ಕಮ್ಮಾರಶಾಲೆ ತಲುಪಿ ಒಳಗಿದ್ದ ಕಮ್ಮಾರರಿಗೆ ತಮ್ಮನ್ನು ಒಳ ಬಿಡುವಂತೆ ಕೇಳಿ 
ಕೊಂಡರು . ಆ ಕಮ್ಮಾರಶಾಲೆಗೆ ಹನ್ನೆರಡು ಕಬ್ಬಿಣದ ಬಾಗಿಲುಗಳಿದ್ದವು. ಕಮ್ಮಾರರು ಅವುಗಳನ್ನು 
ತೆರೆದರು. ಇವಾನ್‌ನೂ ಆ ಇಬ್ಬರು ಯೋಧರೂ ಒಳ ಹೊಕ್ಕಕೂಡಲೇ ಬಾಗಿಲುಗಳು ಮುಚ್ಚಿ 
ಕೊಂಡವು. ಆದರೆ ಆ ತಾಯಿ -ಡೇಗನ್‌ಗೆ ಸುಳಿವು ತಿಳಿದು ಹೋಯಿತು. ಅದು ಕಮ್ಮಾರಶಾಲೆಯ 
ಬಳಿಗೆ ಬಂದು ಅದರ ಬಾಗಿಲುಗಳನ್ನು ತನ್ನ ಉರಿಯ ನಾಲಿಗೆಗಳಿಂದ ನೆಕ್ಕ ತೊಡಗಿತು. 

ಅದೇನೂ ತಮಾಷಿಯ ಸಂಗತಿಯಾಗಿರಲಿಲ್ಲವೆಂದು ರೈತನ ಮಗ ಇವಾನ್ ಕಂಡುಕೊಂಡ . 
- ಅವನು ಕಮ್ಮಾರರಿಗೆ ಹೇಳಿದ: “ ಬೇಗ ಒಂದು ದೊಡ್ಡ ನೇಗಿಲನ್ನೂ ಈ ಕಮ್ಮಾರಶಾಲೆಯಷ್ಟು 
ಗಾತ್ರದ ಒಂದು ಇಕ್ಕಳವನ್ನೂ ತಯಾರಿಸಿ ಕೊಡಿ! ” 

ಕಮ್ಮಾರರು ತಕ್ಷಣವೇ ತಯಾರಿಸ ತೊಡಗಿದರು. ಅವರಿಗೆ ಅತ್ಯಲ್ಪ ಸಮಯವಷ್ಟೆ ಇದ್ದಿತು. 
ಏಕೆಂದರೆ ತಾಯಿ -ಡೇಗನ್ ಆಗಲೇ ಹೆಚ್ಚಿನ ಬಾಗಿಲುಗಳನ್ನೆಲ್ಲ ಸುಟ್ಟು ಹಾಕಿದ್ದಿತು. ಆದರೆ ಅವರು 
ಬೇಗಬೇಗ ಮಾಡಿದರು . ತಾಯಿ -ಡೇಗನ್ ಹತ್ತನೆಯ ಬಾಗಿಲು ನೆಕ್ಕಿ ಸುಟ್ಟು ಹಾಕುತ್ತಿದ್ದ ಹೊತ್ತಿ 
ಗಾಗಲೇ ಅವರು ನೇಗಿಲನ್ನೂ ಇಕ್ಕಳವನ್ನೂ ಸಿದ್ಧಗೊಳಿಸಿದ್ದರು . 

ತಾಯಿ -ಡೇಗನ್ ಕೊನೆಯ ಬಾಗಿಲನ್ನೂ ಸುಟ್ಟು ಹಾಕಿ ತನ್ನ ತಲೆಯನ್ನು ಒಳಕ್ಕೆ ತೂರಿ 
ಸಿತು . ಇವಾನ್‌ನು ಅದರ ತುಟಿಗಳನ್ನು ಕೆಂಪಗೆ ಕಾದ ಇಕ್ಕಳದಿಂದ ಗಟ್ಟಿಯಾಗಿ ಹಿಡಿದು ತನ್ನೆಲ್ಲ 
ಶಕ್ತಿಯನ್ನೂ ಬಿಟ್ಟು ಅವುಕಿದ. ಆಮೇಲೆ ಅವನು ಆ ತಾಯಿ -ಡೇಗನ್ನನ್ನು ನೇಗಿಲಿಗೆ ಕಟ್ಟಿ , 
ಬಲವಂತದಿಂದ ಹೊಲಕ್ಕೆ ಎಳೆದೊಯ್ದು ಉಳುವಂತೆ ಮಾಡಿದ. ಅದು ಉಳುತ್ತಿದ್ದಾಗ ಮನೆ 
ಗಾತ್ರದ ಮಣ್ಣಿನ ಹೆಂಟೆಗಳು ತಳಮೇಲಾಗುತ್ತಿದ್ದವು. ಹೀಗೆ ಅವನು ಅನೇಕ ಗಂಟೆಗಳವರೆಗೆ ಉತ್ತ . 
ಕೊನೆಗೆ ತಾಯಿ -ಡೇಗನ್ ಶಕ್ತಿಯನ್ನೆಲ್ಲ ಕಳೆದುಕೊಂಡು ಮೈ ಒಡೆದುಕೊಂಡು ಸತ್ತು ಬಿದ್ದಿತು. 
ಆಗ ಅವನು ಅದನ್ನು ಎತ್ತಿಕೊಂಡು ಹೋಗಿಸಮುದ್ರಕ್ಕೆ ಹಾಕಿದ, ತನ್ನ ಕುದುರೆಯನ್ನು ಹುಲ್ಲು 
ಗಾವಲೊಂದರಲ್ಲಿ ಸ್ವತಂತ್ರವಾಗಿ ಹೋಗುವಂತೆ ಬಿಟ್ಟುಕೊಟ್ಟ , ತನ್ನನ್ನು ಹಿಂಬಾಲಿಸಿ ಬರುತ್ತಿದ್ದ 
ಆ ಯೋಧರಿಬ್ಬರನ್ನೂ ಅಟ್ಟಿದ. 

“ಹೋಗಿ ಆಚೆಗೆ, ಹೇಡಿಗಳೇ ! ” ಅವನೆಂದ. “ನೀವು ಕುಲೀನ ರಕ್ತ ಹೊಂದಿರಬಹುದು. 
ಆದರೆ ನೀವು ನನ್ನನ್ನು ಸಾಕಷ್ಟು ಸತಾಯಿಸಿದ್ದೀರ. ನಿಮ್ಮಿಂದ ನನಗೆ ಸಹಾಯಕ್ಕೆ ಬದಲು 
ತೊಂದರೆಯೇ ಬೇಕಾದಷ್ಟಾಗಿದೆ ! ” 

ಹಾಗೆ ಹೇಳಿ ಅವನು ಮಾಂತ್ರಿಕ ಕುದುರೆ ಹತ್ತಿ ಹೊರಟ . 

