ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕಿ ಒಬ್ಬ ಮುದುಕ ವಾಸವಾಗಿದ್ದರು. ಮುದುಕ 
ಡಾಂಬರೆಕ್ಟ್ ಮಾಡಿ ಜೀವನ ನಡೆಸುತ್ತಿದ್ದ. ಮುದುಕಿ ಮನೆಯಲ್ಲೇ ಕೆಲಸ ಮಾಡುತ್ತಿದ್ದಳು . 

ಒಂದು ದಿನ ಮುದುಕಿಗೆ ತುಂಬ ಬೇಸರವಾಯಿತು. ಅವಳು ಮುದುಕನನ್ನು ಪೀಡಿಸ ತೊಡ 
ಗಿದಳು : 

“ ನಂಗೊಂದು ಪುಟ್ಟ ಹುಲ್ಲಿನ ಹೋರಿ ಮಾಡಿಕೊಡು. ಅದರ ಬೆನ್ನಿಗೆ ಡಾಂಬರು ಬಳಿದಿರ 
ಬೇಕು . ” 

“ ನಿನಗೇನಾಗಿದೆ , ಮೂರ್ಖ ಮುದುಕಿ ! ಹುಲ್ಲಿನ ಹೋರಿತಗೊಂಡು ಏನು ಮಾಡ್ತೀಯ ? ” 
“ ಅದೆಲ್ಲ ನಿನಗ್ಯಾಕೆ ? ನಾನು ಹೇಳಿದ್ದು ಮಾಡಿ ಕೊಡು!” 

ವಿಧಿ ಇಲ್ಲದೆ ಮುದುಕ ಒಂದು ಪುಟ್ಟ ಹುಲ್ಲಿನ ಹೋರಿಯನ್ನು ಮಾಡಿದ. ಅದರ ಬೆನ್ನಿಗೆ 
ಪಕ್ಕಗಳಿಗೆ ಎಲ್ಲ ಡಾಂಬರು ಎಣ್ಣೆ ಬಳಿದ. 

ಬೆಳಗಾಯಿತು. ಮುದುಕಿ ತನ್ನ ಹುಲ್ಲಿನ ಹೋರಿಯನ್ನು ಮೇಯಿಸಲು ಹುಲ್ಲುಗಾವಲಿಗೆ 
ಕೊಂಡೊಯ್ದಳು. ತನ್ನೊಂದಿಗೆ ನೂಲುವ ರಾಟೆಯನ್ನೂ ತಗೊಂಡು ಹೋದಳು . 

ಅಲ್ಲಿ ಬೆಟ್ಟದ ತಪ್ಪಲಲ್ಲಿ ನೂಲು ತೆಗೆಯುತ್ತ ಕುಳಿತು ತನ್ನ ಪುಟ್ಟ ಹೋರಿಗೆ ಹೇಳಿದಳು : 
“ ಹುಲ್ಲು ಮೇಯಿ, ಡಾಂಬರು ಬೆನ್ನಿನ ಪುಟ್ಟ ಹೋರಿ! ನಾನು ನೂಲು ನೂಲೀನಿ! ನೀನು 
ಹುಲ್ಲು ಮೇಯಿ, ಪುಟ್ಟ ಹೋರಿ!” 
ನೂಲು ನೂಲುತ್ತ ನೂಲುತ್ತ ಅವಳು ನಿದ್ದೆ ಹೋಗಿ ಬಿಟ್ಟಳು . 


ಆಗ ಇದಕ್ಕಿದಂತೆ ಕಗ್ಗತ್ತಲೆಯ ಕಾಡಿನಿಂದ ಒಂದು ಕರಡಿ ಓಡಿ ಬಂತು . ಅದು ಹೊರಿ 
ಯನ್ನು ನೋಡಿ ಹೇಳಿತು : “ ಯಾರು ನೀನು ? ನಿನ್ನಂಥವನನ್ನು ನಾನು ನೋಡಿಯೇ 
ಇಲ್ಲವಲ್ಲ ! ” 

“ ನಾನು ಡಾಂಬರು ಬೆನ್ನಿನ ಹುಲ್ಲಿನ ಹೋರಿ!” 
“ ನನಗೆ ಸ್ವಲ್ಪ ಡಾಂಬರು ಎಣ್ಣೆ ಕೊಡ್ತೀಯ ? ನಾಯಿಗಳು ನನ್ನ ಪಕ್ಕವನ್ನು ಗೀಚಿ ಗಾಯ 
ಮಾಡಿಬಿಟ್ಟಿವೆ. 

