‍‍‍‍‍ಬಳೇ ಬೇಕೆ ಬಳೆ!
ತೊಡುವುದಕೆ ಬಳೆ!
ಕೈಯಿಗೊಳೆ
ಗಾಜುಬಳೆ |
ಬಳೇ ಬೇಕೆ ಬಳೆ |

ಬಳೇ ಬೇಕೆ ಬಳೆ!
ತಿನುವುದಕೆ ಬಳೆ !
ಬಾಯಿಗೊಳ್ಳೆ
ಕೋಡುಬಳೆ!
ಬಳೇ ಬೇಕೆ ಬಳೆ |

ಬಳೇ ಬೇಕೆ ಬಳೆ!
ತರಹವಾರಿ ಬಳೆ |
ಗಾಜುಬಳೆ !
ಕೋಡುಬಳೆ!

ಬಳೇ ಬೇಕೆ ಬಳೆ!
ಬರೆದವರು: ಜಿ. ಪಿ. ರಾಜರತ್ನಂ