ಸ್ವಲ್ಪ ದೂರ ಹೋದ ಮೇಲೆ ಅವನಿಗೆ ಒಬ್ಬ ವೃದ್ಧ ಎದುರಾದ. ಇವಾನ್ ಅವನಿಗೆ ನಮಸ್ಕ 
ರಿಸದೆ ಮುಂದೆ ಹೋದ. ಆದರೆ ಆಮೇಲೆ ಯೋಚನೆ ಮಾಡಿದ: “ ಅಯ್ಯೋ ಏನು ಮಾಡಿ 
ಬಿಟ್ಟೆ ! ನಾನು ಚಿಕ್ಕವ. ಆ ವಯಸ್ಸಾದವರಿಗೆ ಗೌರವ ತೋರುವುದು ನನ್ನ ಧರ್ಮ.” 

ಮುದುಕನ ಬಳಿಗೆ ಬಂದು ಹೇಳಿದ : 

“ ನಮಸ್ಕಾರ, ಅಜ್ಜ , ನನ್ನನ್ನು ಕ್ಷಮಿಸಿ, ನಾನು ನಿಮಗೆ ವಂದಿಸಬೇಕಿತ್ತು .ನೋಡದೆ ಹಾಗೆಯೇ 
ಹೊರಟು ಹೋದೆ. ” 

“ನಿಜ, ಯುವಕನೊಬ್ಬ ಯಾವಾಗಲೂ ತನಗಿಂತ ಹಿರಿಯರಾದವರಿಗೆ ಮೊದಲು ನಮಸ್ಕ 
ರಿಸಬೇಕು . ಇದನ್ನು ನೀನು ಎಂದೂ ಮರೆಯಬೇಡ” ಮುದುಕ ಹೇಳಿದ. “ ಈಗ ನನ್ನ ಮಾತು 
ಕೇಳು. ನೀನು ಮುಂದೆ ಹೋಗುತ್ತಿರುವಂತೆ ನಿನಗೆ ಒಬ್ಬ ಮುದುಕ ಇದಿರಾಗುತ್ತಾನೆ. ಅವನಿ 
ಗೊಂದು ಮರದ ಕಾಲಿರುತ್ತೆ . ಅವನು ನಿನ್ನನ್ನು ನಿಲ್ಲಿಸಿ ಹೇಳುವನು : ನಿನ್ನ ಬಳಿ ಸೊಗಸಾದ 
ಕುದುರೆ ಇದೆಯಲ್ಲ, ಹುಡುಗ. ಆದರೂ ನೀನೇನೂ ನನ್ನನ್ನು ಮಾರಿಸಿ ಹೋಗಲಾರೆ ! ಇವನ 
ಜೊತೆಗೆ ನೀನು ಎಷ್ಟು ಮಾತ್ರವೂ ಓಟದ ಪೈಪೋಟಿಗೆ ಇಳಿಯಬಾರದು , ತಿಳಿಯಿತಾ? ಇದು 
ಮೊದಲನೆಯ ಸಂಗತಿ . ಎರಡನೆಯದು, ದಾರಿಯಲ್ಲಿ ಯಾರು ಕೇಳಿದರೂ ಅವರನ್ನು 
ನೀನು ನಿನ್ನ ಜೊತೆ ಕುದುರೆಯ ಮೇಲೆ ಕರೆದೊಯ್ಯಬೇಕು. ಇವೆರಡು ಸಂಗತಿಗಳನ್ನೂ 
ನೆನಪಿನಲ್ಲಿಟ್ಟಿರು.” 

ಇವಾನ್ ಮುಂದೆ ಹೊರಟ . ನೋಡುತ್ತಾನೆ - ಅವನ ಬಳಿಗೆ ಒಬ್ಬ ಮರದ ಕಾಲಿನ ಮುದುಕ 
ಕುಂಟುತ್ತ ಬರುತ್ತಿದ್ದಾನೆ. 

“ ನಿನ್ನ ಬಳಿ ಸೊಗಸಾದ ಕುದುರೆ ಇದೆಯಲ್ಲ, ಹುಡುಗ ! ” ಅವನೆಂದ. “ನಾನೊಬ್ಬ ರೋಗಿ 
ಮುದುಕ. ಆದರೂ ನೀನೇನೂ ಓಟದಲ್ಲಿ ನನ್ನನ್ನು ಮಿಾರಿಸಲಾರೆ, ತಿಳಿ ! ” 

“ ಇರಬಹುದು. ನಾನೇನೂ ಅಲ್ಲಗಳೆಯುವುದಿಲ್ಲ. ನಾನು ನಿಮ್ಮೊಂದಿಗೆ ಓಟವನ್ನೂ ಓಡುವು 
ದಿಲ್ಲ ! ” ಇವಾನ್ ಹೇಳಿದ. 

ಈ ಮಾತುಗಳು ಅವನ ಬಾಯಿಯಿಂದ ಹೊರ ಬಂದವೋ ಇಲ್ಲವೋ , ಆ ಕುಳ್ಳ ಮುದುಕ 
ತನ್ನ ಮರದ ಕಾಲನ್ನು ಇವಾನ್‌ನ ರಿಕಾಪಿನೊಳಕ್ಕೆ ತೂರಿಸಿ, ಇವಾನ್‌ನ ತೋಳಿಗೆ ಒಂದು ಬಾಣ 
ಚುಚ್ಚಿ ಅವನನ್ನು ಜೀನಿನಿಂದ ಬೀಳಿಸಿದ. ಆಮೇಲೆ ತಾನೇ ಕುದುರೆಯ ಬೆನ್ನಿನ ಮೇಲೆ ಹಾರಿ 
ಕುಳಿತು ಮಿಂಚಿನ ವೇಗದಲ್ಲಿ ಹೊರಟು ಹೋದ. ಇದೆಲ್ಲ ಹೇಗೆ ಜರುಗಿತು ಅನ್ನುವುದು ಇವಾನ್ 
ನಿಗೆ ತಿಳಿಯುವ ಮುನ್ನವೇ ಎಲ್ಲ ಆಗಿ ಹೋಗಿತ್ತು . ಆ ಮುದುಕ ಬೇರೆ ಯಾರೂ ಆಗಿರಲಿಲ್ಲ - 
ಡೇಗನ್‌ನ ತಂದೆ ರಾಜ ಹೆರೋದ್ನೇ ಆ ರೂಪದಲ್ಲಿ ಬಂದಿದ್ದ ! 

ಇವಾನ್‌ನಿಗೆಕೋಪದಿಂದ ಮೈ ಮರೆಯುವಂತಾಯಿತು. 