ಪುಟ್ಟ ಹುಲ್ಲಿನ ಹೋರಿ ಏನೂ ಹೇಳದೆ ನಿಂತಲ್ಲೇ ನಿಂತಿತ್ತು . ಹಾಗಾಗಿ ತಾನೇ ಒಂದಿಷ್ಟು 
ಡಾಂಬರು ಎಣ್ಣೆ ತೆಗೆದುಕೊಳ್ಳೋಣವೆಂದು ಕರಡಿ ಪುಟ್ಟ ಹೋರಿಯ ಡಾಂಬರು ಬಳಿದ ಬೆನ್ನನ್ನು 
ತನ್ನ ಉಗುರುಗಳಿಂದ ಕೀಳ ತೊಡಗಿತು. ಆದರೆ ಉಗುರುಗಳು ಅದಕ್ಕೆ ಅಂಟಿಕೊಂಡು ಬಿಟ್ಟವು. 
ಎಷ್ಟು ಕಷ್ಟಪಟ್ಟರೂ ಕರಡಿಗೆ ಕೈ ಕಿತ್ತುಕೊಳ್ಳಲೇ ಆಗಲಿಲ್ಲ. 

ಮುದುಕಿಗೆ ಎಚ್ಚರವಾಯಿತು. ಮನೆಗೆ ಓಡಿ ಹೋಗಿ ಹೇಳಿದಳು : " ಮುದುಕ, ಮುದುಕ ! 
ಬೇಗ ಬಾ , ನೋಡು, ಪುಟ್ಟ ಹುಲ್ಲಿನ ಹೋರಿ ಒಂದು ಕರಡಿಯನ್ನು ಹಿಡಿದಿದೆ ! ” 

ಮುದುಕ ಓಡೋಡಿ ಬಂದ. ಕರಡಿಯನ್ನು ಎಳೆದು ಬಿಡಿಸಿದ . ಅದನ್ನು ನೆಲಮಾಳಿಗೆಯಲ್ಲಿ 
ಕೂಡಿಟ್ಟ . 

ಮಾರನೆಯ ದಿನ ಬೆಳಗಾಗುತ್ತಲೇ ಮುದುಕಿ ಮತ್ತೆ ತನ್ನ ರಾಟೆ ಎತ್ತಿಕೊಂಡು ತನ್ನ ಪುಟ್ಟ 
ಹುಲ್ಲಿನ ಹೋರಿಯನ್ನು ಮೇಯಿಸಲು ಹುಲ್ಲುಗಾವಲಿಗೆ ಹೋದಳು . ಬೆಟ್ಟದ ತಪ್ಪಲಲ್ಲಿ 
ನೂಲು ತೆಗೆಯುತ್ತ ಕುಳಿತು ತನ್ನ ಹುಲ್ಲಿನ ಹೋರಿಗೆ ಹೇಳಿದಳು : 

“ ಹುಲ್ಲು ಮೇಯಿ, ಡಾಂಬರು ಬೆನ್ನಿನ ಪುಟ್ಟ ಹೋರಿ! ನಾನು ನೂಲುನೂಲೀನಿ! ನೀನು 
ಹುಲ್ಲು ಮೇಯಿ, ಪುಟ್ಟ ಹೋರಿ!” 
ನೂಲುತ್ತ ನೂಲುತ್ತ ಅವಳು ನಿದ್ದೆ ಹೋಗಿ ಬಿಟ್ಟಳು. 

