ಕೈ ಕೈ ಎಲ್ಲೋದ್ವು?
ಕದದ ಮೂಲೆಗ ಹೋದ್ವು
ಕದ ಏನ್ ಕೊಡ್ತು?
ಚಕ್ಕಿ ಕೊಡ್ತು
ಚಕ್ಕಿ ಏನ್ ಮಾಡ್ದಿ?
ಒಲಿಗೆ ಹಾಕಿದೆ
ಒಲಿ ಏನ್ ಕೊಡ್ತು?
ಬೂದಿ ಕೊಡ್ತು
ಬೂದಿ ಏನ್ ಮಾಡಿದಿ?
ತಿಪ್ಪಿಗೆ ಹಾಕಿದೆ
ತಿಪ್ಪಿ ಏನ್ ಕೊಡ್ತು?
ಗೊಬ್ಬರ ಕೊಡ್ತು
ಗೊಬ್ಬರ ಏನ್ ಮಾಡ್ದಿ?
ಹೊಲಕ್ ಹಾಕಿದೆ
ಹೊಲ ಏನ್ ಕೊಡ್ತು?
ಜೋಳ ಕೊಡ್ತು
ಜೋಳ ಏನ್ ಮಾಡ್ದಿ?
ಕುಂಬಾರಗ ಕೊಟ್ಟೆ
ಕುಂಬಾರ ಏನ್ ಕೊಟ್ಟ?
ಮಡಿಕಿ ಕೊಟ್ಟ
ಮಡಕಿ ಏನ್ ಮಾಡಿದಿ?
ಗಿಡಕ್ಕ ನೀರು ಹಾಕಿದೆ
ಗಿಡ ಎನು ಕೊಡ್ತು?
ಹೂವು ಕೊಡ್ತು
ಹೂವು ಏನು ಮಾಡಿದಿ?
ದೇವರಿಗೆ ಮುಡಿಸಿದೆ
ದೇವರು ಏನು ಕೊಟ್ಟ?
ವಿದ್ಯಾ ಬುದ್ದಿ ಕೊಟ್ಟ…

ನೆನಪಿಸಿದವರು – ಶ್ರೀ ಹರ್ಷ ಸಾಲಿಮಠ್