“ ಆಗಲಿ , ಹಾಳಾದ ರಾಜ ಹೆರೊದ್ನೇ ! ನಾನಿದಕ್ಕಾಗಿ ನಿನ್ನನ್ನು ಎಂದೂ ಸುಮ್ಮನೆ ಬಿಡು 
ವುದಿಲ್ಲ ! ” ಎಂದ ಅವನು , “ ತಾಳು, ನೀನು ಎಲ್ಲೇ ಇರು ನಿನ್ನನ್ನು ಹುಡುಕಿ ಹಿಡಿಯುತ್ತೇನೆ. 
ಕಾಲು ನಡಿಗೆಯಲ್ಲಾದರೂ ಸರಿಯೆ ನಿನ್ನ ಬಳಿಗೆ ಬಂದೇ ಬರುತ್ತೇನೆ! ” 

ತನ್ನ ಬಡಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಇವಾನ್ ಆ ಮುದುಕನನ್ನು ಹುಡುಕಿಕೊಂಡು 
ಹೊರಟ. ತೋಳಿನಲ್ಲಾದ ಗಾಯ ಬೆಂಕಿಯಂತೆ ಸುಡುತ್ತಿತ್ತು . ಶಕ್ತಿಯ ಉಡುಗುತ್ತಿದ್ದಂತೆ 
ಕಂಡುಬಂದಿತು . 


“ ಈ ಹೆರೊದ್‌ನ ಬಾಣದ ತುದಿ ವಿಷ ಹಚ್ಚಿದುದಾಗಿರಬೇಕು ! ” ಎಂದವನು ತನ್ನಲ್ಲೇ 
ಹೇಳಿಕೊಂಡ. 
ಅವನು ಇನ್ನಷ್ಟು ದೂರ ನಡೆದು ಹೋದ, ಬಲವೆಲ್ಲ ಕುಗ್ಗುತ್ತಿರುವಂತೆ ಅವನಿಗೆ ಭಾಸ 
ವಾಯಿತು. 

“ ಈಗ ನಾನೆಂದೂ ಹೆರೊದ್‌ನನ್ನು ಸೋಲಿಸಲಾರೆ ” ಎಂದವನು ಹೇಳಿಕೊಂಡ. ಅವನು 
ಕಿರುಬೆರಳಿನಿಂದ ನನ್ನ ಜೀವವನ್ನು ಹೊಸಕಿ ಹಾಕಬಲ್ಲ. ” 

ಹೀಗೆ ಚಿಂತಿಸುತ್ತ ಇವಾನ್ ತಲೆ ತಗ್ಗಿಸಿಕೊಂಡು ನಡೆಯುತ್ತ ಹೋದ. ಮಾರ್ಗ ಮಧ್ಯ 
ದಲ್ಲಿ ಅವನು ಒಬ್ಬ ಮುದುಕನನ್ನು ಸಂಧಿಸಿದ . ಅವನ ಗಡ್ಡ ಎಷ್ಟು ಉದ್ದವಾಗಿದ್ದಿತೆಂದರೆ ಅದು 
ನೆಲಕ್ಕೆ ತಾಕುತ್ತಿತ್ತು . ಅವರು ಪರಸ್ಪರ ಕುಶಲ ಪ್ರಶ್ನೆ ಮಾಡಿದರು. ಇವಾನ್ ಎತ್ತ ಹೊರಟಿದ್ದು 
ಎಂದು ತಿಳಿದ ಮುದುಕ ತಾನೂ ಅವನೊಟ್ಟಿಗೆ ಹೋಗುವುದಾಗಿ ಹೇಳಿದ. 

“ನೀವು ಯಾರು ? ” ಇವಾನ್ ಕೇಳಿದ . 
“ ನಾನೊಬ್ಬ ನಾಯಿ ಬೇಟೆಗಾರ, ಎಲ್ಲ ನಾಯಿಗಳೂ ನನಗೆ ಹೆದರುತ್ತವೆ” ಮುದುಕ ಹೇಳಿದ. 

ಇವಾನ್ ಅವನು ಆಶ್ಚರ್ಯದಿಂದ ನೋಡಿದ . ಮೊದಲ ಮುದುಕ ನೀಡಿದ ಬುದ್ದಿವಾದ 
ನೆನಪಿಗೆ ಬಂದು ಅವನು ಈ ಮುದುಕನನ್ನೂ ತನ್ನೊಂದಿಗೆ ಕರೆದೊಯ್ದ . 

ಇಬ್ಬರೂ ಸ್ವಲ್ಪ ದೂರ ಹೋದರು . ಆಮೇಲೆ ಮತ್ತೊಬ್ಬ ಮುದುಕ ಇವರನ್ನು ಸೇರಿ 
ಕೊಂಡ . ಅವನ ಹೆಸರು “ ಹಿಮಶೈತ್ಯ ” ಅಂತ . 
- ಮೂವರೂ ಮುಂದೆ ಹೋದರು . ಅವರಿಗೆ ಇನ್ನೊಬ್ಬ ಮುದುಕ ಸಿಕ್ಕಿದ. ಇವರು ಎತ್ತ 
ಹೊರಟಿದ್ದರೆಂಬುದನ್ನು ತಿಳಿದ ಅವನೂ ಇವರೊಂದಿಗೆ ಹೋಗುವುದಾಗಿ ತಿಳಿಸಿದ. 

“ ನಾನು ಸಮುದ್ರವನ್ನು ತರಿದು ಹಾಕಬಲ್ಲೆ. ಅಲೆಗಳನ್ನೆಲ್ಲ ಒಂದುಗೂಡಿಸಿ ತೆನೆ ಕಟ್ಟಬಲ್ಲೆ.” 

ಅವರು ನಾಲ್ವರೂ ಮುಂದೆ ಹೋದರು. ಅವರ ಜೊತೆಗೆ ಇನ್ನೂ ಐದು ಮಂದಿ ಮುದು 
ಕರು ಸೇರಿಕೊಂಡರು . ಅವರಲ್ಲೊಬ್ಬ ಹೊಟ್ಟೆಬಾಕನಿದ್ದ . ಅವನಿಗೆ ಎಷ್ಟು ತಿಂದರೂ ಇನ್ನಷ್ಟು 
ಬೇಕು ಅನಿಸುತ್ತಿತ್ತು . ಇನ್ನೊಬ್ಬ ತುಂಬ ಕುಡಿಯುತ್ತಿದ್ದ. ಎಷ್ಟು ಕುಡಿದರೂ ಅವನ ಹೊಟ್ಟೆ 
ತುಂಬುತ್ತಲೇ ಇರಲಿಲ್ಲ. ಇನ್ನೊಬ್ಬ ಓಟಗಾರ. ಒಮ್ಮೆ ಓಡಲು ಹೊರಟರೆ ನಿಲ್ಲುತ್ತಲೇ ಇರಲಿಲ್ಲ . 
ಏಳನೆಯವನ ಬಳಿ ಇಪ್ಪತ್ತು ವೆರ್ಸ್ಟ್ ಉದ್ದದ ಚಾಟಿ ಇದ್ದಿತು. ಎಂಟನೆಯವ ಇಪ್ಪತ್ತು ವೆರ್ಸ್ಟ್ 
ದೂರ ನೋಡಬಲ್ಲವನಿದ್ದ. 