ಆಗ ಇದ್ದಕ್ಕಿದ್ದಂತೆ ಕಗ್ಗತ್ತಲೆಯ ಕಾಡಿನಿಂದ ಒಂದು ತೋಳಓಡಿಕೊಂಡು ಬಂದಿತು. ಅದು 
ಪುಟ್ಟ ಹೋರಿಯನ್ನು ಕಂಡು ಕೇಳಿತು : “ ಯಾರು ನೀನು ? ” 

“ ನಾನು ಡಾಂಬರು ಬೆನ್ನಿನ ಹುಲ್ಲಿನ ಹೋರಿ! ” 
“ ನನಗೂ ಸ್ವಲ್ಪ ಡಾಂಬರು ಎಣ್ಣೆ ಕೊಡ್ತೀಯ ? ನಾಯಿಗಳು ನನ್ನ ಪಕ್ಕಗಳನ್ನೆಲ್ಲ ಗೀಚಿ 
ಗಾಯ ಮಾಡಿಬಿಟ್ಟಿವೆ.” 

“ ತಗೋ , ಬೇಕಾದರೆ.” 
ತೋಳ ಹುಲ್ಲಿನ ಹೋರಿಯ ಡಾಂಬರು ಬೆನ್ನಿಗೆ ಬಾಯಿ ಹಾಕಿ ಹಲ್ಲುಗಳಿಂದ ಸ್ವಲ್ಪ 
ಡಾಂಬರು ಕಿತ್ತುಕೊಳ್ಳಲು ಯತ್ನಿಸಿತು. ಅದರ ಹಲ್ಲುಗಳು ಹೋರಿಯ ಬೆನ್ನಿಗೆ ಗಟ್ಟಿಯಾಗಿ 
ಅಂಟಿಕೊಂಡು ಬಿಟ್ಟವು. 

ಮುದುಕಿಗೆ ನಿದ್ದೆ ಕಳೆದು ಎಚ್ಚರಾಯಿತು. ಅವಳು ಕೂಗಿ ಹೇಳಿದಳು : "ಮುದುಕಾ, 
ಮುದುಕಾ ! ನೋಡು, ಹೋರಿ ಒಂದು ತೋಳವನ್ನು ಹಿಡಿದಿದೆ ! ” 

ಮುದುಕ ಓಡಿ ಬಂದು ತೋಳವನ್ನು ಹಿಡಿದು ಅದನ್ನೂ ನೆಲಮಾಳಿಗೆಯಲ್ಲಿ ಕೂಡಿಟ್ಟ , 
ಮೂರನೆಯ ದಿನವೂ ಮುದುಕಿ ಪುಟ್ಟ ಹೋರಿಯನ್ನು ಮೇಯಿಸಲು ಕರೆದೊಯ್ದಳು. 
ಬೆಟ್ಟದ ತಪ್ಪಲಲ್ಲಿ ಕುಳಿತು ನೂಲುತ್ತ ನೂಲುತ್ತ ನಿದ್ದೆ ಹೋದಳು . 

ಸ್ವಲ್ಪ ಹೊತ್ತಿಗೆ ಒಂದು ನರಿ ಅತ್ತ ಕಡೆಗೇ ಓಡಿ ಬಂದಿತು . ಹೋರಿಯನ್ನು ಕಂಡು “ ಯಾರು 
ನೀನು ? ” ಎಂದು ಕೇಳಿತು . 

“ ನಾನು ಡಾಂಬರು ಬೆನ್ನಿನ ಹುಲ್ಲಿನ ಹೋರಿ!” 

“ ಮುದ್ದು ಹೋರಿ, ನನಗೂ ಸ್ವಲ್ಪ ಡಾಂಬರು ಎಣ್ಣೆ ಕೊಡು. ನಾಯಿಗಳು ನನ್ನ ಪಕ್ಕಗಳ 
ಚರ್ಮವನ್ನೇ ಕಿತ್ತು ಹಾಕಿವೆ ! ” 

“ತಗೋ . ” 

ನರಿ ಸ್ವಲ್ಪ ಡಾಂಬರು ಎಣ್ಣೆಯನ್ನು ತೆಗೆದುಕೊಳ್ಳಲು ಯತ್ನಿಸಿತು . ಆದರೆ ಅದರ ಕೈಯ 
ಹೋರಿಯ ಪಕ್ಕಕ್ಕೆ ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿತು. 