ಹೀಗೆ ಅವರೆಲ್ಲರೂ ಒಟ್ಟಿಗೇ ಹೋಗುತ್ತ ಹೆರೋದ್‌ನ ರಾಜ್ಯ ತಲುಪಿದರು. ಬೇಗನೆಯೇ 
ಅದರ ಗಡಿ ದಾಟಿ ಒಳ ಹೋದರು . 

ಅವರನ್ನು ಕಂಡು ಡೇಗನ್ ರಾಜ ಹೆರೋದ್‌ಗೆ ತುಂಬ ಆಶ್ಚರ್ಯವಾಯಿತು. ಏಕೆಂದರೆ 
ಅದುವರೆವಿಗೂ ಹೊರಗಿನವರು ಯಾರೂ ಅವನ ರಾಜ್ಯದ ನೆಲ ತುಳಿಯುವುದು ಹಾಗಿರಲಿ 
ಅದರ ಬಳಿ ಸುಳಿಯುವ ಸಾಹಸವನ್ನೂ ಮಾಡಿರಲಿಲ್ಲ. ಅವನು ತನ್ನ ಸೇವಕರನ್ನು ಕರೆದು ಇವಾನ್ 
ಹಾಗೂ ಅವನ ಮಿತ್ರರ ವಿರುದ್ದ ತನ್ನ ಏಳು ಸಾವಿರ ಇತ್ತಲೆ ನಾಯಿಗಳನ್ನು ಭೂಬಿಡುವಂತೆ 
ಹೇಳಿದ . ಈ ನಾಯಿಗಳು ತಮ್ಮ ರೌದ್ರತೆಗೆ ಹೆಸರುವಾಸಿಯಾಗಿದ್ದವು. ಅವು ಕಾರ್ಮುಗಿಲಿನಂತೆ 
ಇವರ ಮೇಲೆ ಎರಗಿ ಬಂದವು. ರೈತನ ಮಗ ಇವಾನ್ ಹೇಳಿದ: 

“ ಏನು ಮಾಡುವುದು ? ಈ ನಾಯಿಗಳು ನಮ್ಮನ್ನು ಸಿಗಿದು ಹಾಕುವುದು ಖಂಡಿತ . ನಾನಂತೂ 
ತುಂಬ ನಿಶ್ಯಕ್ತನಾಗಿದ್ದೇನೆ. ನನಗೆ ಚಲಿಸುವುದೂ ಕಷ್ಟವಾಗಿದೆ. ” 

“ ಯಾಕೆ ಅಷ್ಟು ಯೋಚನೆ ಮಾಡುತ್ತೀಯ ? ನನಗೆ ಎಲ್ಲ ನಾಯಿಗಳೂ ಹೆದರುತ್ತವೆ ಅನ್ನು 
ವುದನ್ನು ನೀನು ಮರೆತುಬಿಟ್ಟೆಯಾ? ” ಎಂದ ನಾಯಿ ಬೇಟೆಗಾರ ಮುದುಕ. 

ಅವನು ಮುಂದೆ ಹೋಗಿ ಎಲ್ಲ ನಾಯಿಗಳನ್ನೂ ಕೊಂದು ಹಾಕಿದ. 

ಈಗ ಇವಾನ್ ಮತ್ತು ಅವನ ಮಿತ್ರರು ಮುಂದೆ ಹೋಗಲು ಸ್ವತಂತ್ರರಾಗಿದ್ದರು . ಅವರು 
ನೇರವಾಗಿ ಹೆರೋದ್ನ ಅರಮನೆಗೇ ಹೋದರು . ಅವರು ಕಬ್ಬಿಣದಿಂದ ಮಾಡಿದ್ದ, ಅತ್ಯಂತ 
ದೊಡ್ಡದಾಗಿದ್ದ ಗೇಟುಗಳನ್ನು ತೆರೆದು ಅಂಗಳಕ್ಕೆ ಬಂದರು . ಅವರ ಹಿಂದೆ ಗೇಟುಗಳು ಮುಚ್ಚಿ 
ಕೊಂಡವು. ಹೀಗೆ ಅವರು ಕಬ್ಬಿಣದ ಗೋಡೆಗಳ ಬೋನಿನಲ್ಲಿ ಸಿಕ್ಕಿಬಿದ್ದಂತಾದರು. ಬೋನಿಗೆ 
ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ಸುಟ್ಟು ಹಾಕುವಂತೆ ಹೆರೋದ್ ತನ್ನ ಸೇವಕರಿಗೆ ಆಜ್ಞಾ 
ಪಿಸಿದ. 

ಆದರೆ ಹಿಮಶೈತ್ಯ ” ಎಂದು ಕರೆದುಕೊಳ್ಳುತ್ತಿದ್ದ ಮುದುಕ ಗೋಡೆಗಳ ಮೇಲೆ ತಣ್ಣ 
ಗಿನ ಗಾಳಿ ಊದಿದ. ಸೇವಕರು ಹೊರಗಡೆ ಗೋಡೆಗಳ ಸುತ್ತ ಕಟ್ಟಿಗೆಗಳನ್ನು ರಾಶಿರಾಶಿ ಹಾಕಿ 
ಭಾರಿ ಬೆಂಕಿ ಹೊತ್ತಿಸಿದ್ದರೂ ಒಳಗಡೆ ಇವರು ಬಿಳಿಯ ಮಂಜುಮಬ್ಬಿನಿಂದ ಆವೃತರಾಗಿದ್ದರು . 

- ಇದು ಹೀಗೆಂದು ಹೆರೊದ್ ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಕಟ್ಟಿಗೆಯೆಲ್ಲ 
ಉರಿದು ಬೂದಿಯಾದ ಮೇಲೆ ಅವನು ತನ್ನ ಸೇವಕರಿಗೆ ಹೇಳಿದ : 

“ಈಗ ಗೇಟುಗಳನ್ನು ತೆರೆದು ನನ್ನ ಶತ್ರು ರೈತನ ಮಗ ಇವಾನ್‌ನ ಬೂದಿಯನ್ನು ಹೊರಕ್ಕೆ 
ಗುಡಿಸಿ ಹಾಕಿ.” 
ಗೇಟುಗಳನ್ನು ತೆರೆದು ನೋಡುತ್ತಾರೆ - ಒಳಗೆ ಎಲ್ಲ ಜೀವಂತವಾಗಿಯೇ ಇದ್ದಾರೆ ! 

“ ಏನು , ರಾಜ , ನಿನಗೆ ಸ್ವಲ್ಪವೂ ಕರುಣೆಯೇ ಇಲ್ಲವಲ್ಲ. ಎಷ್ಟು ತಣ್ಣಗಿನ ಗುಡಿಸಿಲಿನಲ್ಲಿ 
ನಮ್ಮನ್ನು ಕೂಡಿ ಹಾಕಿದ್ದೀಯ . ನಾವು ಸೆಡೆತುಕೊಂಡು ಸಾಯಲಿದ್ದೆವು! ” 

“ ಎಲ್ಲ ಒಂದೇ . ನೀನಂತೂ ಈಗ ಸಾಯಲಿದ್ದೀಯ ” ಎಂದ ಹೆರೋದ್. “ಈಗ ನಾನೇ 
- ನೇರವಾಗಿ ನಿಮ್ಮೆಲ್ಲರ ತಲೆಗಳನ್ನೂ ತುಂಡರಿಸುತ್ತೇನೆ. ನಿನಗೆ ಚುಚ್ಚಿದ ಬಾಣದ ತುದಿಗೆ ನಾನು 
ವಿಷ ಲೇಪಿಸಿದ್ದೆ . ಅದು ನಿನ್ನ ಶಕ್ತಿಯನ್ನೆಲ್ಲ ನಾಶಮಾಡಿ ಬಿಟ್ಟಿದೆ. ಈಗ ನೀನೇನೂ ಮಾಡಲಾರೆ.” 
ಆಮೇಲೆ ಅವನು ತನ್ನೊಳಗೇ ಹೇಳಿಕೊಂಡ : “ ಇವನನ್ನು ನಾನು ಯಾವಾಗಲೇ ಆಗಲಿ ಕೊಲ್ಲ 
ಬಹುದು. ಅದಕ್ಕೆ ಮುಂಚೆ ಸ್ವಲ್ಪ ವಿನೋದವನ್ನೇಕೆ ಮಾಡಬಾರದು ? ” 

ಹಾಗೆಂದುಕೊಂಡು ಅವನು ಗಟ್ಟಿಯಾಗಿ ಹೇಳಿದ : “ ನಾನು ಈಗ ನಿನಗೂ ನಿನ್ನ ಜನರಿಗೂ 
ಒಂದು ಕೆಲಸ ಕೊಡುತ್ತೇನೆ. ನೀನು ಅದನ್ನು ಮಾಡಿದರೆ ಸ್ವತಂತ್ರನಾಗುವೆ. ಇಲ್ಲದಿದ್ದರೆ ನಾನು 
ನಿನ್ನ ತಲೆಯನ್ನು ಕಡಿದು ಹಾಕುತ್ತೇನೆ. ಇದು ಆ ಕೆಲಸ: ನೀನು ಸಮುದ್ರವನ್ನೆಲ್ಲ ತರಿದು ಹಾಕಿ 
ಅದರ ಅಲೆಗಳನ್ನು ತೆನೆಗಳಾಗಿ ಒಂದುಗೂಡಿಸಬೇಕು. ಎಲ್ಲವನ್ನೂ ಒಂದೇ ರಾತ್ರಿಯಲ್ಲಿ ಮಾಡಿ 
ಮುಗಿಸಬೇಕು ! ” 

ಹೀಗೆ ಹೇಳಿ ಹೆರೋದ್ ಮಲಗಲು ಹೋದ. ಕೂಡಲೇ ಸಮುದ್ರವನ್ನು ತರಿದು ಹಾಕಬಲ್ಲ 
ಮುದುಕ ಕಾರ್ಯವಾಸಿಯಾದ. ಬೆಳಗಿನ ಹೊತ್ತಿಗೆ ಸಮುದ್ರವನ್ನೆಲ್ಲ ತರಿದು ಹಾಕಲಾಗಿತ್ತು , 
ಅಲೆಗಳನ್ನು ತೆನೆಗಳನ್ನಾಗಿ ಕಟ್ಟಲಾಗಿತ್ತು . ಹೆರೋದ್ ಬೆಳಿಗ್ಗೆ ಎದ್ದು ನೋಡುತ್ತಾನೆ - ಸಮುದ್ರ 
ಇದ್ದ ಕಡೆ ಒಂದು ಹನಿ ನೀರಿಲ್ಲ ! ಅವನಿಗೆ ಭಾರಿ ಆಶ್ಚರ್ಯವಾಯಿತು. ಅವನು ಹೇಳಿದ: 

“ ಇಷ್ಟಕ್ಕೆ ಮುಗಿಯಿತು ಅಂದುಕೊಳ್ಳಬೇಡ. ಇನ್ನೊಂದು ಕೆಲಸ ಕೊಡುತ್ತೇನೆ. ನನ್ನ ಬಳಿ 
ಭಾರಿ ದನದ ಮುಂದೆ ಇದೆ. ಅವುಗಳನ್ನೆಲ್ಲ ಕೊಂದು ಅವುಗಳ ಮಾಂಸವನ್ನು ಬೇಯಿಸುವಂತೆ 
ನನ್ನ ಸೇವಕರಿಗೆ ಹೇಳುತ್ತೇನೆ. ನೀವು ಆ ಮಾಂಸವನ್ನೆಲ್ಲ ತಿಂದು ಮುಗಿಸಬೇಕು. ಹಾಗೆ ಮಾಡಿ 
ದರೆ ನೀವು ಸ್ವತಂತ್ರ . ಇಲ್ಲದಿದ್ದರೆ ನಿಮ್ಮ ತಲೆಗಳು ಉರುಳುತ್ತವೆ !” 

ಇದನ್ನು ಕೇಳಿ ರೈತನ ಮಗ ಇವಾನ್ ಯೋಚನೆ ಮಾಡುತ್ತ ನಿಂತ. 