ಮುದುಕಿಗೆ ಎಚ್ಚರವಾಯಿತು. ಮುದುಕನನ್ನು ಕೂಗಿ ಕರೆದಳು. ಅವನು ನರಿಯನ್ನು ಹಿಡಿದು 
ಅದನ್ನೂ ನೆಲಮಾಳಿಗೆಯಲ್ಲಿ ಕೂಡಿಟ್ಟ . 

ಈಗ ನೆಲಮಾಳಿಗೆಯಲ್ಲಿ ಅಷ್ಟು ಪ್ರಾಣಿಗಳು ಬಂದಿಯಾಗಿದ್ದವು. ಮುದುಕ ಬಾಗಿಲ ಬಳಿ 
ಕುಳಿತು ಚಾಕುವನ್ನು ಚೂಪು ಮಾಡ ತೊಡಗಿದ. 

" ಯಾಕೆ, ಅಜ್ಜಯ್ಯ , ಚಾಕುವನ್ನು ಚೂಪು ಮಾಡ್ತಿದೀಯ ? ” ಕರಡಿ ಮುದುಕನನ್ನು ಕೇಳಿತು . 
“ ಯಾಕೆಂದರೆ ನಿನ್ನ ಚರ್ಮ ಸುಲಿದು ಅದರಿಂದ ನನಗೂ ಮುದುಕೀಗೂ ಚೆನ್ನಾದಕೋಟು 
ಮಾಡಿಕೊಳ್ಳೋಣ ಅಂತ.” 

“ ಬೇಡ, ಅಜ್ಜಯ್ಯ ! ನನ್ನನ್ನು ಬಿಟ್ಟು ಬಿಡು. ನಿನಗೆ ಬೇಕಾದಷ್ಟು ಜೇನು ತಂದು ಕೊಡ್ತೀನಿ. ” 
“ ಹಾಗಾ ? ಮೋಸ ಮಾಡೋಲ್ಲ ತಾನೇ ? ” 
“ ಇಲ್ಲ, ಅಜ್ಜಯ್ಯ , ಮೋಸ ಮಾಡೋಲ್ಲ. ” 
ಮುದುಕ ಕರಡಿಯನ್ನು ಬಿಟ್ಟು ಬಿಟ್ಟ . 
ಆಮೇಲೆ ಮತ್ತೆ ಬಾಗಿಲ ಬಳಿ ಕುಳಿತು ಚಾಕುವನ್ನು ಚೂಪು ಮಾಡ ತೊಡಗಿದ. 
“ ಯಾಕೆ, ಅಜ್ಜಯ್ಯ , ಚಾಕುವನ್ನು ಚೂಪು ಮಾಡ್ತಿದೀಯ ? ” ತೋಳ ಕೇಳಿತು . 

“ ಯಾಕೆಂದರೆ , ನಿನ್ನ ಚರ್ಮ ಸುಲಿಯೋಣ ಅಂತ ! ಅದರಿಂದ ನನಗೆ ಚಳಿಗಾಲಕ್ಕೆ ಬೆಚ್ಚನೆಯ 
ಟೋಪಿ ಮಾಡ್ಕೊತೀನಿ.” 

“ ಬೇಡ, ಅಜ್ಜಯ್ಯ , ನನ್ನನ್ನು ಬಿಟ್ಟು ಬಿಡು ! ನಾನು ನಿನಗೆ ಒಂದು ದೊಡ್ಡ ಕುರಿ ಮಂದೆ 
ಯನ್ನೇ ತಂದು ಕೊಡ್ತೀನಿ.” 