“ ನಾನು ಇಷ್ಟು ನಿಶ್ಯಕ್ತನಾಗಿರದಿದ್ದರೆ ನಮ್ಮನ್ನು ನಗೆಗೀಡು ಮಾಡಿದರೆ ಏನಾಗುತ್ತೆ ಅನ್ನು 
ವುದನ್ನು ಅವನಿಗೆ ತೋರಿಸುತ್ತಿದ್ದೆ ! ” 

ಡೇಗನ್ ರಾಜ ಹೆರೋದ್ನ ಬಳಿ ಅನೇಕ ಮಂದಿ ಸ್ತ್ರೀಯರೂ ಪುರುಷರೂ ಬಂದಿ 
ಗಳಾಗಿದ್ದರು . ಅವರಲ್ಲಿ ಒಬ್ಬ ಚೆಲುವಾದ ಯುವತಿ ಇದ್ದಳು . ಅವಳಿಗೆ ಗಿಡಗಳ ಹಾಗೂ ಮೂಲಿಕೆ 
ಗಳ ಗುಣಕಾರಕ ವಿಷಯಗಳೆಲ್ಲ ಚೆನ್ನಾಗಿ ತಿಳಿದಿದ್ದವು. ಅವಳು ಇವಾನ್‌ನನ್ನು ಗುಣಪಡಿಸುವ 
ಕಾರ್ಯ ಕೈಕೊಂಡಳು. ಆದರೆ ಅವಳು ಈ ಕಾರ್ಯ ಪೂರೈಸುವ ಮುನ್ನವೇ ರಾಜ ಹೆರೋದ್ 
ಸಾವಿರಾರು ಪೀಪಾಯಿಗಳಲ್ಲಿ ಮದ್ಯವನ್ನೂ ಭಾರಿ ಪಾತ್ರೆಗಳಲ್ಲಿ ಬೇಯಿಸಿದ ಮಾಂಸವನ್ನೂ ಅಂಗಳ 
ದಲ್ಲಿ ಆಗಲೇ ತಂದು ಇರಿಸಿದ . 

ಇವಾನ್‌ನೂ ಅವನ ಮಿತ್ರರೂ ಮೇಜಿನ ಮುಂದೆ ಕುಳಿತು ತಿನ್ನ ತೊಡಗಿದರು. ಆದರೆ 
ಒಂದು ದನದ ಬೇಯಿಸಿದ ಮಾಂಸವೇ ಅವರಿಗೆಲ್ಲ ಸಾಕು ಬೇಕಾದಷ್ಟಾಯಿತು. ಹೆಚ್ಚಿಗೆ ತಿನ್ನಲು 
ಅವರಿಗೆ ಆಗದಾಯಿತು. ಅವರು ದುಃಖಭರಿತರಾಗಿ ತಲೆ ತಗ್ಗಿಸಿ ಕುಳಿತರು . 

“ನಾವು ಮೂರು ವರ್ಷ ಕೂತು ತಿಂದರೂ ಈ ಎಲ್ಲ ಮಾಂಸವನ್ನೂ ತಿಂದು ಮುಗಿಸ 
ಲಾರೆವು! ” ಎಂದ ಇವಾನ್ , 

ಆಗ ಅವರಿಗೆ ಒಂದು ವಿಷಯ ಜ್ಞಾಪಕಕ್ಕೆ ಬಂದಿತು . ಅವರಲ್ಲಿ ಇಬ್ಬರು ಇನ್ನೂ ಅವರ 
ಜೊತೆಊಟಕ್ಕೆ ಕುಳಿತಿರಲಿಲ್ಲ.ಹೊಟ್ಟೆಬಾಕ ಹಾಗೂ ಎಷ್ಟು ಕುಡಿದರೂ ಬಾಯಾರಿಕೆ ಹಿಂಗದವ – 
ಇವರೇ ಆ ಇಬ್ಬರಾಗಿದ್ದರು . ಅವರಿಬ್ಬರೂ ಬಂದು ಕುಳಿತುದೇ ತಡ ಮಾಂಸದ ಪಾತ್ರೆಗಳೆಲ್ಲ 
ಖಾಲಿಯಾದವು, ಮದ್ಯದ ಪೀಪಾಯಿಗಳೆಲ್ಲ ಖಾಲಿಯಾದವು. ಆದರೂ ಅವರಿಗೆ ತೃಪ್ತಿಯಾಗಲಿಲ್ಲ. 
ಅವರು ಇನ್ನಷ್ಟು ತಿನ್ನಲು ಇನ್ನಷ್ಟು ಕುಡಿಯಲು ಸಿದ್ಧವಾಗಿದ್ದರು. 

ಇವಾನ್‌ನೂ ಅವನ ಮಿತ್ರರೂ ಮಾಡಲಾಗದ ಕಾರ್ಯ ಯಾವುದೂ ಇರಲಿಲ್ಲ ಎಂದು 
ಹೆರೋದ್ ಕಂಡುಕೊಂಡ . ನೇರವಾಗಿ ಅವರನ್ನು ಕೊಲ್ಲುವುದೇ ಯುಕ್ತವೆಂದು ನಿರ್ಧರಿಸಿದ. 
ಆದರೂ ಇನ್ನಷ್ಟು ತಮಾಷೆ ಮಾಡೋಣವೆಂದು ಅವನಿಗೆ ಮನಸ್ಸಾಯಿತು. 

“ ನಾನು ನಿಮಗೆ ಇನ್ನೊಂದು ಕೆಲಸಕೊಡುತ್ತೇನೆ” ಅವನೆಂದ. “ ನಾಳೆ ಬೆಳಿಗ್ಗೆ ನೀವುಸಮುದ್ರ 
ತೀರಕ್ಕೆ ಹೋಗಿ ನನಗೆ ಸ್ವಲ್ಪ ನೀರು ತಂದು ಕೊಡಬೇಕು. ನನ್ನ ಶೀಘ್ರಗಾಮಿ ಮಗಳಿಗಿಂತ ಬೇಗ 
ತಂದು ಕೊಟ್ಟರೆ ನೀವು ಬದುಕಿಕೊಳ್ಳುತ್ತೀರ. ಇಲ್ಲದಿದ್ದರೆ ಸಾಯುತ್ತೀರ! ” 

ಇಡೀ ಕಾಲ ರೈತನ ಮಗ ಇಮಾನ್ ತನ್ನ ಗಾಯ ಬೇಗ ವಾಸಿಯಾಗಬಾರದೆ , ತಾನು ಆಗ 
ಈ ನೀಚ ಹೆರೋದ್‌ನನ್ನು ಕೊಂದು ಹಾಕಲು ಸಾಧ್ಯವಾಗಬಹುದು ಎಂದೇ ಯೋಚಿಸುತ್ತಿದ್ದ. 
ಅವನ ಮನಸ್ಸಿನಲ್ಲಿದ್ದುದನ್ನು ತಿಳಿದು ಹೆರೊದ್‌ನ ಬಂದಿಯಾಗಿದ್ದ ಆ ಸುಂದರ ಯುವತಿ ಅವನಿಗೆ 
ಹೇಳಿದಳು : 
“ ಖಿನ್ನನಾಗಬೇಡ, ಇವಾನ್ , ನೀನು ಬೇಗನೆಯೇ ಗುಣವಾಗುವೆ.” 

ರಾತ್ರಿ ಕಳೆಯಿತು, ಹಗಲಾಯಿತು. ಡೇಗನ್ ರಾಜ ಹೆರೋದ್ನ ಮಗಳು ಶೀಘ್ರಗಾಮಿ 
ತನ್ನ ಏಳು ಗಾವುದ ಉದ್ದದ ಬೂಟುಗಳನ್ನು ತೊಟ್ಟಳು , ಅಂತರ್ಧಾನ ಟೋಪಿ ತೊಟ್ಟಳು, 
ಒಂದೇ ಓಟದಲ್ಲಿ ಸಮುದ್ರ ತೀರಕ್ಕೆ ಹೋದಳು . ಇವಾನ್ ಮತ್ತವನ ಗೆಳೆಯರು ನೀರನ್ನು 
ತರಲು ಯಾರನ್ನು ಕಳುಹಿಸಲು ಸಾಧ್ಯ ಎಂದು ಯೋಚಿಸುತ್ತ ಕುಳಿತರು . ಆಗ ತಮ್ಮಿ ಬ್ಬ 
ಓಟಗಾರನಿದ್ದನೆಂಬುದನ್ನು ಒಬ್ಬ ನೆನಪಿಸಿಕೊಂಡ. ಅವರು ಅವನನ್ನು ಕರೆದರು . ಅವನು ಒಮ್ಮೆಗೇ 
ಹಾರಿ ಕುಳಿತು ಸಮುದ್ರ ತೀರಕ್ಕೆ ಓಡಿದ . ಅವನು ಅಲ್ಲಿಗೆ ಹೋಗಿ ಒಂದು ಬಕೆಟ್ ನೀರು ತುಂಬಿ 
ಕೊಂಡು ಹೆರೋದ್ನ ಮಗಳು ಶೀಘ್ರಗಾಮಿ ಬರುವುದಕ್ಕೆ ತುಂಬ ಮುನ್ನವೇ ಹಿಂದಿರುಗಿ 
ಮನೆಗೆ ಓಡಿ ಬರುತ್ತಿದ್ದ. ಅದನ್ನು ಕಂಡ ಶೀಘ್ರಗಾಮಿ ಒಂದು ಹಂಚಿಕೆ ಹೂಡಿದಳು . ಅವಳು ಅವನ 
ಪಾದಗಳ ಕೆಳಗೆ ಒಂದು ಹಿಡಿ ನಿದ್ರೆ ಬರಿಸುವ ಪುಡಿ ಚೆಲ್ಲಿದಳು, ಆ ಓಟಗಾರಕೂಡಲೇ ನೆಲದ 
ಮೇಲೆ ಬಿದ್ದು ಗಾಢ ನಿದ್ರೆಯಲ್ಲಿ ಮುಳುಗಿದ. 

ಇವಾನ್‌ನೂ ಅವನ ಮಿತ್ರರೂ ಶೀಘ್ರಗಾಮಿಯೇ ಮೊದಲು ಓಡಿ ಬರುತ್ತಿದ್ದುದನ್ನು 
ಕಂಡು ಸ್ತಂಭೀಭೂತರಾದರು . ತಮ್ಮ ಓಟಗಾರ ಮುದುಕ ಎಲ್ಲೂ ಕಾಣಬರಲೇ ಇಲ್ಲ. ಆದರೆ 
ದೂರದೃಷ್ಟಿಯ ಮುದುಕ ದೂರಕ್ಕೆ ದೃಷ್ಟಿ ಹರಿಸಿ ಓಟಗಾರ ಮಾರ್ಗ ಮಧ್ಯದಲ್ಲೇ ಮಲಗಿದ್ದು 
ದನ್ನು ಕಂಡುಕೊಂಡು ವಿಷಯ ತಿಳಿಸಿದ. ಆಗ ಉದ್ದ ಚಾಟಿಯವ ತನ್ನ ಚಾಟಿಯಿಂದ ಓಟಗಾರ 
ಮುದುಕನಿಗೆ ಪೆಟ್ಟುಕೊಟ್ಟ. ಅವನು ತಕ್ಷಣ ಎದ್ದವನೇ ನೀರು ತುಂಬಿದ ಬಕೆಟ್ ಎತ್ತಿಕೊಂಡು 
ಶೀಘ್ರಗಾಮಿ ಬರುವುದಕ್ಕೆ ತುಂಬ ಮುನ್ನವೇ ಮನೆ ತಲುಪಿದ್ದ . 

ಇವಾನ್ ಮತ್ತು ಅವನ ಮಿತ್ರರು ಮಾಡಲಾಗದೆ ಇರುವ ಕೆಲಸ ಯಾವುದೂ ಇಲ್ಲವೆಂಬು 
ದನ್ನು ಕಂಡುಕೊಂಡ ಹೆರೋದ್ ತನ್ನ ಖಡ್ಗವನ್ನು ಒರೆಯಿಂದ ಹಿಡಿದು ಇವಾನ್‌ನನ್ನೂ ಅವನ 
ಮಿತ್ರರನ್ನೂ ಕಬ್ಬಿಣದ ಕಣಕ್ಕೆ ಕರೆದೊಯ್ಯುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದ. ಆದರೆ ಅವರನ್ನು 
ಕರೆದೊಯುತ್ತಿದ್ದಂತೆ ಇವಾನ್‌ನಿಗೆ ರೋಗೋಪಚಾರ ನೀಡುತ್ತಿದ್ದ ಆ ಸುಂದರ ಯುವತಿ 
ಇವಾನ್‌ನ ಗಾಯ ಮಾಯಿತೆಂದು ಅವನಿಗೆ ಪಿಸುಮಾತಿನಲ್ಲಿ ಹೇಳಿದಳು . ಡೇಗನ್ ರಾಜ ಹೆರೋದ್ 
ಅವನ ತಲೆ ಕತ್ತರಿಸಿ ಹಾಕಲು ಬಂದಾಗ ಇವಾನ್ ಅವನನ್ನು ಬಲವಾಗಿ ಹಿಡಿದು ಎತ್ತಿ ಅರಮ 
ನೆಯ ಗೋಪುರದ ಚೂಪಾದ ತುದಿಯ ಮೇಲಕ್ಕೆ ಎಸೆದ. ಚೂಪು ತುದಿ ಹೆರೋದ್ನ ಹೃದ 
ಯಕ್ಕೆ ನಾಟಿತು . ಅವನು ತಕ್ಷಣವೇ ಸತ್ಯ 

ಅನಂತರ ಇವಾನ್ ತನ್ನಿಂದ ಹೆರೋದ್ಕಸಿದುಕೊಂಡಿದ್ದ ಮಾಂತ್ರಿಕ ಕುದುರೆಯನ್ನು ತೆಗೆದು 
ಕೊಂಡು ತನ್ನ ಸ್ವಂತ ರಾಜ್ಯದ ಕಡೆಗೆ ಹೊರಟ. ಅವನ ಗಾಯವನ್ನು ಗುಣಪಡಿಸಿ ಅವನ ಪ್ರಾಣ 
ರಕ್ಷಿಸಿದ್ದ ಸುಂದರ ಯುವತಿಯ ಅವನ ಜೊತೆ ಹೊರಟಳು . ತನಗೆ ಸಹಾಯ ಮಾಡಿದ್ದ ಆ 
ವೃದ್ದರೂ ತನ್ನ ಜೊತೆ ಬರಬೇಕೆಂದು ಇವಾನ್ ಬಯಸಿದ್ದ. ಆದರೆ ಅವರು ಹೇಳಿದರು : 