“ ಹುಂ , ನೋಡಿಕೋ ! ಮೋಸಗೀಸ ಮಾಡೇಡ, ತಿಳೀತಾ ? ” 
ಮುದುಕ ತೋಳವನ್ನೂ ಬಿಟ್ಟು ಬಿಟ್ಟ . ಮತ್ತೆ ಚಾಕುವನ್ನು ಚೂಪು ಮಾಡುತ್ತ ಕುಳಿತ. 
ನರಿಗೆ ಆ ಶಬ್ದ ಕೇಳಿಸಿತು . ಅದು ವತಿಯಿಂದ ಬಾಗಿಲು ಸರಿಸುತ್ತ ಕೇಳಿತು : 
“ ಯಾಕೆ, ಅಜ್ಜಯ್ಯ , ಚಾಕುವನ್ನು ಚೂಪು ಮಾಡ್ತಿದೀಯ ? ” 

“ ಯಾಕೆಂದರೆ ನಿನ್ನ ಚರ್ಮ ಸುಲಿಯೋಣ ಅಂತ. ನಿನ್ನ ಮೈ ಮೇಲೆಎಂಥ ಚೆನ್ನಾದ ತುಪ್ಪುಳ 
ಇದೆ. ಅದರಿಂದ ಮುದುಕಿಯ ಕೋಟಿಗೆ ಚೆನ್ನಾದ ಕಾಲರ್‌ ಮಾಡಬಹುದು.” 

“ಬೇಡ, ಅಜ್ಜಯ್ಯ , ದಯವಿಟ್ಟು ನನ್ನನ್ನು ಕೊಲ್ಲಬೇಡ ! ನನ್ನನ್ನು ಬಿಟ್ಟು ಬಿಡು ! ನಿನಗೆ 
ಬೇಕಾದಷ್ಟು ಕೋಳಿಮರಿ ಬಾತಿನ ಮರಿಗಳನ್ನು ತಂದು ಕೊಡ್ತೀನಿ.” 

“ಸರಿ ಹೋಗು. ಆದರೆ ಮೋಸ ಮಾಡೇಡ, ತಿಳೀತಾ ? ” 

ರಾತ್ರಿಯಾಯಿತು, ರಾತ್ರಿ ಕಳೆಯಿತು. ಇನ್ನೂ ಬೆಳಕು ಹರಿದೇ ಇಲ್ಲ, ಆಗಲೇ “ಟಪ್ 
ಟಪ್ ” ಅಂತ ಬಾಗಿಲು ತಟ್ಟಿದ ಶಬ್ದ ! 

ಮುದುಕಿಗೆ ಎಚ್ಚರವಾಯಿತು. 
“ ಮುದುಕ, ಹೋಗಿನೋಡು. ಯಾರೋ ಬಾಗಿಲು ತಟ್ಟಿದಾರೆ. ” 

ಮುದುಕ ಬಾಗಿಲು ತೆರೆದ. ಕರಡಿ ನಿಂತಿತ್ತು . ಅದರ ಕೈಯಲ್ಲಿ ಜೇನು ಹನಿಯುತ್ತಿದ್ದ ಒಂದು 
ದೊಡ್ಡ ಜೇನಿನ ಗೂಡಿತ್ತು ! 
ಆ ಮುದುಕ ಅದನ್ನು ತಗೊಂಡು ಒಳಗಿರಿಸಿದನೋ ಇಲ್ಲವೋ , ಆಗಲೇ ಮತ್ತೆ ಬಾಗಿಲ ಬಳಿ 
“ ಟಪ್ ಟಪ್ ” ಶಬ್ದ ! 

ಮುದುಕ ಬಾಗಿಲು ತೆರೆದ, ತೋಳ ನಿಂತಿತ್ತು . ಅದರ ಜೊತೆ ಒಂದು ಇಡೀ ಕುರಿ ಮಂದೆ 
ಇತ್ತು . ಆಮೇಲೆ ಸ್ವಲ್ಪ ಹೊತ್ತಿನಲ್ಲೇ ನರಿಯ ಬಂತು . ಅದು ಕೋಳಿಮರಿ, ಬಾತಿನ ಮರಿ, 
ಇನ್ನೂ ಅನೇಕ ಪಕ್ಷಿ ಮರಿಗಳನ್ನು ತಂದುಕೊಟ್ಟಿತು. 

ಮುದುಕನಿಗೂ ಮುದುಕಿಗೂ ತುಂಬ ಸಂತೋಷವಾಯಿತು. ಅವರು ಸುಖದಿಂದ ವಾಸ 
ಮಾಡ ತೊಡಗಿದರು .