“ನಿನಗೆ ಅವಶ್ಯವಿದ್ದಾಗ ಸಹಾಯ ಮಾಡಲೆಂದು ಬಂದೆವು, ಇವಾನ್ , ಈಗ ನಿನಗೆ ನಮ್ಮ 
ಸಹಾಯದ ಅವಶ್ಯವಿಲ್ಲ . ನಾವೀಗ ಇತರ ಸಜ್ಜನರಿಗೆ ಸಹಾಯವಾಗಲು ಹೋಗುತ್ತೇವೆ. ” 

ಅವರು ಇವಾನ್‌ನನ್ನು ಆಲಂಗಿಸಿಕೊಂಡು ಅವನಿಗೆ ಒಳ್ಳೆಯದಾಗಲೆಂದು ಹರಸಿ ತಮ್ಮ ದಾರಿ 
ಹಿಡಿದು ಹೊರಟರು . 

ಇವಾನ್‌ನು ಯುವತಿಯೊಂದಿಗೆ ತನ್ನ ಮನೆಗೆ ಹಿಂದಿರುಗಿದ. ಕೂಡಲೇ ರಾಜನ ಬಳಿಗೆ 
ಆ ಬೆಂಕಿ ತಿನ್ನುವ, ಉರಿ ಕುಡಿಯುವ ಮಾಂತ್ರಿಕ ಕುದುರೆಯನ್ನು ಕೊಂಡೊಯ್ದ . ಆದರೆ 
ಇವಾನ್‌ನ ಜೊತೆಗೆ ಹೋಗಿರೆಂದು ರಾಜ ಕಳುಹಿಸಿದ್ದ ಆ ಇಬ್ಬರು ಯೋಧರು ಇವಾನ್ 
ತನ್ನೊಂದಿಗೆ ಕರೆತಂದಿದ್ದ ಸುಂದರ ಯುವತಿಯನ್ನು ಕಂಡು ಇವಾನ್‌ನ ಹಿಂದೆಯೇ ಅರಮನೆಗೆ 
ಧಾವಿಸಿದರು . ಅಲ್ಲಿ ರಾಜನ ಮುಂದೆ ಬಿನ್ನವಿಸಿಕೊಂಡರು : 
- “ನೋಡಿ, ಮಹಾಪ್ರಭು ! ಇವಾನ್ ಕೇವಲ ಒಬ್ಬ ರೈತನ ಮಗ, ಅವನು ಒಬ್ಬ ಸುಂದರ 
ಯುವತಿಯನ್ನು ಮದುವೆಯಾಗುವುದು ತರವೇ ? ಕುಲೀನ ರಕ್ತದವರಷ್ಟೆ ಅಂಥ ಸುಂದರಿಯನ್ನು 
ಮದುವೆಯಾಗಲು ತಕ್ಕವರು . ” 

ಈ ಮಾತನ್ನು ಕೇಳಿ ಇವಾನ್ ವಿವರ್ಣನಾದ . 

“ ನಾನು ಆ ಯುವತಿಯನ್ನು ಬಂಧನದಿಂದ ಬಿಡಿಸಿದ್ದೇನೆ. ನಾವು ಪರಸ್ಪರ ಪ್ರೇಮಿಸುತ್ತೇವೆ. 
ನಾನೆಂದಿಗೂ ಯಾರಿಗೂ ಅವಳನ್ನು ಬಿಟ್ಟು ಕೊಡುವುದಿಲ್ಲ ! ” ಅವನೆಂದ. 

“ ನಾನು ಹೇಳಿದರೆ ಬಿಟ್ಟು ಕೊಡಲೇ ಬೇಕು !” ರಾಜ ಹೇಳಿದ . 
ಇವಾನ್‌ಗೆ ತುಂಬ ಕೋಪ ಬಂದಿತು . ಅವನು ಹೇಳಿದ: 

“ ಏನು , ರಾಜ , ನಾನು ಏನು ಕೇಳಿದರೂ ಬಳುವಳಿಯಾಗಿ ಕೊಡುವೆ ಅಂತ ಮಾತು ಕೊಟ್ಟಿ 
ದ್ದೆಯಲ್ಲ, ಅದು ಮರೆತು ಹೋಯಿತೆ? ಅಲ್ಲದೆ ನನಗೆ ಮಾತಿನಲ್ಲಾಗಲೀ ಕೃತಿಯಲ್ಲಾಗಲೀ 
ಹಾನಿ ಮಾಡುವುದಿಲ್ಲ ಅಂತಲೂ ಆಶ್ವಾಸನೆ ನೀಡಿದ್ದೆ. ನಾನು ಮೂರು ಡೇಗನ್‌ಗಳನ್ನೂ ಅವು 
ಗಳ ಇಡೀ ಕುಟುಂಬವನ್ನೂ ಸಂಹರಿಸಿ ಬಂದಿದ್ದೇನೆ. ನೀನು ಈಗ ಕೊಟ್ಟ ಮಾತನ್ನು ಪಾಲಿಸದೆ 
ಹೋದರೆ ನಿನ್ನನ್ನೂ ನಿನಗೆ ಪ್ರೀತಿಪಾತ್ರರಾದವರೆಲ್ಲರನ್ನೂ ಈ ಬಡಿಗೆಯ ಒಂದೇ ಏಟಿನಿಂದ 
ಕೊಲ್ಲಬಲ್ಲೆ ! ” 

ಅವನು ತನ್ನ ಬಡಿಗೆಯನ್ನು ಗಾಳಿಯಲ್ಲಿ ಬೀಸಿದ. ಅದರ ಪ್ರಭಾವಕ್ಕೆ ಸುತ್ತಮುತ್ತ ಇದ್ದ 
ಗಿಡಮರಗಳೆಲ್ಲ ನೆಲದ ವರೆಗೂ ಬಾಗಿದವು. ರಾಜನ ಅರಮನೆಯ ತೂರಾಡಿತು , ಕಂಪಿಸಿತು . 

ರಾಜ ತುಂಬ ಹೆದರಿದ, ಹೆಚ್ಚಿಗೆ ಒಂದು ಮಾತನ್ನೂ ಆಡಲಿಲ್ಲ. ರೈತನ ಮಗ ಇವಾನ್ 
ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಖ ಸಂತೋಷಗಳಿಂದ ಬಾಳ ತೊಡಗಿದ. 
ಅವನು ಅನಂತರ ರಾಜನ ಅಥವಾ ಕುಲೀನರ ಮಾತನ್ನು ಎಂದಿಗೂ ನಂಬಲಿಲ್ಲ.